ಶಾಸಕರಿಗೆ ಪ್ರತಿಜ್ಞಾವಿಧಿ ಬೋಧಿಸಲು ಹಂಗಾಮಿ ಸ್ಪೀಕರ್ ಆಗಿ ಸದನದಲ್ಲಿ ಅತ್ಯಂತ ಹಿರಿಯ ಶಾಸಕರಾದ ಆರ್.ವಿ.ದೇಶಪಾಂಡೆ (RV Deshpande) ಅವರನ್ನು ನೇಮಿಸಲು ನಿರ್ಧರಿಸಲಾಗಿದೆ. ಇದೇ ಅಧಿವೇಶನದಲ್ಲಿ ಸದನದ ನೂತನ ಸಭಾಧ್ಯಕ್ಷರ ಆಯ್ಕೆಯಾಗುವವರೆಗೆ ವಿಧಾನ ಸಭಾಧ್ಯಕ್ಷರ ಕರ್ತವ್ಯವನ್ನು ಆರ್.ವಿ ದೇಶಪಾಂಡೆ ನಿರ್ವಹಿಸಲಿದ್ದಾರೆ.
ಹಂಗಾಮಿ ಸಭಾಧ್ಯಕ್ಷರು ಚುನಾವಣೆಯಲ್ಲಿ ನೂತನ ಶಾಸಕರಾಗಿ ಆಯ್ಕೆಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲ 224 ಮಂದಿ ಶಾಸಕರು ಅಧಿಕಾರ ಪದ ಮತ್ತು ಗೌಪ್ಯತಾ ಪ್ರಮಾಣ ವಚನ ಬೋಧಿಸಲಿದ್ದಾರೆ. 15ನೇ ವಿಧಾನಸಭೆ ಅವಧಿ ಮೇ 23ಕ್ಕೆ ಅಂತ್ಯಗೊಳ್ಳಲ್ಲಿದ್ದು, ಅಷ್ಟರೊಳಗೆ ನೂತನ ಶಾಸಕರು ಪ್ರಮಾಣ ವಚನ ಸ್ವೀಕಾರ ಪೂರ್ಣಗೊಳ್ಳಬೇಕಿದೆ.
ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಅಂತ ಮತ್ತೊಮ್ಮೆ ಸಾಬೀತಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟಿಕೆಟ್ ಹೇಳಿಕೆಗೆ ಪಕ್ಷದಲ್ಲೆ ಅಪಸ್ವರ ಕೇಳಿ ಬಂದಿದೆ. ಶಾಸಕ ದಿನೇಶ್ ಗುಂಡೂರಾವ್ ಬಳಿಕ ಹಿರಿಯ ನಾಯಕ ಆರ್. ದೇಶಪಾಂಡೆ ಕೂಡಾ ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನು ಎಲ್ಲರಿಗೂ ಅಡ್ಜೆಸ್ಟ್ ಆಗುತ್ತೇನೆ. ಎಲ್ಲದ್ದಕ್ಕಿಂತ ಪಕ್ಷ ನನಗೆ ದೊಡ್ಡದು.ಪಕ್ಷ ನನಗೆ ಮುಖ್ಯ. ಪಕ್ಷ ನನ್ನನ್ನು ಮಂತ್ರಿ ಮಾಡಿದೆ. ಅಧ್ಯಕ್ಷ ಸ್ಥಾನ ಕೊಟ್ಟಿದೆ. ಹೀಗಾಗಿ ಗೊಂದಲಗಳಿಗಿಂತ ನನಗೆ ಪಕ್ಷ ಬೆಳೆವಣಿಗೆ ಆಗಬೇಕು ಅಷ್ಟೆ. ಸಣ್ಣ ಸಣ್ಣ ವಿಚಾರವನ್ನು ದೊಡ್ಡದು ಮಾಡುವುದು ಸರಿಯಲ್ಲ ಎಂದು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಯಾರೇ ಆಗ್ಲಿ.. ನನ್ನಿಂದ ಟಿಕೆಟ್ ಘೋಷಣೆ ಅಂತ ಹೇಳಿದ್ರೆ, ಅದು ಕಾಂಗ್ರೆಸ್‍ನಲ್ಲಿ ಸಾಧ್ಯವಿಲ್ಲ: ಡಿಕೆಶಿ ವಿರುದ್ಧ ಗುಂಡೂರಾವ್ ಕಿಡಿ
ಡಿ.ಕೆ. ಶಿವಕುಮಾರ್ ಅವರು ವೇಗವಾಗಿ ಹೋಗುತ್ತಿದ್ದಾರೆ. ಅದು ಸರಿಯೇ. ಚುನಾವಣೆಗೆ ಸಮಯ ಕಡಿಮೆ ಇದೆ. ಹೀಗಾಗಿ ವೇಗವಾಗಿ ಹೋಗುತ್ತಿದ್ದಾರೆ. ಒಂದು ಮನೆಯಲ್ಲಿ 4 ಜನ ಮಕ್ಕಳು ಇರುತ್ತಾರೆ. ಒಬ್ಬೊಬ್ಬರು ಒಂದೊಂದು ರೀತಿ ಇರುತ್ತಾರೆ. ಎಲ್ಲರ ಅಭಿಪ್ರಾಯ ಒಂದೇ ಇರುವುದಿಲ್ಲ ಅಂತ ತಮ್ಮ ಮೇಲೆ ಡಿ.ಕೆ.ಶಿವಕುಮಾರ್ ಮಾಡಿದ ಆರೋಪಕ್ಕೂ ಟಾಂಗ್ ನೀಡಿದರು. ಇದನ್ನೂ ಓದಿ: ಹೈದರಾಬಾದ್ ಕರ್ನಾಟಕಕ್ಕೆ ಹಣ ಇಟ್ಟಿರುವುದು ಅವರಿಗೆ ಇಷ್ಟವಿಲ್ಲವೇನೋ: ಖರ್ಗೆಗೆ ಸಿಎಂ ತಿರುಗೇಟು
ಕೆಲಸ ಮಾಡದ ಶಾಸಕರಿಗೆ ಟಿಕೆಟ್ ಕೊಡುವುದಿಲ್ಲ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಉತ್ತರಿಸಿದ ದೇಶಪಾಂಡೆ, ಕಾಂಗ್ರೆಸ್ ದೊಡ್ಡ ಪಕ್ಷ. ಕೆಲಸ ಮಾಡದೇ ಹೋದರೆ ಟಿಕೆಟ್ ಕೊಡುವುದಿಲ್ಲ ಎನ್ನುವುದು ಅವರ ಅಭಿಪ್ರಾಯ. ಟಿಕೆಟ್ ಬಗ್ಗೆ ನಾನು ಹೆಚ್ಚಾಗಿ ಮಾತಾಡುವುದಿಲ್ಲ. ಆದರೆ ಅಂತಿಮವಾಗಿ ಟಿಕೆಟ್ ತೀರ್ಮಾನ ಮಾಡುವುದು ಹೈಕಮಾಂಡ್. ಅಭಿಪ್ರಾಯ ಕೊಡುವುದು ಅಷ್ಟೆ ನಮ್ಮ ಕೆಲಸ. ಅಂತಿಮವಾಗಿ ತೀರ್ಮಾನ ಮಾಡುವುದು ಹೈಕಮಾಂಡ್ ಎನ್ನುವ ಮೂಲಕ ಡಿ.ಕೆ. ಶಿವಕುಮಾರ್‌ಗೆ ತಿರುಗೇಟು ನೀಡಿದರು.
Live Tv
[brid partner=56869869 player=32851 video=960834 autoplay=true]
ಕಾರವಾರ: ಕಸ್ತೂರಿ ರಂಗನ್ ವರದಿ ಸ್ಥಳಕ್ಕೆ ಭೇಟಿ ನೀಡಿ ಮಾಡಿದ ವರದಿಯಲ್ಲ, ಬದಲಿಗೆ ಈ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ಮಾಜಿ ಸಚಿವ ಆರ್.ವಿ. ದೇಶಪಾಂಡೆ ಕಿಡಿಕಾರಿದರು.
ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನಕ್ಕೆ ತರಬಾರದೆಂದು ಆಗ್ರಹಿಸಿದ ಪ್ರತಿಭಟನಾಗಾರರು ಜೊಯಿಡಾ ನಗರದ ವೃತ್ತದಿಂದ ತಹಶೀಲ್ದಾರ್ ಕಚೇರಿಯವರೆಗೆ ಕಾಲ್ನಡಿಗೆಯಲ್ಲಿ ಸಾಗಿ ಜೋಯಿಡಾ ತಹಶೀಲ್ದಾರ್‌ಗೆ ವರದಿ ವಿರೋಧಿಸಿ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ದೇಶಪಾಂಡೆ ಅವರು, ಕಸ್ತೂರಿ ರಂಗನ್ ವರದಿ ಸ್ಥಳಕ್ಕೆ ಭೇಟಿ ನೀಡಿ ಮಾಡಿದ ವರದಿಯಲ್ಲ. ಸಂಪೂರ್ಣ ಅವೈಜ್ಞಾನಿಕವಾಗಿದೆ. ನಮ್ಮ ರಾಜ್ಯವೂ ಸೇರಿದಂತೆ ದೇಶದ 6 ರಾಜ್ಯಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟದ 56,825 ಚದರ ಕಿ.ಮೀ ವಿಸ್ತೀರ್ಣದ ಪ್ರದೇಶವನ್ನು ಸುಪ್ರೀಂ ಕೋರ್ಟ್‍ನ ಆದೇಶದನ್ವಯ ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿ ಕೇಂದ್ರ ಸರ್ಕಾರ ಜುಲೈ 1 ರಂದು ಕರಡು ಅಧಿಸೂಚನೆ ಹೊರಡಿಸಿದೆ.
ಈ ಹಿಂದೆ 3 ಬಾರಿ ಅಧಿಸೂಚನೆಯನ್ನು ಹೊರಡಿಸಿದ್ದ ಕೇಂದ್ರದ ಈ ಪ್ರಯತ್ನಕ್ಕೆ ರಾಜ್ಯ ಸರ್ಕಾರವು ವಿರೋಧವನ್ನು ವ್ಯಕ್ತಪಡಿಸುತ್ತಲೇ ಇದೆ. ಈಗ ಇನ್ನೊಮ್ಮೆ ಅಧಿಸೂಚನೆ ಹೊರಡಿಸಿರುವುದು ರಾಜ್ಯದ ಜನತೆಗೆ ಆತಂಕವನ್ನು ತಂದೊಡ್ಡಿದೆ ಎಂದರು.
ಇನ್ನೂ ಪಶ್ಚಿಮ ಘಟ್ಟದ ಜೀವ ವೈವಿಧ್ಯ ರಕ್ಷಣೆ ಮತ್ತು ಸಂರಕ್ಷಣೆ ಉದ್ದೇಶದಿಂದ ಕೇಂದ್ರ ಪರಿಸರ, ಅರಣ್ಯ ಸಚಿವಾಲಯವು ಕಸ್ತೂರಿ ರಂಗನ್ ವರದಿಯಂತೆ ಪರಿಸರ ಸೂಕ್ಷ್ಮ ವಲಯವೆಂದು ಗುರುತಿಸಲಾದ ಪ್ರದೇಶದಲ್ಲಿ ನಮ್ಮ ರಾಜ್ಯದ 10ಜಿಲ್ಲೆಗಳ 1,572 ಗ್ರಾಮಗಳನ್ನು ಮತ್ತು ಉತ್ತರ ಕನ್ನಡ ಜಿಲ್ಲೆಯ 9 ತಾಲೂಕುಗಳಿಂದ 704 ಗ್ರಾಮಗಳು ಸೇರ್ಪಡೆಗೊಂಡಿದೆ.
ಪಶ್ಚಿಮ ಘಟ್ಟಗಳಿಂದಲೇ ಆವರಿಸಿರುವ ನಮ್ಮ ಉತ್ತರ ಕನ್ನಡ ಜಿಲ್ಲೆಯ ಹಲವು ತಾಲೂಕುಗಳಲ್ಲಿ, ವಿಶೇಷವಾಗಿ ಜೋಯಿಡಾ ತಾಲೂಕಿನಲ್ಲಿ ಈಗಾಗಲೇ ಹಲವಾರು ಬೃಹತ್ ಯೋಜನೆಗಳು, ಅಭಯಾರಣ್ಯಗಳು ಇದ್ದು, ಈ ಯೋಜನೆಗಳಿಂದ ಇಲ್ಲಿಯೇ ಬದುಕನ್ನು ಕಟ್ಟಿಕೊಂಡ ಜನಸಾಮಾನ್ಯರು, ನಿರಾಶ್ರಿತರಾಗಿ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ಪಶ್ಚಿಮ ಘಟ್ಟಗಳ ಪ್ರದೇಶದ ಆರಣ್ಯಜೀವಸಂಕುಲಗಳ ಸಂರಕ್ಷಣೆ ಮತ್ತು ಪರಿಸರದ ಸಮತೋಲನದ ಜೊತೆಗೆ ಅಭಿವೃದ್ಧಿಯೂ ಆಗಬೇಕು ಎಂಬುದು ನನ್ನ ನಿಲುವು. ಆದರೆ, ಹಲವಾರು ವರ್ಷಗಳಿಂದ ಅರಣ್ಯ ಪ್ರದೇಶದಲ್ಲಿರುವ ವಾಸಿಸುತ್ತಿರುವ ಜನರು ಬೃಹತ ಯೋಜನೆಗಳಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದು, ಅವರ ಹಿತವನ್ನು ಕಾಪಾಡುವುದು ನಮ್ಮ ಆದ್ಯತೆಯಾಗಬೇಕಾಗಿದೆ. ರಾಜ್ಯ ಸರ್ಕಾರ ಈ ಯೋಜನೆ ಜಾರಿಯನ್ನು ವಿರೋಧಿಸಿ ಶೀಘ್ರವಾಗಿ ಆಕ್ಷೇಪಣಾ ಅರ್ಜಿಯನ್ನು ಸಲ್ಲಿಸಿ ಪಶ್ಚಿಮ ಘಟ್ಟದಲ್ಲಿ ವಾಸಿಸುವ ಜನರ ಹಿತಕಾಪಾಡಬೇಕಿದೆ ಎಂದರು.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಐಟಿ ಕಾರಿಡಾರ್ ಡಿ ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಹೈಕೋರ್ಟ್ ಆದೇಶಕ್ಕೆ ತಡೆ ನೀಡಿರುವ ಸುಪ್ರೀಂ ಕೋರ್ಟ್ ಸದ್ಯಕ್ಕೆ ಬಿ.ಎಸ್ ಯಡಿಯೂರಪ್ಪ ವಿರುದ್ಧ ತನಿಖೆ ಮಾಡದಂತೆ ಸೂಚಿಸಿದೆ.
ತಮ್ಮ ವಿರುದ್ಧ ಲೋಕಾಯುಕ್ತ ತನಿಖೆಗೆ ಹೈಕೋರ್ಟ್ ಸೂಚಿಸಿದ ಹಿನ್ನೆಲೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಬಿ.ಎಸ್ ಯಡಿಯೂರಪ್ಪ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಎನ್.ವಿ ರಮಣ ನೇತೃತ್ವದ ತ್ರಿ ಸದಸ್ಯ ಪೀಠ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿತು.
ಈ ಪ್ರಕರಣವನ್ನು ವಜಾ ಮಾಡುವಂತೆ ಬಿ.ಎಸ್ ಯಡಿಯೂರಪ್ಪ ಹಾಗೂ ಮತ್ತೋರ್ವ ಆರೋಪಿ ಆರ್.ವಿ ದೇಶಪಾಂಡೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಆರ್.ವಿ ದೇಶಪಾಂಡೆ ಅವರನ್ನು ಪ್ರಕರಣದಿಂದ ಕೈ ಬಿಟ್ಟು ಬಿಎಸ್‌ವೈ ವಿರುದ್ಧ ತನಿಖೆ ನಡೆಸಲು ಸೂಚನೆ ನೀಡಿತ್ತು. ಈ ಆದೇಶವನ್ನು ಪ್ರಶ್ನೆ ಮಾಡಿ ಬಿ.ಎಸ್ ಯಡಿಯೂರಪ್ಪ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಬಾಬ್ರಿ ಮಸೀದಿ ವಿವಾದ: ಅಡ್ವಾಣಿ ಸೇರಿ ಹಲವು ನಾಯಕರನ್ನು ಖುಲಾಸೆಗೊಳಿಸಿದ್ದ ಅರ್ಜಿ ಆ.1ಕ್ಕೆ ವಿಚಾರಣೆ
Live Tv
[brid partner=56869869 player=32851 video=960834 autoplay=true]
ಕಾರವಾರ: ಸರ್ಕಾರದಲ್ಲಿ ಹಣವಿಲ್ಲ ಎಂದು ಕಾರ್ಮಿಕ ಇಲಾಖೆ ನಿಧಿಯನ್ನು ದುರುಪಯೋಗಪಡಿಸಿಕೊಳ್ಳುವುದು ಸರಿಯಲ್ಲ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಮಿಕ ಇಲಾಖೆಯ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕಾರ್ಮಿಕ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಕಾರ್ಮಿಕ ಇಲಾಖೆಯಿಂದ ವಿವಿಧ ಫಲಾನುಭವಿಗಳಿಗೆ ಆರ್ಥಿಕ ಸಹಾಯಧನದ ಮಂಜುರಾತಿ ಪತ್ರ ವಿತರಿಸಿ ಅವರು ಮಾತನಾಡಿದರು. ಕಾರ್ಮಿಕರಿಂದ ಸಂಗ್ರಹಿಸಲ್ಪಟ್ಟ ನಿಧಿಯು ಕಾರ್ಮಿಕರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ವರ್ಧನೆಗೆ ಉಪಯೋಗವಾಗಬೇಕು ಎಂದರು. ಇದನ್ನೂ ಓದಿ: ಅಭಿಮನ್ಯು ಟೀಂಗೆ ಹೊಸ ಮೆಂಬರ್ ಎಂಟ್ರಿ- ಅಶ್ವತ್ಥಾಮ ಭವಿಷ್ಯದ ಕ್ಯಾಪ್ಟನ್!
ಸರ್ಕಾರದಲ್ಲಿ ಹಣವಿಲ್ಲವೆಂದು ಕಾರ್ಮಿಕ ಇಲಾಖೆಯ ನಿಧಿಯನ್ನು ದುರುಪಯೋಗಪಡಿಸಿಕೊಳ್ಳಬಾರದು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಬೇಕು ಎಂದು ಸಲಹೆ ನಿಡಿದರು.
– ವೇತನವಿಲ್ಲದೇ ದುಡಿಯುತ್ತಿರುವ ಗಾಂಧಿ ಮ್ಯೂಸಿಯಮ್ ಸಿಬ್ಬಂದಿ – ಹಾಳು ಕೊಂಪೆಯಾದ ಗಾಂಧಿ ಸ್ವಾತಂತ್ರ್ಯ ಸ್ಮಾರಕ ಭವನ
ಕಾರವಾರ: ಟಾಯ್ಲೆಟ್ ನಲ್ಲಿ ಬಿದ್ದ ಪುಸ್ತಕಗಳು, ಪಾಳು ಬಿದ್ದ ಗಾಂಧಿ ವಸ್ತುಸಂಗ್ರಹಾಲಯದ ಕಟ್ಟಡ, ಮೂಲೆ ಸೇರಿದ ಗಾಂಧಿ ಪ್ರತಿಮೆ. ಒಂದು ವರ್ಷದಿಂದ ಸಂಬಳ ಇಲ್ಲದೇ ದುಡಿಯುವ ಕೆಲಸಗಾರರು. ಇಂತದ್ದೊಂದು ಸ್ಥಿತಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಕ್ಷೇತ್ರದಲ್ಲಿದೆ. ಅಲ್ಲಿನ ಸ್ಥಿತಿ ನೋಡಿದರೆ ಎಂತವರೂ ತಲೆತಗ್ಗಿಸುವಂತಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲ ನಗರದ ಹೃದಯ ಭಾಗದಲ್ಲಿರುವ ಗಾಂಧಿ ಸ್ವತಂತ್ರ್ಯ ಸಂಗ್ರಾಮ ಸ್ಮಾರಕ ಭವನ ಹಾಗೂ ವಸ್ತು ಸಂಗ್ರಹಾಲಯ ಇದೀಗ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ ಹಾಳು ಕೊಂಪೆಯಾಗಿ ಮಾರ್ಪಟ್ಟಿದೆ.
ಹೀಗಿದೆ ಅಲ್ಲಿನ ಸ್ಥಿತಿ
ಎಲ್ಲಿ ನೋಡಿದರಲ್ಲಿ ಕಸದ ರಾಶಿ ,ಮುರಿದು ಬಿದ್ದ ಕಿಟಕಿ, ಮೂಲೆ ಸೇರಿದ ಗಾಂಧಿ ಪ್ರತಿಮೆ, ಟಾಯ್ಲೆಟ್ ನಲ್ಲಿ ಸಂಗ್ರಹಿಸಿಟ್ಟ ಪುಸ್ತಕ. ವಿದ್ಯುತ್ ಇಲ್ಲದ ಬಲ್ಪುಗಳು, ಮುರಿದ ಫ್ಯಾನ್ ಗಳು ಹೀಗೆ ಎದುರು ನೋಡುತ್ತಿದ್ದಂತೆ ಹಳೆಯ ಸಿನಿಮಾದಲ್ಲಿ ಬರುವ ಭೂತ ಬಂಗಲೆಯಂತೆ ಭಾಸವಾಗುತ್ತದೆ.
2017ರಲ್ಲಿ ಕೋಟಿ ಮೊತ್ತದ ಅನುದಾನದಲ್ಲಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ಅಂಕೋಲದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ನೆನಪಿಗಾಗಿ ಸ್ಮಾರಕ ಭವನ ಹಾಗೂ ಗಾಂಧಿಜೀ ವಸ್ತು ಸಂಗ್ರಾಲಯವನ್ನು ನಿರ್ಮಾಣ ಮಾಡಲಾಗಿತ್ತು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಜಿಲ್ಲೆಯಲ್ಲೇ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಸ್ಮಾರಕ ಭವನವನ್ನು ಲೋಕಾರ್ಪಣೆ ಮಾಡಿದ್ದರು.
ಇದನ್ನು ನೋಡಿಕೊಳ್ಳಲು ಕಂದಾಯ ಇಲಾಖೆಯಿಂದ ಇಬ್ಬರು ಹಾಗೂ ಪುರಸಭೆ ಯಿಂದ ಓರ್ವ ನೌಕರನನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಲಾಯಿತು. ಕಳೆದ ಒಂದು ವರ್ಷದ ವರೆಗೆ ಚೆನ್ನಾಗಿಯೇ ಇದ್ದ ಈ ಭವನ ಇದೀಗ ಜಿಲ್ಲಾಡಳಿತದ ದಿವ್ಯ ನಿರ್ಲಕ್ಷದಿಂದ ಹಾಳು ಕೊಂಪೆಯಾಗಿದೆ.
ವಸ್ತು ಸಂಹ್ರಹಾಲಯ ಹಾಗೂ ಗ್ರಂಥಾಲಯದಲ್ಲಿ ಇರುವ ವಸ್ತುಗಳನ್ನು ಇರಿಸಲು ವ್ಯವಸ್ತೆ ಇಲ್ಲದೇ ಬೇಕಾಬಿಟ್ಟಿ ಇಡಲಾಗಿದೆ. ಓದುಗರ ಕೈಯಲ್ಲಿ ಇರಬೇಕಾದ ಪುಸ್ತಕಗಳು ಟಾಯ್ಲೆಟ್ ಸೇರಿದೆ. ಇನ್ನು ವಿದ್ಯಾರ್ಥಿಗಳ ಅಧ್ಯಯನಕ್ಕೆ ನಿರ್ಮಿಸಿದ ಕಟ್ಟಡ ಹೊಸದಾಗಿದ್ದರೂ ಯಾರೂ ಒಳಗೆ ಹೋಗದಷ್ಟು ಕೆಟ್ಟದಾಗಿದ್ದು ವಿದ್ಯುತ್ ಸಂಪರ್ಕ ಸಹ ಕಡಿತವಾಗಿದ್ದು ಇಲಿ ಹೆಗ್ಗಣದ ಗೂಡಾಗಿದೆ. ಇದನ್ನೂ ಓದಿ: ಮೈಸೂರು ಕೇಸಲ್ಲಿ ಪೊಲೀಸರ ಪಾಲಿಗೆ ಬೆಳಕಾಗಿದ್ದೇ ಬಸ್ ಟಿಕೆಟ್ ಕೊಟ್ಟ ಸುಳಿವು, ಆ ಮೊಬೈಲ್ ನಂಬರ್!
ಇನ್ನು ಇಲ್ಲಿನ ಗುತ್ತಿಗೆ ಆಧಾರದಲ್ಲಿ ನಿಯೋಜನೆ ಗೊಂಡ ಲೈಬ್ರರಿಯನ್ ಗೆ ಐದು ಸಾವಿರ ಕನಿಷ್ಟ ಕೂಲಿ ಹಾಗೂ ಇಲ್ಲಿನ ಕೆಲಸಗಾರನಿಗೆ 2500 ರೂ.ಗಳ ಕನಿಷ್ಟ ವೇತನ ನಿಗದಿ ಮಾಡಿದ್ದು ಕಾರ್ಮಿಕ ನಿಯಮಗಳ ಪ್ರಕಾರ ಇವರಿಗೆ ಸಿಗಬೇಕಾದ ಯಾವ ಸೌಲಭ್ಯವೂ ಈವರೆಗೂ ದೊರೆತಿಲ್ಲ. ಕಳೆದ ಒಂದು ವರ್ಷದಿಂದ ಇಲ್ಲಿನ ಇಬ್ಬರು ನೌಕರರಿಗೆ ಸಂಬಳ ಸಹ ಸಿಗದೇ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಕಾಬೂಲ್ ವಿಮಾನ ನಿಲ್ದಾಣದ ಎಂಟ್ರಿ ಗೇಟ್ ಬಳಿ ಮತ್ತೆ ಫೈರಿಂಗ್
ಕೋಟಿಗಟ್ಟಲೇ ಗಾಂಧೀಜಿ ಹೆಸರಲ್ಲಿ ಸ್ವಾತಂತ್ರ್ಯ ಚಳುವಳಿಗಾರರ ನೆನಪಿಗೆ ನಿರ್ಮಿಸಿದ ಈ ಭವನ ಈಗ ಹಾಳು ಕೊಂಪೆಯಾಗಿದೆ. ಅಧ್ಯಯನಕ್ಕೆ ಬರುವ ವಿದ್ಯಾರ್ಥಿಗಳಿಗೆ ಯಾವ ಪುಸ್ತಕಗಳು ಸಿಗದಂತ ಸ್ಥಿತಿ ಇದೆ. ಪ್ರತಿ ದಿನ ಗ್ರಂಥಾಲಯಕ್ಕೆ ಬರುವವರಿಗೆ ಮೂಲ ಸೌಕರ್ಯ ಸಹ ಇಲ್ಲ. ಇದನ್ನೂ ಓದಿ: ಮೈಸೂರು ರೇಪ್ ಪ್ರಕರಣ ಬೆನ್ನತ್ತಿದ ಆ ಸೂಪರ್ ಕಾಪ್ಸ್ ಇವರೇ ನೋಡಿ!
ಇಲ್ಲಿನ ನೌಕರರು ಕೊರೊನಾ ಸಂದರ್ಭದಲ್ಲಿ ಸಹ ಕರ್ತವ್ಯ ನಿರ್ವಹಿಸಿದ್ದರೂ ಒಂದು ವರ್ಷದಿಂದ ಸಂಬಳ ಸಹ ನೀಡಿಲ್ಲ. ಇನ್ನು ಜನಪ್ರತಿನಿಧಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ಪುಸ್ತಕಗಳನ್ನು ಓದಲು ಬರುವ ಜನರು ಪುಸ್ತಕಗಳು ಸಿಗದೇ ಮರಳಿ ಹೋಗುವಂತಾಗಿದೆ. ಹೀಗಿರುವಾಗ ಅಧಿಕಾರಿಗಳು ಮಾತ್ರ ಎಲ್ಲಾ ಸರಿಮಾಡುತ್ತೇವೆ ಎನ್ನುವ ಭರವಸೆಗೆ ಸೀಮಿತವಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಕೊಂಚ ಇಳಿಕೆಯಾದ ಕೊರೊನಾ – ಇಂದು 1,229 ಹೊಸ ಪ್ರಕರಣ
ಉತ್ತರ ಕನ್ನಡ ಜಿಲ್ಲೆಯಲ್ಲೇ ಅಂಕೋಲ ತಾಲೂಕಿನಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಚಳುವಳಿ ತೀವ್ರಗೊಂಡಿತ್ತು. ಹಲವರು ಬ್ರಿಟೀಷರ ಚಡಿಏಟು ತಿಂದು ಪ್ರಾಣವನ್ನು ಕಳೆದುಕೊಂಡಿದ್ದರು. ಕರ ಅಸಹಕಾರ ಚಳುವಳಿಯಿಂದ ಹಿಡಿದು ಉಪ್ಪಿನ ಸತ್ಯಾಗ್ರಹದವರೆಗೂ ಇಲ್ಲಿನ ಜನರು ಗಾಂಧೀಜಿಯವರ ಆದರ್ಶದೊಂದಿಗೆ ಜೊತೆಯಾಗಿದ್ದರು. ಅವರ ಹೋರಾಟದ ಫಲ ಇಂದು ನಾವು ಅನುಭವಿಸುತಿದ್ದೇವೆ. ಇಂತವರಿಗೆ ಗೌರವ ಸಲ್ಲಿಸುವ ನೆಪದಲ್ಲಿ ಇದೀಗ ಗಾಂಧೀಜಿಯವರ ಹೆಸರಿನಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಡೆದುಕೊಳ್ಳುವ ರೀತಿ ಮಾತ್ರ ಎಂತವರಲ್ಲೂ ಹೇಸಿಗೆ ಹುಟ್ಟಿಸುತ್ತದೆ. ಇನ್ನಾದರೂ ಇಲ್ಲಿನ ವ್ಯವಸ್ಥೆಯನ್ನು ಸರಿಪಡಿಸಿ ಜನರಿಗೆ ಇದರ ಸೌಲಭ್ಯ ದೊರಕುವಂತಾಗಲಿ ಎಂಬುದೇ ನಮ್ಮ ಆಶಯವಾಗಿದೆ. ಇದನ್ನೂ ಓದಿ: ಸಚಿವೆಯಾದರೂ ಹೆಣ್ಣು ಹೆಣ್ಣೇ ಅಲ್ವಾ? ಅವರ ಮನೆಯಲ್ಲೇ ಹಾಗಾದ್ರೆ?: ಹೆಚ್.ಎಂ.ರೇವಣ್ಣ
– ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆನಂದಸಿಂಗ್ ಒಪ್ಪಿಕೊಂಡಂತಾಯ್ತು
ಧಾರವಾಡ: ಮಹಿಳೆಯರಿಗೆ ಗನ್ ಕೊಡಬೇಕು ಎನ್ನುವುದಾದರೆ ಗೃಹ ಇಲಾಖೆ ಕೆಲಸ ಮಾಡುತ್ತಿಲ್ಲ, ಪೊಲೀಸರು ವಿಫಲವಾಗಿದ್ದಾರೆ ಎಂದು ಮಾಜಿ ಸಚಿವ ಆರ್.ವಿ.ದೇಸಾಪಾಂಡೆ ಗುಡುಗಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಗನ್ ಕೊಡಬೇಕು ಎಂದು ಸಚಿವ ಆನಂದ ಸಿಂಗ್ ಹೇಳುವ ಮೂಲಕ ಬಿಜೆಪಿಯವರು ಗನ್ ಕೊಡಿ ಎಂದು ಹೊಸ ಸಂಸ್ಕೃತಿ ಆರಂಭ ಮಾಡಿದ್ದಾರೆ. ಅದರ ಪರಿಣಾಮ, ದುಷ್ಪರಿಣಾಮ ವಿಚಾರ ಮಾಡದೆ ಹೀಳಿಕೆ ನೀಡಬಾರದು. ಗನ್ ಕೊಡಬೇಕು ಎನ್ನುವದಾದರೆ ಗೃಹ ಇಲಾಖೆ ಕೆಲಸ ಮಾಡುತ್ತಿಲ್ಲ ಎಂದರ್ಥ, ಪೊಲೀಸರು ವಿಫಲವಾಗಿದ್ದಾರೆ ಎನ್ನುವುದನ್ನು ಆನಂದಸಿಂಗ್ ಒಪ್ಪಿಕೊಂಡಂತಾಯ್ತು ಎಂದು ಹೇಳಿದರು. ಇದನ್ನೂ ಓದಿ: ಅತ್ಯಾಚಾರ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರಿಗೆ ಬಹುಮಾನ ಘೋಷಿಸಿದ ಜಗ್ಗೇಶ್
ರಾಜ್ಯದಲ್ಲಿ ಸರ್ಕಾರ ಇದೆ ಎಂದು ಯಾರು ಹೇಳಿದ್ದು? ರಾಜ್ಯದಲ್ಲಿ ಸರ್ಕಾರ ಇಲ್ಲ ಎನ್ನುವುದು ಇಡೀ ಜಗತ್ತಿಗೆ ಗೊತ್ತಿದೆ. ಮಂತ್ರಿ ಮಂಡಲ ಇದ್ದರೆ ಮಾತ್ರ ಸರ್ಕಾರ ಅಲ್ಲ, ಜನರ ಪರ ಹಾಗೂ ಅಭಿವೃದ್ಧಿ ಪರವಾಗಿ, ಸಾಮಾಜಿಕ ನ್ಯಾಯಕ್ಕಾಗಿ ಸ್ಪಂದನೆ ಇರಬೇಕು. ಮೈಸೂರು ಘಟನೆ ನೋಡಿ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಆಗುತ್ತಿವೆ. ಯಾರೂ ಕೇಳುವವರು, ಮಾತಾನಾಡುವವರಿಲ್ಲ ಎಂದರು.
ಕಾರವಾರ: ಸಿದ್ದರಾಮಯ್ಯನವರು ಶಾಸಕಾಂಗ ಪಕ್ಷದ ನಾಯಕರಾಗಿಯೇ ಮುಂದುವರಿಯಲಿ, ಡಿಕೆ ಶಿವಕುಮಾರ್‌ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೇಳುವ ಹಕ್ಕಿದೆ ಎಂದು ಮಾಜಿ ಸಚಿವ ಹಳಿಯಾಳದ ಶಾಸಕ ಆರ್.ವಿ ದೇಶಪಾಂಡೆ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿದ್ದಾರೆ.
ಇಂದು ಸಿದ್ದಾಪುರದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವಧಿ ಮುಗಿದಿಲ್ಲ. ಮುಗಿದ ನಂತರ ಹೈಕಮಾಂಡ್ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ. ಹೈಕಮಾಂಡ್ ಎಲ್ಲರ ಅಭಿಪ್ರಾಯ ತೆಗೆದುಕೊಂಡಿದೆ. ನಾಲ್ಕು ದಿನದಲ್ಲಿ ಅಧ್ಯಕ್ಷ ಸ್ಥಾನದ ಕುರಿತು ಹೈಕಮಾಂಡ್ ಪ್ರಕಟಿಸುತ್ತದೆ. ನನಗೆ ಪಕ್ಷದ ಜವಾಬ್ದಾರಿ ತೆಗೆದುಕೊಳ್ಳುವ ಕುರಿತು ಹೈಕಮಾಂಡ್ ಕೇಳಿತ್ತು. ನಾನು ಸ್ಥಾನಕ್ಕೆ ಆಕಾಂಕ್ಷಿಯಲ್ಲ ಎಂದರು.
ರಾಜ್ಯ ಸರ್ಕಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರದ ಗೊಂದಲದಲ್ಲಿದೆ. ಸಂಪುಟ ವಿಸ್ತರಣೆ ಬಗ್ಗೆ ಗೊಂದಲವಿದೆ. ಹಣವೇ ಸರ್ಕಾರದಲ್ಲಿ ಇಲ್ಲದಿದ್ದಾಗ ಅಭಿವೃದ್ಧಿ ಪ್ರಶ್ನೆ ಎಲ್ಲಿಂದ ಬಂತು. ಅಭಿವೃದ್ಧಿ ಸ್ಥಗಿತವಾಗಿದೆ. ರಾಜ್ಯದಲ್ಲಿ ಯಾವ ರೀತಿ ಅಭಿವೃದ್ಧಿ ಆಗಬೇಕು ಅದು ಆಗುತ್ತಿಲ್ಲ. ರಾಜಕೀಯವಾಗಿ ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಸಿಗಬೇಕಾದ ಬೆಂಬಲ ಸಿಗುತ್ತಿಲ್ಲ ಎಂದು ಕೇದ ವ್ಯಕ್ತಪಡಿಸಿದರು.
ಬೆಳಗಾವಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಸರ್ಕಾರದ ಅಸ್ಥಿರತೆಗೆ ಕಾರಣವಾಗುತ್ತದೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅಭಿಪ್ರಾಯಪಟ್ಟಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಬಿಜೆಪಿಯ ಆಂತರಿಕ ವಿಚಾರಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರೀತಿಯ ಹೇಳಿಕೆಗಳು ಸರ್ಕಾರದಲ್ಲಿ ಅಸ್ಥಿರತೆ ಹುಟ್ಟುಹಾಕಬಹುದು ಎಂದು ದೇಶಪಾಂಡೆ ಅಭಿಪ್ರಾಯಪಟ್ಟಿದ್ದಾರೆ.
ಹಿಂದೆಂದೂ ಕಂಡು ಕೇಳರಿಯದ ಪ್ರವಾಹಕ್ಕೆ ರಾಜ್ಯದ ಜನತೆ, ರೈತರು ತತ್ತರಿಸಿ ಹೋಗಿದ್ದಾರೆ. ಇಂಥ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮೂರೇ ದಿನ ಅಧಿವೇಶನ ಕರೆದಿರುವುದು ಸರಿಯಲ್ಲ. ಕನಿಷ್ಟ 8 ದಿನವಾದರೂ ಅಧಿವೇಶನ ಕರೆದಿದ್ದರೆ ಪ್ರವಾಹದ ಬಗ್ಗೆ ಚರ್ಚಿಸಲು ಅನುಕೂಲವಾಗುತಿತ್ತು. ಅಧಿವೇಶನ ವಿಸ್ತರಿಸುವಂತೆ ರಾಜ್ಯ ಸರ್ಕಾರವನ್ನು ಈ ಮೂಲಕ ಆಗ್ರಹಿಸುತ್ತೇನೆ. ಪ್ರವಾಹಪೀಡಿತ ಪ್ರದೇಶಗಳಿಗೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಬೇಕಿತ್ತು. ಆದರೆ ಇದಾವುದನ್ನೂ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಪಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ, ಎಚ್.ಕೆ.ಪಾಟೀಲ್ ಇಬ್ಬರೂ ಅರ್ಹರಿದ್ದಾರೆ. ವಿಪಕ್ಷ ನಾಯಕ ಯಾರಾಗಬೇಕು ಎಂಬುವುದನ್ನು ಹೈಕಮಾಂಡ್ ನಿರ್ಣಯ ಮಾಡಲಿದೆ. ರಾಜ್ಯದ ಕೆಲ ಪ್ರದೇಶಗಳು ಪ್ರವಾಹ, ಬರಕ್ಕೆ ತುತ್ತಾಗಿವೆ. ಅಧಿವೇಶನದಲ್ಲಿ ಅತಿವೃಷ್ಟಿ ಹಾಗೂ ಪ್ರವಾಹ ಸಮಸ್ಯೆಗಳನ್ನು ಎತ್ತಿಕೊ0ಡು ಚರ್ಚಿಸುತ್ತೇವೆ. ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ನಡೆಸುವಂತೆ ನಾವೂ ಆಗ್ರಹ ಮಾಡಿದ್ದೇವೆ. ಆದರೆ ಪ್ರವಾಹ ಪುನರ್ವಸತಿ ಕಾರ್ಯ ಸರಿಯಾಗಿ ಆಗಿಲ್ಲ ಎಂಬುದು ಬಿಜೆಪಿಯವರಿಗೆ ಅರಿವಾಗಿದೆ. ಹೀಗಾಗಿ ಬೆಳಗಾವಿಯಲ್ಲಿ ಅಧಿವೇಶನ ನಡೆಸುತ್ತಿಲ್ಲ ಎಂಬುದು ನನ್ನ ಅನುಮಾನವಾಗಿದೆ ಎಂದು ತಿಳಿಸಿದರು.
ಯಾದಗಿರಿ: ಸಚಿವ ಆರ್.ವಿ ದೇಶಪಾಂಡೆ ಕೆರೆ ವೀಕ್ಷಣೆ ವೇಳೆ ಮತ್ತೆ ಮೋದಿಗೆ ವೋಟ್ ವಿಚಾರ ಪ್ರತಿಧ್ವನಿಸಿದೆ. ಇಂದು ಕಂದಾಯ ಸಚಿವ ಆರ್.ವಿ ದೇಶಪಾಂಡೆ ಯಾದಗಿರಿ ಜಿಲ್ಲೆಯ ಕೆರೆ ಹೂಳೆತ್ತುವ ಕಾಮಗಾರಿಯನ್ನು ಪರಿಶೀಲನೆ ನಡೆಸುತ್ತಿರುವ ವೇಳೆ ಈ ಘಟನೆ ನಡೆದಿದೆ.
ಕಾಮಗಾರಿ ಪರಿಶೀಲನೆ ವೇಳೆ ಕೂಲಿಕಾರ್ಮಿಕರು, ನರೇಗಾ ಯೋಜನೆಯಡಿ ನೀಡುತ್ತಿರುವ ಹಣ ಸಾಕಾಗುತ್ತಿಲ್ಲ. ದಿನಕ್ಕೆ 300 ರೂ ಹೆಚ್ಚಳ ಮಾಡಬೇಕೆಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವರು ಕೂಲಿ ಹಣವನ್ನು ಭಾರತ ಸರ್ಕಾರ ಹೆಚ್ಚಳ ಮಾಡಬೇಕು, ಭಾರತ ಸರ್ಕಾರ ಅಂದರೆ ನಿಮಗೆ ಗೊತ್ತಾಗುತ್ತಾ ಎಂದು ಮರು ಪ್ರಶ್ನೆ ಮಾಡಿದರು.
ಇದಕ್ಕೆ ಕೂಲಿಕಾರ್ಮಿಕರು ಭಾರತ ಸರ್ಕಾರ ಅಂದರೆ ಗೊತ್ತಿಲ್ಲ ಎಂದರು. ಅದಕ್ಕೆ ಮರು ಉತ್ತರ ನೀಡಿದ ಆರ್.ವಿ ದೇಶಪಾಂಡೆ, ಭಾರತ ಸರ್ಕಾರ ಅಂದರೆ ನಿಮಗೆ ಗೊತ್ತಾಗಲ್ಲ, ಮೋದಿ ಅಂದರೆ ನಿಮಗೆ ಗೊತ್ತಾಗುತ್ತದೆ, ನೀವು ಯಾರಿಗೆ ಮತ ಹಾಕಿದ್ದೀರ ಎಂದು ನಿಜ ಹೇಳಿ ಎಂದು ಮಹಿಳಾ ಕೂಲಿ ಕಾರ್ಮಿಕರನ್ನು ಕೇಳಿದರು. ಇದಕ್ಕೆ ನಾನು ಮೋದಿಗೆ ಮತ ಹಾಕಿದ್ದೇನೆ ಎಂದು ಮಹಿಳೆ ಧೈರ್ಯದಿಂದ ಸಚಿವರಿಗೆ ಉತ್ತರ ನೀಡಿದ್ದಾರೆ.
ಇದಕ್ಕೂ ಮುನ್ನ ಆರ್.ದೇಶಪಾಂಡೆ ಅವರು ನಿಮಗೆ ಮನೆ ಇದೇಯಾ? ಮಳೆ ಆಗಿದೇಯಾ ಎಂದು ಮಹಿಳಾ ಕೂಲಿ ಕಾರ್ಮಿಕರ ಸಮಸ್ಯೆಗಳ ಆಲಿಸಿದರು. ಸಚಿವರಿಗೆ ಶಾಸಕ ನಾಗನಗೌಡ ಕಂದಕೂರ, ಜಿಲ್ಲಾಧಿಕಾರಿ ಎಂ.ಕೂರ್ಮರಾವ, ಜಿಲ್ಲಾ ಪಂಚಾಯತ್ ಸಿಇಒ ಕವಿತಾ ಮನ್ನಿಕೇರಿ ಸಾಥ್ ನೀಡಿದರು.