Tag: RV Deshpande

  • ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ – ಗ್ಯಾರಂಟಿಯನ್ನು ಟೀಕಿಸಿದ ಬೆನ್ನಲ್ಲೇ ದೇಶಪಾಂಡೆ ಸ್ಪಷ್ಟನೆ

    ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ – ಗ್ಯಾರಂಟಿಯನ್ನು ಟೀಕಿಸಿದ ಬೆನ್ನಲ್ಲೇ ದೇಶಪಾಂಡೆ ಸ್ಪಷ್ಟನೆ

    ಬೆಂಗಳೂರು: ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿ, ವಾಸ್ತವದ ವಿರುದ್ಧವಾಗಿ ಸುದ್ದಿ ಪ್ರಕಟವಾಗಿದೆ ಎಂದು ಮಾಜಿ ಸಚಿವ ಆರ್‌ವಿ ದೇಶಪಾಂಡೆ (RV Deshpande) ಹೇಳಿದ್ದಾರೆ.

    ನಾನು ಸಿಎಂ ಆಗಿದ್ದರೆ ಪಂಚ ಗ್ಯಾರಂಟಿ ಯೋಜನೆಗಳನ್ನು (Gurantee Sddcheme) ಅನುಷ್ಠಾನ ಮಾಡುತ್ತಿರಲಿಲ್ಲ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಅವರು ಸ್ಪಷ್ಟನೆ ನೀಡಿದ್ದಾರೆ.

     

    ಸ್ಪಷ್ಟನೆಯಲ್ಲಿ ಏನಿದೆ?
    ದಾಂಡೇಲಿಯಲ್ಲಿ ನಡೆದ ಸಭೆಯಲ್ಲಿ ನಾನು ಮಾತನಾಡುವ ಸಂದರ್ಭದಲ್ಲಿ ಐದು ಗ್ಯಾರಂಟಿ ಯೋಜನೆಗಳ ಕುರಿತು ಹೇಳುವಾಗ ನಾನು ಮುಖ್ಯಮಂತ್ರಿಯವರ ಸಮೀಪದಲ್ಲಿರುವವನು, ಆದರೆ ಸಿದ್ದರಾಮಯ್ಯನವರು ಯಾವ ಯೋಜನೆಗಳನ್ನು ಘೋಷಿಸುತ್ತಾರೆ ಎಂಬುದು ನನಗೂ ಗೊತ್ತಿರುವುದಿಲ್ಲ. ಸಿದ್ದರಾಮಯ್ಯನವರು ಪಳಗಿದ ನಾಯಕರು, ಜನನಾಯಕರಾಗಿದ್ದಾರೆ. ಬಡವರ ಪರವಾಗಿ ಹೋರಾಡುವ ನಿಜವಾದ ನಾಯಕರು. ಅವರು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ, ಒಳ್ಳೆಯ ಆಡಳಿತ ನೀಡುತ್ತಿರುವುದು ಅವರ ಶಕ್ತಿ. ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿರುವುದು ಅವರ ಜನಪರಮನೋಭಾವದಿಂದಾಗಿದೆ ಎಂಬುದು ನನ್ನ ಮಾತಿನ ತಾತ್ಪರ್ಯವಾಗಿತ್ತು.  ಇದನ್ನೂ ಓದಿ:  ನಾನು ಸಿಎಂ ಆಗಿದ್ದಿದ್ರೆ ʻಪಂಚ ಗ್ಯಾರಂಟಿʼ ಅನುಷ್ಠಾನ ಮಾಡ್ತಿರಲಿಲ್ಲ, ಗ್ಯಾರಂಟಿ ಹೊರೆಯಾಗಿದೆ: ಆರ್.ವಿ.ದೇಶಪಾಂಡೆ

    ಈ ಮಾತಿನ ಉದ್ದೇಶ ಗ್ಯಾರಂಟಿ ಯೋಜನೆಗಳ ವಿರುದ್ಧ ಮಾತನಾಡುವುದಲ್ಲ, ಬದಲಿಗೆ ಸಿದ್ದರಾಮಯ್ಯನವರು ಬಡವರ ಪರವಾಗಿ, ಜನಪರ ನಿಲುವು ಹೊಂದಿರುವ ನಾಯಕರು ಎಂಬುದನ್ನು ಶ್ಲಾಘಿಸುವುದು ಆಗಿತ್ತು. ಅವರು ಯಾವಾಗಲೂ ಜನರ ಹಿತದೃಷ್ಟಿಯಿಂದ ನಿರ್ಧಾರಗಳನ್ನು ಕೈಗೊಳ್ಳುವ ಹಿರಿಯ ಹಾಗೂ ಅನುಭವಸಂಪನ್ನ ನಾಯಕರು. ನನ್ನ ಮಾತುಗಳ ಮೂಲಕ ನಾನು ಅವರ ಜನಪರ ನೀತಿಗಳನ್ನು ಮೆಚ್ಚಿಕೊಂಡಿದ್ದು ಹೊರತು ಟೀಕಿಸಿದ್ದಲ್ಲ. ಅಲ್ಲದೇ ನಾನು ಈ ಸಭೆಯಲ್ಲಿ ಗ್ಯಾರಂಟಿಗಳಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎನ್ನುವ ಮಾತನ್ನು ಎಲ್ಲಿಯೂ ನಾನು ಉಲ್ಲೇಖಿಸಿರುವುದಿಲ್ಲ ಎಂದಿದ್ದಾರೆ.

  • ನಾನು ಸಿಎಂ ಆಗಿದ್ದಿದ್ರೆ ʻಪಂಚ ಗ್ಯಾರಂಟಿʼ ಅನುಷ್ಠಾನ ಮಾಡ್ತಿರಲಿಲ್ಲ, ಗ್ಯಾರಂಟಿ ಹೊರೆಯಾಗಿದೆ: ಆರ್.ವಿ.ದೇಶಪಾಂಡೆ

    ನಾನು ಸಿಎಂ ಆಗಿದ್ದಿದ್ರೆ ʻಪಂಚ ಗ್ಯಾರಂಟಿʼ ಅನುಷ್ಠಾನ ಮಾಡ್ತಿರಲಿಲ್ಲ, ಗ್ಯಾರಂಟಿ ಹೊರೆಯಾಗಿದೆ: ಆರ್.ವಿ.ದೇಶಪಾಂಡೆ

    – ಗ್ಯಾರಂಟಿಗಳಿಂದ ಅಭಿವೃದ್ಧಿಯ ವೇಗ ತಗ್ಗಿದೆ ಎಂದು `ಕೈʼ ಶಾಸಕ ಬೇಸರ

    ಕಾರವಾರ: ನಾನು ಮುಖ್ಯಮಂತ್ರಿ ಆಗಿದ್ದಿದ್ರೆ ಪಂಚ ಗ್ಯಾರಂಟಿ ಯೋಜನೆಗಳನ್ನ (Congress Guarantee Scheme) ಅನುಷ್ಠಾನ ಮಾಡುತ್ತಿರಲಿಲ್ಲ ಎಂದು ಸ್ವಪಕ್ಷದ ಯೋಜನೆ ಬಗ್ಗೆ ಪಕ್ಷದ ಕಾರ್ಯಕ್ರಮದಲ್ಲೇ ಕಾಂಗ್ರೆಸ್ ಹಿರಿಯ ಶಾಸಕ ಆರ್.ವಿ ದೇಶಪಾಂಡೆ (RV Deshpande) ಹೇಳಿದ್ದಾರೆ.

    ಉತ್ತರ ಕನ್ನಡ (Uttara Kannada) ಜಿಲ್ಲೆಯ ದಾಂಡೇಲಿ ತಾಲೂಕಿನ ಅಂಬೇವಾಡಿ ನವಗ್ರಾಮದಲ್ಲಿ ಕಾಂಗ್ರೆಸ್ ಸಮಿತಿಯಿಂದ ಹಮ್ಮಿಕೊಂಡಿದ್ದ ವೋಟ್ ಚೋರಿ ವಿರುದ್ಧ ಸಹಿ ಸಂಗ್ರಹ ಅಭಿಯಾನದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಹೊರೆ ಆಗಿದೆ. ಜನರಿಗೆ ಅನುಕೂಲವಾಗಿರುವುದು ಒಂದೆಡೆಯಾದ್ರೆ, ಇನ್ನೊಂದೆಡೆ ಸರ್ಕಾರ ನಡೆಸಲು ಕಷ್ಟವಾಗಿದೆ.

    ಮಹಿಳೆಯರು ಎಲ್ಲ ಸೌಲಭ್ಯಗಳನ್ನ ಪಡೆಯುತ್ತಿದ್ದಾರೆ. ಪುರುಷರಿಗೆ ಯಾವುದೇ ಯೋಜನೆಗಳು ಇಲ್ಲ. ಸರ್ಕಾರದ ಈ ಯೋಜನೆಗಳನ್ನ ಜನರಿಗೆ ತಲುಪಿಸಲು ಅನೇಕ ಸಮಿತಿಗಳನ್ನ ರಚಿಸಲಾಗಿದೆ. ಅವುಗಳನ್ನು ನಿಭಾಯಿಸುವುದೇ ಆಗಿದೆ. ಹೀಗಾಗಿ ರಾಜ್ಯದಲ್ಲಿ ಅಭಿವೃದ್ಧಿಯ ವೇಗ ತಗ್ಗಿದೆ ಎಂದು ಹೇಳಿದ್ದಾರೆ.

    ಇನ್ನೂ 5 ಕೆಜಿ ಅಕ್ಕಿ ಬದಲಿಗೆ ಸರ್ಕಾರದಿಂದ ಇಂದಿರಾ ಕಿಟ್‌ (INDIRA Food Kit) ಕೊಡುವ ನಿರ್ಧಾರ ಕುರಿತು ಮಾತನಾಡ್ತಾ, ಮುಖ್ಯಮಂತ್ರಿಗಳು ಇಂದಿರಾ ಕಿಟ್ ಕೊಡ್ತಾರೋ ತೆಂಗಿನಕಾಯಿ ಕೊಡ್ತಾರೋ ನಮಗೇ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

  • ಕಾಂಗ್ರೆಸ್‌ನ ಎಲ್ಲಾ ಶಾಸಕರನ್ನು ಮಂತ್ರಿ ಮಾಡೋಕೆ ಆಗಲ್ಲ- ಆರ್.ವಿ.ದೇಶಪಾಂಡೆ

    ಕಾಂಗ್ರೆಸ್‌ನ ಎಲ್ಲಾ ಶಾಸಕರನ್ನು ಮಂತ್ರಿ ಮಾಡೋಕೆ ಆಗಲ್ಲ- ಆರ್.ವಿ.ದೇಶಪಾಂಡೆ

    ಬೆಂಗಳೂರು: ಕಾಂಗ್ರೆಸ್‌ನ (Congress) ಎಲ್ಲಾ ಶಾಸಕರಿಗೆ ಮಂತ್ರಿಯಾಗುವ ಅರ್ಹತೆಗಳು ಇವೆ. ಆದರೆ ಎಲ್ಲರನ್ನೂ ಮಂತ್ರಿ ಮಾಡೋಕೆ ಆಗುವುದಿಲ್ಲ ಎಂದು ಮಾಜಿ ಸಚಿವ ಆರ್.ವಿ ದೇಶಪಾಂಡೆ (RV Deshpande) ಪರೋಕ್ಷವಾಗಿ ಸಚಿವ ಸ್ಥಾನ ಸಿಗದ್ದಕ್ಕೆ ಅಸಮಾಧಾನ ಹೊರಹಾಕಿದ್ದಾರೆ.ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅರ್ಧನಾರೇಶ್ವರರನ್ನ ಹುಡುಕಿಕೊಳ್ಳಲಿ: ಹರಿಪ್ರಸಾದ್

    ಶಾಸಕರ ಜೊತೆ ಸುರ್ಜೇವಾಲಾ ಸಭೆ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಇವತ್ತು ಸುರ್ಜೇವಾಲಾ ಅವರನ್ನು ಭೇಟಿ ಮಾಡುತ್ತೇನೆ. ಏನು ಚರ್ಚೆ ಮಾಡಲ್ಲ, ಯಾವುದೇ ವಿಚಾರ ಚರ್ಚೆ ಮಾಡಲ್ಲ. ಅವರು ಆರಾಮಾಗಿದ್ದಾರೆ, ನಾವು ಆರಾಮವಾಗಿದ್ದೇವೆ ಎಂದು ಹೇಳುತ್ತೇನೆ ಎಂದರು.

    ನೀವು ಸಚಿವ ಸ್ಥಾನ ಕೇಳ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲರೂ ಸಚಿವರು ಆಗಲು ಸಾಧ್ಯನಾ? 224 ಸದಸ್ಯರಿದ್ದಾರೆ. 30 ರಿಂದ 35 ಜನರು ಸಚಿವರಾಗಬಹುದು. ಮಂತ್ರಿ ಆಗಬೇಕು ಎಂಬ ಆಸೆ ಇದ್ರೆ ತಪ್ಪಿಲ್ಲ. ಅರ್ಹತೆ ಎಲ್ಲರಿಗೂ ಇದೆ, ಆದರೆ ಎಲ್ಲರೂ ಆಗಲು ಸಾಧ್ಯವಿಲ್ಲ. ಸುರ್ಜೇವಾಲಾ ನನ್ನನ್ನು ಕರೆದಿದ್ದಾರೆ. ಏನು ಹೇಳುತ್ತಾರೆ ಗೊತ್ತಿಲ್ಲ. ಏನಾದರೂ ಇದ್ದರೆ ಕಿವಿಯಲ್ಲಿ ಹೇಳಬಹುದು ಅದು ಗೊತ್ತಿಲ್ಲ ಎಂದು ಹಾಸ್ಯ ಮಾಡಿದರು.ಇದನ್ನೂ ಓದಿ: ರಾಜಮೌಳಿ ಸಿನಿಮಾ ರಿಜೆಕ್ಟ್ ಮಾಡಿದ ನಟ ವಿಕ್ರಂ – ಕಾರಣ ಏನ್ ಗೊತ್ತಾ?

  • ಶಕ್ತಿ ಯೋಜನೆಯಿಂದ ಗಂಡಸರಿಗೆ ತೊಂದರೆಯಾಗ್ತಿದೆ: ಆರ್‌ವಿ ದೇಶಪಾಂಡೆ

    ಶಕ್ತಿ ಯೋಜನೆಯಿಂದ ಗಂಡಸರಿಗೆ ತೊಂದರೆಯಾಗ್ತಿದೆ: ಆರ್‌ವಿ ದೇಶಪಾಂಡೆ

    ಬೆಂಗಳೂರು: ಶಕ್ತಿ ಯೋಜನೆಯಿಂದ (Shakti Scheme) ಗಂಡಸರಿಗೆ ಸಮಸ್ಯೆ ಆಗುತ್ತಿದೆ ಎಂದು ವಿಧಾನಸೌಧದಲ್ಲಿ ಮಾಜಿ ಸಚಿವ ಆರ್.ವಿ. ದೇಶಪಾಂಡೆ (RV Deshpande) ಹೇಳಿದ್ದಾರೆ.

    ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಕ್ತಿ ಯೋಜನೆ ಚೆನ್ನಾಗಿದೆ. ಸಮಸ್ಯೆಯನ್ನು ಸ್ವಲ್ಪ ಸರಿ ಮಾಡಬೇಕು. ಶಕ್ತಿ ಯೋಜನೆಯಿಂದ ಬಸ್‌ನಲ್ಲಿ ಬರೀ ಹೆಂಗಸರೇ ತುಂಬಿರುತ್ತಾರೆ. ಗಂಡಸರ ಸಂಖ್ಯೆ ಕಡಿಮೆ ಆಗುತ್ತಿದೆ. ಇದರಿಂದ ಬಸ್‌ನಲ್ಲಿ ಗಂಡಸರಿಗೆ ಸಮಸ್ಯೆ ಆಗುತ್ತಿದೆ. ಅಪ್ಪಿತಪ್ಪಿ ಹೆಂಗಸರಿಗೆ ಕೈ ತಾಗಿದರೆ ಏನೆಲ್ಲಾ ಸಮಸ್ಯೆ ಆಗಬಹುದು. ಇದನ್ನು (ಯೋಜನೆ) ಸೀಮಿತಗೊಳಿಸಿದರೆ ಸಮಸ್ಯೆ ಸರಿ ಹೋಗಬಹುದು ಎಂದರು. ಇದನ್ನೂ ಓದಿ: ಕದನ ವಿರಾಮ ಉಲ್ಲಂಘನೆ; ‘ಫ..’ 4 ಪದದ ಆಕ್ಷೇಪಾರ್ಹ ಪದ ಬಳಸಿ ಇಸ್ರೇಲ್‌-ಇರಾನ್‌ಗೆ ಟ್ರಂಪ್‌ ತರಾಟೆ

    ಶಾಸಕರು ಸಚಿವರನ್ನು ಭೇಟಿಯಾಗಬೇಕು. ಶಾಸಕರ ಸಮಸ್ಯೆ ಇದ್ದರೆ ಅದನ್ನ ಸರಿ ಮಾಡಬೇಕು. ಬಿಆರ್ ಪಾಟೀಲ್ (BR Patil) ಹಿರಿಯರು. ಅವರು ಅಭಿಪ್ರಾಯ ಪಡೆಯಲು ಮಾಧ್ಯಮಗಳಲ್ಲಿ ಹೇಳಬಾರದಿತ್ತು. ಸಿಎಂ ಗಮನಕ್ಕೆ ತಂದು ಈ ತರಹ ಆಗುತ್ತಿದೆ ಎಂದು ಹೇಳಬೇಕಿತ್ತು. ಸಿಎಂಗೆ ಈ ಬಗ್ಗೆ ಮಾಹಿತಿ ಕೊಡಬೇಕಿತ್ತು. ಆಗಲೂ ಸಿಎಂ, ಮಂತ್ರಿಗಳು ಸ್ಪಂದನೆ ಮಾಡದೇ ಹೋದರೆ ಹೀಗೆ ಮಾಡಬಹುದಿತ್ತು. ಸಿಎಂ ಮತ್ತು ಸಂಬಂಧಿಸಿದ ಸಚಿವರ ಜೊತೆ ಮಾತಾಡಬೇಕು. ಇದಕ್ಕೆ ಆಡಳಿತ ವ್ಯವಸ್ಥೆ ಕೆಟ್ಟಿದೆ ಎಂದು ಹೇಳೋದು ಸರಿಯಲ್ಲ ಎಂದು ಹೇಳಿದರು. ಇದನ್ನೂ ಓದಿ: ಬಾತ್‌ರೂಮಲ್ಲೇ ವ್ಯಕ್ತಿಯ ಬರ್ಬರ ಹತ್ಯೆ – ಕೊಲೆ ಫೋಟೋ ಇನ್ಸ್ಟಾದಲ್ಲಿ ಹಾಕಿ ‘ಜಾಲಿ ಜಾಲಿ’ ಎಂದು ಬರೆದ ಆರೋಪಿ

    ಶಾಸಕ ಅಧಿಕಾರ ಚಲಾವಣೆ ಮಾಡೋಕೆ ಕ್ರಮಬದ್ಧ ಇದೆ. ಬಿಜೆಪಿಗೂ ನಮಗೂ ಬಹಳ ವ್ಯತ್ಯಾಸ ಇದೆ. ನಮ್ಮ ಶಾಸಕರು ಬಹಿರಂಗವಾಗಿ ಹೇಳಿರೋದು ಸರಿಯಲ್ಲ. ಮೊದಲು ಸಿಎಂ ಬಳಿ ಮಾತನಾಡಬೇಕು ಎಂದು ಸೂಚಿಸಿದರು. ಇದನ್ನೂ ಓದಿ: ವಿಜಯ್ ಜೊತೆ ಲವ್ ವದಂತಿಗೆ ತ್ರಿಷಾ ಕೆಂಡ – ಹೊಲಸು ಮನಸ್ಥಿತಿಯ ಜನ ಎಂದ ನಟಿ

  • ಭಾರತ ಮತ್ತಷ್ಟು ಸೇಡು ತೀರಿಸಿಕೊಳ್ಳಬೇಕು, ಕೇಂದ್ರಕ್ಕೆ ನಮ್ಮ ಬೆಂಬಲ ಇದೆ: ಆರ್‌.ವಿ ದೇಶಪಾಂಡೆ

    ಭಾರತ ಮತ್ತಷ್ಟು ಸೇಡು ತೀರಿಸಿಕೊಳ್ಳಬೇಕು, ಕೇಂದ್ರಕ್ಕೆ ನಮ್ಮ ಬೆಂಬಲ ಇದೆ: ಆರ್‌.ವಿ ದೇಶಪಾಂಡೆ

    – ಪಾಕಿಸ್ತಾನವನ್ನ ನಂಬೋಕೆ ಆಗಲ್ಲ; ಮಾಜಿ ಸಚಿವ

    ಬೆಂಗಳೂರು: ಪಹಲ್ಗಾಮ್‌ ಉಗ್ರರ ದಾಳಿಗೆ (Pahalgam Terrorist Attack) ಭಾರತ ಮತ್ತಷ್ಟು ಸೇಡು ತೀರಿಸಿಕೊಳ್ಳಬೇಕು. ಇದಕ್ಕೆ ನಮ್ಮೆಲ್ಲರ ಬೆಂಬಲ ಇದೆ ಅಂತ ಮಾಜಿ ಸಚಿವ ಕಾಂಗ್ರೆಸ್ ನಾಯಕ ಆರ್.ವಿ ದೇಶಪಾಂಡೆ (RV Deshpande) ತಿಳಿಸಿದ್ದಾರೆ.

    ಬೆಂಗಳೂರಿನ ಡಿಸಿಎಂ ಡಿಕೆಶಿ ನಿವಾಸದ ಬಳಿ ಭಾರತ-ಪಾಕಿಸ್ತಾನ (India-Pakistan) ನಡುವಿನ ಸಂಘರ್ಷದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕದನ ವಿರಾಮ ಒಪ್ಪಂದ ಆದ ನಂತರ ಪಾಕಿಸ್ತಾನ ಸೇನೆ ಗೊತ್ತಿದ್ದೂ ಉದ್ದೇಶ ಪೂರ್ವಕವಾಗಿ ಭಾರತದ ಮೇಲೆ ಫೈರಿಂಗ್ ಮಾಡಿದೆ. ಕದನ ವಿರಾಮ ಉಲ್ಲಂಘನೆ (Ceasefire Violation) ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್‌ ಉದ್ವಿಗ್ನತೆಯಿಂದ ಬಂದ್‌ ಆಗಿದ್ದ 32 ಏರ್‌ಪೋರ್ಟ್‌ಗಳು ಮತ್ತೆ ಕಾರ್ಯಾರಂಭ

    ನಮ್ಮ 3 ಸೇನಾಪಡೆಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ತಕ್ಕ ಉತ್ತರ ಕೊಟ್ಟಿದೆ. ಆದರೂ ಪಾಕಿಸ್ತಾನ ಪ್ರತಿ ಬಾರಿ ಅಧಿಕಪ್ರಸಂಗ ತನ ಮಾಡ್ತಿದೆ. ಮೈಮೇಲೆ ಹಾಕಿಕೊಂಡು ಬೇರೆ ಬೇರೆ ದೇಶದ ಸಹಾಯ ಪಡೆದುಕೊಳ್ತಿದೆ. ಭಾರತ ಸರ್ಕಾರದ ನಿರ್ಣಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಕೇಂದ್ರ ಸರ್ಕಾರದ ನಿರ್ಣಯವನ್ನ ನಾನು ಮೆಚ್ಚುತ್ತೇನೆ ಎಂದು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ಲಷ್ಕರ್ ಉಗ್ರನ ಅಂತ್ಯಕ್ರಿಯೆಯಲ್ಲಿ ಪಾಕ್ ಸೇನಾಧಿಕಾರಿಗಳು ಭಾಗಿ – ಭಾರತ ತೀವ್ರ ಆಕ್ಷೇಪ

    ಮುಂದುವರಿದು… ಪಾಕಿಸ್ತಾನದ ಹೇಳಿಕೆಯನ್ನ ನಂಬೋಕೆ ಆಗೊಲ್ಲ. ಪಹಲ್ಗಾಮ್‌ನಲ್ಲಿ 28 ಜನ ಅಮಾಯಕರನ್ನ ಹತ್ಯೆ ಮಾಡಿದ್ರು. ಆ ಹತ್ಯೆಗೆ ಇನ್ನೂ ಸೇಡು ತೆಗೆದುಕೊಳ್ಳಬೇಕು. ಭಾರತ ಸರ್ಕಾರ, ಸೇನೆ ಉತ್ತಮ ಕೆಲಸ ಮಾಡ್ತಿದ್ದಾರೆ, ಅದನ್ನ ಮೆಚ್ಚಬೇಕು. ಈಗಾಗಲೇ ನಮ್ಮ ಸೇನೆ ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟಿದೆ. ನಾವೆಲ್ಲಾ ಭಾರತೀಯರು ಪಕ್ಷಾತೀತವಾಗಿ ಒಗ್ಗಟ್ಟಾಗಿ ಸೇನೆ ಹಿಂದೆ ನಿಲ್ಲಬೇಕು ಎಂದು ಕರೆ ಕೊಟ್ಟರು.

    ಇನ್ನೂ 1971ರ ಮಾದರಿಯಲ್ಲಿ ಪಾಕಿಸ್ತಾನವನ್ನ 2 ಭಾಗ ಮಾಡಬೇಕು ಎಂಬ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅಂತಹ ಪರಿಸ್ಥಿತಿ ಇಲ್ಲ. ಎರಡು ಭಾಗ ಮಾಡೋ ಸಾಧ್ಯತೆ ಇಲ್ಲ. ಇದೆಲ್ಲ ಸುಳ್ಳು ಸುದ್ದಿ. ಯಾರು ಕಿವಿಗೊಡಬಾರದು ಎಂದು ಹೇಳಿದರು. ಇದನ್ನೂ ಓದಿ: ಭಾರತ-ಪಾಕ್ ʻಕದನ-ವಿರಾಮʼ ಮಾತುಕತೆ – ಇಂದು ಎರಡೂ ದೇಶಗಳ ಡಿಜಿಎಂಒಗಳ ಸಭೆ

  • ಕಾಂಗ್ರೆಸ್‌ನಲ್ಲಿ ಎಲ್ಲಾ ಅಧಿಕಾರ ಅನುಭವಿಸಿದ್ದೇನೆ, ಮಂತ್ರಿ ಮಾಡೋದು ಸಿಎಂಗೆ ಬಿಟ್ಟ ವಿಚಾರ: ಆರ್.ವಿ.ದೇಶಪಾಂಡೆ

    ಕಾಂಗ್ರೆಸ್‌ನಲ್ಲಿ ಎಲ್ಲಾ ಅಧಿಕಾರ ಅನುಭವಿಸಿದ್ದೇನೆ, ಮಂತ್ರಿ ಮಾಡೋದು ಸಿಎಂಗೆ ಬಿಟ್ಟ ವಿಚಾರ: ಆರ್.ವಿ.ದೇಶಪಾಂಡೆ

    ಬೆಂಗಳೂರು: ನಾನು ಕಾಂಗ್ರೆಸ್‌ನಲ್ಲಿ (Congress) ಸಚಿವ ಸ್ಥಾನ, ವಿಪಕ್ಷ ಸ್ಥಾನ, ಕೆಪಿಸಿಸಿ (KPCC) ಅಧ್ಯಕ್ಷ ಸ್ಥಾನ ಸೇರಿ ಎಲ್ಲಾ ಅಧಿಕಾರ ಅನುಭವಿಸಿದ್ದೇನೆ. ಮಂತ್ರಿ ಮಾಡೋದು, ಬಿಡೋದು ಸಿಎಂ ಸಿದ್ದರಾಮಯ್ಯಗೆ (CM Siddaramaiah) ಬಿಟ್ಟ ವಿಚಾರ ಎಂದು ಮಾಜಿ ಸಚಿವ ಆರ್.ವಿ ದೇಶಪಾಂಡೆ (RV Deshpande) ತಿಳಿಸಿದರು.ಇದನ್ನೂ ಓದಿ:ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡ್ತಿರೋ ಬಿಜೆಪಿಯವ್ರು ರೈತ ವಿರೋಧಿಗಳು: ಡಿಕೆಶಿ

    ಸಿಎಂ, ಡಿಸಿಎಂ ದೆಹಲಿ ಪ್ರವಾಸ ಕೈಗೊಂಡ ಹಿನ್ನೆಲೆ ಸಚಿವ ಸಂಪುಟ ಪುನರ್ ರಚನೆ ಆಗುವ ಬಗ್ಗೆ ವಿಧಾನಸೌಧದ ಬಳಿ ಪ್ರತಿಕ್ರಿಯೆ ನೀಡಿದ ಅವರು, ನಾನು ಕರ್ನಾಟಕ (Karnataka) ವಿಧಾನಸಭೆಯಲ್ಲಿ ಅತ್ಯಂತ ಹಿರಿಯ ಸದಸ್ಯ. 1983ರಿಂದ ಶಾಸಕ ಆಗಿದ್ದೇನೆ. ಹಲವಾರು ಬಾರಿ ಸಚಿವ ಆಗಿದ್ದೆ, ವಿಪಕ್ಷ ನಾಯಕ, ಕೆಪಿಸಿಸಿ ಅಧ್ಯಕ್ಷ ಸೇರಿ ಎಲ್ಲಾ ಅಧಿಕಾರ ಅನುಭವಿಸಿದ್ದೇನೆ. ಕ್ಯಾಬಿನೆಟ್ ಪುನರ್ ರಚನೆಗೆ ಸಿಎಂ ಹೋಗಿದ್ದಾರೋ ನನಗೆ ಗೊತ್ತಿಲ್ಲ. ಸಚಿವ ಮಾಡೋದು, ಬಿಡೋದು ಸಿಎಂಗೆ ಬಿಟ್ಟ ವಿಚಾರ ಎಂದು ಹೇಳಿದರು.

    ದೆಹಲಿಯಲ್ಲಿ (Delhi) ಕರ್ನಾಟಕ ಭವನ ಉದ್ಘಾಟನೆಗಾಗಿ ಸಿಎಂ ಸಿದ್ದರಾಮಯ್ಯ ಹೋಗಿದ್ದಾರೆ. ನನಗೆ ಸಚಿವ ಸ್ಥಾನ ಕೊಡುವ ಬಗ್ಗೆ ಗೊತ್ತಿಲ್ಲ. ನಾನು ನಿರೀಕ್ಷೆ ಮಾಡಿಲ್ಲ. ನನ್ನ ಆಸೆಯನ್ನು ನಿಮಗೆ ಯಾಕೆ ಹೇಳಬೇಕು? ಎಲ್ಲಾ ಭಗವಂತನ ಕೃಪೆ 8 ಸಿಎಂಗಳ ಜೊತೆ ನಾನು ಕೆಲಸ ಮಾಡಿದ್ದೇನೆ. ಮಂತ್ರಿ ಮಾಡುವುದು ಸಿಎಂ ವಿವೇಚನೆ. ಅವರ ನಿರ್ಧಾರಕ್ಕೆ ನಾವು ಬದ್ಧ ಎಂದು ತಿಳಿಸಿದರು.ಇದನ್ನೂ ಓದಿ:ಅರ್ಥಶಾಸ್ತ್ರದ ಬಗ್ಗೆ ಗೊತ್ತಿರೋರು ಬೆಲೆ ಏರಿಕೆ ವಿರೋಧ ಮಾಡಲ್ಲ: ಆರ್.ವಿ.ದೇಶಪಾಂಡೆ

  • ಸಿಎಂ ಬದಲಾವಣೆ ಪ್ರಶ್ನೆ ಹೈಕಮಾಂಡ್ ಮುಂದೆಯೂ ಇಲ್ಲ, ಶಾಸಕಾಂಗ ಸಭೆಯ ಮುಂದೆಯೂ ಇಲ್ಲ: ಆರ್.ವಿ.ದೇಶಪಾಂಡೆ

    ಸಿಎಂ ಬದಲಾವಣೆ ಪ್ರಶ್ನೆ ಹೈಕಮಾಂಡ್ ಮುಂದೆಯೂ ಇಲ್ಲ, ಶಾಸಕಾಂಗ ಸಭೆಯ ಮುಂದೆಯೂ ಇಲ್ಲ: ಆರ್.ವಿ.ದೇಶಪಾಂಡೆ

    ಬೆಂಗಳೂರು: ಸಿಎಂ (Siddaramaiah) ಬದಲಾವಣೆ ಪ್ರಶ್ನೆ ಹೈಕಮಾಂಡ್ ಮುಂದೆಯೂ ಇಲ್ಲ, ಶಾಸಕಾಂಗ ಸಭೆಯ ಮುಂದೆಯೂ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಪರ ಮಾಜಿ ಸಚಿವ ಆರ್.ವಿ. ದೇಶಪಾಂಡೆ (RV Deshpande) ಬ್ಯಾಟಿಂಗ್ ಮಾಡಿದ್ದಾರೆ.

    ಕಾಂಗ್ರೆಸ್‌ನಲ್ಲಿ (Congress) ಹೈಕಮಾಂಡ್ ಹೇಳಿಕೆ ಮೇಲೂ ಸಿಎಂ ಬದಲಾವಣೆ ಚರ್ಚೆ ವಿಚಾರ, ಸಚಿವ ರಾಜಣ್ಣ ಟೀಂ ನಿಂದ ಹೈಕಮಾಂಡ್ ಭೇಟಿ ಮಾಡೋ ವಿಚಾರಕ್ಕೆ ವಿಕಾಸಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಪಕ್ಷದಲ್ಲಿ ಒಗ್ಗಟ್ಟಿದೆ. ನನಗೆ ನಮ್ಮ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇರೋದು ಕಂಡುಬಂದಿಲ್ಲ. ಸಚಿವ ರಾಜಣ್ಣ ಕಣ್ಣಿಗೆ ಬಿದ್ದಿದ್ದರೆ ಅದು ಗೊತ್ತಿಲ್ಲ ಎಂದರು. ಇದನ್ನೂ ಓದಿ: ರಾಜ್ಯಕ್ಕೆ ಕಳೆದ ಬಾರಿಗಿಂತ ಶೇ.10ರಷ್ಟು ಹೆಚ್ಚು ತೆರಿಗೆ ಹಂಚಿಕೆ: ಜೋಶಿ

    ಡಿಕೆಶಿ ಸಿಎಂ ಆಗಬೇಕು ಎಂದು ಅಭಿಮಾನಿಗಳು ಹೇಳುತ್ತಾರೆ. ಅದಕ್ಕೆ ಡಿಕೆಶಿ ಏನು ಮಾಡಲು ಆಗುತ್ತದೆ. ಹೈಕಮಾಂಡ್ ಏನು ಮಾಡೋಕಾಗುತ್ತೆ? ನಾವೇನು ಮಾಡೋದು? ಸಿಎಂ ಬದಲಾವಣೆ ಪ್ರಶ್ನೆ ಹೈಕಮಾಂಡ್ ಮುಂದೆಯೂ ಇಲ್ಲ. ಶಾಸಕಾಂಗ ಸಭೆಯ ಮುಂದೆಯೂ ಚರ್ಚೆ ಆಗುತ್ತಿಲ್ಲ. ಹೈಕಮಾಂಡ್ ಹೇಳಿದ ಮೇಲೆ ಮಾತನಾಡುತ್ತಿದ್ದಾರೆ ಅಂದರೆ ಹೈಕಮಾಂಡ್ ಕ್ರಮ ತೆಗೆದುಕೊಳ್ಳಬೇಕು. ನಮ್ಮ ಹೈಕಮಾಂಡ್ ಸ್ಟ್ರಾಂಗ್ ಇದೆ. ಈಗ ಮತ್ತಷ್ಟು ಸ್ಟ್ರಾಂಗ್ ಆಗಿದೆ ಎಂದು ಹೇಳಿದರು. ಇದನ್ನೂ ಓದಿ: ಹೈಕಮಾಂಡ್ ಹೇಳಿದ ಮೇಲೂ ಸಿಎಂ ಬದಲಾವಣೆ ಚರ್ಚೆ ಮಾಡೋದು ಸರಿಯಲ್ಲ: ಹರಿಪ್ರಸಾದ್

    ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿ ಇರುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯರನ್ನ ಆಯ್ಕೆ ಮಾಡುವಾಗ 1 ವರ್ಷ, 2 ವರ್ಷ, 3 ವರ್ಷ ಅಂತ ಆಯ್ಕೆ ಮಾಡಿಲ್ಲ. ಸಿದ್ದರಾಮಯ್ಯ ಸಿಎಂ ಆಗಿರೋದಕ್ಕೆ ಎಲ್ಲರ ಸಹಮತ ಇದೆ. ಯಾರಿಗೂ ಭಿನ್ನಮತ ಇಲ್ಲ ಎಂದು ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದರು. ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟಕ್ಕೆ ಜಾತಿ ಸಮೀಕರಣ – ಭಿನ್ನರ ಪಟ್ಟಿಯಲ್ಲಿ ಯಾರಿದ್ದಾರೆ?

    ಸಿಎಂ ಬದಲಾವಣೆ ಆದರೆ ನೀವು ಆಕಾಂಕ್ಷಿನಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆ ತರಹ ಪರಿಸ್ಥಿತಿ ಬಂದಾಗ ನೋಡೋಣ. ಅಂತಹ ಪರಿಸ್ಥಿತಿ ಬರೋ ಸನ್ನಿವೇಶ ಇಲ್ಲ. ಹಾಗಾಗಿ ನಾನೇನು ಉತ್ತರ ಕೊಡಲಿ? ನನ್ನ ಬಿಸಿ ಬಗ್ಗೆ ಕೇಳಿದ್ರೆ ಹೇಳಬಹುದು. ಅಜ್ಜಿ ಬಿಸಿಗೆ ನಾನೇನು ಹೇಳಲಿ. ಮಾಧ್ಯಮಗಳು ಗೊಂದಲ ನಿರ್ಮಾಣ ಮಾಡಬೇಡಿ. ಪಕ್ಷದಲ್ಲಿ ಒಗ್ಗಟ್ಟು ಇದೆ. ಸಿದ್ದರಾಮಯ್ಯ ಸಿಎಂ ಇದ್ದಾರೆ. ಡಿಕೆಶಿ ಅಧ್ಯಕ್ಷ ಇದ್ದಾರೆ. ಎಲ್ಲರೂ ಪ್ರೀತಿ ವಿಶ್ವಾಸದಿಂದ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬೀದರ್ ದರೋಡೆ ಕೇಸ್ – ಗಾಯಗೊಂಡಿದ್ದ ಶಿವಕುಮಾರ್‌ಗೆ ಬಿಜೆಪಿಯಿಂದ 1 ಲಕ್ಷ ಪರಿಹಾರ

  • ಸಿದ್ದರಾಮಯ್ಯ ಅನುಮತಿ ಕೊಟ್ರೆ ನಾನು ಸಿಎಂ ಆಗ್ತೀನಿ: ಆರ್‌.ವಿ ದೇಶಪಾಂಡೆ

    ಸಿದ್ದರಾಮಯ್ಯ ಅನುಮತಿ ಕೊಟ್ರೆ ನಾನು ಸಿಎಂ ಆಗ್ತೀನಿ: ಆರ್‌.ವಿ ದೇಶಪಾಂಡೆ

    – ಈಗ ಪ್ರತಿದಿನ ಫೋನ್‌ ಕದ್ದಾಲಿಕೆ ನಡೆಯುತ್ತಿದೆ: ಮಾಜಿ ಸಚಿವ ಬಾಂಬ್‌

    ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಅನುಮತಿ ಕೊಟ್ಟರೆ ನಾನು ಸಿಎಂ ಆಗ್ತೀನಿ ಅಂತ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಆರ್.ವಿ ದೇಶಪಾಂಡೆ (RV Deshpande) ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ. ಈ ಮೂಲಕ ಪರೋಕ್ಷವಾಗಿ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

    ಮೈಸೂರಿನಲ್ಲಿ (Mysuru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಅನುಮತಿ ಕೊಟ್ಟರೆ ನಾನು ಸಿಎಂ ಆಗುತ್ತೇನೆ. ನಾನು ಸಚಿವ ಆಗಿ ದಣಿದಿದ್ದೇನೆ. ಇನ್ನೇನಿದ್ದರೂ ಮುಖ್ಯಮಂತ್ರಿ ಆಗಬೇಕು ಅಷ್ಟೇ. ಆದ್ರೆ ಈಗ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಬ್ಲಿಕ್‌ ಟಿವಿ ವಿದ್ಯಾಮಂದಿರ ಶೈಕ್ಷಣಿಕ ಮೇಳಕ್ಕೆ 2ನೇ ದಿನವೂ ಉತ್ತಮ ಸ್ಪಂದನೆ – ಸಂಜೆ 6 ಗಂಟೆವರೆಗೂ ಇರಲಿದೆ ಮೇಳ

    ನಾನು ಸಿದ್ದರಾಮಯ್ಯಗಿಂತ 2 ವರ್ಷ ದೊಡ್ಡವನು:
    ಈ ವೇಳೆ ಸಿಎಂ (Chief Minister) ಆಗುವ ಆಸೆ ಇದ್ಯಾ ಎಂಬ ಪತ್ರಕರ್ತರ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ದೇಶಪಾಂಡೆ, ನನಗೆ ಆಸೆ ಇದೆ. ನಿಮ್ಮಂಥ ಜನರಿಗೂ ಆಸೆ ಇರುತ್ತೆ. ಲೈಫ್‌ನಲ್ಲಿ ಗುರಿ ಮುಖ್ಯ. ನಾನು ಸಿದ್ದರಾಮಯ್ಯಗಿಂತ 2 ವರ್ಷ ವಯಸ್ಸಿನಲ್ಲಿ ದೊಡ್ಡವನು. ಹೈಕಮಾಂಡ್ ಅವಕಾಶ ಕೊಟ್ಟರೂ ಸಿದ್ದರಾಮಯ್ಯ ಅನುಮತಿ ಕೊಡಬೇಕು. ನಾನು ಸಿದ್ದರಾಮಯ್ಯಗೆ ಒಳ್ಳೆಯ ಸ್ನೇಹಿತ. 5 ವರ್ಷ ಸಿಎಂ ಆಗಿ ಅವರೇ ಇರ್ತಾರೆ. ಸದ್ಯಕ್ಕೆ ಬದಲಾವಣೆ ಚರ್ಚೆ ನಡೆದಿಲ್ಲ ಎಂದು ನುಡಿದಿದ್ದಾರೆ.

    ಸದ್ಯ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿಲ್ಲ. ನನಗೆ ಗೊತ್ತಿಲ್ಲದೆ ಯಾವ ಚರ್ಚೆಯೂ ನಡೆಯಲು ಸಾಧ್ಯವಿಲ್ಲ. ಪರಮೇಶ್ವರ ಹಾಗೂ ಜಾರಕಿಹೊಳಿ ಮನೆಯಲ್ಲಿ ನಡೆದಿರುವುದು ಇಲಾಖೆಗೆ ಸಂಬಂಧಪಟ್ಟ ಸಭೆ ಅಷ್ಟೇ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗೌರಿ ಹಬ್ಬದಂದು ಮುಖ್ಯಮಂತ್ರಿಗಳಿಂದ ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿ ಉದ್ಘಾಟನೆ – ಡಿಕೆಶಿ

    ಪ್ರತಿದಿನ ಫೋನ್‌ ಕದ್ದಾಲಿಕೆ:
    ಇದೇ ವೇಳೆ ಫೋನ್‌ ಕದ್ದಾಲಿಕೆ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಫೋನ್ ಟ್ಯಾಪಿಂಗ್‌ ಆರೋಪ ಬಂದ ತಕ್ಷಣ ರಾಮಕೃಷ್ಣ ಹೆಗೆಡೆ ಅವರು ರಾಜೀನಾಮೆ ನೀಡಿದ್ದರು. ಆದ್ರೆ ಈಗ ಪ್ರತಿದಿನವೂ ಫೋನ್ ಕದ್ದಾಲಿಕೆ ನಡೆಯುತ್ತಿದೆ. ಈ ಹಿಂದೆ ಮೌಲ್ಯಾಧರಿತ ರಾಜಕಾರಣ ಮಾಡುತ್ತಿದ್ದರು. ಅದೇ ರೀತಿ ನಡೆದು ಕೊಳ್ಳುತ್ತಿದ್ದರು. ಈಗ ಮೌಲ್ಯಾಧಾರಿತ ರಾಜಕಾರಣವೇ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಇನ್ನೂ ಮುಡಾ ಹಗರಣ ವಿಚಾರಕ್ಕೆ ಪ್ರತಿಕ್ರಿಯಿಸಿ, ಮುಡಾ ವಿಚಾರದಲ್ಲಿ ಸಿಎಂ ಏನು ತಪ್ಪು ಮಾಡಿದ್ದಾರೆ? ಸಾವಿರಾರು ಕೋಟಿ ಹಗರಣ ಅಂತ ಹೇಳುತ್ತಿದ್ದಾರೆ. ಆರೋಪದ ಬಗ್ಗೆ ದಾಖಲೆ ಕೊಡಿ ನಾನೇ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಇಂಡಿಗೋ ವಿಮಾನದ ವಾಶ್‍ರೂಮ್‍ನಲ್ಲಿ ಬಾಂಬ್ ಬೆದರಿಕೆ ಪತ್ರ ಪತ್ತೆ – ತುರ್ತು ಭೂಸ್ಪರ್ಶ

  • ಕೇಂದ್ರದ ವಿರೋಧ ಪಕ್ಷವನ್ನು ಮಣಿಸಲು ರಾಜ್ಯಪಾಲರನ್ನು ಏಜೆಂಟರಾಗಿ ಬಳಸುತ್ತಿದ್ದಾರೆ: ಆರ್.ವಿ ದೇಶಪಾಂಡೆ

    ಕೇಂದ್ರದ ವಿರೋಧ ಪಕ್ಷವನ್ನು ಮಣಿಸಲು ರಾಜ್ಯಪಾಲರನ್ನು ಏಜೆಂಟರಾಗಿ ಬಳಸುತ್ತಿದ್ದಾರೆ: ಆರ್.ವಿ ದೇಶಪಾಂಡೆ

    ಕಾರವಾರ: ಕೇಂದ್ರದ ವಿರೋಧ ಪಕ್ಷಗಳು ಯಾವ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದೆಯೋ ಎಲ್ಲಾ ಸರ್ಕಾರವನ್ನು ಅಸ್ಥಿರ ಮಾಡುವ ಕಾರ್ಯವನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಅದಕ್ಕಾಗಿ ಆಯಾ ರಾಜ್ಯದ ರಾಜ್ಯಪಾಲರು (Governer) ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ ದೇಶಪಾಂಡೆ (RV Deshpande) ಕಿಡಿಕಾರಿದ್ದಾರೆ.

    ಸೋಮವಾರ ಕಾರವಾರದಲ್ಲಿ (Karwar) ಕಾಂಗ್ರೆಸ್ (Congress) ಪಕ್ಷದಿಂದ ರಾಜ್ಯಪಾಲರ ನಡೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯಪಾಲರು ಸರ್ಕಾರವನ್ನು ಅಸ್ಥಿರ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಬಿಜೆಪಿಯ ಆದೇಶದ ಮೇಲೆ ರಾಜ್ಯಪಾಲರು ಕೆಲಸ ಮಾಡುತ್ತಿದ್ದಾರೆ. ರಾಜ್ಯಪಾಲರು ಈ ರೀತಿಯ ನಿರ್ಧಾರಕ್ಕೆ ಹೋಗುತ್ತಾರೆ ಎಂದು ನಾನು ಎಣಿಸಿರಲಿಲ್ಲ. ರಾಜ್ಯಪಾಲರ ಮುಂದೆ ಹಲವಾರು ಪ್ರಕರಣಗಳು ಪೆಂಡಿಗ್ ಇದೆ. ಶಶಿಕಲಾ ಜೊಲ್ಲೆ, ನಿರಾಣಿ, ಕುಮಾರಸ್ವಾಮಿ ಅವರ ಪ್ರಕರಣ ಹಲವು ವರ್ಷದಿಂದ ಪೆಂಡಿಂಗ್ ಇದೆ. ಇದನ್ನು ಏಕೆ ಪೆಂಡಿಂಗ್ ಇಟ್ಟಿದ್ದಾರೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನಾನು ಯಾವುದೇ ತಪ್ಪು ಮಾಡಿಲ್ಲ.. ನ್ಯಾಯಾಲಯದಲ್ಲಿ ಪರಿಹಾರ ಸಿಗುವ ವಿಶ್ವಾಸ ಇದೆ: ಸಿದ್ದರಾಮಯ್ಯ

    ಇದಲ್ಲದೇ ಸರ್ಕಾರದ ಐದು ಗ್ಯಾರಂಟಿಗಳು ನಡೆಯಬಾರದು. ಸರ್ಕಾರ ಅಸ್ಥಿರ ಆಗಬೇಕು ಎಂಬ ನಿಟ್ಟಿನಲ್ಲಿ ಬಿಜೆಪಿ ಕೆಲಸ ಮಾಡುತ್ತಿದೆ. ರಾಜ್ಯಪಾಲರನ್ನು ಹಿಡಿದುಕೊಂಡು ಹಿಂದಿನ ಬಾಗಿಲಿನಿಂದ ಪ್ರಹಾರ ಮಾಡುತಿದ್ದಾರೆ. ಇದರ ಹೊಡೆತ ಬೀಳುವುದಿಲ್ಲ. ಅವರಿಗೆ ತಿರುಗೇಟು ಆಗುತ್ತದೆ ಎಂದರು. ಇದನ್ನೂ ಓದಿ: ನನ್ನ ರಾಜೀನಾಮೆ ಕೇಳೋ ಅಶೋಕ್ ಮೊದಲು ವಾಸ್ತವಾಂಶ ತಿಳಿಯಲಿ: ಸಿದ್ದರಾಮಯ್ಯ

    ಪ್ರತಿಭಟನೆಯಲ್ಲಿ ಕಾರವಾರದ ಶಾಸಕ ಸತೀಶ್ ಸೈಲ್, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಿರಸಿ ಶಾಸಕ ಭೀಮಣ್ಣ ನಾಯ್ಕ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದು, ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ದೂರು ನೀಡಿದರು. ಇದನ್ನೂ ಓದಿ: ರಾಜ್ಯದಲ್ಲಿ ಏನಾದರೂ ಗಲಾಟೆಯಾದರೆ ಅದಕ್ಕೆ ರಾಜ್ಯಪಾಲರೇ ಹೊಣೆ – ಜಮೀರ್ ಅಹ್ಮದ್ ಎಚ್ಚರಿಕೆ

  • ಬಿಜೆಪಿಯಿಂದ ಕಾಂಗ್ರೆಸ್‌ಗೆ ಬರುತ್ತಿರುವ 26 ಜನರ ಅರ್ಜಿ ನನ್ನ ಬಳಿಯಿದೆ: ಆರ್.ವಿ ದೇಶಪಾಂಡೆ

    ಬಿಜೆಪಿಯಿಂದ ಕಾಂಗ್ರೆಸ್‌ಗೆ ಬರುತ್ತಿರುವ 26 ಜನರ ಅರ್ಜಿ ನನ್ನ ಬಳಿಯಿದೆ: ಆರ್.ವಿ ದೇಶಪಾಂಡೆ

    ಕಾರವಾರ: ಬಿಜೆಪಿಯಿಂದ ಕಾಂಗ್ರೆಸ್‌ಗೆ (Congress, BJP) ಬರಲು ಸಜ್ಜಾಗಿ 26 ಜನ ಅರ್ಜಿ ಹಾಕಿದ್ದಾರೆ. ಆ ಅರ್ಜಿಗಳೆಲ್ಲವೂ ನನ್ನ ಬಳಿಯಿದೆ. ಅವರೆಲ್ಲರೂ ಕಾಂಗ್ರೆಸ್‌ಗೆ ಬರೋದು ಖಚಿತ. ಸೂಕ್ತ ಸಮಯದಲ್ಲಿ ಯಾರು ಬರುತ್ತಾರೆ ಎಂಬುದು ಗೊತ್ತಾಗಲಿದೆ ಎಂದು ಮಾಜಿ ಸಚಿವ ಆರ್.ವಿ ದೇಶಪಾಂಡೆ (RV Deshpande) ನುಡಿದಿದ್ದಾರೆ.

    ಅಂಕೋಲದಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ಜಿಲ್ಲಾ ಕಾಂಗ್ರೆಸ್ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋಗಿ ಏನು ಮಾಡಬೇಕಿದೆ? ಬಿಜೆಪಿಗೆ ಸರ್ಕಾರ ನಡೆಸುವ ಶಕ್ತಿ ಇಲ್ಲ. ಅಲ್ಲಿಗೆ ಹೋಗಿ ಸರ್ಕಾರ ಮಾಡಲು ಸಾಧ್ಯವೇ? ಯಾರೂ ಹೋಗುವುದಿಲ್ಲ, ಕಾಂಗ್ರೆಸ್‌ ದಿನೇ ದಿನೇ ಬಲಿಷ್ಠವಾಗುತ್ತಿದೆ. ಅದಕ್ಕಾಗಿ ಬಿಜೆಪಿಯ ಪ್ರಮುಖ ನಾಯಕರೇ ಕಾಂಗ್ರೆಸ್‌ನತ್ತ ಮುಖ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

    ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಮಾತನಾಡಿ, ಅದು ಮುಖ್ಯಮಂತ್ರಿಗೆ ಬಿಟ್ಟ ವಿಚಾರ. ನಾನು ಶಾಸಕನಾಗಿ ಇದ್ದರೆ ತಪ್ಪಿಲ್ಲ, ಇಷ್ಟು ವರ್ಷ ಸಚಿವನಾಗಿ ಕಾರ್ಯ ನಿರ್ವಹಿಸಿದ್ದೇನೆ, ನಾನು ಸುಖವಾಗಿದ್ದೇನೆ. ನಾನು ಲೋಕಸಭೆಗೆ ಸ್ಪರ್ಧೆ ಸಹ ಮಾಡುವುದಿಲ್ಲ. ನನ್ನ ಮಕ್ಕಳು ಸಹ ಸ್ಪರ್ಧೆ ಮಾಡುವುದಿಲ್ಲ. ಸದ್ಯ ನಾನು ವಿಶ್ರಾಂತಿ ಕಣದಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]