Tag: S R Hiremath

  • ನೈತಿಕತೆ ಇದ್ದರೆ ಸಿದ್ದರಾಮಯ್ಯ ಮುಡಾ ಸೈಟ್ ವಾಪಸ್ ಕೊಡಲಿ: ಎಸ್.ಆರ್.ಹಿರೇಮಠ್

    ನೈತಿಕತೆ ಇದ್ದರೆ ಸಿದ್ದರಾಮಯ್ಯ ಮುಡಾ ಸೈಟ್ ವಾಪಸ್ ಕೊಡಲಿ: ಎಸ್.ಆರ್.ಹಿರೇಮಠ್

    ಧಾರವಾಡ: ಸಿದ್ದರಾಮಯ್ಯ (Siddaramaiah) ಅವರು ಕೂಡಲೇ ಮುಡಾ ಸೈಟ್‌ಗಳನ್ನು ವಾಪಸ್ ಕೊಡಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ (S R Hiremath) ಹೇಳಿದರು.

    ಧಾರವಾಡದಲ್ಲಿ (Dharwad)  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ನೈತಿಕತೆ ಎನ್ನುವುದು ಇದ್ದರೆ ಕೂಡಲೇ ಅವರು ಸೈಟ್‌ಗಳನ್ನು ವಾಪಸ್ ಕೊಡಬೇಕು. ಮುಡಾ ಸೈಟ್ (MUDA) ಸಿದ್ದರಾಮಯ್ಯನವರ ಹೆಸರಿನಲ್ಲಿಲ್ಲ, ಅವರ ಪತ್ನಿ ಹೆಸರಿನಲ್ಲಿದೆ. ಆದ ಕಾರಣ ಅವರು ಸೈಟ್‌ಗಳನ್ನು ವಾಪಸ್ ಕೊಡಬೇಕು ಎಂದು ತಿಳಿಸಿದರು.ಇದನ್ನೂ ಓದಿ: ರಾಜ್ಯದಲ್ಲಿ ಏನಾದರೂ ಗಲಾಟೆಯಾದರೆ ಅದಕ್ಕೆ ರಾಜ್ಯಪಾಲರೇ ಹೊಣೆ – ಜಮೀರ್ ಅಹ್ಮದ್ ಎಚ್ಚರಿಕೆ

    ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೋ ಅಥವಾ ಬಿಡಬೇಕೋ ಎನ್ನುವುದು ರಾಜಕೀಯ ನಿರ್ಧಾರ. ಆದರೆ ಸಿದ್ದರಾಮಯ್ಯ ಅವರು ರಾಜೀನಾಮೆ ಬಗ್ಗೆ ನಮ್ಮ ಪಕ್ಷ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ. ಸಿಎಂ ಅವರು ಮುಡಾದಲ್ಲಿ ನನ್ನ ಸಹಿ ಎಲ್ಲೂ ಇಲ್ಲ ಎಂದು ಹೇಳುವ ಬದಲು ಸೈಟ್‌ಗಳನ್ನು ವಾಪಸ್ ಕೊಡಬೇಕು, ರಾಜಕೀಯದಲ್ಲಿ ಇರುವವರಿಗೆ ಜನರ ಬಗ್ಗೆ ಚಿಂತೆಯೇ ಇಲ್ಲದಂತಾಗಿದೆ. ಸಚಿವರು ಇರುವಾಗಲೇ ಅವರ ಗಮನಕ್ಕೆ ಬಾರದೇ ಹಗರಣ ಆಗುತ್ತದೆ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

    ಸಿಎಂ ಅವರು ಮುಡಾದಲ್ಲಿ ನನ್ನ ಸಹಿ ಎಲ್ಲೂ ಇಲ್ಲ ಎಂದು ಹೇಳುವ ಬದಲು ಸೈಟ್‌ಗಳನ್ನು ವಾಪಸ್ ಕೊಡಬೇಕು, ರಾಜಕೀಯದಲ್ಲಿ ಇರುವವರಿಗೆ ಜನರ ಬಗ್ಗೆ ಚಿಂತೆಯೇ ಇಲ್ಲದಂತಾಗಿದೆ. ಸಚಿವರು ಇರುವಾಗಲೇ ಅವರ ಗಮನಕ್ಕೆ ಬಾರದೇ ಹಗರಣ ಆಗುತ್ತದೆ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

    ಇನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನಾ ಖಾವೋಂಗಾ ನಾ ಖಾನೆದೂಂಗಾ ಎಂದು ಹೇಳಿದ್ದರು. ಆದರೆ ರಾಜ್ಯದ ಗುತ್ತಿಗೆದಾರರು ರಾಜ್ಯ ಬಿಜೆಪಿ (BJP) ನಾಯಕರ ವಿರುದ್ಧವೇ ಮೋದಿ ಅವರಿಗೆ ಪತ್ರ ಬರೆದಿದ್ದರು. ಬಿಜೆಪಿಯಲ್ಲಿ ಎಲ್ಲಾ ಕೊಳೆತಿದೆ. ಮೊದಲು ಅದನ್ನು ಅವರು ಸ್ವಚ್ಛ ಮಾಡಿಕೊಳ್ಳಲಿ. ಆಗ ಮಾತ್ರ ಬಿಜೆಪಿಗೆ ಭವಿಷ್ಯ ಇದೆ. ಬಿಜೆಪಿ ತನ್ನ ನಾಟಕ ಬಿಟ್ಟು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ನನ್ನ ರಾಜೀನಾಮೆ ಕೇಳೋ ಅಶೋಕ್ ಮೊದಲು ವಾಸ್ತವಾಂಶ ತಿಳಿಯಲಿ: ಸಿದ್ದರಾಮಯ್ಯ

    ಮುಡಾ ವಿಷಯದಲ್ಲಿ ಬಿಜೆಪಿಯವರು ಸಿಎಂ ಅವರ ರಾಜೀನಾಮೆ ಕೇಳುತ್ತಿದ್ದಾರೆ. ಈ ಕೆಸರೆರಚಾಟ ಬೇಡ, ಬಿಜೆಪಿಯವರು ಏನು ಸಾಚಾನಾ, ಗಣಿ ಭ್ರಷ್ಟಾಚಾರದಲ್ಲಿ ತೊಡಗಿದವರು, ವಾಲ್ಮೀಕಿ ನಿಗಮದ ಹಗರಣದಲ್ಲಿ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ ಮೇಲೆ ಶೇ.40 ಕಮೀಷನ್ ಆರೋಪ ಮಾಡಿ ಕಾಂಗ್ರೆಸ್‌ನವರು (Congress) ಅಧಿಕಾರಕ್ಕೆ ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

  • ಜನಾರ್ದನ ರೆಡ್ಡಿ ಚುನಾವಣೆಗೆ ನಿಂತರೆ ಗೆಲ್ಲದಂತೆ ಜನ ನೋಡಿಕೊಳ್ಬೇಕು: ಎಸ್.ಆರ್.ಹಿರೇಮಠ

    ಜನಾರ್ದನ ರೆಡ್ಡಿ ಚುನಾವಣೆಗೆ ನಿಂತರೆ ಗೆಲ್ಲದಂತೆ ಜನ ನೋಡಿಕೊಳ್ಬೇಕು: ಎಸ್.ಆರ್.ಹಿರೇಮಠ

    ರಾಯಚೂರು: ಮಹಾಭ್ರಷ್ಟ ಜನಾರ್ದನ ರೆಡ್ಡಿ ಮತ್ತೆ ಜನಪ್ರತಿನಿಧಿಯಾಗಬಾರದು, ಚುನಾವಣೆ ಎದುರಿಸಿದರೆ ಜನರೇ ತಕ್ಕ ಪಾಠ ಕಲಿಸಬೇಕು ಅಂತ ಸಾಮಾಜಿಕ ಹೋರಾಟಗಾರ ಎಸ್.ಆರ್ ಹಿರೇಮಠ ಹೇಳಿದ್ದಾರೆ.

    ರಾಯಚೂರಿನಲ್ಲಿ ಮಾತನಾಡಿದ ಎಸ್.ಆರ್.ಹಿರೇಮಠ ಜನಾರ್ದನ ರೆಡ್ಡಿ ಭ್ರಷ್ಟಾಚಾರ ಮಾಡಿದ ಹಣವನ್ನ ಹಿಂಪಡೆಯುವ ಕೆಲಸ ಇನ್ನೂ ಆಗಿಲ್ಲ. ರೆಡ್ಡಿಯ 40 ಸಾವಿರ ಕೋಟಿ ರೂಪಾಯಿ ಅಕ್ರಮ ಸಂಪಾದನೆ ಹಣ ವಾಪಸ್ ಬರಬೇಕು. ಅದರ ಬಗ್ಗೆ ಸರ್ಕಾರ, ಜನ ತಲೆಕೆಡಿಸಿಕೊಂಡಿಲ್ಲ, ಕೇಸ್‍ಗಳು ಸರಿಯಾಗಿ ನಡೆಯುತ್ತಿಲ್ಲ. ಭ್ರಷ್ಟ, ಅನೈತಿಕ ವ್ಯಕ್ತಿಗೆ ಜನರೇ ಪಾಠ ಕಲಿಸಬೇಕು. ಇರುವ ಒಂದು ಜೀವನವನ್ನ ಸಾರ್ಥಕತೆ ಕಡೆ ಒಯ್ಯುವ ಕೆಲಸವನ್ನ ಜನಾರ್ದನ ರೆಡ್ಡಿ ಮಾಡಬೇಕು ಎಂದರು. ಇದನ್ನೂ ಓದಿ: ಮಹಿಳೆ ಬ್ಲಾಕ್‍ಮೇಲ್ ಮಾಡ್ತಿದ್ದು, ನನ್ನದೇನೂ ತಪ್ಪಿಲ್ಲ: ಶಾಸಕ ತೇಲ್ಕೂರ್ ಕಣ್ಣೀರು

    ಇನ್ನೂ ಮಾರ್ಚ್ 1 ರಿಂದ ರಾಜ್ಯ ಸರ್ಕಾರದ 3 ಕರಾಳ ಕಾಯ್ದೆ ವಾಪಸ್ ಹಾಗೂ ಎಂಎಸ್‍ಪಿಗೆ ಲೀಗಲ್ ಗ್ಯಾರೆಂಟಿಗಾಗಿ ಜನಾಂದೋಲನ ಮಹಾ ಮೃತ್ರಿಯಿಂದ ಯಾತ್ರೆ ನಡೆಸುವುದಾಗಿ ಹೇಳಿದರು. ರೈತರಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ಎಪಿಎಂಸಿ ತಿದ್ದು ಪಡಿ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಬೇಕು, ಕೃಷಿ ಕಾಯ್ದೆಯನ್ನು ಹಿಂಪಡೆಯಬೇಕು. ಈ ಮೂರು ವಿಚಾರಗಳನ್ನು ಸರ್ಕಾರಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ಯಾತ್ರೆ ನಡೆಸಲಾಗುವುದು ಎಂದು ತಿಳಿಸಿದರು.

    ಬಸವಕಲ್ಯಾಣದಿಂದ ಬೆಂಗಳೂರು, ಮಲೆಮಹದೇಶ್ವರ ಬೆಟ್ಟದಿಂದ ಬೆಂಗಳೂರಿಗೆ ಯಾತ್ರೆ ನಡೆಸುವುದಾಗಿ ಎಸ್.ಆರ್.ಹಿರೇಮಠ ಹೇಳಿದ್ದಾರೆ.

  • ರಾಜ್ಯ ಸರ್ಕಾರದ ವಿರುದ್ಧ ಜನಾಂದೋಲನ ಯಾತ್ರೆ: ಎಸ್.ಆರ್.ಹಿರೇಮಠ

    ರಾಜ್ಯ ಸರ್ಕಾರದ ವಿರುದ್ಧ ಜನಾಂದೋಲನ ಯಾತ್ರೆ: ಎಸ್.ಆರ್.ಹಿರೇಮಠ

    ರಾಯಚೂರು: ಕೇಂದ್ರ ಸರ್ಕಾರ ಹಿಂಪಡೆದಂತೆ ರಾಜ್ಯ ಸರ್ಕಾರ ಕೂಡ ಕೃಷಿ ಕಾಯ್ದೆ ಹಿಂಪಡೆಯಬೇಕು. ಸರ್ಕಾರಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಫೆಬ್ರವರಿಯಲ್ಲಿ ಜನಾಂದೋಲ ಯಾತ್ರೆ ನಡೆಸುವುದಾಗಿ ಸಾಮಾಜಿಕ ಕಾರ್ಯಕರ್ತ ಎಸ್.ಆರ್‌.ಹಿರೇಮಠ ಹೇಳಿದ್ದಾರೆ.

    ರಾಯಚೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ಎಪಿಎಂಸಿ ತಿದ್ದುಪಡಿ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆ ಹಾಗೂ ಕೃಷಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸೋಂಕು ಕಡಿಮೆ ಇದ್ದಾಗ ಕರ್ಫ್ಯೂ ವಿಧಿಸಿ, ಹೆಚ್ಚಾದಾಗ ಕರ್ಫ್ಯೂ ಹಿಂಪಡೆದಿದ್ದಾರೆ: ಇದನ್ನೂ ಒದಿ: ಚಾಮುಂಡೇಶ್ವರಿಯಿಂದ ಓಡಿಸಲಾಗಿದೆ, ಬಾದಾಮಿಯಿಂದ ಓಡಿಸುವುದು ಬಾಕಿ ಇದೆ: ಸಿದ್ದು ವಿರುದ್ಧ ಹೆಚ್‌ಡಿಕೆ ವಾಗ್ದಾಳಿ

    ಈ ಮೂರು ವಿಚಾರಗಳನ್ನು ಸರ್ಕಾರಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ಯಾತ್ರೆ ನಡೆಸಲಾಗುವುದು. ಮುಂದಿನ ತಿಂಗಳು ಬಸವಕಲ್ಯಾಣದಿಂದ ಬೆಂಗಳೂರು, ಮಲೆಮಹದೇಶ್ವರದಿಂದ ಬೆಂಗಳೂರಿಗೆ ಯಾತ್ರೆ ನಡೆಸುವುದಾಗಿ ತಿಳಿಸಿದ್ದಾರೆ.

    ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ಹಿಂಪೆಡೆಯುವಂತೆ ದೆಹಲಿ ಗಡಿ ಭಾಗಗಳಲ್ಲಿ ರೈತ ಸಂಘಟನೆಗಳು ಸತತ ಒಂದು ವರ್ಷ ಪ್ರತಿಭಟನೆ ನಡೆಸಿದವು. ರೈತರ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯಿತು. ಪ್ರತಿಭಟನೆ ಹಿಂಪಡೆದ ರೈತರು, ಕೇಂದ್ರ ಮುಂದೆ ಮತ್ತಷ್ಟು ಬೇಡಿಕೆಗಳನ್ನಿಟ್ಟಿದ್ದಾರೆ.

  • ಬಿಡದಿಯಲ್ಲಿ ಎಸ್.ಆರ್ ಹಿರೇಮಠ್, ರವಿಕೃಷ್ಣಾ ರೆಡ್ಡಿ ಮೇಲೆ ಮೊಟ್ಟೆ ಏಟು

    ಬಿಡದಿಯಲ್ಲಿ ಎಸ್.ಆರ್ ಹಿರೇಮಠ್, ರವಿಕೃಷ್ಣಾ ರೆಡ್ಡಿ ಮೇಲೆ ಮೊಟ್ಟೆ ಏಟು

    – ಎಚ್‍ಡಿಕೆ ಬೆಂಬಲಿಗರಿಂದ ಕೃತ್ಯ ಎಂದು ಆರೋಪ
    – ಕಾರಿನ ಚಕ್ರದ ಗಾಳಿ ತೆಗೆದ ಬೆಂಬಲಿಗರು

    ರಾಮನಗರ: ಗೋಮಾಳ ಜಮೀನು ಒತ್ತುವರಿ ಸಂಬಂಧ ಗ್ರಾಮಸ್ಥರಿಂದ ಮಾಹಿತಿ ಪಡೆಯಲು ತೆರಳಿದ್ದ ಸಾಮಾಜಿಕ ಕಾರ್ಯಕರ್ತ ಎಸ್.ಆರ್ ಹಿರೇಮಠ್ ಹಾಗೂ ಅವರ ಬೆಂಬಲಿಗರಿಗೆ ಕೋಳಿ ಮೊಟ್ಟೆಯಿಂದ ಹೊಡೆದು ಹಲ್ಲೆಗೆ ಯತ್ನಿಸಿರುವ ಘಟನೆ ರಾಮನಗರ ತಾಲೂಕಿನ ಬಿಡದಿ ಸಮೀಪದ ಕೇತಗಾನಹಳ್ಳಿಯಲ್ಲಿ ನಡೆದಿದೆ.

    ತಮ್ಮ ಮೇಲೆ ಹಲ್ಲೆಗೆ ಎಚ್‍ಡಿ ಕುಮಾರಸ್ವಾಮಿ ಅವರ ಬೆಂಬಲಿಗರೇ ಕಾರಣ ಸಾಮಾಜಿಕ ಕಾರ್ಯಕರ್ತ ಎಸ್.ಆರ್ ಹಿರೇಮಠ್, ಸ್ವರಾಜ್ ಪಕ್ಷದ ರವಿಕೃಷ್ಣಾ ರೆಡ್ಡಿ ಆರೋಪಿಸಿದ್ದಾರೆ.

    ಎಸ್.ಆರ್ ಹಿರೇಮಠ್, ರವಿಕೃಷ್ಣಾ ರೆಡ್ಡಿ ಹಾಗೂ ಅವರ ಬೆಂಬಲಿಗರು ಕೇತಗಾನಹಳ್ಳಿಗೆ ಭೇಟಿ ನೀಡಿದ್ದಾರೆ. ಗ್ರಾಮದ ದಲಿತರೊಬ್ಬರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸುವ ವೇಳೆ ಬಂದ ಕೆಲವು ಗ್ರಾಮಸ್ಥರು ಹಾಗೂ ಎಚ್‍ಡಿಕೆ ಬೆಂಬಲಿಗರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಹಿರೇಮಠ್ ದೂರಿದ್ದಾರೆ.

    ಕೇತಗಾನಹಳ್ಳಿ ಗ್ರಾಮದಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಮಾಜಿ ಸಚಿವ ಡಿ.ಸಿ ತಮ್ಮಣ್ಣ ಹಾಗೂ ಅವರ ಸಂಬಂಧಿಕರು ಬಿಡದಿ ಸಮೀಪದಲ್ಲಿ ಒಟ್ಟು 196 ಎಕರೆ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದು, ಹೈಕೋರ್ಟ್ ನಲ್ಲೂ ಸಹ ಕೇಸ್ ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ ಗ್ರಾಮದಲ್ಲಿ ಭೂಮಿ ಕಳೆದುಕೊಂಡ ಜನರ ಬಳಿ ಮಾಹಿತಿ ಪಡೆಯಲು ಹಿರೇಮಠ್ ಹಾಗೂ ಬೆಂಬಲಿಗರು ಗ್ರಾಮಕ್ಕೆ ಆಗಮಿಸಿದ್ದರು.

    ಎಸ್.ಆರ್ ಹಿರೇಮಠ್ ಹಾಗೂ ಬೆಂಬಲಿಗರು ಗ್ರಾಮಕ್ಕೆ ಬಂದಿರುವ ಮಾಹಿತಿ ಪಡೆದ ಎಚ್‍ಡಿಕೆ ಬೆಂಬಲಿಗರು ಗಲಾಟೆ ನಡೆಸಿದ್ದಾರೆ. ಅಲ್ಲದೆ ಕೆಲವರ ಮೇಲೆ ಹಲ್ಲೆ ನಡೆಸಿ ಮೊಟ್ಟೆಯಿಂದ ಹೊಡೆದಿದ್ದು ಕಾರಿನ ಚಕ್ರಗಳ ಗಾಳಿಯನ್ನು ಸಹ ತೆಗೆದಿದ್ದಾರೆ ಎಂದು ರವಿಕೃಷ್ಣಾ ರೆಡ್ಡಿ ಹೇಳಿದ್ದಾರೆ.

    ಬೇಕೆಂತಲೇ ಎಚ್‍ಡಿಕೆ ಬೆಂಬಲಿಗರು ಹಾಗೂ ಅವರ ಕಡೆಯವರು ಈ ರೀತಿ ಗಲಾಟೆ ನಡೆಸಿ ಹಲ್ಲೆ ನಡೆಸಿದ್ದಾರೆ ಎಂದು ಹಿರೇಮಠ್ ಹಾಗೂ ರವಿಕೃಷ್ಣಾ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಗ್ರಾಮದ ಹನುಮಂತೇಗೌಡ ಹಾಗೂ ಕೆಲವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

  • ಜಿಂದಾಲ್ ದಂಗಲ್‍ಗೆ ಟ್ವಿಸ್ಟ್- ಬಿಎಸ್‍ವೈ ಶತ್ರುವೇ ಈಗ ಬಿಜೆಪಿಯ ಪರಮಮಿತ್ರ

    ಜಿಂದಾಲ್ ದಂಗಲ್‍ಗೆ ಟ್ವಿಸ್ಟ್- ಬಿಎಸ್‍ವೈ ಶತ್ರುವೇ ಈಗ ಬಿಜೆಪಿಯ ಪರಮಮಿತ್ರ

    ಬೆಂಗಳೂರು: ಜಿಂದಾಲ್ ದಂಗಾಲ್‍ಗೆ ಸ್ಫೋಟಕ ಟ್ವಿಸ್ಟ್ ದೊರಕಿದ್ದು, ಜಿಂದಾಲ್ ಅಕ್ರಮದ ಬಗ್ಗೆ ಬಿಜೆಪಿಗೆ ಮಾಹಿತಿ ಕೊಟ್ಟವರಾರು ಎಂಬ ಪ್ರಶ್ನೆ ಮೂಡಿದೆ. ಯಾಕಂದ್ರೆ ಒಂದು ಕಾಲದ ಬಿಎಸ್‍ವೈ ಶತ್ರುವಾಗಿದ್ದ ವ್ಯಕ್ತಿಯೇ ಈಗ ಮಿತ್ರರಾಗಿದ್ದಾರೆ. ಅವರು ಕೊಟ್ಟ ಮಾಹಿತಿಯಿಂದಾಗಿಯೇ ಬಿಜೆಪಿ ಈ ಹೋರಾಟಕ್ಕೆ ನಿರ್ಧರಿಸಿದ್ದು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಬೆಂಗಳೂರಿನ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸಾಮಾಜಿಕ ಕಾರ್ಯಕರ್ತ ಎಸ್. ಆರ್ ಹಿರೇಮಠ್ ಹಾಗೂ ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರನ್ನು ಭೇಟಿಯಾಗಿದ್ದು, ಈ ವೇಳೆ ಜಿಂದಾಲ್‍ಗೆ ಸರ್ಕಾರಿ ಭೂಮಿ ಲೀಸ್ ಸಂಬಂಧ ಚರ್ಚೆ ನಡೆದಿದೆ. ಜಿಂದಾಲ್ ಹೋರಾಟ ಶುರುವಾಗುತ್ತಿದ್ದಂತೆಯೇ ಭೇಟಿ ನೀಡಿದ್ದು, ಆರ್‍ಎಸ್‍ಎಸ್ ನಾಯಕ ಸಂತೋಷ್ ಭೇಟಿಯ ಫೋಟೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸಂತೋಷ್ ಭೇಟಿ ಮೂಲಕ ಜಿಂದಾಲ್ ಹೋರಾಟಕ್ಕೆ ಹಿರೇಮಠ್ ಪ್ರೇರಿಪಿಸಿದ್ರಾ ಅನ್ನೋ ಅನುಮಾನ ಮೂಡಿದೆ. ಈ ಮೊದಲು ಯಡಿಯೂರಪ್ಪ ಭೇಟಿಗೆ ಎಸ್‍ಆರ್ ಹಿರೇಮಠ್ ಅವರು ಪತ್ರ ಬರೆದಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಈ ಹಿನ್ನಲೆಯಲ್ಲಿ ಹಿರೇಮಠ್ ಅವರು ಆರ್‍ಎಸ್‍ಎಸ್ ನಾಯಕ ಸಂತೋಷ್ ಭೇಟಿ ಮಾಡಿದ್ದಾರೆ.

    ಬೇಟಿ ವೇಳೆ ಜಿಂದಾಲ್ ಅಕ್ರಮದ ಬಗ್ಗೆ ಸಂತೋಷ್ ಅವರಿಗೆ ಎಳೆಎಳೆಯಾಗಿ ಮಾಹಿತಿ ನೀಡಿದ್ದಾರೆ. ಹಿರೇಮಠ್ ಕೊಟ್ಟ ದಾಖಲೆಗಳನ್ನು ಬಿಜೆಪಿ ನಾಯಕರಿಗೆ ಸಂತೋಷ್ ತಲುಪಿಸಿದ್ದಾರೆ. ಹಿರೇಮಠ್-ಸಂತೋಷ್ ಭೇಟಿ ಬೆನ್ನಲ್ಲೇ ನಿನ್ನೆ ಆರ್‍ಎಸ್‍ಎಸ್ ಮತ್ತು ಬಿಜೆಪಿ ನಾಯಕರು ಭೇಟಿಯಾಗಿದ್ದಾರೆ ಎನ್ನಲಾಗಿದೆ.

    ಒಟ್ಟಿನಲ್ಲಿ ಒಂದು ಕಾಲದಲ್ಲಿ ಯಡಿಯೂರಪ್ಪ ವಿರುದ್ಧ ಹೋರಾಟ ಮಾಡಿದ್ದ ಹಿರೇಮಠ್, ಇಂದು ಅವರ ಹೋರಾಟಕ್ಕೆ ಸಾಥ್ ನೀಡಿದ್ದಾರೆ. ಅಂದು ಯಡಿಯೂರಪ್ಪ ವಿರುದ್ಧ ಸಂಗ್ರಹಿಸಿದ್ದ ದಾಖಲೆಗಳು ಇಂದು ಸಿಎಂ ವಿರುದ್ಧ ಬಳಕೆಯಾಗುತ್ತಿದೆ ಎಂಬುದಾಗಿ ತಿಳಿದುಬಂದಿದೆ.

  • `ಜೆಸಿಬಿ’ ಎಂಬ ಭ್ರಷ್ಟ ಪಕ್ಷಗಳು ರಾಜ್ಯವನ್ನು ಲೂಟಿ ಹೊಡೆದಿದ್ದಾರೆ- ಎಸ್‍ಆರ್ ಹಿರೇಮಠ ಕಿಡಿ

    `ಜೆಸಿಬಿ’ ಎಂಬ ಭ್ರಷ್ಟ ಪಕ್ಷಗಳು ರಾಜ್ಯವನ್ನು ಲೂಟಿ ಹೊಡೆದಿದ್ದಾರೆ- ಎಸ್‍ಆರ್ ಹಿರೇಮಠ ಕಿಡಿ

    ಹಾವೇರಿ: ರಾಜ್ಯದಲ್ಲಿ ಮೂರು ಪಕ್ಷಗಳು ಲೂಟಿಕೋರರ ಪಕ್ಷಗಳಾಗಿವೆ. ಕಳೆದ ಹಲವಾರು ವರ್ಷಗಳಿಂದ `ಜೆಸಿಬಿ’ ಎಂಬ ಭ್ರಷ್ಟ ಪಕ್ಷಗಳು ರಾಜ್ಯವನ್ನು ಲೂಟಿ ಹೊಡೆದಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಎಸ್‍ಆರ್ ಹಿರೇಮಠ ಕಿಡಿಕಾರಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆದರು. ರೆಡ್ಡಿಯಂತಹ ಕಳ್ಳರ ತಾಳಕ್ಕೆ ಕುಣಿದು ಜೈಲು ಸೇರಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ರಾಜ್ಯಕ್ಕೆ ದೊಡ್ಡ ಕಳಂಕವಾಗಿದ್ದಾರೆ. ಅಲ್ಲದೆ ಕಾಂಗ್ರೆಸ್ ಮೈತುಂಬಾ ಭ್ರಷ್ಟಾಚಾರ ಮೈಗೂಡಿಸಿಕೊಂಡಿದೆ. ಒಟ್ಟಿನಲ್ಲಿ ಇವರು ಸ್ವತಂತ್ರ ಭಾರತದ ಕನಸನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದರು.

    ಜೆಡಿಎಸ್ ಪಕ್ಷ ರಾಜ್ಯಸಭೆ ಸ್ಥಾನಗಳನ್ನು ಹರಾಜು ಇಟ್ಟು ಮಾರಿಕೊಂಡಿದೆ. ಇವರ ನಾಟಕದಿಂದ ರಾಜ್ಯ ಹಾಳಾಗಿ ಹೋಗಿದೆ. ಪ್ರಧಾನ ಮಂತ್ರಿ ದೇಶದ ಬ್ಯಾಂಕುಗಳು ದಿವಾಳಿಯಾದ್ರೂ ಮೌನ ವಹಿಸಿದ್ದಾರೆ. ಬ್ಯಾಂಕ್ ಕೊಳ್ಳೆ ಹೊಡೆದ್ರೂ ಸುಮ್ಮನಿರುವ ಪ್ರಧಾನಿಗೆ ನಾಚಿಕೆಯಾಗಬೇಕು. ಅಲ್ಲದೇ ಪ್ರಧಾನಿ, ಜೇಟ್ಲಿ, ಅಮಿತ್ ಶಾ ರಿಂದ ದೇಶವಿನಾಶದತ್ತ ಸಾಗುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಮಲಿಂಗಾರೆಡ್ಡಿ ಸೋತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.