Tag: Sa ra Govind

  • ಸುದೀಪ್-ಕುಮಾರ್ ವಿವಾದ: ಇಂದು ರವಿಚಂದ್ರನ್ ಎಂಟ್ರಿ

    ಸುದೀಪ್-ಕುಮಾರ್ ವಿವಾದ: ಇಂದು ರವಿಚಂದ್ರನ್ ಎಂಟ್ರಿ

    ಕಿಚ್ಚ ಸುದೀಪ್ (Sudeep) ಕೋರ್ಟಿಗೆ ಹೋಗಿರುವ ಬೆನ್ನಲ್ಲೇ ನಿರ್ಮಾಪಕ ಎನ್.ಕುಮಾರ್ (N. Kumar) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಿನ್ನೆಯಿಂದ ಪ್ರತಿಭಟನೆಗೆ ಕೂತಿದ್ದಾರೆ. ಹಲವು ನಿರ್ಮಾಪಕರು ಅವರಿಗೆ ಸಾಥ್ ನೀಡಿದ್ದಾರೆ. ಇಂದು ನಿರ್ಮಾಪಕರು ಮತ್ತು ವಾಣಿಜ್ಯ ಮಂಡಳಿ ಸಭೆ ಸೇರಿ ರವಿಚಂದ್ರನ್ (Ravichandran) ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಇಂದು ಮಧ್ಯಾಹ್ನ ನಿರ್ಮಾಪಕರು ರವಿಚಂದ್ರನ್ ಅವರನ್ನು ಭೇಟಿ ಮಾಡಲಿದ್ದಾರೆ.

    ನಿರ್ಮಾಪಕರ ಭೇಟಿ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 1.30 ಕ್ಕೆ ರವಿಚಂದ್ರನ್ ಭೇಟಿಗೆ ಅವಕಾಶ ನೀಡಿದ್ದು, ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಮಾತುಕತೆ ನಡೆಯಲಿದೆ. ಈ ಭೇಟಿಗೆ ನಿರ್ಮಾಪಕರಿಗೆ ಸಾ.ರಾ ಗೋವಿಂದ್ (Sa. Ra. Govind) ಸಾಥ್ ನೀಡಲಿದ್ದಾರೆ. 20 ಕ್ಕೂ ಹೆಚ್ಚು ನಿರ್ಮಾಪಕರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ:ಮಹೇಶ್‌ ಬಾಬು ಸಿನಿಮಾ ಬಗ್ಗೆ ಅಪ್‌ಡೇಟ್‌ ಹಂಚಿಕೊಂಡ ಮೀನಾಕ್ಷಿ ಚೌಧರಿ

    ಈ ಕುರಿತು ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು ಮಾತನಾಡಿ, ‘ಒಂದೂವರೆ ತಿಂಗಳಿಂದ ಎಲ್ಲಾ ವಿದ್ಯಾಮಾನಗಳನ್ನು ನೋಡ್ತಾ ಇದ್ದೀನಿ. ಆರೋಗ್ಯ ಸರಿಯಿಲ್ಲದ ಕಾರಣ ಮನೆಯಲ್ಲಿಯೇ ಇದ್ದೆ. ಆದ್ರೆ ಸಮಸ್ಯೆ ಬಗೆಹರಿಸಲೇ ಬೇಕಾಗಿದೆ. ಸುದೀಪ್ ಬೇರೆ ಅಲ್ಲ, ನಿರ್ಮಾಪಕರು ಬೇರೆ ಅಲ್ಲ. ನನ್ನ ಕಾಲದಲ್ಲಿ ಸುಮಾರು ಸಾವಿರಾರು ಇಂತ ಸಮಸ್ಯೆ ಬಗೆಹರಿಸಿದ್ದೇವೆ. ರನ್ನ ಚಿತ್ರ ಬಿಡುಗಡೆಯಾದಂತಹ ಸಂದರ್ಭದಲ್ಲಿ ನಡೆದ ಘಟನೆಯಿದು, ಕುಮಾರ್ ಅವರಿಗೆ ನಿರ್ಮಾಪಕರು ಹಣ ಕೊಡಬೇಕಾಗಿತ್ತು. ಸುದೀಪ್ ಅವರ ಬಳಿ ಕುಮಾರ್ ಕೇಳಿದ್ದರು. ಸುದೀಪ್ ಅವರೇ ಆ ಸಮಯದಲ್ಲಿ ವಾಣಿಜ್ಯ ಮಂಡಳಿಗೆ ಬಂದಿದ್ದರು.  2 ಕೋಟಿ 35 ಲಕ್ಷ ಹಣವನ್ನು ಕೊಟ್ಟಿದ್ದಕ್ಕೆ ಸಾಕ್ಷಿ ನಾನಿದ್ದೀನಿ. ಎಲ್ಲಾ ನಿರ್ಮಾಪಕರಿಗೂ ಇದು ಗೊತ್ತಿರುವ ವಿಚಾರ. ಇಂಥ ಸಮಸ್ಯೆಗಳು ಬಂದಾಗ ಸಂಧಾನ ಸಮಿತಿ ಅಂತ ಮಾಡ್ತೀವಿ. ಆ ಸಮಿತಿಯಲ್ಲಿ 15 ರಿಂದ 18 ಜನ ಇರ್ತಾರೆ. ಶಿವರಾಜ ಕುಮಾರ್, ರವಿಚಂದ್ರನ್, ಉಮೇಶ್ ಬಣಕಾರ್, ಕೆ ಮಂಜು, ನಾಗಣ್ಣ, ಗಂಗಾಧರ್ ಹೀಗೆ ಸಾಕಷ್ಟು ಜನ ಸಮಿತಿಯಲ್ಲಿದ್ದಾರೆ. ಎಲ್ಲರೂ ಸೇರಿ ಸಮಸ್ಯೆಗೆ ಪರಿಹಾರ ಹುಡುಕುತ್ತಾರೆ’ ಅಂದರು.

     

    ಕುಮಾರ್ ಮತ್ತು ಸುದೀಪ್ ಪ್ರಕರಣ (Controversy) ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಈ ಮೊದಲು ಪ್ರಕರಣಕ್ಕೆ ಶಿವರಾಜ್ ಕುಮಾರ್ ಎಂಟ್ರಿ ಕೊಡುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಅದಕ್ಕೂ ಮೊದಲು ರವಿಚಂದ್ರನ್ ಅವರ ಆಗಮನವಾಗಿದೆ. ಅಲ್ಲಿ ಏನು ಮಾತಕತೆ ಆಗತ್ತೋ ಕಾದು ನೋಡಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಚಿತ್ರೋದ್ಯಮದ ಗಣ್ಯರು

    ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಚಿತ್ರೋದ್ಯಮದ ಗಣ್ಯರು

    ನಿರ್ಮಾಪಕರ ಸಂಘದ ಪದಾಧಿಕಾರಿಗಳು ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದಂತಹ ಸಾ. ರಾ.ಗೋವಿಂದು (Sa. Ra. Govind) ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು (Siddaramaiah) ಭೇಟಿಯಾಗಿ ಚಿತ್ರರಂಗಕ್ಕೆ ಸಂಬಂಧಪಟ್ಟಂತಹ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು. ಬಾಕಿ ಉಳಿದುಕೊಂಡಿರುವ ಸಬ್ಸಿಡಿ ಹಣ, ರಾಜ್ಯ ಪ್ರಶಸ್ತಿ. ಮುಚ್ಚುತ್ತಿರುವ ಚಿತ್ರಮಂದಿರಗಳ ಪರಿಸ್ಥಿತಿ. ಮೈಸೂರಿನಲ್ಲಿ ಚಿತ್ರನಗರಿ. ಪೈರಸಿ ಇಂದ ಉದ್ಯಮಕ್ಕೆ ಆಗುತ್ತಿರುವ ನಷ್ಟ. ತೆರಿಗೆ ಇಂದ ಆಗುತ್ತಿರುವ ಸಮಸ್ಯೆ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಸುದೀರ್ಘವಾದಂತಹ ಚರ್ಚೆಯನ್ನ ಮಾಡಿದ್ದಾರೆ.

    ನಿಯೋಗ ಮಾಡಿದ ಮನವಿಯನ್ನು ಆಲಿಸಿದ ಮುಖ್ಯಮಂತ್ರಿಗಳು ಸಮಗ್ರ ಸಮಸ್ಯೆಗಳ ಚರ್ಚೆಗೆ  ಸಮಯವನ್ನು ನಿಗದಿಪಡಿಸಿ ಪರಿಹಾರಕ್ಕೆ ಅಧಿಕಾರಿಗಳೊಂದಿಗೆ  ಅತಿ ಶೀಘ್ರದಲ್ಲೇ ದಿನಾಂಕವನ್ನು ನಿಗದಿಪಡಿಸುತ್ತೇನೆಂದು ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಜನವರಿಯಲ್ಲಿ ಅರ್ಜುನ್ ಸರ್ಜಾ ಮಗಳ ಮದುವೆ: ಮಾವನ ಮನೆಯಿಂದ ಅಧಿಕೃತ ಘೋಷಣೆ

     

    ಈ ಸಂದರ್ಭದಲ್ಲಿ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ (Umesh Bankara) ಕಾರ್ಯದರ್ಶಿ ಪ್ರವೀಣ್ ಕುಮಾರ್ (ಡಿ.ಕೆ. ರಾಮಕೃಷ್ಣ ) ಹಾಗೂ ಉಪಾಧ್ಯಕ್ಷರಾ ಎಂ.ಜಿ. ರಾಮಮೂರ್ತಿ ನಿರ್ಮಾಪಕ ಎನ್.ಎಂ ಸುರೇಶ್ ಸೇರಿದಂತೆ ಹಲವರು ನಿಯೋಗದಲ್ಲಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ನಾಳೆ ಫಿಲ್ಮ್ ಚೇಂಬರ್ ಚುನಾವಣೆ: ಅಖಾಡಕ್ಕೆ ಇಳಿದ ದೊಡ್ಮನೆ ಕುಟುಂಬ

    ನಾಳೆ ಫಿಲ್ಮ್ ಚೇಂಬರ್ ಚುನಾವಣೆ: ಅಖಾಡಕ್ಕೆ ಇಳಿದ ದೊಡ್ಮನೆ ಕುಟುಂಬ

    ರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ಎರಡ್ಮೂರು ವರ್ಷಗಳ ನಂತರ ನಾಳೆ ನಡೆಯುತ್ತಿದೆ. ಈ ಚುನಾವಣೆ ಮಾಡಲು ಏನೆಲ್ಲ ಕಸರತ್ತುಗಳನ್ನು ಮಾಡಲಾಯಿತು. ಹಾಲಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ವಿರುದ್ಧ ದೂರು ದಾಖಲಿಸುವ ಮೂಲಕ ಚುನಾವಣೆ ಮಾಡಲು ಒತ್ತಡ ಹೇರಲಾಗಿತ್ತು. ಇದೆಲ್ಲವೂ ಹೈ ಡ್ರಾಮಾ ಆಗಿ ಇದೀಗ ನಾಳೆ ಚುನಾವಣೆ ನಡೆಯುತ್ತಿದೆ. ಇದನ್ನೂ ಓದಿ: ನಮ್ಮ ಇಂಡಸ್ಟ್ರಿ ಏನು, ನಮ್ಮ ಗೌರವ ಏನು ಎಲ್ಲರಿಗೂ ಗೊತ್ತು: ತೆಲಗು ನಿರ್ದೇಶಕನಿಗೆ ಶಿವಣ್ಣ ತಿರುಗೇಟು

    ಈ ಬಾರಿಯ ಚುನಾವಣೆ ವಿಶೇಷ ಅಂದರೆ, ನಿರ್ಮಾಪಕ ಭಾ.ಮಾ.ಹರೀಶ್ ಮತ್ತು ನಿರ್ಮಾಪಕ ಸಾ.ರಾ. ಗೋವಿಂದ್ ತಂಡದ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದ್ದು, ಈ ಎರಡೂ ತಂಡಕ್ಕೆ ಹಲವರು ತಮ್ಮ ತಮ್ಮ ಬೆಂಬಲ ವ್ಯಕ್ತ ಪಡಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಜಯಮಾಲಾ ಸೇರಿದಂತೆ ಹಲವರು ಭಾ.ಮಾ.ಹರೀಶ್ ತಂಡಕ್ಕೆ ಬೆಂಬಲ ಸೂಚಿಸಿದ್ದರೆ, ಮೊನ್ನೆಯಷ್ಟೇ ಸಾ.ರಾ.ಗೋವಿಂದ್ ಮತ್ತು ತಂಡ ರಾಘವೇಂದ್ರ ರಾಜ್ ಕುಮಾರ್ ಭೇಟಿ ಮಾಡಿದೆ. ಈ ಹಿಂದೆ ಭಾ.ಮಾ.ಹರೀಶ್ ಮತ್ತು ತಂಡ ಶಿವರಾಜ್ ಕುಮಾರ್ ಅವರನ್ನೂ ಭೇಟಿ ಮಾಡಿತ್ತು.  ಇದನ್ನೂ ಓದಿ: ಕಾಶ್ಮೀರ ಟಿವಿ ಸ್ಟಾರ್ ನಟಿ ಹತ್ಯೆ ಮಾಡಿದ ಭಯೋತ್ಪಾದಕರು

    ಸಾಮಾನ್ಯವಾಗಿ ಡಾ.ರಾಜ್ ಕುಮಾರ್ ಕುಟುಂಬ ವಾಣಿಜ್ಯ ಮಂಡಳಿಯ ಚುನಾವಣೆಯಲ್ಲಿ ನೇರವಾಗಿ ಕಣಕ್ಕೆ ಇಳಿಯುವುದು ಕಡಿಮೆ. ಪಾರ್ವತಮ್ಮ ರಾಜ್ ಕುಮಾರ್ ಸಹೋದರ ಚಿನ್ನೇಗೌಡರು ಚುನಾವಣೆ ನಿಂತಾಗಲೂ ಡಾ.ರಾಜ್ ಕುಮಾರ್ ಮಕ್ಕಳು ನೇರವಾಗಿ ಎಲ್ಲಿಯೂ ಚುನಾವಣೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಇದೀಗ ರಾಘವೇಂದ್ರ ರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಒಂದೊಂದು ತಂಡಕ್ಕೆ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಹತ್ತು ವರ್ಷಗಳ ನಂತರ ತೆಲುಗಿಗೆ ಡಬ್ ಆಯಿತು ಯಶ್ ನಟನೆಯ ಲಕ್ಕಿ ಸಿನಿಮಾ

    ಹಾಗಂತ ಇದೇ ತಂಡಕ್ಕೆ ನನ್ನ ಬೆಂಬಲ ಎಂದು ಬಹಿರಂಗವಾಗಿ ಹೇಳಿಕೊಳ್ಳದೇ ತಮ್ಮನ್ನು ಭೇಟಿಗೆ ಬಂದ ತಂಡಗಳೊಂದಿಗೆ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಆತ್ಮೀಯವಾಗಿ ಫೋಟೋ ತಗೆಸಿಕೊಂಡು ಕುತೂಹಲಕ್ಕೆ ಕಾರಣವಾಗಿದ್ದಾರೆ. ನಾಳೆ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಯಲಿದ್ದು, ಯಾರೆಲ್ಲ ಈ ಬಾರಿ ಅಧಿಕಾರಿದ ಚುಕ್ಕಾಣೆ ಹಿಡಿಯಲಿದ್ದಾರೆ ಎನ್ನುವುದು ಕುತೂಹಲ ಕಾರಣವಾಗಿದೆ. ಎರಡೂ ತಂಡದಲ್ಲೂ ಪ್ರಭಾವಿ ವ್ಯಕ್ತಿಗಳೇ ಇರುವುದರಿಂದ ಸಂಜೆ ಹೊತ್ತಿಗೆ ಫಲಿತಾಂಶ ಸಿಗಲಿದೆ.

  • ಫಿಲ್ಮ್ ಚೇಂಬರ್ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಸಾ.ರಾ ಗೋವಿಂದ್

    ಫಿಲ್ಮ್ ಚೇಂಬರ್ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಸಾ.ರಾ ಗೋವಿಂದ್

    ರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಗೆ ದಿನಗಣನೆ ಶುರುವಾಗಿದೆ. ಮೇ 28ರಂದು ಫಿಲ್ಮ್ ಚೇಂಬರ್ ಎಲೆಕ್ಷನ್ ನಡೆಯಲಿದ್ದು, ಇದೀಗ ಅಧ್ಯಕ್ಷ ಸ್ಥಾನಕ್ಕೆ ಸಾ.ರಾ ಗೋವಿಂದ್ ನಾಮಪತ್ರ ಸಲ್ಲಿಸಿದ್ದಾರೆ.

    ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿದೆ. ಮೇ 28ಕ್ಕೆ ಫಿಲ್ಮ್ ಚೇಂಬರ್ ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ಸದ್ಯ ಅಧ್ಯಕ್ಷ ಸ್ಥಾನಕ್ಕೆ ಸಾ.ರಾ ಗೋವಿಂದ್ ನಾಮಪತ್ರ ಸಲ್ಲಿಸಿದ್ದಾರೆ. ಎರಡು ವರ್ಷಕ್ಕೊಮ್ಮೆ ವಾಣಿಜ್ಯ ಮಂಡಳಿ ಚುನಾವಣೆ ನಡೆಯುತ್ತದೆ. ಆದರೆ ಕೊರೊನಾ ಕಾರಣದಿಂದ ಪದೇ ಪದೇ ಚುನಾವಣೆ ಮುಂದೂಡಿಕೆ ಆಗುತ್ತಿತ್ತು. ಹಾಗಾಗಿ ಅಧ್ಯಕ್ಷ ಸ್ಥಾನದಲ್ಲಿ ಜೈರಾಜ್ ಅವರೇ ಮುಂದುವರಿದಿದ್ದರು. ಇದನ್ನೂ ಓದಿ: ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ಬಾಲಿವುಡ್‌ಗೆ ಎಂಟ್ರಿ: ಶುಭ ಹಾರೈಸಿದ ಬಿಗ್ ಬಿ

    ಮೊನ್ನೆಯಷ್ಟೇ ಫಿಲ್ಮಂ ಚೇಂಬರ್ ನಾಮಿನೇಷನ್‌ಗೆ ಪ್ರಕ್ರಿಯೆ ಶುರುವಾಗಿದ್ದು, ಸರ್ಕಾರದ ಆದೇಶದಂತೆ ಮೇ 28ಕ್ಕೆ ಫಿಲ್ಮ್ ಚೇಂಬರ್ ಎಲೆಕ್ಷನ್ ನಡೆಯಲಿದೆ. ಅಧ್ಯಕ್ಷ ಸ್ಥಾನಕ್ಕೆ ಮೊದಲ ಅಭ್ಯರ್ಥಿಯಾಗಿ ನಿರ್ಮಾಪಕ ಭಾ.ಹರೀಶ್ ನಾಮಪತ್ರ ಸಲ್ಲಿಸಿದ್ರೆ, 2ನೇ ಅಭ್ಯರ್ಥಿಯಾಗಿ ಸಾ.ರಾ ಗೋವಿಂದ್ ನಾಮಪತ್ರ ಸಲ್ಲಿಸಿದ್ದಾರೆ. ಕನ್ನಡ ಸಿನಿಮಾಗಳ ಶೀರ್ಷಿಕೆ ನೋಂದಣಿ ಸೇರಿದಂತೆ ಅನೇಕ ಕಾರ್ಯಗಳನ್ನು ಫಿಲ್ಮ್ ಚೇಂಬರ್ ಮಾಡುತ್ತದೆ. ಈ ಎಲ್ಲಾ ಕಾರಣದಿಂದ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರಾಮುಖ್ಯತೆ ಪಡೆದುಕೊಂಡಿದೆ.

  • ನಾಳೆ ಮಹಾರಾಷ್ಟ್ರ ಗಡಿಯನ್ನು ದಾಟ್ತೇವೆ : ವಾಟಾಳ್ ನಾಗರಾಜ್

    ನಾಳೆ ಮಹಾರಾಷ್ಟ್ರ ಗಡಿಯನ್ನು ದಾಟ್ತೇವೆ : ವಾಟಾಳ್ ನಾಗರಾಜ್

    ಬೆಂಗಳೂರು: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ವಿರುದ್ಧ ಕನ್ನಡ ಹೋರಾಟಗಾರರು ಸಿಡಿದ್ದೇದಿದ್ದಾರೆ. ಉದ್ದವ್ ಠಾಕ್ರೆ ಉದ್ದಟತನ ಹಾಗೂ ಯಡಿಯೂರಪ್ಪನವರ ನಿಷ್ಕ್ರಿಯತೆ ವಿರೋಧಿಸಿ ಇಂದು ಕರಾಳ ದಿನಾಚರಣೆ ಆಚರಿಸಲಾಯಿತು.

    ನಗರದ ಮೈಸೂರು ಬ್ಯಾಂಕ್ ಸರ್ಕಲ್ ಗೆ ಕಪ್ಪು ಬಟ್ಟೆ ಧರಿಸಿ ಆಗಮಿಸಿದ ಕನ್ನಡ ಒಕ್ಕೂಟದ ಹೋರಾಟಗಾರರು ಕ್ಯಾತೆ ತೆಗೆದ ಮಹಾರಾಷ್ಟ್ರ ಸರ್ಕಾರದ ವಿರುದ್ದ ತೊಡೆ ತಟ್ಟಿನಿಂತರು. ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮೈಸೂರು ಬ್ಯಾಂಕ್ ಸರ್ಕಲ್ ನ ರಸ್ತೆಯಲ್ಲಿ ಕುಳಿತು ಪ್ರತಿಭಟಿಸಿದರು. ವಾಹನಗಳನ್ನು ತಡೆದರು. ಪ್ರತಿಭಟನೆಯಲ್ಲಿ ಕನ್ನಡ ಹೋರಾಟಗಾರರಾದ ವಾಟಾಳ್ ನಾಗರಾಜ್, ಸಾರಾ ಗೋವಿಂದ್, ಶಿವರಾಮೇಗೌಡ ಭಾಗಿಯಾಗಿದ್ದರು.

    ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಶಿವಸೇನೆ ವಿರುದ್ದ ಯುದ್ದ ಇವತ್ತಿಗೆ ಮುಗಿಯುವುದಿಲ್ಲ. ಎಲ್ಲಾ ಕನ್ನಡ ಪರ ಸಂಘಟನೆಗಳು ಯುದ್ದ ಘೋಷಿಸಿವೆ. ನಾಳೆ 11.30ಕ್ಕೆ ಬೆಳಗಾವಿಯ ಸುವರ್ಣ ಸೌಧದ ಮೂಲಕ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಮುಂದೆ ಹೋರಾಡುತ್ತೇವೆ. ನಾಳೆ ಮಹಾರಾಷ್ಟ್ರ ಗಡಿಯನ್ನು ದಾಟುತ್ತೇವೆ. ಜೈಲಿಗೆ ಹಾಕುತ್ತಿರಾ ಹಾಕಿ, ಹೆದರುವುದಿಲ್ಲ ಎಂದರು.

    ಇದೇ 29ರಂದು ಚಾಮರಾಜನಗರ ಗಡಿ ಬಂದ್ ಮಾಡುತ್ತೇವೆ. 30ನೇ ತಾರೀಖು ರಾಜ್ಯ ರೈಲು ಬಂದ್ ಹಾಗೂ ಫೆಬ್ರವರಿ 13 ಇಡೀ ಕರ್ನಾಟಕದಾದ್ಯಂತ ಕರಾಳ ದಿನಾಚರಣೆ ಆಚರಿಸತ್ತೇವೆ. ಆ ದಿನ ರಾಜ್ಯಾದ್ಯಂತ ಎಲ್ಲಾ ಕಾರು, ಬಸ್ ತಡೆಯಿರಿ ಎಂದು ಕನ್ನಡ ಹೋರಾಟಗಾರರಿಗೆ ಕರೆ ನೀಡಿದರು. ಜೊತೆಗೆ ಶಿವಮೊಗ್ಗದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೊಂದು ಸರ್ಕಾರದ ದುರಂತ, ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರದು ಬರೀ ನಾಟಕ. ಇಬ್ಬರೂ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

    ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್ ಮಾತನಾಡಿ, ನಾಳೆಯ ಬೆಳಗಾವಿ ಹೋರಾಟಕ್ಕೆ ಸರ್ಕಾರ ಬೆಂಬಲಕೊಡಲಿ ಎಂದು ಹೇಳಿದರು. ಕೆಲ ಹೊತ್ತಿನ ನಂತರ ಎಲ್ಲಾ ಕನ್ನಡ ಪರ ಹೋರಾಟಗಾರರನ್ನು ಪೋಲಿಸರು ವಶಕ್ಕೆ ಪಡೆದರು.

  • ಡ್ರಗ್ ಮಾಫಿಯಾ- ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಸುದ್ದಿಗೋಷ್ಠಿ

    ಡ್ರಗ್ ಮಾಫಿಯಾ- ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಸುದ್ದಿಗೋಷ್ಠಿ

    -ತೆವಲಿಗೆ ಬಂದ ಕಲಾವಿದರು ಡ್ರಗ್ ಮಾಫಿಯಾದಲ್ಲಿ ಇರಬಹುದು

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆಯ ಕುರಿತು ವಿಷಯಕ್ಕೆ ಸಂಬಂಧಿಸಿದಂತೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಸುದ್ದಿಗೋಷ್ಠಿ ನಡೆಸಲಾಗಿತ್ತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಮಾಧ್ಯಮಗಳಲ್ಲಿ ಕಳೆದ ಕೆಲ ದಿನಗಳಿಂದ ಸ್ಯಾಂಡಲ್‍ವುಡ್ ನಲ್ಲಿ ಡ್ರಗ್ ಮಾಫಿಯಾ ಸುದ್ದಿ ನೋಡಿ ಮನಸ್ಸಿಗೆ ನೋವಾಗಿದೆ. ಇನ್ನು ನಿರ್ಮಾಪಕ ಇಂದ್ರಜಿತ್ ಲಂಕೇಶ್ ಆರೋಪಗಳ ಬಗ್ಗೆ ನಮಗೆ ಮಾಹಿತಿ ಇಲ್ಲ ಅಂದ್ರು.

    ಮಾಧ್ಯಮಗಳಲ್ಲಿ ಬರ್ತಿರುವ ಡ್ರಗ್ಸ್ ದಂಧೆಯ ಬಗ್ಗೆ ಚರ್ಚೆ ಮಾಡಲಾಗುವುದು. ಮಾಧ್ಯಮಗಳಿಂದ ಒಂದಿಷ್ಟು ಮಾಹಿತಿ ಕೂಡ ಪಡೆಯಬೇಕಿದೆ. ಕೆಲವು ಅಂಶಗಳ ಬಗ್ಗೆ ಈಗಾಗಲೇ ಮಾಹಿತಿ ಪಡೆಯಲಾಗಿದೆ. ಸುಮಾರು 6 ತಿಂಗಳಿಂದ ಉಸಿರು ಗಟ್ಟಿಸುವ ವಾತಾವರಣದಲ್ಲಿ ಚಿತ್ರರಂಗ ಇದೆ. ಇದರ ಜೊತೆಗೆ ಈಗ ಡ್ರಗ್ಸ್ ಚರ್ಚೆ ಶುರುವಾಗಿರುವುದು ತುಂಬಾ ಬೇಸರವಾಗಿದೆ. ಯಾವುದೇ ಕಂಪ್ಲೇಟ್ ಬಂದಾಗ ಅದರ ಬಗ್ಗೆ ಮಾಹಿತಿ ಪಡೆದು ಕೆಲಸ ಮಾಡುತ್ತೇವೆ ಎಂದು ಜೈರಾಜ್ ಹೇಳಿದ್ರು.

    ಇದೇ ವೇಳೆ ಮಾತನಾಡಿದ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ, ಯಾವುದೇ ಕಂಪ್ಲೇಟ್ ಬಂದಾಗ ಅದರ ಬಗ್ಗೆ ಮಾಹಿತಿ ಪಡೆದು ಕೆಲಸ ಮಾಡಲಾಗುತ್ತದೆ. ತೆವಲಿಗೆ ಬಂದಂತ ಕೆಲವು ಕಲಾವಿದರು ಈ ಡ್ರಗ್ಸ್ ಮಾಫಿಯಾದಲ್ಲಿ ಇರಬಹುದು. ನಾನು 40 ವರ್ಷದಿಂದ ನಾನು ಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿದ್ದೇನೆ. ಇಂದ್ರಜಿತ್ ಲಂಕೇಶ್ ಹೇಳಿಕೆ ಕೇಳಿ ನಮಗೆ ಶಾಕ್ ಆಯ್ತು. ಇಂದ್ರಜಿತ್ ಲಂಕೇಶ್ ಆರೋಪ ಸಾಬೀತು ಮಾಡದಿದ್ರೆ ಅವರು ಆರೋಪಿಯ ಸ್ಥಾನದಲ್ಲಿ ನಿಲ್ಲುತ್ತಾರೆ. ಇಲ್ಲದೇ ಇದ್ರೆ ಕೋರ್ಟ್ ಇಂದ್ರಜಿತ್ ಅವರಿಗೂ ಛೀಮಾರಿ ಹಾಕಬಹುದು ಎಂದು ಟಾಂಗ್ ನೀಡಿದರು.

    ಪ್ರಶಾಂತ್ ಸಂಬರ್ಗಿಯವರು ಚಿತ್ರದೋಮ್ಯದವರ ಅಲ್ಲ. ಯಾವುದೇ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿಲ್ಲ. ಸಾಮಾಜಿಕ ಕಳಕಳಿಯಿಂದಾಗಿ ಡ್ರಗ್ಸ್ ಮಾಫಿಯಾ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಚಿತ್ರರಂಗಕ್ಕೂಪ್ರಶಾಂತ್ ಸಂಬರ್ಗಿಯವರಿಗೆ ಯಾವುದೇ ಸಂಬಂಧವಿಲ್ಲ. ಇಂದ್ರಜಿಯ್ ಲಂಕೇಶ್ ನಮ್ಮ ಬಳಿ ಬರದೇ ನೇರವಾಗಿ ಮಾಧ್ಯಮಗಳ ಮುಂದೆ ಹೋಗಿದ್ದಾರೆ. ಹಾಗಾಗಿ ಇಂದ್ರಜಿತ್ ಅವರನ್ನ ಫಿಲಂ ಚೇಂಬರ್ ಗೆ ಕರೆಸಲ್ಲ. ಪ್ರಕರಣ ತನಿಖಾ ಹಂತದಲ್ಲಿ ಇರೋದರಿಂದ ಯಾವುದೇ ಕ್ರಮಕೈಗೊಳ್ಳಲ್ಲ ಎಂದು ಸಾ.ರಾ.ಗೋವಿಂದ ಹೇಳಿದರು.

  • ಫಿಲ್ಮ್ ಚೇಂಬರ್ ಗೆ  ತೆರಳಿ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ ಆರ್‌ಜೆ ರಶ್ಮಿ

    ಫಿಲ್ಮ್ ಚೇಂಬರ್ ಗೆ  ತೆರಳಿ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ ಆರ್‌ಜೆ ರಶ್ಮಿ

    ಬೆಂಗಳೂರು: ರಾಜರಥ ತಂಡ ಸಂದರ್ಶನದ ವೇಳೆ ಮಾತನಾಡಿದ ಪದಗಳಿಂದ ಕನ್ನಡಿಗರಿಗೆ ಆಗಿರುವ ನೋವಿಗೆ ಆರ್‌ಜೆ ರಶ್ಮಿ ಕನ್ನಡಿಗರ ಕ್ಷಮೆ ಕೇಳಿದ್ದಾರೆ.

    ಚಿತ್ರ ತಂಡ ಬಳಸಿದ ಪದಗಳು ಸಾಕಷ್ಟು ವಿವಾದಗಳನ್ನು ಸೃಷ್ಟಿ ಮಾಡಿದೆ. ಪ್ರತಿ ದಿನ ಒಂದೊಂದು ತಿರುವು ಪಡೆದುಕೊಂಡು ಕನ್ನಡಿಗರಿಗೆ ಬೇಸರ ಉಂಟು ಮಾಡಿದೆ. ಹಾಗಾಗಿ ಇವತ್ತು ನಾನೆ ಖುದ್ದು ಸಾರಾ ಗೋವಿಂದ್ ಅವರನ್ನು ಹುಡುಕಿ ಕೊಂಡು ಚಲನ ಚಿತ್ರ ವಾಣಿಜ್ಯ ಮಂಡಳಿಗೆ ಬಂದಿದ್ದೇನೆ. ಭೇಟಿಗೆ ಅವಕಾಶ ಮಾಡಿಕೊಟ್ಟ ಸಾರಾ ಗೋವಿಂದ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

    ನಮ್ಮ ಕಾಯಕ್ರಮದಿಂದ ಕನ್ನಡಿಗರಿಗೆ ನೋವಾಗಿದೆ ನಮ್ಮ ಕಡೆಯಿಂದ ಕ್ಷಮೆ ಇರಲಿ. ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಕ್ರಮದಲ್ಲಿ ಈ ರೀತಿ ಘಟನೆಗಳಿಗೆ ಅವಕಾಶ ಮಾಡಿಕೊಡವುದಿಲ್ಲ ಎಂದು ಭರವಸೆ ನೀಡಿದ್ದಾರೆ.

    ನನ್ನ ಪ್ರಶ್ನೆಗೆ ಆ ರೀತಿ ಉತ್ತರ ಕೊಟ್ಟರು ಯಾಕೆ ಪ್ರತಿಕ್ರಿಯಿಸಿಲ್ಲ ಅಂತ ನನ್ನನ್ನು ಜನ ಪ್ರಶ್ನೆ ಮಾಡುತ್ತಿದ್ದಾರೆ. ಆ ಕ್ಷಣದಲ್ಲಿ ಹೊಳೆದಿಲ್ಲ ಕ್ಷಮಿಸಿ ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳುತ್ತೇನೆ. ಹೀಗಾದಲ್ಲಿ ತಕ್ಷಣವೇ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.

    ಕನ್ನಡಿಗರ ಮನಸ್ಸಿಗೆ ನೊವಾಗುವಂತಹ ವಿಚಾರ ಬಂದಾಗ ಎಚ್ಚರದಿಂದ ಇರುತ್ತೇನೆ. ಇಷ್ಟು ವರ್ಷಗಳ ಕಾಲ ಆರ್‍ಜೆ ಆಗಿದ್ದೇನೆ. ಕನ್ನಡ ಚಿತ್ರಗಳಿಗೆ ಪ್ರೋತ್ಸಾಹ ಕೊಡುವಂತಹ ಕಾರ್ಯಕ್ರಮಗಳನ್ನು ಹುಟ್ಟು ಹಾಕಿದ್ದೇನೆ. ಕಳೆದ ಒಂದು ವರ್ಷದಲ್ಲಿ ನಮ್ಮ ಕಾರ್ಯಕ್ರಮಕ್ಕೆ ನಹಳಷ್ಟು ಚಿತ್ರ ತಂಡದವರು ಬಂದಿದ್ದಾರೆ. ಇನ್ನಮುಂದೆ ಕೂಡ ನಿಮ್ಮ ಸಹಕಾರ ಹೀಗೆ ಇರಲಿ. ನಮ್ಮ ಕಾರ್ಯಕ್ರಮದ ಉದ್ದೇಶ ಚಿತ್ರದ ಪ್ರಚಾರಕ್ಕಷ್ಟೇ ಸೀಮಿತ ವಾಗಿರುತ್ತದೆ ಎಂದು ಮತ್ತೊಮ್ಮೆ ಹೇಳಿ ಕನ್ನಡಿಗರಲ್ಲಿ ರಶ್ಮಿ ಅವರು ಕ್ಷಮಾಪಣೆ ಕೇಳಿದ್ದಾರೆ. ಇದನ್ನೂ ಓದಿ: ರಾಜರಥ ಸಿನಿಮಾ ತಂಡದ ವಿರುದ್ಧ ಮತ್ತೊಂದು ದೂರು ದಾಖಲು

    ಸಾರಾ ಗೋವಿಂದ್ ಮಾತನಾಡಿ ಒಂದು ಹೆಣ್ಣು ಮಗಳು ಖುದ್ದು ಬಂದು ಮೊದಲ ಬಾರಿ ಆಗಿರುವ ತಪ್ಪಿಗೆ ಕ್ಷಮಾಪಣೆ ಕೇಳುತ್ತಿದ್ದಾರೆ. ಕನ್ನಡಿಗರು ಔದಾರ್ಯದಿಂದ ಕ್ಷಮಿಸಬೇಕೆಂದು ತಿಳಿಸಿದರು. ಇದನ್ನೂ ಓದಿ: ದಯವಿಟ್ಟು ಕ್ಷಮಿಸಿ, ಇನ್ನು ಮುಂದೆ ಹೀಗೆ ಆಗಲ್ಲ: ಅನೂಪ್ ಭಂಡಾರಿ