Tag: Russian Scientist

  • ಚಂದ್ರನೆಡೆಗೆ ರಷ್ಯಾ ಕಳುಹಿಸಿದ್ದ ಲೂನಾ-25 ವಿಫಲ; ಸುದ್ದಿ ಕೇಳಿ ರಷ್ಯಾ ವಿಜ್ಞಾನಿ ಆಸ್ಪತ್ರೆಗೆ ದಾಖಲು

    ಚಂದ್ರನೆಡೆಗೆ ರಷ್ಯಾ ಕಳುಹಿಸಿದ್ದ ಲೂನಾ-25 ವಿಫಲ; ಸುದ್ದಿ ಕೇಳಿ ರಷ್ಯಾ ವಿಜ್ಞಾನಿ ಆಸ್ಪತ್ರೆಗೆ ದಾಖಲು

    ಮಾಸ್ಕೋ: ಚಂದ್ರನ (Moon) ಅಂಗಳಕ್ಕೆ ರಷ್ಯಾ (Russia) ಕಳುಹಿಸಿದ್ದ ಲೂನಾ-25 (Luna-25) ಬಾಹ್ಯಾಕಾಶ ನೌಕೆಯು ಚಂದ್ರ ಮೇಲ್ಮೈಗೆ ಅಪ್ಪಳಿಸಿ ಪತನಗೊಂಡಿತು. ಈ ಕಾರ್ಯಾಚರಣೆಯಲ್ಲಿ ಕೆಲಸ ಮಾಡಿದ್ದ ಪ್ರಮುಖ ಭೌತಶಾಸ್ತ್ರಜ್ಞ ಮತ್ತು ಖಗೋಳಶಾಸ್ತ್ರರೊಬ್ಬರು ಮಿಷನ್‌ ವಿಫಲವಾದ ಸುದ್ದಿ ಕೇಳಿ ಆಸ್ಪತ್ರೆ ಸೇರಿದ್ದಾರೆ.

    ಲೂನಾ-25 ಪ್ರೋಬ್, ಲ್ಯಾಂಡಿಂಗ್ ಪೂರ್ವ ಕುಶಲತೆಯ ಸಮಯದಲ್ಲಿ ಚಂದ್ರನ ಮೇಲ್ಮೈಯಲ್ಲಿ ಅಪ್ಪಳಿಸಿದ್ದರಿಂದ ರಷ್ಯಾದ ಚಂದ್ರಯಾನದ ಭರವಸೆ ಭಗ್ನಗೊಂಡಿತು. ಈ ಕಾರ್ಯಾಚರಣೆಯಲ್ಲಿ ಕೆಲಸ ಮಾಡಿದ್ದ ವಿಜ್ಞಾನಿ ಮಿಖಾಯಿಲ್ ಮಾರೊವ್ (90) ಮಿಷನ್ ವಿಫಲವಾದ ಸುದ್ದಿ ಕೇಳಿ ಅನಾರೋಗ್ಯಕ್ಕೀಡಾಗಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಚಂದ್ರನಿಗೆ ಮುತ್ತಿಕ್ಕುವ ರಷ್ಯಾದ ಕನಸು ಭಗ್ನ!

    ನಾನು ನಿಗಾ ಘಟಕದಲ್ಲಿದ್ದೇನೆ. ಹೀಗಾದಾಗ ಚಿಂತಿಸದಿರಲು ಹೇಗೆ ಸಾಧ್ಯ (ಲೂನಾ-25 ಮಿಷನ್‌ ವಿಫಲ)? ಇದು ಜೀವನದ ವಿಷಯವೂ ಹೌದು. ತುಂಬಾ ಕಷ್ಟಕರವಾಗಿದೆ. ಚಂದ್ರನ ಮೇಲೆ ನೌಕೆಯನ್ನು ಇಳಿಸಲು ಸಾಧ್ಯವಾಗದಿರುವುದು ಬೇಸರ ತರಿಸಿದೆ ಎಂದು ವಿಜ್ಞಾನಿ ಮಾರೊವ್ ಮಾಸ್ಕೋದ ಕ್ರೆಮ್ಲಿನ್‌ಗೆ ಸಮೀಪದಲ್ಲಿರುವ ಸೆಂಟ್ರಲ್ ಕ್ಲಿನಿಕಲ್ ಆಸ್ಪತ್ರೆಯಲ್ಲಿ ಮಾತನಾಡಿದ್ದಾರೆ.

    ವಿಜ್ಞಾನಿ ಮಾರೊವ್‌, ಸೋವಿಯತ್ ಒಕ್ಕೂಟದ ಹಿಂದಿನ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡಿದ್ದರು. ಲೂನಾ-25 ಮಿಷನ್ ತನ್ನ ಬದುಕಿನ ಕೆಲಸದ ಪರಾಕಾಷ್ಠೆ ಎಂದು ಹೇಳಿಕೊಂಡಿದ್ದರು. ಇದನ್ನೂ ಓದಿ: ಚಂದ್ರನ ಪ್ರೀ ಲ್ಯಾಂಡಿಂಗ್ ಕಕ್ಷೆ ಪ್ರವೇಶಿಸುವಲ್ಲಿ ರಷ್ಯಾದ ಲೂನಾ-25 ಲ್ಯಾಂಡರ್ ವಿಫಲ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊವೀಡ್ ಲಸಿಕೆ ಸಂಶೋಧಿಸಿದ್ದ ವಿಜ್ಞಾನಿಯ ಹತ್ಯೆ

    ಕೊವೀಡ್ ಲಸಿಕೆ ಸಂಶೋಧಿಸಿದ್ದ ವಿಜ್ಞಾನಿಯ ಹತ್ಯೆ

    ಮಾಸ್ಕೋ: ರಷ್ಯಾದ ಕೋವಿಡ್-19 ಲಸಿಕೆ (Covid Vaccine) ಸ್ಪುಟ್ನಿಕ್ ವಿ ಅಭಿವೃದ್ಧಿಪಡಿಸಲು ಸಹಕರಿಸಿದ ವಿಜ್ಞಾನಿ (Russian Scientist) ಆಂಡ್ರೆ ಬೊಟಿಕೋವ್ ಅವರನ್ನ ಕತ್ತು ಹಿಸುಕಿ ಹತ್ಯೆ ಮಾಡಲಾಗಿದೆ. ಮಾಸ್ಕೋದ ಅಪಾರ್ಟ್ಮೆಂಟ್‌ನಲ್ಲಿ ಅವರನ್ನ ಬೆಲ್ಟ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ರಷ್ಯಾದ ಮಾಧ್ಯಮ ವರದಿ ಮಾಡಿದೆ.

    ಬೊಟಿಕೋವ್ (47) ಗಮಾಲೆಯಾ ರಾಷ್ಟ್ರೀಯ ಪರಿಸರ ವಿಜ್ಞಾನ ಮತ್ತು ಗಣಿತ ಸಂಶೋಧನಾ ಕೇಂದ್ರದಲ್ಲಿ ಹಿರಿಯ ಸಂಶೋಧಕರಾಗಿ ಕೆಲಸ ಮಾಡುತ್ತಿದ್ದರು. ಮೃತದೇಹ ಪತ್ತೆಯಾದ ಕೆಲವೇ ಗಂಟೆಗಳಲ್ಲಿ ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ ಎಂದು ಫೆಡರಲ್ ತನಿಖಾ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಉಕ್ರೇನ್ ಸಂಘರ್ಷದ ಬೆಂಕಿಗೆ ತುಪ್ಪ ಸುರಿದವರು ಪಾಶ್ಚಿಮಾತ್ಯರು – ಪರೋಕ್ಷವಾಗಿ ಅಮೆರಿಕ ದೂಷಿಸಿದ ಪುಟಿನ್

    Vladimir Putin

    ಕೊಲೆಯು ಕೌಟುಂಬಿಕ ಸಂಘರ್ಷದ ಕಾರಣಗಳಿಂದ ನಡೆದಿದೆ ಎನ್ನಲಾಗಿದ್ದು, 29 ವರ್ಷದ ವ್ಯಕ್ತಿಯು ಬೊಟಿಕೋವ್ ಕತ್ತಿಗೆ ಬೆಲ್ಟ್‌ನಿಂದ ಬಿಗಿದು ಹತ್ಯೆ ಮಾಡಿದ್ದಾನೆ. ವಿಚಾರಣೆ ವೇಳೆ ಆರೋಪಿಯೇ ಸ್ವತಃ ಇದನ್ನ ಒಪ್ಪಿಕೊಂಡಿದ್ದಾನೆ. ಆರೋಪಿ ಈ ಹಿಂದೆಯೂ ಹಲವು ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಇದನ್ನೂ ಓದಿ: ಶಾಲಾ ಕೊಠಡಿಯಲ್ಲೇ ಶಿಕ್ಷಕಿ ಜೊತೆ ಪ್ರಿನ್ಸಿಪಾಲ್ ರೋಮ್ಯಾನ್ಸ್ -ಗ್ರಾಮಸ್ಥರು ಆಕ್ರೋಶ

    2020 ರಲ್ಲಿ ಸ್ಪುಟ್ನಿಕ್-ವಿ ಲಸಿಕೆಯನ್ನು ಅಭಿವೃದ್ಧಿಪಡಿಸಿದ 18 ವಿಜ್ಞಾನಿಗಳಲ್ಲಿ ಬೊಟಿಕೋವ್ ಒಬ್ಬರು. 2021 ರಲ್ಲಿ ಕೋವಿಡ್ ಲಸಿಕೆಯಲ್ಲಿ ಮಾಡಿದ ಕೆಲಸಕ್ಕಾಗಿ ಅವರಿಗೆ ಆರ್ಡರ್ ಆಫ್ ಮೆರಿಟ್ ಫಾರ್ ಫಾದರ್‌ಲ್ಯಾಂಡ್ ಪ್ರಶಸ್ತಿಯನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ನೀಡಿ ಗೌರವಿಸಿದ್ದರು.