Tag: russian president

  • ನನ್ನ ಪತಿಯನ್ನ ಕೊಂದಿದ್ದು ಪುಟಿನ್‌ – ಮೃತ ಅಲೆಕ್ಸಿ ನವಲ್ನಿ ಪತ್ನಿ ಕಣ್ಣೀರು!

    ನನ್ನ ಪತಿಯನ್ನ ಕೊಂದಿದ್ದು ಪುಟಿನ್‌ – ಮೃತ ಅಲೆಕ್ಸಿ ನವಲ್ನಿ ಪತ್ನಿ ಕಣ್ಣೀರು!

    ಮಾಸ್ಕೋ: ಅಲೆಕ್ಸಿ ನವಲ್ನಿ (Alexei Navalny) ನಿಗೂಢ ಸಾವಿನ ಕುರಿತು ಅವರ ಪತ್ನಿ ಯೂಲಿಯಾ ನವಲ್ನಾಯಾ, ರಷ್ಯಾ ಅಧ್ಯಕ್ಷ ಪುಟಿನ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ವ್ಲಾಡಿಮಿರ್‌ ಪುಟಿನ್‌ (Vladimir Putin) ತನ್ನ ಪತಿಯನ್ನ ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

    ಸೋಮವಾರ (ಫೆ.19) ಬಿಡುಗಡೆಯಾದ ವೀಡಿಯೋವೊಂದರಲ್ಲಿ ನವಲ್ನಿ ಪತ್ನಿ ಕಣ್ಣೀರಿಡುತ್ತಲೇ ಮಾತನಾಡಿದ್ದಾರೆ. ಪುಟಿನ್‌ ತನ್ನ ಕೆಲಸವನ್ನು ಮುಂದುವರಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದರು. ಅದರಂತೆ ನನ್ನ ಪತಿಯನ್ನು ಕೊಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಆಕೆ ಧೈರ್ಯಶಾಲಿ – ನೂಪುರ್‌ ಶರ್ಮಾ ಬೆಂಬಲಿಸಿ ವೈಯಕ್ತಿಕ ಸಂದೇಶ ಕಳಿಸಿದ್ದೇನೆಂದ ಡಚ್‌ ನಾಯಕ

    ನವಲ್ನಿ ಮೃತಪಟ್ಟಿದ್ದು ಹೇಗೆ?
    ಪುಟಿನ್‌ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಅಲೆಕ್ಸಿ ನಾವಲ್ನಿ ಅವರನ್ನು ಉಗ್ರವಾದದ ಆರೋಪದ ಮೇಲೆ 2021ರಲ್ಲಿ ಜೈಲಿಗಟ್ಟಲಾಗಿತ್ತು. ಮಾಸ್ಕೋದ ಯಮಲೊ ನೆನೆಟ್ಸ್‌ ಪ್ರಾಂತ್ಯದ ಜೈಲಿನಲ್ಲಿದ್ದ ಅಲೆಕ್ಸಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಅಸ್ವಸ್ಥಗೊಂಡರು. ಜೈಲಿನ ವೈದ್ಯಕೀಯ ಸಿಬ್ಬಂದಿ ತಕ್ಷಣವೇ ಅವರನ್ನು ಆಸ್ಪತ್ರೆಗೆ ಶಿಫ್ಟ್‌ ಮಾಡಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದರು. ಇದನ್ನೂ ಓದಿ: ಮಕ್ಕಳನ್ನು ಪಾಕ್‌ಗೆ ಕರೆದೊಯ್ಯಲು ಸೀಮಾ ಮೊದಲ ಪತಿ ನಿರ್ಧಾರ – ಕಾನೂನು ಹೋರಾಟಕ್ಕೆ ಭಾರತೀಯ ವಕೀಲರ ನೇಮಕ

    2021ರ ಜನವರಿಯಲ್ಲಿ ಅಲೆಕ್ಸಿ ನಾವಲ್ನಿ ಅವರಿಗೆ ಸೈಬೀರಿಯಾದಲ್ಲಿ ವಿಷ ಪ್ರಾಶನ ಮಾಡಲಾಗಿತ್ತು. ಕೋಮಾಗೆ ಜಾರಿದ್ದ ಅಲೆಕ್ಸಿ ಅವರಿಗೆ ಜರ್ಮನಿಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ರಷ್ಯಾಗೆ ಕರೆ ತರಲಾಗಿತ್ತು. ನಂತರ ಪೆರೋಲ್‌ ಉಲ್ಲಂಘಿಸಿದ ಆರೋಪದ ಮೇಲೆ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ನವಲ್ನಿ ಮೃತಪಟ್ಟ ಆರ್ಕ್ಟಿಕ್‌ ಜೈಲು (Arctic Jail) ಮಾಸ್ಕೋದಿಂದ ಈಶಾನ್ಯಕ್ಕೆ 1,200 ಕಿಮೀ ದೂರದಲ್ಲಿದೆ ಎನ್ನಲಾಗಿದೆ. ಇದನ್ನೂ ಓದಿ: ಲೈಂಗಿಕ ತೃಪ್ತಿಗಾಗಿ ಶಿಶ್ನಕ್ಕೆ ಬಟನ್ ಬ್ಯಾಟರಿ ಸಿಕ್ಕಿಸಿಕೊಂಡು 73ರ ವೃದ್ಧ ಎಡವಟ್ಟು!

    400 ಮಂದಿ ಬಂಧನ:
    ಇತ್ತೀಚೆಗೆ ಅಧ್ಯಕ್ಷ ಪುಟಿನ್ ಕಟ್ಟಾ ವಿರೋಧಿ ಅಲೆಕ್ಸಿ ನವಲ್ನಿ ಅವರು ಜೈಲಿನಲ್ಲಿ ಮೃತಪಟ್ಟ ಬಳಿಕ ರಷ್ಯಾದಲ್ಲಿ ಭಾರೀ ಕೋಲಾಹಲ ಉಂಟಾಗಿದೆ. ನವಲ್ನಿಗೆ ಗೌರವ ಸಲ್ಲಿಸಲು ಬೀದಿಗಿಳಿದಿದ್ದ ಸುಮಾರು 400 ಮಂದಿಯನ್ನು ಬಂಧಿಸಲಾಗಿದೆ. ರಷ್ಯಾದ ವಿವಿಧ ನಗರಗಳಲ್ಲಿ ನವಲ್ನಿಗೆ ಶ್ರದ್ಧಾಂಜಲಿ ಸಲ್ಲಿಸಲು ಜನರು ಬೀದಿಗಿಳಿದಿದ್ದರು. ಜೊತೆಗೆ ಕೈಯಲ್ಲಿ ಮೇಣದ ಬತ್ತಿ, ಬ್ಯಾನರ್, ಕರಪತ್ರಗಳನ್ನು ಹಿಡಿದುಕೊಂಡು ನವಲ್ನಿಯವರನ್ನು ಕೊಲೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿ ಪುಟಿನ್ ವಿರುದ್ಧ ಪ್ರತಿಭಟನೆ ಆರಂಭಿಸಿದ್ದರು.

  • ಮೋದಿಯನ್ನ ಹೆಸರಿಸಬಹುದು ಅಂತ ಊಹಿಸೋಕು ಸಾಧ್ಯವಿಲ್ಲ – ಹಾಡಿ ಹೊಗಳಿದ ಪುಟಿನ್‌

    ಮೋದಿಯನ್ನ ಹೆಸರಿಸಬಹುದು ಅಂತ ಊಹಿಸೋಕು ಸಾಧ್ಯವಿಲ್ಲ – ಹಾಡಿ ಹೊಗಳಿದ ಪುಟಿನ್‌

    ಮಾಸ್ಕೋ: ಪ್ರಧಾನಿ ಮೋದಿ ಅವರು ಇರುವಾಗ ಭಾರತದ ವಿರುದ್ಧ ಮತ್ತು ಭಾರತೀಯರ ವಿರುದ್ಧ ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಹುದು ಅಥವಾ ಪ್ರಧಾನಿ ಮೋದಿ (Narendra Modi) ಅವರನ್ನ ಹೆದರಿಸಬಹುದು ಅಂತ ಊಹಿಸೋದಕ್ಕೂ ಸಾಧ್ಯವಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಹಾಡಿ ಹೊಗಳಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿರುವ ಪುಟಿನ್‌ ಮೋದಿ‌ ನೀತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಭದ್ರತೆ National Security) ವಿಚಾರದಲ್ಲಿ ಮೋದಿ ಅವರು ತೆಗೆದುಕೊಳ್ಳುವ ಕಠಿಣ ನಿಲುವುಗಳು ನನಗೆ ಆಗಾಗ್ಗೆ ಅಚ್ಚರಿಯನ್ನುಂಟುಮಾಡುತ್ತದೆ. ದೇಶದ ಜನರ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಭಾರತದ ಪ್ರಧಾನಿ ಕಠಿಣ ನಿಲುವು ತೆಗೆದುಕೊಳ್ಳುತ್ತಾರೆ. ಮೋದಿ ಅವರ ನೀತಿಯು ದೆಹಲಿ ಮತ್ತು ಮಾಸ್ಕೋ (Moscow) ನಡುವಿನ ಸಂಬಂಧವನ್ನು ಗಟ್ಟಿಗೊಳಿಸಿದೆ ಎಂದು ಒತ್ತಿ ಹೇಳಿದ್ದಾರೆ.

    ಮೋದಿ ಅವರು ಹೊರಗಿನಿಂದ ಏನಾಗುತ್ತಿದೆ ಎಂಬುದನ್ನೆಲ್ಲಾ ನಿರಂತರವಾಗಿ ಗಮನಿಸುತ್ತಿದ್ದಾರೆ. ಇತ್ತೀಚೆಗೆ ರಷ್ಯಾ-ಚೀನಾ ಸಂಬಂಧಗಳು ನಿರಂತರವಾಗಿ ಎಲ್ಲಾ ದಿಕ್ಕುಗಳಲ್ಲೂ ಅಭಿವೃದ್ಧಿಯತ್ತ ಸಾಗುತ್ತಿದೆ. ಇದಕ್ಕೆ ಮೋದಿ ಅವರ ನೀತಿಯೂ ಮುಖ್ಯ ಕಾರಣವಾಗಿದೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಹಮಾಸ್‌ ಜೊತೆ ಗುಂಡಿನ ಚಕಮಕಿ; ತಿಂಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿದ್ದ ಭಾರತೀಯ ಮೂಲದ ಇಸ್ರೇಲಿ ಯೋಧ ಸಾವು

    ಇತ್ತೀಚೆಗೆ ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಪುಟಿನ್‌ ವರ್ಚುವಲ್‌ನಲ್ಲಿ ಪಾಲ್ಗೊಂಡು ಧನ್ಯವಾದ ಅರ್ಪಿಸಿದ್ದರು. ಇದನ್ನೂ ಓದಿ: ಇದು ಯುದ್ಧದ ಸಮಯವಲ್ಲ – ಪುಟಿನ್‌ಗೆ ಪ್ರಧಾನಿ ಮೋದಿ ಸಲಹೆ

    ಈ ಹಿಂದೆ ಮೋದಿ ರಷ್ಯಾ ಭೇಟಿ ನೀಡಿದಾಗ ಹಾಗೂ ವರ್ಚುವಲ್‌ ಸಮಾರಂಭಗಳಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವನ್ನು ಉಲ್ಲೇಖಿಸಿ, ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಯುದ್ಧವನ್ನು ನಿಲ್ಲಿಸುವಂತೆಯೂ ಮೋದಿ ಮನವಿ ಮಾಡಿದ್ದರು.

  • ಪ್ರೇಯಸಿಯನ್ನೇ ರೇಪ್‌ ಮಾಡಿ, 111 ಬಾರಿ ಇರಿದು ಕೊಂದಿದ್ದ ಪ್ರೇಮಿಯನ್ನ ಬಿಡುಗಡೆಗೊಳಿಸಿದ ಪುಟಿನ್‌

    ಪ್ರೇಯಸಿಯನ್ನೇ ರೇಪ್‌ ಮಾಡಿ, 111 ಬಾರಿ ಇರಿದು ಕೊಂದಿದ್ದ ಪ್ರೇಮಿಯನ್ನ ಬಿಡುಗಡೆಗೊಳಿಸಿದ ಪುಟಿನ್‌

    ಮಾಸ್ಕೋ: ಪ್ರೇಯಸಿ (Lover) ಮೇಲೆ ಅತ್ಯಾಚಾರಗೈದು, 111 ಬಾರಿ ಚಾಕುವಿನಿಂದ ಇರಿದು ಕೊಂದಿದ್ದ ಪ್ರೇಮಿಯೊಬ್ಬನನ್ನ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಕ್ಷಮಿಸಿ ಬಿಡುಗಡೆ ಮಾಡಿಸಿದ್ದಾರೆ.

    ಯುವಕನು ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ರಷ್ಯಾ ಸೇನೆಗೆ (Russia Military) ಸೇರಿ ಹೋರಾಟ ಮಾಡಲು ನಿರ್ಧರಿಸಿದ ನಂತರ ವ್ಲಾಡಿಮಿರ್ ಪುಟಿನ್, ಆತನ ಅಪರಾಧವನ್ನ ಕ್ಷಮಿಸಿದ್ದಾರೆ. ವ್ಲಾಡಿಸ್ಲಾವ್‌ ಕಾನ್ಯುಸ್‌ ಎಂಬಾತ ತನ್ನ ಪ್ರೇಯಸಿ ಪೆಖ್ಟೆಲೆವಾ (Vera Pekhteleva) ಎಂಬಾಕೆಯನ್ನು ಕ್ರೂರವಾಗಿ ಕೊಂದು 17 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ. ಆತ ಸೇನೆಗೆ ಸೇರಲು ಬಯಸಿದ್ದರಿಂದ ಶಿಕ್ಷೆ ಅವಧಿಗೆ ಒಂದು ವರ್ಷ ಮುಂಚಿತವಾಗಿಯೇ ಅಪರಾಧಿಯನ್ನ ಬಿಡುಗಡೆ ಮಾಡಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಐಸ್‍ಲ್ಯಾಂಡ್‍ನಲ್ಲಿ 800 ಬಾರಿ ಕಂಪಿಸಿದ ಭೂಮಿ – ತುರ್ತು ಪರಿಸ್ಥಿತಿ ಘೋಷಣೆ

    ಕ್ಯಾನ್ಸನ್‌ ತನ್ನ ಗೆಳತಿಗೆ ಸತತ ಮೂರುವರೆ ಗಂಟೆಗಳ ಕಾಲ ಚಿತ್ರಹಿಂಸೆ ನೀಡಿ ಅತ್ಯಾಚಾರ ಎಸಗಿದ್ದ. ಅಷ್ಟು ಸಾಲದ್ದಕ್ಕೆ 111 ಬಾರಿ ಚಾಕುವಿನಿಂದ ಇರಿದಿದ್ದ, ನಂತ್ರ ಕೇಬಲ್‌ ವಯರ್‌ನಿಂದ ಕತ್ತು ಹಿಸುಕಿ ಕೊಂದಿದ್ದ. ಆಕೆಯ ಚೀರಾಟ ಕೇಳಿದ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಲು ಸಾಕಷ್ಟು ಬಾರಿ ಕರೆ ಮಾಡಿದ್ದರು. ಆದ್ರೆ ಪೊಲೀಸರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ನಂತರ ಆತನನ್ನ ಪತ್ತೆಹಚ್ಚಿ ಬಂಧಿಸಿ ಶಿಕ್ಷೆಗೆ ಒಳಪಡಿಸಲಾಗಿತ್ತು. ಆದ್ರೆ ಆತ ಮಿಲಿಟರಿಗೆ ಸೇರಲು ಬಯಸಿದ್ದರಿಂದ ಆತನ ತಪ್ಪುಗಳನ್ನ ಕ್ಷಮಿಸಿ ಬಿಡುಗಡೆ ಮಾಡಲಾಗಿದೆ. ಮಹಿಳಾ ಹಕ್ಕುಗಳ ಕಾರ್ಯಕರ್ತೆ ಅಲಿಯೋನಾ ಪೊಪೊವಾ ಅವರು ವಿಷಯವನ್ನು ಖಚಿತಪಡಿಸಿದ್ದಾರೆ.

    ವೆರಾ ಪೆಖ್ಟೆಲೆವಾ ಅವರ ತಾಯಿ ಒಕ್ಸಾನಾ, ಕ್ಯಾನ್ಸನ್‌ ಶಸ್ತ್ರಾಸ್ತ್ರ ಹಿಡಿದು, ಮಿಲಿಟರಿ ಸಮವಸ್ತ್ರದಲ್ಲಿ ನಿಂತಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ನನ್ನ ಮಗು ಸಮಾಧಿಯಲ್ಲಿ ಕೊಳೆಯುತ್ತಿದೆ. ಆದ್ರೆ ನನ್ನ ಮಗುವನ್ನು ಕೊಂದ ಆರೋಪಿ ಹೊರಗಿದ್ದಾನೆ. ಇದು ನಿಜಕ್ಕೂ ನನಗೆ ಅತೀವ ನೋವನ್ನುಂಟುಮಾಡಿದೆ. ನನ್ನ ಜೀವನದ ಎಲ್ಲಾ ಭರವಸೆಗಳನ್ನು ಕಳೆದುಕೊಂಡಿದ್ದೇನೆ. ಇನ್ಮುಂದೆ ನಾನು ಬದುಕುವುದರಲ್ಲಿ ಅರ್ಥವಿಲ್ಲ. ಪುಟಿನ್‌ ಅವರ ಕ್ರಮ ನನ್ನನ್ನು ಸಂಪೂರ್ಣವಾಗಿ ಮುಗಿಸಿದೆ ಎಂದು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಒಂದು ಮೀನಿಗೆ 70 ಲಕ್ಷ! ಅಪರೂಪದ ಮೀನು ಮಾರಿ ರಾತ್ರೋರಾತ್ರಿ 7 ಕೋಟಿ ಒಡೆಯನಾದ ಪಾಕಿಸ್ತಾನ ಮೀನುಗಾರ

    ಅಪರಾಧಿ ಕ್ಯಾನ್ಸನ್‌ನನ್ನ ಬಿಡುಗಡೆ ಮಾಡಿದ ಬಳಿಕ ಉಕ್ರೇನ್ ಗಡಿಯಲ್ಲಿರುವ ದಕ್ಷಿಣ ರಷ್ಯಾದ ರೋಸ್ಟೊವ್‌ಗೆ ವರ್ಗಾಯಿಸಲಾಗಿದೆ ಎಂಬುದಾಗಿ ಜೈಲು ಅಧಿಕಾರಿಗಳು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಅಲಿಯೋನಾ ಪೊಪೊವಾ ಅವರಿಗೆ ವಿಷಯ ಖಚಿತಪಡಿಸಿದ್ದಾರೆ. ಆ ನಂತರ ನವೆಂಬರ್ 3 ರಂದು ರಷ್ಯಾದ ಪ್ರಾಸಿಕ್ಯೂಟರ್ ಜನರಲ್ ಕಚೇರಿಯಿಂದ ಆರೋಪಿ ಬಿಡುಗಡೆಗೊಳಿಸಿದ ಆದೇಶ ಪತ್ರವನ್ನ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ದಿನಕ್ಕೆ 4 ಗಂಟೆ ಕದನ ವಿರಾಮ – ಗಾಜಾ ಮೇಲಿನ ದಾಳಿಯನ್ನು ಕೊಂಚ ಸಡಿಲಿಸಿದ ಇಸ್ರೇಲ್

  • ಪುಟಿನ್‌ಗೆ ಏನೂ ಆಗಿಲ್ಲ, ಆರೋಗ್ಯವಾಗಿದ್ದಾರೆ – ಕ್ರೆಮ್ಲಿನ್‌ ಸ್ಪಷ್ಟನೆ

    ಪುಟಿನ್‌ಗೆ ಏನೂ ಆಗಿಲ್ಲ, ಆರೋಗ್ಯವಾಗಿದ್ದಾರೆ – ಕ್ರೆಮ್ಲಿನ್‌ ಸ್ಪಷ್ಟನೆ

    ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಪುಟಿನ್‌ ದೇಹವನ್ನು ಡಬಲ್‌ ಮಾಡಲಾಗಿದೆ ಎಂಬ ಆರೋಪಗಳನ್ನು ಕ್ರೆಮ್ಲಿನ್‌ (Kremlin) ತಳ್ಳಿಹಾಕಿದ್ದು, ಪುಟಿನ್‌ ಆರೋಗ್ಯವಾಗಿದ್ದಾರೆ ಎಂದು ಹೇಳಿದೆ.

    ಭಾನುವಾರ ಸಂಜೆ ಪುಟಿನ್‌ ಹೃದಯ ಸ್ತಂಭನಕ್ಕೆ (Cardiac Arrest) ಒಳಗಾಗಿರುವುದಾಗಿ SVR ಟೆಲಿಗ್ರಾಮ್ ಚಾನೆಲ್‌ ವರದಿ ಮಾಡಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕ್ರೆಮ್ಲಿನ್‌ ವಕ್ತಾರ ಪೆಸ್ಕೋವ್‌, ಪುಟಿನ್‌ ಆರೋಗ್ಯವಾಗಿದ್ದಾರೆ, ಬಾಡಿ ಡಬಲ್‌ ಮಾಡಲಾಗಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಮೈಸೂರು ದಸರಾ ಜಂಬೂಸವಾರಿಗೆ ಚಾಲನೆ – ಚಿನ್ನದ ಅಂಬಾರಿ ಹೊತ್ತು ರಾಜಗಾಂಭೀರ್ಯದಿಂದ ಸಾಗಿದ ಅಭಿಮನ್ಯು

    ಪುಟಿನ್‌ ಹೃದಯ ಸ್ತಂಭನಕ್ಕೆ ಒಳಗಾಗಿದ್ದಾರೆ ಎನ್ನುತ್ತಿರುವುದು ಶುದ್ಧ ಸುಳ್ಳು. ಇದಕ್ಕೆ ನಗಬೇಕೋ ಅಳಬೇಕೋ ಎಂಬುದೇ ತಿಳಿಯುತ್ತಿಲ್ಲ. ಬೇರೆ ಯಾವುದೇ ಪ್ರತಿಕ್ರಿಯೆ ಕೊಡಲು ನನ್ನಿಂದ ಸಾಧ್ಯವಿಲ್ಲ ಎಂದು ಕ್ರೆಮ್ಲಿನ್‌ ವಕ್ತಾರ ಪೆಸ್ಕೋವ್‌ ಹೇಳಿದ್ದಾರೆ. ಇದನ್ನೂ ಓದಿ: ಕಾಗೇರಿಗೊಂದು ನ್ಯಾಯ ಹೆಬ್ಬಾರ್‌ಗೊಂದು ನ್ಯಾಯ- ಸಿಡಿದೆದ್ದ ಹೆಬ್ಬಾರ್ ಅಭಿಮಾನಿಗಳು?

    ಪುಟಿನ್‌ ಅಕ್ಟೋಬರ್‌ 7ರಂದು 71ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ನಿರಂತರವಾಗಿ ಸಾರ್ವಜನಿಕ ಸಭೆಗಳು ಹಾಗೂ ನಿಗದಿತ ವೇಳಾಪಟ್ಟಿಯಂತೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅವುಗಳಲ್ಲಿ ಹಲವು ಕಾರ್ಯಕ್ರಮಗಳು ಟಿವಿಗಳಲ್ಲಿ ಪ್ರಸಾರವಾಗುತ್ತಿವೆ. ಇತ್ತೀಚೆಗೆ ಚೀನಾಗೆ ಭೇಟಿ ನೀಡಿ ಬರುತ್ತಿದ್ದಾಗಲೂ ರಷ್ಯಾದ ಎರಡು ನಗರಗಳಲ್ಲಿ ನಿಲ್ಲಿಸಲಾಗಿತ್ತು. ಅಲ್ಲಿಯೂ ನಡೆದ ಸ್ಥಳೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು ಎಂದು ಪುಟಿನ್‌ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ಗೆ ಹೃದಯ ಸ್ತಂಭನ – ಭದ್ರತಾ ಸಿಬ್ಬಂದಿ ಹೇಳಿದ್ದೇನು?

    ಎಸ್‌ವಿಆರ್ ವರದಿ ಮಾಡಿದ್ದೇನು?
    ಭಾನುವಾರ ಸಂಜೆ ವ್ಲಾಡಿಮಿರ್‌ ಪುಟಿನ್‌ ಹೃದಯ ಸ್ತಂಭನಕ್ಕೆ ಒಳಗಾಗಿದ್ದರು. ವ್ಲಾಡಿಮಿರ್ ಪುಟಿನ್ ಭಾನುವಾರ ರಾತ್ರಿ 9 ಗಂಟೆಯ ಸುಮಾರಿಗೆ ತನ್ನ ಮಲಗುವ ಕೋಣೆಯಲ್ಲೇ ನೆಲದ ಮೇಲೆ ಆಹಾರ ಮತ್ತು ಪಾನೀಯಗಳೊಂದಿಗೆ ಮಗುಚಿಕೊಂಡಿದ್ದ ಟೇಬಲ್ ಪಕ್ಕದಲ್ಲಿ ಬಿದ್ದ ಸ್ಥಿತಿಯಲ್ಲಿ ಕಂಡುಬಂದಿದ್ದರು. ಪುಟಿನ್ ಬಿದ್ದಾಗ, ಟೇಬಲ್ ಮತ್ತು ಅದರ ಮೇಲಿದ್ದ ಆಹಾರ, ಡ್ರಿಂಕ್ಸ್ ಬಾಟಲಿಗಳು ಟೇಬಲ್‌ನಿಂದ ಕೆಳಗೆ ಬಿದ್ದಿದ್ದವು. ಅದರಿಂದ ದೊಡ್ಡ ಶಬ್ಧ ಉಂಟಾಗಿತ್ತು. ಭದ್ರತಾ ಸಿಬ್ಬಂದಿ ತಕ್ಷಣ ಅಲ್ಲಿಗೆ ಧಾವಿಸಿದಾಗ ಪುಟಿನ್ ನೆಲದ ಮೇಲೆ ಬಿದ್ದು, ನೋವಿನಿಂದ ನರಳುತ್ತಿರುವುದು ಕಂಡುಬಂದಿತ್ತು. ಕೂಡಲೇ ನಿವಾಸದಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಕಾರ್ಯಪ್ರವೃತ್ತರಾಗಿ ತುರ್ತು ಚಿಕಿತ್ಸೆ ನೀಡಿದ್ದರು. ನಂತರ ಪುಟಿನ್‌ರನ್ನ ಅವರ ನಿವಾಸದಲ್ಲೇ ವಿಶೇಷವಾಗಿ ಸುಸಜ್ಜಿತ ಕೋಣೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿರುವ ವಿಶೇಷ ಐಸಿಯು ಘಟಕಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಪ್ರಥಮ ಚಿಕಿತ್ಸೆ ನೀಡಿದ್ದರಿಂದಾಗಿ ಮತ್ತೆ ಅವರ ಹೃದಯ ಆರೋಗ್ಯ ಸ್ಥಿತಿಗೆ ಬಂದಿದೆ ಎಂದು ಟೆಲಿಗ್ರಾಮ್ ಚಾನೆಲ್ ವರದಿ ಮಾಡಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ಗೆ ಹೃದಯ ಸ್ತಂಭನ – ಭದ್ರತಾ ಸಿಬ್ಬಂದಿ ಹೇಳಿದ್ದೇನು?

    ಮಾಸ್ಕೋ: ಕಳೆದ ವರ್ಷದಿಂದ ಉಕ್ರೇನ್‌ ವಿರುದ್ಧ ಯುದ್ಧ (Ukraine War) ಸಾರಿದಾಗಿನಿಂದಲೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಆರೋಗ್ಯ ವಿಚಾರ ನಿರಂತರ ಚರ್ಚೆಯಲ್ಲಿದೆ. ಈ ನಡುವೆ ಪುಟಿನ್‌ ಭಾನುವಾರ ಸಂಜೆ ಹೃದಯ ಸ್ತಂಭನಕ್ಕೆ (Cardiac Arrest) ಒಳಗಾಗಿರುವುದು ಕಂಡುಬಂದಿದೆ ಎಂದು ಟೆಲಿಗ್ರಾಮ್ ಚಾನೆಲ್ ‘ಜನರಲ್ SVR’ ಅನ್ನು ಉಲ್ಲೇಖಿಸಿ ವರದಿಯಾಗಿದೆ. ಜನರಲ್ ಎಸ್‌ವಿಆರ್ ಟೆಲಿಗ್ರಾಮ್‌ ಚಾಲನೆಲ್‌ ಅನ್ನು ಕ್ರೆಮ್ಲಿನ್‌ನ್‌ ನಿವೃತ್ತ ಅಧಿಕಾರಿಗಳು ನಡೆಸುತ್ತಿದ್ದಾರೆ ಎನ್ನಲಾಗಿದೆ.

    ಮಾಹಿತಿ ಪ್ರಕಾರ, ವ್ಲಾಡಿಮಿರ್‌ ಪುಟಿನ್ ಭಾನುವಾರ ರಾತ್ರಿ 9 ಗಂಟೆಯ ಸುಮಾರಿಗೆ ತನ್ನ ಮಲಗುವ ಕೋಣೆಯಲ್ಲೇ ನೆಲದ ಮೇಲೆ ಆಹಾರ ಮತ್ತು ಪಾನೀಯಗಳೊಂದಿಗೆ ಮಗುಚಿಕೊಂಡಿದ್ದ ಟೇಬಲ್‌ ಪಕ್ಕದಲ್ಲಿ ಬಿದ್ದ ಸ್ಥಿತಿಯಲ್ಲಿ ಕಂಡುಬಂದಿದ್ದರು ಎಂದು ಪುಟಿನ್‌ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ. ಇದನ್ನೂ ಓದಿ: ದೃಷ್ಟಿ ಮಂಜಾಗ್ತಿದೆ, ಕೈ-ಕಾಲು ಸ್ವಾಧೀನ ಕಳೆದುಕೊಳ್ತಿದೆ – ಪುಟಿನ್‌ ಆರೋಗ್ಯದಲ್ಲಿ ಬಿಗ್‌ ಅಪ್ಡೇಟ್ಸ್‌

    ಬಿದ್ದು ಹೊರಳಾಡುತ್ತಿದ್ದ ಪುಟಿನ್‌: ಬಹುಶಃ, ಪುಟಿನ್‌ ಬಿದ್ದಾಗ, ಟೇಬಲ್ ಮತ್ತು ಅದರ ಮೇಲಿದ್ದ ಆಹಾರ, ಡ್ರಿಂಕ್ಸ್‌ ಬಾಟಲಿಗಳು ಟೇಬಲ್‌ನಿಂದ ಕೆಳಗೆ ಬಿದ್ದಿದ್ದವು. ಅದರಿಂದ ದೊಡ್ಡ ಶಬ್ಧ ಉಂಟಾಗಿತ್ತು. ಭದ್ರತಾ ಸಿಬ್ಬಂದಿ ತಕ್ಷಣ ಅಲ್ಲಿಗೆ ಧಾವಿಸಿದಾಗ ಪುಟಿನ್ ನೆಲದ ಮೇಲೆ ಬಿದ್ದು, ನೋವಿನಿಂದ ನರಳುತ್ತಿರುವುದು ಕಂಡುಬಂದಿತು. ಕೂಡಲೇ ನಿವಾಸದಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು (Putin Doctors) ಕಾರ್ಯಪ್ರವೃತ್ತರಾಗಿ ತುರ್ತು ಚಿಕಿತ್ಸೆ ನೀಡಿದರು. ನಂತರ ಪುಟಿನ್‌ರನ್ನ ಅವರ ನಿವಾಸದಲ್ಲೇ ವಿಶೇಷವಾಗಿ ಸುಸಜ್ಜಿತ ಕೋಣೆಗೆ ಸ್ಥಳಾಂತರಿಸಲಾಯಿತು. ಅಲ್ಲಿರುವ ವಿಶೇಷ ಐಸಿಯು ಘಟಕಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಪ್ರಥಮ ಚಿಕಿತ್ಸೆ ನೀಡಿದ್ದರಿಂದಾಗಿ ಮತ್ತೆ ಅವರ ಹೃದಯ ಆರೋಗ್ಯ ಸ್ಥಿತಿಗೆ ಬಂದಿದೆ ಎಂದು ಟೆಲಿಗ್ರಾಮ್‌ ಚಾನೆಲ್‌ ವರದಿ ಮಾಡಿದೆ. ಇದನ್ನೂ ಓದಿ: ಪುಟಿನ್‌ಗೆ ಅಡುಗೆ ಭಟ್ಟನಾಗಿದ್ದ ಪ್ರಿಗೋಜಿನ್ – ರಷ್ಯಾ ಅಧ್ಯಕ್ಷನ ವಿರುದ್ಧವೇ ತಿರುಗಿ ಬಿದ್ದದ್ದು ಯಾಕೆ?

    ಸದ್ಯ ಮೂಲಗಳು ವ್ಲಾಡಿಮಿರ್ ಪುಟಿನ್ ಪ್ರತಿರೂಪ ಸಭೆ ಸಮಾರಂಭದಲ್ಲಿ ಸಕ್ರಿಯವಾಗಿದ್ದಾರೆ ಎಂದು ಹೇಳುತ್ತಿವೆ. ಕಳೆದ ವರ್ಷ ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣ ಪ್ರಾರಂಭವಾದಾಗಿನಿಂದ, ಪುಟಿನ್ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿತ್ತು. ಆದ್ರೆ ಕ್ರೆಮ್ಲಿನ್‌ ಮತ್ತೆ ಮತ್ತೆ ಪುಟಿನ್‌ ಆರೋಗ್ಯವಾಗಿದ್ದಾರೆ ಎಂಬುದನ್ನು ಒತ್ತಿ ಹೇಳುತ್ತಿದೆ. ಇದನ್ನೂ ಓದಿ: ಪುಟಿನ್‌ ವಿರುದ್ಧ ಬಂಡಾಯವೆದ್ದಿದ್ದ ಪ್ರಿಗೋಜಿನ್ ವಿಮಾನ ಅಪಘಾತದಲ್ಲಿ ದುರ್ಮರಣ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪುಟಿನ್‌ ಮಲ, ಮೂತ್ರವನ್ನು ಸೂಟ್‌ಕೇಸ್‌ನಲ್ಲಿ ಸಾಗಿಸ್ತಾರಂತೆ ಅಂಗರಕ್ಷಕರು – ಯಾಕೆ ಗೊತ್ತಾ?

    ಪುಟಿನ್‌ ಮಲ, ಮೂತ್ರವನ್ನು ಸೂಟ್‌ಕೇಸ್‌ನಲ್ಲಿ ಸಾಗಿಸ್ತಾರಂತೆ ಅಂಗರಕ್ಷಕರು – ಯಾಕೆ ಗೊತ್ತಾ?

    ಮಾಸ್ಕೋ: ಉಕ್ರೇನ್‌ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಆರೋಗ್ಯದ ಸುದ್ದಿ ಜಗತ್ತಿನ ಪ್ರಮುಖ ಚರ್ಚಾ ವಿಚಾರಗಳಲ್ಲಿ ಒಂದಾಗಿದೆ. ಪುಟಿನ್‌ ಆರೋಗ್ಯದ ವಿಚಾರವಾಗಿ ಹಲವು ಅಚ್ಚರಿದಾಯಕ ಅಂಶಗಳನ್ನು ವಿದೇಶಿ ಮಾಧ್ಯಮಗಳು ಬಹಿರಂಗಪಡಿಸುತ್ತಿವೆ.

    ಪುಟಿನ್‌ ಆರೋಗ್ಯದ ವಿಚಾರವಾಗಿ ಫಾಕ್ಸ್‌ ಸುದ್ದಿ ಸಂಸ್ಥೆ ಈಚೆಗೆ ಅಚ್ಚರಿ ವಿಚಾರವೊಂದನ್ನು ಬಹಿರಂಗಪಡಿಸಿದೆ. ಪುಟಿನ್‌ ಆರೋಗ್ಯದ ಗುಟ್ಟು ರಟ್ಟಾಗದಿರಲಿ ಎಂಬ ಕಾರಣಕ್ಕೆ ಅವರ ಮಲ, ಮೂತ್ರವನ್ನು ಅಂಗರಕ್ಷಕರೇ ಸಂಗ್ರಹಿಸಿ ಅದಕ್ಕೂ ರಕ್ಷಣೆ ನೀಡುತ್ತಿದ್ದಾರೆ ಎಂದು ಫಾಕ್ಸ್‌ ನ್ಯೂಸ್‌ ವರದಿ ಮಾಡಿದೆ. ಇದನ್ನೂ ಓದಿ: ಈ ದೇಶದಲ್ಲಿ ಸ್ಮಾರ್ಟ್‌ ಟಿವಿಗಿಂತ ಕಾಂಡೋಮ್ ಬೆಲೆ ದುಬಾರಿ – ಎಷ್ಟು ಅಂದ್ರೆ ನೀವು ಬೆಚ್ಚಿಬೀಳ್ತೀರಾ!

    putin

    ಬ್ರೀಫ್‌ಕೇಸ್‌ನಲ್ಲಿ ಮಲ, ಮೂತ್ರ ಸಂಗ್ರಹ
    ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ವಿದೇಶಿ ಪ್ರವಾಸದಲ್ಲಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿಯು ವಿದೇಶಿ ಗುಪ್ತಚರ ಸೇವೆಗಳ ಕೈಗೆ ಸಿಗುವ ಸಾಧ್ಯತೆಯ ಬಗ್ಗೆ ಪುಟಿನ್ ಭಯಪಡುತ್ತಾರೆ. ಈ ಹಿನ್ನೆಲೆಯಲ್ಲಿ ಅವರ ಮಲ, ಮೂತ್ರವನ್ನೂ ಅಂಗರಕ್ಷಕರು ಸಂಗ್ರಹಿಸಿ, ವಿಲೇವಾರಿಗೆ ಮಾಸ್ಕೋಗೆ ಸೂಟ್‌ಕೇಸ್‌ನಲ್ಲಿ ರವಾನಿಸುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಪುಟಿನ್‌ ಅಧಿಕಾರದ ಬದಲಾವಣೆಗೆ ಸಂಬಂಧಿಸಿದ ಯಾವುದೇ ಅವ್ಯವಸ್ಥೆಯನ್ನು ತಡೆಯಲು ಮತ್ತು ಅನಿರ್ದಿಷ್ಟವಾಗಿ ರಷ್ಯಾವನ್ನು ಆಳುತ್ತಾರೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಜಿ ಡಿಐಎ ಗುಪ್ತಚರ ಅಧಿಕಾರಿ ರೆಬೆಕಾ ಕಾಫ್ಲರ್ ಫಾಕ್ಸ್ ನ್ಯೂಸ್‌ಗೆ ತಿಳಿಸಿದ್ದಾರೆ. ಇದನ್ನೂ ಓದಿ: ಮೊದಲಬಾರಿಗೆ ಟ್ವಿಟ್ಟರ್ ಉದ್ಯೋಗಿಗಳ ಜೊತೆ ಮಾತನಾಡಲಿದ್ದಾರೆ ಮಸ್ಕ್

    ಪುಟಿನ್‌ ದೇಹದ ತ್ಯಾಜ್ಯವನ್ನು ವಿಶೇಷ ಪ್ಯಾಕೆಟ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ಅದನ್ನು ತವರಿಗೆ ಪ್ರಯಾಣಕ್ಕಾಗಿ ಮೀಸಲಾದ ಬ್ರೀಫ್‌ಕೇಸ್‌ನಲ್ಲಿ ಇರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

    ರಷ್ಯಾದ ಕುರಿತು ಎರಡು ಪುಸ್ತಕಗಳನ್ನು ಬರೆದಿರುವ ಲೇಖಕ ರೆಗಿಸ್ ಗೆಂಟೆ ಹಾಗೂ ಕಳೆದ ಒಂದು ದಶಕದಿಂದ ರಷ್ಯಾದಲ್ಲಿ ಬೀಡುಬಿಟ್ಟಿರುವ ಮಿಖಾಯಿಲ್ ರೂಬಿನ್ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ಮಲವಿಸರ್ಜನೆಯ ಸಂಗ್ರಹದ ಬಗ್ಗೆ ಮಾಹಿತಿಯನ್ನು ಲೇಖಕರು ನೀಡಿದ್ದಾರೆ. ಪುಟಿನ್ ಅವರು 2017 ಮೇ 29ರಲ್ಲಿ ಫ್ರಾನ್ಸ್‌ಗೆ ಭೇಟಿ ನೀಡಿದ್ದಾಗ ಹಾಗೂ 2019ರ ಅಕ್ಟೋಬರ್‌ನಲ್ಲಿ ಸೌದಿ ಅರೇಬಿಯಾ ಪ್ರವಾಸ ಕೈಗೊಂಡಿದ್ದಾಗ ಹೀಗೆ ಮಾಡಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಪಕ್ಷಿಗಳಿಗೆ ಆಹಾರವಿಡುವ ಟ್ರೇ ಹೊಂದಿದ್ದಕ್ಕೆ 3 ವಾರದಲ್ಲಿ 3 ಬಾರಿ ವ್ಯಕ್ತಿ ಅರೆಸ್ಟ್

    ಉಕ್ರೇನ್‌ ವಿರುದ್ಧ ಯುದ್ಧ ಸಾರಿದಾಗಿನಿಂದ ಪುಟಿನ್‌ ಆರೋಗ್ಯದ ವಿಚಾರದ ಬಗ್ಗೆಯೂ ಪ್ರಮುಖ ಚರ್ಚೆಗಳಾಗುತ್ತಿವೆ. ಪುಟಿನ್‌ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ಅವರ ಆಪ್ತರಾದ ಒಲಿಗಾರ್ಚ್‌ ಈಚೆಗೆ ತಿಳಿಸಿದ್ದರು.