Tag: russian protesters

  • ಯುದ್ಧ ವಿರೋಧಿ ರಷ್ಯನ್ನರ ಬಂಧನ- ಪುಟಿನ್‌ ರಷ್ಯಾದವನಲ್ಲ ಎಂದ ನಾವೆಲ್ನಿ

    ಯುದ್ಧ ವಿರೋಧಿ ರಷ್ಯನ್ನರ ಬಂಧನ- ಪುಟಿನ್‌ ರಷ್ಯಾದವನಲ್ಲ ಎಂದ ನಾವೆಲ್ನಿ

    ಮಾಸ್ಕೋ: ಉಕ್ರೇನ್‌ ಮೇಲೆ ತನ್ನ ದೇಶ ಸಾರಿರುವ ಯುದ್ಧವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರಷ್ಯನ್ನರನ್ನು ಸರ್ಕಾರ ಬಂಧಿಸಿದೆ.

    ಉಕ್ರೇನ್‌ ವಿರುದ್ಧ ಮಿಲಿಟರಿ ಕಾರ್ಯಾಚರಣೆಗೆ ಕರೆ ನೀಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ವಿರುದ್ಧ ನೂರಾರು ಸಂಖ್ಯೆಯಲ್ಲಿ ರಷ್ಯನ್ನರು ಮಾಸ್ಕೋ ಮತ್ತು ಸಂತ ಪೀಟರ್ಸ್‌ಬರ್ಗ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನಾನು ಮತ್ತೆ ಅಧ್ಯಕ್ಷನಾಗಿದ್ದರೆ ರಷ್ಯಾ-ಉಕ್ರೇನ್‌ ಯುದ್ಧ ನಡೆಯುತ್ತಿರಲಿಲ್ಲ: ಟ್ರಂಪ್‌

    ಜೈಲಿನಲ್ಲಿರುವ ಕ್ರೆಮ್ಲಿನ್ ವಿಮರ್ಶಕ ಹಾಗೂ ವಿಪಕ್ಷ ನಾಯಕ ಅಲೆಕ್ಸಿ ನಾವೆಲ್ನಿ ರಷ್ಯಾದಲ್ಲಿ ಯುದ್ಧ ವಿರೋಧಿ ಪ್ರತಿಭಟನೆಗಳಿಗೆ ಕರೆ ನೀಡಿದ್ದಾರೆ. ಪುಟಿನ್ ಅವರನ್ನು ʼನಿಸ್ಸಂಶಯವಾಗಿ ಹುಚ್ಚು ತ್ಸಾರ್ʼ ಎಂದು ಕರೆದಿರುವ ನಾವೆಲ್ನಿ, ರಷ್ಯನ್ನರು ಯುದ್ಧವನ್ನು ಬೆಂಬಲಿಸುವುದಿಲ್ಲ ಎಂದು ಜಗತ್ತಿಗೆ ಹೇಳಬೇಕು ಎಂದು ಕರೆ ನೀಡಿದ್ದಾರೆ.

    ರಷ್ಯಾದ ಪಡೆಗಳು ಉಕ್ರೇನ್ ಮೇಲೆ ತಮ್ಮ ದಾಳಿಯನ್ನು ವಿಸ್ತರಿಸುತ್ತಿರುವಂತೆ, ಬ್ಯಾಕ್ ಹೋಮ್ ಪ್ರದರ್ಶನಕಾರರು ಯುದ್ಧವನ್ನು ಖಂಡಿಸುವ ಪೋಸ್ಟರ್‌ಗಳನ್ನು ಹಿಡಿದು ‘ಯುದ್ಧ ಬೇಡ’ ಎಂದು ಘೋಷಣೆ ಕೂಗುತ್ತಾ ನಗರಗಳಲ್ಲಿ ಮೆರವಣಿಗೆ ನಡೆಸುತ್ತಿದ್ದಾರೆ. ಸ್ವತಂತ್ರ ಮೇಲ್ವಿಚಾರಣಾ ಗ್ರೂಪ್ OVD-ಇನ್ಫೋ ಪ್ರಕಾರ, ರಷ್ಯಾದಲ್ಲಿ ಒಟ್ಟು 7,000 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ರಷ್ಯಾದ ಯುದ್ಧನೌಕೆಗಳು ಕ್ರೈಮಿಯಾವನ್ನು ಬಿಟ್ಟು ಒಡೆಸ್ಸಾದತ್ತ ಹೋಗುತ್ತಿವೆ: ಅಮೇರಿಕ

    ಪುಟಿನ್ ಅವರ ವಿರೋಧಿಗಳಲ್ಲಿ ಪ್ರಮುಖರಾದ ನಾವೆಲ್ನಿ ಅವರು ಜರ್ಮನಿಯಿಂದ ಹಿಂದಿರುಗಿದ ನಂತರ ಕಳೆದ ವರ್ಷ ಜೈಲಿನಲ್ಲಿದ್ದಾರೆ. ಶಾಂತಿ ಸ್ಥಾಪನೆಗಾಗಿ ನಾವು ಬೀದಿಗಿಳಿದು ಹೋರಾಟ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

    ಉಕ್ರೇನ್‌ ವಿರುದ್ಧ ಯುದ್ಧ ಘೋಷಿಸಿರುವ ಪುಟಿನ್‌ ವಿರುದ್ಧ ರಷ್ಯನ್ನರಿಂದಲೇ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪುಟಿನ್‌ ನಡೆಗೆ ರಷ್ಯಾ ತಾರಾಗಣ, ಕ್ರೀಡಾಪಟುಗಳು, ಚಿಂತಕರು ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಒಂದು ವಾರದೊಳಗೆ 1 ಮಿಲಿಯನ್ ಜನ ಉಕ್ರೇನ್‍ನಿಂದ ಪಲಾಯನ: ವಿಶ್ವಸಂಸ್ಥೆ

    ನಾನು ಯುಎಸ್‌ಎಸ್‌ಆರ್‌ನವನು. ನಾನು ಹುಟ್ಟಿದ್ದೇ ಇಲ್ಲಿ. ಬಾಲ್ಯದಿಂದಲೂ ಈ ನೆಲದಲ್ಲಿ ಆಡಿ ಬೆಳೆದಿದ್ದೇನೆ. ಶಾಂತಿಗಾಗಿ ಬೀದಿಗಿಳಿದು ಹೋರಾಡಲು ಕರೆ ನೀಡುತ್ತೇನೆ. ಆದರೆ ಪುಟಿನ್‌ ರಷ್ಯಾದವನಲ್ಲ ಎಂದು ನಾವೆಲ್ನಿ ತಿಳಿಸಿದ್ದಾರೆ.