Tag: Russian Oil

  • ಚಿನ್ನಪ್ರಿಯರಿಗೆ ಸಿಹಿಸುದ್ದಿ – ಬೆಳ್ಳಿ, ಬಂಗಾರ ಸ್ವಲ್ಪ ಕಡಿಮೆ ಭಾರ!

    ಚಿನ್ನಪ್ರಿಯರಿಗೆ ಸಿಹಿಸುದ್ದಿ – ಬೆಳ್ಳಿ, ಬಂಗಾರ ಸ್ವಲ್ಪ ಕಡಿಮೆ ಭಾರ!

    ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಚಿನ್ನಾಭರಣ (Gold Jewellery) ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ದಾಖಲೆ ಮಟ್ಟದಲ್ಲಿ ಏರಿಕೆ ಕಂಡ ಚಿನ್ನ, ಬೆಳ್ಳಿ ದರ ಈಗ ಕೊಂಚ ಇಳಿಕೆಯಾಗಿದೆ.

    ಪ್ರತಿ ಗ್ರಾಂಗೆ ಚಿನ್ನ ಕಳೆದ 2-3 ದಿನಗಳಿಂದ 600 ರೂ. ಇಳಿಕೆ ಕಂಡಿದೆ. ಇನ್ನು 1.95 ಲಕ್ಷ ರೂ.ವರೆಗೆ ಏರಿಕೆ ಕಂಡಿದ್ದ ಬೆಳ್ಳಿ ದರ 1.58 ಲಕ್ಷ ರೂ.ಗೆ ಇಳಿಕೆಯಾಗಿದೆ. ಇದನ್ನೂ ಓದಿ: PUBLiC TV Explainer| ಅಮೆರಿಕ Vs ಚೀನಾ – ಏನಿದು ಗೋಲ್ಡ್‌ ಬಾಂಬ್‌? ವಿಶ್ವದ ಮೇಲೆ ಪರಿಣಾಮ ಏನು?

    ದಿಢೀರ್ ಇಳಿಕೆಗೆ ಕಾರಣ ಏನು?
    * ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ
    * ಅಮೆರಿಕ-ಭಾರತದ ಮಧ್ಯೆ ಕಚ್ಚಾ ತೈಲದ ವ್ಯಾಪಾರದ ಮುನ್ಸೂಚನೆ
    * ಮುಂದಿನ ದಿನದಲ್ಲಿ ತೈಲ (Oil) ವ್ಯಾಪಾರದ ಮುನ್ಸೂಚನೆ
    * ತಿಳಿಯಾದ ಚೀನಾ-ಅಮೆರಿಕ ಜಾಗತಿಕ ವ್ಯಾಪಾರ

    ಚಿನ್ನ, ಬೆಳ್ಳಿ ದರ ಡಿಸೆಂಬರ್ ವೇಳೆಯಲ್ಲಿ ಇನ್ನಷ್ಟು ಕಡಿತಗೊಳ್ಳುವ ನಿರೀಕ್ಷೆಯಿದೆ ಅನ್ನೋದು ಹಣಕಾಸು ತಜ್ಞರ ಅಭಿಪ್ರಾಯವಾಗಿದೆ. ಇದನ್ನೂ ಓದಿ: Karnool Bus Fire | ಮೃತರ ಕುಟುಂಬಸ್ಥರಿಗೆ ಕೇಂದ್ರದಿಂದ ತಲಾ 2 ಲಕ್ಷ ಪರಿಹಾರ ಘೋಷಣೆ

  • ಭಾರತದ ಆರ್ಥಿಕತೆಗೆ ರಷ್ಯಾದ ತೈಲ ಮುಖ್ಯ, ನಮ್ಮ ಸಂಬಂಧ ನಂಬಿಕೆ ಮೇಲೆ ಕಟ್ಟಿರುವ ಸೇತುವೆ: ರಷ್ಯಾ

    ಭಾರತದ ಆರ್ಥಿಕತೆಗೆ ರಷ್ಯಾದ ತೈಲ ಮುಖ್ಯ, ನಮ್ಮ ಸಂಬಂಧ ನಂಬಿಕೆ ಮೇಲೆ ಕಟ್ಟಿರುವ ಸೇತುವೆ: ರಷ್ಯಾ

    ಮಾಸ್ಕೋ: ಭಾರತ ಮತ್ತು ರಷ್ಯಾ ಸಂಬಂಧವು ನಂಬಿಕೆಯ ಮೇಲೆ ಕಟ್ಟಿರುವ ಸೇತುವೆ, ಘನವಾದ ಅಡಿಪಾಯ ಹೊಂದಿದೆ. ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ರಷ್ಯಾದ ತೈಲ (Russian Oil) ಪೂರೈಕೆಯು ಭಾರತದ ಆರ್ಥಿಕತೆಗೆ ಮುಖ್ಯವಾಗಿದೆ ಎಂದು ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ (Denis Alipov) ಹೇಳಿದ್ದಾರೆ.

    ಭಾರತ ಇನ್ಮುಂದೆ ರಷ್ಯಾದಿಂದ ತೈಲ ಖರೀದಿಸಲ್ಲ ಅಂತ ಮೋದಿ (Narendra Modi) ನನಗೆ ಭರವಸೆ ನೀಡಿದ್ದಾರೆ ಎಂಬ ಟ್ರಂಪ್‌ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದ್ದಾರೆ. ನಮ್ಮ ಸರ್ಕಾರವು ಭಾರತದ ಹಿತಾಸಕ್ತಿಗೆ ಅನುಗುಣವಾಗಿದೆ. ಏಕೆಂದ್ರೆ ರಷ್ಯಾ ತೈಲ ಪೂರೈಕೆಯು ಭಾರತದ ಆರ್ಥಿಕತೆಗೆ (Indian Economy) ಪ್ರಯೋಜನಕಾರಿಯಾಗಿದೆ. ನಮ್ಮ ನಡುವಿನ ಕಾರ್ಯತಂತ್ರ ಹಾಗೂ ಪಾಲುದಾರಿಕೆಯು ಜಾಗತಿಕ ವ್ಯವಹಾರ ಸ್ಥಿರಗೊಳಿಸುವ ಶಕ್ತಿಯಾಗಿ ಪರಿಣಮಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಭಾರತ ಹೇಳಿದ್ದೇನು?
    ಇನ್ನೂ ಟ್ರಂಪ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಭಾರತ, ದೇಶದ ಗ್ರಾಹಕರ ಹಿತಾಸಕ್ತಿ ಕಾಪಾಡುವುದು ಭಾರತ ಸರ್ಕಾರದ ಆದ್ಯತೆಯಾಗಿದೆ ಎಂದು ತಿಳಿಸಿದೆ.

    ಟ್ರಂಪ್‌ ಹೇಳಿದ್ದೇನು?
    ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಇನ್ಮುಂದೆ ರಷ್ಯಾದಿಂದ ತೈಲ ಖರೀದಿರುವುದಿಲ್ಲ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ನನಗೆ ಭರವಸೆ ನೀಡಿದ್ದಾರೆ. ಇದು ನಿಜಕ್ಕೂ ಒಂದು ಪ್ರಮುಖ ಹೆಜ್ಜೆ. ರಷ್ಯಾ-ಉಕ್ರೇನ್ ಯುದ್ಧ ತಡೆಯುವ ನಮ್ಮ ಪ್ರಯತ್ನಗಳ ಭಾಗವೂ ಆಗಿದೆ. ಚೀನಾಗೂ ಸಹ ಅದೇ ರೀತಿ ಮಾಡುವಂತೆ ನಾವು ಹೇಳಬೇಕಾಗಿದೆ ಎಂದು ಹೇಳಿದ್ದರು.

    ಅಮೆರಿಕದ ಆರೋಪ ಏನಿದೆ?
    ಭಾರತವು ರಷ್ಯಾದ ತೈಲ ಖರೀದಿ ಮಾಡುವ ಮೂಲಕ ಉಕ್ರೇನ್ ವಿರುದ್ಧದ ಯುದ್ಧಕ್ಕೆ ಹಣಕಾಸಿನ ನೆರವು ನೀಡುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ಅವರ ಬಲವಾದ ನಂಬಿಕೆ. ಅಮೆರಿಕದ ಕೆಲ ಅಧಿಕಾರಿಗಳೂ ಟ್ರಂಪ್ ಹೇಳಿಕೆಯನ್ನ ಉಲ್ಲೇಖಿಸಿ ರಷ್ಯಾದ ತೈಲ ಖರೀದಿ ನಿಲ್ಲಿಸುವಂತೆ ಭಾರತಕ್ಕೆ ಮನವಿ ಮಾಡಿಕೊಂಡಿದ್ದರು. ಆದ್ರೆ ರಷ್ಯಾದ ಸಂಬಂಧ ಬಿಟ್ಟುಕೊಡದ ಭಾರತ ತೈಲ ಖರೀದಿ ಮುಂದುವರಿಸಿದೆ.

  • ಭಾರತ ಇನ್ಮುಂದೆ ರಷ್ಯಾದಿಂದ ತೈಲ ಖರೀದಿಸಲ್ಲ, ಮೋದಿ ನನಗೆ ಭರವಸೆ ನೀಡಿದ್ದಾರೆ: ಟ್ರಂಪ್‌

    ಭಾರತ ಇನ್ಮುಂದೆ ರಷ್ಯಾದಿಂದ ತೈಲ ಖರೀದಿಸಲ್ಲ, ಮೋದಿ ನನಗೆ ಭರವಸೆ ನೀಡಿದ್ದಾರೆ: ಟ್ರಂಪ್‌

    – ಚೀನಾಗೂ ತೈಲ ಖರೀದಿ ನಿಲ್ಲಿಸುವಂತೆ ಹೇಳಬೇಕು

    ವಾಷಿಂಗ್ಟನ್‌: ಭಾರತ (India) ಇನ್ಮುಂದೆ ರಷ್ಯಾದಿಂದ ತೈಲ ಖರೀದಿರುವುದಿಲ್ಲ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ನನಗೆ ಭರವಸೆ ನೀಡಿದ್ದಾರೆ. ಇದು ನಿಜಕ್ಕೂ ಒಂದು ಪ್ರಮುಖ ಹೆಜ್ಜೆ. ರಷ್ಯಾ-ಉಕ್ರೇನ್‌ ಯುದ್ಧ ತಡೆಯುವ ನಮ್ಮ ಪ್ರಯತ್ನಗಳ ಭಾಗವೂ ಆಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಹೇಳಿದರು.

    ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಷ್ಯಾದ ತೈಲ ಖರೀದಿ ಮಾಡುವ ಮೂಲಕ ಭಾರತ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಹಣಕಾಸಿನ ನೆರವು ನೀಡುತ್ತಿದೆ ಎಂಬ ಅಮೆರಿಕದ ಅಭಿಪ್ರಾಯಕ್ಕೆ ಮೋದಿ (PM Modi) ಕಳವಳ ವ್ಯಕ್ತಪಡಿಸಿದ್ದಾರೆ. ಭಾರತ ತೈಲ ಖರೀದಿಸುವುದು ನಮಗೂ ತೃಪ್ತಿದಾಯಕವಾಗಿರಲಿಲ್ಲ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಅಮೆರಿಕದ ರಹಸ್ಯ ದಾಖಲೆಗಳ ಸಂಗ್ರಹ ಆರೋಪ – ಭಾರತ ಮೂಲದ ವಿದೇಶಾಂಗ ನೀತಿ ತಜ್ಞ ಆಶ್ಲೇ ಟೆಲ್ಲಿಸ್ ಅರೆಸ್ಟ್‌

    ಈ ಎಲ್ಲ ಕಾರಣಗಳಿಂದ ಮೋದಿ ಅವರು ರಷ್ಯಾದಿಂದ ತೈಲ (Russian Oil) ಖರೀದಿಸುವುದಿಲ್ಲ ಎಂದು ಭರವಸೆ ನೀಡಿದರು. ಚೀನಾಗೂ ಸಹ ಅದೇ ರೀತಿ ಮಾಡುವಂತೆ ನಾವು ಹೇಳಬೇಕಾಗಿದೆ ಎಂದು ಹೇಳಿದರಲ್ಲದೇ ಇಂಧನ ನೀತಿಯಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಪ್ರಧಾನಿ ಮೋದಿ ನನ್ನ ಆಪ್ತ ಮಿತ್ರ ಎಂದರು.

    ಇನ್ನೂ ಚೀನಾದೊಂದಿಗಿನ ಉದ್ವಿಗ್ನತೆ ನಡುವೆ ಭಾರತವನ್ನ ವಿಶ್ವಾಸಾರ್ಹ ಪಾಲುದಾರ ಎಂದು ನೀವು ಪರಿಗಣಿಸುತ್ತೀರಾ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಟ್ರಂಪ್‌, ಮೋದಿ ನನ್ನ ಸ್ನೇಹಿತ, ಭಾರತದೊಂದಿಗೆ ಉತ್ತಮ ಸಂಬಂಧವಿದೆ ಎಂದು ಹೇಳಿದರು. ಆದ್ರೆ ಟ್ರಂಪ್‌ ಹೇಳಿಕೆ ಬಗ್ಗೆ ಈವರೆಗೆ ಭಾರತ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದನ್ನೂ ಓದಿ: ಭಾರತ ಅದ್ಭುತ ದೇಶ, ನನ್ನ ಒಳ್ಳೆಯ ಫ್ರೆಂಡ್‌ – ಪಾಕ್‌ ಪ್ರಧಾನಿ ಎದುರೇ ಮೋದಿಯನ್ನ ಹಾಡಿಹೊಗಳಿದ ಟ್ರಂಪ್‌

    ಅಮೆರಿಕದ ಆರೋಪ ಏನು?
    ಭಾರತವು ರಷ್ಯಾದ ತೈಲ ಖರೀದಿ ಮಾಡುವ ಮೂಲಕ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಹಣಕಾಸಿನ ನೆರವು ನೀಡುತ್ತಿದೆ ಎಂದು ಡೊನಾಲ್ಡ್‌ ಟ್ರಂಪ್‌ ಅವರ ಬಲವಾದ ನಂಬಿಕೆ. ಅಮೆರಿಕದ ಕೆಲ ಅಧಿಕಾರಿಗಳೂ ಟ್ರಂಪ್‌ ಹೇಳಿಕೆಯನ್ನ ಉಲ್ಲೇಖಿಸಿ ರಷ್ಯಾದ ತೈಲ ಖರೀದಿ ನಿಲ್ಲಿಸುವಂತೆ ಭಾರತಕ್ಕೆ ಮನವಿ ಮಾಡಿಕೊಂಡಿದ್ದರು. ಆದ್ರೆ ರಷ್ಯಾದ ಸಂಬಂಧ ಬಿಟ್ಟುಕೊಡದ ಭಾರತ ತೈಲ ಖರೀದಿ ಮುಂದುವರಿಸಿದೆ. ಇದನ್ನೂ ಓದಿ: ಟ್ರಂಪ್‌ ಇಲ್ಲದಿದ್ರೆ ಭಾರತ-ಪಾಕ್‌ ಪರಮಾಣು ಸಂಘರ್ಷದಲ್ಲಿ ಯಾರೋಬ್ಬರೂ ಉಳಿಯುತ್ತಿರಲಿಲ್ಲವೇನೋ: ಪಾಕ್‌ ಪಿಎಂ

  • ನಾನು ಭಾರತದ ದೊಡ್ಡ ಅಭಿಮಾನಿ – ರಷ್ಯಾದ ತೈಲ ಖರೀದಿ ನಿಲ್ಲಿಸುವಂತೆ ಮತ್ತೆ ಅಮೆರಿಕ ಒತ್ತಾಯ

    ನಾನು ಭಾರತದ ದೊಡ್ಡ ಅಭಿಮಾನಿ – ರಷ್ಯಾದ ತೈಲ ಖರೀದಿ ನಿಲ್ಲಿಸುವಂತೆ ಮತ್ತೆ ಅಮೆರಿಕ ಒತ್ತಾಯ

    – ತೈಲ ಖರಿದಿ ಕೊಲ್ಲುವವರಿಗೆ ಫಂಡಿಂಗ್‌ ಮಾಡಿದಂತೆ ಎಂದ ಕ್ರಿಸ್‌ ರೈಟ್‌

    ವಾಷಿಂಗ್ಟನ್‌: ನಾನು ಭಾರತದ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿರುವ ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ (Chris Wright೦, ಭಾರತವು ರಷ್ಯಾದ ತೈಲ (Russian Oil) ಖರೀದಿಯನ್ನು ನಿಲ್ಲಿಸುವಂತೆ ಒತ್ತಾಯಿಸಿದರು.

    ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನಲ್ಲಿ ಮಾತನಾಡುತ್ತಾ, ಭಾರತದ ಜೊತೆಗೆ ಇಂಧನ, ವ್ಯಾಪಾರದಂತಹ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಕುರಿತು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ (S Jaishankar0 ಅವರೊಂದೊಗೆ ಚರ್ಚಿಸಿದ್ದೇನೆ. ಆದ್ರೆ ಅವರು ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾತೈಲ ಖರೀದಿರುತ್ತಿರುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಅಮೆರಿಕದ H-1B ವೀಸಾ ಹೊಡೆತ ಬೆನ್ನಲ್ಲೇ ಕೌಶಲ್ಯಪೂರ್ಣ ಭಾರತೀಯರಿಗೆ ಜರ್ಮನಿ ಸ್ವಾಗತ

    ನಾವು ಭಾರತದ ಜೊತೆಗೆ ಉಜ್ವಲ ಭವಿಷ್ಯವನ್ನು ಎದುರು ನೋಡುತ್ತಿದ್ದೇವೆ. ಆದ್ರೆ ಉಕ್ರೇನ್‌ ಸಂಘರ್ಷದಲ್ಲಿ ರಷ್ಯಾ ಜೊತೆಗಿನ ಹೊಂದಾಣಿಕೆಯನ್ನು ಅವರು ಕೈಬಿಡಬೇಕು ಕ್ರಿಸ್‌ ರೈಟ್‌ ತಿಳಿಸಿದ್ರು. ಇದನ್ನೂ ಓದಿ: ಟ್ರಂಪ್‌ H-1B ವೀಸಾ ಟಫ್‌ ರೂಲ್ಸ್‌ ನಡುವೆಯೂ ಭಾರತೀಯರಿಗೆ ಮಣೆ ಹಾಕಿದ ಕಂಪನಿಗಳು – ಮೈಸೂರಲ್ಲಿ ಓದಿದ್ದ ವ್ಯಕ್ತಿಗೆ ಸಿಇಒ ಪಟ್ಟ

    ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರು ಯುದ್ಧ ಕೊನೆಗೊಳ್ಳುವುದನ್ನ ಹೊರತುಪಡಿಸಿ ಬೇರೇನನ್ನೂ ಬಯಸುವುದಿಲ್ಲ. ಯುರೋಪ್‌ ರಾಷ್ಟ್ರಗಳು ಈಗಾಗಲೇ ಯುದ್ಧ ನಿಲ್ಲಿಸೋದಕ್ಕಾಗಿ ರಷ್ಯಾದ ಮೇಲೆ ಒತ್ತಡ ಹೇರಲು ಎಲ್ಲಾ ಮಾರ್ಗಗಳನ್ನ ಹುಡುಕುತ್ತಿವೆ. ಭಾರತ ತೈಲ ಖರೀದಿ ನಿಲ್ಲಿಸಿದ್ರೆ ಸಂಘರ್ಷ ನಿಲ್ಲಿಸಲು ಹೆಚ್ಚು ಪ್ರಯೋಜನವಾಗುತ್ತದೆ. ಭಾರತದ ಜೊತೆಗೆ, ಇಂಧನ ಮತ್ತು ಮುಕ್ತ ವ್ಯಾಪಾರ ಸಹಕಾರದ ವಿಷಯದಲ್ಲಿ ನಾನು ಬದ್ಧನಾಗಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: PublicTV Explainer: ಭಾರತದ ಯುವ ಪ್ರತಿಭೆಗಳಿಗೆ ಅಮೆರಿಕ ವೀಸಾ ತಡೆಗೋಡೆ?; ಏನಿದು H-1B ವೀಸಾ ಹೊಸ ರೂಲ್ಸ್‌?

    ಇನ್ನೂ ಭಾರತವು ನಿರಂತರವಾಗಿ ತೈಲ ಖರೀದಿಸುತ್ತಿರುವ ಬಗ್ಗೆ ಮಾತನಾಡಿದ ಕ್ರಿಸ್‌ ರೈಟ್‌, ಭಾರತವು ರಷ್ಯಾದ ತೈಲ ಖರೀದಿ ಮಾಡುವ ಅಗತ್ಯವಿಲ್ಲ. ಏಕೆಂದ್ರೆ ಭಾರತ ರಿಯಾಯಿತಿ ದರದಲ್ಲಿ ರಷ್ಯಾದ ತೈಲ ಖರೀದಿ ಮಾಡುವುದು, ಪ್ರತಿವಾರ ಸಾವಿರಾರು ಜನರನ್ನು ಕೊಲ್ಲುವ ವ್ಯಕ್ತಿಗೆ ಹಣ ನೀಡಿದಂತಾಗುತ್ತಿದೆ. ಅಮೆರಿಕ ಭಾರತವನ್ನು ಶಿಕ್ಷಿಸಲು ಬಯಸುವುದಿಲ್ಲ, ಬದಲಾಗಿ ಯುದ್ಧವನ್ನು ಕೊನೆಗೊಳಿಸಲು ಬಯಸುತ್ತದೆ. ಹಾಗಾಗಿ ರಷ್ಯಾದ ತೈಲ ಖರೀದಿ ನಿಲ್ಲಿಸಬೇಕು. ಅಮೆರಿಕ ಬಳಿ ಮಾರಾಟ ಮಾಡಲು ತೈಲ ಇದೆ. ಭಾರತ ನಮ್ಮ ಸಂಬಂಧವನ್ನು ಬಯಸಿದ್ರೆ, ರಷ್ಯಾದ ತೈಲ ಖರೀದಿ ನಿಲ್ಲಿಸಲಿ ಎಂದು ಮನವಿ ಮಾಡಿದ್ದಾರೆ.

  • ರಷ್ಯಾದ ತೈಲ ಖರೀದಿ ರಾಷ್ಟ್ರಗಳ ಮೇಲೆ ಸುಂಕ ವಿಧಿಸಲು G7 ದೇಶಗಳಿಗೆ ಅಮೆರಿಕ ಕರೆ

    ರಷ್ಯಾದ ತೈಲ ಖರೀದಿ ರಾಷ್ಟ್ರಗಳ ಮೇಲೆ ಸುಂಕ ವಿಧಿಸಲು G7 ದೇಶಗಳಿಗೆ ಅಮೆರಿಕ ಕರೆ

    ವಾಷಿಂಗ್ಟನ್‌: ಚೀನಾ ಸೇರಿದಂತೆ ರಷ್ಯಾದಿಂದ ತೈಲ (Russian Oil) ಖರೀದಿ ರಾಷ್ಟ್ರಗಳ ಮೇಲೆ ಸುಂಕ (Tariffs) ವಿಧಿಸುವಂತೆ ಅಮೆರಿಕ ತನ್ನ G7 ದೇಶಗಳಿಗೆ (7 ರಾಷ್ಟ್ರಗಳ ಒಕ್ಕೂಟ) ಕರೆ ನೀಡಿದೆ.

    ಉಕ್ರೇನ್‌ ವಿರುದ್ಧದ ಯುದ್ಧವನ್ನು (Russia Ukraine War) ಸಕ್ರಿಯಗೊಳಿಸಲು ಬಯಸುವ ದೇಶಗಳ ಮೇಲೆ ಸಂಭಾವ್ಯ ಸುಂಕ ವಿಧಿಸುವ ಕುರಿತು 7 ರಾಷ್ಟ್ರಗಳ ಹಣಕಾಸು ಸಚಿವರು ಶುಕ್ರವಾರ ನಡೆದ ಜಿ7 ಸಭೆಯಲ್ಲಿ ಚರ್ಚಿಸಿದರು. ಕೆನಡಾ ಹಣಕಾಸು ಸಚಿವ ಫ್ರಾಂಕೋಯಿಸ್-ಫಿಲಿಪ್ ಷಾಂಪೇನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇದನ್ನೂ ಓದಿ: 50% ತೆರಿಗೆ ಹಾಕುವುದು ಸುಲಭವಾಗಿರಲಿಲ್ಲ, ಇದರಿಂದಾಗಿಯೇ ಭಾರತದ ಜೊತೆ ಭಿನ್ನಾಭಿಪ್ರಾಯ ಶುರುವಾಯ್ತು: ಟ್ರಂಪ್‌

    ಸಭೆಯಲ್ಲಿ ಉಕ್ರೇನ್‌ ವಿರುದ್ಧ ಯುದ್ಧವನ್ನು ಕೊನೆಗಾಣಿಸಲು ರಷ್ಯಾದ ಮೇಲೆ ಸಾಧ್ಯವಾದಷ್ಟು ಒತ್ತಡ ಹೆಚ್ಚಿಸುವ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಜೊತೆಗೆ ರಷ್ಯಾದ ಯುದ್ಧದ ಪ್ರಯತ್ನಕ್ಕೆ ಸಹಕಾರ ನೀಡುತ್ತಿರುವ ದೇಶಗಳ ಮೇಲೆ ಮತ್ತಷ್ಟು ನಿರ್ಬಂಧ ಹಾಗೂ ಸುಂಕದಂತಹ ಆರ್ಥಿಕ ಕ್ರಮಗಳನ್ನು ಕೈಗೊಳ್ಳಲು ಚರ್ಚೆ ನಡೆಸಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಸಮುದ್ರದ ತಳದಲ್ಲಿ ಇದೆಯಂತೆ ಸಿಹಿನೀರು – ಭೂಮಿ ಮೇಲಿನ ಜನರಿಗೆ ಕುಡಿಯೋಕೆ ಸಿಗುತ್ತಾ?

    ಸಭೆಯ ಬಳಿಕ ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್, ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ (Scott Bessent) ಜಂಟಿ ಹೇಳಿಕೆ ಬಿಡುಗಡೆ ಮಾಡಿದರು. ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಮೇಲೆ ಸುಂಕ ವಿಧಿಸಲು ಅಮೆರಿಕದೊಂದಿಗೆ ಸೇರಬೇಕು ಕರೆ ನೀಡಲಾಗಿದೆ. ಪುಟಿನ್‌ ಅವರ ಯುದ್ಧ ತಂತ್ರವನ್ನು ಕೊನೆಗೊಳಿಸಬೇಕಾದ್ರೆ ಹಣಕಾಸು ಒದಗಿಸುವುದನ್ನು ಕಡಿತಗೊಳಿಸಬೇಕು. ಅರ್ಥಹೀನ ಹತ್ಯೆಯನ್ನು ತಡೆಯಲು ಇದೊಂದೇ ಮಾರ್ಗ, ಆರ್ಥಿಕ ಒತ್ತಡ ಸೃಷ್ಟಿಸಿದ್ರೆ ಯುದ್ಧ ತಾನಾಗೇ ನಿಲ್ಲುತ್ತದೆ ಎಂದು ಹೇಳಿದ್ದಾರೆ.

    ಇದಕ್ಕೂ ಮುನ್ನ ಅಮೆರಿಕದ ಖಜಾನೆ ವಕ್ತಾರರು, ಜಿ7 ಮತ್ತು ಯುರೋಪಿಯನ್ ಒಕ್ಕೂಟ ರಾಷ್ಟ್ರಗಳಿಗೆ ರಷ್ಯಾದ ತೈಲ ಖರೀದಿಯನ್ನ ನಿಲ್ಲಿಸುವಂತೆ ಒತ್ತಡ ಹೇರುವಂತೆ ಕರೆ ನೀಡಿದ್ದರು. ಇದನ್ನೂ ಓದಿ: ನೇಪಾಳದಲ್ಲಿ ಸಿಲುಕಿರುವ ಹುಬ್ಬಳ್ಳಿಯ ಐವರು – ಭಾರತಕ್ಕೆ ಮರಳಲಾಗದೇ ಪರದಾಟ

    ಸುಂಕ ವಿಧಿಸಿದ್ದೇಕೆ?
    ರಷ್ಯಾದಿಂದ ಭಾರತ ತೈಲ ಖರೀದಿಸುತ್ತಿದೆ. ಈ ಮೂಲಕ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಫಂಡಿಂಗ್‌ ಮಾಡುತ್ತಿದೆ ಅನ್ನೋದು ಟ್ರಂಪ್‌ ಅವರ ಬಲವಾದ ವಾದ. ಅದಕ್ಕಾಗಿ ಈ ಹಿಂದೆ ವಿಧಿಸಿದ್ದ 25% ಆಮದು ಸುಂಕವನ್ನ ಕಳೆದ ಆಗಸ್ಟ್‌ 27ರಿಂದ 50%ಗೆ ಏರಿಸಿದೆ. ಆದ್ರೆ ಪಾಕಿಸ್ತಾನದ ಆಮದಿನ ಮೇಲೆ ಟ್ರಂಪ್‌ 19% ಸುಂಕ ಮಾತ್ರ ವಿಧಿಸಿದ್ದಾರೆ. ಇದನ್ನೂ ಓದಿ: ಚಾರ್ಲಿ ಕಿರ್ಕ್‌ ಹತ್ಯೆಯ ಶಂಕಿತ ಆರೋಪಿ ಬಂಧನ: ಡೊನಾಲ್ಡ್‌ ಟ್ರಂಪ್‌

  • ಅಮೆರಿಕ ಒತ್ತಡದ ನಡುವೆ ಭಾರತಕ್ಕೆ ರಷ್ಯಾ ಗಿಫ್ಟ್‌; ಇನ್ನಷ್ಟು S-400 ವಾಯು ರಕ್ಷಣಾ ವ್ಯವಸ್ಥೆ ಪೂರೈಕೆಗೆ ನಿರ್ಧಾರ

    ಅಮೆರಿಕ ಒತ್ತಡದ ನಡುವೆ ಭಾರತಕ್ಕೆ ರಷ್ಯಾ ಗಿಫ್ಟ್‌; ಇನ್ನಷ್ಟು S-400 ವಾಯು ರಕ್ಷಣಾ ವ್ಯವಸ್ಥೆ ಪೂರೈಕೆಗೆ ನಿರ್ಧಾರ

    – ಮತ್ತಷ್ಟು ರಿಯಾಯಿತಿ ದರದಲ್ಲಿ ಕಚ್ಚಾತೈಲ ಖರೀದಿಗೆ ಭಾರತ ನಿರ್ಧಾರ

    ಮಾಸ್ಕೋ: ಅಮೆರಿಕ ಸುಂಕ ಸಮರದ ನಡುವೆಯೂ ಹೆಚ್ಚಿನ S-400 ವಾಯು ರಕ್ಷಣಾ ವ್ಯವಸ್ಥೆಗಳಿಗಾಗಿ (S-400 Air Defence Systems) ರಷ್ಯಾ, ಭಾರತ ಮಾತುಕತೆ ನಡೆಸುತ್ತಿವೆ ಎಂದು ವರದಿಯಾಗಿದೆ. ಇದು ಭಾರತ ಮತ್ತು ರಷ್ಯಾ (India – Russia) ನಡುವಿನ ಸಂಬಂಧ ಬಲಗೊಳ್ಳುತ್ತಿರುವುದಕ್ಕೆ ಉದಾಹರಣೆಯಾಗಿದೆ.

    S-400 ವಾಯು ರಕ್ಷಣಾ ವ್ಯವಸ್ಥೆಗಳ ಪೂರೈಕೆಯನ್ನು ಹೆಚ್ಚಿಸಲು ರಷ್ಯಾ ಮತ್ತು ಭಾರತ ಮಾತುಕತೆ ನಡೆಸುತ್ತಿವೆ. ಭಾರತ ಈಗಾಗಲೇ ಎಸ್‌-400 (ಸುದರ್ಶನ ಚಕ್ರ) ಹೊಂದಿದ್ದರೂ ಇದರ ಪೂರೈಕೆ ಇನ್ನಷ್ಟು ಹೆಚ್ಚಿಸಲು ಮಾತುಕತೆ ನಡೆಯುತ್ತಿದೆ ಎಂದು ರಷ್ಯಾ ಮಿಲಿಟರಿ ವಿಭಾಗದ ಹಿರಿಯ ಅಧಿಕಾರಿ ಡಿಮಿಟ್ರಿ ಶುಗಾಯೆವ್‌ ತಿಳಿಸಿದ್ದಾರೆ.

    2018ರಲ್ಲಿ ಭಾರತ ಎಸ್‌-400 ವಾಯು ರಕ್ಷಣಾ ವ್ಯವಸ್ಥೆಗಳಿಗಾಗಿ ರಷ್ಯಾದೊಂದಿಗೆ 5.5 ಶತಕೋಟಿ ಡಾಲರ್‌ ಒಪ್ಪಂದಕ್ಕೆ ಸಹಿ ಹಾಕಿತ್ತು. ಚೀನಾದ (China) ಮಿಲಿಟರಿ ಶಕ್ತಿಯನ್ನು ಎದುರಿಸುವ ಉದ್ದೇಶದಿಂದ ಅಂದು ಭಾರತ, ರಷ್ಯಾ ಜೊತೆ ಈ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದ್ರೆ ಈವರೆಗಿನ ಪೂರೈಕೆಯಲ್ಲಿ ವಿಳಂಬವಾಗಿತ್ತು. ಇದೀಗ ಈ ಒಪ್ಪಂದದ ಅಡಿಯಲ್ಲಿ ಕೊನೆಯ 2 ಘಟಕಗಳು 2026 ಮತ್ತು 2027ರ ವೇಳೆ ಭಾರತಕ್ಕೆ ಲಭ್ಯವಾಗಲಿದೆ ಎಂದು ವರದಿಗಳು ತಿಳಿಸಿವೆ.

    ಆಪರೇಷನ್‌ ಸಿಂಧೂರದಲ್ಲಿ ಯಶಸ್ವಿ ಕಾರ್ಯಾಚರಣೆ
    ಆಪರೇಷನ್ ಸಿಂಧೂರ ಸಮಯದಲ್ಲಿ ಎಸ್-400 ವಾಯು ರಕ್ಷಣಾ ವ್ಯವಸ್ಥೆಗಳು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ್ದವು. ದೀರ್ಘ-ಶ್ರೇಣಿಯ ಮೇಲ್ಮೈಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆಯು ಪಾಕ್‌ನ ಮಿಸೈಲ್‌, ಡ್ರೋನ್‌ಗಳನ್ನು ಹೊಡೆದುರುಳಿಸಿದ್ದವು. ಇದಾದ ಬಳಿಕ ವಿಶ್ವದ ಬೇರೆ ಬೇರೆ ರಾಷ್ಟ್ರಗಳಿಂದಲೂ ಎಸ್‌-400 ಗೆ ಬೇಡಿಕೆ ಹೆಚ್ಚಾಗಿತ್ತು. ಪಾಕ್‌ ಕೂಡ ಭಾರತಕ್ಕೆ ನೀಡಿರುವ ವಾಯು ರಕ್ಷಣಾ ವ್ಯವಸ್ಥೆಯನ್ನ ತಮಗೆ ಕೊಡುವಂತೆ ಮನವಿ ಮಾಡಿಕೊಂಡಿತ್ತು.

    ಸುದರ್ಶನ ಚಕ್ರ ವಿಶೇಷತೆ ಏನು?
    IAF ಸೇವೆಯಲ್ಲಿ ಸುದರ್ಶನ ಚಕ್ರ ಎಂದು ಕರೆಯಲ್ಪಡುವ S-400 ಟ್ರಯಂಫ್, ವಿಶ್ವದ ಅತ್ಯಂತ ಮುಂದುವರಿದ ದೀರ್ಘ-ಶ್ರೇಣಿಯ ವಾಯು ರಕ್ಷಣಾ ವ್ಯವಸ್ಥೆಗಳಲ್ಲಿ ಒಂದಾಗಿದೆ. ರಷ್ಯಾ ನಿರ್ಮಿತ ಮತ್ತು ಭಾರತದ ಕಾರ್ಯತಂತ್ರದ ವಾಯು ರಕ್ಷಣಾ ಕಮಾಂಡ್‌ಗೆ ಇದು ಸಂಯೋಜಿಸಲ್ಪಟ್ಟದೆ. ರಹಸ್ಯ ವಿಮಾನಗಳು, ಕ್ರೂಸ್ ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ಯುದ್ಧತಂತ್ರದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಾಯುಗಾಮಿ ಬೆದರಿಕೆಗಳನ್ನು ಪತ್ತೆಹಚ್ಚುವ ಮತ್ತು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ಏಕಕಾಲಕ್ಕೆ 80 ಗುರಿಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಇದಕ್ಕಿದೆ.

    ರಿಯಾಯಿತಿ ದರದಲ್ಲಿ ಕಚ್ಚಾತೈಲ ಖರೀದಿಗೆ ನಿರ್ಧಾರ
    ಇನ್ನೂ ಟ್ರಂಪ್‌ ಸುಂಕದ ಬೆದರಿಕೆಗೆ ಡೋಂಟ್‌ ಕೇರ್‌ ಎಂದಿರುವ ಭಾರತ, ರಷ್ಯಾದಿಂದ ಇನ್ನಷ್ಟು ರಿಯಾಯಿತಿ ದರದಲ್ಲಿ‌ ಹೆಚ್ಚಿನ ಪ್ರಮಾಣದ ಕಚ್ಚಾತೈಲ ಖರೀದಿಗೆ ನಿರ್ಧರಿಸಿದೆ. ಇದರಿಂದ ಭಾರತಕ್ಕೆ ಹೆಚ್ಚಿನ ಉಳಿತಾಯ ಆಗಲಿದೆ ಎಂದು ತಿಳಿದುಬಂದಿದೆ.

  • ಭಾರತ ಈಗ ಸುಂಕ ಕಡಿಮೆ ಮಾಡೋಕೆ ಮುಂದಾಗಿದೆ – ಭಾರತದ ಜೊತೆಗಿನ ಸಂಬಂಧವನ್ನ ವಿಪತ್ತು ಎಂದ ಟ್ರಂಪ್‌

    ಭಾರತ ಈಗ ಸುಂಕ ಕಡಿಮೆ ಮಾಡೋಕೆ ಮುಂದಾಗಿದೆ – ಭಾರತದ ಜೊತೆಗಿನ ಸಂಬಂಧವನ್ನ ವಿಪತ್ತು ಎಂದ ಟ್ರಂಪ್‌

    – ವರ್ಷಗಳ ಹಿಂದೆಯೇ ಭಾರತ ಈ ಹೆಜ್ಜೆಯನ್ನಿಡಬೇಕಿತ್ತು
    – ಭಾರತದೊಂದಿಗೆ ನೇರ ಯುದ್ಧಕ್ಕಿಳಿದ್ರಾ ಟ್ರಂಪ್‌?

    ವಾಷಿಂಗ್ಟನ್‌: ಭಾರತದ ಆಮದು ಸರಕುಗಳ ಮೇಲೆ 50% ಹೆಚ್ಚುವರಿ ಸುಂಕ ವಿಧಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಇದೀಗ ಭಾರತದ ಜೊತೆಗಿನ ವ್ಯಾಪಾರ ಸಂಬಂಧವನ್ನು ʻಏಕಪಕ್ಷೀಯ ವಿಪತ್ತುʼ ಒನ್‌ ಡೈಡ್‌ ಡಿಸಾಸ್ಟರ್‌ (one-sided disaster) ಎಂದು ಕರೆದಿದ್ದಾರೆ.

    ಭಾರತದೊಂದಿಗಿನ ವ್ಯಾಪಾರ ಸಂಬಂಧಗಳ ಕುರಿತು ಸೋಮವಾರ ಟ್ರಂಪ್ ತಮ್ಮ ಸೋಷಿಯಲ್‌ ಮೀಡಿಯಾ ವೇದಿಕೆ ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಭಾರತವು ಅಮೆರಿಕಕ್ಕೆ ಹೆಚ್ಚಿನ ಸರಕುಗಳನ್ನು (Good) ರಫ್ತು ಮಾಡುತ್ತದೆ. ನಮ್ಮೊಂದಿಗೆ ಅಪಾರ ಪ್ರಮಾಣದ ವ್ಯವಹಾರ ಮಾಡುತ್ತಾರೆ. ಇದು ಬಹಳ ಕಡಿಮೆ ಜನರಿಗೆ ತಿಳಿದಿದೆ. ಅವರು ನಮಗೆ ಬೃಹತ್‌ ಪ್ರಮಾಣದ ಸರಕುಗಳನ್ನು ರಫ್ತು ಮಾಡುವುದರಿಂದ ಭಾರತದ ಅತಿದೊಡ್ಡ ಕ್ಲೈಂಟ್‌ ನಾವಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ಪುಟಿನ್‌ ಜೊತೆ ಒಂದೇ ಕಾರಿನಲ್ಲಿ ಮೋದಿ ಪ್ರಯಾಣ

    ಭಾರತ ನಮಗೆ ಬೃಹತ್‌ ಪ್ರಮಾಣದ ಸರಕು ರಫ್ತು ಮಾಡುತ್ತದೆ. ಆದ್ರೆ ನಾವು ಭಾರತದೊಂದಿಗೆ ಬಹಳ ಕಡಿಮೆ ವ್ಯವಹಾರ ಮಾಡುತ್ತೇವೆ. ಕಡಿಮೆ ಸರಕುಗಳನ್ನ ರಫ್ತು (US Goods) ಮಾಡುತ್ತೇವೆ. ಇಲ್ಲಿಯವರೆಗೆ ಸಂಪೂರ್ಣವಾಗಿ ಏಕಪಕ್ಷೀಯ ಸಂಬಂಧ ಇದಾಗಿದೆ. ಇದು ಹಲವು ದಶಕಗಳಿಂದ ನಡೆತ್ತಿರುವ ‘ಏಕಪಕ್ಷೀಯ ವಿಪತ್ತು’ ಎಂದು ಟ್ರಂಪ್ ಕರೆದಿದ್ದಾರೆ. ಇದನ್ನೂ ಓದಿ: ಭಯೋತ್ಪಾದನೆ ವಿಚಾರದಲ್ಲಿ ಡಬಲ್ ಸ್ಟ್ಯಾಂಡರ್ಡ್‌ ಸರಿಯಲ್ಲ: ಪಾಕ್ ಪ್ರಧಾನಿ ಮುಂದೆಯೇ ಪಹಲ್ಗಾಮ್ ದಾಳಿ ವಿಚಾರ ಪ್ರಸ್ತಾಪಿಸಿದ ಮೋದಿ

    ಭಾರತದ ಸುಂಕವು ವಿಶ್ವದಲ್ಲೇ ಅತ್ಯಧಿಕವಾಗಿದೆ
    ಅಲ್ಲದೇ ಇಲ್ಲಿಯವರೆಗೆ ಭಾರತವು (India) ವಿಶ್ವದಲ್ಲೇ ಅತ್ಯಧಿಕ ಆಮದು ಸುಂಕವನ್ನು (Tariffs) ವಿಶಿಸುತ್ತಿದೆ. ಆದ ಕಾರಣ ಅಮೆರಿಕದ ಕಂಪನಿಗಳು ಭಾರತದಲ್ಲಿ ವ್ಯಾಪಾರ ಮಾಡಲು ಕಷ್ಟಕರವೆನಿಸಿದೆ. ಅಲ್ಲದೇ ಭಾರತವು ರಷ್ಯಾದಿಂದ ಬೃಹತ್‌ ಪ್ರಮಾಣದಲ್ಲಿ ತೈಲ ಮತ್ತು ಮಿಲಿಟರಿ ಉಪಕರಣಗಳನ್ನು ಖರೀದಿಸುತ್ತದೆ. ಆದ್ರೆ ಅಮೆರಿಕದಿಂದ ಕಡಿಮೆ ಖರೀದಿ ಮಾಡುತ್ತದೆ ಎಂದು ಉಲ್ಲೇಖಿಸಿದ್ದಾರೆ.

    ಮುಂದುವರಿದು.. ಭಾರತವು ಈಗ ಅಮೆರಿಕದ ಆಮದುಗಳ ಮೇಲಿನ ಸುಂಕ ಕಡಿಮೆ ಮಾಡಲು ಮುಂದಾಗಿದೆ. ಆದ್ರೆ ಇದು ತುಂಬಾ ತಡವಾಗಿದೆ. ಭಾರತ ಈ ಹೆಜ್ಜೆಯನ್ನು ವರ್ಷಗಳ ಹಿಂದೆಯೇ ತೆಗೆದುಕೊಳ್ಳಬೇಕಿತ್ತು ಎಂದು ಟ್ರಂಪ್‌ ಹೇಳಿದ್ದಾರೆ. ಇದನ್ನೂ ಓದಿ: ಪುಟಿನ್‌, ಮೋದಿ, ಜಿನ್‌ಪಿಂಗ್‌ ಮಾತುಕತೆ – Video Of The Day ಎಂದ ರಷ್ಯಾ

    ಪಾಕ್‌ಗಿಂತಲೂ ಭಾರತಕ್ಕೆ ಸುಂಕ ಅಧಿಕ
    ಈ ಹಿಂದೆ 25% ಆಮದು ಸುಂಕ ವಿಧಿಸಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್‌, ಭಾರತ ರಷ್ಯಾದಿಂದ ತೈಲ ಖರೀದಿ ಮುಂದುವರಿಸಿದ ಬಳಿಕ ಆಗಸ್ಟ್‌ 27ರಿಂದ ಅನ್ವಯವಾಗುವಂತೆ 50% ಸುಂಕ ವಿಧಿಸಿದ್ದಾರೆ. ಆದ್ರೆ ಪಾಕಿಸ್ತಾನದ ಆಮದಿನ ಮೇಲೆ ಟ್ರಂಪ್‌ 19% ಸುಂಕ ಮಾತ್ರ ವಿಧಿಸಿದ್ದಾರೆ. ಇದೆಲ್ಲದರ ಹೊರತಾಗಿಯೂ ಸೋಮವಾರ ಷೇರುಪಟೆ ಚೇತರಿಕೆ ಕಂಡಿದೆ. ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿಸಿ ಬ್ರಾಹ್ಮಣರು ಶ್ರೀಮಂತರಾಗುತ್ತಿದ್ದಾರೆ: ಭಾರತದ ವಿರುದ್ಧ ಟ್ರಂಪ್‌ ಆಪ್ತನಿಂದ ಜಾತಿ ಅಸ್ತ್ರ

  • ರಷ್ಯಾ ತೈಲ ಖರೀದಿಸಲು ಸಾಧ್ಯವಾಗದಿದ್ರೆ ಭಾರತಕ್ಕಿರೋ ಆಯ್ಕೆಗಳೇನು? – ಅಮೆರಿಕಗೆ ಭಾರತವೇ ಯಾಕೆ ಟಾರ್ಗೆಟ್?‌

    ರಷ್ಯಾ ತೈಲ ಖರೀದಿಸಲು ಸಾಧ್ಯವಾಗದಿದ್ರೆ ಭಾರತಕ್ಕಿರೋ ಆಯ್ಕೆಗಳೇನು? – ಅಮೆರಿಕಗೆ ಭಾರತವೇ ಯಾಕೆ ಟಾರ್ಗೆಟ್?‌

    – ರಷ್ಯಾ ತೈಲ ಖರೀದಿಯಲ್ಲಿ ಅತಿದೊಡ್ಡ ಪಾಲುದಾರ ಚೀನಾ ಟಾರ್ಗೆಟ್‌ ಯಾಕಿಲ್ಲ?

    ಲಸ್ಕಾ ಶೃಂಗಸಭೆಯಿಂದ ಸಕಾರಾತ್ಮಕ ಫಲಿತಾಂಶ ದೊರೆಯುವ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ನಿರಾಸೆಯಾಗಿದೆ. ಡೊನಾಲ್ಡ್ ಟ್ರಂಪ್ ಮತ್ತು ವ್ಲಾಡಿಮಿರ್ ಪುಟಿನ್ ಅವರು ಭಾರತದ ರಫ್ತುಗಳ ಮೇಲೆ ಹೆಚ್ಚುವರಿ 25% ಸುಂಕವನ್ನು ವಿಧಿಸುವುದನ್ನು ತಪ್ಪಿಸಲು ಅಸಮರ್ಥರಾಗಿರುವುದು ನಿರಾಶೆಯನ್ನುಂಟು ಮಾಡಿದೆ. ಅಲಸ್ಕಾದಲ್ಲಿ ಅಮೆರಿಕ-ರಷ್ಯಾ ಮಾತುಕತೆಗಳು ಅಪೂರ್ಣಗೊಂಡಿವೆ. ಇದರಿಂದ ಭಾರತದ ವ್ಯಾಪಾರ ಮಾತುಕತೆಗಳ ಬಗ್ಗೆ ಅನಿಶ್ಚಿತತೆಯ ಮೋಡ ಆವರಿಸಿದೆ. ಇದುವರೆಗೂ ಎಚ್ಚರಿಕೆಯ ಹೆಜ್ಜೆ ಇಟ್ಟಿರುವ ಭಾರತದ ಮುಂದಿನ ನಡೆಯೂ ಕುತೂಹಲ ಮೂಡಿಸಿದೆ.

    ರಷ್ಯಾದಿಂದ ತೈಲ ಆಮದಿನ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನದನ್ನು ಭಾರತವೇ ಪಡೆಯುತ್ತಿದೆ. ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ ವಿರುದ್ಧ ಅಮೆರಿಕಗೆ ಅಸಮಾಧಾನ ಇದೆ. ಹೀಗಾಗಿ, ರಷ್ಯಾದಿಂದ ತೈಲ ಖರೀದಿಸದಂತೆ ಭಾರತಕ್ಕೆ ಅಮೆರಿಕ ಎಚ್ಚರಿಸುತ್ತಲೇ ಬಂದಿದೆ. ಆದರೆ, ಭಾರತ ಅದಕ್ಕೆ ಕ್ಯಾರೆ ಎಂದಿಲ್ಲ. ಇದರಿಂದ ಕೆರಳಿರುವ ಟ್ರಂಪ್ ಭಾರತದ ಮೇಲೆ 50% ಸುಂಕ ವಿಧಿಸಿದ್ದಾರೆ. ಅಮೆರಿಕದ ಸಂಭಾವ್ಯ ದಂಡಗಳಿಂದಾಗಿ ರಷ್ಯಾದ ಆಮದುಗಳನ್ನು ಕಡಿತಗೊಳಿಸಬೇಕಾದ ಪರಿಸ್ಥಿತಿ ಬಂದರೆ ಭಾರತದ ಮುಂದಿನ ಕಥೆ ಏನು ಎಂಬ ಪ್ರಶ್ನೆ ಮೂಡಿದೆ. ಸುಂಕಕ್ಕೆ ಬಗ್ಗದೇ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಾ? ಯುಎಸ್‌ನ ಸುಂಕದಿಂದ ಪಾರಾಗಲು ನಿರ್ಧಾರ ಕೈಗೊಳ್ಳುತ್ತಾ? ಒಂದು ವೇಳೆ ರಷ್ಯಾದ ತೈಲ ಖರೀದಿಯನ್ನು ಕೈಬಿಟ್ಟರೆ ಭಾರತಕ್ಕೆ ಇರುವ ಆಯ್ಕೆಗಳೇನು ಎಂಬ ಪ್ರಶ್ನೆಗಳಿಗೆ ವಿವರ ಇಲ್ಲಿದೆ.

    ಭಾರತ, ರಷ್ಯಾದ ತೈಲವನ್ನೇ ಆಮದು ಮಾಡಿಕೊಳ್ಳೋದ್ಯಾಕೆ?
    2022 ರಲ್ಲಿ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ಪಾಶ್ಚಿಮಾತ್ಯ ದೇಶಗಳು ರಷ್ಯಾ ಮೇಲೆ ನಿರ್ಬಂಧಗಳನ್ನು ವಿಧಿಸಿ ತನ್ನ ಪೂರೈಕೆಯನ್ನು ನಿಲ್ಲಿಸಿದವು. ನಂತರ ಭಾರತವು ರಿಯಾಯಿತಿ ದರದಲ್ಲಿ ಮಾರಾಟವಾಗುವ ರಷ್ಯಾದ ತೈಲವನ್ನು ಖರೀದಿಸಲು ಮುಂದಾಯಿತು. ಉಕ್ರೇನ್ ಯುದ್ಧದ ಮೊದಲು ರಷ್ಯಾ 2% ಕ್ಕಿಂತ ಕಡಿಮೆಯಿದ್ದದ್ದು, ಭಾರತದ ಒಟ್ಟಾರೆ ಪೂರೈಕೆಯಲ್ಲಿ ಸುಮಾರು 35% ರಷ್ಟನ್ನು ಹೊಂದಿದೆ. ಭಾರತಕ್ಕೆ ಅತಿ ಹೆಚ್ಚು ತೈಲ ಪೂರೈಕೆದಾರ ರಾಷ್ಟ್ರವಾಗಿದೆ. ಪಾಶ್ಚಿಮಾತ್ಯ ದೇಶಗಳ ನಿರ್ಬಂಧದ ನಂತರ ಪೂರೈಕೆ ಕೊರತೆಯ ಭೀತಿಯಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ 11,963 ರೂ.ಗೆ ಏರಿತು. ರಿಯಾಯಿತಿ ದರದಲ್ಲಿ ರಷ್ಯಾದ ಕಚ್ಚಾ ತೈಲವು ಭಾರತೀಯ ಸಂಸ್ಕರಣಾಗಾರಗಳ ವೆಚ್ಚವನ್ನು ಕಡಿಮೆ ಮಾಡಿದೆ. ಭಾರತವು ತನ್ನ ತೈಲ ಅಗತ್ಯಗಳಲ್ಲಿ 85% ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತದೆ.

    ಭಾರತ ಎಷ್ಟು ರಷ್ಯಾದ ತೈಲವನ್ನು ಖರೀದಿಸುತ್ತೆ?
    ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕ ರಾಷ್ಟ್ರವಾದ ಭಾರತವು ಈ ವರ್ಷದ ಮೊದಲಾರ್ಧದಲ್ಲಿ ದಿನಕ್ಕೆ ಸುಮಾರು 1.75 ಮಿಲಿಯನ್ ಬ್ಯಾರೆಲ್‌ಗಳಷ್ಟು ರಷ್ಯಾದ ತೈಲವನ್ನು ಖರೀದಿಸಿದೆ. ಇದು ಒಂದು ವರ್ಷದ ಹಿಂದಿನದಕ್ಕಿಂತ 1% ಹೆಚ್ಚಾಗಿದೆ ಎಂದು ವ್ಯಾಪಾರ ದತ್ತಾಂಶಗಳು ತೋರಿಸಿವೆ. ಭಾರತದ ರಾಜ್ಯ ಸಂಸ್ಕರಣಾಗಾರರು ರಷ್ಯಾದ ತೈಲವನ್ನು ವ್ಯಾಪಾರಿಗಳಿಂದ ಖರೀದಿಸುತ್ತಿದ್ದರೆ, ಖಾಸಗಿ ಸಂಸ್ಕರಣಾಗಾರರಾದ ನಯಾರಾ ಎನರ್ಜಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RELI.NS) ಹೊಸ ಟ್ಯಾಬ್ ಅನ್ನು ತೆರೆಯುತ್ತದೆ. ವಿಶ್ವದ ಅತಿದೊಡ್ಡ ಸಂಸ್ಕರಣಾ ಸಂಕೀರ್ಣದ ನಿರ್ವಾಹಕರು, ರೋಸ್ನೆಫ್ಟ್ (ROSN.MM) ನೊಂದಿಗೆ ದೀರ್ಘಾವಧಿಯ ಪೂರೈಕೆ ಒಪ್ಪಂದಗಳನ್ನು ಹೊಂದಿದ್ದಾರೆ.

    ರಷ್ಯಾ ತೈಲವನ್ನು ಭಾರತ ಖರೀದಿಸಬಾರದು ಅಂತ ಟ್ರಂಪ್ ಹೇಳೋದ್ಯಾಕೆ?
    ರಷ್ಯಾದ ತೈಲ ಖರೀದಿಯನ್ನು ಮುಂದುವರೆಸುತ್ತಿರುವುದರಿಂದ, ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ಸುಂಕವನ್ನು 50%ಗೆ ಗಣನೀಯವಾಗಿ ಹೆಚ್ಚಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಉಕ್ರೇನ್‌ನೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳಲು ವಿಫಲವಾದರೆ ರಷ್ಯಾದ ರಫ್ತುಗಳನ್ನು ಖರೀದಿಸುವ ದೇಶಗಳು ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಭಾರತವು ರಷ್ಯಾದೊಂದಿಗಿನ ತನ್ನ ದೀರ್ಘಕಾಲದ ಸಂಬಂಧಗಳು ಮತ್ತು ಅದರ ಆರ್ಥಿಕ ಅಗತ್ಯಗಳನ್ನು ಉಲ್ಲೇಖಿಸಿ ಟ್ರಂಪ್ ನಿಲುವನ್ನು ವಿರೋಧಿಸಿದೆ. ಆದಾಗ್ಯೂ, ದೇಶದ ರಾಜ್ಯ ಸಂಸ್ಕರಣಾಗಾರರು ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಿದ್ದಾರೆ.

    ರಷ್ಯಾದ ತೈಲ ಖರೀದಿಸಲು ಆಗದಿದ್ರೆ ಭಾರತಕ್ಕಿರುವ ಆಯ್ಕೆಗಳೇನು?
    ರಷ್ಯಾದ ಹೊರತಾಗಿ, ಭಾರತವು ಉಕ್ರೇನ್ ಯುದ್ಧದ ಮೊದಲು ತನ್ನ ಪ್ರಮುಖ ಪೂರೈಕೆದಾರ ಇರಾಕ್‌ನಿಂದ ತೈಲವನ್ನು ಖರೀದಿಸುತ್ತಿತ್ತು. ನಂತರ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ನಿಂದ ಖರೀದಿಸಿದೆ. ಭಾರತೀಯ ಸಂಸ್ಕರಣಾಗಾರರು ವಾರ್ಷಿಕ ಒಪ್ಪಂದಗಳಡಿ ಹೆಚ್ಚಾಗಿ ಮಧ್ಯಪ್ರಾಚ್ಯ ಉತ್ಪಾದಕರಿಂದ ತೈಲವನ್ನು ಖರೀದಿಸುತ್ತಾರೆ. ಟ್ರಂಪ್ ಅವರ ನಿರ್ಬಂಧಗಳ ಎಚ್ಚರಿಕೆಯ ನಂತರ, ಸಂಸ್ಕರಣಾಗಾರರು ಯುನೈಟೆಡ್ ಸ್ಟೇಟ್ಸ್, ಮಧ್ಯಪ್ರಾಚ್ಯ, ಪಶ್ಚಿಮ ಆಫ್ರಿಕಾ ಮತ್ತು ಅಜೆರ್ಬೈಜಾನ್‌ನಿಂದ ಕಚ್ಚಾ ತೈಲವನ್ನು ಖರೀದಿಸಿದ್ದಾರೆ.

    ಅಮೆರಿಕಗೆ ಭಾರತವೇ ಯಾಕೆ ಟಾರ್ಗೆಟ್?
    ರಷ್ಯಾದ ಅತಿದೊಡ್ಡ ಇಂಧನ ಖರೀದಿದಾರರಲ್ಲಿ ಭಾರತದಂತೆಯೇ ಚೀನಾ ಕೂಡ ಇದೆ. ಆದರೆ, ಭಾರತವನ್ನು ಮಾತ್ರ ಅಮೆರಿಕ ಟಾರ್ಗೆಟ್ ಮಾಡುತ್ತಿದೆ. ಹಾಗಾದರೆ, ಟ್ರಂಪ್ ಆಡಳಿತವು ಚೀನಾ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ, ರಷ್ಯಾದ ತೈಲ ಖರೀದಿ ನಿಲ್ಲಿಸುವಂತೆ ಭಾರತದ ಮೇಲೆ ಒತ್ತಡ ಹೇರಿದ್ದು ಏಕೆ ಎಂಬುದು ಪ್ರಶ್ನೆಯಾಗಿದೆ. ರಷ್ಯಾದ ತೈಲದ ಅತಿದೊಡ್ಡ ಖರೀದಿದಾರನಾಗಿ ಚೀನಾ ಕಳೆದ ವರ್ಷ ದಾಖಲೆಯ 109 ಮಿಲಿಯನ್ ಟನ್‌ಗಳಷ್ಟು ಆಮದು ಮಾಡಿಕೊಂಡಿದೆ. ಇದು ಅದರ ಒಟ್ಟು ಇಂಧನ ಆಮದಿನ ಸುಮಾರು 20% ಪ್ರತಿನಿಧಿಸುತ್ತದೆ ಎಂದು ಚೀನಾದ ಕಸ್ಟಮ್ಸ್ ಡೇಟಾ ತಿಳಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ ಭಾರತವು 2024 ರಲ್ಲಿ 88 ಮಿಲಿಯನ್ ಟನ್ ರಷ್ಯಾದ ತೈಲವನ್ನು ಆಮದು ಮಾಡಿಕೊಂಡಿತು. ಹೀಗಾಗಿ, ಚೀನಾ ರಷ್ಯಾದ ಪ್ರಮುಖ ಆರ್ಥಿಕ ಜೀವನಾಡಿಯಾಗಿದ್ದು, ಈಗ ನಾಲ್ಕನೇ ವರ್ಷದಲ್ಲಿರುವ ಉಕ್ರೇನ್ ಮೇಲಿನ ಯುದ್ಧದಲ್ಲಿ ರಷ್ಯಾಗೆ ಪರೋಕ್ಷವಾಗಿ ಸಹಾಯ ಮಾಡುತ್ತಿದೆ ಎಂಬ ಆರೋಪಕ್ಕೆ ಕಾರಣವಾಗಿದೆ. ವಸ್ತುಸ್ಥಿತಿ ಹೀಗಿದ್ದರೂ, ಚೀನಾವನ್ನು ಬಿಟ್ಟು ಭಾರತವನ್ನು ಅಮೆರಿಕ ಟಾರ್ಗೆಟ್ ಮಾಡಿ ಹೆಚ್ಚಿನ ಸುಂಕ ವಿಧಿಸಿದೆ.

    ಚೀನ ಮೇಲೆ ಟ್ರಂಪ್ ಹೊಸ ಸುಂಕ ವಿಧಿಸಿಲ್ಲ ಯಾಕೆ?
    ಕಳೆದ ವಾರ ಅಲಾಸ್ಕಾದಲ್ಲಿ ರಷ್ಯಾ-ಉಕ್ರೇನ್ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಒಪ್ಪಂದಕ್ಕೆ ಬರಲು ವಿಫಲವಾದರು. ಇದಾದ ಬಳಿಕ, ಚೀನಾ ಮೇಲೆ ದ್ವಿತೀಯ ನಿರ್ಬಂಧಗಳನ್ನು ವಿಧಿಸುತ್ತೀರಾ ಎಂದು ಕೇಳಿದಾಗ, ಟ್ರಂಪ್, ನಾನು ಅದರ ಬಗ್ಗೆ ಯೋಚಿಸಬೇಕಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಹಲವಾರು ಯುಎಸ್ ಕೈಗಾರಿಕೆಗಳು ಚೀನಾದ ಖನಿಜಗಳ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ, ನಡೆಯುತ್ತಿರುವ ವ್ಯಾಪಾರ ಮಾತುಕತೆಗಳಲ್ಲಿ ಅವು ಕೇಂದ್ರ ಸಮಸ್ಯೆಯಾಗಿ ಉಳಿದಿವೆ. ಯುಎಸ್ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ಚೀನಾ ವಿರುದ್ಧ ದ್ವಿತೀಯ ನಿರ್ಬಂಧಗಳನ್ನು ವಿಧಿಸದಿರುವ ಅಮೆರಿಕದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಉಕ್ರೇನ್ ಯುದ್ಧದ ಮೊದಲು ರಷ್ಯಾದ ತೈಲದ 13% ಅನ್ನು ಚೀನಾ ಖರೀದಿಸಿತು. ಅದು ಈಗ 16% ಹೆಚ್ಚಾಗಿದೆ. ಹೀಗಾಗಿ, ಚೀನಾ ತನ್ನ ತೈಲದ ವೈವಿಧ್ಯಮಯ ಇನ್ಪುಟ್ ಅನ್ನು ಹೊಂದಿದೆ. ಆದರೆ, ಉಕ್ರೇನ್ ಯುದ್ಧದ ಮೊದಲು, ಭಾರತದ ರಷ್ಯಾದ ತೈಲ ಆಮದು ಶೇ.1 ಕ್ಕಿಂತ ಕಡಿಮೆಯಿತ್ತು. ಈಗ ಅದು 42% ರ ವರೆಗೆ ಇದೆ ಎಂದು ತಿಳಿಸಿದ್ದಾರೆ.

    ತೈಲ ಖರೀದಿಗೆ ಭಾರತಕ್ಕೆ 5% ರಿಯಾಯಿತಿ ಕೊಟ್ಟ ರಷ್ಯಾ
    ಭಾರತ ಖರೀದಿಸುವ ತೈಲಗೆ 5% ರಿಯಾಯಿತಿ ನೀಡಲಾಗುವುದು ಎಂದು ರಷ್ಯಾ ತಿಳಿಸಿದೆ. ಭಾರತಕ್ಕೆ ರಷ್ಯಾದ ಉಪ ವ್ಯಾಪಾರ ಪ್ರತಿನಿಧಿ ಎವ್ಗೆನಿ ಗ್ರಿವಾ, ರಾಜಕೀಯ ಪರಿಸ್ಥಿತಿಯ ಹೊರತಾಗಿಯೂ, ಭಾರತವು ಸರಿಸುಮಾರು ಅದೇ ಮಟ್ಟದ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ರಿಯಾಯಿತಿಗಳಿಗೆ ಸಂಬಂಧಿಸಿದಂತೆ, ಇದು ವಾಣಿಜ್ಯ ರಹಸ್ಯವಾಗಿದೆ ಎಂದು ತಿಳಿಸಿದ್ದಾರೆ. ಭಾರತಕ್ಕೆ ಇದು ಸವಾಲಿನ ಪರಿಸ್ಥಿತಿಯಾಗಿದ್ದರೂ, ನಮಗೆ ನಮ್ಮ ಸಂಬಂಧಗಳಲ್ಲಿ ನಂಬಿಕೆ ಇದೆ. ಬಾಹ್ಯ ಒತ್ತಡದ ಹೊರತಾಗಿಯೂ ಭಾರತ-ರಷ್ಯಾ ಇಂಧನ ಸಹಕಾರ ಮುಂದುವರಿಯುತ್ತದೆ’ ಎಂದು ರಷ್ಯಾದ ಉಪ ಮುಖ್ಯಸ್ಥ ಮಿಷನ್ ರೋಮನ್ ಬಾಬುಷ್ಕಿನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ನೆಲೆ ಕಳೆದುಕೊಳ್ತಿದ್ದಾರಾ ಸಣ್ಣ ಪೂರೈಕೆದಾರರು?
    ಭಾರತಕ್ಕೆ ತೈಲ ಪೂರೈಕೆಯಲ್ಲಿ ರಷ್ಯಾದ ಪ್ರಾಬಲ್ಯ ಹೆಚ್ಚಾಗಿದೆ. ಇದು ವ್ಯಾಪಾರದ ಚಲನಶೀಲತೆಯನ್ನು ಬದಲಾಯಿಸಿದೆ. ಆದರೆ, ಮಧ್ಯಪ್ರಾಚ್ಯದ ಪ್ರಮುಖ ಪೂರೈಕೆದಾರರ ಸ್ಥಾನವನ್ನು ಹೆಚ್ಚಾಗಿ ರಷ್ಯಾವೇ ಉಳಿಸಿಕೊಂಡಿದೆ. ಇರಾಕ್, ಸೌದಿ ಅರೇಬಿಯಾ ಮತ್ತು ಯುಎಇ ಪ್ರಾಥಮಿಕ ಪೂರೈಕೆದಾರರಾಗಿ ಉಳಿದಿವೆ. ಆದರೆ, ಸಣ್ಣ ರಫ್ತುದಾರರ ಮಾರುಕಟ್ಟೆ ಉಪಸ್ಥಿತಿ ಕುಗ್ಗಿದೆ. ಉಕ್ರೇನ್ ಸಂಘರ್ಷದ ಮೊದಲು, 2021 ರಿಂದ ಇರಾಕ್ ಮತ್ತು ಸೌದಿ ಅರೇಬಿಯಾದಿಂದ ವಿತರಣೆಗಳು ಸರಿಸುಮಾರು 5% ರಷ್ಟು ಕಡಿಮೆಯಾಗಿದೆ. ಆದರೆ ಯುಎಇ ಸಾಗಣೆಗಳು 3% ರಷ್ಟು ಹೆಚ್ಚಾಗಿದೆ ಎಂದು ಇಂಧನ ಸರಕು ಟ್ರ‍್ಯಾಕರ್ ವೋರ್ಟೆಕ್ಸಾ ವರದಿ ಮಾಡಿದೆ. ಆದಾಗ್ಯೂ, ಭಾರತದ ಸ್ಥಾಪಿತ ಮಧ್ಯಪ್ರಾಚ್ಯ ಪೂರೈಕೆದಾರರು ಸಹ ತಮ್ಮ ಉಪಸ್ಥಿತಿಯನ್ನು ಉಳಿಸಿಕೊಂಡಿದ್ದಾರೆ.

    2025 ರಲ್ಲಿ, ಇರಾಕ್ ಸರಬರಾಜುಗಳು ದಿನಕ್ಕೆ ಸರಾಸರಿ 898,000 ಬ್ಯಾರೆಲ್, ಸೌದಿ ಅರೇಬಿಯನ್ ವಿತರಣೆಗಳು 640,000 ಬ್ಯಾರೆಲ್, ಯುಎಇ ಕೊಡುಗೆಗಳು 448,000 ಬ್ಯಾರೆಲ್. 2021 ಕ್ಕೆ ಹೋಲಿಸಿದರೆ, ಇರಾಕಿ ಮತ್ತು ಸೌದಿ ಪ್ರಮಾಣಗಳು ಸರಿಸುಮಾರು 5% ರಷ್ಟು ಕಡಿಮೆಯಾಗಿದೆ. ಆದರೆ ಯುಎಇ 3% ರಷ್ಟು ಹೆಚ್ಚಾಗಿದೆ. ಸಣ್ಣ ಅಥವಾ ದೂರದ ಪೂರೈಕೆದಾರರಿಗೆ ಇದರ ಪರಿಣಾಮ ಹೆಚ್ಚು ಮಹತ್ವದ್ದಾಗಿದೆ. ಅಮೆರಿಕನ್ ರಫ್ತುಗಳು 33% ರಷ್ಟು ಕಡಿಮೆಯಾಗಿದೆ. ನೈಜೀರಿಯನ್ ಮತ್ತು ಕುವೈತ್ ಸಾಗಣೆಗಳು ಅರ್ಧದಷ್ಟು ಕಡಿಮೆಯಾಗಿದೆ. ಆದರೆ ಒಮಾನಿ ಮತ್ತು ಮೆಕ್ಸಿಕನ್ ಸರಬರಾಜುಗಳು 80% ಕ್ಕಿಂತ ಹೆಚ್ಚು ಕಡಿಮೆಯಾಗಿದೆ. 2025 ರಲ್ಲಿ, ಯುಎಸ್ ವಿತರಣೆಗಳು ದಿನಕ್ಕೆ ಸರಾಸರಿ 271,000 ಬ್ಯಾರೆಲ್, ನೈಜೀರಿಯನ್ 151,000 ಬ್ಯಾರೆಲ್, ಕುವೈತ್ 131,000 ಬ್ಯಾರೆಲ್, ಒಮಾನಿ 20,000 ಬ್ಯಾರೆಲ್ ಮತ್ತು ಮೆಕ್ಸಿಕನ್ 24,000 ಬ್ಯಾರೆಲ್ ಇದೆ.

  • 2-3 ವಾರದ ನಂತ್ರ ಹೊಸ ಸುಂಕದ ಬಗ್ಗೆ ಯೋಚಿಸ್ತೀನಿ – ಭಾರತಕ್ಕೆ ಸಿಗುತ್ತಾ ಸುಂಕ ವಿನಾಯ್ತಿ?

    2-3 ವಾರದ ನಂತ್ರ ಹೊಸ ಸುಂಕದ ಬಗ್ಗೆ ಯೋಚಿಸ್ತೀನಿ – ಭಾರತಕ್ಕೆ ಸಿಗುತ್ತಾ ಸುಂಕ ವಿನಾಯ್ತಿ?

    ವಾಷಿಂಗ್ಟನ್‌: ರಷ್ಯಾದ ತೈಲ (Russian Oil) ಖರೀದಿಸುವ ದೇಶಗಳ ಮೇಲೆ ಹೊಸ ಸುಂಕ ವಿಧಿಸುವುದನ್ನು ಪರಿಗಣಿಸುವ ಅಗತ್ಯ ಸದ್ಯಕ್ಕಿಲ್ಲ. 2 ಅಥವಾ 3 ವಾರಗಳ ಬಳಿಕ ದ್ವಿತೀಯ ಸುಂಕದ ಬಗ್ಗೆ ಯೋಚಿಸುವುದಾಗಿ ಯುಎಸ್‌ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಹೇಳಿದ್ದಾರೆ.

    ಅಲಾಸ್ಕಾದಲ್ಲಿ ಪುಟಿನ್‌ (Vladimir Putin) ಮತ್ತು ಟ್ರಂಪ್‌ ನಡುವಿನ ಮಹತ್ವದ ಸಭೆಯ ಯಾವುದೇ ಒಪ್ಪಂದಗಳಿಲ್ಲದೇ ಅಂತ್ಯಗೊಂಡಿತು. ಆದ್ರೆ ಸಭೆಯ ಬಳಿಕ ಮಾಧ್ಯಮವೊಂದರಲ್ಲಿ ಮಾತನಾಡಿದ ಟ್ರಂಪ್‌, ಹೊಸ ಸುಂಕಗಳ ಬಗ್ಗೆ ಹೆಚ್ಚು ಯೋಚಿಸುವ ಅಗತ್ಯವಿಲ್ಲ ಅಂತ ಭಾವಿಸುತ್ತೇನೆ. 2-3 ವಾರಗಳ ನಂತ್ರ ಯೋಚಿಸಬೇಕಾಗುತ್ತೆ, ನಂತರ ಮರುಪರಿಶೀಲಿಸಬೇಕಾಗಬಹುದು ಎಂದಿದ್ದಾರೆ. ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಕುರಿತು ಈ ಮಾತುಗಳನ್ನಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಭಾರತಕ್ಕೆ ಸಿಗುತ್ತಾ ರಿಲೀಫ್‌?
    ಟ್ರಂಪ್‌ ಎಚ್ಚರಿಕೆ ಬಳಿಕವೂ ರಷ್ಯಾದಿಂದ ತೈಲ ಖರೀದಿ ಮುಂದುವರಿಸಿದ್ದರಿಂದ ಕಳೆದ ತಿಂಗಳು ಭಾರತೀಯ ಸರಕುಗಳ ಮೇಲೆ ಶೇ.50 ರಷ್ಟು ಸುಂಕ ವಿಧಿಸಿದ್ದಾರೆ. ಇದು ಆಗಸ್ಟ್‌ 27ರಿಂದ ಅನ್ವಯವಾಗಲಿದೆ. ಆದ್ರೆ ಟ್ರಂಪ್‌ ಅವರ ಹೇಳಿಕೆಯು ಭಾರತದ ಮೇಲಿನ ಸುಂಕದ ಪ್ರಮಾಣ 50 ರಿಂದ 25%ಗೆ ಇಳಿಕೆಯಾಲಿದೆಯೇ ಎಂಬುದನ್ನು ಕಾಡುನೋಡಬೇಕಿದೆ. ಇದನ್ನೂ ಓದಿ: ಉಕ್ರೇನ್‌ ಜೊತೆಗಿನ ಯುದ್ಧ ಕೊನೆಗೊಳಿಸದ ಹೊರತು ನಮ್ಮ ನಡ್ವೆ ಒಪ್ಪಂದವಿಲ್ಲ – ಪುಟಿನ್‌ಗೆ ಟ್ರಂಪ್‌ ಸ್ಟ್ರೈಟ್‌ ಹಿಟ್‌

    50% ಸುಂಕ, ರಷ್ಯಾಗೆ ದೊಡ್ಡ ಹೊಡೆತ ಅಂದಿದ್ದ ಟ್ರಂಪ್‌
    ಅಲಾಸ್ಕ ಸಭೆಯಗೂ ಮುನ್ನ ಮಾತನಾಡಿದ್ದ ಟ್ರಂಪ್‌, ಭಾರತದ (India) ಮೇಲೆ 50% ಸುಂಕ ವಿಧಿಸಿರುವುದು ರಷ್ಯಾದ (Russia) ಆರ್ಥಿಕತೆಗೆ ದೊಡ್ಡ ಹೊಡೆತ ಕೊಟ್ಟಿದೆ. ಉಕ್ರೇನ್‌ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾದಿಂದ ಭಾರತ ತೈಲ ಖರೀದಿಸುತ್ತಿದೆ. ಹೀಗಾಗಿ, ಭಾರತದ ಮೇಲೆ ಅಮೆರಿಕ ಭಾರಿ ಸುಂಕ ವಿಧಿಸಿದೆ. ಭಾರತ ಸೇರಿದಂತೆ ಹಲವಾರು ದೇಶಗಳ ಮೇಲೆ ಅಮೆರಿಕದ ಸುಂಕ ಹೇರಿಕೆಯಿಂದಾಗಿ ರಷ್ಯಾದ ಆರ್ಥಿಕತೆಯು ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ. ಇದರಿಂದ ರಷ್ಯಾ ಮಾತುಕತೆಗೆ ಮುಂದಾಗಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಸಿಂಧೂ ಜಲ ಒಪ್ಪಂದ ಸ್ಥಗಿತ ಮುಂದುವರಿಸಿದ್ರೆ ಯುದ್ಧದಿಂದ ಹಿಂದೆ ಸರಿಯಲ್ಲ, ಇದು ಮೋದಿ ಸರ್ಕಾರಕ್ಕೆ ಸಂದೇಶ: ಬಿಲಾವಲ್‌ ಭುಟ್ಟೋ

  • ಭಾರತದಂತಹ ಬಲಿಷ್ಠ ಮಿತ್ರ ರಾಷ್ಟ್ರದೊಂದಿಗೆ ಸಂಬಂಧವನ್ನ ಹದಗೆಡಿಸಬೇಡಿ – ಟ್ರಂಪ್‌ಗೆ ತಿವಿದ ನಿಕ್ಕಿ ಹ್ಯಾಲಿ

    ಭಾರತದಂತಹ ಬಲಿಷ್ಠ ಮಿತ್ರ ರಾಷ್ಟ್ರದೊಂದಿಗೆ ಸಂಬಂಧವನ್ನ ಹದಗೆಡಿಸಬೇಡಿ – ಟ್ರಂಪ್‌ಗೆ ತಿವಿದ ನಿಕ್ಕಿ ಹ್ಯಾಲಿ

    ವಾಷಿಂಗ್ಟನ್‌: ಇಂತಹ ನಿರ್ಣಾಯಕ ಸಮಯದಲ್ಲಿ ಭಾರತದಂತಹ (India) ಬಲಿಷ್ಠ ಮಿತ್ರ ರಾಷ್ಟ್ರದ ಸಂಬಂಧವವನ್ನ ಹಾಳುಮಾಡದಂತೆ ಯುಎಸ್‌ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ವಿಶ್ವಸಂಸ್ಥೆಯ ಅಮೆರಿಕದ ಮಾಜಿ ರಾಯಭಾರಿ ನಿಕ್ಕಿ ಹ್ಯಾಲಿ (Nikki Haley) ಎಚ್ಚರಿಸಿದ್ದಾರೆ.

    ರಷ್ಯಾದ ತೈಲ ಖರೀದಿಸುತ್ತಿರುವ ಭಾರತದ ಮೇಲೆ ಮುಂದಿನ 24 ಗಂಟೆಯಲ್ಲಿ ಸುಂಕ ಗಣನೀಯ ಏರಿಕೆ ಮಾಡುವುದಾಗಿ ಟ್ರಂಪ್‌ (Donald Trump) ಎಚ್ಚರಿಕೆ ನೀಡಿದ್ದರು. ಈ ಹೇಳಿಕೆಗೆ ನಿಕ್ಕಿ ಹ್ಯಾಲಿ ಪ್ರತಿಕ್ರಿಯಿಸಿದ್ದು, ಟ್ರಂಪ್‌ ಅವರ ಪ್ರಸ್ತಾಪಗಳು ನಿರ್ಣಾಯಕ ಸಂದರ್ಭದಲ್ಲಿ ಭಾರತ-ಅಮೆರಿಕದ ಸಂಬಂಧಗಳನ್ನು ಹದಗೆಡಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನ ಹಂಚಿಕೊಂಡಿರುವ ನಿಕ್ಕಿ, ಟ್ರಂಪ್‌ ಆಡಳಿತವು ದ್ವಿಮುಖ ನೀತಿಯನ್ನ ಅಳವಡಿಸಿಕೊಂಡಿದೆ. ಚೀನಾದಂತಹ ಶತ್ರುರಾಷ್ಟ್ರಕ್ಕೆ ವ್ಯಾಪಾರಾಕ್ಕಾಗಿ ಅಮೆರಿಕ 90 ದಿನಗಳ ಸುಂಕ ವಿನಾಯ್ತಿ ನೀಡಿದೆ. ಆದ್ರೆ ಭಾರತದ ಮೇಲೆ ಕಠಿಣ ನಿರ್ಧಾರಕ್ಕೆ ಮುಂದಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಭಾರತಕ್ಕೆ ರಷ್ಯಾದಿಂದ ತೈಲ ಖರೀದಿಸಬಾರದು ಅಂತ ಟ್ರಂಪ್‌ ಹೇಳ್ತಾರೆ, ಆದ್ರೆ ರಷ್ಯಾ ಮತ್ತು ಇರಾನ್‌ನ ಅತಿದೊಡ್ಡ ತೈಲ ಖರೀದಿದಾರ ಚೀನಾಗೆ 90 ದಿನಗಳ ಸುಂಕ ವಿನಾಯ್ತಿ ಕೊಡ್ತಾರೆ. ಇದು ಒಳ್ಳೆಯದಲ್ಲ. ಚೀನಾದಂತಹ ಶತ್ರು ರಾಷ್ಟ್ರಕ್ಕೆ ರಿಯಾಯತಿ ನೀಡಬೇಡಿ ಹಾಗೆಯೇ ಭಾರತದಂತಹ ಮಿತ್ರ ರಾಷ್ಟ್ರದೊಂದಿಗಿನ ಸಂಬಂಧವನ್ನು ಹದಗೆಡಿಸಬೇಡಿ ಎಂದು ಕಿವಿಮಾತು ಹೇಳಿದ್ದಾರೆ.

    24 ಗಂಟೆಯಲ್ಲಿ ಸುಂಕ ಗಣನೀಯ ಏರಿಕೆ
    ಮುಂದಿನ 24 ಗಂಟೆಯಲ್ಲಿ ಭಾರತದ ಮೇಲೆ ಸುಂಕ ಗಣನೀಯ ಏರಿಕೆ ಮಾಡುವ ಎಚ್ಚರಿಕೆ ನೀಡಿದ್ದಾರೆ ಟ್ರಂಪ್‌. ಭಾರತವು ನಮ್ಮ ಉತ್ತಮ ವ್ಯಾಪಾರ ಪಾಲುದಾರನಲ್ಲ. ಏಕೆಂದರೆ ಭಾರತ ನಮ್ಮೊಂದಿಗೆ ಬಹಳಷ್ಟು ವ್ಯವಹಾರ ಮಾಡುತ್ತಾರೆ. ಆದ್ರೆ ನಾವು ಅವರೊಂದಿಗೆ ವ್ಯಾಪಾರ ಮಾಡಲ್ಲ. ಆದ್ದರಿಂದ ನಾವು 25 ಪ್ರತಿಶತದಷ್ಟು ಇತ್ಯರ್ಥಪಡಿಸಿಕೊಂಡಿದ್ದೇವೆ. ಆದ್ರೆ ನಾವು ಹೇಳಿದ ಮೇಲೂ ರಷ್ಯಾದಿಂದ ನಿರಂತರವಾಗಿ ತೈಲ ಖರೀದಿ ಮಾಡಲಾಗುತ್ತಿದೆ. ಈ ಮೂಲಕ ಭಾರತ ಯುದ್ಧದ ಯಂತ್ರಕ್ಕೆ ಇಂಧನ ತುಂಬುತ್ತಿದೆ. ಹಾಗಾಗಿ ಮುಂದಿನ 24 ಗಂಟೆಗಳಲ್ಲಿ ಆಮದುಗಳ ಮೇಲೆ ಸುಂಕವನ್ನು (Tariff Threat) ಗಣನೀಯವಾಗಿ ಏರಿಕೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ.

    ಭಾರತ ಲಾಭ ಮಾಡಿಕೊಳ್ಳುತ್ತಿದೆ
    ಒಂದು ದಿನದ ಹಿಂದಷ್ಟೇ ಸುಂಕ ಗಣನೀಯ ಏರಿಕೆ ಕುರಿತು ಟ್ರಂಪ್‌ ಮಾತನಾಡಿದ್ದರು, ಭಾರತ ರಷ್ಯಾದಿಂದ (India-Russia) ದೊಡ್ಡ ಪ್ರಮಾಣದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ. ಈ ಮೂಲಕ ದೊಡ್ಡ ಪ್ರಮಾಣದಲ್ಲಿ ಲಾಭ ಮಾಡಿಕೊಳ್ಳುತ್ತಿದೆ. ಭಾರತವು ದೊಡ್ಡ ಪ್ರಮಾಣದಲ್ಲಿ ರಷ್ಯಾದ ತೈಲ (Russian Oil) ಮಾತ್ರ ಖರೀದಿಸುತ್ತಿಲ್ಲ, ಖರೀದಿಸಿದ ತೈಲವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ, ದೊಡ್ಡ ಪ್ರಮಾಣದ ಲಾಭ ಮಾಡಿಕೊಳ್ಳುತ್ತಿದೆ. ರಷ್ಯಾದ ಯುದ್ಧ ಟ್ಯಾಂಕರ್‌ಗಳಿಂದ ಉಕ್ರೇನ್‌ನಲ್ಲಿ ಹಲವು ಜನ ಸಾಯುತ್ತಿದ್ದರೂ ಅವರು ಹೆದರುತ್ತಿಲ್ಲ. ಈ ಕಾರಣದಿಂದಲೇ, ಭಾರತದಿಂದ ಖರೀದಿಸುವ ಎಲ್ಲ ಸರಕುಗಳಿಗೂ ಸುಂಕವನ್ನ ಗಣನೀಯವಾಗಿ ಏರಿಕೆ ಮಾಡಲಾಗುವುದು ಎಂದು ಟ್ರಂಪ್‌ ಎಚ್ಚರಿಕೆ ನೀಡಿದ್ದರು.

    trump modi

    ಭಾರತಕ್ಕಿಂತ ಪಾಕ್‌ಗೆ ಕಡಿಮೆ ಸುಂಕ
    ಈಗಾಗಲೇ ಆಗಸ್ಟ್‌ 7ರಿಂದ ಅನ್ವಯವಾಗುವಂತೆ `ಭಾರತದಿಂದ ಆಮದು ಮಾಡಿಕೊಳ್ಳುವ ಎಲ್ಲ ಸರಕುಗಳಿಗೂ ಶೇ.25ರಷ್ಟು ಸುಂಕ ವಿಧಿಸುವ ಆದೇಶಕ್ಕೆ ಟ್ರಂಪ್‌ ಸಹಿ ಹಾಕಿದ್ದಾರೆ. ಆದ್ರೆ ಪಾಕಿಸ್ತಾನಕ್ಕೆ 19% ಸುಂಕ ವಿಧಿಸಿದ್ದಾರೆ. ಬೃಹತ್‌ ಪ್ರಮಾಣದಲ್ಲಿ ರಷ್ಯಾದ ಸೇನಾ ಉಪಕರಣಗಳು, ಕಚ್ಚಾ ತೈಲ ಖರೀದಿಸುತ್ತಿರುವ ಭಾರತದ ಮೇಲೆ ದಂಡ ವಿಧಿಸಲಾಗುವುದು ಎಂದು ಹೇಳಿದ್ದರು. ಆದ್ರೆ, ಯಾವ ದಿನಾಂಕದಿಂದ ಈ ನಿರ್ಧಾರ ಜಾರಿಗೆ ಬರಲಿದೆ ಎಂದು ತಿಳಿಸಿರಲಿಲ್ಲ.

    2ನೇ ಅತೀ ದೊಡ್ಡ ಖರೀದಿದಾರ
    ಭಾರತವು ರಷ್ಯಾದಿಂದ ದೇಶದ ಅಗತ್ಯವಿರುವ ಕಚ್ಚಾತೈಲದ ಪೈಕಿ ಶೇ.35ರಿಂದ 40ರಷ್ಟು ಖರೀದಿಸುತ್ತಿದೆ. ಉಕ್ರೇನ್ ಜೊತೆಗಿನ ಯುದ್ಧ ಆರಂಭಕ್ಕೂ ಮುನ್ನ ಹೋಲಿಸಿದ್ರೆ, ಆಮದು ಪ್ರಮಾಣವು ಶೇ.0.2ರಷ್ಟು ಏರಿಕೆಯಾಗಿದೆ. ರಷ್ಯಾದಿಂದ ಗರಿಷ್ಠ ಪ್ರಮಾಣದ ಕಚ್ಚಾತೈಲ ಖರೀದಿಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಭಾರತವು ನಂತರದ ಸ್ಥಾನದಲ್ಲಿದೆ ಎಂದು ವರದಿಗಳು ತಿಳಿಸಿವೆ.