Tag: s.t.somashekar

  • ಉಚ್ಚಾಟನೆಯನ್ನು ನಿರೀಕ್ಷಿಸಿದ್ದೆವು, ಒಳ್ಳೆಯದಾಯ್ತು: ಎಸ್‌ಟಿ ಸೋಮಶೇಖರ್

    ಉಚ್ಚಾಟನೆಯನ್ನು ನಿರೀಕ್ಷಿಸಿದ್ದೆವು, ಒಳ್ಳೆಯದಾಯ್ತು: ಎಸ್‌ಟಿ ಸೋಮಶೇಖರ್

    ಬೆಂಗಳೂರು: ಬಿಜೆಪಿಯಲ್ಲಿ ರೇಪ್ ಮಾಡಿದವರನ್ನು ಉಚ್ಚಾಟನೆ ಮಾಡುವುದಿಲ್ಲ. ನಮ್ಮಂತವರನ್ನು ಉಚ್ಚಾಟನೆ ಮಾಡ್ತಾರೆ ಎಂದು ಯಶವಂತಪುರದ ಬಿಜೆಪಿಯ ಉಚ್ಚಾಟಿತ ಶಾಸಕ ಎಸ್‌ಟಿ ಸೋಮಶೇಖರ್ (S T Somashekar) ಹೇಳಿದರು.

    ಬಿಜೆಪಿಯ (BJP) ಯಶವಂತಪುರದ ಶಾಸಕ ಎಸ್‌ಟಿ ಸೋಮಶೇಖರ್ ಹಾಗೂ ಯಲ್ಲಾಪುರದ ಶಾಸಕ ಶಿವರಾಂ ಹೆಬ್ಬಾರ್ (Shivaram Hebbar) ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದೆ. ಈ ಬಗ್ಗೆ `ಪಬ್ಲಿಕ್ ಟಿವಿ’ಗೆ ಪ್ರತಿಕ್ರಿಯೆ ನೀಡಿದ ಎಸ್‌ಟಿ ಸೋಮಶೇಖರ್ ಅವರು, ಉಚ್ಚಾಟನೆಯನ್ನು ನಿರೀಕ್ಷಿಸಿದ್ದೆವು. ಒಳ್ಳೆಯದಾಯ್ತು ಎಂದರು. ಇದನ್ನೂ ಓದಿ: ಸಾಲು ಸಾಲು ಉಚ್ಛಾಟನೆ, ತಾಂತ್ರಿಕವಾಗಿ ಬಿಜೆಪಿ ಬಲಾಬಲ ಕುಸಿತ

    1% ಸಹ ಬೇಸರ, ಅಸಮಾಧಾನ ಇಲ್ಲ. ಉಚ್ಚಾಟನೆ ಮಾಡಿದ್ದು ಖುಷಿ ಇದೆ. ಬಿಜೆಪಿಯಲ್ಲಿ ನನ್ನ ಪರವಾಗಿ ಮಾತನಾಡಲು ಯಾರಿಗೂ ಧೈರ್ಯ ಇಲ್ಲ. ಬಿಜೆಪಿಯಲ್ಲಿ ಮಾಡಬಾರದ್ದನ್ನ ಮಾಡಿರೋರು ಯರ‍್ಯಾರೋ ಇದ್ದಾರೆ. ಅತ್ಯಾಚಾರದ ಆರೋಪ ಹೊತ್ತಿರೋರು ಇದ್ದಾರೆ. ಅವರೆಲ್ಲರನ್ನೂ ಬಿಟ್ಟು ನನ್ನ ಉಚ್ಛಾಟನೆ ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿಯಿಂದ ಎಸ್‌ಟಿ ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಉಚ್ಚಾಟನೆ

    ಉಚ್ಚಾಟನೆ ಯಾಕೆ ಮಾಡಿದ್ದೀರಿ ಅಂತಾನೂ ಕೇಳೋದಿಲ್ಲ. ನಾನು ಈಗ ಫ್ರೀ ಬರ್ಡ್ ಆಗಿದ್ದೀನಿ. ಇನ್ನು ಫ್ರೀ ಬರ್ಡ್ ಆಗಿ ಓಡಾಡುತ್ತೇನೆ. ಕಾಂಗ್ರೆಸ್ ಇಲ್ಲ, ಬಿಜೆಪಿ ಇಲ್ಲ ಆರಾಮಾಗಿ ಇದ್ದೇವೆ. ಮುಂದಿನ ನಡೆ ಬಗ್ಗೆ ಈಗ ಯೋಚನೆ ಮಾಡಿಲ್ಲ ಎಂದರು.

  • ಮುಡಾ ಸೈಟ್ ಪಡೆದ ಶಾಸಕರ ಹೆಸರು ಹೇಳಿ: ಎಸ್‌ಟಿಎಸ್‌ಗೆ ಪ್ರತಾಪ್ ಸಿಂಹ ಸವಾಲ್

    ಮುಡಾ ಸೈಟ್ ಪಡೆದ ಶಾಸಕರ ಹೆಸರು ಹೇಳಿ: ಎಸ್‌ಟಿಎಸ್‌ಗೆ ಪ್ರತಾಪ್ ಸಿಂಹ ಸವಾಲ್

    ಬೆಂಗಳೂರು: ಎಸ್.ಟಿ.ಸೋಮಶೇಖರ್ (S T Somashekhar) ಅವರು ಗಾಳಿಯಲ್ಲಿ ಗುಂಡು ಹೊಡೆಯೋದು ಬಿಟ್ಟು ಮೈಸೂರಿನಲ್ಲಿ ಮುಡಾದಿಂದ (MUDA) ನೂರಾರು ಸೈಟ್‌ಗಳನ್ನು ಪಡೆದಿರುವ ಶಾಸಕರ ಹೆಸರು ಹೇಳಲಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ (Prathap Simha) ಸವಾಲೆಸೆದರು.

    ಸಿದ್ದರಾಮಯ್ಯ (Siddaramaiah) ಮೇಲೆ ಮಾತ್ರ ತನಿಖೆ ಏಕೆ, ನೂರಾರು ಸೈಟ್ ಪಡೆದ ಮೈಸೂರಿನ (Mysuru) ಶಾಸಕರ ಮೇಲೆ ತನಿಖೆ ಯಾಕಿಲ್ಲ ಎಂದು ಎಸ್.ಟಿ.ಸೋಮಶೇಖರ್ ನಿನ್ನೆ ಹೇಳಿಕೆ ಕೊಟ್ಟಿದ್ದರು. ಈ ಬಗ್ಗೆ ಬೆಂಗಳೂರಿನಲ್ಲಿ (Bengaluru) ಪ್ರತಿಕ್ರಿಯಿಸಿದ ಅವರು, ಮುಡಾದಲ್ಲಿ 14 ಸೈಟ್ ಸಿದ್ದರಾಮಯ್ಯ ಪಡೆದಾಗ ಇದೇ ಸೋಮಶೇಖರ್ ಮೈಸೂರು ಉಸ್ತುವಾರಿ ಸಚಿವರಾಗಿದ್ದರು. ಸೋಮಶೇಖರ್ ಅವರು ಮುಡಾದಲ್ಲಿ ಎಂಎಲ್‌ಎ, ಎಂಎಲ್‌ಸಿಗಳು ನೂರಾರು ಸೈಟ್‌ಗಳನ್ನು ತೆಗೆದುಕೊಂಡಿದ್ದಾರೆ ಅಂದಿದ್ದಾರಲ್ಲಾ. ಅವರು ಯಾರೆಲ್ಲಾ ಎಂದು ಅವರಿಗೇ ಗೊತ್ತಿರಬೇಕಲ್ಲ. ಅವರ ಹೆಸರು ಹೇಳಲಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಸುಪ್ರೀಂ ಕೋರ್ಟ್‌ ಕಾನೂನು ಮಾಡಿದ್ರೆ ಸಂಸತ್ತು ಭವನವನ್ನು ಮುಚ್ಚಬೇಕು: ಬಿಜೆಪಿ ಎಂಪಿ ನಿಶಿಕಾಂತ್‌ ದುಬೆ

    ಸೋಮಶೇಖರ್ ಯಾರಿಗೆಲ್ಲಾ ಕೊಡಿಸಿದ್ರು ಅಂತ ಅವರಿಗೇ ಗೊತ್ತಿರುತ್ತೆ. ಸೋಮಶೇಖರ್ ಇರುವಾಗಲೇ ಸಿದ್ದರಾಮಯ್ಯಗೆ 14 ಸೈಟು ಕೊಟ್ರಲ್ಲ. ಹಾಗಾದ್ರೆ ಪ್ರಕರಣದಲ್ಲಿ ಸೋಮಶೇಖರ್ ಸಹ ಭಾಗಿಯಾಗಿದ್ರು ಅಂತ ಹೇಳೋಕ್ಕಾಗುತ್ತಾ? ಸೋಮಶೇಖರ್ ಅವರಿಗೆ ವಿಚಾರ ಗೊತ್ತಿದ್ರೆ ಇಂತಿಂಥ ಶಾಸಕರು, ಪರಿಷತ್ ಸದಸ್ಯರು ಮುಡಾ ಸೈಟ್ ಪಡೆದಿದ್ದಾರೆ ಎಂದು ಹೆಸರು ಹೇಳಲಿ. ಸೋಮಶೇಖರ್ ಅವರು ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯೋದು ಬೇಡ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಜನಿವಾರ ತೆಗೆಸಿರುವುದು ಜನರ ನಂಬಿಕೆ ಮೇಲೆ ಪ್ರಹಾರ: ಪ್ರಹ್ಲಾದ್ ಜೋಶಿ

    ಎಸ್.ಟಿ.ಸೋಮಶೇಖರ್ ನಮ್ಮ ಪಕ್ಷದ ಚಿಹ್ನೆಯಲ್ಲೇ ಗೆದ್ದವರು. ಅವರು ಚನ್ನಪಟ್ಟಣದಲ್ಲಿ ಚುನಾವಣೆ ನಡೆದಾಗ ಕಾಂಗ್ರೆಸ್ ವೇದಿಕೆಗೆ ಹೋಗಿದ್ದರು. ರಾಜ್ಯಸಭೆ, ಎಂಎಲ್‌ಸಿ ಎಲೆಕ್ಷನ್ ನಡೆದರೆ ಕಾಂಗ್ರೆಸ್ ಕಡೆ ಕೈ ಎತ್ತುತ್ತಾರೆ. ಈ ರೀತಿ ಸೋಮಶೇಖರ್ ನೈತಿಕ ಅಧಃಪತನದತ್ತ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

  • ಇವರು ಪಕ್ಷಕ್ಕೆ ರಾಜೀನಾಮೆ ಕೊಟ್ಟು ಮತ ಹಾಕಬಹುದಿತ್ತು: ಸೋಮಶೇಖರ್ ವಿರುದ್ಧ ಅಶೋಕ್ ಕಿಡಿ

    ಇವರು ಪಕ್ಷಕ್ಕೆ ರಾಜೀನಾಮೆ ಕೊಟ್ಟು ಮತ ಹಾಕಬಹುದಿತ್ತು: ಸೋಮಶೇಖರ್ ವಿರುದ್ಧ ಅಶೋಕ್ ಕಿಡಿ

    ಬೆಂಗಳೂರು: ಜಗದೀಶ್ ಶೆಟ್ಟರ್ ರಾಜೀನಾಮೆ ಕೊಟ್ಟು ಬಿಜೆಪಿಗೆ ವಾಪಸ್ಸಾದ್ರು. ಇವರು ಪಕ್ಷಕ್ಕೆ ರಾಜೀನಾಮೆ ಕೊಟ್ಟು, ಮತ ಹಾಕಬಹುದಿತ್ತು ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಅಸಮಾಧಾನ ಹೊರಹಾಕಿದರು.

    ರಾಜ್ಯಸಭಾ ಚುನಾವಣೆಯಲ್ಲಿ (Rajya Sabha Election) ಅಡ್ಡ ಮತದಾನ ಮಾಡಿದ ಬಿಜೆಪಿ ಶಾಸಕರ ವಿರುದ್ಧ ಕಿಡಿಕಾರಿದ ಆರ್.ಅಶೋಕ್, ನಮ್ಮ ಮತದಾನ 47 ಬಿಜೆಪಿ ಅಭ್ಯರ್ಥಿಗೆ ವೋಟ್ ಹಾಕಲು ವಿಪ್ ಕೊಟ್ಟಿದ್ದೆವು. ಎಸ್.ಟಿ.ಸೋಮಶೇಖರ್ (S.T.Somashekar), ಶಿವರಾಮ್ ಹೆಬ್ಬಾರ್‌ಗೂ ವಿಪ್ ಕಳಿಸಿದ್ದೆವು. ಕಳೆದ ವಾರದಿಂದ ಸೋಮಶೇಖರ್, ಹೆಬ್ಬಾರ್ ಮಾತಾಡಿದ್ರು. ಹೆಬ್ಬಾರ್ ಕೊನೆ ಕ್ಷಣದವರೆಗೂ ಮಾತಾಡಿದ್ರು. ನಾವು ಪಕ್ಷಕ್ಕೆ ಮೋಸ ಮಾಡಲ್ಲ ಅಂದ್ರು. ತಾಯಿಗೆ ಮೋಸ ಮಾಡಲ್ಲ ಅಂದಿದ್ರು ಎಂದು ನೆನಪಿಸಿಕೊಂಡರು. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಶಾಕ್‌ – ಕಾಂಗ್ರೆಸ್‌ ಪರ ಎಸ್‌.ಟಿ.ಸೋಮಶೇಖರ್‌ ಮತ

    ಸೋಮಶೇಖರ್ ಅಡ್ಡ ಮತದಾನ ಮಾಡಿದ್ದಾರೆ ಅಂತಾ ಗೊತ್ತಾಗಿದೆ. ಈ ರೀತಿ ಪದೇ ಪದೆ ಮೋಸ ಮಾಡೋದನ್ನ ಜನ ಸಹಿಸಲ್ಲ. ಸೋಮಶೇಖರ್ ಮಂತ್ರಿ ಮಾಡಿ, ಮೈಸೂರು ಇನ್ ಚಾರ್ಜ್ ಮಾಡಿದ್ದೆವು. ಅಭಿವೃದ್ಧಿಗೆ ಹಣ ಅಂತಾರೆ. ಹಿಂದೆ ಎಷ್ಟು ಬಾರಿ ಹಣ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.

    ಸೋಮಶೇಖರ್ ನಡೆ ರಾಜಕೀಯ ಆತ್ಮಹತ್ಯೆ. ನಮ್ಮ ವಿವೇಕ್ ರೆಡ್ಡಿ ಅವರ ಜೊತೆ ಚರ್ಚೆ ಮಾಡಿದ್ದೇವೆ. ಅವರು ಏನೆಲ್ಲಾ ಮಾಡಬಹುದು ಅನ್ನೋದು ತಿಳಿಸಿದ್ದಾರೆ. ಸೋಮಶೇಖರ್ ಅವರೇ ನಿನ್ನೆ ಕರೆ ಮಾಡಿದ್ರು. ದ್ರೋಹ ಬಗೆಯಲ್ಲ ಅಂತ ಹೇಳಿದ್ರು. ಸೋಮಶೇಖರ್, ಡಿಕೆಶಿ ಹಾಗೂ ಸಿದ್ದರಾಮಯ್ಯ ಜೊತೆಗೆ ಓಡಾಡುವಾಗಲೇ ಗುಮಾನಿ ಇತ್ತು. ಜನ ಅವರನ್ನ ಕ್ಷಮಿಸಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಜೆಡಿಎಸ್‍ನವರಿಗೆ ಆತ್ಮನೇ ಇಲ್ಲ, ಆತ್ಮಸಾಕ್ಷಿ ಮತ ಎಲ್ಲಿ ಬರುತ್ತೆ?: ಸಿಎಂ

    ಪಕ್ಷದಿಂದ ಕೈಬಿಡುವ ವಿಚಾರವಾಗಿ ಮಾತನಾಡಿ, ಜಗದೀಶ್ ಶೆಟ್ಟರ್ ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದ್ರು. ಇವರು ಪಕ್ಷಕ್ಕೆ ರಾಜೀನಾಮೆ ಕೊಟ್ಟು, ಮತ ಹಾಕಬಹುದಿತ್ತು. ಕಾನೂನು ತಜ್ಞರ ಜೊತೆ ಚರ್ಚಿಸಿ ನಿರ್ಧಾರ ಮಾಡ್ತೀವಿ. ಬಿಜೆಪಿ ಗೆಲ್ಲಲಿದೆ ಎಂದರು.

    ಸ್ಪರ್ಧೆ ಆಗಬೇಕು ಅನ್ನೋ ದೃಷ್ಟಿಯಿಂದ ಸ್ಪರ್ಧೆ ಆಗಿದೆ. ಚುನಾವಣೆ ಅಂದ ಮೇಲೆ ಸೋಲು, ಗೆಲುವು ಇದ್ದೇ ಇದೆ. ಇದು ಬಿಜೆಪಿ, ಜೆಡಿಎಸ್ ಸೋಲು ಅಂತ ಅಲ್ಲ ಎಂದು ಹೇಳಿದರು. ಇದನ್ನೂ ಓದಿ: ಸೋಮಶೇಖರ್ ವಿರುದ್ಧ ಸ್ಪೀಕರ್‌ಗೆ ದೂರು: ದೊಡ್ಡನಗೌಡ ಪಾಟೀಲ್

  • ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಶಾಕ್‌ – ಕಾಂಗ್ರೆಸ್‌ ಪರ ಎಸ್‌.ಟಿ.ಸೋಮಶೇಖರ್‌ ಮತ

    ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಶಾಕ್‌ – ಕಾಂಗ್ರೆಸ್‌ ಪರ ಎಸ್‌.ಟಿ.ಸೋಮಶೇಖರ್‌ ಮತ

    ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ರಾಜ್ಯ ಬಿಜೆಪಿಗೆ ಶಾಕ್‌ ಎದುರಾಗಿದೆ. ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ (S.T.Somashekar) ಅವರು ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿದ್ದಾರೆ.

    ಬಿಜೆಪಿ (BJP) ಶಾಸಕ ಸೋಮಶೇಖರ್‌ ಅಡ್ಡ ಮತದಾನ ಮಾಡಿದ್ದು, ಕಾಂಗ್ರೆಸ್‌ (Congress) ಅಭ್ಯರ್ಥಿ ಜಿ.ಸಿ.ಚಂದ್ರಶೇಖರ್‌ ಪರ ಮತ ಚಲಾಯಿಸಿದ್ದಾರೆ. ಹೀಗಾಗಿ ಎಸ್‌ಟಿಎಸ್‌ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ನಾಯಕರು ಗಂಭೀರ ಚರ್ಚೆ ನಡೆಸಿದ್ದಾರೆ. ಇದನ್ನೂ ಓದಿ: ಬಿಜೆಪಿ-ಜೆಡಿಎಸ್‌ನವ್ರೂ ನಮಗೆ ವೋಟ್‌ ಹಾಕ್ತಾರೆ; ನಾವು ಸರ್ಜರಿ ಮಾಡ್ತೀವಿ: ಪ್ರದೀಪ್‌ ಈಶ್ವರ್‌

    ಮತ ಚಲಾಯಿಸುವ ಮುನ್ನ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಎಸ್‌.ಟಿ.ಸೋಮಶೇಖರ್‌ ಭೇಟಿಯಾಗಿದ್ದರು. ಇದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಯಾರನ್ನೂ ಭೇಟಿಯಾಗಿಲ್ಲ. ನನ್ನನ್ನು ಭೇಟಿ ಮಾಡಿ, ಭರವಸೆ ಕೊಟ್ಟರೆ ಅವರಿಗೆ ಮತ ಹಾಕುತ್ತೇನೆ ಎಂದು ಹೇಳಿದ್ದರು.

    ಎಸ್‌.ಟಿ.ಸೋಮಶೇಖರ್ ವಿರುದ್ಧ ಬಿಜೆಪಿ ಪಾಳಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸೋಮಶೇಖರ್ ಮನೆ ಮುತ್ತಿಗೆಗೆ ಬಿಜೆಪಿ ಯುವ ಮೋರ್ಚಾ ಮುಂದಾಗಿದೆ. ಮಧ್ಯಾಹ್ನ 12:30ಕ್ಕೆ ಪ್ರತಿಭಟನೆ ನಡೆಸಲು ಕಾರ್ಯಕರ್ತರು ಮುಂದಾಗಿದ್ದಾರೆ. ಇದನ್ನೂ ಓದಿ: ಭೇಟಿಯಾಗಿ ಭರವಸೆ ಕೊಟ್ಟವರಿಗೆ ಮತ ಹಾಕ್ತೀನಿ: ಸೋಮಶೇಖರ್

  • ರಾಜ್ಯ ಬಜೆಟ್‌ನ್ನು ಹಾಡಿ ಹೊಗಳಿದ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್

    ರಾಜ್ಯ ಬಜೆಟ್‌ನ್ನು ಹಾಡಿ ಹೊಗಳಿದ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಬಜೆಟ್‌ನ್ನು ಬಿಜೆಪಿ (BJP) ಶಾಸಕ ಎಸ್.ಟಿ ಸೋಮಶೇಖರ್ (S.T Somashekar) ಹಾಡಿ ಹೊಗಳಿದ್ದಾರೆ. ಈ ಬಜೆಟ್ 7 ಕೋಟಿ ಜನರ ಬಜೆಟ್ ಆಗಿದೆ. ನಾನು ಸಿಎಂ ಮತ್ತು ಡಿಸಿಎಂ ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದಿದ್ದಾರೆ.

    ನಗರದಲ್ಲಿ (Be ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಬಗ್ಗೆ ಮಾತ್ರ ನಾನು ಮಾತಾನಾಡುತ್ತೇನೆ. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ 5 ಕಸದ ಘಟಕಗಳು ಇದ್ದವು. ಅವುಗಳನ್ನ ಹೊರಗೆ ಹಾಕುವ ಬಗ್ಗೆ ಬಜೆಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಜನರ ಸಂಕಷ್ಟ ನಿವಾರಣೆಗೆ ಸಿಎಂ ಕ್ರಮ ತೆಗೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಶಾಲಾ-ಕಾಲೇಜುಗಳ ಅಭಿವೃದ್ಧಿಗೆ 850 ಕೋಟಿ ರೂ. ಅನುದಾನ; ಸಿಎಂಗೆ ಮಧು ಬಂಗಾರಪ್ಪ ಅಭಿನಂದನೆ

    110 ಹಳ್ಳಿಗಳಿಗೆ ಕಾವೇರಿ ನೀರಿನ ಸೌಲಭ್ಯ ಮಾಡುವ ಭರವಸೆ ನೀಡಿದ್ದಾರೆ. ಸಂಚಾರ ಸಮಸ್ಯೆ ನಿವಾರಣೆ ಬಗ್ಗೆ ಹೇಳಿದ್ದಾರೆ. ವೈಟ್ ಟ್ಯಾಪಿಂಗ್ ಕ್ಲಿಯರ್ ಮಾಡುವ ಬಗ್ಗೆ ಬಜೆಟ್‌ನಲ್ಲಿ ತಿಳಿಸಿದ್ದಾರೆ. ಇನ್ನೂ ಬೆಂಗಳೂರು ಬಿಟ್ಟು ಹೊರಗೆ ಏನಿದೆ ಎಂದು ನೋಡಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಬಜೆಟ್ ಮೊತ್ತ ನೋಡಿ ಬಿಜೆಪಿಗರಿಗೆ ಕುಳಿತುಕೊಳ್ಳಲು ಆಗದೆ ಕೈ ಹಿಸುಕಿಕೊಂಡಿದ್ದಾರೆ: ಡಿಕೆಶಿ

  • ಬಿಜೆಪಿಯವ್ರು ಪಕ್ಷಕ್ಕೆ ಬರುವಾಗ ಜಾಮೂನು ಕೊಡ್ತಾರೆ, ಅಧಿಕಾರ ಮುಗಿದಾಗ ವಿಷ ಕೊಡ್ತಾರೆ: ಎಸ್‌ಟಿಎಸ್ ಕಿಡಿ

    ಬಿಜೆಪಿಯವ್ರು ಪಕ್ಷಕ್ಕೆ ಬರುವಾಗ ಜಾಮೂನು ಕೊಡ್ತಾರೆ, ಅಧಿಕಾರ ಮುಗಿದಾಗ ವಿಷ ಕೊಡ್ತಾರೆ: ಎಸ್‌ಟಿಎಸ್ ಕಿಡಿ

    ಮೈಸೂರು: ಬಿಜೆಪಿಯವರು ಪಕ್ಷಕ್ಕೆ ಬರುವಾಗ ಜಾಮೂನು ಕೊಡುತ್ತಾರೆ. ಅಧಿಕಾರ ಮುಗಿದ ಮೇಲೆ ವಿಷ ಕೊಡುತ್ತಾರೆ ಎಂದು ಸ್ವಪಕ್ಷದ ವಿರುದ್ಧವೇ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ (S.T.Somashekar) ಕಿಡಿಕಾರಿದರು.

    ನಗರದಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್‌ನಲ್ಲಿದ್ದವನು. ಅವರಾಗೆ ಪಕ್ಷಕ್ಕೆ ಸೇರಿಸಿಕೊಂಡರು. ಈಗ ಎಸ್.ಟಿ.ಸೋಮಶೇಖರ್ ಹೋದರೆ ಹೋಗಲಿ ಎಂದು ಮಾತನಾಡುತ್ತಿದ್ದಾರೆ. ನನ್ನನ್ನ ಪಕ್ಷ ಬಿಡಿಸಲು ರೆಡಿಯಾಗಿದ್ದಾರೆ. ನಾನು ಕ್ಷೇತ್ರದ ಅನುಕೂಲಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಿಎಂ, ಡಿಸಿಎಂ ಹತ್ತಿರ ಹೋಗುತ್ತೇನೆ. ಇದರಲ್ಲಿ ತಪ್ಪೇನಿದೆ? ಜೊತೆಗೆ ನಾನು ಸಿಎಂ, ಡಿಸಿಎಂ ಹೊಗಳುವುದನ್ನು ಸಹಿಸುತ್ತಿಲ್ಲ. ನನ್ನ ಕಚೇರಿಯಿಂದ ಕಾಂಗ್ರೆಸ್ ಗ್ಯಾರಂಟಿಯಿಂದ ಫಾಲೋಅಪ್ ಮಾಡಿದ್ದೇನೆ. ಇದರಿಂದ ನನ್ನ ಕ್ಷೇತ್ರದ ಜನರಿಗೆ ಅನುಕೂಲವಾಗಿದೆ. ಆದರೆ ಬಿಜೆಪಿಯವರು ಅದೆಲ್ಲ ಕಾಂಗ್ರೆಸ್ ಗ್ಯಾರಂಟಿ, ಅದನ್ನ ನೀವೇಕೆ ಉತ್ತೇಜನ ನೀಡುತ್ತೀರಿ ಎಂದು ಪ್ರಶ್ನೆ ಮಾಡುತ್ತಾರೆ. ಅರೇ, ಸರ್ಕಾರ ಯಾವುದಾದರೂ ಇರಲಿ. ಜನಕ್ಕೆ ಒಳ್ಳೆಯದು ಮಾಡುವುದು ಬೇಡವ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬೆಂಗಳೂರು ಕುಡಿಯುವ ನೀರಿಗೆ ಕಾವೇರಿಯಿಂದ 24 ಟಿಎಂಸಿ ಬಳಕೆ: ಡಿಕೆಶಿ

    ಈಶ್ವರಪ್ಪನಿಗೆ ಯಾವುದೇ ಬೆಲೆ ಇಲ್ಲ. ಬೆಲೆ ಇಲ್ಲದವರ ಹೇಳಿಕೆಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನನ್ನು ಪಕ್ಷದಿಂದ ಬಿಟ್ಟುಹೋಗು ಅಂತ ಹೇಳಲು ಈಶ್ವರಪ್ಪ ಯಾರು? ಈಶ್ವರಪ್ಪ ಏನು ರಾಜ್ಯಾಧ್ಯಕ್ಷನ? ಈಶ್ವರಪ್ಪ ನಂಬಿ ಪಕ್ಷಕ್ಕೆ ಬರಲಿಲ್ಲ. ನಾನು ಯಡಿಯೂರಪ್ಪ ನಂಬಿ ಪಕ್ಷಕ್ಕೆ ಬಂದಿದ್ದೇನೆ. ಇದೆಲ್ಲ ಬೆಳವಣಿಗೆಯಾದ ಮೇಲೆ ನಾನು ಯಡಿಯೂರಪ್ಪ ಜೊತೆ ಮಾತನಾಡಿದ್ದೇನೆ. ಅವರು ಯಾವುದೇ ಕಾರಣಕ್ಕೆ ಪಕ್ಷ ಬಿಡಬೇಡ ಎಂದು ಹೇಳಿದ್ದಾರೆ. ಅವರ ಮಾತಿಗೆ ಬೆಲೆ ಕೊಟ್ಟು ಪಕ್ಷದಲ್ಲಿದ್ದೇನೆ. ಈಗ ಯಾರೋ 5 ಜನರು ಮಾತನಾಡುತ್ತಿರುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಎಸ್.ಟಿ.ಸೋಮಶೇಖರ್ ಬೆಂಬಲಿಗರು ಮಾತ್ರ ಪಕ್ಷ ಬಿಟ್ಟಿಲ್ಲ. ಅಶೋಕ್ ಕ್ಷೇತ್ರದಲ್ಲಿ ಹೋಗಿಲ್ಲವ? ಮುನಿರತ್ನ ಕ್ಷೇತ್ರದಲ್ಲಿ ಹೋಗಿಲ್ಲವ? ದಾಸರಹಳ್ಳಿ, ಕೆ.ಆರ್.ಪುರಂ ಕ್ಷೇತ್ರದಲ್ಲಿ ಹೋಗಿಲ್ಲ. ಕೇವಲ ನನ್ನನ್ನೆ ಏಕೆ ಟಾರ್ಗೆಟ್ ಮಾಡುತ್ತಿರಾ? ಕ್ಷೇತ್ರದಲ್ಲಿ ಸಾವಿರ ಜನ ಲೀಡರ್ ಇರುತ್ತಾರೆ. ಚುನಾವಣೆ ಸಂಧರ್ಭದಲ್ಲಿ ಆ ಕಡೆ ಈ ಕಡೆ ಹೋಗುತ್ತಾರೆ. ಇದಕ್ಕೆ ಮಹತ್ವ ಬೇಡ ಎಂದು ತಿಳಿಸಿದರು.

    ನಾನು ಬಿಜೆಪಿ ಪಕ್ಷ ಬಿಟ್ಟು ಹೋಗಲ್ಲ. ನಾನು ಮಾನಸಿಕ, ದೈಹಿಕವಾಗಿ ಪಕ್ಷದಲ್ಲೆ ಇದ್ದೇನೆ. ಕಾಂಗ್ರೆಸ್ ಸೇರುತ್ತಾರೆ ಎಂಬುದ್ದೆಲ್ಲ ಊಹಾಪೋಹ. ನಾನು ಯಡಿಯೂರಪ್ಪ ಮಾತು ನಂಬಿ ಬಿಜೆಪಿಯಲ್ಲಿದ್ದೇನೆ. ಆದರೆ ಇವರೇ ಪಕ್ಷದಿಂದ ಓಡಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷದವರೆ ನನ್ನ ವಿರುದ್ಧ ಕೆಲಸ ಮಾಡಿದರು. ಈ ಬಗ್ಗೆ ದಾಖಲೆ ಸಮೇತ ದೂರು ಕೊಟ್ಟೆ. ಆದರೆ ಪ್ರಯೋಜನವಾಗಲಿಲ್ಲ. ಅವರ ಹುಟ್ಟಹಬ್ಬವನ್ನೇ ಕ್ಷೇತ್ರದಲ್ಲಿ ಅದ್ಧೂರಿಯಾಗಿ ಮಾಡಿದರು. ಇದೆಲ್ಲ ಏನ್ ಅರ್ಥ? ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದಾಗ ನನ್ನನ್ನು ಯಡಿಯೂರಪ್ಪ ಉಳಿಸಿಕೊಂಡರು. ಯಡಿಯೂರಪ್ಪನವರ ವಿರುದ್ಧ ಐದಾರು ಜನರು ಮಾತನಾಡಿದರು. ಅವರ ವಿರುದ್ಧ ಪಕ್ಷದಲ್ಲಿ ಕ್ರಮ ತೆಗೆದುಕೊಳ್ಳಲಿಲ್ಲ. ಇದು ಕೂಡ ಪಕ್ಷದ ಹಿನ್ನೆಡೆಗೆ ಕಾರಣ ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಬಿಜೆಪಿ ಜೊತೆ ಮೈತ್ರಿಗೆ ಈಗಲೂ ನನ್ನ ವಿರೋಧವಿದೆ – ಜೆಡಿಎಸ್‌ ವಿರುದ್ಧ ಕಂದಕೂರು ರೆಬೆಲ್‌

    ಬಿಜೆಪಿ ಬರ ಅಧ್ಯಯನಕ್ಕೆ ವಿರೋಧ
    ನಿಮ್ಮದೇ ಕೇಂದ್ರ ಸರ್ಕಾರ ಇದೆ. ನೀವು ಕೇಂದ್ರಕ್ಕೆ ಮನವರಿಕೆ ಮಾಡುವ ಕೆಲಸ ಮಾಡಿ ಎಂದು ಬಿಜೆಪಿ ಬರ ಅಧ್ಯಯನಕ್ಕೆ ಸ್ವಪಕ್ಷದವರೇ ಆದ ಶಾಸಕ ಎಸ್.ಟಿ.ಸೋಮಶೇಖರ್ ವಿರೋಧ ವ್ಯಕ್ತಪಡಿಸಿದರು.

    ಅಧಿಕಾರಿಗಳು ಬರಕ್ಕೆ ಸಂಬಂಧಿಸಿದಂತೆ ಅಧ್ಯಯನ ಮಾಡಿ ಹೋಗಿದ್ದಾರೆ. ನೀವು ಕೇಂದ್ರಕ್ಕೆ ಮನವರಿಕೆ ಮಾಡುವ ಕೆಲಸ ಮಾಡಿ. ಅದನ್ನು ಬಿಟ್ಟು ಇಲ್ಲಿ ಪ್ರವಾಸ ಮಾಡಿದರೆ ಏನು ಪ್ರಯೋಜನ? ನಿಮ್ಮ ಬರ ಅಧ್ಯಯನ ಪ್ರವಾಸದಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಜೆಡಿಎಸ್‌ನಲ್ಲಿ ಮುಂದುವರಿದ ಶಾಸಕ ಶರಣಗೌಡ ಕಂದಕೂರು ಅಸಮಾಧಾನ – ಸಭೆಗೆ ಹಾಜರಾಗದೇ ವರಿಷ್ಠರಿಗೆ ಸೆಡ್ಡು

  • ಆಪರೇಷನ್ ಹಸ್ತ ಬೆನ್ನಲ್ಲೇ ಯಶವಂತಪುರ ಕ್ಷೇತ್ರಕ್ಕೆ ಬಂಪರ್

    ಆಪರೇಷನ್ ಹಸ್ತ ಬೆನ್ನಲ್ಲೇ ಯಶವಂತಪುರ ಕ್ಷೇತ್ರಕ್ಕೆ ಬಂಪರ್

    ಬೆಂಗಳೂರು: ಆಪರೇಷನ್ ಹಸ್ತ (Operation Hasta) ಬೆನ್ನಲ್ಲೇ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರ ಬಂಪರ್ ಆಫರ್ ಕೊಟ್ಟಿದೆ. ಎಸ್.ಟಿ.ಸೋಮಶೇಖರ್ (S.T.Somshekar) ಶಾಸಕರಾಗಿರುವ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ 7.63 ಕೋಟಿ ರೂ. ಅನುದಾನ ನೀಡಲಾಗಿದೆ.

    ಶಾಸಕ ಎಸ್.ಟಿ ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆಂಬ ಚರ್ಚೆ ಬೆನ್ನಲ್ಲೇ, ಬಿಬಿಎಂಪಿಯಿಂದ ಅನುದಾನ ಮಂಜೂರಿನ ಆದೇಶ ಬಂದಿದೆ. ಈ ಕ್ಷೇತ್ರಕ್ಕೆ ಕುಡಿಯುವ ನೀರಿಗೆ 7.63 ಕೋಟಿ ರೂ. ಅನುದಾನ ಕಲ್ಪಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿನ ಪೋಸ್ಟ್ ಮಾಸ್ಟರ್ ಕೆಲಸಕ್ಕೆ ಬಿಲ್ ಗೇಟ್ಸ್ ಫಿದಾ – ಡಿಜಿಟಲೀಕರಣಕ್ಕೆ ಮನಸೋತ ಪೋಸ್ಟ್ ವೈರಲ್

    ಕಾಂಗ್ರೆಸ್ ಪಕ್ಷಕ್ಕೆ ಬರುವುದಕ್ಕೆ ಬಿಬಿಎಂಪಿ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಗಿಫ್ಟ್ ನೀಡಿದರೇ ಎಂಬ ಚರ್ಚೆ ಶುರುವಾಗಿದೆ. ಹೇರೋಹಳ್ಳಿ ಹಾಗೂ ಕೆಂಗೇರಿ ಭಾಗಕ್ಕೆ ಕುಡಿಯುವ ನೀರಿಗಾಗಿ ಅನುದಾನ ನೀಡಲಾಗಿದೆ. 1.63 ಕೋಟಿ ರೂ. ನೀರು ಪೂರೈಸುವ ಟ್ಯಾಂಕರ್‌ಗಳಿಗೆ ಮೀಸಲಿಡಲಾಗಿದೆ. ಹೊಸದಾಗಿ ಬೋರ್ವೆಲ್ ಕೊರೆಸಲು 4 ಕೋಟಿ ರೂ. ಹಾಗೂ ನಿರ್ವಹಣೆ ಮಾಡಲು 2 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ತಿಳಿದುಬಂದಿದೆ.

    ಆಪರೇಷನ್ ಹಸ್ತದ ಮೊದಲ ವಿಕೆಟ್‌ಗೆ ಅನುದಾನದ ನೆರವು ಸಿಕ್ಕಿದೆ. 7.63 ಕೋಟಿ ರೂ. ಅನುದಾನ ನೀಡಿ ಎಸ್.ಟಿ. ಸೋಮಶೇಖರ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಡಿ.ಕೆ. ಶಿವಕುಮಾರ್ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ‘ಶಕ್ತಿ’ ವಿರೋಧಿಸಿ ಕರ್ನಾಟಕ ಬಂದ್ – ಖಾಸಗಿ ಸಾರಿಗೆ ಒಕ್ಕೂಟದ ಜೊತೆಗಿನ ಸಭೆ ವಿಫಲ

    ಆಪರೇಷನ್ ಹಸ್ತ ಎನ್ನುತ್ತಿದ್ದಂತೆ ಮೊದಲ ಹೆಸರು ಕೇಳಿ ಬಂದಿದ್ದೇ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಅವರದ್ದು. ನಿನ್ನೆಯಷ್ಟೆ ಸೋಮಶೇಖರ್ ಬೆಂಬಲಿತ ಮಾಜಿ ಕಾರ್ಪೊರೇಟರ್‌ಗಳು ಕಾಂಗ್ರೆಸ್ ಸೇರಿದ್ದಾರೆ. ಈಗ ಯಶವಂತಪುರ ಕ್ಷೇತ್ರಕ್ಕೆ 7.63 ಕೋಟಿ ಹಣ ಬಿಡುಗಡೆಯಾಗಿದೆ. ಅಧಿಕೃತವಾಗಿ ‘ಕೈ’ ಹಿಡಿಯುವ ಎಸ್.ಟಿ. ಸೋಮಶೇಖರ್ ನಡೆಗೆ ಶೀಘ್ರವಾಗಿ ಮುಹೂರ್ತ ನಿಗದಿಯಾಗುತ್ತಾ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷಗಳು ನಾನಾರೀತಿಯ ನಾಟಕಗಳನ್ನು ಮಾಡುತ್ತಿದೆ: ಮುನಿರತ್ನ

    ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷಗಳು ನಾನಾರೀತಿಯ ನಾಟಕಗಳನ್ನು ಮಾಡುತ್ತಿದೆ: ಮುನಿರತ್ನ

    ಬೆಂಗಳೂರು: ಚುನಾವಣೆಯ (Election) ಸಂದರ್ಭದಲ್ಲಿ ವಿರೋಧ ಪಕ್ಷಗಳು ನಾನಾರೀತಿಯ ನಾಟಕಗಳನ್ನು ಮಾಡುತ್ತಿದೆ. ಆದರೆ ಈ ರೀತಿಯ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಮಾಡುತ್ತಿರುವ ಬಗ್ಗೆ ಯಾರೂ ಮಾತನಾಡುವುದಿಲ್ಲ. ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಿರುವಂತಹ ಕಾರ್ಯಕ್ರಮ ಬಹುಷಃ ಇನ್ನೂ ಐವತ್ತು ವರ್ಷವಾದರೂ ಯಾರೂ ಆ ಮಟ್ಟಕ್ಕೆ ತಲುಪಲು ಆಗುವುದಿಲ್ಲ. ಅಷ್ಟು ಕೆಲಸವನ್ನು ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಸಚಿವ ಮುನಿರತ್ನ (Munirathna) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರಿನ (Bengaluru) ಅಂಜನಾ ನಗರದಲ್ಲಿರುವ ಎಸ್‌ಟಿ ಸೋಮಶೇಖರ್ (S.T.Somashekar) ಅವರ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪ್ರಧಾನ ಮಂತ್ರಿಗಳು ಶನಿವಾರ 9 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ರೋಡ್ ಶೋ ನಡೆಸಲಿದ್ದಾರೆ. ಅದರಲ್ಲಿ ಬಹಳ ಪ್ರಮುಖವಾಗಿ ಯಶವಂತಪುರ, ರಾಜರಾಜೇಶ್ವರಿ, ಮಹಾಲಕ್ಷ್ಮಿಪುರಂ ಹಾಗೂ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜನತೆಗೆ ನಮ್ಮ ಮೆಟ್ರೋ ಮೂಲಕ ಪ್ರಧಾನಿ ಮೋದಿಯವರು ಬಹಳ ದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ ಎಂದರು. ಇದನ್ನೂ ಓದಿ: ದಕ್ಷಿಣ ಭಾರತದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರಲ್ಲ: ಹೆಚ್.ವಿಶ್ವನಾಥ್

    ಶನಿವಾರ ರೋಡ್ ಶೋ (Road Show) ಮಾಡುತ್ತಿರುವ ಭಾಗದಲ್ಲಿ ಮೆಟ್ರೋಗೆ ಅನುಮೋದನೆ ನೀಡುತ್ತಿದ್ದಾರೆ. ಸುಂಕದಕಟ್ಟೆಯಿಂದ ನೈಸ್ ರಿಂಗ್ ರಸ್ತೆವರೆಗೂ 11 ಕಿಲೋಮೀಟರ್ ಈಗಾಗಲೇ ಮೆಟ್ರೋ ಟಿಪಿಆರ್ ಅನುಮೋದನೆಯಾಗಿದೆ. ಇಂದು ಅದೇ ಭಾಗದಲ್ಲಿ ಮೋದಿ ರೋಡ್ ಶೋ ಮಾಡುತ್ತಿದ್ದಾರೆ. ಬಹಳ ಪ್ರಮುಖವಾಗಿ ಬಡವರು, ಮಧ್ಯಮ ವರ್ಗ ಹಾಗೂ ಕಾರ್ಖಾನೆಗಳಿರುವಂತಹ ಪಶ್ಚಿಮ ಭಾಗಕ್ಕೆ ಅನುಕೂಲವನ್ನು ಮಾಡಿಕೊಟ್ಟಿದ್ದಾರೆ. ಇಲ್ಲಿಯವರೆಗೂ ಪೂರ್ವ ಭಾಗಕ್ಕೆ ಅತಿಹೆಚ್ಚು ಮೆಟ್ರೋ ಸೇವೆಗಳಿದ್ದವು. ಈ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಅನುಕೂಲ ಮಾಡಿಕೊಟ್ಟಂತಹ ಮೋದಿಯವರು (Narendra Modi) ಆಗಮಿಸುತ್ತಿರುವುದು ಬಹಳ ಸಂತೋಷದ ವಿಚಾರ ಎಂದು ಹೇಳಿದರು. ಇದನ್ನೂ ಓದಿ: ಪ್ರಧಾನಿ ಮೋದಿ ಕಾಳಿಂಗ ಸರ್ಪ – ಸುಧಾಕರ್

    ಪ್ರಧಾನ ಮಂತ್ರಿಗಳು ಇವತ್ತು ಬರುತ್ತಿರುವುದರಿಂದ 4 ವಿಧಾನಸಭಾ ಕ್ಷೇತ್ರದ ಎಲ್ಲಾ ಮತದಾರರಿಗೆ ನಮ್ಮ ನೆಚ್ಚಿನ ಪ್ರಧಾನಮಂತ್ರಿಗಳನ್ನು ನೋಡುವ ಭಾಗ್ಯ ಎಲ್ಲರಿಗೂ ಸಿಕ್ಕಿದೆ. ಈ ರೋಡ್ ಶೋ ಅನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬಹುದು. ಸಾಮಾನ್ಯವಾಗಿ ಪ್ರಧಾನ ಮಂತ್ರಿಗಳನ್ನು ನೋಡುವುದು ಕಷ್ಟ. ಇವತ್ತು ಸಾಮಾನ್ಯ ವ್ಯಕ್ತಿ ಕೂಡಾ ಪ್ರಧಾನ ಮಂತ್ರಿಯವರನ್ನು ನೋಡಬಹುದು. ನಮ್ಮ ದೇಶ ಬಹಳ ಮುಂದುವರೆಯುತ್ತಿದೆ. ತಾವೆಲ್ಲರೂ ಬಿಜೆಪಿಗೆ (BJP) ಬೆಂಬಲ ಕೊಟ್ಟು ಆಶೀರ್ವದಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಪರಮೇಶ್ವರ್ ಮೇಲೆ ಕಲ್ಲು ತೂರಾಟ ಖಂಡನೀಯ: ಯಡಿಯೂರಪ್ಪ ಕಿಡಿ

    ಬಳಿಕ ಮಾತನಾಡಿದ ಎಸ್‌ಟಿ ಸೋಮಶೇಖರ್, ಬೆಂಗಳೂರು ಜನತೆಯ ಪರವಾಗಿ ಪ್ರಧಾನಿ ಮೋದಿಯವರಿಗೆ ಸ್ವಾಗತವನ್ನು ಕೋರುತ್ತೇವೆ. ಶನಿವಾರ 6 ಗಂಟೆ 14 ನಿಮಿಷಕ್ಕೆ ಮೋದಿಯವರು ರೋಡ್ ಶೋ ನಡೆಸಲಿದ್ದಾರೆ. ಇದರಲ್ಲಿ 9 ಕ್ಷೇತ್ರದ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಅಲ್ಲದೇ ನಾಲ್ಕು ವಿಧಾನ ಸಭಾ ಕ್ಷೇತ್ರಗಳು ಈ ರೋಡ್ ಶೋಗೆ ಬರಲಿದೆ. ಮೋದಿ ಎರಡನೇ ಬಾರಿಗೆ ನಮ್ಮ ಕ್ಷೇತ್ರದ ಕಡೆಗೆ ಬರುತ್ತಿದ್ದಾರೆ. ಶನಿವಾರ ನಡೆಯಲಿರುವ ರೋಡ್ ಶೋದಲ್ಲಿ ಎಲ್ಲರೂ ಭಾಗವಹಿಸುವಂತೆ ಮನವಿ ಮಾಡಲಾಗಿದೆ. ವಿಶ್ವವಿಖ್ಯಾತ ಪ್ರಧಾನಿಯನ್ನು ಹತ್ತಿರದಿಂದ ನೋಡಿ ಕಣ್ತುಂಬಿಕೊಳ್ಳುವ ಅವಕಾಶ ಎಲ್ಲರಿಗೂ ದೊರತಿದೆ. ಪ್ರಧಾನಿ ಒಮ್ಮೆ ಬಂದು ಹೋದರೆ ನಾವು ಯಾರೂ ಕೂಡಾ ಪ್ರಚಾರ ಮಾಡದೇ ಹೋದರೂ ಗೆಲ್ಲುತ್ತೇವೆ ಎಂದರು. ಇದನ್ನೂ ಓದಿ: ಅರ್ಧಕ್ಕೆ ರೋಡ್ ಶೋ ಮುಗಿಸಿ ಹೊರಟ ಅಮಿತ್ ಶಾ

    ನಂತರ ಮಾನಾಡಿದ ಸಚಿವ ಗೋಪಾಲಯ್ಯ (K.Gopalaiah), ವಿಶ್ವನಾಯಕ ಪ್ರಧಾನಿಯನ್ನು ನಾನು ಸಂತೋಷವಾಗಿ ಸ್ವಾಗತ ಮಾಡುತ್ತೇನೆ. ಪ್ರಧಾನಿ ಒಂದು ಸ್ಥಳಕ್ಕೆ ಬಂದು ಹೋದರೆ ಅಭಿವೃದ್ಧಿ ಮಾಡುತ್ತಾರೆ. ಥರ್ಡ್ ಪೇಸ್ ಮೆಟ್ರೋಗೆ ಮೋದಿ ಅನುಮೋದನೆ ಕೊಟ್ಟಿದ್ದಾರೆ. ಅಲ್ಲದೇ 142 ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಿಕೊಡುವಂತೆ ಕೇಳಿಕೊಂಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಸೋನಿಯಾ, ರಾಹುಲ್ ಗಾಂಧಿ ಹೇಳಿಕೊಟ್ಟಂತೆ ಖರ್ಗೆ ಮಾತಾಡಿದ್ದಾರೆ: ಜೆ.ಪಿ ನಡ್ಡಾ

  • ಸಿದ್ದರಾಮಯ್ಯ, ಜಿಟಿಡಿ ನಡುವಿನ ಹೊಸ ಲವ್ ಸಕ್ಸಸ್ ಆಗಲ್ಲ: ಎಸ್.ಟಿ. ಸೋಮಶೇಖರ್

    ಸಿದ್ದರಾಮಯ್ಯ, ಜಿಟಿಡಿ ನಡುವಿನ ಹೊಸ ಲವ್ ಸಕ್ಸಸ್ ಆಗಲ್ಲ: ಎಸ್.ಟಿ. ಸೋಮಶೇಖರ್

    ಮೈಸೂರು: ಸಿದ್ದರಾಮಯ್ಯ – ಜಿಟಿಡಿ ನಡುವಿನ ಲವ್ ನಿಂದ ನಮಗೆ ಯಾವ ಎಫೆಕ್ಟ್ ಆಗಲ್ಲ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

    ಮೈಸೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಜಿಟಿಡಿ ನಡುವಿನ ಲವ್ ನಿಂದ ನಮಗೆ ಯಾವ ಎಫೆಕ್ಟ್ ಆಗಲ್ಲ. ಕಾರಣ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ನಂತರ ಜಿಟಿಡಿ ಮೇಲೆ ದ್ವೇಷ ಕುದಿಯುತ್ತಿದ್ದಾರೆ. ಈಗ ಜಿಟಿಡಿ ಹೊಸದಾಗಿ ಸಿದ್ದರಾಮಯ್ಯ ಜೊತೆ ಲವ್ ಆರಂಭಿಸಿದ್ದಾರೆ. ಈ ಲವ್ ಕುದುರಿಸಲು, ಸಿದ್ದರಾಮಯ್ಯ ಅವರ ದ್ವೇಷ ಕಡಿಮೆ ಮಾಡಿಸಲು ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಅರ್ಚನೆ ಮಾಡಿಸಿದ್ದಾರೆ ಎಂದು ಹೇಳಿದ್ದಾರೆ. ದನ್ನೂ ಓದಿ: ಪಕ್ಷ ಅಧಿಕಾರಕ್ಕೆ ಬಂದ್ರೆ ಮೃತ ರೈತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ : ಅಖಿಲೇಶ್ ಯಾದವ್

    ಸಿದ್ದರಾಮಯ್ಯ ತಮ್ಮ ಲೈಫ್‍ನಲ್ಲಿ ಯಾವತ್ತಿಗೂ ಕೂಲ್ ಆದವರೇ ಅಲ್ಲ. ಅವರದ್ದು ಯಾವತ್ತಿದ್ದರೂ ದ್ವೇಷ ದ್ವೇಷವೇ, ಜಿಟಿಡಿ ಮೇಲೆ ಅವರಿಗೆ ಬಹಳಷ್ಟು ದ್ವೇಷವಿದೆ. ಈ ದ್ವೇಷ ಕಡಿಮೆ ಆಗುವುದೇ ಇಲ್ಲ. ಅಲ್ಲದೇ ಒಂದೂವರೆ ವರ್ಷದ ನಂತರದ ಚುನಾವಣೆಗೆ ಈಗಲೇ ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಜಿಟಿಡಿ ಸಂಕಲ್ಪ ಮಾಡಿಸಿದ್ದಾರೆ. ಒಂದೂವರೆ ವರ್ಷದ ನಂತರ ಇನ್ನೂ ಯಾರಿಗೆ ಸಂಕಲ್ಪ ಮಾಡುತ್ತಾರೋ ಗೊತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ರೂಪಾಂತರಿಯಿಂದ ಜಾಗತಿಕ ಅಪಾಯ ಹೆಚ್ಚು-WHO

    ಇದೇ ವೇಳೆ ವಿಧಾನ ಪರಿಷ್ ಚುನಾವಣೆಯ ಮೈಸೂರಿನ ಜೆಡಿಎಸ್ ಅಭ್ಯರ್ಥಿ ಜನರ ಕಿಡ್ನಿ ಕದ್ದು ಮಾರಿದ್ದಾರೆ. ಇವರಿಂದ ನನ್ನ ಕಿಡ್ನಿಯನ್ನು ಜೋಪಾನವಾಗಿ ಇಟ್ಟು ಕೊಳ್ಳಬೇಕಿದೆ ಎಂದು ವ್ಯಂಗ್ಯವಾಡಿದ್ದಾರೆ.

  • ಮಂಡ್ಯ ಎಎಸ್‍ಪಿಗೆ ಸಚಿವ ಸೋಮಶೇಖರ್ ಫುಲ್ ಕ್ಲಾಸ್

    ಮಂಡ್ಯ ಎಎಸ್‍ಪಿಗೆ ಸಚಿವ ಸೋಮಶೇಖರ್ ಫುಲ್ ಕ್ಲಾಸ್

    ಮಂಡ್ಯ: ಮನ್‍ಮುಲ್‍ಗೆ ನೀರು ಮಿಶ್ರಿತ ಹಾಲು ಪೂರೈಕೆ ಹಗರಣಕ್ಕೆ ಸಂಬಂಧಿಸಿದಂತೆ 10 ದಿನಗಳಾದ್ರು ಇನ್ನೂ ಏಕೆ ಯಾರನ್ನು ಬಂಧಿಸಿಲ್ಲ? ತನಿಖೆ ಎಲ್ಲಿಯವರೆಗೆ ಬಂದಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಮಂಡ್ಯ ಎಎಸ್‍ಪಿ ಧನಂಜಯ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಮನ್‍ಮುಲ್‍ನಲ್ಲಿ ನೀರು ಮಿಶ್ರಿತ ಹಾಲು ಪೂರೈಕೆ ಪ್ರಕರಣ ಸಂಬಂಧ ಇಂದು ಮನ್‍ಮುಲ್ ಡೈರಿಗೆ ಎಸ್.ಟಿ.ಸೋಮಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದಕ್ಕೂ ಮುನ್ನ ಪ್ರಕರಣದ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಸೀಜ್ ಆಗಿ ನಿಂತಿದ್ದ ಟ್ಯಾಂಕರನ್ನು ವೀಕ್ಷಣೆ ಮಾಡಲು ತೆರಳಿದ್ದರು. ಈ ವೇಳೆ ಮಂಡ್ಯ ಎಎಸ್‍ಪಿ ಧನಂಜಯ್ ಅವರಿಗೆ ಸೋಮಶೇಖರ್ ಅವರು ಕ್ಲಾಸ್ ತೆಗೆದುಕೊಂಡರು. ಇದನ್ನೂ ಓದಿ: ಕೊರೊನಾ ತೊಲಗಲು ಮಾರಮ್ಮ ದೇವಿಗೆ ಕುರಿ, ಕೋಳಿ ಬಲಿ

    ಪ್ರಕರಣ ಬೆಳಕಿಗೆ ಬಂದು 10 ದಿನ ಕಳೆದದೂ ಸಹ ಇನ್ನೂ ಯಾಕೆ ಒಬ್ಬರನ್ನೂ ನೀವು ಬಂಧಿಸಿಲ್ಲ? ಇಷ್ಟೊತ್ತಿಗೆ ಎಲ್ಲರನ್ನೂ ಬಂಧಿಸಬೇಕಿತ್ತು ಎಂದು ಸಚಿವರು ಎಎಸ್‍ಪಿಯನ್ನು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಎಎಸ್‍ಪಿ ಇಲ್ಲ ಸರ್ ಒಬ್ಬ ಡ್ರೈವರನ್ನು ಬಂಧಿಸಿದ್ದೇವೆ ಎಂದರು. ಡ್ರೈವರನ್ನು ಅರೆಸ್ಟ್ ಮಾಡೋಕೆ ನೀವೋಬ್ಬರೆ ಆಗಬೇಕಾ? ಬೇರೆಯವರನ್ನು ಬಂಧನ ಮಾಡಲು ನಿಮ್ಮಿಂದ ಆಗಿಲ್ವಾ ಎಂದು ಸೋಮಶೇಖರ್ ಗರಂ ಆದರು. ಇದನ್ನೂ ಓದಿ: ನೀರು ಮಿಶ್ರಿತ ಹಾಲು ಕೇಸ್ – ಮನ್‍ಮುಲ್‍ನ 7 ಅಧಿಕಾರಿಗಳು ಅಮಾನತು

    ಹಾಲಿನ ಟ್ಯಾಂಕರ್ ವಿನ್ಯಾಸವನ್ನು ಎಲ್ಲಿ ಮಾಡಿದ್ದಾರೆ? ಹೇಗೆ ಮಾಡಿದ್ದಾರೆ ಅನ್ನೋದಾದರೂ ತಿಳಿದುಕೊಂಡಿದ್ದೀರಾ ಎಂದು ಮತ್ತೆ ಸಚಿವರು, ಎಎಸ್‍ಪಿಯನ್ನು ಪ್ರಶ್ನೆ ಮಾಡಿದರು. ಇಲ್ಲ ಸರ್ ಇನ್ನೂ ಸಹ ಅದು ಎಲ್ಲಿ ಮಾಡಿಸಿದ್ದಾರೆ ಎನ್ನೋದೆ ಪತ್ತೆಯಾಗಿಲ್ಲ ಎಂದು ಧನಂಜಯ್ ಹೇಳಿದರು. ಈ ವೇಳೆ ಸೋಮಶೇಖರ್ ಈ ಪ್ರಕರಣಕ್ಕೆ ಸಂಬಂಧ ತನಿಖೆಯನ್ನು ಚುರುಕುಗೊಳ್ಳಿಸಬೇಕೆಂದು ಎಚ್ಚರಿಕೆ ನೀಡಿದರು.