Tag: S.S Mallikarjun

  • ಹರಿಹರ ಶಾಸಕರಿಗೆ ತಲೆ ಕೆಟ್ಟಿರಬೇಕು – ಬಿ.ಪಿ ಹರೀಶ್ ವಿರುದ್ಧ ಎಸ್.ಎಸ್ ಮಲ್ಲಿಕಾರ್ಜುನ್ ಕಿಡಿ

    ಹರಿಹರ ಶಾಸಕರಿಗೆ ತಲೆ ಕೆಟ್ಟಿರಬೇಕು – ಬಿ.ಪಿ ಹರೀಶ್ ವಿರುದ್ಧ ಎಸ್.ಎಸ್ ಮಲ್ಲಿಕಾರ್ಜುನ್ ಕಿಡಿ

    ದಾವಣಗೆರೆ: ಹರಿಹರ ಶಾಸಕರಿಗೆ ತಲೆ ಸರಿ ಇದಿಯೋ ಇಲ್ವೋ? ಅವರ ತಲೆ ಕೆಟ್ಟಿರಬೇಕು ಎಂದು ಬಿ.ಪಿ ಹರೀಶ್ (B.P. Harish) ವಿರುದ್ಧ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ (S.S. Mallikarjun) ಆಕ್ರೋಶ ಹೊರಹಾಕಿದ್ದಾರೆ.

    ದಾವಣಗೆರೆಯಲ್ಲಿ (Davanagere) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಸಚಿವ ಮಲ್ಲಿಕಾರ್ಜುನ್ ಜೊತೆ ರೇಣುಕಾಚಾರ್ಯ ಮತ್ತು ಉಳಿದ ನಾಯಕರು ಹೊಂದಾಣಿಕೆ ರಾಜಕೀಯ ಮಾಡಿಕೊಂಡು ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದಾರೆ ಎಂಬ ಬಿ.ಪಿ ಹರೀಶ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

    ಎಲುಬಿಲ್ಲದ ನಾಲಿಗೆ ಏನೇನೋ ಮಾತನಾಡ್ತಾನೆ. ಇದೇ ಹರೀಶ್ ನಮ್ಮ ಮನೆಗೆ ಬಂದು ಸಿದ್ದೇಶ್ವರ್‍ಗೆ ಬಾಯಿಗೆ ಬಂದ ಹಾಗೆ ಬೈದಿದ್ದ. ಕಾಂಗ್ರೆಸ್‍ನಲ್ಲಿದ್ದು ಹಿಂದೆ ಚುನಾವಣೆಯಲ್ಲಿ ನಮ್ಮ ಪರ ಪ್ರಚಾರ ಮಾಡಿದ್ದ. ಅವನು ಯಾವಾಗ ಯಾರ ಕಡೆ ಇರುತ್ತಾನೋ ಗೊತ್ತಿಲ್ಲ. ನಮ್ಮ ಮನೆಗೆ ಬಂದಿದ್ದು ರೇಣುಕಾಚಾರ್ಯ ಅಲ್ಲ ಹರೀಶ್ ಬಂದು ಮನೆ ಕಾಯುತ್ತಿದ್ದ ಎಂದು ವ್ಯಂಗ್ಯವಾಡಿದ್ದಾರೆ.

    ಪೇಪರ್‍ನಲ್ಲಿ ತನ್ನ ಫೋಟೋ ಬರಬೇಕು ಎಂದು ಏನೇನೋ ಮಾತಾಡ್ತಾ ಇದಾನೆ. ಜನ ಆಯ್ಕೆ ಮಾಡಿ ಕಳಿಸಿದ್ದಾರೆ, ಜನರ ಸೇವೆ ಮಾಡಲಿ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

  • ದಾವಣಗೆರೆಯಲ್ಲಿ ಅಪ್ಪ – ಮಗನ ಗೆಲ್ಲಿಸಿದ ಜನತೆ

    ದಾವಣಗೆರೆಯಲ್ಲಿ ಅಪ್ಪ – ಮಗನ ಗೆಲ್ಲಿಸಿದ ಜನತೆ

    ದಾವಣಗೆರೆ: ದಾವಣಗೆರೆ ಉತ್ತರ ಹಾಗೂ ದಕ್ಷಿಣದಲ್ಲಿ ಎಸ್.ಎಸ್ ಮಲ್ಲಿಕಾರ್ಜುನ್ (S.S.Mallikarjun) ಹಾಗೂ ಅವರ ತಂದೆ ಶಾಮನೂರು ಶಿವಶಂಕರಪ್ಪನವರು (Shamanuru Shivashankarappa) ಗೆದ್ದು ಗೆಲುವಿನ ನಗೆಯನ್ನು ಬೀರಿದ್ದಾರೆ.

    ಎಸ್‌ಎಸ್ ಮಲ್ಲಿಕಾರ್ಜುನ್ ದಾವಣಗೆರೆ ಉತ್ತರ (Davanagere North) ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ (Congress) ಅಭ್ಯರ್ಥಿಯಾಗಿ ಚುನಾವಣೆಯಲ್ಲಿ (Election) ಸ್ಪರ್ಧಿಸಿ 69,294 ಮತಗಳನ್ನು ಪಡೆಯುವ ಮೂಲಕ ಗೆಲುವನ್ನು ಸಾಧಿಸಿದ್ದಾರೆ. 2018ರಲ್ಲಿ ನಡೆದ ಚುನಾವಣೆಯಲ್ಲಿ ಉತ್ತರ ಕ್ಷೇತ್ರಕ್ಕೆ ಬಿಜೆಪಿಯ ಎಸ್ ರವೀಂದ್ರನಾಥ್ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ಇವರ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್‌ನ ಮಲ್ಲಿಕಾರ್ಜುನ್ ಅವರು 4,071 ಮತಗಳ ಅಂತರದಲ್ಲಿ ಸೋಲನ್ನು ಅನುಭವಿಸಿದ್ದರು. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ; ಸಿಎಂ ಸ್ಥಾನಕ್ಕೆ ಬೊಮ್ಮಾಯಿ ಇಂದು ರಾಜೀನಾಮೆ LIVE Updates

    ದಾವಣಗೆರೆ ದಕ್ಷಿಣದಲ್ಲಿ (Davanagere South) ಶಾಮನೂರು ಶಿವಶಂಕರಪ್ಪನವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದು, 77,599 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯ ಗಳಿಸಿದ್ದಾರೆ. ಕಳೆದ ಮೂರು ದಶಕಗಳಿಂದ ದಾವಣಗೆರೆ ದಕ್ಷಿಣ ಕ್ಷೇತ್ರದ ಮೇಲೆ ಶಾಮನೂರು ಹಿಡಿತವನ್ನು ಸಾಧಿಸಿದ್ದಾರೆ. 2004ರ ಚುನಾವಣೆಯ ನಂತರ 2018ರವರೆಗೆ ಶಾಮನೂರು ಸೋಲಿಲ್ಲದ ಸರದಾರರಾಗಿದ್ದಾರೆ. ಒಟ್ಟಾರೆಯಾಗಿ ಈ ಬಾರಿ ದಾವಣಗೆರೆ ಜನತೆ ಅಪ್ಪ – ಮಗ ಇಬ್ಬರನ್ನೂ ಗೆಲ್ಲಿಸಿ ಆಶೀರ್ವದಿಸಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಇದನ್ನೂ ಓದಿ: ಭದ್ರಕೋಟೆ ಛಿದ್ರಗೊಳಿಸಿದ ಕೈ – ಕೊಡಗಿನಲ್ಲಿ ಬಿಜೆಪಿಗೆ ಹೀನಾಯ ಸೋಲು

  • ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಪುತ್ರ ಮಲ್ಲಿಕಾರ್ಜುನ್ ಗೆ ಕೊರೊನಾ ಸೋಂಕು

    ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಪುತ್ರ ಮಲ್ಲಿಕಾರ್ಜುನ್ ಗೆ ಕೊರೊನಾ ಸೋಂಕು

    ದಾವಣಗೆರೆ: ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೂ ಕೊರೊನಾ ಸೋಂಕು ತಗುಲಿದೆ. ಹರಿಜಹರ ಶಾಸಕ ಎಸ್.ರಾಮಪ್ಪ ಗುಣಮುಖವಾಗಿ ಬರುವಂತೆ ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

    ಶಾಮನೂರು ಶಿವಶಂಕರಪ್ಪನವರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಎಸ್.ಎಸ್. ಮಲ್ಲಿಕಾರ್ಜುನ್ ಹೋಂ ಐಸೋಲೇಶನ್ ನಲ್ಲಿದ್ದಾರೆ. ಈ ಹಿಂದೆ ಶಾಸಕರ ಆಪ್ತ ಸಹಾಯಕ. ಅಡುಗೆ ಭಟ್ಟರು ಸೇರಿದಂತೆ ಐವರಿಗೆ ಕೊರೊನಾ ಸೋಂಕು ತಗುಲಿತ್ತು.

    ನಮ್ಮ ಜಿಲ್ಲೆಯ ಹಿರಿಯರು ನಮ್ಮ ಮಾರ್ಗದರ್ಶಕರಾದ ಶಾಸಕ ಶ್ರೀ ಶಾಮಾನೂರು ಶಿವಶಂಕರಪ್ಪ ಹಾಗೂ ದಾವಣಗೆರೆಯ ಅಭಿವೃದ್ಧಿ ಯ ಹರಿಕಾರ ಮಾಜಿ ಸಚಿವ ಶ್ರೀ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಕೊರೊನಾ ಪಾಸಿಟಿವ್ ಆಗಿರುವ ಸುದ್ದಿ ತಿಳಿದು ತುಂಬಾ ನೋವು ಆಯಿತು .ಇಬ್ಬರು ಶೀಘ್ರವಾಗಿ ಗುಣಮುಖರಾಗಿ ಜನ ಸೇವೆಗೆ ಮರಳಲಿ ಅವರಿಗೆ ಇನ್ನಷ್ಟು ಅಯುರ್, ಅರೋಗ್ಯ ನೀಡಿ ಗುಣಮುಖರಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಶಾಸಕ ಎಸ್.ರಾಮಪ್ಪ ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

  • ನಾವೇ ಸೋತಿದ್ದೇವೆ, ನಮ್ಮ ಅಪ್ಪನ ಬಗ್ಗೆ ಮಾತಾಡ್ತೀಯಾ – ಎಂಬಿಪಿಗೆ ಶಾಮನೂರು ಪುತ್ರರಿಂದ ಕ್ಲಾಸ್

    ನಾವೇ ಸೋತಿದ್ದೇವೆ, ನಮ್ಮ ಅಪ್ಪನ ಬಗ್ಗೆ ಮಾತಾಡ್ತೀಯಾ – ಎಂಬಿಪಿಗೆ ಶಾಮನೂರು ಪುತ್ರರಿಂದ ಕ್ಲಾಸ್

    ದಾವಣಗೆರೆ: ಚುನಾವಣೆಯಲ್ಲಿ ನಾವೇ ಸೋತು ಸುಣ್ಣ ಆಗಿದ್ದೀವಿ, ನೀನು ನಮ್ಮ ಅಪ್ಪನ ಬಗ್ಗೆ ಮಾತಾಡ್ತಿಯ ಅಂತ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಹಾಗೂ ಮಾಜಿ ಸಚಿವರಾಗಿದ್ದ ಎಸ್.ಎಸ್ ಮಲ್ಲಿಕಾರ್ಜುನ್ ಅವರು ಗೃಹ ಸಚಿವ ಎಂ.ಬಿ ಪಾಟೀಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಶಾಮನೂರು ಶಿವಶಂಕರಪ್ಪ ಅವರ ಮನೆಗೆ ಊಟಕ್ಕೆಂದು ಎಂ.ಬಿ ಪಾಟೀಲ್ ತೆರಳಿದ್ದರು. ಈ ವೇಳೆ ಚುನಾವಣೆಯಲ್ಲಿ ನಾವೇ ಸೋತು ಸುಣ್ಣ ಆಗಿದ್ದೀವಿ. ನೀನು ನಮ್ಮ ಅಪ್ಪನ ಬಗ್ಗೆ ಮಾತಾಡ್ತಿಯ ಎಂದು ಪ್ರಶ್ನಿಸಿ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಕಾಂಗ್ರೆಸ್ ಆಫೀಸ್ ಹೋಗಬೇಕು ಬಾ ಅಂತ ಎಂ.ಬಿ ಪಾಟೀಲ್ ಅವರು ಮಲ್ಲಿಕಾರ್ಜುನ್ ಅವರನ್ನು ಕರೆದಿದ್ದಾರೆ. ಇಷ್ಟಕ್ಕೆ ಅವರು ಅಲ್ಲಿ ನಮ್ಮದೇನು ಕೆಲಸ ಇಲ್ಲ. ನಾನು ಯಾಕೆ ಬರಲಿ? ನಾವು ಹಿದಕ್ಕೆ ಸರಿದಿದ್ದೇವೆ. ನಾವು ಚುನಾವಣೆಯಲ್ಲಿ ಸೋತು ಸುಣ್ಣ ಆಗಿದ್ದೀವಿ. ನೀನು ಮಂತ್ರಿಯಾಗಿದೀಯಾ ಅಂತ ಹೇಳಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಮಲ್ಲಿಕಾರ್ಜುನ್ ಅವರ ಕೆಂಗಣ್ಣಿಗೆ ಗುರಿಯಾಗಿ ಎಂ.ಬಿ.ಪಾಟೀಲ್ ಅವರು ಸಪ್ಪೆಮೊರೆ ಹಾಕಿಕೊಂಡು ಸುಮ್ಮನಾದರು. ಈ ವೇಳೆ ಶಾಮನೂರು ಶಿವಶಂಕರಪ್ಪ ಮಧ್ಯ ಪ್ರವೇಶಿಸಿ ಮಲ್ಲಿಕಾರ್ಜುನ್ ಅವರನ್ನು ಸಮಾಧಾನ ಮಾಡಿದರು. ಬಳಿಕ ಶಾಮನೂರು ಅವರ ಜೊತೆ ಎಂ.ಬಿ.ಪಾಟೀಲ್ ಊಟಕ್ಕೆ ತೆರಳಿದರು.

    ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಂ.ಬಿ ಪಾಟೀಲ್, ಮಲ್ಲಿಕಾರ್ಜುನ್ ನಾನು ಸಹೋದರರು. ಪದೇ ಪದೇ ನಮ್ಮ ನಡುವೆ ಈ ರೀತಿ ಗಲಾಟೆ ನಡೆಯುತ್ತಲೇ ಇರುತ್ತವೆ. ದಾವಣಗೆರೆಗೆ ಎಸ್.ಎಸ್.ಮಲ್ಲಿಕಾರ್ಜುನ್ ನಿಲ್ಲದೇ ಇದ್ದರೆ ಹಿರಿಯರು ಶಾಮನೂರು ಶಿವಶಂಕರಪ್ಪನವರು ನಿಲ್ಲುತ್ತಾರೆ. ಅವರ ಪರವಾಗಿ ನಾನು ಚುನಾವಣಾ ಪ್ರಚಾರಕ್ಕೆ ಬರುತ್ತೇನೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv