Tag: S.L Bhojegowda

  • ಸಿ.ಟಿ.ರವಿ ಸೋಲಿಗೆ ನಾಲಿಗೆ ಕಾರಣ: ಭೋಜೇಗೌಡ

    ಸಿ.ಟಿ.ರವಿ ಸೋಲಿಗೆ ನಾಲಿಗೆ ಕಾರಣ: ಭೋಜೇಗೌಡ

    ಚಿಕ್ಕಮಗಳೂರು: ಸಿ.ಟಿ.ರವಿ (C.T.Ravi) ಸೋಲಿಗೆ ಅವರ ನಾಲಿಗೆಯೇ ಕಾರಣ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ (S.L.Bhojegowda) ವ್ಯಾಖ್ಯಾನಿಸಿದ್ದು, ಸೋಲಿಸಿದ ಬಳಿಕ ಸಿ.ಟಿ.ರವಿ ಬುದ್ಧಿವಂತ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

    ನಗರದ ಹೊಸಮನೆ ಬಡಾವಣೆಯಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸಿ.ಟಿ.ರವಿ ಬಹಳ ದೊಡ್ಡ ಮಟ್ಟದಲ್ಲಿ ಬೆಳೆದಿದ್ದರು. ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡುವ ಯೋಗ ಅವರಿಗೆ ಲಭಿಸಿತ್ತು. ಆದರೆ ಅವರ ನಾಲಿಗೆಯೇ ಅವರನ್ನು ಸೋಲಿಸಿದೆ. ರಾಜಕೀಯದಲ್ಲಿ ಟೀಕೆ ಮಾಡುವುದು ತಪ್ಪಲ್ಲ. ಆದರೆ ಅದಕ್ಕೊಂದು ಇತಿಮಿತಿ ಇರುತ್ತದೆ ಮತ್ತು ಇರಬೇಕು. ರಾಜಕೀಯವಾಗಿ ರಾಜಕೀಯ ಅಸ್ತ್ರದ ಟೀಕೆ ಮಾಡಿದರೆ ಸರಿ. ಆದರೆ ಅದು ವೈಯಕ್ತಿಕ ಟೀಕೆಯಾಗಬಾರದು. ಅದು ಸರಿಯೂ ಅಲ್ಲ. ಸಿ.ಟಿ.ರವಿ ಸದನದ ಒಳಗೆ-ಹೊರಗೆ ಎರಡೂ ಕಡೆ ರಾಜಕೀಯ ಟೀಕೆಯನ್ನು ಬಿಟ್ಟು ವೈಯಕ್ತಿಕ ಟೀಕೆ ಮಾಡಿದ್ದಾರೆ ಎಂದರು. ಇದನ್ನೂ ಓದಿ: ಮೈಸೂರು ರಂಗಾಯಣ ನಿರ್ದೇಶಕ ಸ್ಥಾನಕ್ಕೆ ಅಡ್ಡಂಡ ಕಾರ್ಯಪ್ಪ ರಾಜೀನಾಮೆ

    ಟೀಕೆ ಮಾಡುವಾಗ ಅವರ ವ್ಯಕ್ತಿತ್ವ ಮತ್ತು ರಾಜಕೀಯ ಮುತ್ಸದ್ದಿತನದ ಬಗ್ಗೆ ಯೋಚನೆ ಮಾಡಬೇಕು. ಯೋಚಿಸಿ ಮಾತನಾಡಬೇಕು. ಯಾರನ್ನೋ ಮೆಚ್ಚಿಸುವ ಸಲುವಾಗಿ, ಕ್ಷಣಿಕ ಸುಖಕ್ಕೆ ಅಥವಾ ಕಾರ್ಯಕರ್ತರನ್ನು ಮೆಚ್ಚಿಸುವುದಕ್ಕೆ ವೈಯಕ್ತಿಕ ಟೀಕೆ ಸರಿಯಲ್ಲ. ದೇವೇಗೌಡರಿಗೆ (H.D.Deve Gowda) ಸಾಬರಾಗಿ ಹುಟ್ಟಲಿ ಎನ್ನುವುದು, ಸಿದ್ದರಾಮಯ್ಯಗೆ (Siddaramaiah) ಸಿದ್ರಾಮುಲ್ಲಾ ಖಾನ್ ಎನ್ನುವುದು. ಸಿ.ಟಿ.ರವಿ ಯಾರನ್ನು ಬಿಟ್ಟಿದ್ದಾರೆ. ಯಾರನ್ನೂ ಬಿಟ್ಟಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಕೌನ್ ಬನೇಗಾ ರಾಜ್ಯದ ಮುಖ್ಯಮಂತ್ರಿ? ಹೈಕಮಾಂಡ್ ಲೆಕ್ಕಾಚಾರ ಏನು?

    ಟೀಕೆ ಮಾಡುವಾಗಲು ರಾಜಕೀಯ ಸ್ಟ್ಯಾಂಡರ್ಡ್‌ನಲ್ಲಿ ಟೀಕೆ ಮಾಡಬೇಕು. ಕುಲದ ಕುತ್ತಿಗೆ ಉದ್ದ. ಅಷ್ಟು ಸುಲಭ ಇಲ್ಲ. “ಬ್ಲಡ್ ಇಸ್ ಥಿಕ್ಕರ್ ದೆನ್ ವಾಟರ್”. ಕುಲದ ಬಗ್ಗೆ ಮಾತನಾಡಿದರೆ ನಮ್ಮ ಕುಲದ ಬಗ್ಗೆ ಮಾತನಾಡುತ್ತಾನೆ. ಇವನಿಗೆ ಎಷ್ಟು ಹಮ್ಮಿರಬೇಕು ಎಂದು ಹಮ್ಮಿನ ಬಗ್ಗೆ ಯೋಚಿಸುತ್ತಾರೆ. ಸಿ.ಟಿ.ರವಿ ಸೋಲಿಗೆ ಅವರ ನಾಲಿಗೆಯೇ ಕಾರಣ. ದುರಾಡಳಿತ, ದುರಂಹಂಕಾರ ಎಲ್ಲವೂ ಸೇರಿ ಸಿ.ಟಿ.ರವಿಯನ್ನು ಸೋಲಿಸಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಕರ್ನಾಟಕದ ನೂತನ ಮುಖ್ಯಮಂತ್ರಿ ಮೇ 18 ರಂದು ಪ್ರಮಾಣ ವಚನ?

    ಇದೇ ವೇಳೆ ಭೋಜೇಗೌಡರ ಮನೆ ಮುಂದೆ ಜೆಡಿಎಸ್ (JDS) ಕಾರ್ಯಕರ್ತರು ಸಿ.ಟಿ.ರವಿ ಸೋಲಿನಲ್ಲಿ ಮಾಸ್ಟರ್ ಮೈಂಡ್ ಆಗಿದ್ದ ಎಸ್.ಎಲ್.ಭೋಜೇಗೌಡರಿಗೆ ಹಾಲಿನ ಅಭಿಷೇಕ ಮಾಡಿದ್ದಾರೆ. ಅವರ ಮನೆ ಮುಂದೆ ಟ್ರ‍್ಯಾಕ್ಟರ್ ಮೇಲೆ ನಿಲ್ಲಿಸಿ ಬಕೆಟ್‌ನಲ್ಲಿ ಹಾಲನ್ನು ಸುರಿದು ಹಾಲಿನ ಅಭಿಷೇಕ ಮಾಡಿದ್ದಾರೆ. ಇದನ್ನೂ ಓದಿ: ಉಡುಪಿ ಬೈಂದೂರಿನಲ್ಲಿ ಗೆದ್ದ ಬರಿಗಾಲ ಸಂತ – ಜಿದ್ದಾಜಿದ್ದಿ ಹೇಗಿತ್ತು?

    20 ವರ್ಷಗಳಿಂದ ಸೋಲಿಲ್ಲದ ಸರದಾರನಂತೆ ಇದ್ದ ಸಿ.ಟಿ.ರವಿಗೆ ಈ ಬಾರಿ ಜೆಡಿಎಸ್ ಅಭ್ಯರ್ಥಿ ಇದ್ದರೂ ಕೂಡ ಎಸ್.ಎಲ್.ಭೋಜೇಗೌಡ ನೇರವಾಗಿ ಅಖಾಡಕ್ಕಿಳಿದು ಜೆಡಿಎಸ್‌ಗೆ ಮತ ಹಾಕಬೇಡಿ, ಕಾಂಗ್ರೆಸ್ಸಿಗೆ ಹಾಕಿ ಎಂದು ಸಮರ ಸಾರಿದ್ದರು. ಅದರ ಫಲವಾಗಿ ಈ ಬಾರಿ ಸಿ.ಟಿ.ರವಿ ಕೇವಲ ಐದು ಸಾವಿರ ಮತಗಳ ಅಂತರದಲ್ಲಿ ಸೋತಿದ್ದಾರೆ. ಇದನ್ನೂ ಓದಿ: ಮತ್ತೆ ಎದ್ದು ಓಡುತ್ತೇನೆ, ಜನರಿಂದ ದೂರವಾಗುವ ಜಾಯಮಾನ ನಮ್ಮದಲ್ಲ – ನಿಖಿಲ್‌

  • ಪರಿಷತ್‍ನಲ್ಲಿ ನಿದ್ರೆ ಮಾಡೋರಿಗೆ ಹಾಡು ಹೇಳಿ ಎಬ್ಬಿಸಿದ ಜೆಡಿಎಸ್ ಸದಸ್ಯ ಭೋಜೇಗೌಡ

    ಪರಿಷತ್‍ನಲ್ಲಿ ನಿದ್ರೆ ಮಾಡೋರಿಗೆ ಹಾಡು ಹೇಳಿ ಎಬ್ಬಿಸಿದ ಜೆಡಿಎಸ್ ಸದಸ್ಯ ಭೋಜೇಗೌಡ

    -ಪರಿಸರ ವಾದಿಗಳ ವಿರುದ್ಧ ಕಿಡಿ

    ಬೆಂಗಳೂರು: ವಿಧಾನಪರಿಷತ್‍ನಲ್ಲಿ ಚರ್ಚೆಯ ಸಂದರ್ಭದಲ್ಲಿ ನಿದ್ದೆ ಮಾಡುತ್ತಿದ್ದವರನ್ನು ನೋಡಿ ವಿಧಾನಪರಿಷತ್ ಜೆಡಿಎಸ್ ಸದಸ್ಯ ಭೋಜೇಗೌಡರು ಏರು ಕಂಠದಲ್ಲಿ ದಾಸರ ಪದ ಹಾಡುವ ಮೂಲಕ ನಿದ್ದೆಯಿಂದ ಎಬ್ಬಿಸುವ ಕೆಲಸ ಮಾಡಿದ್ದಾರೆ.

    ನಿಯಮ 330 ಅಡಿ ನಡೆಯುತ್ತಿದ್ದ ಚರ್ಚೆ ವೇಳೆ ಫಾರೂಕ್ ಅವರೊಂದಿಗೆ ಮಾತನಾಡುತ್ತಿದ್ದ ಭೋಜೇಗೌಡರು, ಇದ್ದಕ್ಕಿದ್ದಂತೆ ಗಾಯನ ಶುರುಮಾಡಿಕೊಂಡರು. ರಾಗವಾಗಿ ಹಾಡು ಶುರು ಮಾಡಿದ ಭೋಜೇಗೌಡರು ಏರು ಕಂಠದಲ್ಲಿ ದಾಸರ ಪದ ಹಾಡಿ, ಬಹಳ ಜನ ನಿದ್ದೆ ಮಾಡ್ತಿದ್ರು ಅದಕ್ಕೆ ಹಾಡಿದೆ ಎಂದು ಸಮಜಾಯಿಷಿ ನೀಡಿದರು. ಇದನ್ನೂ ಓದಿ: ವಿಮಾನದ ಟಿಕೆಟ್‍ಗಿಂತ ಬಸ್‍ಗಳ ಟಿಕೆಟ್ ದರ ಜಾಸ್ತಿ ಇದೆ: ರಮೇಶ್ ಕುಮಾರ್

    88 ಲಕ್ಷ ಜೀವರಾಶಿಗಳ ದಾಟಿ ಬಂದ ಈ ಶರೀರ, ತಾನಲ್ಲ ತನ್ನದಲ್ಲ ಎಂದು ದಾಸರ ಪದ ಭೋಜೇಗೌಡರು ಹಾಡುತ್ತಿದ್ದಂತೆ, ಬಿಜೆಪಿ ಸದಸ್ಯರಿಂದ ಒನ್ಸ್ ಮೋರ್ ಎಂಬ ಬೇಡಿಕೆ ಕೇಳಿಬಂತು. ಈ ವೇಳೆ ಮತ್ತೆ ರಾಗವಾಗಿ ಕೀರ್ತನೆ ಹಾಡಲು ಭೋಜೇಗೌಡರು ಆರಂಭಿಸಿದರು. ಈ ಸಂದರ್ಭ ಮತ್ತೆ ಶುರು ಮಾಡಬೇಡಿ ಎಂದು ಸಭಾಪತಿ ಹೊರಟ್ಟಿ ತಮಾಷೆ ಮಾಡಿದರು.

    ಮಂಗಳೂರು, ಕರಾವಳಿ, ಉಳ್ಳಾಲ ಸುರತ್ಕಲ್ ಭಾಗದಲ್ಲಿ ಅಸಮರ್ಪಕ ಒಳಚರಂಡಿಯಿಂದ ತೀವ್ರ ಸಮಸ್ಯೆ ಇದೆ ಎಂದು ತಮ್ಮ ಭಾಗದ ಸಮಸ್ಯೆಗಳನ್ನು ಪರಿಷತ್‍ನಲ್ಲಿ ಮಂಡಿಸಿದರು. ಇದಲ್ಲದೆ ಮಂಗಳೂರು, ಕರಾವಳಿ ಪ್ರದೇಶಗಳಲ್ಲಿ ಸಾಕಷ್ಟು ಕೈಗಾರಿಕಾ ಪ್ರದೇಶಗಳಿವೆ ಇದರಿಂದ ಪರಿಸರ ನಾಶವಾಗುತ್ತಿದೆ. ಈ ಬಗ್ಗೆ ಮಾತನಾಡದೆ ಸುಮ್ಮನಿರುವ ಇವರೆಲ್ಲ ಪರಿಸರ ವಾದಿಗಳಲ್ಲ, ಪರಿಸರ ವ್ಯಾಧಿಗಳು. ನನ್ನ ಬಗ್ಗೆ ಏನು ಬೇಕಾದ್ರೂ ಬರೀರಿ, ಪರಿಸರ ವ್ಯಾಧಿಗಳಿಂದಾಗಿಯೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂದು ಪರಿಸರ ವಾದಿಗಳ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಬಸ್ಸಿನಲ್ಲಿ ‘ಗೀತ ಗೋವಿಂದಂ’ ಸೀನ್ – ನಿದ್ದೆಗೆ ಜಾರಿದ್ದ ಯುವತಿಗೆ ಮುತ್ತಿಟ್ಟ ಅಪರಿಚಿತ ಯುವಕ!