Tag: S Nijalingappa

  • ಮಾಜಿ ಸಿಎಂ ನಿಜಲಿಂಗಪ್ಪ ರಾಜೀನಾಮೆಗೆ ಕಾರಣವಾಗಿದ್ದ ರಾಜ್ಯದ ಮೊದಲ ಲಾಕಪ್‍ಡೆತ್ ನಡೆದ ಸ್ಟೇಷನ್ ಇನ್ನೂ ನೆನಪು ಮಾತ್ರ!

    ಮಾಜಿ ಸಿಎಂ ನಿಜಲಿಂಗಪ್ಪ ರಾಜೀನಾಮೆಗೆ ಕಾರಣವಾಗಿದ್ದ ರಾಜ್ಯದ ಮೊದಲ ಲಾಕಪ್‍ಡೆತ್ ನಡೆದ ಸ್ಟೇಷನ್ ಇನ್ನೂ ನೆನಪು ಮಾತ್ರ!

    ಬೆಂಗಳೂರು: ಅದು ರಾಜ್ಯದ ಮೊದಲ ಲಾಕಪ್‍ಡೆತ್ ಪ್ರಕರಣ. ಅದೆಂತಹ ಕೋಲಾಹಲ ಸೃಷ್ಟಿಸಿತ್ತೆಂದರೆ ಅಂದಿನ ಸಿಎಂ ಆ ಲಾಕಪ್‍ಡೆತ್‍ನಿಂದ (Lockup Death Case) ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಯ್ತು. ಶತಮಾನಗಳಷ್ಟು ಹಳೆಯದಾದ, ಸಿಎಂ ರಾಜೀನಾಮೆಗೆ ಕಾರಣವಾದ ಶೇಷಾದ್ರಿಪುರಂ ಪೊಲೀಸ್ ಸ್ಟೇಷನ್ ಬಿಲ್ಡಿಂಗ್ ಇನ್ನೂ ನೆನಪು ಮಾತ್ರ.

    ಒಂದು ಲಾಕಪ್‍ಡೆತ್‍ಗೆ ಸಿಎಂ ರಾಜೀನಾಮೆ ಕೊಟ್ಟ ಇತಿಹಾಸ ಬೆಂಗಳೂರಲ್ಲೇ (Bengaluru) ಸೃಷ್ಟಿಯಾಗಿದೆ. ಅದು ಏ.9 1958ರ ಮಾತು, ಕಳ್ಳತನ ಆರೋಪದಲ್ಲಿ ಮುನಿಯಮ್ಮ ಎಂಬ ಮನೆ ಕೆಲಸದಾಕೆಯನ್ನ ಶೇಷಾದ್ರಿಪುರಂ ಪೊಲೀಸ್ರು (Seshadripuram Police Station) ಬಂಧಿಸಿದ್ದರು. ಆಕೆ ಪೊಲೀಸ್ ಠಾಣೆಯಲ್ಲಿ ಸಾವನ್ನಪ್ಪುತ್ತಾಳೆ. ಅಖಂಡ ಮೈಸೂರು ರಾಜ್ಯದ ಅಧಿವೇಶನ ನಡೆಯುತ್ತಿದ್ದಾಗ ಈ ವಿಚಾರ ಸದನದಲ್ಲಿ ಜೋರಾಗಿಯೇ ಪ್ರಸ್ತಾಪವಾಗುತ್ತದೆ. ಇದನ್ನೂ ಓದಿ: ಬಿಜೆಪಿಯಲ್ಲಿ ವಿದೂಷಕನ ಪಾತ್ರ ಮಾಡಲು ಪೈಪೋಟಿ ನಡೆಯುತ್ತಿದೆ: ರಮೇಶ್ ಬಾಬು

    ಅಂದಿನ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯ ವಿಪಕ್ಷ ನಾಯಕ ಶಾಂತವೇರಿ ಗೋಪಾಲಗೌಡರು ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಪೊಲೀಸರನ್ನು ಸಮರ್ಥಿಸಿಕೊಳ್ಳಬೇಕಿದ್ದ ಗೃಹ ಸಚಿವ ಪೂಣಚ್ಚ, ವಿಪಕ್ಷದೆದರು ಸಪ್ಪೆಯಾದಾಗ ಸಿಎಂ ಎಸ್.ನಿಜಲಿಂಗಪ್ಪ ಪೊಲೀಸರಿಗೆ ಮುನಿಯಮ್ಮಳನ್ನ ಸಾಯಿಸುವ ಉದ್ದೇಶವಿರಲಿಲ್ಲ ಅಂತಾರೆ. ಪರೋಕ್ಷವಾಗಿ ಪೊಲೀಸ್ರು ಹಲ್ಲೆ ಮಾಡಿದ್ದಾರೆ ಎಂದು ಸಿಎಂ ಒಪ್ಪಿಕೊಂಡಿದ್ದಾರೆ ಅಂತಾ ವಿಪಕ್ಷಗಳು ದೊಡ್ಡ ಹುಯಿಲೆಬ್ಬಿಸ್ತಾರೆ.

    ಕೇಂದ್ರದಿಂದ ಬಂದ ಸದಸ್ಯರು ಶಾಸಕರ ಅಭಿಪ್ರಾಯ ಸಂಗ್ರಹಿಸಿ ಮೇ 16 1958 ರಂದು ನಿಜಲಿಂಗಪ್ಪರನ್ನ (S.Nijalingappa) ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಿ, ಬಿ.ಡಿ ಜತ್ತಿಯವರನ್ನ ಮುಖ್ಯಮಂತ್ರಿಯನ್ನಾಗಿ ಮಾಡ್ತಾರೆ.

    ಇಷ್ಟಕ್ಕೆಲ್ಲ ಕಾರಣವಾದ ಶೇಷಾದ್ರಿಪುರಂ ಪೊಲೀಸ್ ಸ್ಟೇಷನ್ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ಕಟ್ಟಲು ಯೋಜನೆ ಮಾಡಲಾಗಿದೆ. ಈಗಾಗಲೆ ಪೊಲೀಸ್ ಠಾಣೆಯನ್ನ ಬೇರೆ ಕಡೆ ವರ್ಗಾವಣೆ ಮಾಡಲಾಗಿದೆ.

    1893 ರಲ್ಲಿ ಮೈಸೂರಿನ ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಅವರ ಹೆಸರಿನಲ್ಲಿ ನಿರ್ಮಾಣವಾದ ಏರಿಯಾವೆ ಶೇಷಾದ್ರಿಪುರ. ಸರ್ಕಾರಿ ಕಟ್ಟಡವಾಗಿದ್ದ ಈ ಬಿಲ್ಡಿಂಗ್ ಕಾಲಾಂತರದಲ್ಲಿ ಪೊಲೀಸ್ ಠಾಣೆಯಾಗಿತ್ತು. ಈ ಸ್ಟೇಷನ್‍ಗೆ ಇನ್ನೊಂದು ಇತಿಹಾಸವಿದೆ. ಇಡೀ ಬೆಂಗಳೂರಲ್ಲಿ ಯಾವುದಾದ್ರು ಸ್ಟೇಷನ್‍ನಲ್ಲಿ ಬೆಲ್ ಬಾರಿಸ್ತಿದ್ರೆ ಅದು ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಮಾತ್ರ. ಸಂಜೆ 6 ಗಂಟೆಯಿಂದ ಬೆಳಗಿನ 6 ಗಂಟೆಯವರೆಗೆ ಪ್ರತೀ ಗಂಟೆಗೊಮ್ಮೆ ಬೆಲ್ ಮೊಳಗುತ್ತಿತ್ತು. ವಾಚ್ ಇಲ್ಲದ ಕಾಲದಲ್ಲಿ ಬೀಟ್ ಮಾಡ್ತಿದ್ದ ಪೊಲೀಸ್ರಿಗೆ ಇದು ಸಮಯ ತಿಳಿಯಲು ಸಹಕಾರಿಯಾಗ್ತಿತ್ತು. ಇದನ್ನೂ ಓದಿ: ತ್ರಿವೇಣಿ ಸಂಗಮದಲ್ಲಿ ನೀರು ಕುಡಿಯೋಕೂ ಯೋಗ್ಯ: ಯೋಗಿ ಆದಿತ್ಯನಾಥ್

  • 5 ಕೋಟಿಗೆ ಮಾಜಿ ಸಿಎಂ ದಿ.ಎಸ್ ನಿಜಲಿಂಗಪ್ಪ ಮನೆ ಖರೀದಿಸಿದ ಸರ್ಕಾರ

    5 ಕೋಟಿಗೆ ಮಾಜಿ ಸಿಎಂ ದಿ.ಎಸ್ ನಿಜಲಿಂಗಪ್ಪ ಮನೆ ಖರೀದಿಸಿದ ಸರ್ಕಾರ

    ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ, ರಾಷ್ಟ್ರನಾಯಕ ದಿ.ಎಸ್ ನಿಜಲಿಂಗಪ್ಪ (S. Nijalingappa) ಅವರ ಮನೆಯನ್ನು ರಾಜ್ಯ ಸರ್ಕಾರ 5 ಕೋಟಿಗೆ ಖರೀದಿ ಮಾಡಿದೆ.

    ನಿಜಲಿಂಗಪ್ಪ ಅವರ ಮನೆ ಖರೀದಿಸಿ, ಸಂರಕ್ಷಿಸಿ ಅಭಿವೃದ್ಧಿಪಡಿಸಲು ಸರ್ಕಾರ ಸಜ್ಜಾಗಿದ್ದು, 5 ಕೋಟಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. 2 ಕೋಟಿ ಹಣವನ್ನು ಚಿತ್ರದುರ್ಗ (Chitradurga) ಡಿಸಿ ಖಾತೆಗೆ ಸರ್ಕಾರ ಬಿಡುಗಡೆಗೊಳಿಸಿದೆ. ಪುತ್ರ ಕಿರಣ್ ಶಂಕರ್ ನಿಜಲಿಂಗಪ್ಪ ಮನೆ ಮಾರಾಟಕ್ಕಿದೆ ಎಂದು ಜಾಹೀರಾತು ನೀಡಿದ್ದ ಹಿನ್ನೆಲೆ ಚಿತ್ರದುರ್ಗದ ಡಿಸಿ ನಿವಾಸದ ಬಳಿಯಿರುವ ಎಸ್ ನಿಜಲಿಂಗಪ್ಪ ನಿವಾಸವನ್ನು ಸರ್ಕಾರ ಖರೀದಿಸಿದೆ. ಇದನ್ನೂ ಓದಿ: ಬೆಂಗಳೂರಿನ ಪ್ರಸಿದ್ಧ ಬಸವನಗುಡಿ, ಮಲ್ಲೇಶ್ವರಂ ಕಡಲೆಕಾಯಿ ಪರಿಷೆಗೆ ದಿನಾಂಕ ನಿಗದಿ

    ಈ ಹಿಂದೆ ಕೆಪಿಸಿಸಿಯಿಂದ (KPCC) ನಿಜಲಿಂಗಪ್ಪ ಮನೆ ಖರೀದಿ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸಿತ್ತು. ಇದೇ ವಿಚಾರವಾಗಿ ಸೆಪ್ಟೆಂಬರ್ 2 ರಂದು ನಿಜಲಿಂಗಪ್ಪ ನಿವಾಸಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಭೇಟಿ ನೀಡಿದ್ದರು. ಪುತ್ರ ಕಿರಣ್ ಜೊತೆ ಕೆಲಹೊತ್ತು ಚರ್ಚೆ ನಡೆಸಿದ್ದರು. ನಿಜಲಿಂಗಪ್ಪ ನಿವಾಸ ಖರೀದಿಸಿ ಕಾಂಗ್ರೆಸ್ ಕಚೇರಿ ತೆರೆಯುವ ಪ್ಲ್ಯಾನ್ ಅನ್ನು ಕೆಪಿಸಿಸಿ ಮಾಡಿತ್ತು. ಕಾಂಗ್ರೆಸ್ ನಾಯಕರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಮನೆ ಮಾರಾಟಕ್ಕಿದೆ ಎಂದು ಕಿರಣ್ ಜಾಹೀರಾತು ನೀಡಿದ್ದರು. ಸದ್ಯ ನಿಜಲಿಂಗಪ್ಪ ಪುತ್ರ ಕಿರಣ್ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇದನ್ನೂ ಓದಿ: ನಮ್ಮ ಪಕ್ಷದ 50 ಶಾಸಕರಿಗೆ ಬಿಜೆಪಿಯಿಂದ ತಲಾ 50 ಕೋಟಿ ಆಫರ್‌ ಬಂದಿತ್ತು: ಸಿಎಂ ಬಾಂಬ್‌

  • ಮೈಸೂರು ರಾಜ್ಯ ʻಕರ್ನಾಟಕʼವಾಗಿದ್ದು ಹೇಗೆ? – ನಾಮಕರಣದ ಕಥೆ ನಿಮಗೆ ಗೊತ್ತೇ?

    ಮೈಸೂರು ರಾಜ್ಯ ʻಕರ್ನಾಟಕʼವಾಗಿದ್ದು ಹೇಗೆ? – ನಾಮಕರಣದ ಕಥೆ ನಿಮಗೆ ಗೊತ್ತೇ?

    ಪ್ರತಿ ವರ್ಷ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವುದು ಮತ್ತು ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅದರಂತೆ ಕರ್ನಾಟಕದ ಇತಿಹಾಸ ತಿಳಿಯುವುದೂ ಅಷ್ಟೇ ಮುಖ್ಯವಾಗಿದೆ.

    ರಾಜ್ಯ ಉದಯಿಸಿ 17 ವರ್ಷಗಳವರೆಗೂ ʻಮೈಸೂರುʼ ಎಂಬ ಹೆಸರೇ ಇತ್ತು. ಬಳಿಕ ಮೈಸೂರು ರಾಜ್ಯಕ್ಕೆ 1973ರ ನವೆಂಬರ್ 1ರಂದು ʻಕರ್ನಾಟಕ’ ಎಂದು ನಾಮಕರಣ ಮಾಡಲಾಯಿತು. ʻಮೈಸೂರು’ ‘ಬದಲಾಗಿ ʻಕರ್ನಾಟಕʼ ಎಂದು ಮರುನಾಮಕರಣ ಮಾಡಿದ್ದೇಕೆ? ರಾಜ್ಯದ ಮೂಲ ಹೆಸರು ಬದಲಿಸುವ ಪ್ರಯತ್ನಗಳು ಏಕೆ ನಡೆದವು? ಇದೊಂದು ಚೆಂದದ ಕುತೂಹಲ. ಇದರ ಸಂಕ್ಷಿಪ್ತ ಹಿನ್ನೆಲೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ….

    ಚಳವಳಿಗಾರರೂ ಆಗಿದ್ದ ಅಂದಾನಪ್ಪ ದೊಡ್ಡಮೇಟಿ ಅವರು ವಿಧಾನಸಭಾ ಸದಸ್ಯರೆಲ್ಲರೂ ʻಕರ್ನಾಟಕ’ ಎಂಬ ಹೆಸರು ಕುರಿತು ಚರ್ಚಿಸಲೆಂದೇ ಕೃತಿಯೊಂದನ್ನು ರಚಿಸಿ ಹಂಚಿದರು. 1957ರ ಸೆ.30ರಂದು ಈ ಕುರಿತು ಸದನದಲ್ಲಿ ಚರ್ಚೆಯಾಯಿತು. ಪ್ರತಿಪಕ್ಷದ ಉಪನಾಯಕರಾಗಿದ್ದ ಎಂ. ರಾಮಪ್ಪನವರು ʻಕರ್ನಾಟಕ’ ನಾಮಕರಣಗೊಳ್ಳಬೇಕೆಂದು ಎರಡು ಬಾರಿ ಗೊತ್ತುವಳಿ ಮಂಡಿಸಿದ್ದರೂ ಅನಿರ್ದಿಷ್ಟಕಾಲ ಮುಂದೂಡಲ್ಪಟ್ಟಿತು. ಶಾಸಕರಾದ ಬಸವನಗೌಡ ಮತ್ತು ಆ‌ರ್.ಎಸ್ ಪಾಟೀಲ್ ಅವರೂ ಸದನದಲ್ಲಿ ಪ್ರಸ್ತಾಪಿಸಿದ್ದರು. ಅಂದಾನಪ್ಪನವರು, ʻಕರ್ನಾಟಕʼ ನಾಮಕರಣಗೊಳ್ಳದೇ ತಾವು ವಿರಮಿಸುವುದಿಲ್ಲ, ಎನ್ನುವ ಮಟ್ಟಿಗೆ ಮತ್ತೆಮತ್ತೆ ನಾಮಕರಣದ ವಿಚಾರವನ್ನು ಸದನದಲ್ಲಿ ಮುನ್ನೆಲೆಗೆ ತಂದರು. ಇದನ್ನೂ ಓದಿ: ಕರ್ನಾಟಕ ಏಕೀಕರಣದ ಏಕೈಕ ಹುತಾತ್ಮ ಯಾರೆಂದು ಗೊತ್ತೆ?

    ನಂತರದಲ್ಲಿ ಜನರಿಂದ ಒತ್ತಡ ತೀವ್ರಗೊಂಡಾಗ ದೇವರಾಜ ಅರಸು ಅವರು ಜುಲೈ 27, 1972ರಂದು ʻಕರ್ನಾಟಕ’ ನಾಮಕರಣದ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಿ, ಅಂದೇ ಒಪ್ಪಿಗೆ ಪಡೆದರು. ಅದೇ ತಿಂಗಳ 31ರಂದು ವಿಧಾನ ಪರಿಷತ್ತಿನಲ್ಲಿ ಒಪ್ಪಿಗೆ ದೊರೆಯಿತು. ವಿಧೇಯಕವು 1973ರ ಜುಲೈ 30ರಂದು ಲೋಕಸಭೆಯಲ್ಲಿ, ಆಗಸ್ಟ್ 8ರಂದು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡು, ಅ.8ರಂದು ರಾಷ್ಟ್ರಪತಿ ವಿ.ವಿ.ಗಿರಿ ಅಂಕಿತದೊಂದಿಗೆ ಮೈಸೂರು ರಾಜ್ಯ ʻಕರ್ನಾಟಕ’ ವಾಯಿತು. ನವೆಂಬರ್ 1, 1973ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 17ನೇ ರಾಜ್ಯೋತ್ಸವವೇ ಕರ್ನಾಟಕ ನಾಮಕರಣೋತ್ಸವ. ಅರಸು ಅವರು ಕಾರ್ಯಕ್ರಮ ಉದ್ಘಾಟಿಸಿ, ʻಇದು ನಾಡಿನ ಜನತೆಯ ಆಸೆ, ಆಕಾಂಕ್ಷೆಗಳ ಪ್ರತೀಕ. ಕನ್ನಡ ಭಾವಬಂಧನದ ಸಂಕೇತʼ ಎಂದು ನುಡಿದಿದ್ದರು.

    ರಾಜ್ಯನಿರ್ಮಾಣ ದಿನಾಚರಣೆ ನಡೆದಿದ್ದೆಲ್ಲಿ?
    ಕೆಂಗಲ್‌ ಹನುಮಂತರಾಯರ ಆಶಯದಂತೆ ಏಕೀಕರಣಗೊಂಡ ಕರ್ನಾಟಕವು ವಿಶಾಲ ʻಮೈಸೂರು ರಾಜ್ಯ’ ಎಂಬ ಹೆಸರಿನಿಂದ ನ.1, 1956ರಂದು ಅಸ್ತಿತ್ವಕ್ಕೆ ಬಂತು. ಅಂದು ಕನ್ನಡಿಗರ ಸಾಂಸ್ಕೃತಿಕ ರಾಜಧಾನಿ ಹಂಪಿಯಲ್ಲಿ ಉತ್ತರ ಕರ್ನಾಟಕದ ಜನರು ʻರಾಜ್ಯ ನಿರ್ಮಾಣದ ದಿನ’ವನ್ನಾಗಿ ಆಚರಿಸಿದರು. ʻಕನ್ನಡ ಕುಲಪುರೋಹಿತ’ ಆಲೂರು ವೆಂಕಟರಾಯರು ಈ ಉತ್ಸವದ ಪೌರೋಹಿತ್ಯ ವಹಿಸಿದ್ದು ವಿಶೇಷವಾಗಿತ್ತು.

    ಮೊದಲ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ:
    ಏಕೀಕರಣದ ರೂವಾರಿಗಳಾದ ಎಸ್‌. ನಿಜಲಿಂಗಪ್ಪನವರು 10 ದಿನಗಳ ಮೊದಲು ವಿಶಾಲ ಮೈಸೂರು ಕಾಂಗ್ರೆಸ್ ಶಾಸಕಾಂಗ ಪಕ್ಷದ ಅವಿರೋಧ ನಾಯಕರಾಗಿ ಆಯ್ಕೆಯಾದರು. ಏಕೀಕರಣದ ದಿನದಂದೇ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ವಿಶಾಲ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಗಳಾದರು. ಈವರೆಗೆ ರಾಜ್ಯದಲ್ಲಿ ಐದು ವರ್ಷ ಪೂರ್ಣಾವಧಿ ಪೂರೈಸಿದ ಮೂವರು ಮುಖ್ಯಮಂತ್ರಿಗಳಲ್ಲಿ ಇವರು ಮೊದಲಿಗರು.

  • ಎಸ್.ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ ಜೀವನ ಪಠ್ಯಕ್ಕೆ ಸೇರ್ಪಡೆಗೆ ವಿ.ಸೋಮಣ್ಣ ಮನವಿ

    ಎಸ್.ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ ಜೀವನ ಪಠ್ಯಕ್ಕೆ ಸೇರ್ಪಡೆಗೆ ವಿ.ಸೋಮಣ್ಣ ಮನವಿ

    – ಅಧ್ಯಯನ ಪೀಠ ಆರಂಭಿಸಲು ಒತ್ತಾಯ

    ನವದೆಹಲಿ: ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸುವುದರೊಂದಿಗೆ ಕರ್ನಾಟಕದ ಏಕೀಕೃತ ಚಳುವಳಿಯಲ್ಲೂ ಮುಖಂಡತ್ವವನ್ನು ವಹಿಸಿದ್ದ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಎಸ್.ನಿಜಲಿಂಗಪ್ಪ ಮತ್ತು ಕೆಂಗಲ್ ಹನುಮಂತಯ್ಯನವರ ಸೇವೆ ಅವಿಸ್ಮರಣೀಯವಾದದ್ದು. ಈ ಹಿನ್ನೆಲೆ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು ಮತ್ತು ಶಾಲಾ ಪಠ್ಯದಲ್ಲಿ ಅವರ ಬದುಕು ಸೇರ್ಪಡೆಯಾಗಬೇಕು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಒತ್ತಾಯಿಸಿದ್ದಾರೆ.

    ಈ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದ ಅವರು, ಭಾರತದ ಸ್ವಾತಂತ್ರ್ಯ ಚಳುವಳಿ ಮತ್ತು ಕರ್ನಾಟಕ ಏಕೀಕರಣ ಚಳುವಳಿಯ ಸಂದರ್ಭದಲ್ಲಿ ಜನರಲ್ಲಿ ಅರಿವು ಮತ್ತು ಹೋರಾಟದ ಕಿಚ್ಚನ್ನು ಮೂಡಿಸುವುದರೊಂದಿಗೆ ಹರಿದು ಹಂಚಿ ಹೋಗಿದ್ದ ಕನ್ನಡ ಪ್ರದೇಶಗಳು ಒಂದಾಗಬೇಕೆಂಬ ಅವರ ದೃಢ ಸಂಕಲ್ಪದಿಂದ 1956 ನವೆಂಬರ್ 1ರಂದು ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದಿತು. ಇದನ್ನೂ ಓದಿ: ಬೈರತಿ ಸುರೇಶ್ ದುರ್ಯೋಧನ, ದುಶ್ಯಾಸನ ಇದ್ದಂತೆ: ಏಕವಚನದಲ್ಲೇ ಹೆಚ್.ವಿಶ್ವನಾಥ್ ವಾಗ್ದಾಳಿ

    ಮುಖ್ಯಮಂತ್ರಿಗಳಾಗಿ ರಾಜ್ಯದ ಅಭಿವೃದ್ಧಿಗೆ ಅವರು ನೀಡಿದ ಹತ್ತಾರು ಜನಪರ ಯೋಜನೆಗಳು, ಅಭಿವೃದ್ಧಿಪರ ಚಿಂತನೆಗಳು ಅನುಷ್ಠಾನಗೊಂಡಿವೆ. ಕನ್ನಡ ನಾಡಿನ ಬಗ್ಗೆ ಅವರಿಗಿದ್ದ ದೂರದೃಷ್ಟಿಯ ಚಿಂತನೆಯ ಫಲವಾಗಿ ಇಂದು ಕರ್ನಾಟಕ ರಾಜ್ಯ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದ್ದು, ಇವುಗಳು ರಾಜ್ಯದ ಚರಿತ್ರೆಯಲ್ಲಿ ಐತಿಹಾಸಿಕ ಮೈಲುಗಲ್ಲಾಗಿದೆ. ಕನ್ನಡಿಗರು ಹಾಗೂ ಮುಂದಿನ ಪೀಳಿಗೆ ಸದಾ ಈ ಮಹನೀಯರನ್ನು ನೆನಪಿಸಿಕೊಳ್ಳುವ ಕಾರ್ಯವನ್ನು ಕರ್ನಾಟಕ ಸರ್ಕಾರದಿಂದ ನಡೆಯಬೇಕಿದೆ.

    ಈ ಹಿನ್ನೆಲೆ ರಾಜ್ಯದ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಪಠ್ಯಪುಸ್ತಕಗಳಲ್ಲಿ ಎಸ್. ನಿಜಲಿಂಗಪ್ಪ ಮತ್ತು ಕೆಂಗಲ್ ಹನುಮಂತಯ್ಯನವರ ಜೀವನ-ಬದುಕು ರಾಜ್ಯದ ಅಭಿವೃದ್ಧಿಗೆ ಅವರು ಕೈಗೊಂಡ ಸೇವಾಕಾರ್ಯಗಳನ್ನು ಪರಿಚಯಿಸಬೇಕು. ಎಸ್.ನಿಜಲಿಂಗಪ್ಪ ಮತ್ತು ಕೆಂಗಲ್ ಹನುಮಂತಯ್ಯನವರ ಜನ್ಮದಿನಾಚರಣೆಯನ್ನು ಕರ್ನಾಟಕ ಸರ್ಕಾರದಿಂದ ಆಚರಿಸಬೇಕು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕೆಂಗಲ್ ಹನುಮಂತಯ್ಯ ಹಾಗೂ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಎಸ್.ನಿಜಲಿಂಗಪ್ಪ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಜಿಂದಾಲ್‌ಗೆ ಭೂ ಮಾರಾಟ ಪ್ರಕರಣ: ಕಾಂಗ್ರೆಸ್ಸಿಗರಿಗೂ, ಹೈಕಮಾಂಡಿಗೂ ಸಂದಾಯ ಆಗಿರಬಹುದು – ಸಿ.ಟಿ ರವಿ

  • ರಾಜ್ಯಕ್ಕೆ ಇಬ್ಬರು ಸಿಎಂಗಳನ್ನ ಕೊಟ್ಟ ಹೆಗ್ಗಳಿಕೆ ಶಿಗ್ಗಾಂವಿ ಕ್ಷೇತ್ರದ್ದು

    ರಾಜ್ಯಕ್ಕೆ ಇಬ್ಬರು ಸಿಎಂಗಳನ್ನ ಕೊಟ್ಟ ಹೆಗ್ಗಳಿಕೆ ಶಿಗ್ಗಾಂವಿ ಕ್ಷೇತ್ರದ್ದು

    ಹಾವೇರಿ: ರಾಜ್ಯದ ಮುಖ್ಯಮಂತ್ರಿಯಾಗಿ ಚುಕ್ಕಾಣಿ ಹಿಡಿಯುವುದು ಸುಲಭದ ಮಾತಲ್ಲ. ಅದರಲ್ಲೂ ಇತ್ತೀಚೆಗೆ ಸಿ.ಎಂ ಅಭ್ಯರ್ಥಿಗಳಿಗೆ ಪೈಪೋಟಿ ಹೆಚ್ಚಾಗಿದೆ. ಪ್ರಾದೇಶಿಕ ಹಾಗೂ ರಾಷ್ಟ್ರೀಯ ಪಕ್ಷಗಳು ಸೇರಿ, ಪ್ರತಿ ಪಕ್ಷದಲ್ಲೂ ಪ್ರಮುಖರು ಸಿಎಂ ಆಗುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಶಿಗ್ಗಾಂವಿ (Shiggaavi) ಸವಣೂರು ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ್ ಬೊಮ್ಮಾಯಿ (Basavaraj Bommai) ಅವರಿಗೆ ಅದು ಬಯಸದೇ ಬಂದ ಭಾಗ್ಯವಾಗಿದೆ. ಏಕೆಂದರೆ ಈವರೆಗೆ ಈ ಕ್ಷೇತ್ರ ಇಬ್ಬರು ಮುಖ್ಯಮಂತ್ರಿಗಳನ್ನ ರಾಜ್ಯಕ್ಕೆ ಕೊಟ್ಟಿದೆ. ಮೊದಲಿಗೆ ಎಸ್. ನಿಜಲಿಂಗಪ್ಪ (1962-1968) (S Nijalingappa) ಅವರ ನಂತರ ಬಸವರಾಜ್ ಬೊಮ್ಮಾಯಿ.

    ಬೊಮ್ಮಾಯಿಗೆ ಬಯಸದೆ ಬಂದ ಭಾಗ್ಯ: ಬಸವರಾಜ್ ಬೊಮ್ಮಾಯಿ ಶಿಗ್ಗಾಂವಿ ಸವಣೂರು ವಿಧಾನಸಭಾ ಕ್ಷೇತ್ರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ ನಾಯಕ ಎನಿಸಿಕೊಂಡಿದ್ದಾರೆ.

    2008ರಲ್ಲಿ ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. ಇದಕ್ಕೂ ಮುನ್ನ ವಿಧಾನಪರಿಷತ್ ಸದಸ್ಯನಾದ ಅನುಭವವಿತ್ತು. ಅದರಲ್ಲೂ 2006-2007ರಲ್ಲಿ ಬಿಜೆಪಿ ಮತ್ತು ಜೆಡಿಎಸ್ (JDS) ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ ಜಲಸಂಪನ್ಮೂಲ ಸಚಿವರಾಗಿ ಅಧಿಕಾರ ನಡೆಸಿದ್ದರು. ಈ ವೇಳೆ ರಾಜಕೀಯ ನಾಯಕನಾಗಿ ಸಾಕಷ್ಟು ಅನುಭವ ಪಡೆದುಕೊಂಡಿದ್ದರು. ಜೊತೆಗೆ ಸಾಕಷ್ಟು ಯೋಜನೆಗಳನ್ನೂ ಜಾರಿಗೆ ತಂದಿದ್ದರು. ನಂತರ 2013 ರಲ್ಲಿ ಕೆಜೆಪಿ-ಬಿಜೆಪಿ ಗದ್ದಲದ ನಡುವೆಯೂ ಬಿಜೆಪಿಯಿಂದ ಕಣಕ್ಕಿಳಿದು 2ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

    2018ರಲ್ಲಿ 3ನೇ ಬಾರಿಗೆ ಗೆದ್ದು ಶಿಗ್ಗಾಂವಿ ಸವಣೂರು ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದರು. ಯಡಿಯೂರಪ್ಪ ಅವರ ಪಕ್ಕಾ ಶಿಷ್ಯನಾಗಿ ರಾಜಕೀಯ ಪ್ರಾವೀಣ್ಯತೆ ಪಡೆದುಕೊಂಡರು. 2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಒಂದೂವರೆ ವರ್ಷಗಳ ಕಾಲ ಮುಂದುವರಿದಿತ್ತು. ಆದರೆ ಆಪರೇಷನ್ ಕಮಲದಿಂದಾಗಿ ಕಾಂಗ್ರೆಸ್, ಜೆಡಿಎಸ್‌ನ 17 ಶಾಸಕರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡರು. ಇದರಿಂದ ಸಮ್ಮಿಶ್ರ ಸರ್ಕಾರ ಆಡಳಿತ ಪತನಗೊಂಡಿತು. ನಂತರ ಬಹುಮತದೊಂದಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಯಡಿಯೂರಪ್ಪ (BS Yediyurappa) ಮುಖ್ಯಮಂತ್ರಿಯಾದರು. ಬೊಮ್ಮಾಯಿ ಗೃಹಖಾತೆ ಸಚಿವರಾದರು.

    ಯಡಿಯೂರಪ್ಪ ಅವರ ರಾಜೀನಾಮೆ ನಂತರ ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಲು ಹಲವು ನಾಯಕರು ನಾ ಮುಂದು, ತಾ ಮುಂದು ಅಂತಾ ಸ್ಪರ್ಧೆಗಿಳಿದಿದ್ದರು. ಆದರೆ ಹೈಕಮಾಂಡ್ ಮತ್ತು ಯಡಿಯೂರಪ್ಪ ಕೃಪಾಕಟಾಕ್ಷದಿಂದ ಬಸವರಾಜ ಬೊಮ್ಮಾಯಿ ಸಿಎಂ ಆದರು. ಮುರುಗೇಶ್‌ ನಿರಾಣಿ, ಅರವಿಂದ ಬೆಲ್ಲದ್ ಸೇರಿ ಹಲವು ಶಾಸಕರು ಸಿ.ಎಂ ರೇಸ್ ನಲ್ಲಿದ್ದರು. ಎಲ್ಲರನ್ನ ತಿರಸ್ಕಾರ ಮಾಡಿದ ಹೈಕಮಾಂಡ್ ಹಾಗೂ ಯಡಿಯೂರಪ್ಪ ಬಸವರಾಜ್ ಬೊಮ್ಮಾಯಿ ಅವರನ್ನ ಸಿಎಂ ಮಾಡಿದರು. ಆ ಮೂಲಕ ಶಿಗ್ಗಾಂವಿ ಸವಣೂರು ವಿಧಾನಸಭಾ ಕ್ಷೇತ್ರದಿಂದ 2ನೇ ಮುಖ್ಯಮಂತ್ರಿಯಾಗಿ ಆಧಿಕಾರ ನಡೆಸುತ್ತಿದ್ದಾರೆ.

    ಮೊದಲ ಸಿಎಂ ಯಾರು?
    1967ರ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಏಕೀಕೃತ ಕರ್ನಾಟಕದ ಮೊದಲ ಸಿಎಂ ಎಸ್.ನಿಜಲಿಂಗಪ್ಪ ಅವಿರೋಧವಾಗಿ ಆಯ್ಕೆಯಾಗಿ ಮತ್ತೂಂದು ಅವಧಿಗೆ ಮುಖ್ಯಮಂತ್ರಿಯಾಗಿದ್ದರು. ಅಲ್ಲದೆ ಕರ್ನಾಟಕದಲ್ಲಿ ಸಿಎಂ ಆಗಿ 5 ವರ್ಷ ಅಧಿಕಾರ ಪೂರೈಸಿದ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದಾರೆ.

    ಇದು ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರವಾಗಿದೆ. ಕಾಂಗ್ರೆಸ್ ಹೆಚ್ಚಿನ ಅವಧಿಗೆ ಆ ಸಮುದಾಯದವರಿಗೇ ಅವಕಾಶ ಕೊಟ್ಟಿದೆ. ಇಲ್ಲಿನ ಮತದಾರರು 8 ಬಾರಿ ಕಾಂಗ್ರೆಸ್, ಎರಡು ಬಾರಿ ಪಕ್ಷೇತರರು, ಒಂದು ಬಾರಿ ಜೆಡಿಎಸ್ ಹಾಗೂ 3 ಬಾರಿ ಬಿಜೆಪಿಗೆ ಮಣೆ ಹಾಕಿದ್ದಾರೆ. ನದಾಫ ಮೊಹಮ್ಮದ್ ಖಾಸೀಂಸಾಬ ಮರ್ಧಾನಸಾಬ ಅವರು 1972, 1978, 1983ರಲ್ಲಿ ಸತತವಾಗಿ 3 ಬಾರಿ ಆಯ್ಕೆಯಾಗಿ ಹ್ಯಾಟ್ರಿಕ್ ಸಾಧಿಸಿದ್ದರು. 1985ರ ಚುನಾವಣೆಯಲ್ಲಿ ಖಾಸೀಂಸಾಬ ಅವರನ್ನು ಪಕ್ಷೇತರ ಅಭ್ಯರ್ಥಿ ಎನ್.ವಿ ಪಾಟೀಲ್ ಸೋಲಿಸಿದ್ದು ದಾಖಲೆಯಾಗಿದೆ. ಖಾಶೀಂಸಾಬ ನಂತರ ಎಂ.ಸಿ ಕುನ್ನೂರ ಎರಡು ಬಾರಿ ಹಾಗೂ ಹಾಲಿ ಶಾಸಕ ಬಸವರಾಜ ಬೊಮ್ಮಾಯಿಯವರು 2008, 2013 ಹಾಗೂ 2018 ರಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಈಗ ಸಿಎಂ ರಾಜ್ಯಭಾರ ಮಾಡುತ್ತಿದ್ದಾರೆ.

    ಎಸ್. ನಿಜಲಿಂಗಪ್ಪ ಅವರು ಶಿಗ್ಗಾಂವಿ ಕ್ಷೇತ್ರದಿಂದ ಅವಿರೋಧ ಆಯ್ಕೆಯಾಗಿ ಮುಖ್ಯಮಂತ್ರಿಯಾಗಿ 5 ವರ್ಷ ಅಧಿಕಾರ ಮಾಡಿದ್ದಾರೆ. ಆದರೆ ಸಿಎಂ ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ಹೈಕಮಾಂಡ್ ಕೃಪಾಕಟಾಕ್ಷದಿಂದ ಸಿಎಂ ಆಗಿ ರಾಜ್ಯಭಾರ ಮಾಡುತ್ತಿದ್ದಾರೆ. ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

  • ಕರ್ನಾಟಕದ ಇತಿಹಾಸದಲ್ಲಿ ಬಂದು ಹೋದವ್ರು 25 ಸಿಎಂ; ಪೂರ್ಣಾವಧಿ ಆಡಳಿತ ಮಾಡಿದವ್ರು ಮೂರೇ ಮಂದಿ

    ಕರ್ನಾಟಕದ ಇತಿಹಾಸದಲ್ಲಿ ಬಂದು ಹೋದವ್ರು 25 ಸಿಎಂ; ಪೂರ್ಣಾವಧಿ ಆಡಳಿತ ಮಾಡಿದವ್ರು ಮೂರೇ ಮಂದಿ

    ರಾಜ್ಯ ರಾಜ್ಯಕೀಯದಲ್ಲಿ (Karnataka Politics) ಮಹತ್ತರ ಬದಲಾವಣೆಗಳು ಸಂಭವಿಸಿವೆ. ಬೆಂಗಳೂರು-ಮೈಸೂರು ದಶಪಥ ರಸ್ತೆ (Bengaluru Mysuru Expressway) ಕ್ರೆಡಿಟ್‌ ವಾರ್‌ ನಡುವೆ ಮಂಡ್ಯ ಸಂಸದೆ ಸುಮಲತಾ (Sumalatha), ನರೇಂದ್ರ ಮೋದಿ (Narendra Modi) ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಬೆಂಬಲ ಘೋಷಣೆ ಮಾಡಿರುವುದು ಮಂಡ್ಯ ರಾಜಕೀಯ ಬೆಳವಣಿಗೆಯಲ್ಲಿ ಬಹುದೊಡ್ಡ ತಿರುವು ಪಡೆದುಕೊಂಡಿದೆ. ಮತ್ತೊಂದೆಡೆ, ತಮ್ಮ ಪಕ್ಷದ ಕೀರ್ತಿಪತಾಕೆ ಹಾರಿಸುತ್ತಾರೆ ಎಂಬ ಪ್ರಮುಖ ನಾಯಕರೇ ಪಕ್ಷಾಂತರ ಹಾದಿ ಹಿಡಿದಿದ್ದಾರೆ. ಕರ್ನಾಟಕ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಮೂರು ಪಕ್ಷಗಳು 2023ರಲ್ಲಿ ಅಧಿಕಾರದ ಗದ್ದುಗೆ ಹಿಡಿಯಬೇಕೆಂದು ಪಣ ತೊಟ್ಟಿವೆ.

    ಈ ಎಲ್ಲ ರಾಜಕೀಯ ವಿದ್ಯಮಾನಗಳ ನಡುವೆ ರಾಜ್ಯ ರಾಜಕೀಯದ ಇತಿಹಾಸ ಕೆದಕಿದಾಗ ಕರ್ನಾಟಕದಲ್ಲಿ 5 ವರ್ಷ ಅವಧಿ ಪೂರೈಸಿದ್ದು ಮೂವರು ಮುಖ್ಯಮಂತ್ರಿಗಳು ಮಾತ್ರ. ಅದೂ ಕಾಂಗ್ರೆಸ್‌ ಪಕ್ಷದವರೇ ಎಂಬುದು ವಿಶೇಷ. ಅದರ ಬಗ್ಗೆ ಒಂದು ಪಕ್ಷಿನೋಟ ಇಲ್ಲಿದೆ. ಇದನ್ನೂ ಓದಿ: ಕೋಲಾರ ಬೇಡ, ವರುಣಾದಿಂದ್ಲೇ ಸ್ಪರ್ಧಿಸಿ- ಸಿದ್ದರಾಮಯ್ಯಗೆ ಖರ್ಗೆ, ರಾಹುಲ್ ಗಾಂಧಿ ಸಲಹೆ

    ಎಸ್. ನಿಜಲಿಂಗಪ್ಪ (S Nijalingappa) [1962-68], ಡಿ. ದೇವರಾಜ ಅರಸು (D Devaraj Urs) [1972-77] ಹಾಗೂ ಸಿದ್ದರಾಮಯ್ಯ (Siddaramaiah) [2013-2018] ಈ ಮೂವರಷ್ಟೇ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಪೂರ್ಣಾವಧಿ ಆಡಳಿತ ಪೂರೈಸಿದ ಮುಖ್ಯಮಂತ್ರಿಗಳಾಗಿದ್ದಾರೆ. ಬಿಜೆಪಿ (BJP) ಹಾಗೂ ಜೆಡಿಎಸ್‌ನ (JDS) ಮುಖ್ಯಮಂತ್ರಿಗಳು ಯಾರೂ 5 ವರ್ಷ ಅವಧಿ ಪೂರೈಸಲು ಸಾಧ್ಯವಾಗಿಲ್ಲ.

    1999ರ ಅಕ್ಟೋಬರ್‌ನಲ್ಲಿ ರಾಜ್ಯದಲ್ಲಿ ಎಸ್‌.ಎಂ. ಕೃಷ್ಣ (SM Krishna) ನೇತೃತ್ವದ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿ ಸರ್ಕಾರ ರಚಿಸಿ, ಉತ್ತಮ ಆಡಳಿತ ನೀಡಿತ್ತು. ಆದರೆ ಇನ್ನೇನು ಪೂರ್ಣಾವಧಿ ಮುಗಿಸಲು ಕೇವಲ 5 ತಿಂಗಳು ಇದೆ ಎನ್ನುವಾಗಲೇ ಲೋಕಸಭಾ ಚುನಾವಣೆ ಎದುರಾಗಿತ್ತು. ಹೀಗಾಗಿ ವಿಧಾನಸಭೆ ಚುನಾವಣೆಯೂ (Karnataka Assembly Election) ಒಟ್ಟಿಗೇ ನಡೆಯಲಿ ಎನ್ನುವ ಉದ್ದೇಶದಿಂದ ಮಾಜಿ ಸಿಎಂ ಎಸ್. ಎಂ ಕೃಷ್ಣ ವಿಧಾನಸಭೆಯನ್ನು ವಿಸರ್ಜಿಸಿದ್ದರು. ಹೀಗಾಗಿ ಪೂರ್ಣಾವಧಿ ಸಿಎಂ ಪಟ್ಟಿಗೆ ಎಸ್‌ಎಂಕೆ ಹೆಸರು ಸೇರ್ಪಡೆಯಾಗಲಿಲ್ಲ. ಇದನ್ನೂ ಓದಿ: ಸುವರ್ಣ ಮಂಡ್ಯ ಪುಸ್ತಕದಲ್ಲಿ ಉರಿಗೌಡ, ನಂಜೇಗೌಡರ ಬಗ್ಗೆ ಉಲ್ಲೇಖ – ರಾಜಕೀಯ ವಾದಕ್ಕೆ ಪುಷ್ಟಿ

    ಫ್ರೆಬ್ರವರಿ 2006ರಿಂದ 2007ರ ಅವಧಿಯಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಮೈತ್ರಿ ಸರ್ಕಾರದ ಆವಧಿಯಲ್ಲಿ ಹೆಚ್‌.ಡಿ ಕುಮಾರಸ್ವಾಮಿ ಮೊದಲಬಾರಿಗೆ ಮುಖ್ಯಮಂತ್ರಿ ಆಗಿದ್ದರು. ಅವರ ಮೊದಲ ಅವಧಿ 2 ವರ್ಷಗಳಿಗಿಂತಲೂ ಕಡಿಮೆಯಿತ್ತು. ಆದರೆ ಅಧಿಕಾರ ಹಂಚಿಕೆ ವಿಚಾರದಲ್ಲಿ ಎರಡೂ ಪಕ್ಷಗಳ ನಡುವೆ ಮನಸ್ಥಾಪ ಏರ್ಪಟ್ಟಿತ್ತು. ಇದರಿಂದ ಕೇಸರಿ ಪಾಳಯ ಬೆಂಬಲ ವಾಪಸ್‌ ಪಡೆದಿದ್ದರಿಂದ ಮೈತ್ರಿ ಸರ್ಕಾರ ಅಂತ್ಯಗೊಂಡಿತ್ತು. ಆ ನಂತರ ಕುಮಾರಸ್ವಾಮಿ 2018ರಲ್ಲಿ ಮತ್ತೆ ಕಾಂಗ್ರೆಸ್‌ ಜೊತೆಗಿನ ಮೈತ್ರಿ ಸರ್ಕಾರದಲ್ಲಿ 14 ತಿಂಗಳು ವರ್ಷ ಸಿಎಂ ಆಗಿದ್ದರು. ಆಡಳಿತಾರೂಢ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ 17 ಶಾಸಕರು ಆಪರೇಷನ್‌ ಕಮಲಕ್ಕೆ ಒಳಗಾಗಿ ಸರ್ಕಾರ ಪತನಗೊಂಡಿತು.

    ಕೇಸರಿ ಪಾಳಯದಲ್ಲಿ ನೋಡುವುದಾದರೆ, 2007ರಲ್ಲಿ ಕುಮಾರಸ್ವಾಮಿಯ ನಂತರ ಬಿಜೆಪಿಯಿಂದ ಬಿ.ಎಸ್‌ ಯಡಿಯೂರಪ್ಪ ಮೊಟ್ಟಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಆದರು. ಈ ವೇಳೆ ಜೆಡಿಎಸ್‌ ಮೈತ್ರಿ ಮುರಿದುಕೊಂಡಿದ್ದರಿಂದ 7 ದಿನಗಳಲ್ಲೇ ಬಿಎಸ್‌ವೈ ರಾಜೀನಾಮೆ ನೀಡಿದ ಪರಿಣಾಮ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದಿತು.

    2008ರಲ್ಲಿ ಬಿಜೆಪಿ ಐತಿಹಾಸಿಕ ಜಯ ಸಾಧಿಸಿದ ನಂತರ ಯಡಿಯೂರಪ್ಪ ಮತ್ತೆ ಸಿಎಂ ಅದರು. ಆದ್ರೆ ಭ್ರಷ್ಟಾಚಾರ ಆರೋಪದಿಂದಾಗಿ 2011ರ ಜುಲೈನಲ್ಲಿ ರಾಜೀನಾಮೆ ನೀಡಬೇಕಾಯಿತು. 2018ರ ಚುನಾವಣೆಯಲ್ಲಿ ಮೈತ್ರಿ ಸರ್ಕಾರ ಸ್ಥಾಪನೆಯಾಗುವುದಕ್ಕೂ ಮುನ್ನವೇ ಮತ್ತೆ ಬಿಎಸ್‌ವೈ ಸಿಎಂ ಆಗಿ ಪ್ರಮಾಣವಚನ ಸಹ ಸ್ವೀಕರಿಸಿದ್ದರು. ಆದರೆ ಬಹುಮತ ಸಾಬೀತುಪಡಿಲಾಗದ ಹಿನ್ನೆಲೆಯಲ್ಲಿ ಸಿಎಂ ಸ್ಥಾನದಿಂದ ಕೆಳಗಿಳಿದರು. ಮತ್ತೊಮ್ಮೆ 14 ತಿಂಗಳ ಬಳಿಕ 17 ಅತೃಪ್ತ ಶಾಸಕರ ವಲಸೆಯಿಂದಾಗಿ ಬಿಎಸ್‌ವೈ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು.

    1956ರಲ್ಲಿ ರಾಜ್ಯವಾಗಿ ರೂಪುಗೊಂಡ ಕರ್ನಾಟಕ ಈವರೆಗೆ 26 ಮುಖ್ಯಮಂತ್ರಿಗಳನ್ನು ಕಂಡಿದೆ. ಹಲವಾರು ಮಂದಿ ಅವಧಿ ಪೂರೈಸುವ ವೇಳೆಗೆ ಅಧಿಕಾರದಿಂದ ಕೆಳಗಿಳಿಯಬೇಕಾದ ಅನಿವಾರ್ಯತೆ ಬಂದೊದಗಿದೆ. ಕೆಲವರು ಅವಧಿ ಪೂರೈಸುವುದಕ್ಕೂ ಮುನ್ನವೇ ಚುನಾವಣಾ ದಿನಾಂಕ ಘೋಷಣೆಯಾದ ಕಾರಣ ಈ ಅವಕಾಶದಿಂದ ವಂಚಿತರಾಗಿದ್ದಾರೆ. ಅದೇನಿದ್ದರೂ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಮುಖ್ಯಮಂತ್ರಿಯಾಗಿ ಮಿಂಚಿದ ನಾಯಕರಲ್ಲಿ ಕಾಂಗ್ರೆಸ್ ಮುಖಂಡರ ಸಂಖ್ಯೆ ಹೆಚ್ಚು ಎಂಬುವುದು ಇತಿಹಾಸ.

    ಪೂರ್ಣವಧಿ ಅಂದರೆ ಏನು?
    ರಾಜ್ಯ ವಿಧಾನಸಭೆಯ ಆಡಳಿತಾವಧಿ 5 ವರ್ಷ. ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಸರ್ಕಾರ ರಚಿಸುವ ಪಕ್ಷದ ಮುಖ್ಯಮಂತ್ರಿಗೆ 5 ವರ್ಷಗಳವರೆಗೆ ಅಧಿಕಾರ ನಡೆಸಲು ಅವಕಾಶವಿದೆ. ಈ ಅವಧಿಯನ್ನು ಯಶಸ್ವಿಯಾಗಿ ಪೂರೈಸಿದಾಗ ಮಾತ್ರ ಪೂರ್ಣಾವಧಿ ಮುಖ್ಯಮಂತ್ರಿ ಎಂಬ ಕೀರ್ತಿಗೆ ಭಾಜನರಾಗುತ್ತಾರೆ.

    ವಿಶೇಷ ಸೂಚನೆ: ಎರಡು, ಮೂರು ಅಥವಾ ನಾಲ್ಕು ಬಾರಿ ಸಿಎಂ ಆಗಿದ್ದನ್ನು ಲೆಕ್ಕಕ್ಕೆ ಪರಿಗಣಿಸಿಲ್ಲ. ಅಲ್ಲದೇ ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಇದ್ದದ್ದನ್ನೂ ಪರಿಗಣಿಸಿಲ್ಲ. ಕರ್ನಾಟಕದಲ್ಲಿ ಸಿಎಂ ಆಗಿದ್ದವರು ಎಂದು ಪರಿಗಣಿಸಿದರೆ 25 ಮಂದಿಯಾಗಿದ್ದಾರೆ.

  • ಎಸ್. ನಿಜಲಿಂಗಪ್ಪ ಜನಪರ ಆಡಳಿತಕ್ಕೆ ನಾಂದಿ ಹಾಡಿದವರು: ಬೊಮ್ಮಾಯಿ

    ಎಸ್. ನಿಜಲಿಂಗಪ್ಪ ಜನಪರ ಆಡಳಿತಕ್ಕೆ ನಾಂದಿ ಹಾಡಿದವರು: ಬೊಮ್ಮಾಯಿ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರು (S Nijalingappa) ಆಡಳಿತದ ಭದ್ರ ಬುನಾದಿಯನ್ನು ಹಾಕಿ ಜನಪರವಾದ ಆಡಳಿತ ಮಾಡಲು ನಾಂದಿ ಹಾಡಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.

    ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎಸ್. ನಿಜಲಿಂಗಪ್ಪ ಅವರ ಜನ್ಮದಿನದ ಅಂಗವಾಗಿ ವಿಧಾನಸೌಧದಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಸ್.ನಿಜಲಿಂಗಪ್ಪ ಅವರು ಕನ್ನಡ ನಾಡಿನ ಪುತ್ರ. ಇಡೀ ನಾಡಿಗಾಗಿ ತಮ್ಮ ಜೀವವನ್ನು ಮೀಸಲಿಟ್ಟು ಕನ್ನಡ, ಕನ್ನಡ ಭಾಷೆಗೆ ಮಾಡಿರುವ ಕೆಲಸ ಕರ್ನಾಟಕವಾಗಲು ಕಾರಣೀಭೂತವಾಗಿದೆ. ತತ್ವ, ಆದರ್ಶ ಮೌಲ್ಯಾಧಾರಿತ ರಾಜಕಾರಣ, ಕರ್ನಾಟಕದಲ್ಲಿ ಮಾಡಿದರು ಎಂದರು.

    ಭಾರತದಲ್ಲಿ ಅವರ ಖ್ಯಾತಿ, ಪ್ರಭಾವ ಇತ್ತು. ಸಂವಿಧಾನ ರಚನಾ ಸಮಿತಿಯಿಂದ ಹಿಡಿದು ಎ.ಐ.ಸಿ.ಸಿ ಅಧ್ಯಕ್ಷರಾಗುವವರೆಗೂ ಭಾರತದ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆಡಳಿದಲ್ಲಿ ಸುಧಾರಣೆಗೆ ಮಹತ್ವ ನೀಡಿ, ಆಡಳಿತ ಸುಧಾರಣೆಯನ್ನು ಪ್ರಜಾಪ್ರಭುತ್ವ ಆಗತಾನೆ ಹೊರಹೊಮ್ಮುತ್ತಿರುವ ಸಂದರ್ಭದಲ್ಲಿ ಜನಪರವಾದ, ಜನರ ಪಾಲ್ಗೊಳ್ಳುವಿಕೆಯ ಪ್ರಜಾಪ್ರಭುತ್ವವನ್ನು ನೀಡಿದ್ದಾರೆ ಎಂದರು.

    ಪ್ರಾಮಾಣಿಕ ರಾಜಕಾರಣಿ: ನಿಷ್ಠೆ, ಪ್ರಾಮಾಣಿಕತೆಯಿಂದ ಕರ್ನಾಟಕದ ಸೇವೆಯನ್ನು ಮಾಡಿದವರು. ನೀರಾವರಿಗೆ ಬಹಳಷ್ಟು ಒತ್ತು ನೀಡಿದವರು. ಇಂದು ನಾವು ಕಾಣುತ್ತಿರುವ ಕಾವೇರಿ, ಕೃಷ್ಣಾ ಜಲಾನಯನ ಪ್ರದೇಶಗಳು ಅವರ ಕಲ್ಪನೆ ಹಾಗೂ ಕ್ರಿಯಾಯೋಜನೆಗಳಾಗಿವೆ. ಕರ್ನಾಟಕಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

    ಮೌಲ್ಯಾಧಾರಿತ ರಾಜಕಾರಣ ಮಾಡಿದ್ದರು. ಮನಸ್ಸು ಮಾಡಿದ್ದರೆ, ಭಾರತದ ರಾಷ್ಟ್ರಪತಿಗಳಾಗಬಹುದಿತ್ತು. ಆದರೆ ಅವರು ಅದನ್ನು ಒಪ್ಪಲಿಲ್ಲ. ಎಂದಿಗೂ ಅಧಿಕಾರದ ಹಿಂದೆ ಹೋಗಲಿಲ್ಲ. ಅಧಿಕಾರ ಅವರ ಹಿಂದೆ ಬಂದಿತ್ತು. ಎಸ್.ಆರ್ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಿದ್ದಾಗ ಬೆಂಗಳೂರಿಗೆ ಬನ್ನಿ ಎಂದಾಗಲೂ ಅವರು ಒಪ್ಪಲಿಲ್ಲ. ಅತ್ಯಂತ ಪ್ರಾಮಾಣಿಕ ರಾಜಕಾರಣಿಯಾದ ಅವರು ನಮ್ಮೆಲ್ಲರಿಗೂ ಆದರ್ಶವಾಗಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು. ಇದನ್ನೂ ಓದಿ: ಮೋದಿ ತೊಟ್ಟ ಪೇಟ ಖರೀದಿಸಿದ ಮೈಸೂರಿನ ಅಭಿಮಾನಿ

    ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ: ಸಿ.ಸೋಮಶೇಖರ್ ಮತ್ತಿತರರು ಉಪಸ್ಥಿತಿತರಿದ್ದರು. ಇದನ್ನೂ ಓದಿ: ಆಪ್ ಸೇರಿದ್ದ ಕೆಲವೇ ಗಂಟೆಯಲ್ಲಿ ಕಾಂಗ್ರೆಸ್ ವಾಪಸ್ಸಾದ ಮುಖಂಡರು

    Live Tv
    [brid partner=56869869 player=32851 video=960834 autoplay=true]