ತಿರುವನಂತಪುರಂ: ಕ್ರಿಕೆಟಿಗ (Cricket) ಶ್ರೀಶಾಂತ್ ವಿರುದ್ಧ 18.70 ಲಕ್ಷ ರೂ. ಪಡೆದು ವಂಚಿಸಿರುವ ಆರೋಪ (Cheating Case) ಕೇಳಿ ಬಂದಿದೆ. ಕೇರಳದ (Kerala) ವ್ಯಕ್ತಿಯೊಬ್ಬರಿಂದ ಶ್ರೀಶಾಂತ್ (S. Sreesanth) ಸೇರಿ ಇಬ್ಬರು ವ್ಯಕ್ತಿಗಳು ಹಣ ಪಡೆದು ವಂಚಿಸಿದ್ದಾರೆ ಎಂದು ದೂರು ದಾಖಲಾಗಿದೆ.
ವಂಚನೆ ಪ್ರಕರಣದ ಆರೋಪಿಗಳಾದ ಶ್ರೀಶಾಂತ್, ರಾಜೀವ್ ಕುಮಾರ್ ಮತ್ತು ವೆಂಕಟೇಶ್ ಕಿಣಿ ಎಂಬವರು ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ ಕ್ರೀಡಾ ಅಕಾಡೆಮಿಯನ್ನು ನಿರ್ಮಿಸುವುದಾಗಿ ಹೇಳಿ 2019 ರಿಂದ ವಿವಿಧ ದಿನಾಂಕಗಳಲ್ಲಿ ಹಣ ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸುಮಾರು 18.70 ಲಕ್ಷ ರೂ. ಹಣ ಪಡೆದಿದ್ದಾರೆ ಎಂದು ಚೂಂಡಾ ಮೂಲದ ದೂರುದಾರರ ಸರೀಶ್ ಗೋಪಾಲನ್ ಆರೋಪಿಸಿದ್ದಾರೆ. ಅಕಾಡೆಮಿಯಲ್ಲಿ ಪಾಲುದಾರರಾಗಲು ಅವಕಾಶ ನೀಡಿದ ನಂತರ ಹಣವನ್ನು ಹೂಡಿಕೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಮೊದಲ ಬಾರಿಗೆ ದೇಶದಲ್ಲಿ ‘ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್’ ಆಯೋಜನೆ: ಅನುರಾಗ್ ಠಾಕೂರ್
ಮುಂಬೈ: 16ನೇ ಐಪಿಎಲ್ (IPL 2023) ಆವೃತ್ತಿ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿದೆ. ದೇಶದ ವಿವಿಧೆಡೆ 12 ಕ್ರೀಡಾಂಗಣಗಳಲ್ಲಿ ಒಟ್ಟು 70 ಲೀಗ್ ಪಂದ್ಯಗಳು ನಡೆಯಲಿವೆ.
ಕ್ರಿಕೆಟ್ ಇತಿಹಾಸದಲ್ಲಿ ದಾಖಲೆ ಬರೆದಿರುವ ದಿಗ್ಗಜರು ಈ ಐಪಿಎಲ್‌ನೊಂದಿಗೆ ವಿದಾಯ ಹೇಳುವ ಸಾಧ್ಯತೆಗಳೂ ಇವೆ. ಈ ನಡುವೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಎಸ್. ಶ್ರೀಶಾಂತ್ (S. Sreesanth) ಖಾಸಗಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ (CSK) 2023ರ ಐಪಿಎಲ್ ಟ್ರೋಫಿ ಗೆಲ್ಲುತ್ತೆ ಅನ್ನಿಸಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಸೋಫಿ ಬೆಂಕಿ ಬ್ಯಾಟಿಂಗ್ – RCBಗೆ 8 ವಿಕೆಟ್‌ಗಳ ಭರ್ಜರಿ ಜಯ
ಹೊಸ ತಂಡಗಳು ಟ್ರೋಫಿ ಗೆದ್ದರೆ ಖುಷಿಯಾಗುತ್ತೆ. ಅದರಲ್ಲೂ ಆರ್‌ಸಿಬಿ (RCB) ತಂಡ 2023ರ ಟ್ರೋಫಿ ಗೆದ್ದರೆ ನಾನು ತುಂಬಾನೇ ಖುಷಿಪಡುತ್ತೇನೆ. ಏಕೆಂದರೆ ಭಾರತೀಯ ಕ್ರಿಕೆಟ್ ಜಗತ್ತಿಗೆ ಆರ್‌ಸಿಬಿ ಮಾಜಿ ನಾಯಕ ವಿರಾಟ್‌ಕೊಹ್ಲಿ (Virat Kohli) ಸಾಕಷ್ಟು ಕೊಡುಗೆ ನೀಡಿದ್ದಾರೆ. ಆರ್‌ಸಿಬಿ ಈವರೆಗೆ ಮೂರು ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದೆ. ಆದರೆ ಒಂದು ಬಾರಿಯೂ ಕಪ್ ಗೆದ್ದಿಲ್ಲ. ಈ ಬಾರಿ ಕಪ್ ಗೆದ್ದರೆ ಖುಷಿಪಡುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: IPL 2023: RCB ತಂಡಕ್ಕೆ ಆನೆ ಬಲ – ವಿಲ್ ಜಾಕ್ಸ್ ಬದಲಿಗೆ ಕಿವೀಸ್ ಸ್ಟಾರ್ ಆಲ್‌ರೌಂಡರ್ ಸೇರ್ಪಡೆ
ಮುಂಬೈ ಇಂಡಿಯನ್ಸ್ (Mumbai Indians) 5 ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ 2021ರ ಆವೃತ್ತಿ ಸೇರಿ 4 ಬಾರಿ ಚಾಂಪಿಯನ್ ಆಗಿದೆ. ಕೋಲ್ಕತ್ತಾ ನೈಟ್‌ರೈಡರ್ಸ್ 2 ಬಾರಿ ಪ್ರಶಸ್ತಿ ಬಾಚಿಕೊಂಡಿದ್ದು, 3ನೇ ಸ್ಥಾನದಲ್ಲಿದೆ. 2022ರ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಆಗಿರುವ ಗುಜರಾತ್ ಟೈಟಾನ್ಸ್ (Gujarat Titans) ತಂಡ ಮತ್ತೊಮ್ಮೆ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದೆ.
ನವದೆಹಲಿ: ಭಾರತ ಕ್ರಿಕೆಟ್ ತಂಡದ ವೇಗಿ ಎಸ್.ಶ್ರೀಶಾಂತ್ (s.sreesanth) ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಬುಧವಾರ ನಿವೃತ್ತಿ ಘೋಷಿಸಿದ್ದಾರೆ.
ಮುಂದಿನ ಪೀಳಿಗೆಯ ಕ್ರಿಕೆಟಿಗರಿಗಾಗಿ ನನ್ನ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿ ಜೀವನವನ್ನು ಕೊನೆಗೊಳಿಸಲು ನಾನು ಆಯ್ಕೆ ಮಾಡಿಕೊಂಡಿದ್ದೇನೆ. ಈ ನಿರ್ಧಾರ ನನ್ನದು. ಇದು ನನಗೆ ಸಂತೋಷ ತರುವುದಿಲ್ಲ ಎಂದು ನನಗೆ ತಿಳಿದಿದ್ದರೂ, ನನ್ನ ಜೀವನದಲ್ಲಿ ತೆಗೆದುಕೊಳ್ಳುವ ಸರಿಯಾದ ಮತ್ತು ಗೌರವಾನ್ವಿತ ನಿರ್ಧಾರ ಇದಾಗಿದೆ. ನಾನು ಪ್ರತಿ ಕ್ಷಣವನ್ನೂ ಪ್ರೀತಿಸುತ್ತೇನೆ ಎಂದು ಶ್ರೀಶಾಂತ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಐಪಿಎಲ್‍ನ ಸಿಕ್ಸರ್ ಕಿಂಗ್ಸ್
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಕ್ಕಾಗಿ ಶ್ರೀಶಾಂತ್ ಅವರನ್ನು ಆಗಸ್ಟ್ 2013ರಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನಿಷೇಧಿಸಿತ್ತು. ಆದರೂ ಅವರ ಜೀವಿತಾವಧಿ ನಿಷೇಧವನ್ನು 2019ರಲ್ಲಿ ಏಳು ವರ್ಷಗಳಿಗೆ ಇಳಿಸಲಾಯಿತು. ಅದು ಸೆಪ್ಟೆಂಬರ್ 2020ರಲ್ಲಿ ಪೂರ್ಣಗೊಂಡಿತ್ತು.
For the next generation of cricketers..I have chosen to end my first class cricket career. This decision is mine alone, and although I know this will not bring me happiness, it is the right and honorable action to take at this time in my life. I ve cherished every moment .❤️🏏🇮🇳
ಮಾರ್ಚ್ 2006ರಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಶ್ರೀಶಾಂತ್ 27 ಪಂದ್ಯಗಳನ್ನು ಆಡಿದ್ದು, 87 ವಿಕೆಟ್ ಗಳಿಸಿದ್ದಾರೆ. ಅವರು 53 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದ್ದು, 75 ವಿಕೆಟ್‌ಗಳನ್ನು ಪಡೆದಿದ್ದಾರೆ. ಒಟ್ಟು 10 ಟಿ20 ಪಂದ್ಯಗಳನ್ನಾಡಿದ್ದು, 7 ವಿಕೆಟ್ ಪಡೆದಿದ್ದಾರೆ. ಇದನ್ನೂ ಓದಿ: ರಾವಲ್ಪಿಂಡಿ ಮೈದಾನದಲ್ಲಿ ಭಾಂಗ್ರಾ ನೃತ್ಯ ಮಾಡಿದ ಡೇವಿಡ್ ವಾರ್ನರ್
ತಿರುವನಂತಪುರ: 9 ವರ್ಷಗಳ ಬಳಿಕ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ವಿಕೆಟ್ ಪಡೆದ ಕೇರಳ ತಂಡದ ವೇಗದ ಬೌಲರ್ ಎಸ್.ಶ್ರೀಶಾಂತ್ ಪಿಚ್‌ಗೆ ದೀರ್ಘದಂಡ ನಮಸ್ಕಾರ ಹಾಕಿದ್ದಾರೆ.
ಮೇಘಾಲಯ ಮತ್ತು ಕೇರಳ ನಡುವಿನ ರಣಜಿ ಪಂದ್ಯದಲ್ಲಿ 9 ವರ್ಷಗಳ ಬಳಿಕ ಶ್ರೀಶಾಂತ್ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ವಿಕೆಟ್ ಪಡೆಯಲು ಸಫಲರಾದರು. ಈ ಸಂಭ್ರಮವನ್ನು ಶ್ರೀಶಾಂತ್ ಶಾಂತವಾಗಿ ಪಿಚ್‍ಗೆ ನಮಸ್ಕಾರ ಮಾಡುವ ಮೂಲಕ ಆಚರಿಸಿಕೊಂಡಿದ್ದಾರೆ. ಈ ವೀಡಿಯೋವನ್ನು ಸ್ವತಃ ಶ್ರೀಶಾಂತ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಐಪಿಎಲ್ ಮೆಗಾ ಹರಾಜಿಗೆ ಹೆಸರು ನೋಂದಾಯಿಸಿಕೊಂಡ ಶ್ರೀಶಾಂತ್ – ಮೂಲಬೆಲೆ ಎಷ್ಟು ಗೊತ್ತಾ?
ಶ್ರೀಶಾಂತ್ ಮೇಘಾಲಯ ವಿರುದ್ಧದ ಪಂದ್ಯದಲ್ಲಿ ಒಟ್ಟು 11.5 ಓವರ್ ಎಸೆದು 40 ರನ್ ನೀಡಿ 2 ವಿಕೆಟ್ ಪಡೆದಿದ್ದರು. 2013ರ ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ಶ್ರೀಶಾಂತ್ ಆ ಬಳಿಕ ಇದೀಗ ಕೇರಳ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇದನ್ನೂ ಓದಿ: 7 ವರ್ಷದ ಬಳಿಕ ವಿಕೆಟ್- ಕೈ ಮುಗಿದು ನಮಸ್ಕರಿಸಿದ ಶ್ರೀಶಾಂತ್
38 ವರ್ಷದ ಶ್ರೀಶಾಂತ್ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಈಗಾಗಲೇ 213 ವಿಕೆಟ್ ಪಡೆದಿದ್ದು, 6 ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ. ಭಾರತದ ಪರ 27 ಟೆಸ್ಟ್, 53 ಏಕದಿನ ಪಂದ್ಯ ಆಡಿರುವ ಶ್ರೀಶಾಂತ್ ಕ್ರಮವಾಗಿ 87, 75 ವಿಕೆಟ್ ಪಡೆದಿದ್ದು, 10 ಟಿ20 ಪಂದ್ಯಗಳಲ್ಲಿ 7 ವಿಕೆಟ್ ಉರುಳಿಸಿದ್ದಾರೆ. 2011ರ ಏಕದಿನ ವಿಶ್ವಕಪ್ ಗೆದ್ದ ತಂಡದಲ್ಲಿ ಶ್ರೀಶಾಂತ್ ಸದಸ್ಯರಾಗಿದ್ದರು. 2011 ಆಗಸ್ಟ್‌ನಲ್ಲಿ ಶ್ರೀಶಾಂತ್ ಕೊನೆಯ ಬಾರಿ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದರು.
ಮುಂಬೈ: ಬಾಲಿವುಡ್ ತಾರೆಗಳು ಮತ್ತು ಕ್ರಿಕೆಟ್ ದಂತಕಥೆಗಳೊಂದಿಗೆ ಮೊಟ್ಟಮೊದಲ ಬಾರಿಗೆ ‘ಫ್ರೆಂಡ್‍ಶಿಪ್ ಕಪ್’ ಕ್ರಿಕೆಟ್ ಟೂರ್ನಿಮೆಂಟ್ ನಡೆಯಲಿದ್ದು, ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿ ನೇತೃತ್ವದ ತಂಡದಲ್ಲಿ ಎಸ್ ಶ್ರೀಶಾಂತ್ ಅವರು ಆಟವಾಡಲಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿರುವ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೊದಲ ಮೂರು ದಿನಗಳ ಫ್ರೆಂಡ್‍ಶಿಪ್ ಟಿ-10 ಕಪ್ ಟೂರ್ನಿಮೆಂಟ್ ನಡೆಯಲಿದೆ. ಇದರಲ್ಲಿ ವಿಶ್ವದ ಮಾಜಿ ಕ್ರಿಕೆಟ್ ದಂತಕಥೆಗಳು ಮತ್ತು ಬಾಲಿವುಡ್ ತಾರೆಗಳು ವಿಶ್ವದಾದ್ಯಂತ ಜನರು ಮತ್ತು ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಬಲಪಡಿಸಲು ಸ್ಪರ್ಧಿಸಲಿದ್ದಾರೆ. ಇದನ್ನೂ ಓದಿ: ಟಗರು ಲುಕ್‍ನಲ್ಲಿ ಕಾಣಿಸಿಕೊಂಡ ವಿರಾಟ್ ಕೊಹ್ಲಿ
Imran Nazir, one of the most aggressive and talented batsmen to have come out from Pakistan, invites you to experience the exciting Friendship Cup UAE with your family and friends.
ಮಾರ್ಚ್ 5 ರಿಂದ ಮೊದಲ ಆವೃತ್ತಿಯ ಫ್ರೆಂಡ್‍ಶಿಪ್ ಕಪ್ ಅನ್ನು ಅರ್ಬಾ ಸ್ಪೋಟ್ರ್ಸ್ ಸರ್ವಿಸ್ ಎಲ್‍ಎಲ್‍ಸಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಸ್ಲಂ ಗುರುಕ್ಕಲ್ ಅವರು ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಿದ್ದಾರೆ.
ಗರಿಷ್ಠ ಸಂಖ್ಯೆಯ ಏಕದಿನ ಪಂದ್ಯಗಳನ್ನು ಆಯೋಜಿಸಿದ ವಿಶ್ವದಾಖಲೆಯನ್ನು ಹೊಂದಿರುವ ಶಾರ್ಜಾವು ಮೊದಲ ಫ್ರೆಂಡ್‍ಶಿಪ್ ಕಪ್ ಅನ್ನು ಯುಎಇಯಲ್ಲಿ ಹಮ್ಮಿಕೊಂಡಿದೆ. ಈ ಪಂದ್ಯಾವಳಿಯು ನಾಲ್ಕು ತಂಡಗಳನ್ನು ಒಳಗೊಂಡಿರುತ್ತದೆ. ಇಂಡಿಯಾ ಲೆಜೆಂಡ್ಸ್, ಪಾಕಿಸ್ತಾನ್ ಲೆಜೆಂಡ್ಸ್, ವಲ್ರ್ಡ್ ಲೆಜೆಂಡ್ಸ್ 11 ಮತ್ತು ಬಾಲಿವುಡ್ ಕಿಂಗ್ಸ್ ತಂಡಗಳನ್ನು ಕ್ರಿಕೆಟ್ ಹಾಗೂ ಬಾಲಿವುಡ್ ತಾರೆಗಳು ಮುನ್ನಡೆಸಲಿದ್ದಾರೆ.
ನಟ ಸುನೀಲ್ ಶೆಟ್ಟಿ ನೇತೃತ್ವದಲ್ಲಿ ಬಾಲಿವುಡ್ ಕಿಂಗ್ಸ್ ತಂಡವು ಮುನ್ನಡೆಯಲಿದ್ದು, ಸೊಹೈಲ್ ಖಾನ್ ಮತ್ತು ಅಫ್ತಾಬ್ ಶಿವದಾಸನಿ ಜೊತೆಗೆ ನಟ ಸಲೀಲ್ ಅಂಕೋಲಾ ಮತ್ತು ಎಸ್. ಶ್ರೀಶಾಂತ್ ಅವರನ್ನು ಒಳಗೊಂಡಿದೆ.
Bollywood superstar @SunielVShetty bridges the gulf between Bollywood & Cricket in the magical Middle East. Block your dates for the Friendship Cup UAE for a heady mix of Bollywood and Cricket Legends.
ಶ್ರೀಶಾಂತ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರ ಮೆಗಾ ಹರಾಜಿಗೆ ರೂ 50 ಲಕ್ಷ ಮೂಲ ಬೆಲೆಗೆ ನೊಂದಾಯಿಸಿದ್ದರು ಆದರೆ ಮಾರಾಟವಾಗಲಿಲ್ಲ.
ಎರಡನೇ ಟೀಮ್ ಇಂಡಿಯಾ ಲೆಜೆಂಡ್ಸ್ ತಂಡದಲ್ಲಿ, ಮೊಹಮ್ಮದ್ ಕೈಫ್, ಮುನಾಫ್ ಪಟೇಲ್, ಅಜಯ್ ಜಡೇಜಾ ಮತ್ತು ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರಂತಹ ಶ್ರೇಷ್ಠರನ್ನು ಒಳಗೊಂಡಿದೆ. ಇದನ್ನೂ ಓದಿ:ಶಿವಮೊಗ್ಗ ಕೊಲೆ ಪ್ರಕರಣ – 6 ಆರೋಪಿಗಳಿಗೆ ನ್ಯಾಯಾಂಗ ಬಂಧನ
ಮೂರನೇ ತಂಡ ಪಾಕಿಸ್ತಾನ ಲೆಜೆಂಡ್ಸ್‍ನಲ್ಲಿ ವಿಶ್ವ ದರ್ಜೆಯ ಆಟಗಾರರಾದ ಮಹಮ್ಮದ್ ಯೂಸುಫ್, ಸಲ್ಮಾನ್ ಬಟ್ ಮತ್ತು ಇಮ್ರಾನ್ ನಜೀರ್ ಅವರನ್ನು ಒಳಗೊಂಡಿದೆ.
ಅಜಂತಾ ಮೆಂಡಿಸ್ ನೇತೃತ್ವದ ನಾಲ್ಕನೇ ತಂಡವಾದ ವಲ್ರ್ಡ್ ಲೆಜೆಂಡ್ಸ್ 11ನಲ್ಲಿ, ಶ್ರೀಲಂಕಾದ ಆಟಗಾರರಾದ ತಿಲಕರತ್ನೆ ದಿಲ್ಶನ್ ಮತ್ತು ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಜಿಂಬಾಬ್ವೆಯಂತಹ ಇತರ ಕ್ರಿಕೆಟ್ ದಂತಕಥೆಗಳನ್ನು ಒಳಗೊಂಡಿದೆ.
ಎಆರ್‍ಬಿಎ ಸ್ಪೋಟ್ರ್ಸ್ ಸರ್ವೀಸಸ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಸ್ಲಾಮ್ ಗುರುಕ್ಕಲ್, ಕ್ರಿಕೆಟ್ ಆಟದ ಬಗ್ಗೆ ನಮ್ಮ ಅಭಿಮಾನ ಮತ್ತು ಪ್ರೀತಿಯನ್ನು ತಿಳಿಸಲು ನಾವು ಸ್ಪರ್ಧೆಯನ್ನು ನಡೆಸುತ್ತಿದ್ದೇವೆ ಎಂದು ಹೇಳಿದರು.
ಫ್ರೆಂಡ್‍ಶಿಪ್ ಕಪ್ ಯುಎಇ ಪ್ರಪಂಚದಾದ್ಯಂತದ ಜನರು ಮತ್ತು ವಿವಿಧ ರಾಷ್ಟ್ರೀಯತೆಗಳ ಬಂಧಗಳನ್ನು ಬಲಪಡಿಸಲು ಇದು ಒಂದು ಅದ್ಭುತ ಅವಕಾಶವಾಗಿದೆ ಎಂದಿದ್ದಾರೆ.
ತಿರುವನಂತಪುರಂ: ತಿರುವನಂತಪುರಂ ಎಕ್ಸ್‌ಪ್ರೆಸ್ ಖ್ಯಾತಿಯ ಕೇರಳದ ವೇಗಿ ಎಸ್.ಶ್ರೀಶಾಂತ್ 2022ರ ಐಪಿಎಲ್ ಮೆಗಾ ಹರಾಜಿಗೆ ತಮ್ಮ ಹೆಸರನ್ನು ನೋಂದಾಣಿ ಮಾಡಿಕೊಂಡಿದ್ದಾರೆ.
2013ರಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿ 7 ವರ್ಷಗಳ ನಿಷೇಧದ ಬಳಿಕ ಕಳೆದ ವರ್ಷ ಐಪಿಎಲ್ ಹರಾಜಿನಲ್ಲಿ ತಮ್ಮ ಹೆಸರನ್ನು ಶ್ರೀಶಾಂತ್ ನೋಂದಾಣಿ ಮಾಡಿಕೊಂಡಿದ್ದರು. ಆದರೆ ಅಂತಿಮ ಪಟ್ಟಿಯಲ್ಲಿ ಶ್ರೀಶಾಂತ್ ಅವರ ಹೆಸರು ಇರಲಿಲ್ಲ. ಇದೀಗ ಈ ಬಾರಿ ಮತ್ತೆ 50 ಲಕ್ಷ ರೂ. ಮೂಲಬೆಲೆಗೆ ಶ್ರೀಶಾಂತ್ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಐಪಿಎಲ್ ಹರಾಜಿಗೆ ಆಟಗಾರರ ಪಟ್ಟಿ ಪ್ರಕಟ – ಶಾರೂಕ್ ಖಾನ್, ಅವೇಶ್ ಖಾನ್ ಬೆಲೆ ಕಂಡು ದಂಗಾದ ಕ್ರಿಕೆಟ್ ಪ್ರಿಯರು
ನಿಷೇಧದ ಬಳಿಕ ಕ್ರಿಕೆಟ್‍ಗೆ ವಾಪಾಸಾದ ಶ್ರೀ, ಕೇರಳ ಪರ ವಿಜಯ ಹಜಾರೆ, ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು. ಶ್ರೀಶಾಂತ್ ನಿಷೇಧ ಶಿಕ್ಷೆಗೆ ಗುರಿಯಾಗುವ ಮೊದಲು ರಾಜಸ್ಥಾನ ರಾಯಲ್, ಕೊಚ್ಚಿ ಟಸ್ಕರ್ಸ್ ಕೇರಳ ಮತ್ತು ಕಿಂಗ್ಸ್ 11 ಪಂಜಾಬ್ ಪರ ಆಡಿದ್ದರು. ಐಪಿಎಲ್‍ನಲ್ಲಿ ಒಟ್ಟು 44 ಪಂದ್ಯವಾಡಿರುವ ಶ್ರೀ 44 ವಿಕೆಟ್ ಪಡೆದು ಮಿಂಚಿದ್ದಾರೆ. ಇದನ್ನೂ ಓದಿ: ಪಂತ್ ಸಿಕ್ಸರ್‌ಗೆ ಕೊಹ್ಲಿ ಡ್ಯಾನ್ಸ್ – ವೀಡಿಯೋ ವೈರಲ್
15ನೇ ಆವೃತ್ತಿ ಐಪಿಎಲ್‍ನ ಮೆಗಾ ಹರಾಜಿನಲ್ಲಿ 1,214 ಮಂದಿ ಆಟಗಾರರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 896 ಭಾರತೀಯ ಆಟಗಾರರು ಮತ್ತು 318 ವಿದೇಶಿ ಆಟಗಾರರು ಹರಾಜಿಗೆ ತಮ್ಮ ಹೆಸರನ್ನು ಕೊಟ್ಟಿದ್ದಾರೆ. ಈ ಬಾರಿ 5 ಕ್ಯಾಟಗರಿಯಲ್ಲಿ ಆಟಗಾರರಿಗೆ ಬೆಲೆ ನಿಗದಿಪಡಿಸಲಾಗಿದೆ. 2 ಕೋಟಿ, 1.5 ಕೋಟಿ, 1 ಕೋಟಿ, 50 ಲಕ್ಷ ಮತ್ತು 20 ಲಕ್ಷ ರೂಪಾಯಿಯ ಮೂಲ ಬೆಲೆ ಕ್ಯಾಟಗರಿಯಲ್ಲಿ ಆಟಗಾರರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದಾರೆ.
ಅಚ್ಚರಿ ಎಂಬಂತೆ ಸ್ಟಾರ್ ಆಟಗಾರರಾಗಿ ಗುರುತಿಸಿಕೊಂಡಿದ್ದ, ಕ್ರಿಸ್ ಗೇಲ್, ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್, ಸ್ಯಾಮ್ ಕರ್ರನ್, ಮಿಚೆಲ್ ಸ್ಟಾರ್ಕ್ ಐಪಿಎಲ್‍ನಿಂದ ಹಿಂದೆ ಸರಿದಿದ್ದಾರೆ. ಈ ನಡುವೆ ಈ ಹಿಂದಿನ ಐಪಿಎಲ್ ಮತ್ತು ದೇಶಿ ಟೂರ್ನಿಗಳಲ್ಲಿ ಮಿಂಚುಹರಿಸಿದ ಆಟಗಾರಾದ ಶಾರೂಖ್ ಖಾನ್ ಮತ್ತು ಆವೇಶ್ ಖಾನ್ ಮೂಲಬೆಲೆಯನ್ನು 20 ಲಕ್ಷ ಫಿಕ್ಸ್ ಮಾಡಿಕೊಂಡು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ: ಒತ್ತಾಯಕ್ಕೆ ಮಣಿದು ಕೊಹ್ಲಿ ನಾಯಕತ್ವ ತೊರೆದರು: ಶೋಯೆಬ್ ಅಖ್ತರ್
ತಿರುವನಂತಪುರಂ: 2023ರ ವಿಶ್ವಕಪ್ ಆಡುವುದೇ ತಮ್ಮ ಮುಂದಿರುವ ಬಹುದೊಡ್ಡ ಗುರಿ, ನನ್ನ ಮಾತು ಕೇಳಲು ಅಚ್ಚರಿ ಎನಿಸಿದರೂ ಈ ಬಗ್ಗೆ ನನಗೆ ನಂಬಿಕೆ ಇದೆ ಎಂದು ಕ್ರಿಕೆಟಿಗ ಎಸ್.ಶ್ರೀಶಾಂತ್ ಹೇಳಿದ್ದಾರೆ.
2023ರ ಏಕದಿನ ವಿಶ್ವಕಪ್ ಆಡುವ ವಿಶ್ವಾಸವಿದೆ. ಎಂದೂ ನಮ್ಮ ಗುರಿಗಳು ಉನ್ನತಮಟ್ಟದಲ್ಲಿರಬೇಕು, ನನ್ನ ಲಕ್ಷ್ಯವೂ ಎತ್ತರದಲ್ಲಿರುತ್ತವೆ. ಒಂದೊಮ್ಮೆ ಒಬ್ಬ ಅಥ್ಲೀಟ್ ಚಿಕ್ಕ ಗುರಿಯನ್ನು ಹೊಂದಿದ್ದರೆ ಸಾಧಾರಣ ವ್ಯಕ್ತಿಯಾಗಿ ಪರಿವರ್ತನೆ ಆಗುತ್ತಾನೆ ಎಂದು ಶ್ರೀಶಾಂತ್ ಹೇಳಿದ್ದಾರೆ.
ಮ್ಯಾಚ್ ಫಿಕ್ಸಿಂಗ್ ಆರೋಪದ ಹಿನ್ನೆಲೆಯಲ್ಲಿ ಶ್ರೀಶಾಂತ್ ಬಿಸಿಸಿಐ ವಿಧಿಸಿದ್ದ ನಿಷೇಧ ಸೆಪ್ಟೆಂಬರ್ ಗೆ ಅಂತ್ಯವಾಗಲಿದೆ. ನಿಷೇಧ ಮುಗಿದ ಬಳಿಕ ಕೇರಳ ಪರ ರಣಜಿ ಟ್ರೋಫಿ ಆಡುವ ಅವಕಾಶ ನೀಡಲಾಗಿದೆ. ಈಗಾಗಲೇ ಕೇರಳ ಕ್ರಿಕೆಟ್ ಬಿಡುಗಡೆ ಮಾಡಿರುವ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಶ್ರೀಶಾಂತ್‍ಗೆ ಸ್ಥಾನ ನೀಡಿದೆ. ಶ್ರೀಶಾಂತ್ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆದ್ರೆ ರಣಜಿ ಆಡುವುದು ಬಹುತೇಕ ಖಚಿತವಾಗಿದೆ.
ರಣಜಿ ಕ್ರಿಕೆಟ್ ಆವೃತ್ತಿಯಲ್ಲಿ ಶ್ರೀಶಾಂತ್ ಸ್ಥಿರ ಪ್ರದರ್ಶನ ನೀಡಿದರೆ ಟೀಂ ಇಂಡಿಯಾ ‘ಎ’ ತಂಡಕ್ಕೆ, ಆ ಬಳಿಕ ಭಾರತ ತಂಡಕ್ಕೆ ಆಡುವ ಅವಕಾಶ ಲಭಿಸಲಿದೆ. ಶ್ರೀಶಾಂತ್ ಕಳೆದ 7 ವರ್ಷಗಳಿಂದ ಕ್ರಿಕೆಟ್‍ನಿಂದಲೇ ದೂರ ಉಳಿದಿದ್ದು, 37 ವರ್ಷದ ಆಟಗಾರ ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಉದ್ಭವಿಸಿದೆ. ಅಲ್ಲದೇ ಟೀಂ ಇಂಡಿಯಾಗೆ ಆಯ್ಕೆಯಾಗಲು ತಂಡದಲ್ಲಿ ಆಟಗಾರರ ನಡುವೆ ಭಾರೀ ಪೈಪೋಟಿ ಇದೆ. ಆದರೆ ಶ್ರೀಶಾಂತ್ ಮಾತ್ರ 2023ರ ವಿಶ್ವಕಪ್ ಆಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದ ಪರ 27 ಟೆಸ್ಟ್, 53 ಏಕದಿನ ಪಂದ್ಯ ಆಡಿರುವ ಶ್ರೀಶಾಂತ್ ಕ್ರಮವಾಗಿ 87, 75 ವಿಕೆಟ್ ಪಡೆದಿದ್ದು, 10 ಟಿ20 ಪಂದ್ಯಗಳಲ್ಲಿ 7 ವಿಕೆಟ್ ಉರುಳಿಸಿದ್ದಾರೆ. 2011ರ ಏಕದಿನ ವಿಶ್ವಕಪ್ ಗೆದ್ದ ತಂಡದಲ್ಲಿ ಶ್ರೀಶಾಂತ್ ಸದಸ್ಯರಾಗಿದ್ದರು.