Tag: S

  • ಹುಬ್ಬಳ್ಳಿ ನೇಹಾ ಹತ್ಯೆ ಕೇಸ್ ಸಿಐಡಿ ತನಿಖೆಗೆ ವಹಿಸುತ್ತೇವೆ – ಸಿಎಂ

    ಹುಬ್ಬಳ್ಳಿ ನೇಹಾ ಹತ್ಯೆ ಕೇಸ್ ಸಿಐಡಿ ತನಿಖೆಗೆ ವಹಿಸುತ್ತೇವೆ – ಸಿಎಂ

    ಶಿವಮೊಗ್ಗ: ಹುಬ್ಬಳ್ಳಿಯ ನೇಹಾ ಹಿರೇಮಠ (Neha Hiremath) ಅವರ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವುದಾಗಿ ಸಿಎಂ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ.

    ಶಿವಮೊಗ್ಗದ ತರೀಕೆರೆಗೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು ತೆರಳಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ನೇಹಾ ಹತ್ಯೆ ಪ್ರಕರಣವನ್ನ ಸಿಐಡಿ ತನಿಖೆಗೆ (CID Investigation) ವಹಿಸುತ್ತೇವೆ. ಇದಕ್ಕಾಗಿ ವಿಶೇಷ ಕೋರ್ಟ್ (Speical Court) ಅನ್ನು ರಚಿಸುತ್ತೇವೆ ಎಂದು ಹೇಳಿದ್ದಾರೆ.

    ನಾನು ನೇಹಾ ಅವರ ಮನೆಗೆ ಹೋಗಲು ಆಗಿಲ್ಲ. ನಮ್ಮ ಸಚಿವರು, ಕಾರ್ಯಕರ್ತರು ಅವರ ಮನೆಗೆ ಹೋಗಿದ್ದಾರೆ. ಇದನ್ನೂ ಓದಿ: ಮಿಷನ್‌-100 ಟಾರ್ಗೆಟ್‌; 98ರಲ್ಲಿ ಸೋಲು, 99ನೇ ಚುನಾವಣೆಯಲ್ಲಿ ಮತ್ತೆ ಕಣಕ್ಕೆ – ಈ ಅಭ್ಯರ್ಥಿ ಯಾರು ಗೊತ್ತೆ?

    ಇದೇ ವೇಳೆ ಚುನಾವಣಾ ಪ್ರಚಾರದ ಕುರಿತು ಮಾತನಾಡಿದ ಅವರು, ದಿಂಗಾಲೇಶ್ವರ ಸ್ವಾಮೀಜಿಗಳು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರೆ. ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಕೊಡುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 14 ವರ್ಷದ ಅಪ್ರಾಪ್ತೆಯ ಗರ್ಭಪಾತಕ್ಕೆ ಸುಪ್ರೀಂಕೋರ್ಟ್ ಅನುಮತಿ

  • ಪದೇ ಪದೇ ಮುಂಬೈಗೆ ಬಂದು ಶಾಂತಿ ಕೆಡಿಸ್ತಿದ್ದಾರೆ- ರೆಬೆಲ್ಸ್ ಕಿಡಿ

    ಪದೇ ಪದೇ ಮುಂಬೈಗೆ ಬಂದು ಶಾಂತಿ ಕೆಡಿಸ್ತಿದ್ದಾರೆ- ರೆಬೆಲ್ಸ್ ಕಿಡಿ

    ಮುಂಬೈ: ಪದೇ ಪದೇ ನಮ್ಮನ್ನು ಭೇಟಿ ಮಾಡಲು ಮುಂಬೈಗೆ ಬಂದು ನಮ್ಮ ಶಾಂತಿಯನ್ನು ಕೆಡಿಸುತ್ತಿದ್ದಾರೆ ಎಂದು ಮನವೊಲಿಕೆಗೆ ಬರುತ್ತಿರುವ ಹಿರಿಯ ನಾಯಕರ ವಿರುದ್ಧ ರೆಬೆಲ್ ಶಾಸಕರು ಕಿಡಿಕಾರಿದ್ದಾರೆ.

    ಮೈತ್ರಿ ಪಕ್ಷದ ಹಿರಿಯ ನಾಯಕರು ಇಂದು ಮುಂಬೈ ತೆರಳಿ ಅತೃಪ್ತರ ಮನ ಓಲೈಸುವ ಕಾರ್ಯ ಮಾಡುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮುಂಬೈ ನಗರಿ ಮತ್ತೊಂದು ಹೈಡ್ರಾಮಾಕ್ಕೆ ವೇದಿಕೆ ಅಗುತ್ತಾ ಎಂಬ ಪ್ರಶ್ನೆ ಹುಟ್ಟುಕೊಂಡಿದೆ.

    ಯಾಕೆಂದರೆ ಪದೇ ಪದೇ ನಮ್ಮನ್ನು ಭೇಟಿ ಮಾಡಲು ಮುಂಬೈಗೆ ಬಂದು ನಮ್ಮ ಶಾಂತಿ ಕದಡುತ್ತಿದ್ದಾರೆಂದು ಅತೃಪ್ತರು ದೂರಿದ್ದು, ಅವರಿಂದ ನಮಗೆ ಜೀವಬೆದರಿಕೆಯಿದೆ ಹೀಗಾಗಿ ರಕ್ಷಣೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ ಎನ್ನಲಾಗಿದೆ.

    ಅದರಲ್ಲೂ ಕಾಂಗ್ರೆಸ್ ಪಕ್ಷದ 10 ಶಾಸಕರು ತಮ್ಮ ಪಕ್ಷದ ಹಿರಿಯ ನಾಯಕರ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಗುಲಾಂನಬಿ ಆಜಾದ್ ನಮ್ಮನ್ನು ಭೇಟಿ ಮಾಡಲು ಬರಲಿದ್ದಾರೆ. ನಮಗೆ ಯಾರನ್ನೂ ಭೇಟಿ ಮಾಡುವುದು ಇಷ್ಟವಿಲ್ಲವೆಂದು ಅತೃಪ್ತ ಶಾಸಕರು ಸ್ಥಳೀಯ ಠಾಣೆ ಮೂಲಕ ಮುಂಬೈ ಪೊಲೀಸ್ ಕಮೀಷನರ್ ಗೆ ಪತ್ರ ಬರೆದಿದ್ದಾರೆ.

    ಸೂಕ್ತ ಭದ್ರತೆ ನೀಡುವಂತೆ ಅತೃಪ್ತರು ಮಹಾರಾಷ್ಟ್ರ ಪೊಲೀಸರಿಗೆ ಮನವಿ ಮಾಡಿದ್ದು, ಸುಪ್ರೀಂಕೋರ್ಟ್ ಗೂ ಸಹ ಇಂದು ಮನವಿ ಸಲ್ಲಿಸಲು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  • ಅಂದು ತನಗೆ ದಾರಿ ತೋರಿಸಿದ ನಿರ್ದೇಶಕರ ಪುತ್ರನಿಗೆ ದಚ್ಚು ಸಾಥ್!

    ಅಂದು ತನಗೆ ದಾರಿ ತೋರಿಸಿದ ನಿರ್ದೇಶಕರ ಪುತ್ರನಿಗೆ ದಚ್ಚು ಸಾಥ್!

    ಬೆಂಗಳೂರು: ಬೆಳೆಯೋವರೆಗೂ ಅಷ್ಟೇ, ಬೆಳೆದು ನಿಂತ್ಮೇಲೆ ನೀನ್ ಯಾರೋ ನನಗೆ ಗೊತ್ತಿಲ್ಲ ಅನ್ನೋರೆ ಹೆಚ್ಚು. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮಗೆ ಸಹಾಯ ಮಾಡಿದ ವ್ಯಕ್ತಿಯನ್ನು ಮರೆಯದೆ ಇಂದಿಗೂ ಅವರ ಸಹಾಯವನ್ನು ಸ್ಮರಿಸುತ್ತಾರೆ.

    20 ವರ್ಷಗಳ ಹಿಂದೆ ದರ್ಶನ್ ಗೆ ನಿರ್ದೇಶಕರೊಬ್ಬರು ಸಹಾಯ ಮಾಡಿದ್ದರು. ಆ ಸಹಾಯವನ್ನು ದರ್ಶನ್ ಇದೂವರೆಗೂ ಮರೆತಿಲ್ಲ. ಸಿನಿಮಾರಂಗಕ್ಕೆ ಬರುವ ಮೊದಲು ತೂಗುದೀಪ್ ಶ್ರೀನಿವಾಸ್ ಕನ್ನಡದ ಖ್ಯಾತ ಖಳನಟನ ಪುತ್ರ ಎನ್ನುವ ಕ್ರೆಡಿಟ್ ಇತ್ತು. ಆದರೆ ಅದನ್ನು ನೋಡಿ ಯಾರೊಬ್ಬರು ಅವರಿಗೆ ಅವಕಾಶ ಕೊಟ್ಟಿಲ್ಲ. ನಟನ ಮಗನಾಗಿದ್ದರೂ ಲೈಟ್ ಮ್ಯಾನ್, ಕ್ಯಾಮೆರಾ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರು.

    ಈ ವೇಳೆ ನಿರ್ದೇಶಕ ಎಸ್. ನಾರಾಯಣ್ ತಮ್ಮ ಅಂಬಿಕಾ ಸೀರಿಯಲ್ ಮೂಲಕ ದರ್ಶನ್ ಅವರನ್ನ ಕಿರುತೆರೆಗೆ ಪರಿಚಯಿಸಿದ್ದರು. ಅಂಬಿಕಾ ಆದಮೇಲೆ ಶ್ರೀಮತಿ, ವೈಷ್ಣವಿ ಸೀರಿಯಲ್ ಗಳಲ್ಲಿಯೂ ದರ್ಶನ್ ಮಿಂಚಿದ್ದಾರೆ. ಸೀರಿಯಲ್‍ ನಲ್ಲಿ ದರ್ಶನ್ ಅಭಿನಯಕ್ಕೆ ಜನರಿಂದ ಪ್ರಶಂಸೆ ಸಿಗುತ್ತದೆ. ಇದನ್ನ ನೋಡಿದ ಎಸ್.ನಾರಾಯಣ್ ಅವರು `ಮಹಾಭಾರತ’ ಸಿನಿಮಾದಲ್ಲಿ ದರ್ಶನ್ ಗೆ ಖಳನಾಯಕನ ಪಾತ್ರವನ್ನ ಕೊಡುತ್ತಾರೆ. ನಂತರ ದೇವರ ಮಗ, ಭೂತಯ್ಯನ ಮಕ್ಕಳು ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಪೋರ್ಟಿಂಗ್ ಕ್ಯಾರೆಕ್ಟರ್ ಮಾಡುತ್ತಾರೆ. ಬಳಿಕ ಸಿನಿಮಾರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ.

    ಅಂಬಿಕಾ ಹಾಗೂ ಮಹಾಭಾರತ ದರ್ಶನ್ ಲೈಫ್ ನಲ್ಲಿ ಮೊದಲ ಹೆಜ್ಜೆ. ಅಂದು ಎಸ್. ನಾರಾಯಣ್ ಮಾಡಿದ್ದ ಸಹಾಯಕ್ಕೆ ಬೇರೊಂದು ರೂಪದಲ್ಲಿ ಸಹಾಯ ಮಾಡಿದ್ದಾರೆ. ಹೊಸಬರ ಹೊಸಪ್ರಯತ್ನಕ್ಕೆ ಸದಾ ಕೈಜೋಡಿಸುವ ದರ್ಶನ್, ಎಸ್.ನಾರಾಯಣ್ ಪುತ್ರ ಪಂಕಜ್ ರ ಹೊಸ ಪ್ರಯತ್ನಕ್ಕೆ ಸಾಥ್ ನೀಡಿದ್ದಾರೆ. ಪಂಕಜ್ ಒಡೆತನದ ಬ್ಯೂಟಿ ಸೆಲೂನ್ ಉದ್ಘಾಟನೆಗೆ ಅತಿಥಿಯಾಗಿ ಆಗಮಿಸಿ ಪಂಕಜ್ ಬೆನ್ನುತಟ್ಟಿದ್ದಾರೆ. ಬಿಡುವಿಲ್ಲದ ಚಿತ್ರೀಕರಣದ ನಡುವೆಯೂ ಫ್ರೀ ಮಾಡ್ಕೊಂಡು ಸಲೂನ್ ಉದ್ಘಾಟನೆ ಮಾಡಿದ್ದಾರೆ.

    ಅಂಬಿಕಾ ಸೀರಿಯಲ್ ಟೈಮ್‍ನಲ್ಲಿದ್ದ ದರ್ಶನ್ ಗೂ ಇವತ್ತಿನ ದರ್ಶನ್‍ಗೂ ಯಾವುದೇ ವ್ಯತ್ಯಾಸವಿಲ್ಲ. ಸ್ಟಾರ್ ನಟನಾಗಿ ಬೆಳೆದರೂ ಕಿಂಚಿತ್ತೂ ಅಹಂ ಇಲ್ಲ. ಸಾಧನೆಯ ಕಡೆ ಸಾಗ್ತಿರುವ ದರ್ಶನ್ ರನ್ನ ನೋಡಿ ತುಂಬಾ ಖುಷಿಯಾಗುತ್ತೆ. ಈ ಸರಳತೆ, ಕೆಲಸದ ಮೇಲಿರುವ ಭಕ್ತಿ ಅವರನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲಿ. ದೇಶ ತಿರುಗಿ ನೋಡುವಂತಹ ಎತ್ತರದ ಸ್ಥಾನಕ್ಕೆ ಸಾರಥಿ ಏರಲಿ ಎಂದು ಎಸ್. ನಾರಾಯಣ್ ಹೇಳಿದ್ದಾರೆ.

  • ನಾನೇನು ತಪ್ಪು ಮಾಡಿಲ್ಲ ಅಂತ ಹೇಳಿ ಒಂದೇ ಸೀರೆಯಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ನೇಣಿಗೆ ಶರಣು!

    ನಾನೇನು ತಪ್ಪು ಮಾಡಿಲ್ಲ ಅಂತ ಹೇಳಿ ಒಂದೇ ಸೀರೆಯಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ನೇಣಿಗೆ ಶರಣು!

    ಮಂಡ್ಯ: ತನ್ನ ಇಬ್ಬರು ಮಕ್ಕಳೊಂದಿಗೆ ಹೆತ್ತ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಮಳವಳ್ಳಿಯಲ್ಲಿ ನಡೆದಿದೆ.

    ಮಳವಳ್ಳಿಯ ಗುಳಘಟ್ಟ ಗ್ರಾಮದ ಸುನೀತಾ(32) ಹಾಗೂ ಈಕೆಯ ಮಕ್ಕಳಾದ ಪ್ರಜ್ವಲ್(13) ಹಾಗೂ ಪ್ರಿಯಾಂಕ(15) ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುರುವಾರ ತಡರಾತ್ರಿ ಮನೆಯಲ್ಲಿ ಒಂದು ಸೀರೆಯನ್ನು ತೆಗೆದುಕೊಂಡು ಅದನ್ನು ತನ್ನ ಇಬ್ಬರು ಮಕ್ಕಳ ಕುತ್ತಿಗೆಗೆ ಬಿಗಿದು ನಂತರ ಅದೇ ಸೀರೆಯಲ್ಲಿ ತಾನು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಈ ಘಟನೆಗೆ ಕೌಟುಂಬಿಕ ಕಲಹ ಹಾಗೂ ಸಾಲಬಾಧೆ ಕಾರಣ ಇರಬಹುದೆಂದು ಹೇಳಲಾಗುತ್ತಿದೆ. ಆತ್ಮಹತ್ಯೆಯ ದೃಶ್ಯ ನೋಡಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮೊದಲು ಸುನೀತಾ ಡೆತ್‍ನೋಟ್ ಬರೆದಿದ್ದು, ಅದರಲ್ಲಿ ಇಬ್ಬರ ಹೆಸರನ್ನು ಉಲ್ಲೇಖಿಸಿದ್ದಾರೆ.

    ಈ ಘಟನೆ ಮಳವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.