Tag: S K bellubbi

  • ಸಂಜೆಯೊಳಗೆ ಟಿಕೆಟ್ ಕೊಡಿ, ಇಲ್ಲಾಂದ್ರೆ ನನ್ನ ದಾರಿ ನಂಗೆ- ಹೈಕಮಾಂಡ್ ಗೆ ಬೆಳ್ಳುಬ್ಬಿ ಎಚ್ಚರಿಕೆ

    ಸಂಜೆಯೊಳಗೆ ಟಿಕೆಟ್ ಕೊಡಿ, ಇಲ್ಲಾಂದ್ರೆ ನನ್ನ ದಾರಿ ನಂಗೆ- ಹೈಕಮಾಂಡ್ ಗೆ ಬೆಳ್ಳುಬ್ಬಿ ಎಚ್ಚರಿಕೆ

    ಬೆಂಗಳೂರು: ನಾಮಪತ್ರ ಸಲ್ಲಿಕೆಗೆ ಮೂರು ದಿನ ಬಾಕಿಯಿದ್ರೂ, ಟಿಕೆಟ್ ಕೈ ತಪ್ಪಿದ ಸಿಟ್ಟು ಶಮನವಾಗಿಲ್ಲ.

    5 ಕೋಟಿ ರೂಪಾಯಿ ಕೊಟ್ಟು ಟಿಕೆಟ್ ಗಿಟ್ಟಿಸಿಕೊಂಡಿದ್ದೇನೆ ಅಂತ ಅಭ್ಯರ್ಥಿ ಸಂಗರಾಜ ದೇಸಾಯಿಯವರೇ ಕಾರ್ಯಕರ್ತರ ಜೊತೆಗೆ ಹೇಳ್ತಿದ್ದಾರೆ ಅಂತ ಟಿಕೆಟ್ ವಂಚಿತ ಮಾಜಿ ಸಚಿವ ಎಸ್‍ಕೆ ಬೆಳ್ಳುಬ್ಬಿ ಆರೋಪಿಸಿದ್ದಾರೆ. ಅಲ್ಲದೇ ಸಂಜೆಯೊಳಗೆ ನನಗೆ ಬಸವನಬಾಗೇವಾಡಿಯಿಂದ ಟಿಕೆಟ್ ಕೊಡಬೇಕು. ಇಲ್ಲಾಂದ್ರೆ ನನ್ನ ಹಾದಿ ನನಗೆ ಅಂತ ಹೈಕಮಾಂಡ್‍ಗೆ ಎಚ್ಚರಿಸಿದ್ದಾರೆ.

    ಇತ್ತ ಮಸ್ಕಿಯಿಂದ ಟಿಕೆಟ್ ವಂಚಿತ ಯಡಿಯೂರಪ್ಪ ಆಪ್ತ ಮಹಾದೇವಪ್ಪಗೌಡ ಕೈ ಹಿಡಿದಿದ್ದು, ಅಳಿಯ ಕಾಂಗ್ರೆಸ್ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪರ ಪ್ರಚಾರ ಮಾಡ್ತಾರೆ. ಮಾಜಿ ಸಂಸದ, ಕುರುಬ ಸಮುದಾಯದ ನಾಯಕ ಕೆ ವಿರುಪಾಕ್ಷಪ್ಪ ಟಿಕೆಟ್ ಸಿಗದ ಸಿಟ್ಟಲ್ಲಿ ಬಿಜೆಪಿ ಬಿಟ್ಟಿದ್ದಾರೆ. ರಾಯಣ್ಣ ಬ್ರಿಗೇಡ್ ಅಧ್ಯಕ್ಷರೂ ಆಗಿರೋ ಅವರು ಸಿಂಧನೂರಿಂದ ಪಕ್ಷೇತರರಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಕೆಜೆಪಿಗೆ ಹೋಗದ ಸೇಡಿನಿಂದಾಗಿ ನನಗೆ ಟಿಕೆಟ್ ತಪ್ಪಿಸಿದ್ರು- ಬಿಎಸ್‍ವೈ ವಿರುದ್ಧ ಮಾಜಿಸಚಿವ ಬೆಳಮಗಿ ಗರಂ

    ಸಾಗರ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿಗೆ ಗುಡ್‍ಬೈ ಹೇಳಿದ್ದ ಬೇಳೂರು ಗೋಪಾಲಕೃಷ್ಣ ಕಾಂಗ್ರೆಸ್ ಸೇರ್ತಾರೆ. ಇನ್ನು ಬಿಜೆಪಿಗೆ ಗುಡ್‍ಬೈ ಹೇಳಿರೋ ಮಾಜಿ ಸಚಿವ ರೇವೂ ನಾಯಕ್ ಬೆಳಮಗಿ ಇಂದೇ ಜೆಡಿಎಸ್‍ಗೆ ಹೋಗ್ತಾರೆ ಅನ್ನೋ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

  • ಟಿಕೆಟ್ ಗಾಗಿ ಬಿಎಸ್‍ವೈ ಕಾಲಿಗೆ ಬಿದ್ದ ಮಾಜಿ ಸಚಿವ ಬೆಳ್ಳುಬ್ಬಿ ಬಂಟ

    ಟಿಕೆಟ್ ಗಾಗಿ ಬಿಎಸ್‍ವೈ ಕಾಲಿಗೆ ಬಿದ್ದ ಮಾಜಿ ಸಚಿವ ಬೆಳ್ಳುಬ್ಬಿ ಬಂಟ

    ಬೆಂಗಳೂರು: ಬಸವನ ಬಾಗೇವಾಡಿ ಕ್ಷೇತ್ರದ ಮಾಜಿ ಸಚಿವ ಎಸ್‍ಕೆ ಬೆಳ್ಳುಬ್ಬಿ ಬೆಂಬಲಿಗರೊಬ್ಬರು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಕಾಲಿಗೆ ಬಿದ್ದ ಘಟನೆ ನಡೆದಿದೆ.

    ಇಂದು ಬೆಳಗ್ಗೆ ಬಿಎಸ್ ವೈ ಅವರು ವಾಯುವಿಹಾರಕ್ಕೆ ತೆರಳಿದ್ದ ವೇಳೆ ಬೆಳ್ಳುಬ್ಬಿ ಬಂಟ ಬಂದು ಟಿಕೆಟ್‍ಗಾಗಿ ಯಡಿಯೂರಪ್ಪ ಅವರ ಕಾಲು ಹಿಡಿದು ನಮಸ್ಕರಿಸಿದ್ದಾರೆ. ಈ ವೇಳೆ ಬಿಎಸ್ ವೈ ಅವರು, ನನ್ ಕಾಲಿಗೆ ಬೀಳ್ಬೇಡಪ್ಪ, ಟಿಕೆಟ್ ನಾನು ಕೊಡಲ್ಲ, ಹೈಕಮಾಂಡ್ ಕೊಡೋದು ಅಂತ ಹೇಳಿ ಮುಂದೆ ನಡೆದಿದ್ದಾರೆ.

    ಇದೇ ವೇಳೆ ಮಾಜಿ ಸಚಿವರ ಬೆಂಬಲಿಗರು ಬೆಳ್ಳುಬ್ಬಿ ಅವರಿಗೆ ಟಿಕೆಟ್ ಕೊಡುವಂತೆ ಒತ್ತಡ ಹಾಕಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.