Tag: s.n.Narayanaswamy

  • ಶಾಸಕ ನಾರಾಯಣಸ್ವಾಮಿ ಒಬ್ಬ ಭೂಗಳ್ಳ: ಮುನಿಸ್ವಾಮಿ ಆರೋಪ

    ಶಾಸಕ ನಾರಾಯಣಸ್ವಾಮಿ ಒಬ್ಬ ಭೂಗಳ್ಳ: ಮುನಿಸ್ವಾಮಿ ಆರೋಪ

    ಕೋಲಾರ: ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣ (S N Narayanaswamy) ಸ್ವಾಮಿಯೇ ಭೂ ಗಳ್ಳ ಎಂದು ಕೋಲಾರ ಸಂಸದ ಮುನಿಸ್ವಾಮಿ ಗಂಭೀರ ಆರೋಪ ಮಾಡಿದರು.

    ಕೊಲಾರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಹಂಚಾಳ ಬಳಿ ಗಾಲ್ಫ್ ಕೋರ್ಸ್ ನಲ್ಲಿ ಅಂದಿನ ದಿವಂಗತ ಜಿಲ್ಲಾಧಿಕಾರಿ ಡಿ.ಕೆ.ರವಿ ಇದ್ದಾಗ 50 ಎಕರೆ ಕಾಂಪೌಂಡ್ ಹಾಕಿದ್ರು. ಎಸ್.ಎನ್.ಸಿಟಿ ಯಲ್ಲಿ ತಾಯಿ ಹೆಸರಲ್ಲಿ ಭೂ ಮಂಜೂರಾತಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸೇನಾ ಸಿಬ್ಬಂದಿಯ ಕೈಗಳನ್ನು ಕಟ್ಟಿ ಹಾಕಿ ಥಳಿಸಿ, ಬೆನ್ನಿನಲ್ಲಿ PFI ಅಂತಾ ಬರೆದ ಕಿಡಿಗೇಡಿಗಳು

    ಸರ್ಕಾರಿ ಜಮೀನುಗಳನ್ನ ಅವರ ಸಂಬಂಧಿಕರ ಹೆಸರಲ್ಲಿ ಮಂಜೂರು ಮಾಡಿಸಿಕೊಂಡಿದ್ದಾರೆ. ಅಕ್ರಮ ಮಂಜೂರಾತಿ ಸೇರಿದಂತೆ ಹಲವು ಪ್ರಕರಣಗಳು ಅವರ ವಿರುದ್ಧ ಇದೆ. ಯಾರಾದರೂ ಒಬ್ಬ ಶಾಸಕನ ಮೇಲೆ ಹೆಚ್ಚು ಪ್ರಕರಣ ಇದ್ರೆ ಅದು ಎಸ್.ಎನ್.ನಾರಾಯಣಸ್ವಾಮಿ ಮೇಲೆ. ಶಾಸಕ ನಾರಾಯಣಸ್ವಾಮಿ ಒಡೆತನದ ಎಸ್.ಎನ್.ಸಿಟಿಗೆ ದಾರಿ ಮಾಡಿಕೊಂಡಿರುವ ಸರ್ಕಾರಿ ಗುಂಡಿ ತೋಪು ತೆರವುಗೊಳಿಸಿದಾಗ ಸರ್ಕಾರದ ಮೇಲೆ ವಿಶ್ವಾಸ ಬರಲಿದೆ.

    ನಮ್ಮದೇ ಸರ್ಕಾರ ಇದ್ದಾಗ ಅವರ ವಿರುದ್ಧ ಪ್ರಕರಣ ದಾಖಲು ಮಾಡಿದ್ದೇವೆ. ವಾಚ್ ಮೆನ್ ಆಗಿ ಅವರು ಯಾವತ್ತೋ ಕೆಲಸ ಮಾಡಬೇಕಿತ್ತು. ಅವರಪ್ಪನ ಆಸ್ತಿಗೆ ನಾನು ಯಾವತ್ತೂ ಹೋಗಿಲ್ಲ ವಾಚ್‍ಮೆನ್ ಕೆಲಸ ನನಗೆ ಅಲ್ಲ. ಸರ್ಕಾರಿ ಜಮೀನು ಉಳಿಸಿ ಸರ್ಕಾರಕ್ಕೆ ವಾಚ್‍ಮೆನ್ ಆಗಿ ಎಂದು ಸಲಹೆ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ: ನಾರಾಯಣಸ್ವಾಮಿ

    ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ: ನಾರಾಯಣಸ್ವಾಮಿ

    ಕೋಲಾರ: ಮುಂದಿನ ವಿದಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ವರ್ಧಿಸುತ್ತಾರೆ ಎಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರದ ಹಿತದೃಷ್ಟಿಯಿಂದ ಅವರನ್ನು ಸ್ಪರ್ಧಿಸುವಂತೆ ಒತ್ತಾಯ ಮಾಡಿದ್ದೇವೆ, ಕೋಲಾರ ಜಿಲ್ಲೆಗೆ ಕೆ.ಸಿ.ವ್ಯಾಲಿ ನೀರಾವರಿ ಯೋಜನೆ ಕೊಟ್ಟವರು ಸಿದ್ದರಾಮಯ್ಯ. ಹೀಗಾಗಿ ಅವರನ್ನು ಕೋಲಾರಕ್ಕೆ ಬರುವಂತೆ ಒತ್ತಾಯ ಮಾಡಿದ್ದೇವೆ. ಕೋಲಾರ ಜಿಲ್ಲೆಗೆ ಸಿದ್ದರಾಮಯ್ಯ ಬರುವುದರಿಂದ ಪಕ್ಷದ ಸಂಘಟನೆ ಆಗಲಿದ್ದು, ನಾನು ಸೇರಿದಂತೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಎಂಎಲ್‍ಸಿ ನಜೀರ್ ಅಹ್ಮದ್, ಮಾಲೂರು ಶಾಸಕ ನಂಜೇಗೌಡ ಎಲ್ಲರೂ ಒತ್ತಾಯ ಮಾಡಿದ್ದೇವೆ ಎಂದರು.

    ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಬಳಿ ಆತ್ಮೀಯವಾಗಿರುವುದರಿಂದ ನನಗೆ ಇರುವ ಮಾಹಿತಿ ಪ್ರಕಾರ ಮುಂದಿನ ವಿಧಾನಸಭಾ ಚುನಾವಣೆಗೆ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಲಿದ್ದಾರೆ. ಕೆ.ಎಚ್.ಮುನಿಯಪ್ಪ, ಎಂಎಲ್‍ಸಿ ಗೋವಿಂದರಾಜು ಅವರನ್ನು ಕೋಲಾರಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿರುವ ಬಗ್ಗೆ ಕೇಳಿದಾಗ ಇದರಲ್ಲಿ ಯಾವುದೇ ಹುರುಳಿಲ್ಲ, ಸದ್ಯದಲ್ಲೇ ಸಿದ್ದರಾಮಯ್ಯ ಕೋಲಾರಕ್ಕೆ ಬರುವ ಸುದ್ದಿ ಹೊರ ಬೀಳಲಿದೆ ಎಂದರು.