Tag: s.jaishankar

  • ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹಕ್ಕೆ ಅಮೆರಿಕ, ಜರ್ಮನಿ ಸ್ಪಂದನೆ ಅನಗತ್ಯ: ಕೇಂದ್ರ ಸಚಿವ ಜೈಶಂಕರ್

    ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹಕ್ಕೆ ಅಮೆರಿಕ, ಜರ್ಮನಿ ಸ್ಪಂದನೆ ಅನಗತ್ಯ: ಕೇಂದ್ರ ಸಚಿವ ಜೈಶಂಕರ್

    ಬೆಂಗಳೂರು: ರಾಹುಲ್ ಗಾಂಧಿ (Rahul Gandhi) ಸಂಸದ ಸ್ಥಾನದಿಂದ ಅನರ್ಹಗೊಂಡ ವಿಚಾರಕ್ಕೆ ಅಮೆರಿಕ (America) ಹಾಗೂ ಜರ್ಮನಿ (Germany) ನೀಡಿರುವ ಪ್ರತಿಕ್ರಿಯೆಗೆ ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ (S.Jaishankar) ಕಿಡಿಕಾರಿದ್ದಾರೆ.

    ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (Tejasvi Surya) ಹಾಗೂ ಬೆಂಗಳೂರು (Bengaluru) ಕೇಂದ್ರ ಸಂಸದ ಪಿ.ಸಿ ಮೋಹನ್ ನೇತೃತ್ವದಲ್ಲಿ ಕಬ್ಬನ್ ಪಾರ್ಕ್ ನಲ್ಲಿ 500 ಕ್ಕಿಂತಲೂ ಅಧಿಕ ಯುವ ಮತದಾರರು ಹಾಗೂ ಸಾರ್ವಜನಿಕರೊಂದಿಗೆ ಆಯೋಜನೆಗೊಂಡಿದ್ದ Meet and Greet ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಪಶ್ಚಿಮದ ರಾಷ್ಟ್ರಗಳು ತಮ್ಮ ಹಿತಾಸಕ್ತಿಗೆ ಅನುಗುಣವಾದ ಅಭಿಪ್ರಾಯಗಳನ್ನು ಇತರ ದೇಶಗಳ ಮೇಲೆ ಹೇರುವುದನ್ನು ನಿಲ್ಲಿಸಬೇಕು ಎಂದು ಕಟುವಾಗಿ ಟೀಕಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲೇ ಬಿಜೆಪಿ ಮುಖಂಡನ ಗುಂಡಿಕ್ಕಿ ಹತ್ಯೆ

    ಪಾಶ್ಚಿಮಾತ್ಯ ರಾಷ್ಟ್ರಗಳು ಹಿಂದಿನಿಂದಲೂ ಬೇರೆ ದೇಶಗಳ ಸಾರ್ವಭೌಮತ್ವ, ಸಾಂವಿಧಾನಿಕ ಅಧಿಕಾರಗಳ ಕುರಿತಾದ ಆಂತರಿಕ ವಿಷಯಗಳ ಮೇಲೆ ತಮ್ಮ ಅಭಿಪ್ರಾಯವೇ ಶ್ರೇಷ್ಠ ಎಂಬ ಮನಸ್ಥಿತಿಯಿಂದ ಹೊರಬಂದಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಬೇರೆ ರಾಷ್ಟ್ರಗಳೂ ಕೂಡ ಪಶ್ಚಿಮದ ದೇಶಗಳ ಕುರಿತಾಗಿ ಸಮಾನ ದೃಷ್ಟಿಕೋನದಿಂದ ಪ್ರತಿಕ್ರಿಯೆ ನೀಡಲು ಆರಂಭಿಸುವುದು ಸಾಮಾನ್ಯ. ಹಿಂದೆಂದಿಗಿಂತಲೂ ಪ್ರಸ್ತುತ ಸಂದರ್ಭದಲ್ಲಿ ಇಂತಹ ಮನಸ್ಥಿತಿಯನ್ನು ವಿಶ್ವದಾದ್ಯಂತ ನಾವು ಕಾಣಬಹುದು ಎಂದಿದ್ದಾರೆ.

    ನಮ್ಮಲ್ಲಿಯೇ ಇರುವ ಕೆಲವರು ಪಶ್ಚಿಮದ ರಾಷ್ಟ್ರಗಳಿಗೆ ತೆರಳಿ ಭಾರತದ ಕುರಿತಾಗಿ ಅವಮಾನಕರ ಅಭಿಪ್ರಾಯಗಳನ್ನು ವಿವರಿಸಿ, ಆಹ್ವಾನ ನೀಡಿರುವುದರ ಪರಿಣಾಮದಿಂದ ಮಾತ್ರ ಇಂತಹ ಹೇಳಿಕೆಗಳು ಹೊರಬರಲು ಸಾಧ್ಯ. ಈ ರೀತಿಯ ಮನಸ್ಥಿತಿ ಇರುವ ದೇಶದ ಒಳಗಿನ ಹಾಗೂ ಹೊರಗಿನ ಇಬ್ಬರ ಮೂಲ ಸಮಸ್ಯೆಯನ್ನು ಪರಿಹರಿಸುವ ಕಾರ್ಯ ನಡೆಯಲೇಬೇಕಿದೆ ಎಂದಿದ್ದಾರೆ.

    ಉಚಿತ ಕೊಡುಗೆಗಳ ಕುರಿತಾಗಿ, ಇತ್ತೀಚೆಗೆ ಉಚಿತ ಕೊಡುಗೆಗಳನ್ನು ನೀಡುವ ಪರಿಪಾಠ ದೆಹಲಿಯಿಂದ ಶುರುವಾಗಿ ದೇಶದ ಇತರ ಭಾಗಗಳಿಗೂ ಹಬ್ಬುತ್ತಿರುವ ಕ್ರಮ ಆತಂಕಕಾರಿ. ಅಂತಹ ಸರ್ಕಾರಗಳಿಗೆ ಸಂಪನ್ಮೂಲ ಕ್ರೋಢೀಕರಣ ದೊಡ್ಡ ಸಮಸ್ಯೆ ಆಗುತ್ತದೆ. ತಾತ್ಕಾಲಿಕ ರಾಜಕೀಯ ಲಾಭದ ಸಲುವಾಗಿ ಮಾಡುವ ಇಂತಹ ಯೋಜನೆಗಳಿಗೆ ಯಾರೋ ಒಬ್ಬರು ಬೆಲೆ ತೆರಬೇಕಾಗುತ್ತದೆ. ಒಂದೆಡೆ ಉಚಿತ ನೀಡುವಾಗ ಬೇರೆ ಕಡೆಯಿಂದ ಕ್ರೋಢೀಕರಣ ಮಾಡಲೇಬೇಕು. ಜವಾಬ್ದಾರಿ ರಹಿತ ಇಂತಹ ಉಚಿತ ಕೊಡುಗೆಗಳ ಕಾರ್ಯಕ್ರಮಗಳಿಂದ ದೇಶದ ಬೊಕ್ಕಸಕ್ಕೆ ಉಂಟಾಗುವ ಅಪಾರ ಹಾನಿ ಎಂದಿದ್ದಾರೆ.

    ಪ್ರಸ್ತುತ ಜಿ 20 ಆತಿಥೇಯ ರಾಷ್ಟ್ರವಾಗಿರುವ ಭಾರತವು, ಇದುವರೆಗೆ ಜಿ 20 ಸದಸ್ಯ ರಾಷ್ಟ್ರವಲ್ಲದ ದೇಶಗಳನ್ನು ಸಂಪರ್ಕಿಸಿ, ಅವುಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ಹಮ್ಮಿಕೊಂಡಿರುವುದು ಶ್ಲಾಘನೀಯ. ಮುಂಚೆ ಇಂತಹ ಅತೀ ದೊಡ್ಡ ಸಮಾವೇಶಗಳನ್ನು ಆಯ್ದ ಕೇವಲ 2-3 ನಗರಗಳಲ್ಲಿ ಮಾತ್ರ ಹಮ್ಮಿಕೊಳ್ಳಲಾಗಿತ್ತು. ಆದರೆ, ಈ ಬಾರಿ ದೇಶದ 60 ಇತರ ನಗರಗಳಲ್ಲಿ ಸಮಾವೇಶ ಆಯೋಜಿಸಿ ಇತರ ರಾಜ್ಯಗಳಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

    ಭಾರತದ ಅಭಿವೃದ್ಧಿಗೆ ಪ್ರತೀ ರಾಜ್ಯ, ನಗರಗಳು ಕೂಡ ಗಣನೀಯ ಕೊಡುಗೆ ನೀಡುತ್ತಿವೆ. ಜಾಗತಿಕ ವಿದ್ಯಮಾನಗಳನ್ನು ಇತರ ನಗರಗಳಿಗೂ ಪರಿಚಯಿಸುವ ಉದ್ದೇಶದಿಂದ ಈ ರೀತಿ ಎಲ್ಲೆಡೆ ಜಿ 20 ಸಮಾವೇಶಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜಿ 20 ಸಮಾವೇಶಕ್ಕೆ ಜಗತ್ತಿನ ವಿವಿಧೆಡೆಯಿಂದ ಆಗಮಿಸುವ 200ಕ್ಕಿಂತಲೂ ಅಧಿಕ ಅಗ್ರಗಣ್ಯ ವ್ಯಕ್ತಿಗಳಿಗೆ ಈ ದೇಶದ ವೈವಿಧ್ಯಮಯ ಸಂಸ್ಕೃತಿ, ಆಚಾರ, ವಿಚಾರ, ಅಡುಗೆ, ತಿನಿಸುಗಳ ಬಗ್ಗೆ ಅರಿವು ಮೂಡಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಭಾರತ (India) ವಿಶ್ವಕ್ಕೆ ತೆರೆದುಕೊಳ್ಳುವುದು ಹಾಗೂ ವಿಶ್ವವು ಭಾರತವನ್ನು ಅರ್ಥೈಸಿಕೊಳ್ಳುವುದು ಇದರಿಂದ ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯನವರನ್ನು ಸೋಲಿಸಲು ಯಾವ ಲೀಡರ್‌ಗಳಿಂದಲೂ ಸಾಧ್ಯವಿಲ್ಲ, ಜನರೇ ಸೋಲಿಸಬೇಕು: ಸತೀಶ್ ಜಾರಕಿಹೊಳಿ

  • ಭಾರತೀಯ ಸೇನೆಯನ್ನು LACಗೆ ಕಳುಹಿಸಿದ್ದು ಮೋದಿ.. ರಾಹುಲ್‌ ಗಾಂಧಿಯಲ್ಲ: ಜೈಶಂಕರ್‌ ತಿರುಗೇಟು

    ಭಾರತೀಯ ಸೇನೆಯನ್ನು LACಗೆ ಕಳುಹಿಸಿದ್ದು ಮೋದಿ.. ರಾಹುಲ್‌ ಗಾಂಧಿಯಲ್ಲ: ಜೈಶಂಕರ್‌ ತಿರುಗೇಟು

    ನವದೆಹಲಿ: ನಾವು ಚೀನಾದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ಆರೋಪಿಸುತ್ತಿದ್ದಾರೆ. ಭಾರತೀಯ ಸೇನೆಯನ್ನು ಎಲ್‌ಎಸಿಗೆ (LAC) ಕಳುಹಿಸಿದ್ದು ಯಾರು? ರಾಹುಲ್ ಗಾಂಧಿಯಲ್ಲ (Rahul Gandhi), ನರೇಂದ್ರ ಮೋದಿ (Narendra Modi) ಸೇನೆಯನ್ನು ಕಳುಹಿಸಿದ್ದಾರೆ ಎಂದು ಜೈಶಂಕರ್ (Jaishankar) ಟಾಂಗ್‌ ಕೊಟ್ಟಿದ್ದಾರೆ.

    ನಮ್ಮ ಸರ್ಕಾರದಲ್ಲಿ ಗಡಿಯಲ್ಲಿನ ಮೂಲಸೌಕರ್ಯ ವೆಚ್ಚವನ್ನು ಐದು ಬಾರಿ ಹೆಚ್ಚಿಸಿದ್ದೇವೆ. ಈಗ ಹೇಳಿ, ರಕ್ಷಣಾತ್ಮಕ ಮತ್ತು ಹೊಂದಾಣಿಕೆಯ ವ್ಯಕ್ತಿ ಯಾರು? ನಿಜವಾಗಿ ಯಾರು ಸತ್ಯವನ್ನು ಹೇಳುತ್ತಿದ್ದಾರೆ? ಯಾರು ವಿಷಯಗಳನ್ನು ನಿಖರವಾಗಿ ವ್ಯಕ್ತಪಡಿಸುತ್ತಿದ್ದಾರೆ? ಯಾರು ಇತಿಹಾಸದೊಂದಿಗೆ ಕಾಲೆಳೆಯುತ್ತಿದ್ದಾರೆ ಎಂದು ರಾಹುಲ್‌ ಗಾಂಧಿ ವಿರುದ್ಧ ಜೈಶಂಕರ್‌ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಮತಗಳ ಓಲೈಕೆಗೆ ಮುಂದಾದ ಹೈಕಮಾಂಡ್ – ರಾಜ್ಯ ಬಿಜೆಪಿ ನಾಯಕರಿಗೆ ಹೊಸ ಸವಾಲು

    ಕಳೆದ ವರ್ಷ ಪ್ಯಾಂಗೊಂಗ್ ಲೇಕ್ ಪ್ರದೇಶದಲ್ಲಿ ಸೇತುವೆ ನಿರ್ಮಿಸಿರುವ ಚೀನಾ ವಿಚಾರವಾಗಿ ಕೇಂದ್ರವನ್ನು ಗುರಿಯಾಗಿಸಿ ಟೀಕಿಸಿದ್ದ ವಿಪಕ್ಷಗಳನ್ನು ಜೈಶಂಕರ್‌ ತರಾಟೆಗೆ ತೆಗೆದುಕೊಂಡರು. 1962 ರ ಯುದ್ಧದ ನಂತರ ಈ ಪ್ರದೇಶವು ಚೀನಾ ವಶಪಡಿಸಿಕೊಂಡಿದೆ ಎಂದು ಕೇಂದ್ರ ಸಚಿವರು ಸ್ಪಷ್ಟಪಡಿಸಿದ್ದಾರೆ.

    ಆ ಪ್ರದೇಶವು ಯಾವಾಗ ಚೀನಾದ (China) ನಿಯಂತ್ರಣಕ್ಕೆ ಬಂತು? 1958ರಲ್ಲಿ ಚೀನಿಯರು ಮೊದಲು ಅಲ್ಲಿಗೆ ಬಂದರು. 1962ರ ಅಕ್ಟೋಬರ್‌ನಲ್ಲಿ ಚೀನೀಯರು ಅದನ್ನು ವಶಪಡಿಸಿಕೊಂಡರು. ಆ ವಿಚಾರವನ್ನಿಟ್ಟುಕೊಂಡು ಈಗ ನೀವು 2023ರಲ್ಲಿ ಮೋದಿ ಸರ್ಕಾರವನ್ನು ದೂಷಿಸಲು ಹೊರಟಿದ್ದೀರಿ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ: UPI-PayNow ಲಿಂಕ್‌ – ಇನ್ನು ಮುಂದೆ ಸಿಂಗಾಪುರದಿಂದ ಸುಲಭವಾಗಿ ಭಾರತಕ್ಕೆ ಹಣ ಕಳುಹಿಸಿ

    ರಾಜೀವ್ ಗಾಂಧಿ ಅವರು 1988 ರಲ್ಲಿ ಬೀಜಿಂಗ್‌ಗೆ ಹೋಗಿದ್ದರು. 1993 ಮತ್ತು 1996ರಲ್ಲಿ ಒಪ್ಪಂದಗಳಿಗೆ ಸಹಿ ಹಾಕಿದರು. ಆ ಒಪ್ಪಂದಗಳಿಗೆ ಸಹಿ ಹಾಕುವುದು ತಪ್ಪು ಎಂದು ನಾನು ಭಾವಿಸುವುದಿಲ್ಲ. ಇದು ರಾಜಕೀಯ ವಿಚಾರವಲ್ಲ. ಗಡಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಆ ಸಮಯದಲ್ಲಿ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ತಿಳಿಸಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಿರಿಯ, ಶ್ರೀಮಂತ, ಅಪಾಯಕಾರಿ – ಸ್ಮೃತಿ ಇರಾನಿ ಬೆನ್ನಲ್ಲೇ ಸೊರಸ್‌ ವಿರುದ್ಧ ಜೈಶಂಕರ್‌ ಕಿಡಿ

    ಹಿರಿಯ, ಶ್ರೀಮಂತ, ಅಪಾಯಕಾರಿ – ಸ್ಮೃತಿ ಇರಾನಿ ಬೆನ್ನಲ್ಲೇ ಸೊರಸ್‌ ವಿರುದ್ಧ ಜೈಶಂಕರ್‌ ಕಿಡಿ

    ಸಿಡ್ನಿ: ಚುನಾವಣಾ ಫಲಿತಾಂಶಗಳು ಅವರ ಇಚ್ಛೆಯಂತೆ ಬಾರದೇ ಇದ್ದಾಗ ಜಾರ್ಜ್‌ ಸೊರಸ್‌ನಂತಹ (George Soros) ಜನರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪ್ರಶ್ನಿಸಲು ಪ್ರಾರಂಭಿಸುತ್ತಾರೆ ಎಂದು ವಿದೇಶಾಂಗ ಸಚಿವ ಎಸ್‌ ಜೈಶಂಕರ್ (S Jaishankar) ಕಿಡಿಕಾರಿದ್ದಾರೆ.

    ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ರೈಸಿನಾ@ಸಿಡ್ನಿ ಕಾರ್ಯಕ್ರಮದಲ್ಲಿ ಜೈಶಂಕರ್‌ ಅವರು ಸೊರಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

    ಹಿರಿಯ, ಶ್ರೀಮಂತ ಮತ್ತು ಅಪಾಯಕಾರಿ ಎಂದು ಸೋರಸ್‌ ಅವರನ್ನು ಜೈಶಂಕರ್‌ ಬಣ್ಣಿಸಿದ್ದಾರೆ. ಕೆಲವು ವರ್ಷಗಳ ಹಿಂದೆ, ಲಕ್ಷಾಂತರ ಮುಸ್ಲಿಮರ ಪೌರತ್ವವನ್ನು ಕಸಿದುಕೊಳ್ಳಲು ಭಾರತ (India) ಮುಂದಾಗಿದೆ ಎಂದು ಆರೋಪಿಸಿದ್ದರು. ಆದರೆ ಇದು ಸಂಭವಿಸಿರಲಿಲ್ಲ. ಇದೊಂದು ಹಾಸ್ಯಾಸ್ಪದ ಸಲಹೆಯಾಗಿತ್ತು ಎಂದು ಹೇಳಿದರು. ಇದನ್ನೂ ಓದಿ: ಭಾರತ ಈಗ ಕುಸಿಯುತ್ತಿದೆ: ಮೋದಿಯನ್ನು ಟೀಕಿಸಿದ ಜಾರ್ಜ್ ಸೊರಸ್ ಯಾರು?

    ನ್ಯೂಯಾರ್ಕ್‌ನಲ್ಲಿ ಕುಳಿತಿರುವ ಹಳೆಯ, ಶ್ರೀಮಂತ ವ್ಯಕ್ತಿ ತನ್ನ ದೃಷ್ಟಿಕೋನದಲ್ಲೇ ಇಡೀ ಜಗತ್ತು ಕಾರ್ಯನಿರ್ವಹಿಸಬೇಕೆಂದು ಭಾವಿಸುತ್ತಾರೆ. ಈ ಅಪಾಯಕಾರಿ ವ್ಯಕ್ತಿಗಳು ಸಂಪನ್ಮೂಲಗಳನ್ನು ಹೂಡಿಕೆ ಮಾಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಮುಂದಾಗುತ್ತಾರೆ ಎಂದು ತಿಳಿಸಿದರು.

    ಸೊರಸ್‌ ಅವರಂತಹ ಜನರು ತಾವು ನೋಡಲು ಬಯಸುವ ವ್ಯಕ್ತಿ ಗೆದ್ದರೆ ಚುನಾವಣೆ ಒಳ್ಳೆಯದು ಎಂದು ಭಾವಿಸುತ್ತಾರೆ ಮತ್ತು ಚುನಾವಣೆಯು ವಿಭಿನ್ನ ಫಲಿತಾಂಶವನ್ನು ನೀಡಿದರೆ ಅವರು ಅದನ್ನು ದೋಷಪೂರಿತ ಪ್ರಜಾಪ್ರಭುತ್ವ ಎಂದು ಹೇಳುತ್ತಾರೆ ಎಂದು ದೂರಿದರು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • India China Border Rowː ಚೀನಾ ಗಡಿ ಸಂಘರ್ಷ – ಕೇಂದ್ರದ ನಡೆ ಅತ್ಯಂತ ಅಪಾಯಕಾರಿ ಎಂದ ರಾಗಾ

    India China Border Rowː ಚೀನಾ ಗಡಿ ಸಂಘರ್ಷ – ಕೇಂದ್ರದ ನಡೆ ಅತ್ಯಂತ ಅಪಾಯಕಾರಿ ಎಂದ ರಾಗಾ

    ಶ್ರೀನಗರ: ಚೀನಾ ಗಡಿ ಸಂಘರ್ಷ ವಿಚಾರದಲ್ಲಿ (India China Border Row) ಭಾರತ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ವಿಧಾನ ಅತ್ಯಂತ ಅಪಾಯಕಾರಿಯಾಗಿದೆ. ಇದು ಚೀನಾ ತನ್ನ ಆಕ್ರಮಣಕಾರಿ ಕೆಲಸಗಳನ್ನ ಮುಂದುವರಿಸಲು ಆತ್ಮವಿಶ್ವಾಸ ಹೆಚ್ಚಿಸುವಂತೆ ಮಾಡುತ್ತದೆ ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್‌ಗಾಂಧಿ (Rahul Gandhi) ಎಚ್ಚರಿಸಿದ್ದಾರೆ.

    India-China Border Row: 1962ರಲ್ಲೇ ಚೀನಾ ಭೂಪ್ರದೇಶ ಆಕ್ರಮಿಸಿತ್ತು - ರಾಗಾ ಟೀಕೆಗೆ ಜೈಶಂಕರ್ ತಿರುಗೇಟು

    ಚೀನಾ ಗಡಿ ಸಂಘರ್ಷದ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ (S Jaishankar) ಸ್ಪಷ್ಟನೆ ನೀಡಿದ ಒಂದು ದಿನದ ನಂತರ ರಾಹುಲ್ ಹಾಂಧಿ ಮತ್ತೊಮ್ಮೆ ಲಡಾಖ್‌ನ (Ladakh) ವಿಷಯ ಪ್ರಸ್ತಾಪಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಗಾಂಧಿ, ಲಡಾಖ್‌ನ ಸುಮಾರು 2 ಸಾವಿರ ಚದರ ಕಿ.ಮೀ ಭಾರತೀಯ ಭೂಭಾಗವು ಚೀನಾದ ವಶದಲ್ಲಿದೆ ಎಂದು ಒತ್ತಿ ಹೇಳಿದ್ದಾರೆ.

    India-China Border Row: 1962ರಲ್ಲೇ ಚೀನಾ ಭೂಪ್ರದೇಶ ಆಕ್ರಮಿಸಿತ್ತು - ರಾಗಾ ಟೀಕೆಗೆ ಜೈಶಂಕರ್ ತಿರುಗೇಟು

    ಚೀನಿಯರು ಭಾರತದ ಯಾವುದೇ ಭೂಪ್ರದೇಶವನ್ನ ವಶಪಡಿಸಿಕೊಂಡಿಲ್ಲ ಅನ್ನೋ ಅನಿಸಿಕೆ ದೇಶಕ್ಕೆ ಇದೆ. ಇದರೊಂದಿಗೆ ಚೀನಿಯರು ನಮ್ಮ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ ಎಂಬುದನ್ನ ನಿರಾಕರಿಸುವ ಮೂಲಕ ಕೇಂದ್ರ ಸರ್ಕಾರ (Government Of India) ಅನುಸರಿಸುತ್ತಿರುವ ವಿಧಾನ ಅತ್ಯಂತ ಅಪಾಯಕಾರಿಯಾಗಿದೆ. ಇದು ಚೀನಾ ತನ್ನ ಆಕ್ರಮಣಕಾರಿ ಕೆಲಸಗಳನ್ನ ಮುಂದುವರಿಸಲು ಆತ್ಮವಿಶ್ವಾಸ ಹೆಚ್ಚಿಸಿದಂತೆ ಮಾಡಿದೆ ಎಂದಿದ್ದಾರೆ.

    ಈ ವಿಚಾರದಲ್ಲಿ ಚೀನಿಯರೊಂದಿಗೆ ದೃಢವಾಗಿ ವ್ಯವಹರಿಸಬೇಕು ಹಾಗೂ ನಮ್ಮ ನೆಲದ ಮೇಲೆ ಕುಳಿತಿರೋದನ್ನ ನಾವು ಸಹಿಸೋದಿಲ್ಲ ಎಂಬುದನ್ನು ಸ್ಪಷ್ಟಪಡಿಸುವ ಮೂಲಕ ಚೀನಿಯರೊಂದಿಗೆ ವ್ಯವಹರಿಸಬೇಕು ಎಂದು ರಾಹುಲ್ ಸಲಹೆ ನೀಡಿದ್ದಾರೆ. ಇದನ್ನೂ ಓದಿ: India-China Border Row: 1962ರಲ್ಲೇ ಚೀನಾ ಭೂಪ್ರದೇಶ ಆಕ್ರಮಿಸಿತ್ತು – ರಾಗಾ ಟೀಕೆಗೆ ಜೈಶಂಕರ್ ತಿರುಗೇಟು

    India-China Border Row: 1962ರಲ್ಲೇ ಚೀನಾ ಭೂಪ್ರದೇಶ ಆಕ್ರಮಿಸಿತ್ತು - ರಾಗಾ ಟೀಕೆಗೆ ಜೈಶಂಕರ್ ತಿರುಗೇಟು

    ನಾನು ಇತ್ತೀಚೆಗೆ ಕೆಲವು ಮಾಜಿ ಸೈನಿಕರನ್ನ ಭೇಟಿ ಮಾಡಿದ್ದೇನೆ. ಲಡಾಖ್‌ನ ನಿಯೋಗವೂ 2 ಸಾವಿರ ಚದರ ಕೀ.ಮೀ. ಭಾರತೀಯ ಭೂಪ್ರದೇಶವನ್ನ ಚೀನೀಯರು ವಶಪಡಿಸಿಕೊಂಡಿದ್ದಾರೆ ಎಂಬುದನ್ನ ಸ್ಪಷ್ಟವಾಗಿ ಹೇಳಿದ್ದಾರೆ. ಭಾರತೀಯ ಭೂಪ್ರದೇಶದಲ್ಲಿದ್ದ ಹಲವು ಗಸ್ತು ಕೇಂದ್ರಗಳು ಚೀನಿಯರ ವಶದಲ್ಲಿವೆ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.

    ಚೀನಾ ಈಗಾಗಲೇ `ನೀವು ಏನು ಮಾಡುತ್ತಿದ್ದೀರಿ ಎಂಬುದರ ಬಗ್ಗೆ ಜಾಗರೂಕರಾಗಿರಿ, ಏಕೆಂದರೆ ನಾವು ನಿಮ್ಮ ಭೌಗೋಳಿಕತೆಯನ್ನು ಬದಲಾಯಿಸುತ್ತೇವೆ, ಲಡಾಖ್ ಪ್ರವೇಶಿಸುತ್ತೇವೆ, ನಾವು ಅರುಣಾಚಲ ಪ್ರದೇಶವನ್ನ ಪ್ರವೇಶ ಮಾಡ್ತೀವಿ’ ಎಂದು ಎಚ್ಚರಿಕೆ ನೀಡಿದೆ. ಇದನ್ನ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಕಮಲ್ ಹಾಸನ್ ಅವರೊಂದಿಗಿನ ಸಂಭಾಷಣೆಯಲ್ಲಿ ಚರ್ಚಿಸಲಾಗಿತ್ತು.

    India-China Border Row: 1962ರಲ್ಲೇ ಚೀನಾ ಭೂಪ್ರದೇಶ ಆಕ್ರಮಿಸಿತ್ತು - ರಾಗಾ ಟೀಕೆಗೆ ಜೈಶಂಕರ್ ತಿರುಗೇಟು

    ಜೈಶಂಕರ್ ಹೇಳಿದ್ದೇನು?
    ಭಾನುವಾರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ಚೀನಾ ಗಡಿ ಸಂಘರ್ಷ ವಿಚಾರದಲ್ಲಿ ರಾಹುಲ್‌ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ್ದರು. ಇದನ್ನೂ ಓದಿ: ಶ್ರೀಕೃಷ್ಣ, ಹನುಮಂತ ಇಬ್ಬರೂ ಶ್ರೇಷ್ಠ ರಾಜತಾಂತ್ರಿಕರು: ಜೈಶಂಕರ್‌

    India-China Border Row: 1962ರಲ್ಲೇ ಚೀನಾ ಭೂಪ್ರದೇಶ ಆಕ್ರಮಿಸಿತ್ತು - ರಾಗಾ ಟೀಕೆಗೆ ಜೈಶಂಕರ್ ತಿರುಗೇಟು

    ಚೀನಾ 1962ರಲ್ಲೇ ಆ ಭೂಮಿಯನ್ನ ಆಕ್ರಮಿಸಿತ್ತು. ಕೆಲವರು ರಾಜಕೀಯಕ್ಕಾಗಿ ಚೀನಾ ವಿಚಾರದಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ. 1962ರ ಚೀನಾ ಗಡಿ ಸಮಸ್ಯೆ ಇತ್ತೀಚೆಗೆ ಆರಂಭವಾಗಿದ್ದು ಎನ್ನುವಂತೆ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಚೀನಾ ಭೂಪ್ರದೇಶ ಆಕ್ರಮಣ ಬಗ್ಗೆ ಮಾತನಾಡುವಾಗ ಅವರು ಸತ್ಯ ಹೇಳುವುದಿಲ್ಲ. ಆ ಘಟನೆ ನಿನ್ನೆ ಆಗಿದೆ ಎಂಬ ಭಾವನೆ ಬರುವಂತೆ ಮಾತನಾಡುತ್ತಾರೆ. ಅಂತಹ ಜನರು ಉದ್ದೇಶಪೂರ್ವಕವಾಗಿ ಚೀನಾದ ಬಗ್ಗೆ ತಪ್ಪು ಮಾಹಿತಿ ಹರಡುತ್ತಾರೆ ಎಂದು ಜೈಶಂಕರ್ ವಾಗ್ದಾಳಿ ನಡೆಸಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • India-China Border Row: 1962ರಲ್ಲೇ ಚೀನಾ ಭೂಪ್ರದೇಶ ಆಕ್ರಮಿಸಿತ್ತು – ರಾಗಾ ಟೀಕೆಗೆ ಜೈಶಂಕರ್ ತಿರುಗೇಟು

    India-China Border Row: 1962ರಲ್ಲೇ ಚೀನಾ ಭೂಪ್ರದೇಶ ಆಕ್ರಮಿಸಿತ್ತು – ರಾಗಾ ಟೀಕೆಗೆ ಜೈಶಂಕರ್ ತಿರುಗೇಟು

    ನವದೆಹಲಿ: `ಗಡಿ ಭಾಗದಲ್ಲಿ ಚೀನಾಗೆ (China) ಪ್ರಧಾನಿ ಮೋದಿಯವರು (Narendra Modi) ಹೋರಾಟವಿಲ್ಲದೇ ಭೂಪ್ರದೇಶವನ್ನು ಬಿಟ್ಟುಕೊಟ್ಟಿದ್ದಾರೆ’ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಟೀಕೆಗೆ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ (S Jaishankar) ತಿರುಗೇಟು ನೀಡಿದ್ದು, `ಚೀನಾ 1962ರಲ್ಲೇ ಆ ಭೂಮಿಯನ್ನ ಆಕ್ರಮಿಸಿತ್ತು’ ಎಂದು ಹೇಳಿದ್ದಾರೆ.

    ಕೆಲವರು ರಾಜಕೀಯಕ್ಕಾಗಿ ಚೀನಾ ವಿಚಾರದಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ. 1962ರ ಚೀನಾ ಗಡಿ ಸಮಸ್ಯೆ ಇತ್ತೀಚೆಗೆ ಆರಂಭವಾಗಿದ್ದು ಎನ್ನುವಂತೆ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

    `ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 100 ಚದರ ಕಿಲೋಮೀಟರ್ ಭಾರತೀಯ ಭೂಪ್ರದೇಶವನ್ನು ಚೀನಾಕ್ಕೆ ಹೋರಾಟವಿಲ್ಲದೇ ನೀಡಿದ್ದಾರೆ. ಅದನ್ನು ಹೇಗೆ ಹಿಂಪಡೆಯುತ್ತಾರೆ?’ ಎಂದು ರಾಹುಲ್ ಗಾಂಧಿ ಸರ್ಕಾರವನ್ನು ಪ್ರಶ್ನಿಸಿದ್ದರು. ಅಲ್ಲದೇ ಇತ್ತೀಚೆಗೆ ನಟ, ರಾಜಕಾರಣಿ ಕಮಲ್ ಹಾಸನ್ (Kamal Hassan) ಅವರೊಂದಿಗಿನ ಸಂವಾದದಲ್ಲಿಯೂ ರಾಹುಲ್ ಮತ್ತೊಮ್ಮೆ ಚೀನಾವು ಭಾರತದ 2,000 ಚದರ ಮೀಟರ್ ಭೂಪ್ರದೇಶ ಆಕ್ರಮಿಸಿಕೊಂಡಿದೆ. ಆದರೂ ನಮ್ಮ ಪ್ರಧಾನಿ ಮೋದಿ ಏನನ್ನೂ ಹೇಳಲಿಲ್ಲ’ ಎಂದು ಟೀಕಿಸಿದ್ದರು.

    ಇದಕ್ಕೆ ಜೈಶಂಕರ್ ತಿರುಗೇಟು ನೀಡಿದ್ದು, `ಚೀನಾ ಭೂಪ್ರದೇಶ ಆಕ್ರಮಣ ಬಗ್ಗೆ ಮಾತನಾಡುವಾಗ ಅವರು ಸತ್ಯ ಹೇಳುವುದಿಲ್ಲ. ಆ ಘಟನೆ ನಿನ್ನೆ ಆಗಿದೆ ಎಂಬ ಭಾವನೆ ಬರುವಂತೆ ಮಾತನಾಡುತ್ತಾರೆ. ಅಂತಹ ಜನರು ಉದ್ದೇಶಪೂರ್ವಕವಾಗಿ ಚೀನಾದ ಬಗ್ಗೆ ತಪ್ಪು ಮಾಹಿತಿ ಹರಡುತ್ತಾರೆ ಎಂದು ಜೈಶಂಕರ್ ಹೇಳಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ಕೋವಿಡ್‌ ಹಾವಳಿ – ಮೊದಲ ಬಾರಿಗೆ ಕೊರೊನಾ ಬಗ್ಗೆ ಜಿನ್‌ಪಿಂಗ್‌ ಮಾತು

    ಕೆಲವರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅವರಿಗೇಕೆ ದೇಶದ ಬಗ್ಗೆ ವಿಶ್ವಾಸವಿಲ್ಲ? ಏಕೆ ಜನರನ್ನ ದಾರಿ ತಪ್ಪಿಸುತ್ತಿದ್ದಾರೆ? ಚೀನಾದ ಬಗ್ಗೆ ಏಕೆ ತಪ್ಪು ಮಾಹಿತಿಗಳನ್ನೇ ಹರಡುತ್ತಾರೆ. ಈ ಪ್ರಶ್ನೆಗಳಿಗೆ ನಾನು ಹೇಗೆ ಉತ್ತರಿಸಲಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮಹಿಳಾ ಶಿಕ್ಷಣಕ್ಕೆ ನಿಷೇಧ – ವಿದ್ಯಾರ್ಥಿನಿಯರಿಗೆ ಯುನಿವರ್ಸಿಟಿ ಪ್ರವೇಶ ಪರೀಕ್ಷೆಗೆ ಅವಕಾಶವಿಲ್ಲ ಎಂದ ತಾಲಿಬಾನ್

    ಬಹುತೇಕ ವಿದೇಶಿ ಮಾಧ್ಯಮಗಳು ಭಾರತ ಸರ್ಕಾರವನ್ನು `ಹಿಂದೂ ರಾಷ್ಟ್ರೀಯವಾದಿ’ (Hindu Nationalist) ಎಂದು ಉಲ್ಲೇಖಿಸುತ್ತವೆ. ಆದರೆ ಅಮೆರಿಕ ಹಾಗೂ ಇತರ ಯುರೋಪ್ ರಾಷ್ಟ್ರಗಳ ಸರ್ಕಾರಗಳನ್ನು ಅವರು `ಕ್ರಿಶ್ಚಿಯನ್ ರಾಷ್ಟ್ರವಾದಿ’ ಎಂದೇಕೆ ಕರೆಯುವುದಿಲ್ಲ? ಬಹುತೇಕ ವಿದೇಶಿ ಮಾಧ್ಯಮಗಳು ಧರ್ಮ ವಿಶ್ಲೇಷಣೆ ಪದಗಳನ್ನ ಭಾರತಕ್ಕೆ ಮಾತ್ರ ಸಿಮೀತಗೊಳಿಸಿವೆ. ಆದರೆ ಭಾರತ ಇಡೀ ವಿಶ್ವಕ್ಕಾಗಿ ಹೆಚ್ಚಿನದನ್ನು ಮಾಡಲು ಬಯಸುತ್ತದೆ ಎಂಬುದು ಅವರಿಗೆ ಅರ್ಥವೇ ಆಗುತ್ತಿಲ್ಲ ಎಂದು ಜೈಶಂಕರ್ ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಾಕ್‌ ಭಯೋತ್ಪಾದನೆಯನ್ನು ಯಾಕೆ ಯುರೋಪ್‌ ರಾಷ್ಟ್ರಗಳು ಖಂಡಿಸಿಲ್ಲ – ಜೈಶಂಕರ್‌ ಪ್ರಶ್ನೆ

    ಪಾಕ್‌ ಭಯೋತ್ಪಾದನೆಯನ್ನು ಯಾಕೆ ಯುರೋಪ್‌ ರಾಷ್ಟ್ರಗಳು ಖಂಡಿಸಿಲ್ಲ – ಜೈಶಂಕರ್‌ ಪ್ರಶ್ನೆ

    ವಿಯೆನ್ನಾ: ಗಡಿಯಾಚೆ ದಶಕಗಳಿಂದಲೂ ಪಾಕಿಸ್ತಾನ(Pakistan) ನಡೆಸುತ್ತಿರುವ ಭಯೋತ್ಪಾದನೆಯನ್ನು ಯಾಕೆ ಇಲ್ಲಿಯವರೆಗೆ ಯುರೋಪ್‌ ದೇಶಗಳು ಖಂಡಿಸಿಲ್ಲ ಎಂದು ವಿದೇಶಾಂಗ ಸಚಿವ ಎಸ್‌ ಜೈಶಂಕರ್‌(S Jaishankar) ಪ್ರಶ್ನಿಸಿದ್ದಾರೆ.

    ಉಕ್ರೇನ್‌(Ukraine) ಮೇಲಿನ ಯುದ್ಧದ ವಿಚಾರದಲ್ಲಿ ಭಾರತದ (India)ನಿರ್ಧಾರವನ್ನು ಯುರೋಪ್‌ ರಾಷ್ಟ್ರಗಳು(European Nations) ಪ್ರಶ್ನಿಸುತ್ತಿರುವ ಹಿನ್ನೆಲೆಯಲ್ಲಿ ಜೈಶಂಕರ್‌ ಮೊದಲ ಬಾರಿಗೆ ಪಾಕಿಸ್ತಾನದ ವಿಚಾರವನ್ನು ಪ್ರಸ್ತಾಪಿಸಿ ಯುರೋಪ್‌ ರಾಷ್ಟ್ರಗಳ ಧೋರಣೆಯನ್ನು ಪ್ರಶ್ನಿಸಿ ಖಡಕ್‌ ತಿರುಗೇಟು ನೀಡಿದ್ದಾರೆ.

    ಆಸ್ಟ್ರಿಯಾದ(Austria) ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಅವರು ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರ ಬಿಂದು ಎಂದು ಬಣ್ಣಿಸಿದರು. ಇದನ್ನೂ ಓದಿ: ನಮ್ಮದು ಬೆಸ್ಟ್‌ ಡೀಲ್‌ – ರಷ್ಯಾದಿಂದ ತೈಲ ಖರೀದಿಗೆ ಜೈಶಂಕರ್‌ ಸಮರ್ಥನೆ

    ಕೆಲವು ವರ್ಷಗಳ ಹಿಂದೆ ಭಾರತದ ಸಂಸತ್ತಿನ ಮೇಲೆ ಈ ದೇಶ ದಾಳಿ ಮಾಡಿತ್ತು. ವಿದೇಶಿಯರಿದ್ದ ಮುಂಬೈ ಹೋಟೆಲ್‌ ಮೇಲೆ ದಾಳಿ ನಡೆಸಿತ್ತು. ಪ್ರತಿದಿನ ಗಡಿಯಾಚೆಗೆ ಭಯೋತ್ಪಾದಕರನ್ನು ಕಳುಹಿಸುತ್ತದೆ ಎಂದು ವಿದೇಶಾಂಗ ಸಚಿವರು ಪಾಕಿಸ್ತಾನವನ್ನು ದೂರಿದರು.

    ಚೀನಾ ಭಾರತದ(China India Border Dispute) ನಡುವಿನ ಗಡಿ ಕಿತ್ತಾಟದ ಬಗ್ಗೆ ಪ್ರತಿಕ್ರಿಯಿಸಿ, 1962 ಯುದ್ಧದ ಬಳಿಕ ಚೀನಾದ ಧೋರಣೆಯಿಂದಾಗಿ ಈಗ ಗಡಿಯಲ್ಲಿ ಶಾಂತಿ ಕದಡುತ್ತಿದೆ. ಉಪಗ್ರಹ ಚಿತ್ರದ ಮೂಲಕ ಗಡಿ ಭಾಗಕ್ಕೆ ಯಾರು ಮೊದಲು ಬಂದಿದ್ದಾರೆ ಎನ್ನುವುದು ದೃಢವಾಗುತ್ತದೆ. ಗಡಿಯಲ್ಲಿ ಸೇನೆಯನ್ನು ನಿಯೋಜಿಸಬಾರದು ಎಂದು ನಮ್ಮಿಬ್ಬರ ಮಧ್ಯೆ ಒಪ್ಪಂದ ಇದೆ. ಆದರೆ ಚೀನಾ ಆ ಒಪ್ಪಂದವನ್ನು ಪಾಲನೆ ಮಾಡದ ಕಾರಣ ಈಗ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಇದನ್ನೂ ಓದಿ: ರಷ್ಯಾದಿಂದ ಡಿಸ್ಕೌಂಟ್‌ ಬೆಲೆಯಲ್ಲಿ ತೈಲ – 35 ಸಾವಿರ ಕೋಟಿ ಗಳಿಸಿದ ಭಾರತ

    ಜೈಶಂಕರ್‌ ಭಾರತದ ನಡೆಯನ್ನು ವಿಶ್ವ ವೇದಿಕೆಯಲ್ಲಿ ಸಮರ್ಥಿಸಿಕೊಳ್ಳುವುದು ಇದು ಮೊದಲನೆಯದ್ದಲ್ಲ. ಈ ಹಿಂದೆಯೂ ಸರಿಯಾಗಿ ಸಮರ್ಥಿಸಿ ತಿರುಗೇಟು ನೀಡಿದ್ದರು. ರಷ್ಯಾದಿಂದ ಭಾರತ ಮಾತ್ರ ತೈಲ ಖರೀದಿ ಮಾಡುತ್ತಿಲ್ಲ. ಯುರೋಪ್‌ ಈಗಲೂ ಗ್ಯಾಸ್‌ ಖರೀದಿ ಮಾಡುತ್ತಿದೆ. ಹೀಗಿದ್ದರೂ ಭಾರತ ಮಾತ್ರ ಟಾರ್ಗೆಟ್‌ ಯಾಕೆ ಎಂದು ಪ್ರಶ್ನಿಸಿದ್ದರು.

    ತೈಲವನ್ನು(Crude Oil) ಆಮದು ಮಾಡಿಕೊಳ್ಳುವ ಮೂಲಕ ರಷ್ಯಾ(Russia) ಯುದ್ಧಕ್ಕೆ ನಿಧಿ ನೀಡಿದಂತಾಗುತ್ತದೆ ಎಂಬ ಪ್ರಶ್ನೆಗೆ, ಭಾರತ ತೈಲ ಖರೀದಿಸಿ ರಷ್ಯಾಗೆ ಸಹಾಯ ಮಾಡುತ್ತದೆ ಎಂದಾದರೆ ರಷ್ಯಾದಿಂದ ಗ್ಯಾಸ್‌ ಖರೀದಿಸುತ್ತಿರುವ ಯುರೋಪ್‌ ದೇಶಗಳು ಯುದ್ಧಕ್ಕೆ ನಿಧಿ ನೀಡಿದಂತೆ ಆಗುವುದಿಲ್ಲವೇ ಎಂದು ಮರು ಪ್ರಶ್ನೆ ಹಾಕಿ ಪ್ರಶ್ನೆ ಕೇಳಿದವರ ಬಾಯಿ ಮುಚ್ಚಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಭಯೋತ್ಪಾದನೆಯಿಂದ ಭಾರತ ನೊಂದಷ್ಟು ಬೇರಾವ ದೇಶವೂ ನೊಂದಿಲ್ಲ: ಜೈಶಂಕರ್

    ಭಯೋತ್ಪಾದನೆಯಿಂದ ಭಾರತ ನೊಂದಷ್ಟು ಬೇರಾವ ದೇಶವೂ ನೊಂದಿಲ್ಲ: ಜೈಶಂಕರ್

    ನವದೆಹಲಿ: ನಾವು ನಮ್ಮ ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನೇ ಬಯಸುತ್ತೇವೆ. ಆದರೆ ಇದರ ಅರ್ಥ ಭಯೋತ್ಪಾದನೆಯನ್ನು (Terrorism) ಕ್ಷಮಿಸುತ್ತೇವೆ ಎಂದಲ್ಲ. ಭಯೋತ್ಪಾದನೆಯಿಂದ ಭಾರತ (India) ನೊಂದಷ್ಟು ಬೇರಾವ ದೇಶವೂ ನೊಂದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ (S Jaishankar) ಹೇಳಿಕೆ ನೀಡಿದ್ದಾರೆ.

    ಶುಕ್ರವಾರ ಜೈಶಂಕರ್ ಅವರು ಸೈಪ್ರಸ್‌ಗೆ (Cyprus) ಭೇಟಿ ನೀಡಿದ್ದು, ಅಲ್ಲಿನ ಭಾಷಣದ ವೇಳೆ ಅವರು ನೆರೆಯ ಪಾಕಿಸ್ತಾನ (Pakistan) ಹಾಗೂ ಚೀನಾ (China) ದೇಶಗಳಿಗೆ ತಿರುಗೇಟು ನಿಡಿದ್ದಾರೆ. ನಮ್ಮ ನೆರೆಯ ದೇಶಗಳೊಂದಿಗೆ ಒಳ್ಳೆಯ ಸಂಬಂಧ ಬಯಸಿದರೂ ನಮ್ಮ ಮೇಲಾಗಿರುವ ಭಯೋತ್ಪಾದನೆಯನ್ನು ನಾವು ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ಈ ವಿಷಯದ ಬಗ್ಗೆ ಯಾವುದೇ ರಾಜಿಯಿಲ್ಲ ಎಂದು ಒತ್ತಿ ಹೇಳಿದರು.

    ಚೀನಾದೊಂದಿಗಿನ ಗಡಿ ಸಮಸ್ಯೆಗಳ ಕುರಿತು ಮಾತನಾಡಿದ ಜೈಶಂಕರ್, ಕೋವಿಡ್ ಸಮಯದಲ್ಲಿ ಸವಾಲುಗಳು ತೀವ್ರಗೊಂಡಿವೆ. ಚೀನಾದೊಂದಿಗಿನ ನಮ್ಮ ಸಂಬಂಧಗಳು ಸಾಮಾನ್ಯವಾಗಿಲ್ಲ. ಅರುಣಾಚಲದ ತವಾಂಗ್ ಸೆಕ್ಟರ್‌ನಲ್ಲಿ ಚೀನಾ ಮತ್ತು ಭಾರತೀಯ ಸೈನಿಕರು ಘರ್ಷಣೆ ನಡೆಸಿದ ದಿನಗಳ ಬಳಿಕ ನಮ್ಮ ಗಡಿಯಲ್ಲಿ ನಮಗೆ ಸವಾಲುಗಳಿವೆ. ಅದು ಕೋವಿಡ್ ಸಮಯದಲ್ಲಿ ತೀವ್ರಗೊಂಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಾವು ಕೂಗಾಡಿದ್ರೂ ಸಹಾಯಕ್ಕೆ ಯಾರೊಬ್ಬರೂ ಬರಲಿಲ್ಲ- ಪಂತ್ ರಕ್ಷಿಸಿದ ಬಸ್ ಡ್ರೈವರ್‌ ಬಿಚ್ಚಿಟ್ಟ ಸತ್ಯ

    ಚೀನಾದೊಂದಿಗಿನ ಸಂಬಂಧಗಳು ಸಾಮಾನ್ಯವಾಗಿಲ್ಲ ಏಕೆಂದರೆ ಎಲ್‌ಎಸಿ ಪ್ರದೇಶವನ್ನು ಏಕಪಕ್ಷೀಯವಾಗಿ ಬದಲಾಯಿಸುವ ಯಾವುದೇ ಪ್ರಯತ್ನವನ್ನು ನಾವು ಒಪ್ಪುವುದಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದರು.

    ಭಾರತ ಹಾಗೂ ಸೈಪ್ರಸ್ ದೇಶಗಳು ರಾಜತಾಂತ್ರಿಕ ಸಂಬಂಧಗಳ 60 ನೇ ವರ್ಷವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಜೈಶಂಕರ್ ಸೈಪ್ರಸ್‌ಗೆ ಭೇಟಿ ನೀಡಿದ್ದಾರೆ. ಅವರ ಭೇಟಿಯ ಸಮಯದಲ್ಲಿ, ಸೈಪ್ರಿಯೋಟ್ ಕೌಂಟರ್ಪಾರ್ಟ್ ಕಸೌಲಿಡೆಸ್ ಅವರನ್ನು ಭೇಟಿ ಮಾಡಿದ್ದಾರೆ. ಬಳಿಕ ರಕ್ಷಣಾ ಮತ್ತು ಮಿಲಿಟರಿ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದನ್ನೂ ಓದಿ: ತಿರುಪತಿ ಗರ್ಭಗುಡಿ 8 ತಿಂಗಳು ಬಂದ್ ಇಲ್ಲ – ಮುಖ್ಯ ಅರ್ಚಕರ ಸ್ಪಷನೆ

    Live Tv
    [brid partner=56869869 player=32851 video=960834 autoplay=true]

  • ವಿದೇಶಾಂಗ ಸಚಿವ ಜೈಶಂಕರ್ ಪುತ್ರನಿಗೆ ಚೀನಾ ಫಂಡಿಂಗ್ ಲಿಂಕ್ – ಕಾಂಗ್ರೆಸ್ ಗಂಭೀರ ಆರೋಪ

    ವಿದೇಶಾಂಗ ಸಚಿವ ಜೈಶಂಕರ್ ಪುತ್ರನಿಗೆ ಚೀನಾ ಫಂಡಿಂಗ್ ಲಿಂಕ್ – ಕಾಂಗ್ರೆಸ್ ಗಂಭೀರ ಆರೋಪ

    ನವದೆಹಲಿ: ದಿ. ರಾಜೀವ್ ಗಾಂಧಿ ಫೌಂಡೇಶನ್ (RGF) ಚೀನಾದಿಂದ ಹಣ ಪಡೆದಿದೆ ಎಂಬ ಬಿಜೆಪಿ (BJP) ಆರೋಪಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ (Congress), ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ (S Jaishankar) ಅವರ ಪುತ್ರನಿಗೆ ಚೀನಾ ಫಂಡಿಂಗ್ (China Fund) ಲಿಂಕ್ ಇರುವುದಾಗಿ ಆರೋಪಿಸಿದೆ.

    ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ (Pawan Khera), ಆರ್‌ಜಿಎಫ್ ಚೀನಾದಿಂದ ಹಣವನ್ನು ತೆಗೆದುಕೊಳ್ಳುವ ಮಾಹಿತಿಯು ಸಾರ್ವಜನಿಕ ಡೊಮೇನ್‌ಲ್ಲಿ ಲಭ್ಯವಿದೆ. ಅಲ್ಲದೇ ವಿವಿಧ ಸಂಸ್ಥೆಗಳಿಂದಲೂ ಅನುದಾನ ಪಡೆಯುತ್ತಿದೆ. ಎಸ್.ಜೈಶಂಕರ್ ಅವರ ಪುತ್ರ ಕೆಲಸ ಮಾಡುತ್ತಿರುವ ಸಂಸ್ಥೆಗೆ ಚೀನಾ ರಾಯಭಾರ ಕಚೇರಿಯಿಂದ ಮೂರು ಬಾರಿ ಅನುದಾನ ಬಂದಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: PM ಕೇರ್ ನಿಧಿಗೆ ಕೊಡುಗೆ ನೀಡಲು ಚೀನಾ ಕಂಪನಿಗಳಿಗೆ ಅನುಮತಿಸಿದ್ದೇಕೆ?- ಕಾಂಗ್ರೆಸ್

    ಅಲ್ಲಿ ಅನುದಾನ ಹೇಗೆ ಏರಿಕೆ ಆಯ್ತು ಅನ್ನೋ ಬಗ್ಗೆ ನಾವು ಯಾವುದೇ ಆರೋಪಗಳನ್ನು ಮಾಡಲಿಲ್ಲ. ಆದ್ರೆ ರಾಜೀವ್ ಗಾಂಧಿ ಫೌಂಡೇಶನ್ (ಆರ್‌ಜಿಎಫ್) ಚೀನಾ ರಾಯಭಾರ ಕಚೇರಿಯಿಂದ 1.35 ಕೋಟಿ ರೂ. ಪಡೆದಿದ್ದರಿಂದ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ (FCRA) ನೋಂದಣಿಯನ್ನು ರದ್ದುಗೊಳಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ಚೀನಾ ವಿರುದ್ಧ ಮಾತನಾಡಲು ಅವಕಾಶವೇ ಇಲ್ಲ – ಖರ್ಗೆ ಕಿಡಿ

    ಇದೇ ವೇಳೆ ನರೇಂದ್ರ ಮೋದಿ ಅವರ ವಿರುದ್ಧ ಕಿಡಿಕಾರಿದ ಖೇರಾ, ಗಡಿಯಲ್ಲಿನ ಚಟುವಟಿಕೆಗಳ ಬಗ್ಗೆ ಚೀನಾಕ್ಕೆ ಕ್ಲೀನ್ ಚಿಟ್ ನೀಡುವ ಮೂಲಕ ನಮ್ಮ ಸೈನಿಕರ ತ್ಯಾಗವನ್ನು ಏಕೆ ನಿರಾಕರಿಸುತ್ತಿದ್ದಾರೆ? ಎಂಬುದೇ ತಿಳಿಯುತ್ತಿಲ್ಲ. ಮೋದಿಗೆ ಚೀನಾ ಅಂದ್ರೆ ಏಕೆ ಭಯ? ಚೀನಾದ ಮುಂದೆ ಏಕೆ ಬಾಯಿ ತೆರೆಯುತ್ತಿಲ್ಲ? ಏಕೆ ಚೀನಾಕ್ಕೆ ಕ್ಲೀನ್ ಚಿಟ್ ನೀಡಿ ನಮ್ಮ ಸೈನಿಕರ ತ್ಯಾಗವನ್ನು ನಿರಾಕರಿಸುತ್ತಿದ್ದಾರೆ? ಸೈನಿಕರನ್ನೇಕೆ ಅವಮಾನಿಸುತ್ತಿದ್ದಾರೆ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇದು ಯುದ್ಧದ ಸಮಯ ಅಲ್ಲ: ರಷ್ಯಾ ಭೇಟಿ ವೇಳೆ ಪುನರುಚ್ಚರಿಸಿದ ಜೈಶಂಕರ್

    ಇದು ಯುದ್ಧದ ಸಮಯ ಅಲ್ಲ: ರಷ್ಯಾ ಭೇಟಿ ವೇಳೆ ಪುನರುಚ್ಚರಿಸಿದ ಜೈಶಂಕರ್

    ಮಾಸ್ಕೋ: ಭಾರತದ (India) ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ (S Jaishankar) ಅವರು ಇಂದು ರಷ್ಯಾಗೆ (Russia) ಭೇಟಿ ನೀಡಿದ್ದು, ಅಲ್ಲಿ ರಷ್ಯಾ ಉಕ್ರೇನ್ (Ukraine) ಮೇಲೆ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆ ಬಗ್ಗೆ ಮಾತನಾಡಿ, ಇದು ಯುದ್ಧದ (War) ಸಮಯವಲ್ಲ ಎಂದು ಪುನರುಚ್ಚರಿಸಿದ್ದಾರೆ.

    ರಷ್ಯಾದ ರಾಜಧಾನಿ ಮಾಸ್ಕೋಗೆ (Moscow) ತೆರಳಿದ ಜೈಶಂಕರ್ ಅವರು ಇಂದು ತಮ್ಮ ಸಹವರ್ತಿ ಸರ್ಗೆ ಲಾವ್ರೋ (Sergey Lavrov) ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಮಾತನಾಡಿದ ಜೈಶಂಕರ್, ಅಂತಾರಾಷ್ಟ್ರೀಯ ಪರಿಸ್ಥಿತಿಗೆ ಸಂಬಂಧಿಸಿದಂತೆ, ಕಳೆದ ಕೆಲವು ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕ, ಹಣಕಾಸಿನ ಒತ್ತಡಗಳು ಮತ್ತು ವ್ಯಾಪಾರದ ತೊಂದರೆಗಳಿಂದ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಆದರೆ ಇದೀಗ ಮತ್ತೆ ಉಕ್ರೇನ್‌ನೊಂದಿಗಿನ ಸಂಘರ್ಷದ ಪರಿಣಾಮವನ್ನು ನೋಡುತ್ತಿದ್ದೇವೆ ಎಂದು ಹೇಳಿದರು.

    ಭಯೋತ್ಪಾದನೆ ಮತ್ತು ಹವಾಮಾನ ಬದಲಾವಣೆ ಹೆಚ್ಚು ದೀರ್ಘಕಾಲಿಕ ಸಮಸ್ಯೆಗಳು. ಇವೆರಡೂ ಪ್ರಗತಿ ಮತ್ತು ಸಮೃದ್ಧಿಯ ಮೇಲೆ ಭೀಕರ ಪರಿಣಾಮವನ್ನು ಬೀರುತ್ತವೆ. ನಮ್ಮ ಮಾತುಕತೆಗಳು ಒಟ್ಟಾರೆಯಾಗಿ ಜಾಗತಿಕ ಪರಿಸ್ಥಿತಿ ಮತ್ತು ನಿರ್ದಿಷ್ಟ ಪ್ರಾದೇಶಿಕ ಕಾಳಜಿಯನ್ನೇ ವಹಿಸುತ್ತದೆ ಎಂದು ವಿದೇಶಾಂಗ ಸಚಿವರು ಹೇಳಿದರು. ಇದನ್ನೂ ಓದಿ: ಅಕ್ರಮ ಆಸ್ತಿ ಮಾಡಿದ್ದಾರೆಂಬ ವೈರಲ್ ಸುದ್ದಿ ವಿರುದ್ಧ ಹೆಚ್.ಆರ್.ರಂಗನಾಥ್ ದೂರು

    ಭಾರತ ಮತ್ತು ರಷ್ಯಾ ವಿವಿಧ ಹಂತಗಳಲ್ಲಿ ಬಲವಾದ ಮತ್ತು ನಿರಂತರ ಸಂಪರ್ಕವನ್ನು ನಿರ್ವಹಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ಸಮರ್ಕಂಡ್‌ನಲ್ಲಿ ಭೇಟಿಯಾಗಿದ್ದಾರೆ. ಉಕ್ರೇನ್‌ನೊಂದಿಗಿನ ಯುದ್ಧದ ನಡುವೆಯೂ ಭಾರತ ರಷ್ಯಾದಿಂದ ತೈಲವನ್ನು ಖರೀದಿಸುತ್ತಿದೆ. ಆದರೆ ಇದು ಪಾಶ್ಚಿಮಾತ್ಯರ ಅಸಮಾಧಾನಕ್ಕೆ ಕಾರಣವಾಗಿದ್ದು, ರಷ್ಯಾದೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವಂತೆ ಒತ್ತಡವನ್ನೂ ಹಾಕಿದೆ ಎಂದರು.

    ರಷ್ಯಾದ ತೈಲ ಖರೀದಿಯನ್ನು ಮಿತಿಗೊಳಿಸುವಂತೆ ಪಶ್ಚಿಮದ ಕರೆಗಳ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್, ನಮಗೆ ಇಂಧನ ಮಾರುಕಟ್ಟೆಯ ಮೇಲೆ ನಿಜವಾಗಿಯೂ ಒತ್ತಡವಿದೆ. ತೈಲ ಮತ್ತು ಅನಿಲದ ಮೂರನೇ ಅತಿದೊಡ್ಡ ಗ್ರಾಹಕವಾಗಿರುವ ಭಾರತದಲ್ಲಿ ಆದಾಯ ಕಡಿಮೆಯಿರುವುದರಿಂದ ನಾವು ಕೈಗೆಟಕುವ ಮೂಲಗಳನ್ನು ಹುಡುಕಬೇಕಾಗಿದೆ. ಆದ್ದರಿಂದ ಭಾರತ ಹಾಗೂ ರಷ್ಯಾದ ಸಂಬಂಧ ಅನುಕೂಲಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದೆ. ನಾವು ಅದನ್ನು ಹೀಗೆಯೇ ಮುಂದುವರಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಟ್ವಿಟ್ಟರ್‌ ಖಾತೆ ಬ್ಲಾಕ್‌ ಆದೇಶ ರದ್ದು – ಕೆಜಿಎಫ್‌ ಹಾಡು ಬಳಸಿದ್ದ ಕಾಂಗ್ರೆಸ್‌ಗೆ ಬಿಗ್‌ ರಿಲೀಫ್‌

    Live Tv
    [brid partner=56869869 player=32851 video=960834 autoplay=true]

  • ಹಿಂದಿಯನ್ನು ವಿಶ್ವಸಂಸ್ಥೆಯ ಅಧಿಕೃತ ಭಾಷೆಯನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ: ಎಸ್. ಜೈಶಂಕರ್

    ಹಿಂದಿಯನ್ನು ವಿಶ್ವಸಂಸ್ಥೆಯ ಅಧಿಕೃತ ಭಾಷೆಯನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ: ಎಸ್. ಜೈಶಂಕರ್

    ನವದೆಹಲಿ: ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಗುರುತಿಸಲು ವಿಶ್ವಸಂಸ್ಥೆಯಲ್ಲಿ (United Nations) ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಮತ್ತು ಈ ನಿಟ್ಟಿನಲ್ಲಿ ಪ್ರಗತಿ ಸಾಧಿಸಲಾಗುತ್ತಿದೆ. ಆದರೆ ಇದಕ್ಕಾಗಿ ಕೊಂಚ ಸಮಯ ಬೇಕಾಗುತ್ತದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ (S. Jaishankar) ಗುರುವಾರ ಹೇಳಿದ್ದಾರೆ.

    ದೆಹಲಿಯಲ್ಲಿ (Delhi) ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಎಸ್. ಜೈಶಂಕರ್ ಅವರು, ಮುಂದಿನ ವರ್ಷ ಫೆಬ್ರವರಿ 15-17 ರವರೆಗೆ ಫಿಜಿಯ ನಾಡಿನಲ್ಲಿ 12ನೇ ವಿಶ್ವ ಹಿಂದಿ ಸಮ್ಮೇಳನವನ್ನು (World Hindi Conference) ಆಯೋಜಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಭೀಕರ ರಸ್ತೆ ಅಪಘಾತ – ಮೂವರು ಭಾರತೀಯರು ಸೇರಿದಂತೆ 20 ಮಂದಿ ಸಾವು

    ಯುನೈಟೆಡ್ ನೆಷನ್‍ನ ಅಧಿಕೃತ ಭಾಷೆಗಳಲ್ಲಿ ಹಿಂದಿಯನ್ನು ಸೇರಿಸುವ ಪ್ರಯತ್ನಗಳು ನಡೆಯುತ್ತಿದೆ. ಹಿಂದಿಯನ್ನು ಯುನೆಸ್ಕೋದಲ್ಲಿ ಈಗಾಗಲೇ ಬಳಸಲಾಗುತ್ತಿದೆ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಯುನೆಸ್ಕೋ ಪ್ರಧಾನ ಕಛೇರಿಯಲ್ಲಿ ಹಿಂದಿ ಭಾಷೆ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ (ಎಂಒಯು) ಒಪ್ಪಂದ ಮಾಡಿಕೊಂಡಿದ್ದೇವೆ. ಸೋಶಿಯಲ್ ಮೀಡಿಯಾದ ಮತ್ತು ಸುದ್ದಿಪತ್ರಗಳಲ್ಲಿ ಹಿಂದಿಯನ್ನು ಈಗಾಗಲೇ ಬಳಸಲಾಗುತ್ತಿದೆ. ಇದನ್ನು ವಿಸ್ತರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಯುನೈಟೆಡ್ ನೆಷನ್‍ನ ಪ್ರಕ್ರಿಯೆಯಲ್ಲಿ ಭಾಷೆಯನ್ನು ಪರಿಚಯಿಸುವುದು ಅಷ್ಟು ಸುಲಭವಲ್ಲ ಎಂದಿದ್ದಾರೆ.

    ಇಂಗ್ಲಿಷ್, ರಷ್ಯನ್, ಸ್ಪ್ಯಾನಿಷ್, ಚೈನೀಸ್, ಅರೇಬಿಕ್ ಮತ್ತು ಫ್ರೆಂಚ್ ಎಂಬ ಆರು ಅಧಿಕೃತ ಭಾಷೆಗಳನ್ನು ಯುಎನ್ ಹೊಂದಿದೆ. ಇದನ್ನೂ ಓದಿ: ‘ಹೆಂಡ್ತಿ ಮಕ್ಳನ್ನು ಬಿಟ್ ಬಂದಿದ್ದೀನಿ, ಸೇಫ್ ಆಗಿ ಮನೆಗೆ ಹೋಗ್ತೀನಾ?’: ಗಂಧದ ಗುಡಿಯಲ್ಲಿ ಕಣ್ಣೀರು ತರಿಸುತ್ತೆ ಅಪ್ಪು ಡೈಲಾಗ್

    Live Tv
    [brid partner=56869869 player=32851 video=960834 autoplay=true]