Tag: Rustum

  • ಮೈಸೂರಿನಲ್ಲಿ ‘ರುಸ್ತುಂ’ ಚಿತ್ರ ವೀಕ್ಷಿಸಿದ ಶಿವಣ್ಣ

    ಮೈಸೂರಿನಲ್ಲಿ ‘ರುಸ್ತುಂ’ ಚಿತ್ರ ವೀಕ್ಷಿಸಿದ ಶಿವಣ್ಣ

    ಮೈಸೂರು: ಅರಮನೆ ನಗರಿ ಮೈಸೂರಿನ ಶಾಂತಲಾ ಚಿತ್ರಮಂದಿರದಲ್ಲಿ ನಟ ಶಿವರಾಜ್ ಕುಮಾರ್ ಅವರು ತಾವು ಅಭಿನಯಸಿದ್ದ ‘ರುಸ್ತುಂ’ ಚಿತ್ರವನ್ನು ಪತ್ನಿ ಗೀತಾ ಅವರೊಂದಿಗೆ ವೀಕ್ಷಿಸಿದ್ದಾರೆ.

    ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿ ಇದ್ದ ಕಾರಣ ಶುಕ್ರವಾರ ಸಿನಿಮಾ ತೆರೆ ಕಂಡರೂ ಶಿವರಾಜ್ ಕುಮಾರ್ ಅವರಿಗೆ ಚಿತ್ರವನ್ನು ವೀಕ್ಷಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಶನಿವಾರ ಮೈಸೂರಿನ ಶಾಂತಲಾ ಚಿತ್ರಮಂದಿರದಲ್ಲಿ ಪತ್ನಿ ಗೀತಾ ಜೊತೆ ಶಿವಣ್ಣ ಸಿನಿಮಾ ವೀಕ್ಷಿಸಿದರು.

    ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಶಿವರಾಜ್ ಕುಮಾರ್, ‘ರುಸ್ತುಂ’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ಸ್ಕ್ರೀನ್ ಪ್ಲೇ ವೇಗವಾಗಿ ಇರುವುದು ಜನರಿಗೆ ಇಷ್ಟವಾಗಿದೆ. ಇದು ರವಿವರ್ಮಾ ಅವರ ಮೊದಲ ನಿರ್ದೇಶನದ ಚಿತ್ರ ಎಂದು ಅನ್ನಿಸುತ್ತಿಲ್ಲ. ಅಷ್ಟು ಚೆನ್ನಾಗಿ ಚಿತ್ರದ ವೇಗವಿದೆ ಎಂದರು.

    ಇದೇ ವೇಳೆ ತಮ್ಮ ಚಿತ್ರಗಳು ಪರಭಾಷೆಗೆ ರಿಮೇಕ್ ಆಗುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಶಿವರಾಜ್ ಕುಮಾರ್, ನನ್ನ ಹಲವು ಚಿತ್ರಗಳು ಪರಭಾಷೆಗೆ ರಿಮೇಕ್ ಆಗಿವೆ. ಈಗ ‘ರುಸ್ತುಂ’ ಚಿತ್ರವೂ ರಿಮೇಕ್ ಆಗುತ್ತದೆ. ಇದು ಸಂತೋಷ ತರುವ ವಿಚಾರವಾಗಿದೆ. ಅಭಿಮಾನಿಗಳ ಜೋಶ್‍ನಿಂದ ನನಗೆ ಸದಾ ಎನರ್ಜಿ ಬರುತ್ತಿದೆ. ಅದೇ ಶಕ್ತಿ ಚಿತ್ರದ ಪಾತ್ರದಲ್ಲಿ ಕಾಣುತ್ತದೆ ಎಂದು ಹೇಳಿದ್ದಾರೆ.

  • ಸಮಂತಾ ಸ್ಥಾನ ಆಕ್ರಮಿಸಿಕೊಂಡರಾ ಕನ್ನಡತಿ ಶ್ರದ್ಧಾ?

    ಸಮಂತಾ ಸ್ಥಾನ ಆಕ್ರಮಿಸಿಕೊಂಡರಾ ಕನ್ನಡತಿ ಶ್ರದ್ಧಾ?

    ನ್ನಡ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದುಕೊಂಡ ನಟಿಯರು ಪರಭಾಷೆಗಳಿಗೆ ಹೋದ ಸುದ್ದಿಗಳು ಆಗಾಗ ಹೊರ ಬೀಳುತ್ತಲೇ ಇರುತ್ತವೆ. ಆದರೆ ಹಾಗೆ ಬೇರೆ ಭಾಷೆಗಳಿಗೆ ಹೋಗಿ ನೆಲೆ ನಿಂತು ಆ ಮೂಲಕವೇ ಸುದ್ದಿ ಮಾಡುವವರು ಕೊಂಚ ವಿರಳ. ಇದೀಗ ಕನ್ನಡದಲ್ಲಿ ಪ್ರತಿಭಾವಂತ ನಟಿಯಾಗಿ ಹೆಸರು ಮಾಡಿರೋ ಶ್ರದ್ಧಾ ಶ್ರೀನಾಥ್ ಆ ವಿರಳರ ಸಾಲಿಗೆ ಸೇರಿಕೊಂಡಂಥಾ ಸುದ್ದಿಯೊಂದು ಹರಿದಾಡಲು ಶುರುವಿಟ್ಟಿದೆ!

    ಶ್ರದ್ಧಾ ಶ್ರೀನಾಥ್ ಇದೀಗ ತೆಲುಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಹೊರ ಹೊಮ್ಮಿದ್ದಾರೆ. ಶ್ರದ್ಧಾ ನಾಯಕಿಯಾಗಿ ಅಭಿನಯಿಸಿದ್ದ ಜೆರ್ಸಿ ಬಿಡುಗಡೆಗೊಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದರಲ್ಲಿನ ಪಾತ್ರ, ನಟನೆ ಕಂಡು ತೆಲುಗು ಪ್ರೇಕ್ಷಕರೂ ಶ್ರದ್ಧಾ ಅವರನ್ನು ಮೆಚ್ಚಿ ಒಪ್ಪಿಕೊಂಡಿದ್ದಾರೆ.

    ಹೀಗೆ ಜೆರ್ಸಿ ಚಿತ್ರ ಗೆಲುವಿನತ್ತ ನಾಗಾಲೋಟ ಆರಂಭಿಸಿರುವ ಘಳಿಗೆಯಲ್ಲಿಯೇ ಶ್ರದ್ಧಾ ತೆಲುಗಿನಲ್ಲಿ ಮತ್ತಷ್ಟು ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಈಗ ಹರಿದಾಡುತ್ತಿರೋ ಸುದ್ದಿಯೊಂದನ್ನು ಆಧರಿಸಿ ಹೇಳೋದಾದರೆ ಶ್ರದ್ಧಾ ವಿಶಾಲ್ ನಟನೆಯ ಚಿತ್ರವೊಂದಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ವಿಶಾಲ್ ಈ ಹಿಂದೆ ಅಭಿಮನ್ಯುಡು ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. ಅಭಿಮನ್ಯುಡು ಎಂಬ ಆ ಚಿತ್ರ ಹಿಟ್ ಆಗಿತ್ತು.

    ಇದೀಗ ಆ ಚಿತ್ರದ ಎರಡನೇ ಭಾಗಕ್ಕೆ ತಯಾರಿ ಆರಂಭವಾಗಿದೆ. ಮೊದಲ ಭಾಗದಲ್ಲಿ ವಿಶಾಲ್ ಗೆ ಜೋಡಿಯಾಗಿ ಸಮಂತಾ ನಟಿಸಿದ್ದರು. ಆದರೆ ಈಗ ಶ್ರದ್ಧಾ ಸಮಂತಾ ಜಾಗವನ್ನು ಆವರಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಶ್ರದ್ಧಾ ಸಮಂತಾ ವಿರುದ್ಧ ಅದೇನೋ ಮಾತಾಡಿದ್ದಾರೆಂದು ಅಭಿಮಾನಿಗಳು ಕೆಂಡ ಕಾರಿದ್ದರು. ಈಗ ನೋಡಿದರೆ ಸಮಂತಾ ಸ್ಥಾನವನ್ನೇ ಶ್ರದ್ಧಾ ಆವರಿಸಿಕೊಂಡಿದ್ದಾರೆ.

    ಒಟ್ಟಾರೆಯಾಗಿ ಶ್ರದ್ಧಾ ಕನ್ನಡ ಮತ್ತು ತೆಲುಗು ಚಿತ್ರರಂಗಗಳಲ್ಲಿ ಏಕಕಾಲದಲ್ಲಿಯೇ ಬ್ಯುಸಿಯಾಗಿದ್ದಾರೆ. ಅವರು ಶಿವರಾಜ್ ಕುಮಾರ್ ಅಭಿನಯದ ರುಸ್ತುಂ ಚಿತ್ರದಲ್ಲಿಯೂ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿದೆ. ಅದಾಗಲೇ ಕನ್ನಡದಲ್ಲಿ ಮತ್ತೊಂದಷ್ಟು ಅವಕಾಶಗಳನ್ನು ಪಡೆದುಕೊಂಡಿರೋ ಶ್ರದ್ಧಾ ತೆಲುಗಿನಲ್ಲಿಯೂ ಬಿಡುವಿಲ್ಲದಂತಾಗಿದ್ದಾರೆ.

  • ಹ್ಯಾಟ್ರಿಕ್ ಹೀರೋ ಜತೆ ಸೂಪರ್ ಸ್ಟಾರ್ ನಾಗಾರ್ಜುನ್ ನಟಿಸಲ್ವಂತೆ..!

    ಹ್ಯಾಟ್ರಿಕ್ ಹೀರೋ ಜತೆ ಸೂಪರ್ ಸ್ಟಾರ್ ನಾಗಾರ್ಜುನ್ ನಟಿಸಲ್ವಂತೆ..!

    ಬೆಂಗಳೂರು: ಸೂರಿ ನಿರ್ದೇಶನದ ಟಗರು ಚಿತ್ರದ ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತೆ ಖಡಕ್ ಪೊಲೀಸ್ ಅಧಿಕಾರಿಯಾಗಿ ರುಸ್ತುಂ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವುದು ಗೊತ್ತಿರದ ವಿಚಾರವೇನಲ್ಲ. ಟಗರು ಚಿತ್ರದಲ್ಲಿ ಶಿವಣ್ಣನಿಗೆ ಡಾಲಿ ಧನಂಜಯ್, ಚಿಟ್ಟೆ ವಸಿಷ್ಠ ಸಿಂಹ ವಿಲನ್ ಗಳಾಗಿ ಠಕ್ಕರ್ ಕೊಟ್ಟಿದ್ರು. ರುಸ್ತುಂ ಚಿತ್ರದಲ್ಲಿಯೂ ವಿಲನ್ ಗಳದ್ದೇ ಹಾವಳಿಯಿದ್ದು ಶಿವಣ್ಣನಿಗೆ ಎದುರಾಳಿಯಾಗಿ ಬಾಲಿವುಡ್ ನಟ ವಿವೇಕ್ ಒಬೇರಾಯ್ ನಟಿಸುತ್ತಿದ್ದಾರೆ. ಎಲ್ಲ ಅಂದುಕೊಂಡಂತಾಗಿದ್ದರೆ ತೆಲುಗಿನ ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ್ ಹಾಗೂ ಶಿವಣ್ಣನ ನಡುವಿನ ಕಾಳಗವನ್ನೇ ನೋಡಬಹುದಾಗಿತ್ತು. ಆದ್ರೆ ಅಕ್ಕಿನೇನಿ ನಾಗಾರ್ಜುನ್ ಶಿವರಾಜ್ ಕುಮಾರ್ ಜತೆ ನಟಿಸೋದಿಲ್ಲ ಅಂತಾ ಹೇಳಿದ್ದಾರಂತೆ..!

    ಅಕ್ಕಿನೇನಿ ರಿಜೆಕ್ಟ್ ಮಾಡೋದಕ್ಕೆ ಕಾರಣವೇನು?
    ಶಿವಣ್ಣ ಮೊದಲೇ ಮಾಸ್ ಹೀರೋ. ಅಲ್ಲದೇ ರುಸ್ತುಂ ಹೇಳಿ ಕೇಳಿ ಮಾಸ್ ಎಂಟರ್ ಟೈನಿಂಗ್ ಸಿನಿಮಾ. ಆಕ್ಷನ್ ಓರಿಯೆಂಟೆಡ್ ಸಿನಿಮಾ ಕೂಡ. ಶಿವಣ್ಣ ಖಡಕ್ಕಾಗಿ ತಮ್ಮ ಖದರ್ ತೋರಿಸ್ತಾರೆ ಅನ್ನೋದು ಎಲ್ಲರಿಗೂ ತಿಳಿದ ವಿಚಾರ. ಹಾಗಿರೋವಾಗ ಅವರ ಎದುರಿಗೆ ತೊಡೆ ತಟ್ಟಿ ನಿಲ್ಲೋ ವಿಲನ್ ಅವರಿಗೆ ಸರಿ ಸಮನಾಗಿ ಇರಬೇಕಲ್ವಾ. ಯಾರೋ ನಟಿಸಿದ್ರೆ ಆ ಪಾತ್ರಕ್ಕೆ ತೂಕ ಇರೋದಿಲ್ಲ ಅಂದರಂತೆ.

    ನಿರ್ದೇಶಕ ರವಿ ವರ್ಮ ಏನ್ ಹೇಳ್ತಾರೆ..?
    ಈ ಮೊದಲು ರುಸ್ತುಂ ನಿರ್ದೇಶಕ ರವಿ ವರ್ಮ ಶಿವಣ್ಣನಿಗೆ ಎದುರಾಳಿಯಾಗಿ ನಾಗಾರ್ಜುನ ಮ್ಯಾಚ್ ಆಗ್ತಾರೆ ಅಂತ ಯೋಚಿಸಿ ಅವರನ್ನು ಅಪ್ರೋಚ್ ಮಾಡಿದ್ದಂತೆ. ಪ್ರಾರಂಭದಲ್ಲಿ ಖಂಡಿತಾ ಮಾಡ್ತೀನಿ ಅಂತ ನಾಗಾರ್ಜುನ್, ಆಮೇಲೆ ಪಾತ್ರದ ಆಳ ತಿಳಿದ ಮೇಲೆ ನಟಿಸಲು ನೋ ಎಂದಿದ್ದಾರಂತೆ. ಆಮೇಲೆ ಅನಿಲ್ ಕಪೂರ್ ಸೆಲೆಕ್ಟ್ ಮಾಡಿದ್ರೂ ಕಾರಣಾಂತರಗಳಿಂದ ಅವರೂ ರಿಜೆಕ್ಟ್ ಆಗಿ ಅಂತಿಮವಾಗಿ ವಿವೇಕ್ ಒಬೇರಾಯ್ ಅವರನ್ನು ಫೈನಲ್ ಮಾಡಲಾಗಿದೆಯಂತೆ.

  • ‘ರುಸ್ತುಂ’ ಚಿತ್ರದ ಫಸ್ಟ್ ಲುಕ್ ರಿಲೀಸ್

    ‘ರುಸ್ತುಂ’ ಚಿತ್ರದ ಫಸ್ಟ್ ಲುಕ್ ರಿಲೀಸ್

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ರುಸ್ತುಂ’ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ರಾಜ್‍ಕುಮಾರ್ ಜಯಂತಿಯ ಅಂಗವಾಗಿ ಶಿವಣ್ಣ ತಮ್ಮ ರುಸ್ತುಂ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.

    ಸಾಹಸ ನಿರ್ದೆಶಕ ರವಿವರ್ಮ ನಿರ್ದೆಶಿಸಿದ ಈ ಚಿತ್ರದಲ್ಲಿ ಶಿವರಾಜ್‍ಕುಮಾರ್ ಮತ್ತೆ ಖಾಕಿ ಧರಿಸಲಿದ್ದು, ಮೀಸೆ ಬಿಟ್ಟ ರೂಪದಲ್ಲಿದ್ದಾರೆ. ಇದೇ ಮೊದಲ ಬಾರಿಗೆ ಶಿವರಾಜ್ ಗೆ ಜೋಡಿಯಾಗಿ ಶ್ರದ್ಧಾ ಶ್ರೀನಾಥ್ ಹಾಗೂ ಮಯೂರಿ ಅಭಿನಯಿಸುತ್ತಿದ್ದಾರೆ.

    `ರುಸ್ತುಂ’ಗೆ ಖಳ ನಟರಾಗಿ ಬೇರೆ ಭಾಷೆಯಿಂದ ಖ್ಯಾತ ಕಲಾವಿದರನ್ನು ಕರೆತರುವ ಬಗ್ಗೆಯೂ ಚಿತ್ರತಂಡ ಯೋಚಿಸುತ್ತಿದೆ. ಈಗಾಗಲೇ `ರುಸ್ತುಂ’ನಲ್ಲಿ ಬಣ್ಣ ಹಚ್ಚುವಂತೆ ಅನಿಲ್ ಕುಮಾರ್, ಮನೋಜ್ ಬಾಜಪೇಯಿ, ಸಂಜಯ್ ದತ್, ಸುನೀಲ್ ಶೆಟ್ಟಿ ಅವರನ್ನು ಒಪ್ಪಿಸಲು ನಿರ್ದೇಶಕ ರವಿ ವರ್ಮಾ ಮತ್ತು ಚಿತ್ರತಂಡ ಪ್ರಯತ್ನಿಸುತ್ತಿದೆ ಎಂಬ ಮಾತು ಕೂಡ ಕೇಳಿಬಂದಿತ್ತು.

    ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನ ಮಾಡಲಿರುವ ರುಸ್ತಂ ಚಿತ್ರದಲ್ಲಿ ನಟಿ ಮಯೂರಿ ನಟಿಸಲಿದ್ದಾರೆ. ಈಗಾಗಲೇ ಶ್ರದ್ಧಾ ಶ್ರೀನಾಥ್ ಆಯ್ಕೆಯಾಗಿದ್ದು, ಮುಖ್ಯ ಪಾತ್ರವೊಂದಕ್ಕೆ ಮಯೂರಿ ಕೂಡ ರುಸ್ತುಂ ಸೇರಿಕೊಂಡಿದ್ದಾರೆ.

    ಈ ಬಗ್ಗೆ ಮಾತನಾಡಿದ ಮಯೂರಿ, ಇದೇ ಮೊದಲ ಬಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಯಲ್ಲಿ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದೇನೆ. ನನಗೆ ಈ ಸಿನಿಮಾ ಮೈಲಿಗಲ್ಲಾಗುವುದು ಎಂದು ಸಂತಸ ಹಂಚಿಕೊಂಡಿದ್ದಾರೆ.

  • ತೆರೆಮರೆಯಲ್ಲಿ ನಡೆಯುತ್ತಿದೆ ‘ರುಸ್ತುಂ’ ತಯಾರಿ

    ತೆರೆಮರೆಯಲ್ಲಿ ನಡೆಯುತ್ತಿದೆ ‘ರುಸ್ತುಂ’ ತಯಾರಿ

    ಬೆಂಗಳೂರು: ಟಗರು ಸಿನಿಮಾದ ಸೂಪರ್ ಹಿಟ್ ಸಕ್ಸಸ್ ಬಳಿಕ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ‘ಕವಚ’ ಸಿನಿಮಾದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ಶಿವಣ್ಣ ಅಭಿನಯದ ಮತ್ತೊಂದು ಚಿತ್ರಕ್ಕೆ ತೆರೆಮರೆಯಲ್ಲಿ ಜೋರಾದ ತಯಾರಿ ನಡೆಯುತ್ತಿದೆ ಅದರ ಹೆಸರು ‘ರುಸ್ತುಂ’. ಹೌದು, ಶಿವರಾಜಕುಮಾರ್ ಅಭಿನಯದ ಮತ್ತೊಂದು ನಿರೀಕ್ಷಿತ ಚಿತ್ರ ‘ರುಸ್ತುಂ’ ಪ್ರಿ-ಪ್ರೋಡಕ್ಷನ್ ಕೆಲಸಗಳು ಜೋರಾಗಿ ನಡೆಯುತ್ತಿದೆ. ಜಯಣ್ಣ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ನಿರ್ಮಾಪಕರಾಗಿ ಜಯಣ್ಣ ಮತ್ತು ಭೋಗೇಂದ್ರ ಬಂಡವಾಳ ಹೂಡುತ್ತಿದ್ದಾರೆ.

    ಇಲ್ಲಿಯವರೆಗೆ ಕನ್ನಡ ಚಿತ್ರರಂಗದಲ್ಲಿ ಸ್ಟಂಟ್ ಮಾಸ್ಟರ್ ಆಗಿ ಗುರುತಿಸಿಕೊಂಡಿದ್ದ ರವಿವರ್ಮಾ ಈ ಸಿನಿಮಾಕ್ಕೆ ಆ್ಯಕ್ಷನ್-ಕಟ್ ಹೇಳುವ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಶಿವಣ್ಣ ಅಭಿನಯದ ರುಸ್ತುಂ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರತಂಡದ ಮೂಲಗಳ ಪ್ರಕಾರ ಈಗಾಗಲೇ ‘ರುಸ್ತುಂ’ನ ಬಹುತೇಕ ಸ್ಕ್ರಿಪ್ಟ್ ಕೆಲಸಗಳು ಪೂರ್ಣಗೊಂಡಿದ್ದು, ಚಿತ್ರೀಕರಣಕ್ಕೆ ಚಾಲನೆ ನೀಡುವುದೊಂದೇ ಬಾಕಿಯಿದೆ. ಮುಂದಿನ ಏಪ್ರಿಲ್ 24ರಂದು ವರನಟ ಡಾ. ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನದಂದು ಚಿತ್ರೀಕರಣಕ್ಕೆ ಚಾಲನೆ ನೀಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.

    ಇನ್ನು ‘ರುಸ್ತುಂ’ ಸಿನಿಮಾದಲ್ಲಿ ಯೂ ಟರ್ನ್ ನಾಯಕಿ ಶ್ರದ್ಧಾ ಶ್ರೀನಾಥ್ ಶಿವಣ್ಣಗೆ ಹೀರೋಯಿನ್ ಆಗಿ ನಟಿಸಲಿದ್ದಾರೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ‘ರುಸ್ತುಂ’ ಸಿನಿಮಾ ಕಥೆ ಕೇಳಿ, ಶ್ರದ್ಧಾ ಕೂಡ ಶಿವಣ್ಣ ಜೊತೆ ಅಭಿನಯಿಸಲು ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಸಿಂಪಲ್ ಸುನಿ ನಿರ್ದೇಶನದ ‘ಆಪರೇಷನ್ ಅಲಮೇಲಮ್ಮ’ ನಂತರ ಶ್ರದ್ಧಾ ಶ್ರೀನಾಥ್ ಯಾವುದೇ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಸದ್ಯಕ್ಕೆ ತಮಿಳು ಮತ್ತು ತೆಲುಗಿನ ಕೆಲ ಸಿನಿಮಾಗಳಲ್ಲಿ ನಟಿಸುತ್ತಿರುವ ಶ್ರದ್ಧಾಗೆ ಕನ್ನಡದಲ್ಲಿ ಬೇರೆ ಯಾವುದೇ ಸ್ಟಾರ್ ಸಿನಿಮಾಗಳಿಲ್ಲ. ಹಾಗಾಗಿ ಕನ್ನಡದಲ್ಲಿ ದೊಡ್ಡ ಸಿನಿಮಾಕ್ಕೆ ಎದುರು ನೋಡುತ್ತಿರುವ ಶ್ರದ್ಧಾ ಈ ಸಿನಿಮಾ ಒಪ್ಪಿಕೊಂಡು ಶಿವಣ್ಣ ಅವರಿಗೆ ಸಿನಿಮಾದಲ್ಲಿ ಹೀರೋಯಿನ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂಬುದು ಸಿನಿಮಾ ಮಂದಿಯ ಲೆಕ್ಕಾಚಾರ. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಿರುವ ಶ್ರದ್ಧಾ ಒಂದಷ್ಟು ಕುತೂಹಲವನ್ನು ಹಾಗೆ ಉಳಿಸಿಕೊಂಡಿದ್ದಾರೆ.

    ಇವೆಲ್ಲದರ ಜೊತೆಗೆ ‘ರುಸ್ತುಂ’ಗೆ ಖಳ ನಟರಾಗಿ ಬೇರೆ ಭಾಷೆಯಿಂದ ಖ್ಯಾತ ಕಲಾವಿದರನ್ನು ಕರೆತರುವ ಬಗ್ಗೆಯೂ ಚಿತ್ರತಂಡ ಯೋಚಿಸುತ್ತಿದೆ. ಈಗಾಗಲೇ ‘ರುಸ್ತುಂ’ನಲ್ಲಿ ಬಣ್ಣ ಹಚ್ಚುವಂತೆ ಅನಿಲ್ ಕುಮಾರ್, ಮನೋಜ್ ಬಾಜಪೇಯಿ, ಸಂಜಯ್ ದತ್, ಸುನೀಲ್ ಶೆಟ್ಟಿ ಅವರನ್ನು ಒಪ್ಪಿಸಲು ನಿರ್ದೇಶಕ ರವಿ ವರ್ಮಾ ಮತ್ತು ಚಿತ್ರತಂಡ ಪ್ರಯತ್ನಿಸುತ್ತಿದೆ ಎಂಬ ಮಾತು ಕೂಡ ಕೇಳಿಬರುತ್ತಿದೆ.