Tag: S S Rajamouli

  • ರಾಯಚೂರು ಜಿಲ್ಲಾ ಚುನಾವಣಾ ಐಕಾನ್ ಆಗಿ ಬಾಹುಬಲಿ ನಿರ್ದೇಶಕ ರಾಜಮೌಳಿ ನೇಮಕ

    ರಾಯಚೂರು ಜಿಲ್ಲಾ ಚುನಾವಣಾ ಐಕಾನ್ ಆಗಿ ಬಾಹುಬಲಿ ನಿರ್ದೇಶಕ ರಾಜಮೌಳಿ ನೇಮಕ

    ರಾಯಚೂರು: ಚುನಾವಣಾ ರಾಯಭಾರಿಯಾಗಿ (Election icon) ರಾಯಚೂರು (Raichuru) ಜಿಲ್ಲೆಗೆ ಚಲನಚಿತ್ರ ನಿರ್ದೇಶಕ ಬಾಹುಬಲಿ (Bahubali) ಸಿನೆಮಾ ಖ್ಯಾತಿಯ ಎಸ್.ಎಸ್.ರಾಜಮೌಳಿ (S.S.Rajamouli)ನೇಮಕವಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ತಿಳಿಸಿದ್ದಾರೆ.

    ಮತದಾನ ಜಾಗೃತಿ ಕುರಿತು ರಾಜಮೌಳಿ ಚುನಾವಣಾ ಸ್ವೀಪ್ (Election SVEEP)  ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ವೀಡಿಯೋ ಕ್ಲಿಪ್‍ಗಳ ಮೂಲಕ ಜಾಗೃತಿ ಮೂಡಿಸುತ್ತಾರೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಇದನ್ನೂ ಓದಿ: Ind Vs Aus: ಆಸ್ಟ್ರೇಲಿಯಾದ ಪ್ರಧಾನಿ‌ ಜೊತೆ ಮೋದಿ ಮ್ಯಾಚ್ ವೀಕ್ಷಣೆ

    ರಾಜಮೌಳಿ ಮೂಲತಃ ರಾಯಚೂರಿನ ಮಾನ್ವಿ ತಾಲೂಕಿನ ಅಮರೇಶ್ವರ ಕ್ಯಾಂಪ್‍ನವರು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಕಳುಹಿಸಿದ ರಾಯಭಾರಿಗಳ ಪ್ರಸ್ತಾವನೆಗೆ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಸಮ್ಮತಿಸಿದ್ದಾರೆ.

    ಈಗಾಗಲೇ ರಾಯಭಾರಿಗಳ ಆಯ್ಕೆ ಪಟ್ಟಿ ಬಿಡುಗಡೆಯಾಗಿದೆ. ಚುನಾವಣಾ ಸ್ವೀಪ್ ಚಟುವಟಿಕೆಗಳಲ್ಲಿ ನಿರ್ದೇಶಕ ರಾಜಮೌಳಿ ಭಾಗವಹಿಸಲು ಸಂಪರ್ಕಿಸಿರುವುದಾಗಿ ಜಿಲ್ಲಾಡಳಿತ ತಿಳಿಸಿದೆ. ಇದನ್ನೂ ಓದಿ: ಪೋಷಕರೇ ಎಚ್ಚರ- ಮಕ್ಕಳಲ್ಲಿ ಹೆಚ್ಚಾಗ್ತಿದೆ ಆಡಿನೋ ವೈರಸ್..!

  • ಮಾರ್ಚ್ 25ಕ್ಕೆ RRR ಸಿನಿಮಾ ತೆರೆಗೆ

    ಮಾರ್ಚ್ 25ಕ್ಕೆ RRR ಸಿನಿಮಾ ತೆರೆಗೆ

    ಹೈದರಾಬಾದ್: ರಾಜ್‍ಮೌಳಿ ನಿರ್ದೇಶನದ ಬಹುನೀರಿಕ್ಷಿತ  ಆರ್‌ಆರ್‌ಆರ್‌ ಸಿನಿಮಾವನ್ನು ಮಾರ್ಚ್ 25ರಂದು ಬಿಡುಗಡೆ  ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಕೊರೊನಾ ಕಾರಣದಿಂದಾಗಿ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಾ ಬಂದಿರುವ ಚಿತ್ರ ತಂಡ ಅಧಿಕೃತ ದಿನಾಂಕವನ್ನು ಪ್ರಕಟ ಮಾಡಿದೆ.

    ಜೂನಿಯರ್ ಎನ್‍ಟಿಆರ್ ಮತ್ತು ರಾಮ್ ಚರಣ್ ಅಭಿನಯದ ಆರ್‌ಆರ್‌ಆರ್‌ ಸಿನಿಮಾವು ಜನವರಿ 7ರಂದು ತೆರೆಗೆ ಬರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಈ ಮಧ್ಯೆ ಮಾರ್ಚ್ 18ರಂದು ಆರ್‌ಆರ್‌ಆರ್‌ ಸಿನಿಮಾವನ್ನು ತೆರೆಕಾಣಿಸಲು ಸಜ್ಜಾಗಿದ್ದರು ರಾಜಮೌಳಿ. ಆ ದಿನಾಂಕ ಹೊಂದಿಕೆಯಾಗದೇ ಇದ್ದರೆ ಏಪ್ರಿಲ್ 28ರ ಮೇಲೆ ಕಣ್ಣಿಟ್ಟಿದ್ದರು. ಇದೀಗ ಅವರೆಡನ್ನೂ ಬಿಟ್ಟು ಹೊಸ ರಿಲೀಸ್ ಡೇಟ್ ಫೈನಲ್ ಮಾಡಲಾಗಿದೆ. ಮಾರ್ಚ್ 25ರಂದು ಆರ್‌ಆರ್‌ಆರ್‌ ರಿಲೀಸ್ ಆಗೋದು ಖಚಿತ ಎಂದು ಚಿತ್ರತಂಡ ಅಧಿಕೃತ ಹೇಳಿಕೆ ನೀಡಿದೆ.

    ರಾಮ್ ಚರಣ್ ತೇಜಾ, ಜೂ.ಎನ್‍ಟಿಆರ್ ಅಭಿನಯಿಸಿರುವ ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಬಹು ಕೋಟಿ ವೆಚ್ಚದಲ್ಲಿ ತಯಾರಾಗಿರುವ ಸಿನಿಮಾವಾಗಿದೆ.  ಬಾಲಿವುಡ್​ನ ಖ್ಯಾತ ನಟಿ ಆಲಿಯಾ ಭಟ್​ ಅವರು ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ನಟ ಅಜಯ್​ ದೇವಗನ್​ ಕೂಡ ಈ ಸಿನಿಮಾದಲ್ಲಿ ಮುಖ್ಯ ಪಾತ್ರ ನಿಭಾಯಿಸಿದ್ದಾರೆ. ಈಗಾಗಲೇ ಆರ್‌ಆರ್‌ಆರ್‌ ಚಿತ್ರತಂಡ ಸಿನಿಮಾ ಕುರಿತಂತೆ ಭರ್ಜರಿಯಾಗಿ ಪ್ರಮೋಷನ್ ನಡೆಸಿದ್ದು, ಚಿತ್ರ ನೋಡಲು ಅಭಿಮಾನಿಗಳು ಸಾಕಷ್ಟು ಕಾತುರದಿಂದ ಕಾಯುತ್ತಿದ್ದಾರೆ.