Tag: s n subba reddy

  • ನಿಗಮ-ಮಂಡಳಿ ಬೇಡವೇ ಬೇಡ, ನನಗೆ ಸಚಿವ ಸ್ಥಾನ ಕೊಡಿ: ಶಾಸಕ ಸುಬ್ಬಾರೆಡ್ಡಿ ಪಟ್ಟು

    ನಿಗಮ-ಮಂಡಳಿ ಬೇಡವೇ ಬೇಡ, ನನಗೆ ಸಚಿವ ಸ್ಥಾನ ಕೊಡಿ: ಶಾಸಕ ಸುಬ್ಬಾರೆಡ್ಡಿ ಪಟ್ಟು

    ಚಿಕ್ಕಬಳ್ಳಾಪುರ: ಸಚಿವ ಸ್ಥಾನವೇ ಬೇಕು ಎಂದು ನಿಗಮ ಮಂಡಳಿಯ (Corporation Board ) ಅಧ್ಯಕ್ಷ ಸ್ಥಾನವನ್ನು ಜಿಲ್ಲೆಯ ಬಾಗೇಪಲ್ಲಿ  ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ  (S.N. Subba Reddy)  ನಿರಾಕರಿಸಿದ್ದಾರೆ.

    ಕರ್ನಾಟಕ ರಾಜ್ಯ ಬೀಜ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಶಾಸಕ ಸುಬ್ಬಾರೆಡ್ಡಿ ಆಯ್ಕೆಯಾಗಿದ್ದರು. ಆದರೆ ಇದೀಗ ಅವರು ನನಗೆ ನಿಗಮ-ಮಂಡಳಿಯ ಅಧ್ಯಕ್ಷ ಸ್ಥಾನ ಬೇಡವೇ ಬೇಡ ಎಂದು ನಿರಾಕರಿಸಿದ್ದಾರೆ. ಇದನ್ನೂ ಓದಿ: ನನ್ನನ್ನು ರಾಷ್ಟ್ರೀಯ ಅಧ್ಯಕ್ಷ ಅಂತಿದ್ದಾರೆ, ಪುಣ್ಯಕ್ಕೆ ರಾಷ್ಟ್ರಪತಿ ಎಂದಿಲ್ಲ: ಪ್ರಹ್ಲಾದ್ ಜೋಶಿ

    ಎರಡೂವರೆ ವರ್ಷದ ನಂತರ ಸಚಿವ ಸ್ಥಾನ ಕೂಡುವುದಾಗಿ ಹೇಳಿದ್ದರು. ನಂತರ ಸಚಿವ ಸಂಪುಟ ರಚನೆಯ ವೇಳೆ ಎರಡನೇ ಅವಧಿಗೆ ಸಚಿವ ಸ್ಥಾನ ಕೂಡುವುದಾಗಿ ಭರವಸೆ ನೀಡಿದ್ದರು ಎಂದು ಸುಬ್ಬಾರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸೀಟುಗಳು ಖಚಿತ: ಭೂಪೇಂದ್ರ ಯಾದವ್

    ಈಗ ಅವರು ನಿಗಮ ಮಂಡಳಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದು, ನನಗೆ ಸಚಿವ ಸ್ಥಾನ ಕೊಡಿ. ಯಾವುದೇ ನಿಗಮ ಮಂಡಳಿ ಸ್ಥಾನ ಬೇಡ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಧಾರವಾಡ ಲೋಕಸಭಾ ಅಭ್ಯರ್ಥಿ ನಾನೇ: ಪ್ರಹ್ಲಾದ್ ಜೋಶಿ

    ರಾಜ್ಯ ಸರ್ಕಾರ ನಿನ್ನೆಯಷ್ಟೇ (ಶುಕ್ರವಾರ) ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತು. 34 ಶಾಸಕರಿಗೆ ನಿಗಮ-ಮಂಡಳಿಗಳಲ್ಲಿ ಸ್ಥಾನ ನೀಡಿತ್ತು. ಬಾಗೇಪಲ್ಲಿ ಕ್ಷೇತ್ರದ ಶಾಸಕ ಸುಬ್ಬಾರೆಡ್ಡಿ ಕಾರ್ನಾಟಕ ರಾಜ್ಯ ಬೀಜ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ ಈಗ ಅಧ್ಯಕ್ಷ ಸ್ಥಾನ ಬೇಡ, ಬದಲಾಗಿ ಸಚಿವ ಸ್ಥಾನವೇ ಬೇಕು ಎಂದು ಪಟ್ಟು ಹಿಡಿದಿದ್ದು ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಅವರು ನಿರಾಕರಿಸಿದ್ದಾರೆ. ಇದನ್ನೂ ಓದಿ: ಮೋದಿ ಮತ್ತೆ ಪ್ರಧಾನಿಯಾಗಬೇಕು ಅನ್ನೋದನ್ನ ಶಾಮನೂರು ಸೂಕ್ಷ್ಮವಾಗಿ ಹೇಳಿದ್ದಾರೆ: ಸಿ.ಟಿ ರವಿ

  • ಸಾಮೂಹಿಕ ಮದುವೆಯಲ್ಲಿ ವಧುವಿಗೆ ಸೀಮೆ ಹಸು, ವರನಿಗೆ ಕೊಳವೆ ಬಾವಿ ಆಫರ್

    ಸಾಮೂಹಿಕ ಮದುವೆಯಲ್ಲಿ ವಧುವಿಗೆ ಸೀಮೆ ಹಸು, ವರನಿಗೆ ಕೊಳವೆ ಬಾವಿ ಆಫರ್

    ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಚುನಾವಣಾ ರಣಕಣ ರಂಗೇರಿದೆ. ಮತದಾರರ ಓಲೈಕೆಗಾಗಿ ರಾಜಕೀಯ ಪಕ್ಷಗಳ ಮುಖಂಡರು ಹೊಸ ಹೊಸ ಆಮಿಷ ನೀಡಲು ಮುಂದಾಗಿದ್ದಾರೆ. ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಬಾಗೇಪಲ್ಲಿಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸುವ ಮೂಲಕ ವಧುವಿಗೆ ಸೀಮೆಹಸು, ಫ್ರೀ ಸ್ಕೀಂ, ವರನಿಗೆ ಕೊಳವೆ ಬಾವಿಯ ಆಫರ್. ಅಷ್ಟೇ ಅಲ್ಲದೇ ಮದುವೆಗೆ ಬಂದವರಿಗೆ ಭರ್ಜರಿ ಬಾಡೂಟ ಬಡಿಸಲಾಗಿದೆ.

    ಹೌದು, ಬಾಗೇಪಲ್ಲಿ ಕಾಂಗ್ರೇಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ (Congress MLA S N Subba Reddy), ಪ್ರತಿವರ್ಷದಂತೆ ಈ ವರ್ಷವೂ 501 ಉಚಿತ ಸಾಮೂಹಿಕ ಮದುವೆ (Mass Marriage) ಸಮಾರಂಭವನ್ನು ಹಮ್ಮಿಕೊಂಡಿದ್ರು. ಶಾಸಕರ ಪುತ್ರ ಅಭಿಷೇಕ ಸೇರಿದಂತೆ 212 ಜೋಡಿಗಳು ನವಜೀವನಕ್ಕೆ ಕಾಲಿಟ್ರು. ನವ ವಿವಾಹಿತರಿಗೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಶುಭ ಹಾರೈಸಿದ್ರು.

    ಸಾಮೂಹಿಕ ಕಲ್ಯಾಣಕ್ಕೆ ಯುವಕ-ಯುವತಿಯರನ್ನು ಸೆಳೆಯಲು ಶಾಸಕ ಸುಬ್ಬಾರೆಡ್ಡಿ ಮಾಸ್ಟರ್ ಪ್ಲಾನ್ ರೂಪಿಸಿದ್ರು. ವಧುವಿಗೆ 50 ಸಾವಿರ ರೂಪಾಯಿ ಮೌಲ್ಯದ ಒಂದು ಸೀಮೆಹಸು ಗಿಫ್ಟ್ ಆಗಿ ಕೊಟ್ರು. ವರನಿಗೆ ಗಂಗಾಕಲ್ಯಾಣ ಯೋಜನೆಯಡಿ ಬೋರ್ ವೆಲ್ (Borewell), ಜಮೀನು ಮಂಜೂರು ಆಫರ್ ನೀಡಿದ್ರು. ಇದರಿಂದ ನೂರಾರು ಜನ ಮದುವೆಗೆ ಅರ್ಜಿ ಸಲ್ಲಿಸಿದ್ರು. 212 ಜೋಡಿಗಳಿಗೆ ಮಾತ್ರ ಮದುವೆಗೆ ಅವಕಾಶ ನೀಡಲಾಯಿತು. ಇದನ್ನೂ ಓದಿ: ಹೆಚ್‌ಡಿಕೆ ಸಿಎಂ ಆಗಲು ಕಾಂಗ್ರೆಸ್ ತ್ಯಾಗ ಮಾಡಿತ್ತು – ಡಿಕೆಶಿ

    ಸಾಮೂಹಿಕ ಮದುವೆಯಲ್ಲಿ ಬಾಲ್ಯ ವಿವಾಹ ನಡೆಯಬಹುದು ಅಂತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಸ್ಥಳದಲ್ಲೇ ಬೀಡುಬಿಟ್ಟಿದ್ದರು. ಪ್ರತಿಯೊಂದು ಜೋಡಿಯ ದಾಖಲೆ ಹಾಗೂ ಮದುವೆ ನೋಂದಣಿ ಪರಿಶೀಲಿಸಿ, ಕಂಕಣ ಭಾಗ್ಯಕ್ಕೆ ಅವಕಾಶ ನೀಡಲಾಯ್ತು. ಸಾಮೂಹಿಕ ವಿವಾಹಗಳಿಗೆ ಬಂದ ಜನರಿಗೆ ದಾರಿಯುದ್ದಕ್ಕೂ ಉಚಿತ ಎಳನೀರು, ಜ್ಯೂಸ್, ಐಸ್ ಕ್ರೀಂ, ಬಾಳೆಹಣ್ಣು ವಿತರಿಸಿ ಭರ್ಜರಿ ಬಾಡೂಟ ಉಣಬಡಿಸಿದ್ರು.

    ಒಟ್ಟಿನಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರ ಓಲೈಕೆಗಾಗಿ ರಾಜಕೀಯ ನಾಯಕರು ಮುಂದಾಗಿದ್ದು, ಜನರಿಗೆ ಉಚಿತ ಉಡುಗೊರೆಗಳ ಮಹಾಪೂರವನ್ನೇ ನೀಡಿ ರಣತಂತ್ರ ರೂಪಿಸ್ತಿದ್ದಾರೆ.