Tag: S/O ಮುತ್ತಣ್ಣ

  • ದೇವರಾಜ್ ಪುತ್ರ ಪ್ರಣಂ ಸಿನಿಮಾ ಹಾಡಿಗೆ ಸಂಜಿತ್ ಹೆಗ್ಡೆ ದನಿ

    ದೇವರಾಜ್ ಪುತ್ರ ಪ್ರಣಂ ಸಿನಿಮಾ ಹಾಡಿಗೆ ಸಂಜಿತ್ ಹೆಗ್ಡೆ ದನಿ

    ಪುರಾತನ ಫಿಲಂಸ್ ನಿರ್ಮಾಣದ, ಶ್ರೀಕಾಂತ್ ಹುಣಸೂರು ನಿರ್ದೇಶನದ ಹಾಗೂ ಡೈನಾಮಿಕ್ ಸ್ಟಾರ್ ದೇವರಾಜ್ ಅವರ ದ್ವಿತೀಯ ಪುತ್ರ ಪ್ರಣಂ ದೇವರಾಜ್ ನಾಯಕನಾಗಿ ಹಾಗೂ `ದಿಯಾ’ ಖ್ಯಾತಿಯ ಖುಷಿ ರವಿ (Kushi Ravi) ನಾಯಕಿಯಾಗಿ ನಟಿಸಿರುವ `S/O ಮುತ್ತಣ್ಣ’ (`S/O Muttanna) ಚಿತ್ರಕ್ಕಾಗಿ ಯೋಗರಾಜ್ ಭಟ್ ಅವರು ಬರೆದಿರುವ, ಸಂಜಿತ್ ಹೆಗ್ಡೆ ಹಾಡಿರುವ ಹಾಗೂ ಸಚಿನ್ ಬಸ್ರೂರ್ ಸಂಗೀತ ನೀಡಿರುವ `ಮಿಡ್ ನೈಟ್ ರಸ್ತೆಯಲ್ಲಿ’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು.

    ಬಿಡುಗಡೆಯಾದ ಬೆನ್ನಲ್ಲೇ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಅಲ್ಲದೇ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ಇದನ್ನೂ ಓದಿ: ಕಾಂತಾರ ಚಾಪ್ಟರ್‌ 1 – ಇದು ಬರೀ ಸಿನಿಮಾ ಅಲ್ಲ `ಶಕ್ತಿ’ ಎಂದ ರಿಷಬ್ ಶೆಟ್ಟಿ

    ನಮ್ಮ ಚಿತ್ರದಲ್ಲಿ ನಾಲ್ಕು ಹಾಡುಗಳಿದೆ. ಇಂದು ಎರಡನೇ ಹಾಡು ಬಿಡುಗಡೆಯಾಗಿದೆ. ಮೊದಲು ಹಾಡು `ಕಮ್ಮಂಗಿ ನನ್ ಮಗನೇ’ ಸಹ ಮೆಚ್ಚುಗೆ ಪಡೆದುಕೊಂಡಿದೆ. ಇಂದು ಬಿಡುಗಡೆಯಾಗಿರುವ `ಮಿಡ್ನೈಟ್ ರಸ್ತೆಯಲ್ಲಿ’ ಹಾಡನ್ನು ಸಂಜಿತ್ ಹೆಗ್ಡೆ ಹಾಡಿದ್ದಾರೆ. ಯೋಗರಾಜ್ ಭಟ್ ಅವರು ಬರೆದಿದ್ದಾರೆ. ಉಳಿದ 2 ಹಾಡುಗಳು ಸಹ ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ಸಂಗೀತ ನಿರ್ದೇಶಕ ಸಚಿನ್ ಬಸ್ರೂರ್ ಮಾಹಿತಿ ನೀಡಿದರು. ಇದನ್ನೂ ಓದಿ: 3 ವರ್ಷದ ಸಿನಿ ಪಯಣದ ಒಂದು ಝಲಕ್: ಕಾಂತಾರ ಅದ್ಭುತ ಲೋಕ

    ಪುರಾತನ ಫಿಲಂಸ್ ಸಂಸ್ಥೆ ಎಸ್‌ಆರ್‌ಕೆ ಫಿಲಂಸ್ ಸಹಯೋಗದೊಂದಿಗೆ ನಿರ್ಮಾಣ ಮಾಡಿರುವ ಈ ಚಿತ್ರ ಅಪ್ಪ-ಮಗನ ಬಾಂಧವ್ಯದ ಕುರಿತಾದ ಕಥಾಹಂದರ ಹೊಂದಿದೆ. ರಂಗಾಯಣ ರಘು ಹಾಗೂ ಪ್ರಣಂ ದೇವರಾಜ್ ಅಪ್ಪ-ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಖುಷಿರವಿ ಈ ಚಿತ್ರದ ನಾಯಕಿ. ಸಚಿನ್ ಬಸ್ರೂರ್ ಅವರ ಸಂಗೀತ ಸಂಯೋಜನೆಯ 4 ಹಾಡುಗಳು ತುಂಬಾ ಚೆನ್ನಾಗಿದೆ ಎಂದರು.

    ಈಗ ಬಿಡುಗಡೆಯಾಗಿರುವ ಎರಡು ಹಾಡುಗಳನ್ನು ಯೋಗರಾಜ್ ಭಟ್ ಅವರೇ ಬರೆದಿದ್ದಾರೆ. ಅಂದುಕೊಂಡ ಹಾಗೆ ಚಿತ್ರವನ್ನು ಪೂರ್ಣಗೊಳಿಸಲು ಚಿತ್ರತಂಡದ ಸಹಕಾರವೇ ಕಾರಣ. ಇನ್ನೂ ಈ ಚಿತ್ರದ ಹೆಚ್ಚಿನ ಭಾಗದ ಚಿತ್ರೀಕರಣ ವಾರಣಾಸಿಯಲ್ಲಿ ನಡೆದಿದೆ. ಈ ಚಿತ್ರದ ಕಥೆ ಕೇಳಿ ಮೆಚ್ಚಿಕೊಂಡಿದ್ದ ಡೈನಾಮಿಕ್ ಸ್ಟಾರ್ ದೇವರಾಜ್, ಇತ್ತೀಚೆಗೆ ಸಿನಿಮಾ ನೋಡಿ ಪ್ರಶಂಸೆ ನೀಡಿದ್ದು ಬಹಳ ಖುಷಿಯಾಗಿದೆ ಎಂದು ನಿರ್ದೇಶಕ ಶ್ರೀಕಾಂತ್ ಹುಣಸೂರು ತಿಳಿಸಿದರು. ಇದನ್ನೂ ಓದಿ: ಮತ್ತೆ ಒಂದಾಯ್ತು ಗುಡ್ ಬ್ಯಾಡ್ ಅಗ್ಲಿ ಕಾಂಬಿನೇಷನ್

    ಬಳಿಕ ಮಾತನಾಡಿದ ಚಿತ್ರದ ನಾಯಕ ಪ್ರಣಂ ದೇವರಾಜ್, ನಿರ್ದೇಶಕರು ಕಥೆ ಹೇಳಿದ ರೀತಿಯೇ ಬಹಳ ಚೆನ್ನಾಗಿತ್ತು. ಇದೊಂದು ತಂದೆ-ಮಗನ ಬಾಂಧವ್ಯದ ಚಿತ್ರ. ಜೊತೆಗೆ ಪ್ರೇಮ ಕಥಾನಕವೂ ಹೌದು. ಈ ಚಿತ್ರದ ವಿಶೇಷವೆಂದರೆ ಇದರಲ್ಲಿ ಸಾಹಸ ಸನ್ನಿವೇಶಗಳಿಲ್ಲ. ನಿರ್ದೇಶಕರು ಮಾಡಿಕೊಂಡಿರುವ ಕಥೆ, ಚಿತ್ರಕಥೆ ಬಹಳ ಸೊಗಸಾಗಿದೆ. ರಂಗಾಯಣ ರಘು ಅವರಿಂದ ಸಾಕಷ್ಟು ಕಲಿತಿದ್ದೇನೆ. ಸಚಿನ್ ಬಸ್ರೂರ್ ಸಂಗೀತ ಸಂಯೋಜನೆಯಲ್ಲಿ ಸಂಜಿತ್ ಹೆಗ್ಡೆ ಹಾಡಿರುವ ಈ `ಮಿಡ್ ನೈಟ್ ರಸ್ತೆಯಲ್ಲಿ’ ಸಾಂಗ್ ಅಂತೂ ಎಲ್ಲರ ಮನಸ್ಸಿಗೂ ಹತ್ತಿರವಾಗಲಿದೆ. ಧನಂಜಯ್ ಮಾಸ್ಟರ್ ನೃತ್ಯ ನಿರ್ದೇಶನ ಕೂಡ ಹಾಡಿಗೆ ಪೂರಕವಾಗಿದೆ. ಏಳುವರೆ ವರ್ಷಗಳ ನಂತರ ನನ್ನ ಸಿನಿಮಾ ಬಿಡುಗಡೆಯಾಗುತ್ತಿದೆ. ಅವಕಾಶ ನೀಡಿದ ಪುರಾತನ ಫಿಲಂಸ್ ಸಂಸ್ಥೆಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ. ಎಲ್ಲರು ಚಿತ್ರ ನೋಡಿ. ಪ್ರೋತ್ಸಾಹಿಸಿ ಎಂದರು. ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್‌ಗೆ ಟ್ವಿಸ್ಟ್‌ – ಪ್ರಮುಖ ಆರೋಪಿಯಿಂದ ನಟಿ ರಚಿತಾ ರಾಮ್‌ಗೆ ಭರ್ಜರಿ ಗಿಫ್ಟ್

    ನಾಯಕಿ ಖುಷಿ ರವಿ ಮಾತನಾಡಿದ ಅವರು, ನಾನು ಈ ಚಿತ್ರದಲ್ಲಿ ವೈದ್ಯೆ. ಸಾಕ್ಷಿ ನನ್ನ ಪಾತ್ರದ ಹೆಸರು. ಒಂದೊಳ್ಳೆ ಚಿತ್ರದಲ್ಲಿ ನಟಿಸಿದ ಖುಷಿಯಿದೆ. ಇದು ನಾನು ನಾಯಕಿಯಾಗಿ ನಟಿಸಿರುವ ಏಳನೇ ಚಿತ್ರ. ಬೇರೆ ಭಾಷೆಗಳಲ್ಲಿ ನನಗೆ ಅವಕಾಶ ಸಿಗುತ್ತಿದೆ. ಆದರೆ ಕನ್ನಡದಲ್ಲಿ ಹೆಚ್ಚು ಅವಕಾಶಗಳು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಹಾಡಿನ ನೃತ್ಯ ನಿರ್ದೇಶನದ ಬಗ್ಗೆ ಧನು ಮಾಸ್ಟರ್, ಛಾಯಾಗ್ರಹಣದ ಕುರಿತು ಛಾಯಾಗ್ರಾಹಕ ಸ್ಕೇಟಿಂಗ್ ಕೃಷ್ಣ ಮಾಹಿತಿ ನೀಡಿದರು. ಸಂಕಲನಕಾರ ಹರೀಶ್ ಕೊಮ್ಮೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ವೇಳೆ ಸಂಜಿತ್ ಹೆಗ್ಡೆ `ಮಿಡ್ ನೈಟ್ ರಸ್ತೆಯಲ್ಲಿ’ ಹಾಡನ್ನು ವೇದಿಕೆಯ ಮೇಲೆ ಸುಮಧುರವಾಗಿ ಹಾಡಿದರು.

  • ‘S/O ಮುತ್ತಣ್ಣ’ ಚಿತ್ರದ ಟೀಸರ್ ರಿಲೀಸ್- ದೇವರಾಜ್ ಪುತ್ರ ಪ್ರಣಂ ದೇವರಾಜ್ ಚಿತ್ರಕ್ಕೆ ಶಿವಣ್ಣ ಸಾಥ್

    ‘S/O ಮುತ್ತಣ್ಣ’ ಚಿತ್ರದ ಟೀಸರ್ ರಿಲೀಸ್- ದೇವರಾಜ್ ಪುತ್ರ ಪ್ರಣಂ ದೇವರಾಜ್ ಚಿತ್ರಕ್ಕೆ ಶಿವಣ್ಣ ಸಾಥ್

    ವರ್ಷದ ಆರಂಭದಿಂದಲೇ ಒಂದಷ್ಟು ಭಿನ್ನ ವಿಭಿನ್ನ ಬಗೆಯ ಸಿನಿಮಾಗಳು ತೆರೆಗಾಣುತ್ತಿವೆ. ಸೋಲು ಗೆಲುವುಗಳಾಚೆಗೆ ಇಂಥಾ ಪ್ರಯತ್ನಗಳು ನಡೆಯುತ್ತಲೇ ಇವೆ. ಇಂತಹ ಆಶಾದಾಯಕ ವಾತಾವರಣದ ಮುಂದುವರೆದ ಭಾಗವೆಂಬಂತೆ ರೂಪಗೊಂಡಿರುವ ಸಿನಿಮಾ ‘S/O ಮುತ್ತಣ್ಣ’. ಸೆಟ್ಟೇರಿದ ದಿನದಿಂದಲೂ ಟೈಟಲ್ ಹಾಗೂ ಕಥಾಹಂದರದ ಮೂಲಕವೇ ಕುತೂಹಲ ಹೆಚ್ಚಿಸಿರುವ ಈ ಚಿತ್ರದ ಟೀಸರ್ ರಿಲೀಸ್ ಆಗಿದೆ. ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ‘S/O ಮುತ್ತಣ್ಣ’ನಿಗೆ (S/o Muttanna) ಸಾಥ್ ಕೊಟ್ಟಿದ್ದಾರೆ.

    ಪ್ರಣಂ ನಟನೆಯ ಸಿನಿಮಾದ ಟೀಸರ್‌ ಬಿಡುಗಡೆ ಬಳಿಕ ಮಾತನಾಡಿ ಡಾ.ಶಿವರಾಜ್ ಕುಮಾರ್, ದೇವರಾಜ್ ಅವರ ಫ್ಯಾಮಿಲಿ ಎಂದರೆ ನಮಗೆ ಅಭಿಮಾನ, ಪ್ರೀತಿ, ವಿಶ್ವಾಸ. ಟೀಸರ್ ನೋಡಿ ಖುಷಿಯಾಯ್ತು. ತಂದೆ- ಮಗನ ಬಾಂಧವ್ಯ ತುಂಬಾ ಚೆನ್ನಾಗಿ ತೆಗೆದುಕೊಂಡು ಹೋಗಿದ್ದಾರೆ. ಅಪ್ಪಾಜಿ ಜೊತೆ ನನ್ನ ಹಳೆ ನೆನಪುಗಳನ್ನು ನೋಡಿ ಖುಷಿಯಾಯ್ತು, ತಂದೆ ಮಗನ ಬಾಂಧವ್ಯದ ಸಿನಿಮಾ ಚೆನ್ನಾಗಿ ಹೋಗುತ್ತದೆ ಎಂಬ ಭರವಸೆ ಇದೆ. ಈ ಟೀಸರ್ ಸಮಾರಂಭದಲ್ಲಿ ಭಾಗಿಯಾಗಿರುವುದು ಖುಷಿ ಕೊಟ್ಟಿದೆ. ದೇವರಾಜ್ ಅವರ ಕುಟುಂಬದ ಜೊತೆ ನಿಲ್ಲುತ್ತೇವೆ. ಕನ್ನಡ ಇಂಡಸ್ಟ್ರಿಗೆ ಯಾರೇ ಆಗಲಿ ಸಪೋರ್ಟ್ ಮಾಡುತ್ತೇವೆ. ಯಾರೇ ಆಗಲಿ ನಮ್ಮ ಭಾಷೆ ಉಳಿಬೇಕು ಅಂದರೆ ಯಾವ ಹೀರೋ ನಟಿಸಿದರೂ ಆ ಸಿನಿಮಾಗಳು ಗೆಲ್ಲಬೇಕು ಎಂದರು.

    ಹಿರಿಯ ನಟ ರಂಗಾಯಣ ರಘು ಮಾತನಾಡಿ, ಮುತ್ತಣ್ಣ ಟೈಟಲ್ ಯಾಕೆ ಇಟ್ಟಿದ್ದಾರೆ ಅನ್ನೋದು ನಿಮಗೆ ಗೊತ್ತಾಗಿರಬೇಕು. ಒರಿಜನಲ್ ಮುತ್ತಣ್ಣನೇ ಬಂದಿದ್ದಾರೆ. ಪುರಾತನ ಫಿಲ್ಮಂಸ್ ಹರಿಯಣ್ಣ ಶಿವಣ್ಣನಿಗೆ (Shivarajkumar) ದೊಡ್ಡ ಅಭಿಮಾನಿ. ಶಿವಣ್ಣನೇ ಕಾರ್ಯಕ್ರಮಕ್ಕೆ ಬರಬೇಕು ಎನ್ನುವುದು ಎಲ್ಲರ ಕನಸಾಗಿತ್ತು. ಯಂಗ್ ಡೈನಾಮಿಕ್ ಪ್ರಣಂಗೆ ಒಳ್ಳೆದಾಗಲಿ. ಇವರು ಬೆಳೆಯಬೇಕು, ಉಳಿಯಬೇಕು, ತಂದೆ- ತಾಯಿಯಂತೆಯೇ ಹೆಸರನ್ನು ಗಳಿಸಬೇಕು ಎನ್ನುವುದು ಯಾವುದೇ ಕಲಾವಿದರ ಮಕ್ಕಳಿಗಿರುವ ಆಸೆ. ಅದನ್ನು ಪ್ರಜ್ವಲ್ ಹಾಗೂ ಪ್ರಣಂ ಇಬ್ಬರಲ್ಲಿಯೂ ಇದೆ. ಪ್ರಣಂ ತುಂಬಾ ಚೆನ್ನಾಗಿ ನಟಿಸಿದ್ದಾರೆ ಎಂದರು.

    ನಾಯಕ ಪ್ರಣಂ ದೇವರಾಜ್ (Pranam Devaraj) ಮಾತನಾಡಿ, ರಿಯಲ್ ಸನ್ ಆಫ್ ಮುತ್ತಣ್ಣ, ರೀಲ್ ಸನ್ ಆಫ್ ಮುತ್ತಣ್ಣನಿಗೆ ಬಂದು ಟೀಸರ್ ಮಾಡಿ ಕೊಟ್ಟಿರೋದು ಖುಷಿ ಕೊಟ್ಟಿದೆ. ನಾವೆಲ್ಲರೂ ಶಿವಣ್ಣನ ಅಭಿಮಾನಿ. ನಿಮ್ಮನ್ನು ನೋಡಿಕೊಂಡು ಬೆಳೆದಿರುವುದು. ನಿಮ್ಮ ಡ್ಯಾನ್ಸ್, ನಟನೆ, ಆಕ್ಷನ್ ಎಲ್ಲದಕ್ಕೂ ಅಭಿಮಾನಿ. ನಾನು ಸಾಕಷ್ಟು ಚಿಕ್ಕವನು ಅವರ ಬಗ್ಗೆ ಮಾತಾನಾಡಲು. ಮುಂದೆ ಬರುವ ಜನರೇಷನ್ ಗೆ ನೀವೇ ಸ್ಫೂರ್ತಿ. ಸಾಮಾನ್ಯ ಮನುಷ್ಯ ತಂದೆಯಾದ ಬಳಿಕ ರೋಲ್ ಮಾಡೆಲ್, ಟೀಚರ್, ಸ್ಟೋರಿ ಟೆಲ್ಲರ್ ಆಗ್ತಾರೆ. ಅಪ್ಪ ಆದ ಬಳಿಕ ಎಷ್ಟೋ ಕಥೆ ಹುಟ್ಟುತ್ತವೆ. ಅಪ್ಪ- ಮಗನ ಬಾಂಧವ್ಯವನ್ನು ಹೇಗೆ ಇರುತ್ತೇ ಅನ್ನೋದನ್ನು ಸನ್ ಆಫ್ ಮುತ್ತಣ್ಣದಲ್ಲಿ ಮಾಡಿದ್ದೇವೆ. ನಾನು ಸ್ವಲ್ಪ ಬೆಟ್ಟರ್ ಆಕ್ಟರ್ ಆಗಿದ್ದೇನೆ ಎಂದರೆ ಅದಕ್ಕೆ ನಿರ್ದೇಶಕರು ಕಾರಣ. ಇಡೀ ತಂಡ ಸಿನಿಮಾಗಾಗಿ ಸಾಕಷ್ಟು ಶ್ರಮಿಸಿದೆ ಎಂದು ತಿಳಿಸಿದರು.

    ನಟಿ ಖುಷಿ ರವಿ (Kushee Ravi) ಮಾತನಾಡಿ, ಶಿವಣ್ಣ ನಮ್ಮ ಸಿನಿಮಾದ ಟೀಸರ್ ಲಾಂಚ್ ಮಾಡೋದಿಕ್ಕೆ ಬಂದಿರುವುದು ಖುಷಿ ಕೊಟ್ಟಿದೆ. ದೇವರಾಜ್ ಸರ್, ಅಮ್ಮ, ಪ್ರಜ್ವಲ್ ಸರ್, ರಾಗಿಣಿ ಅವರು ತುಂಬಾ ಸಪೋರ್ಟ್ ಮಾಡುತ್ತಾರೆ. ಸನ್ ಆಫ್ ಮುತ್ತಣ್ಣ, ಅಪ್ಪ- ಮಗನ ಎಮೋಷನ್ ಇರುವ ಸಿನಿಮಾ. ಇಡೀ ಕುಟುಂಬ ನೋಡುವಂತಹ ಸಿನಿಮಾ. ನಿಮ್ಮ ಬೆಂಬಲ ನಮ್ಮ ಮೇಲೆ ಇರಲಿದೆ ಎಂದು ತಿಳಿಸಿದರು.


    ಎಮೋಷನ್ ನಿಂದಲೇ ಶುರುವಾಗುವ ಟೀಸರ್‌ನಲ್ಲಿ ಅಪ್ಪ- ಮಗನ ಬಾಂಧವ್ಯವನ್ನು ಬಹಳ ಸೊಗಸಾಗಿ ಕಟ್ಟಿಕೊಡಲಾಗಿದೆ. 1 ನಿಮಿಷ 46 ಸೆಕೆಂಡ್ ಇರುವ ಟೀಸರ್ ನಲ್ಲಿ ಡೈಲಾಗ್ ಗಳು ಕಾಡುತ್ತವೆ. ಪ್ರಣಂ ದೇವರಾಜ್ ಮಗನಾಗಿ, ರಂಗಾಯಣ ರಘು ಅಪ್ಪನಾಗಿ ಅಮೋಘವಾಗಿ ಅಭಿನಯಿಸಿದ್ದಾರೆ. ಅಕ್ಷರ ಕಲಿಸುವ ಅಪ್ಪ ಪ್ರತಿ ಹೆಜ್ಜೆಯಲ್ಲಿಯೂ ಜೊತೆಯಾಗುವ ಕ್ಯಾಪ್ಟನ್ ಆಗಿ ರಂಗಾಯಣ ರಘು ಇಷ್ಟವಾಗ್ತಾರೆ. ಅಪ್ಪನನ್ನು ತನ್ನ ಪ್ರಾಣಕ್ಕೂ ಮಿಗಿಲಾಗಿ ಪ್ರೀತಿಸುವ ಮಗನಾಗಿ ಪ್ರಣಂ ಗಮನಸೆಳೆಯುತ್ತಾರೆ.

     

    View this post on Instagram

     

    A post shared by Pranam Devaraj (@pranamdevaraj)

    ಶ್ರೀಕಾಂತ್‌ ಹುಣಸೂರು ‘S/O ಮುತ್ತಣ್ಣ’ನಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಪ್ರಣಂಗೆ ನಾಯಕಿಯಾಗಿ ದಿಯಾ ಖ್ಯಾತಿಯ ಖುಷಿ ರವಿ ಅಭಿನಯಿಸಿದ್ದಾರೆ. ರಂಗಾಯಣ ರಘು ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಸುಚೇಂದ್ರ ಪ್ರಸಾದ್‌, ಗಿರೀಶ್‌ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್‌ ಪ್ರಭು, ಸುಧಾ ಬೆಳವಾಡಿ, ಅರುಣ್‌ ಚಕ್ರವರ್ತಿ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಪುರಾತನ‌ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ SRK ಫಿಲ್ಮ್ಸ್ ಜೊತೆಗೂಡಿ ಈ ಸಿನಿಮಾ ನಿರ್ಮಾಣವಾಗಿದೆ. ಸಚಿನ್ ಬಸ್ರೂರು ಸಂಗೀತವಿರುವ ‘s/o ಮುತ್ತಣ್ಣ’ ಸಿನಿಮಾದ ಹಾಡುಗಳಿಗೆ ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ.

  • ಮುತ್ತಣ್ಣನ ಮಗನಾಗಿ ಬಂದ ಪ್ರಣಮ್ ದೇವರಾಜ್- ‘S/o ಮುತ್ತಣ್ಣ’ ಫಸ್ಟ್ ಲುಕ್ ಔಟ್‌

    ಮುತ್ತಣ್ಣನ ಮಗನಾಗಿ ಬಂದ ಪ್ರಣಮ್ ದೇವರಾಜ್- ‘S/o ಮುತ್ತಣ್ಣ’ ಫಸ್ಟ್ ಲುಕ್ ಔಟ್‌

    ಯಂಗ್ ಡೈನಾಮಿಕ್ ಪ್ರಣಮ್ ದೇವರಾಜ್ (Pranam Devaraj) ನಟನೆಯ ‌’S/o ಮುತ್ತಣ್ಣ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಪ್ರಣಮ್ ಜನ್ಮದಿನದ ವಿಶೇಷವಾಗಿ ಪೋಸ್ಟರ್ ಅನಾವರಣ ಮಾಡಿ ಚಿತ್ರತಂಡ ಶುಭ ಕೋರಿದೆ. ಬೆಂಗಳೂರಿನ ಜಿಟಿ ಮಾಲ್‌ನಲ್ಲಿ ಯಂಗ್ ಡೈನಾಮಿಕ್ ಪ್ರಣಮ್ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿ, S/o ಮುತ್ತಣ್ಣ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಈ ವೇಳೆ, ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ:ದರ್ಶನ್ ಜೊತೆಗಿನ ಸಮಸ್ಯೆ ಬೇಗ ಹುಡುಕಿಕೊಳ್ಳಿ ಅಂತಿದ್ದಾರೆ ಸುದೀಪ್ ಫ್ಯಾನ್ಸ್

    ನಾಯಕ ಪ್ರಣಮ್ ದೇವರಾಜ್ ಮಾತನಾಡಿ, S/o ಮುತ್ತಣ್ಣ ಶ್ರೀಕಾಂತ್ ಸರ್ ಫಸ್ಟ್ ಟೈಮ್ ಮನೆಗೆ ಬಂದಾಗ ಅವರು ಮಾತನಾಡಿದ ರೀತಿ ಕಥೆ ಹೇಳಿದ ರೀತಿಯಲ್ಲಿ ನಂಬಿಕೆ ಬಂತು. ಪ್ರಾಮಿಸ್ ಮಾಡಿದಕ್ಕಿಂತ ಸಖತ್ ಆಗಿ ಸಿನಿಮಾ ತೆಗೆದಿದ್ದಾರೆ. ಖುಷಿ ರವಿ (Kushee Ravi) ಅವರು ಎಂಥ ನಟಿ ಅನ್ನೋದು ‘ದಿಯಾ’ದಿಂದ (Dia)  ಗೊತ್ತಾಗಿದೆ. ಅವರ ಜೊತೆ ಕೆಲಸ ಮಾಡಿದ್ದು, ಖುಷಿ ಕೊಟ್ಟಿದೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.

    ನಾಯಕಿ ಖುಷಿ ರವಿ ಮಾತನಾಡಿ, S/o ಮುತ್ತಣ್ಣ ಅಂತಾ ಹೇಳಿದ ತಕ್ಷಣ ಪಾಸಿಟಿವ್ ವೈಬ್ಸ್ ಬರುತ್ತದೆ. ಟೈಟಲ್ ತುಂಬಾ ಪವರ್ ಫುಲ್ ಆಗಿದೆ. ಟೈಟಲ್ ಕೇಳಿಯೇ ಸಿನಿಮಾ ಒಪ್ಪಿಕೊಂಡೆ. ನಾನು ಈ ಸಿನಿಮಾದ ಭಾಗವಾಗಿರುವುದಕ್ಕೆ ಖುಷಿ ಕೊಟ್ಟಿದೆ. ರಂಗಾಯಣ ರಘು ಸರ್ ಕ್ಯಾಮೆರಾ ಹೇಗೆ ಫೇಸ್ ಮಾಡಬೇಕು ಅನ್ನೋದನ್ನು ಹೇಳಿ ಕೊಟ್ಟರು. ಪ್ರಣಮ್ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ ಎಂದರು.

    ನಿರ್ದೇಶಕ ಶ್ರೀಕಾಂತ್ ಮಾತನಾಡಿ, ದೇವರಾಜ್ ಸರ್ ಕಥೆ ಹೇಳಲು ಹೋದಾಗ ಎಲ್ಲಿ ಕೆಲಸ ಮಾಡಿದ್ದೀಯಾ. ನಿನ್ನ ಪ್ರೊಫೈಲ್ ಕೊಡು ಹೀಗೆ ಒಂದು ಮಾತು ಹೇಳದೆ ನಾನು ಹೇಳಿದ ಕಥೆಗೆ ಏನ್ ಮಾಡುತ್ತೀರಾ ಮಾಡಿ ಎಂದು ಬೆಂಬಲ ಕೊಟ್ಟರು. ಟೈಟಲ್ ಹೇಳುವಂತೆ ಇದು ಅಪ್ಪ-ಮಗನ ಬಾಂಧವ್ಯದ ಕಥೆ. ಸದ್ಯ ವಾರಣಾಸಿ ಭಾಗದ ಶೂಟಿಂಗ್ ಮುಗಿಸಿಕೊಂಡು ಬಂದಿದ್ದೇವೆ. ಸಾಂಗ್ ಬಾಕಿ ಇದೆ. ಪಾಂಡಿಚೆರಿಯಲ್ಲಿ ಶೂಟ್ ಮಾಡಲು ಯೋಜನೆ ಹಾಕಿಕೊಂಡಿದ್ದೇವೆ. ಫೆಬ್ರವರಿಯಲ್ಲಿ ಕುಂಬಳಕಾಯಿ ಹೊಡೆಯಲು ಪ್ಲ್ಯಾನ್ ಮಾಡಿಕೊಂಡಿದ್ದೇವೆ. ಆ ನಂತರ ಉಳಿದ ತಾರಾಬಳಗ- ತಾಂತ್ರಿಕವರ್ಗದ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.

    ನಿರ್ಮಾಪಕರು ಮಾತನಾಡಿ, ಕಥೆ ಬಗ್ಗೆ ತುಂಬಾ ಚರ್ಚೆ ಮಾಡಿ ಈ ಸಿನಿಮಾ ಮಾಡಿದ್ದೇವೆ. ಪ್ರಣಂ ಸರ್‌ಗೆ ಇದೇ ಕಥೆ ಮಾಡಬೇಕೆಂದು ಮಾಡಿದ್ದೇವೆ. ಕಥೆ ತುಂಬಾ ಚೆನ್ನಾಗಿ ಬಂದಿದೆ. ಮೇಕಿಂಗ್ ನಾವು ಅಂದುಕೊಂಡಂತೆ ಬಂದಿದೆ ಎಂದರು.

    ಶ್ರೀಕಾಂತ್ ಹುಣಸೂರು ನಿರ್ದೇಶಿಸುತ್ತಿರುವ ‘S/o ಮುತ್ತಣ್ಣ’ ಸಿನಿಮಾದಲ್ಲಿ ಪ್ರಣಮ್ ದೇವರಾಜ್ ನಾಯಕನಾಗಿ ನಟಿಸುತ್ತಿದ್ದು, ಖುಷಿ ರವಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ರಂಗಾಯಣ ರಘು, ಸುಚೇಂದ್ರ ಪ್ರಸಾದ್, ಗಿರಿ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ ಮುಂತಾದವರ ತಾರಾಬಳಗವಿದೆ. ಟೈಟಲ್ ಹೇಳುವಂತೆ ಇದೊಂದು ಅಪ್ಪ-ಮಗನ ಬಾಂಧವ್ಯದ ಕಥೆಯಾಗಿದ್ದು, ಪುರಾತನ ಫಿಲಂಸ್ ಬ್ಯಾನರ್ ನಡಿ ಎಸ್ ಆರ್ ಕೆ ಫಿಲ್ಮಂಸ್ ಸಹಕಾರದೊಂದಿಗೆ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ‘S/o ಮುತ್ತಣ್ಣ’ ಸಿನಿಮಾಗೆ ಸ್ಕೇಟ್ಟಿಂಗ್ ಕೃಷ್ಣ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಚಿತ್ರತಂಡ ಶೂಟಿಂಗ್ ನಲ್ಲಿ ಬ್ಯುಸಿಯಾಗಿದೆ.

  • ದಿಯಾ ಬ್ಯೂಟಿ ಖುಷಿ ರವಿಗೆ ವಿಶೇಷ ಮೇಕಿಂಗ್ ವಿಡಿಯೋ ಗಿಫ್ಟ್

    ದಿಯಾ ಬ್ಯೂಟಿ ಖುಷಿ ರವಿಗೆ ವಿಶೇಷ ಮೇಕಿಂಗ್ ವಿಡಿಯೋ ಗಿಫ್ಟ್

    ದಿಯಾ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ನಾಯಕಿಯಾಗಿ ಗುರುತಿಸಿಕೊಂಡವರು ಖುಷಿ ರವಿ (Khushi Ravi). ದಿಯಾ ಬಳಿಕ ಕನ್ನಡದ ಜೊತೆಗೆ ಪರಭಾಷಾ ಚಿತ್ರಗಳಲ್ಲಿಯೂ ನಟಿಸುತ್ತಿರುವ ಅವರೀಗ ಮತ್ತೊಂದು ಕನ್ನಡದ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಅದೇ ‘S/O ಮುತ್ತಣ್ಣ’.

    ಯಂಗ್ ಡೈನಾಮಿಕ್ ಎಂದೇ ಕರೆಸಿಕೊಳ್ಳುತ್ತಿರುವ ಪ್ರಣಂ ದೇವರಾಜ್  ನಾಯಕನಾಗಿ ನಟಿಸಿತ್ತಿರುವ ಈ ಸಿನಿಮಾದಲ್ಲಿ ಖುಷಿ ರವಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅವರ ಹುಟ್ಟುಹಬ್ಬದ  (Birthday)ಅಂಗವಾಗಿ ಈ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದ್ದು, ಸ್ಪೆಷಲ್ ಮೇಕಿಂಗ್ ವಿಡಿಯೋ ಕೂಡ ಬಿಡುಗಡೆ ಮಾಡಿ ಶುಭ ಕೋರಿದೆ.

     

    ಪುರಾತನ ಫಿಲ್ಮಂಸ್ ಬ್ಯಾನರ್ ಅಡಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ ‘S/O ಮುತ್ತಣ್ಣ’ (S/O Muttanna) ಸಿನಿಮಾಗೆ ಶ್ರೀಕಾಂತ್ ಹುಣಸೂರು ಆಕ್ಷನ್ ಕಟ್ ಹೇಳುತ್ತಿದ್ದರೆ. ದೇವರಾಜ್ ಪುತ್ರ ಮತ್ತೊಮ್ಮೆ ಈ ಸಿನಿಮಾದ ಮೂಲಕ ಗೆಲುವಿನ ಪರೀಕ್ಷೆಗೆ ಮುಂದಾಗಿದ್ದಾರೆ.

  • ಮುತ್ತಣ್ಣನಾದ ಡೈನಾಮಿಕ್ ಪ್ರಣಂ ದೇವರಾಜ್

    ಮುತ್ತಣ್ಣನಾದ ಡೈನಾಮಿಕ್ ಪ್ರಣಂ ದೇವರಾಜ್

    ಯಂಗ್ ಡೈನಾಮಿಕ್ ಪ್ರಣಂ ದೇವರಾಜ್ (Pranam Devaraj) ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ತೆಲುಗು ಇಂಡಸ್ಟ್ರೀಗೆ ಕಾಲಿಟ್ಟಿರುವ ಪ್ರಣಂ, ಈಗ ‘S/O ಮುತ್ತಣ್ಣ’ (S/O Muttanna) ನಾಗಲು ಸಜ್ಜಾಗಿದ್ದಾರೆ.

    ಯಂಗ್ ಡೈನಾಮಿಕ್  ಪ್ರಣಂ ದೇವರಾಜ್ ಹೊಸ ಸಿನಿಮಾ ಸೆಟ್ಟೇರಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿ S/O ಮುತ್ತಣ್ಣ ಸಿನಿಮಾದ ಮುಹೂರ್ತ ನೆರವೇರಿದೆ. ದೇವರಾಜ್ ದಂಪತಿ ಆಗಮಿಸಿ ಮಗನ ಚಿತ್ರಕ್ಕೆ ಶುಭಾಶಯ ತಿಳಿಸಿದ್ದಾರೆ. ಅಂದಹಾಗೇ S/O ಮುತ್ತಣ್ಣನಿಗೆ ಶ್ರೀಕಾಂತ್ ಹುಣ್ಸೂರ್ (Srikanth Hunsur) ಸಾರಥಿ. ಆರ್.ಚಂದ್ರು ಹಾಗೂ ಪ್ರೇಮ್ಸ್ ಗರಡಿಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಶ್ರೀಕಾಂತ್, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.

    ಪ್ರಣಂ ದೇವರಾಜ್ ನಾಯಕನಾಗಿ ನಟಿಸುತ್ತಿರುವ S/O ಮುತ್ತಣ್ಣ ಸಿನಿಮಾದಲ್ಲಿ ರಂಗಾಯಣ ರಘು, ಸುಚೇಂದ್ರ ಪ್ರಸಾದ್, ಗಿರಿ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ ತಾರಾಬಳಗದಲ್ಲಿದ್ದಾರೆ. ಟೈಟಲ್ ಹೇಳುವಂತೆ ಇದೊಂದು ಅಪ್ಪ-ಮಗನ ಬಾಂಧವ್ಯದ ಕಥೆಯಾಗಿದ್ದು, ಪುರಾತನ ಫಿಲ್ಮಂಸ್ ಬ್ಯಾನರ್ ನಡಿ ದಿವ್ಯಾ ನಿರ್ಮಾಣ ಮಾಡುತ್ತಿದ್ದಾರೆ. S/O ಮುತ್ತಣ್ಣ ಸಿನಿಮಾಗೆ ಸ್ಕೇಟ್ಟಿಂಗ್ ಕೃಷ್ಣ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

     

    ಸದ್ಯ ಚಿತ್ರತಂಡ ಶೂಟಿಂಗ್ ನಲ್ಲಿ ಬ್ಯುಸಿಯಾಗಿದೆ.