Tag: S.R. Srinivas

  • ನನ್ನ ಅಪ್ಪನಾಣೆ ಇನ್ನೂ ಐದು ವರ್ಷ ನಾನೇ MLA ಆಗಿರ್ತೀನಿ: ಶ್ರೀನಿವಾಸ್

    ನನ್ನ ಅಪ್ಪನಾಣೆ ಇನ್ನೂ ಐದು ವರ್ಷ ನಾನೇ MLA ಆಗಿರ್ತೀನಿ: ಶ್ರೀನಿವಾಸ್

    ತುಮಕೂರು: ನನ್ನ ಅಪ್ಪನಾಣೆ ಇನ್ನೂ ಐದು ವರ್ಷ ನಾನೇ MLA ಆಗಿರುತ್ತೇನೆ ಎಂದು ಗುಬ್ಬಿ (Gubbi) ಜೆಡಿಎಸ್ (JDS) ಉಚ್ಛಾಟಿತ ಶಾಸಕ ಎಸ್.ಆರ್. ಶ್ರೀನಿವಾಸ್ (S. R. Srinivas) ಭವಿಷ್ಯ ನುಡಿದರು.

    ಗುಬ್ಬಿ ತಾಲೂಕಿನ ಯಕ್ಕಲಕಟ್ಟೆ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವ ಜ್ಯೋತಿ ಶಾಸ್ತ್ರದವರು ನನ್ನ ಕುಂಡಳಿ ನೋಡಿದ್ರೆ ಹೆದರಿ ಓಡ್ತಾರೆ ಹಂಗಿದೆ ನನ್ನ ಕುಂಡಳಿ. ಯಾರ ಊಹೆಗೂ ನಿಲುಕದ್ದು ನನ್ನ ಭವಿಷ್ಯವಾಗಿದೆ. ಚುನಾವಣೆ ಹತ್ತಿರ ಬಂದಾಗ ಕಾಗೆ, ಗೂಬೆಗಳೆಲ್ಲ ವೇಷ ಹಾಕಿಕೊಂಡು ಬರುತ್ತಾರೆ ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು. ಇದನ್ನೂ ಓದಿ: 1 ವರ್ಷದಲ್ಲಿ 3 ಬಾರಿ ಭರ್ತಿ – ದಾಖಲೆ ಬರೆದ ಕೆಆರ್‌ಎಸ್ ಡ್ಯಾಂ

    ಮೊದಲು ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದೆ. ಅದಾದ ಬಳಿಕ ನಾನು ಶಾಸಕನಾಗಿದ್ದೇನೆ. ನಮ್ಮಪ್ಪನಾಣೆ ನಾನೇ ಮುಂದಿನ ಐದು ವರ್ಷ ಶಾಸಕನಾಗಿರುತ್ತೇನೆ. ನನ್ನನು ಸುಲಭವಾಗಿ ಸೋಲಿಸಿ ಬಿಡುತ್ತೇನೆ ಅಂದುಕೊಂಡವರೆ ಅದು ಸಾಧ್ಯ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬಾಲಕಿ ರೇಪ್ & ಮರ್ಡರ್ – ಅನಧಿಕೃತ ಟ್ಯೂಷನ್ ಸೆಂಟರ್‌ಗಳಿಗೆ ಡಿಡಿಪಿಐ ಎಚ್ಚರಿಕೆ

    Live Tv
    [brid partner=56869869 player=32851 video=960834 autoplay=true]

  • ಕಾವಿ ಹಾಕುವ ಕಳ್ಳ ಸ್ವಾಮೀಜಿಗಳ ಮುಖಕ್ಕೆ ಕ್ಯಾಕರಿಸಿ ಉಗಿಬೇಕು: ಎಸ್.ಆರ್. ಶ್ರೀನಿವಾಸ್

    ಕಾವಿ ಹಾಕುವ ಕಳ್ಳ ಸ್ವಾಮೀಜಿಗಳ ಮುಖಕ್ಕೆ ಕ್ಯಾಕರಿಸಿ ಉಗಿಬೇಕು: ಎಸ್.ಆರ್. ಶ್ರೀನಿವಾಸ್

    ತುಮಕೂರು: ಸಮಾಜದಲ್ಲಿ ಶಾಂತಿ ಕಾಪಾಡುವ ಬದಲು ಅಶಾಂತಿ ಉಂಟು ಮಾಡುತ್ತಿರುವ _ಕಾವಿ ಹಾಕುವ ಕಳ್ಳ ಸ್ವಾಮೀಜಿಗಳ ಮುಖಕ್ಕೆ ಕ್ಯಾಕರಿಸಿ ಉಗಿಬೇಕು ಎಂದು ಹಿಂದೂ ಸ್ವಾಮೀಜಿಗಳ ಸಮೂಹದ ವಿರುದ್ದ ಗುಬ್ಬಿ ಕ್ಷೇತ್ರದ ಜೆ.ಡಿ.ಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದಾರೆ.

    ತುಮಕೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಾವಿರಾರು ವರ್ಷಗಳಿಂದ ಹಿಂದೂ, ಮುಸ್ಲಿಂ ನಾವೆಲ್ಲಾ ಒಂದಾಗಿ ಬದುಕುತ್ತಿದ್ದೇವೆ. ಆದರೆ ಇಂದು ಸ್ವಾಮೀಜಿಗಳು ಧರ್ಮ ಧರ್ಮದ ನಡುವೆ ವೈಮನಸ್ಸು ಬೆಳೆಸುತ್ತಿದ್ದಾರೆ. ಆ ಧರ್ಮದ ಡ್ರೈವರ್ ಇಟ್ಕೊಂಡು ದೇವಸ್ಥಾನಕ್ಕೆ ಹೋಗಬೇಡ ಎಂದು ಒಬ್ಬ ಸ್ವಾಮೀಜಿ ಹೇಳಿದ್ರೆ, ಇನ್ನೊಬ್ಬ ಯಾವನೋ ಸ್ವಾಮೀಜಿ ಹಿಜಬ್ ಎಂದು ಹೇಳಿ ಸಾಮರಸ್ಯ ಕದಡುತ್ತಾನೆ ಎಂದು ಏಕ ವಚನದಲ್ಲಿ ಟೀಕಿಸಿದ್ದಾರೆ. ಇದನ್ನೂ ಓದಿ: ಮದ್ಯ ಸೇವನೆಗೆ ಹಣಕೊಡಲಿಲ್ಲವೆಂದು ತಂದೆಯನ್ನೆ ಕೊಂದ ಪಾಪಿ

    ಯಾವತ್ತೋ ಮುಸ್ಲಿಮರು ಮಾಡಿದ್ದ ವಿಗ್ರಹಕ್ಕೆ ಪೂಜೆ ಮಾಡಬೇಡಿ ಅಂತಾರೆ ಈ ಸ್ವಾಮಿಗಳು, ಆದರೆ ನಮ್ಮೂರಲ್ಲಿ ಶೇ.90 ದೇವಸ್ಥಾನ ಕಟ್ಟಿರೋರು ಮುಸ್ಲಿಮರೆ ಆಗಿದ್ದಾರೆ. ಯಾವನೋ ತಲೆ ಕೆಟ್ಟ ಸ್ವಾಮಿ ಹೇಳಿದ್ದಾನೆ. ವಿಗ್ರಹ ಕಿತ್ತುಹಾಕೋಕಾಗುತ್ತಾ? ಮೊದಲು ಈ ಕಾವಿ ಹಾಕಿ ಬರುವ ಸ್ವಾಮೀಜಿಗಳಿಗೆ ಕ್ಯಾಕರಿಸಿ ಮುಖಕ್ಕೆ ಉಗಿಬೇಕು ಎಂದು ಗುಡುಗಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಬೆಳ್ಳಂಬೆಳಗ್ಗೆಯೇ ಅಗ್ನಿ ದುರಂತ: 5 ಅಂಗಡಿಗಳು ಭಸ್ಮ

    ಸ್ವಾಮೀಜಿಗಳ ಕೆಲಸ ಸಮಾಜದಲ್ಲಿ ಶಾಂತಿ ಕಾಪಾಡೋದು, ಸಮಾಜಕ್ಕೆ ಒಳ್ಳೆ ಸಂದೇಶ ಕೊಡುವುದು ಅವರ ಜವಾಬ್ದಾರಿ ಆಗಿದೆ. ಆದರೆ ಇವೆಲ್ಲಾ ಬಿಟ್ಟು ಬೀದಿಗೆ ಬಂದಿದ್ದಾರೆ. ಹಿಂದೂಗಳ ಸಂಘಟನೆ ಮಾಡುತ್ತೇವೆ ಅನ್ನುವ ಇವರು ಏನ್ ಸಂಘಟನೆ ಮಾಡುತ್ತಾರೆ. ಮುಸ್ಲಿಮರನೆಲ್ಲಾ ಈ ದೇಶಬಿಟ್ಟು ಓಡಿಸಬೇಕು. ಓಡಿಸಲು ಇವರಿಂದ ಸಾಧ್ಯನಾ ಎಂದು ಪ್ರಶ್ನಿಸಿದ್ದಾರೆ.

     

  • ನಮ್ಮ ಪಕ್ಷ ಅಧಿಕಾರಕ್ಕೆ ಬರಲ್ಲ: ಎಸ್.ಆರ್.ಶ್ರೀನಿವಾಸ್

    ನಮ್ಮ ಪಕ್ಷ ಅಧಿಕಾರಕ್ಕೆ ಬರಲ್ಲ: ಎಸ್.ಆರ್.ಶ್ರೀನಿವಾಸ್

    ತುಮಕೂರು: ಮುಂಬರುವ 2024ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಜೆಡಿಎಸ್ ಪಕ್ಷವು 120 ಸ್ಥಾನಗಳನ್ನು ಗೆಲ್ಲುವುದಿಲ್ಲ, ನಮ್ಮ ಪಕ್ಷದ ನಾಯಕರು ಮುಖ್ಯಮಂತ್ರಿಯೂ ಆಗುವುದಿಲ್ಲ ಎಂದು ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್ ಶ್ರೀನಿವಾಸ್ ಸ್ವಪಕ್ಷದ ವಿರುದ್ಧವೇ ಹೇಳಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ವಿಕಲಚೇತನರು ದೇವರ ಮಕ್ಕಳಿದ್ದಂತೆ: ಲಕ್ಷ್ಮೀ ಹೆಬ್ಬಾಳ್ಕರ್

    ಗುಬ್ಬಿ ತಾಲೂಕಿನ ಎಂ.ಎಚ್ ಪಟ್ಟಣ ಗ್ರಾಮ ಪಂಚಾಯಿತಿ ಆವರಣದಲ್ಲಿ ಕೃಷಿ ಇಲಾಖೆಯ ಮಾಹಿತಿ ರಥಕ್ಕೆ ಚಾಲನೆ ನೀಡಿ ಅಮಾತನಾಡಿದ ಅವರು, ನಮ್ಮ ಜೆಡಿಎಸ್ ಪಕ್ಷದಲ್ಲಿ ಇನ್ನೇನು ಮಾತನಾಡುವ ಹಾಗಿಲ್ಲ. ನಾವು ಮುಖ್ಯಮಂತ್ರಿ ಆಗೋದಿಲ್ಲ. ಜೆಡಿಎಸ್ 125 ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದು ಸ್ವಪಕ್ಷದ ಬಗ್ಗೆಯೇ ಮಾತನಾಡಿದರು.

    ಕಾಂಗ್ರೆಸ್ ಪಕ್ಷದವರು ಸಿಎಂ ಕುರ್ಚಿ ಬಗ್ಗೆ ಯಾಕೆ ಮಾತನಾಡುತ್ತಾರೋ ತಿಳಿಯುತ್ತಿಲ್ಲ. ಕಾಂಗ್ರೆಸ್ ಪಕ್ಷವು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 120 ಸ್ಥಾನಗಳನ್ನು ಗೆದ್ದಾಗ ಮಾತ್ರ ಸಿಎಂ ಕುಸ್ತಿ ಬಗ್ಗೆ ಚಿಂತನೆ ಮಾಡಬೇಕು. ಅದನ್ನು ಬಿಟ್ಟು ಪ್ರಚಾರಕ್ಕೆ ಮಾತನಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿ ಕಾರಿದ್ದಾರೆ.

    ಪ್ರಸ್ತುತ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳ ಬೆಲೆ ಏರಿಕೆ ಕೃಷಿ ಕ್ಷೇತ್ರದ ಮೇಲೆ ಮಾತ್ರವಲ್ಲದೆ ದೇಶದ ಪ್ರತಿಯೊಂದು ಆರ್ಥಿಕ ಅಭಿವೃದ್ಧಿಯ ಮೇಲೆ ಪರಿಣಾಮ ಬೀರಿದೆ ಹಾಗೂ ಸಾರ್ವಜನಿಕವಾಗಿ ತೊಂದರೆಯಾಗಿದೆ. ಕೈಗಾರಿಕೆಗಳಿಗೂ ಬೆಲೆ ಏರಿಕೆಯ ಬಿಸಿ ತಟ್ಟಿದೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಬೇಕು ಕೇಂದ್ರ 33 ರೂ.ಗಳು, ರಾಜ್ಯ ಸರ್ಕಾರ 28 ರೂ.ಗಳ ತೆರಿಗೆ ಹಾಕುತ್ತಿವೆ. ಕೇಂದ್ರ ಸರ್ಕಾರ 20 ರೂಪಾಯಿ ರಾಜ್ಯ ಸರ್ಕಾರ ಹತ್ತು ರೂಪಾಯಿ ತೆರಿಗೆ ಕಡಿಮೆ ಮಾಡಿದರೆ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದರು.

    ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಬಗ್ಗೆ ಮಾಧ್ಯಮಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ನಿದ್ದೆ ಮಾಡುತ್ತಿರುವುದು ಅಸಹನೀಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರನ್ನು ದರೋಡೆ ಮಾಡುತ್ತಿದೆ. ಇದನ್ನು ಸಾರ್ವಜನಿಕರು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.

  • ಜೆಡಿಎಸ್ ತೊರೆಯುವ ಸುಳಿವು ನೀಡಿದ ಗುಬ್ಬಿ ಶಾಸಕ ಶ್ರೀನಿವಾಸ್

    ಜೆಡಿಎಸ್ ತೊರೆಯುವ ಸುಳಿವು ನೀಡಿದ ಗುಬ್ಬಿ ಶಾಸಕ ಶ್ರೀನಿವಾಸ್

    – ತೆನೆ ‘ಹೊರೆ’ ಇಳಿಸಿ ‘ಕೈ’ ಹಿಡಿತಾರಾ?

    ತುಮಕೂರು: ಗುಬ್ಬಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ತೆನೆ ಹೊರೆಯನ್ನ ಇಳಿಸುವ ಸುಳಿವು ನೀಡಿದ್ದಾರೆ. ಒಂದು ಜೆಡಿಎಸ್ ಮುಖಂಡರು ಬಿಜೆಪಿ ಜೊತೆಗೆ ಹೋದ್ರೆ ನೂರಕ್ಕೆ ನೂರರಷ್ಟು ಜನತಾದಳದಲ್ಲಿರಲ್ಲ ಎಂದು ಹೇಳಿದ್ದಾರೆ.

    ನಾನು ಅಧಿಕಾರದ ಹಿಂದೆ ಹೋಗಿದ್ರೆ ತುಮಕೂರು ಜಿಲ್ಲೆಯ ಉಸ್ತುವಾರಿ ಆಗಿರುತ್ತಿದ್ದೆ. ನಾನು ವಾಮ ಮಾರ್ಗದಲ್ಲಿ ರಾಜಕಾರಣ ಮಾಡುವ ವ್ಯಕ್ತಿಯಲ್ಲ. ಜೆಡಿಎಸ್ ನಲ್ಲಿಯ ಕೆಲವರು ಬಿಜೆಪಿ ಜೊತೆ ಹೋಗುವ ಬಗ್ಗೆ ಮಾತನಾಡಿದ್ರೆ, ಇನ್ನು ಕೆಲವರು ಬೇಡ ಅಂತಿದ್ದಾರೆ. ಕುಮಾರಸ್ವಾಮಿ ಬಿಜೆಪಿ ಹೋಗುವ ನಿರ್ಧಾರವನ್ನು ನಮ್ಮದೇ ಪಕ್ಷದ ಕೆಲ ಶಾಸಕರು ವಿರೋಧ ಮಾಡುತ್ತಾರೆ. ಒಂದು ವೇಳೆ ನಾನು ಪಕ್ಷ ತೊರೆದ್ರೆ ಕುಮಾರಸ್ವಾಮಿ ಅವರು ತಲೆ ಕೆಡಿಸಿಕೊಳ್ಳಲ್ಲ. ಬಿಜೆಪಿ ಜೊತೆಗಿನ ಸ್ನೇಹದ ಬಗ್ಗೆ ಕೆಲ ಶಾಸಕರು ನನ್ನೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿಸಿದರು.

    ಇದೇ ವೇಳೆ ಕಾಂಗ್ರೆಸ್ ಮುಖಂಡ ರಾಜಣ್ಣ ಭೇಟಿಗೆ ಪ್ರತಿಕ್ರಿಯಿಸಿದ ಶಾಸಕರು, ಅವರು ಹಿರಿಯ ಮುಖಂಡರು. ರಾಜಣ್ಣ ಜೊತೆಗೆ ತುಂಬಾ ದಿನಗಳಿಂದ ಒಡನಾಟವಿದ್ದು, ಹಾಗಾಗಿ ಅವರ ಮನೆಗೆ ಬಂದಿದ್ದೇನೆ. ಕಾಂಗ್ರೆಸ್ ನಾಯಕರು ಯಾರು ನನ್ನನ್ನು ಸಂಪರ್ಕಿಸಿಲ್ಲ. ಸದ್ಯಕ್ಕೆ ನಾನು ಜೆಡಿಎಸ್ ಶಾಸಕನಾಗಿದ್ದು, ಪಕ್ಷ ಬಿಟ್ಟು ಹೋಗಲ್ಲ ಎಂದು ಸ್ಪಷ್ಟಪಡಿಸಿದರು.

    ನನಗೆ ರಾಜಕೀಯ ಬೇಸರವಾಗಿದ್ದು, ಪ್ರಸ್ತುತ ರಾಜಕೀಯ ವಿದ್ಯಾಮಾನಗಳ ಬಗ್ಗೆ ಅಸಮಾಧಾನ ಇದೆ. ಪ್ರಸ್ತುತ ರಾಜಕೀಯ ವ್ಯವಸ್ಥೆ ಅಸಹ್ಯಪಡುವಂತಿದ್ದು, ಹೀಗಾಗಿ ಎಲ್ಲೂ ಹೋಗದೇ ತೋಟದಲ್ಲಿದ್ದೇನೆ. ಬಿಜೆಪಿ ಜೊತೆಗಿನ ಸಖ್ಯ ಬಗ್ಗೆ ನೀವು ಕುಮಾರಸ್ವಾಮಿ ಅವರನ್ನ ಕೇಳಬೇಕು. ನಾನು ಜೆಡಿಎಸ್ ಶಾಸಕ, ಇಲ್ಲಿಯೇ ಇದ್ದೇನೆ. ಕುಮಾರಸ್ವಾಮಿ ಬಿಜೆಪಿ ಜೊತೆ ಹೋದ್ರೆ ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರ ಹಾಕಿದರು.

    ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡಿರುವುದು ಇಡೀ ದೇಶಕ್ಕೆ ಗೊತ್ತಿದೆ. ಸಿದ್ದರಾಮಯ್ಯನವರಿಗೆ ಈಗ ಜ್ಞಾನೋದಯವಾದಂತಿದೆ. ಸಿದ್ದರಾಮಯ್ಯರನ್ನ ಸೋಲಿಸಬೇಕೆಂದು ಬೆಂಬಲ ನೀಡಿದ್ದು ನಿಜ. ಅಕ್ಷರಶಃ ಸತ್ಯ, ಅದೊಂದೇ ಕ್ಷೇತ್ರವಲ್ಲ ಸುಮಾರು ಕ್ಷೇತ್ರಗಳಲ್ಲಿ ಬಿಜೆಪಿ ನಾವು ಒಡಂಬಡಿಕೆ ಮಾಡಿಕೊಂಡು ಚುನಾವಣೆಗೆ ಹೋಗಿದ್ದೀವಿ. ಇದು ಎಲ್ಲರಿಗೂ ಗೊತ್ತಿರುವ ವಿಚಾರ ಇದರಲ್ಲಿ ಹೊಸದೇನಿದೆ ಎಂದು ಎಸ್.ಆರ್.ಶ್ರೀನಿವಾಸ್ ಪ್ರಶ್ನೆ ಮಾಡಿದ್ದಾರೆ.

  • ಬಿಎಸ್‍ವೈರನ್ನು ಹಾಡಿ ಹೊಗಳಿದ ಜೆಡಿಎಸ್ ಶಾಸಕ

    ಬಿಎಸ್‍ವೈರನ್ನು ಹಾಡಿ ಹೊಗಳಿದ ಜೆಡಿಎಸ್ ಶಾಸಕ

    ತುಮಕೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ದಿಟ್ಟನಾಯಕರು. ಅವರು ಯಾವತ್ತೂ ವಚನ ಭ್ರಷ್ಟರಾಗಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ, ಜೆಡಿಸ್ ಶಾಸಕ ಎಸ್.ಆರ್.ಶ್ರೀನಿವಾಸನ್ ಹಾಡಿ ಹೊಗಳಿದ್ದಾರೆ.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಗೊಂದಲಗಳು ಎಲ್ಲ ಪಕ್ಷದಲ್ಲೂ ಇದ್ದದ್ದೇ. ಆದರೆ ಸಿಎಂ ಯಡಿಯೂರಪ್ಪ ಅವರು ಪಕ್ಷಾಂತರಿಗಳಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ. ಹೈಕಮಾಂಡ್ ಟೈಟ್ ಮಾಡಿದ್ದರಿಂದ ತಾತ್ಕಾಲಿಕವಾಗಿ ಅವರಿಗೆ ಹಿನ್ನಡೆಯಾಗಿರಬಹುದು. ಆದರೆ ಕೊಟ್ಟ ಆಶ್ವಾಸನೆಯನ್ನು ಸಿಎಂ ಎಷ್ಟೇ ಕಷ್ಟ ಬಂದರೂ ಈಡೇರಿಸುತ್ತಾರೆ ಎಂದು ಹೇಳಿದರು.

    ಸಿಎಂ ಯಡಿಯೂರಪ್ಪ ಅವರಲ್ಲಿ ದಿಟ್ಟ ನಾಯಕತ್ವ ಇದೆ. ಒಂದು ವೇಳೆ ಪಕ್ಷಾಂತರಿಗಳಿಗೆ ಸಚಿವ ಸ್ಥಾನ ಸಿಗದೇ ಇದ್ದರೆ ಅವರ ಜೀವ ಹೋಗಿಬಿಡುತ್ತದೆ. ಅವರಿಗೆ ಅವರೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.

    ಬೆಂಗಳೂರಿನಲ್ಲಿ ಗುರುವಾರ ನಡೆದ ಜೆಡಿಎಸ್ ಸಭೆಗೆ ಗೈರಾಗಿದಕ್ಕೆ ಸ್ಪಷ್ಟನೆ ಕೊಟ್ಟ ಎಸ್.ಆರ್.ಶ್ರೀನಿವಾಸ್, ಜೆಡಿಎಸ್ ಕಾರ್ಯಕ್ರಮ ಯಾವತ್ತೂ ತಡವಾಗಿ ಆರಂಭವಾಗುತ್ತದೆ. ಪಕ್ಷದ ನಾಯಕರು ಬೆಳಗ್ಗೆ 9:30 ಗಂಟೆಗೆ ಕಾರ್ಯಕ್ರಮಕ್ಕೆ ಬರುವಂತೆ ಹೇಳಿದರೆ ಕಾರ್ಯಕರ್ತರು 11:30 ಗಂಟೆಗೆ ಬರುತ್ತಾರೆ. ಹಾಗಾಗಿ ನಾನು ಲೇಟಾಗಿ ಹೋಗಿದ್ದೆ. ಅಷ್ಟರಲ್ಲಿ ಕಾರ್ಯಕ್ರಮ ಮುಗಿದಿತ್ತು. ವೇದಿಕೆ ಮೇಲೆ ಹತ್ತಲಿಲ್ಲ. ಹಾಗಂತ ನನಗೆ ಪಕ್ಷದ ವಿರುದ್ಧ ಯಾವುದೇ ಅಸಮಾಧಾನ ಇಲ್ಲ ಎಂದು ಸ್ಪಷ್ಟನೆ ನೀಡಿದರು.

  • ಬಿಜೆಪಿಯನ್ನು ಹಾಡಿ ಹೊಗಳಿದ ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್

    ಬಿಜೆಪಿಯನ್ನು ಹಾಡಿ ಹೊಗಳಿದ ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್

    – ಕಮಲದಲ್ಲಿ ಬಿಗಿಯಾದ ಹೈಕಮಾಂಡ್ ಇದೆ
    – ನಾನು ಎಚ್‍ಡಿಕೆಯ ಆಪ್ತ ಎಂದು ಹೇಳಿದ್ದು ಯಾವಾಗ?
    – ಮಾಜಿ ಸಿಎಂ ವಿರುದ್ಧ ಶ್ರೀನಿವಾಸ್ ಅಸಮಾಧಾನ

    ತುಮಕೂರು: ಮಾಜಿ ಸಚಿವ ಜಿ.ಟಿ.ದೇವೇಗೌಡ ಆಯ್ತು, ಈಗ ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್ ಶ್ರೀನಿವಾಸ್ ಅವರು ಬಿಜೆಪಿಯನ್ನು ಹಾಡಿ ಹೊಗಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು ಬಿಜೆಪಿ ಸರ್ಕಾರಕ್ಕೆ ಫುಲ್ ಅಂಕವನ್ನು ನೀಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅವಧಿ ಪೂರೈಸುವುದು ನೂರಕ್ಕೆ ನೂರು ಖಚಿತ ಎಂದರು. ನಮ್ಮ ಪಕ್ಷದ ರೀತಿ ಬಿಜೆಪಿಯಲ್ಲಿ ಅತೃಪ್ತರು ಕಿತ್ತಾಡುವುದು, ರಾಜೀನಾಮೆ ನೀಡುವುದು ನಡೆಯಲ್ಲ. ಬಿಜೆಪಿಯವರಿಗೆ ಅವರದ್ದೇ ಆದ ಸಿದ್ದಾಂತ, ಶಿಸ್ತು ಇದೆ. ಅವರ ಹೈಕಮಾಂಡ್ ಬಿಗಿಯಾಗಿದೆ. ಆದ್ದರಿಂದ ಬಿಜೆಪಿ ಸಂಪೂರ್ಣ ಅವಧಿ ಮಗಿಸಲಿದೆ. ನಾನು ಎಲ್ಲವನ್ನೂ ತಿಳಿದುಕೊಂಡೇ ಹೇಳುತ್ತಿದ್ದೇನೆ. ಬೇರೆ ಪಕ್ಷಕ್ಕೂ ಬಿಜೆಪಿಗೂ ಹೋಲಿಕೆ ಮಾಡಬೇಡಿ ಎಂದು ಬಿಜೆಪಿ ಪರ ಬ್ಯಾಟಿಂಗ್ ಮಾಡಿದರು. ಇದನ್ನೂ ಓದಿ:ಪಕ್ಷ ತೊರೆಯಲು ಸಿದ್ಧರಾದ 6 ಜೆಡಿಎಸ್ ಶಾಸಕರು

    ಬಿಗಿಯಾದ ಹೈ ಕಮಾಂಡ್ ಇರುವುದರಿಂದ ಅವರು ಹೇಳಿದ ರೀತಿಯಲ್ಲಿ ರಾಜ್ಯದಲ್ಲಿ ನಡೆಯುತ್ತಿದೆ. ಆರಂಭದಲ್ಲಿ ಅಸಮಾಧಾನ ಹೊರಹಾಕಿದ್ದ ಸಿ.ಟಿ.ರವಿ, ಉಮೇಶ್ ಕತ್ತಿ, ಆರ್ ಅಶೋಕ್ ಈಗ ಬಾಲ ಮುದುಡಿಕೊಂಡು ಸುಮ್ಮನಾಗಿಲ್ಲವೇ? ಹೀಗಾಗಿ ಬಿಜೆಪಿ ಸರ್ಕಾರಕ್ಕೆ ಏನೂ ಆಗುವುದಿಲ್ಲ ಎಂದರು. ಜೆಡಿಎಸ್ ನಾಯಕನ ಈ ಹೇಳಿಕೆ ಈಗ ತೀವ್ರ ಸಂಚಲನ ಮೂಡಿಸಿದ್ದು, ಜಿ.ಟಿ ದೇವೇಗೌಡರ ರೀತಿ ಬಿಜೆಪಿಯತ್ತ ಶ್ರೀನಿವಾಸ್ ಅವರು ಕೂಡ ಮುಖ ಮಾಡುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ.

    ಇತ್ತ ಬಿಜೆಪಿಯನ್ನು ಹೊಗಳುತ್ತ ಅತ್ತ ಜೆಡಿಎಸ್ ಪಕ್ಷದ ವಿರುದ್ಧ ಮತ್ತೆ ಶ್ರೀನಿವಾಸ್ ಅವರು ಅಸಮಾಧಾನವನ್ನು ಹೊರಹಾಕಿದ್ದಾರೆ. ಪಕ್ಷದ ನಡವಳಿಕೆಯಿಂದ ನನಗೆ ಬೇಜಾರಾಗಿದೆ. ಮುಂದಿನ ದಿನದಲ್ಲಿ ಎಲ್ಲವನ್ನು ಹೇಳುತ್ತೇನೆ. ತನ್ನ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೊಟ್ಟಿಲ್ಲ. ಯಾಕೆ ಕೊಟ್ಟಿಲ್ಲ ಎಂದು ಕುಮಾರಸ್ವಾಮಿಗೆ ಗೊತ್ತು. ಮೈತ್ರಿ ಸರ್ಕಾರ ಉಳಿಸಿಕೊಳ್ಳಬಹುದಿತ್ತು. ಆದರೆ ಎಚ್‍ಡಿಕೆ ಅವರ ನಡವಳಿಕೆ ಮುಖ್ಯವಾಗಿತ್ತು. ಆ ಸಂದರ್ಭದಲ್ಲಿ ಅವರು ಸರಿಯಾಗಿ ನಡೆದುಕೊಂಡಿಲ್ಲ. ಹಾಗಂತ ದೇವೇಗೌಡರು ಪಕ್ಷ ಕಟ್ಟುವ ಕೆಲಸ ನಿರಂತರ ಮಾಡುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ:ಅತ್ಯಂತ ಕೆಳಮಟ್ಟದ ಮಾನಸಿಕತೆ ಇರುವ ವ್ಯಕ್ತಿ ಸಿಎಂ ಆಗಿದ್ದಕ್ಕೆ ಕನಿಕರ ಆಗ್ತಿದೆ – ಸುರೇಶ್‍ಕುಮಾರ್

    ಕುಮಾರಸ್ವಾಮಿ ಅವರ ಬಗ್ಗೆ ನಾನು ಏನು ಹೇಳುವುದಿಲ್ಲ. ಅವರು ದೊಡ್ಡ ನಾಯಕರು ಎಂದು ವ್ಯಂಗ್ಯವಾಡಿದರು. ಈ ಹೇಳಿಕೆಗಳ ಮೂಲಕ ಪರೋಕ್ಷವಾಗಿ ಕುಮಾರಸ್ವಾಮಿ ಅವರ ನಡವಳಿಕೆ ಸರಿ ಇಲ್ಲ ಎಂದು ಶ್ರೀನಿವಾಸ್ ಅಸಮಾಧಾನ ಹೊರಹಾಕಿದ್ದಾರೆ. ಹಾಗೆಯೇ ನಾನು ಕುಮಾರಸ್ವಾಮಿ ಅವರ ಆಪ್ತ ಎಂದು ಯಾರು ಹೇಳಿದ್ದು? ನನ್ನ ಮನಸ್ಸಿನಲ್ಲಿರೋದು ಏನು ಎಂದು ನಿಮಗೆ ಹೇಗೆ ಗೊತ್ತಾಗುತ್ತದೆ? ಎದುರಿಗೆ ನಗುತ್ತಾ ಮಾತಾನಾಡುತ್ತೇವೆ, ಸಿಕ್ಕಿದಾಗಲೆಲ್ಲಾ ಚೆನ್ನಾಗಿ ಮಾತಾನಾಡುತ್ತೇವೆ ಎಂದರೆ ಅವರ ಬಗ್ಗೆ ಒಳ್ಳೆ ಅಭಿಪ್ರಾಯ ಇದೆ ಎಂದು ಹೇಗೆ ಹೇಳುತ್ತೀರಾ ಎಂದು ಪ್ರಶ್ನಿಸುವ ಮೂಲಕ ತಾವು ಕುಮಾರಸ್ವಾಮಿಗೆ ಆಪ್ತ ಅಲ್ಲ ಎಂದು ಶ್ರೀನಿವಾಸ್ ಹೇಳಿದ್ದಾರೆ. ಹಾಗೆಯೇ ಕುಮಾರಸ್ವಾಮಿ ಒಳ್ಳೊಳ್ಳೆ ಸಚಿವ ಸ್ಥಾನ ಕೊಟ್ಟಿದ್ದರು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ:ನಾನು ಎಲ್ ಬೋರ್ಡ್ ಎಂದು ತಿಳಿಯಬೇಡಿ: ಎಚ್‍ಡಿಕೆಗೆ ಸೋಮಣ್ಣ ಟಾಂಗ್

    ನಾನು 7 ಜನರೊಂದಿಗೆ ಬಿಜೆಪಿಗೆ ಹೋಗುತ್ತೇನೆ ಅನ್ನುವ ವದಂತಿ ಇದೆ. ಇದು ಸುಳ್ಳು ಸುದ್ದಿ, ಈ ಅವಧಿಯಲ್ಲಿ ಯಾವ ಕಾರಣಕ್ಕೂ ಪಕ್ಷ ತೊರೆಯಲ್ಲ. ವಿಧಾನಸಭೆಯ ಈ ಅವಧಿಯವರೆಗೂ ಪಕ್ಷದಲ್ಲಿ ಇರುತ್ತೇನೆ ಎಂದು ಹೇಳಿ ಬಂದಿದ್ದೇನೆ. ಈ ಸಮಯದಲ್ಲಿ ಪಕ್ಷ ಬಿಡುವುದಿಲ್ಲ ಎಂದು ಕುಮಾರಸ್ವಾಮಿ ಅವರಿಗೆ ಹೇಳಿದ್ದೇನೆ. ಅವಧಿ ಬಳಿಕ ರಾಜಕೀಯ ನಿವೃತ್ತಿ ಪಡೆಯಬೇಕು ಎಂದುಕೊಂಡಿದ್ದೇನೆ ಎಂದು ತಿಳಿಸಿದರು.

  • ಮಠಕ್ಕೆ 1 ಕೋಟಿ ಬಿಟ್ರೆ ನನ್ನ ಕ್ಷೇತ್ರಕ್ಕೆ ಏನೂ ಘೋಷಣೆಯಾಗಿಲ್ಲ- ಎಚ್‍ಡಿಕೆ ವಿರುದ್ಧ ಜೆಡಿಎಸ್ ಸಚಿವ ಸಿಟ್ಟು

    ಮಠಕ್ಕೆ 1 ಕೋಟಿ ಬಿಟ್ರೆ ನನ್ನ ಕ್ಷೇತ್ರಕ್ಕೆ ಏನೂ ಘೋಷಣೆಯಾಗಿಲ್ಲ- ಎಚ್‍ಡಿಕೆ ವಿರುದ್ಧ ಜೆಡಿಎಸ್ ಸಚಿವ ಸಿಟ್ಟು

    ತುಮಕೂರು: ಬಜೆಟ್‍ನಲ್ಲಿ ಗುಬ್ಬಿ ಕ್ಷೇತ್ರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಅನುದಾನ ಘೋಷಣೆ ಆಗದಿದ್ದುದರಿಂದ ಸಣ್ಣಕೈಗಾರಿಕಾ ಸಚಿವ ಎಸ್.ಆರ್ ಶ್ರೀನಿವಾಸ್ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಮುನಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ವಿವಿಧ ಯೋಜನೆಗಳಿಗೆ ಸುಮಾರು 400 ಕೋಟಿ ರೂ ಬೇಡಿಕೆ ಇಟ್ಟಿದ್ದೆ. ಆದ್ರೆ ಬಸವಬೃಂಗ ಮಠಕ್ಕೆ 1 ಕೋಟಿ ಅನುದಾನ ಘೋಷಣೆ ಮಾಡಿರುವುದು ಬಿಟ್ಟರೆ ಇನ್ನು ಯಾವುದೇ ಘೋಷಣೆ ಆಗಿಲ್ಲ. ಇದರಿಂದ ನನಗೆ ನೋವಾಗಿದೆ. ಮನಸ್ಸಿನ ಒಳಗಡೆ ತುಂಬಾ ನೋವಿದೆ ಎಂದು ಹೇಳಿದ್ದಾರೆ.

    ಹೇಮಾವತಿಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಬೇಡಿಕೆ ಇಟ್ಟಿದ್ದೆ. ಅದೂ ಕೈಗೂಡಲಿಲ್ಲ. ಇದರ ಪರಿಣಾಮ ನಾನು ಅನುಭಿಸಬೇಕಾಗುತ್ತದೆ. ಮುಂದಿನ ದಿನದಲ್ಲಿ ಅದರ ಪರಿಣಾಮ ಜನ ನನಗೆ ಕಲಿಸ್ತಾರೆ ಎಂದು ಸಿಎಂ ವಿರುದ್ಧ ಕಿಡಿಕಾರಿದ್ದಾರೆ.

    ಸಿಎಂ ಕರೆ ಸ್ವೀಕರಿಸಿಲ್ಲ ಅನ್ನೋದು ಸುಳ್ಳು. ನಿನ್ನೆ ಸಿಎಂ ಕರೆದ ಮೀಟಿಂಗ್‍ಗೆ ಹೋಗಲು ಸಾಧ್ಯವಾಗಲಿಲ್ಲ. ಮುಂದಿನ ದಿನದಲ್ಲಿ ಸಿಎಂ ನನ್ನ ಎಲ್ಲಾ ಬೇಡಿಕೆ ಈಡೇರಿಸ್ತಾರೆ ಅನ್ನೊ ಭರವಸೆ ಇದೆ. ಕ್ಷೇತ್ರದಲ್ಲಿ ಕೆಲಸ ಇತ್ತು ಹಾಗಾಗಿ ಹೋಗಲು ಸಾಧ್ಯವಾಗಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಎಂಗೆ ಹಿಂಸೆ ಕೊಡುವ ವ್ಯಕ್ತಿ ನಾನಲ್ಲ: ಸಚಿವ ಎಸ್.ಆರ್ ಶ್ರೀನಿವಾಸ್

    ಸಿಎಂಗೆ ಹಿಂಸೆ ಕೊಡುವ ವ್ಯಕ್ತಿ ನಾನಲ್ಲ: ಸಚಿವ ಎಸ್.ಆರ್ ಶ್ರೀನಿವಾಸ್

    ತುಮಕೂರು: ಸಣ್ಣ ಕೈಗಾರಿಕಾ ಖಾತೆ ನನಗೆ ತೃಪ್ತಿ ತಂದಿದೆ. ಸೋಮವಾರ ಅಧಿಕಾರಗಳ ಸಭೆ ಕರೆದು ಇಲಾಖೆಗೆ ಬಗ್ಗೆ ತಿಳಿದುಕೊಳ್ಳುತ್ತೇನೆ ಅಂತ ಸಚಿವ ಎಸ್.ಆರ್.ಶ್ರೀನಿವಾಸ್ ಹೇಳಿದ್ದಾರೆ.

    ಸಣ್ಣ ಕೈಗಾರಿಕಾ ಸಚಿವರಾಗಿ ಆಯ್ಕೆಯಾದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ವಿದ್ಯಾವಂತ ನಿರುದ್ಯೋಗಿ ಯುವಕರು ಸಣ್ಣ ಕೈಗಾರಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡುವ ಯೋಚನೆ ಇದೆ. ಅತೃಪ್ತರ ಸಾಲಿಗೆ ಸೇರುವ ವ್ಯಕ್ತಿ ನಾನಲ್ಲ. ಸಿಎಂ ಕುಮಾರಸ್ವಾಮಿಗೆ ಹಿಂಸೆ ಕೊಡುವ ವ್ಯಕ್ತಿ ನಾನಲ್ಲ. ಕೊಟ್ಟಿರೋ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಅಂತ ತಿಳಿಸಿದ್ರು.

    ಶೈಕ್ಷಣಿಕ ಅರ್ಹತೆ ಗಿಂತ ಅನುಭವದ ಆಧಾರದ ಮೇಲೆ ಸಚಿವರು ಖಾತೆ ನಿಭಾಯಿಸ್ತಾರೆ. ಆದರೂ ಸಚಿವ ಸ್ಥಾನಕ್ಕೆ ಶೈಕ್ಷಣಿಕ ಅರ್ಹತೆ ಮಾನದಂಡ ಮಾಡಬೇಕು. ಕೇಂದ್ರ ಸರ್ಕಾರ ಶೈಕ್ಷಣಿಕ ಅರ್ಹತೆ ನಿಗದಿ ಮಾಡಬೇಕು. ಎಲ್ಲಾ ರಂಗದಲ್ಲೂ ಶೈಕ್ಷಣಿಕ ಅರ್ಹತೆ ಪರಿಗಣಿಸುವಂತೆ ರಾಜಕೀಯದಲ್ಲೂ ಪರಿಗಣಿಸಬೇಕು. ಮೆರಿಟ್ ಇದ್ದವರಿಗೆ ಅವಕಾಶ ಸಿಕ್ಕರೆ ಸಮಾಜ ಬದಲಾವಣೆಗೆ ಸಹಕಾರಿ ಅಂದ್ರು.