Tag: russia

  • ಬ್ರೇಕಪ್‍ಗೆ ಹೆದರಿ ಕೋಳ ಹಾಕಿಕೊಂಡು ಓಡಾಡ್ತಿರೋ ಜೋಡಿ

    ಬ್ರೇಕಪ್‍ಗೆ ಹೆದರಿ ಕೋಳ ಹಾಕಿಕೊಂಡು ಓಡಾಡ್ತಿರೋ ಜೋಡಿ

    ರಷ್ಯಾ: ಒಬ್ಬರಿಗೊಬ್ಬರು ಕೋಳ ತೊಡಿಸಿಕೊಂಡ ಪೋಟೋಗಳ ಮೂಲಕ ಪ್ರೇಮಿಗಳಿಬ್ಬರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ.

    ಅಲೆಕ್ಸಾಂಡರ್ ಕುಡ್‍ಲೇ(33) ವಿಕ್ಟೋರಿಯಾ ಪುಸ್ತೋವಿಟೋವಾ(28) ಕೋಳ ತೊಡಸಿಕೊಂಡು ಸುದ್ದಿಯಾದ ಈ ಜೋಡಿ ಉಕ್ರೇನ್ ನಿವಾಸಿಗಳಾಗಿದ್ದಾರೆ. ಕಾರ್ ಸೇಲ್ಸ್‍ಮನ್, ಬ್ಯೂಟಿಷಿಯನ್ ಆಗಿ ಇಬ್ಬರು ಕೆಲಸ ಮಾಡುತ್ತಾರೆ.

    ಇಬ್ಬರು ಪ್ರೇಮಿಗಳು ಒಬ್ಬರಿಗೊಬ್ಬರು ಹೆಚ್ಚು ಪ್ರೀತಿಸುತ್ತಾರೆ. ಆದರೆ ಆಗಾಗ ಇವರ ಮಧ್ಯೆ ಜಗಳವು ಆಗುತ್ತಿತ್ತು. ಬ್ರೇಕಪ್ ಮಾಡಿಕೊಳ್ಳೋಣ ಎನ್ನುವ ಮಾತುಗಳು ಇಬ್ಬರ ನಡುವೆ ಬರುತ್ತಿದ್ದವಂತೆ. ಆಗ ಇಬ್ಬರು ಸೇರಿ ಒಂದು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.

    ಒಬ್ಬರಿಗೊಬ್ಬರು ಮೂರು ತಿಂಗಳ ಕಾಲ ಕೋಳ ಧರಿಸಿಕೊಂಡು ಜೊತೆಯಲ್ಲೇ 24/7 ಕಾಲ ಕಳೆಯೋಣ ಎಂದು ಇಬ್ಬರು ಮಾತನಾಡಿಕೊಂಡು ಈ ಒಂದು ಪರೀಕ್ಷೆಗೆ ಮುಂದಾಗಿದ್ದಾರೆ. ಜೋಡಿಯ ನೂತನ ಕ್ಸ್ ಪರಿಮೆಂಟ್ ಬಗ್ಗೆ ನೆಟ್ಟಿಗರು ಚರ್ಚೆ ಮಾಡುತ್ತಿದ್ದರು. ಈ ವಿಚಾರ ಸೊಶೀಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು.

    ಮೊದಲು ಇಬ್ಬರು ತುಂಬಾ ಜಗಳ ಮಾಡಿಕೊಳ್ಳುತ್ತಿದ್ದೆವು. ಹೀಗಾಗಿ ಈ ಒಂದು ಯೋಚನೆ ಬಂತು. ನಾನು ಮೊದಲು ಇದಕ್ಕೆ ಒಪ್ಪಲಿಲ್ಲ. ಕೋಳ ಧರಿಸಿಕೊಂಡ ನಂತರ ಇಬ್ಬರು ಜೊತೆಯಾಗಿ ಓಡಾಡಿ ಹೊಂದಿಕೊಂಡಿದ್ದೇವೆ. ಸದಾ ಜೊತೆಯಲ್ಲಿಯೇ ಇರುವುದರಿಂದ ಅರ್ಥ ಮಾಡಿಕೊಳ್ಳಲು ಸಮಯ ಸಿಕ್ಕಂತಾಯಿತ್ತು. ಇಬ್ಬರು ಅನ್ಯೋನ್ಯವಾಗಿದ್ದೇವೆ ಎಂದು ಈ ಜೋಡಿ ಹೇಳಿಕೊಂಡಿದೆ.

  • ಜಾರಕಿಹೊಳಿ ಕೇಸ್‌ – ರಷ್ಯಾದಿಂದ ರಾಸಲೀಲೆ ವಿಡಿಯೋ ಅಪ್ಲೋಡ್‌?

    ಜಾರಕಿಹೊಳಿ ಕೇಸ್‌ – ರಷ್ಯಾದಿಂದ ರಾಸಲೀಲೆ ವಿಡಿಯೋ ಅಪ್ಲೋಡ್‌?

    ಬೆಂಗಳೂರು: ರಮೇಶ್‌ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ರಷ್ಯಾದಿಂದ ಅಪ್ಲೋಡ್‌ ಆಗಿದೆ ಎನ್ನಲಾಗುತ್ತಿದೆ.

    ಹೌದು. ಮಂಗಳವಾರ ಮಧ್ಯಾಹ್ನ 2:20ರ ವೇಳೆಗೆ ರಷ್ಯಾದಿಂದ ವಿಡಿಯೋ ಅಪ್ಲೋಡ್‌ ಮಾಡಿರುವ ವಿಚಾರ ಬೆಂಗಳೂರು ಪೊಲೀಸರ ಪ್ರಾಥಮಿಕ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಯೂಟ್ಯೂಬ್‌ಗೆ ಪತ್ರ ಬರೆದು ಮತ್ತಷ್ಟು ವಿವರ ಸಂಗ್ರಹಿಸಲು ಮುಂದಾಗಿದ್ದಾರೆ ಎಂಬ ವಿಚಾರ ಮೂಲಗಳಿಂದ ಪಬ್ಲಿಕ್‌ ಟಿವಿಗೆ ತಿಳಿದು ಬಂದಿದೆ.

    ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ ವಿರುದ್ಧ ಪೊಲೀಸರು ಇಲ್ಲಿಯವರೆಗೆ ಎಫ್‍ಐಆರ್ ದಾಖಲಿಸಿಕೊಂಡಿಲ್ಲ. ಸಂತ್ರಸ್ತೆಯನ್ನು ಸಂಪರ್ಕಿಸಲು ಪೊಲೀಸರು ಯತ್ನಿಸುತ್ತಿದ್ದಾರೆ.

    ದೂರುದಾರ ದಿನೇಶ್ ಕಲ್ಲಹಳ್ಳಿ, ಪೊಲೀಸರಿಗೂ ಸಂತ್ರಸ್ತೆಯ ವಿಳಾಸ ಮತ್ತು ಇತರೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ದಿನೇಶ್ ಕಲ್ಲಹಳ್ಳಿಗೆ ನೊಟೀಸ್ ಜಾರಿ ಮಾಡಿದ್ದು, ನಾಳೆ ಬೆಳಗ್ಗೆ 11ಕ್ಕೆ ವಿಚಾರಣೆಗೆ ಬರಲು ಸೂಚಿಸಿದ್ದಾರೆ.

    ದಿನೇಶ್ ಕಲ್ಲಹಳ್ಳಿಗೆ ಈ ವಿಡಿಯೋವನ್ನು ಕೊಟ್ಟಿದ್ದು ಯಾರು? ಯಾವಾಗ ಕೊಟ್ಟಿದ್ದಾರೆ. ದಿನೇಶ್ ಹೇಳುತ್ತಿರುವುದು ನಿಜವೇ ಎಂಬುದನ್ನು ಪೊಲೀಸರು ಕೆದಕುತ್ತಿದ್ದಾರೆ. ದಿನೇಶ್ ಕಾಲ್ ಡಿಟೇಲ್ಸ್ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.

    ಪೊಲೀಸರು ಇದುವರೆಗೂ ಎಫ್‍ಐಆರ್ ದಾಖಲಿಸದ ಬಗ್ಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಪಕ್ಷದ ವಕ್ತಾರ ಸಂಕೇತ್ ಏಣಗಿ ಮಾತನಾಡಿ, ಕ್ರಿಮಿನಲ್ ಕಾನೂನಿನ ಪ್ರಕಾರ, ಯಾರು ಬೇಕಾದರೂ ದೂರು ನೀಡಬಹುದು. ಸುಪ್ರೀಂಕೋರ್ಟ್ ಕೂಡಾ ಇದನ್ನು ಹೇಳಿದೆ. ಕೂಡಲೇ ಎಫ್‍ಐಆರ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

    ರಾಸಲೀಲೆ ಸಿಡಿ ಬಗ್ಗೆ ಹೈಕೋರ್ಟ್‍ನ ಹಾಲಿ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ಮಾಡಿಸಬೇಕು ಅಂತಾ ಆಗ್ರಹಿಸಿದ್ದಾರೆ. ಒಂದು ವೇಳೆ ರಮೇಶ್ ಜಾರಕಿಹೊಳಿ ಏನಾದರೂ ದೂರು ನೀಡಿದಲ್ಲಿ, ಇಡೀ ಪ್ರಕರಣಕ್ಕೆ ಬ್ಲಾಕ್‍ಮೇಲ್ ಟ್ವಿಸ್ಟ್ ಸಿಗಲಿದೆ ಎನ್ನಲಾಗುತ್ತಿದೆ.

  • ಹುಲಿಯ ಘರ್ಜನೆ ಗೊತ್ತು.. ಮೆಲೋಡಿಯಸ್ ಆಗಿ ಕೂಗುವುದು ಗೊತ್ತಾ?

    ಹುಲಿಯ ಘರ್ಜನೆ ಗೊತ್ತು.. ಮೆಲೋಡಿಯಸ್ ಆಗಿ ಕೂಗುವುದು ಗೊತ್ತಾ?

    ಮಾಸ್ಕೋ: 8 ತಿಂಗಳ ಹುಲಿಯೊಂದು ಘರ್ಜನೆ ಮಾಡುವ ಬದಲಾಗಿ ಮೆಲೋಡಿಯಸ್ ಆಗಿ ಸೌಂಡ್ ಮಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.


    ರಷ್ಯಾದ ಬುರ್ನಲ್ ಪ್ರಾಣಿ ಸಂಗ್ರಹಾಲಯದಲ್ಲಿರುವ 8 ತಿಂಗಳ ಹುಲಿ ಮರಿ ಮೆಲೋಡಿಯಸ್ ಆಗಿ ಸೌಂಡ್ ಮಾಡುವ ಮೂಲಕವಾಗಿ ಎಲ್ಲರ ಗಮನವನ್ನು ಸೆಳೆದಿದೆ. 2020ರಲ್ಲಿ ಶೆರ್ಹಾನ್ ಎನ್ನುವ ಹುಲಿ 4 ಮರಿಗಳನ್ನು ಹಾಕಿತ್ತು. ಅದರಲ್ಲಿ ಒಂದು ಮರಿ ಧ್ವನಿ ಹೀಗೆ ಇರುವುದು ಆಶ್ಚರ್ಯವನ್ನುಂಟು ಮಾಡಿದೆ.

    ಹುಲಿಯ ಘರ್ಜನೆಗೆ ಎಂದರೆ ಎಲ್ಲರಿಗೂ ಭಯ ಇದ್ದೇ ಇರುತ್ತದೆ. ಕಾಡಿನ ಯಾವುದೋ ಮೂಲೆಯಲ್ಲಿ ನಿಂತು ಒಮ್ಮೆ ಘರ್ಜಿಸಿದರೆ ನಾವು ಇದ್ದಲ್ಲೇ ಬೆವರುತ್ತೇವೆ. ಆದರೆ ಇಷ್ಟೆಲ್ಲ ಭಯವನ್ನು ಹುಟ್ಟಿಸುವ ವ್ಯಾಘ್ರ ಮೆಲೋಡಿ ವಾಯ್ಸ್‍ನಲ್ಲಿ ಕೂಗುತ್ತಾ ಇರುವುದು ಆಶ್ಚರ್ಯವನ್ನುಂಟು ಮಾಡಿದೆ.

  • 7 ಮಂದಿಯಲ್ಲಿ ಹಕ್ಕಿಜ್ವರ ಪತ್ತೆ – ಆತಂಕವನ್ನುಂಟು ಮಾಡಿದ ವೈರಸ್

    7 ಮಂದಿಯಲ್ಲಿ ಹಕ್ಕಿಜ್ವರ ಪತ್ತೆ – ಆತಂಕವನ್ನುಂಟು ಮಾಡಿದ ವೈರಸ್

    ಮಾಸ್ಕೋ: ಮೊದಲ ಬಾರಿಗೆ 7 ಮಂದಿಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಳ್ಳುವ ಮೂಲಕವಾಗಿ ಜನರಲ್ಲಿ ಆತಂಕವನ್ನುಂಟು ಮಾಡಿದ ಘಟನೆ ರಷ್ಯಾದಲ್ಲಿ ನಡೆದಿದೆ.

    ರಷ್ಯಾದ ಕೋಳಿ ಫಾರಂನಲ್ಲಿ ಕೆಲಸ ಮಾಡುವ 7 ಮಂದಿ ಸಿಬ್ಬಂದಿಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಈ 7 ಮಂದಿ ಆರೋಗ್ಯವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಬೇರೆ ಕೋಳಿ ಫಾರಂಗಳಲ್ಲಿ ಹಕ್ಕಿಜ್ವರ ಬಂದಿರಬಹುದೆಂಬ ನಿಟ್ಟಿನಲ್ಲಿ ಎಲ್ಲೆಡೆ ತಪಾಸಣೆ ಮಾಡಲು ರಷ್ಯಾ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

    ಹಕ್ಕಿಯಿಂದ ಸೋಂಕು ಹರಡಿರುವ ಮೊದಲ ಪ್ರಕರಣವಿದು. ದಕ್ಷಿಣ ರಷ್ಯಾದ ಕೋಳಿ ಘಟಕದಲ್ಲಿ 7 ಕಾರ್ಮಿಕರಿಗೆ ಸೋಂಕು ಇರುವುದು ದೃಢಪಟ್ಟಿದೆ. ಹಕ್ಕಿಜ್ವರ ತಳಿಗಳಾದ H5N1, H7N9, ಮತ್ತು H9N2 ಕೂಡಾ ಮಾನವರಿಗೆ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

    ಹಕ್ಕಿಜ್ವರ ಹರಡುವುದನ್ನು ತಡೆಗಟ್ಟಲು ನೆರೆಯ ಕೇರಳ, ತಮಿಳುನಾಡು, ರಾಜಸ್ಥಾನ, ಹಿಮಾಚಲ ಪ್ರದೇಶದಲ್ಲಿ ಸಾವಿರಾರು ಪಕ್ಷಿಗಳನ್ನು ಕೊಲ್ಲಲಾಗಿತ್ತು. ಆದರೆ ಹಕ್ಕಿಗಳಿಂದ ಮಾನವನಿಗೂ ಹಕ್ಕಿಜ್ವರದ ಸೋಂಕು ಹರಡಲಿದೆ ಎಂಬುದು ರಷ್ಯಾದಲ್ಲಿ ಸಾಬೀತಾಗಿದೆ.

  • ಒಂದೇ ಬಾರಿಗೆ 1.5 ಲೀಟರ್ ಓಡ್ಕಾ ಕುಡಿದು ಲೈವ್‍ನಲ್ಲೇ 60ರ ವೃದ್ಧ ಸಾವು

    ಒಂದೇ ಬಾರಿಗೆ 1.5 ಲೀಟರ್ ಓಡ್ಕಾ ಕುಡಿದು ಲೈವ್‍ನಲ್ಲೇ 60ರ ವೃದ್ಧ ಸಾವು

    – ಹಣ ನೀಡುವ ಭರವಸೆ ನೀಡಿದ್ದ ಯೂಟ್ಯೂಬರ್

    ಮಾಸ್ಕೋ: ರಷ್ಯಾ ಮೂಲದ 60 ವರ್ಷದ ವೃದ್ಧ ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್‍ನಲ್ಲಿ ಲೀಟರ್‍ಗಟ್ಟಲೇ ಮದ್ಯ ಸೇವಿಸುವ ಚಾಲೆಂಜ್ ಸ್ವೀಕರಿಸಿದ್ದು, 1.5 ಲೀಟರ್ ಓಡ್ಕಾ ಕುಡಿಯುತ್ತಿದ್ದಂತೆ ಲೈವ್ ಸ್ಟ್ರೀಮಿಂಗ್ ವೇಳೆಯೇ ಕುಸಿದು, ಸಾವನ್ನಪ್ಪಿದ್ದಾನೆ.

    ರಷ್ಯಾದ ಸ್ಮೋಲೆಂಕ್ಸ್ ನಲ್ಲಿ ಘಟನೆ ನಡೆದಿದ್ದು, ವೃದ್ಧನಿಗೆ ಯೂಟ್ಯೂಬರ್ ಹಣದ ಆಫರ್ ನೀಡಿದ್ದಕ್ಕೆ ಲೈವ್ ಸ್ಟ್ರೀಮಿಂಗ್ ವೇಳೆಯೇ 1.5 ಲೀಟರ್ ಓಡ್ಕಾ ಕುಡಿದಿದ್ದಾನೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಇದೊಂದು ಟ್ರೆಂಡ್ ಸೃಷ್ಟಿಯಾಗಿದ್ದು, ಹೆಚ್ಚು ವ್ಯೂವ್ಸ್ ಪಡೆಯಲು ತರಹೇವಾರಿ ಸಾಹಸ ಮಾಡುತ್ತಿದ್ದಾರೆ. ಇದಕ್ಕೆ ಥ್ರ್ಯಾಶ್ ಸ್ಟ್ರೀಮ್ಸ್ ಅಥವಾ ಟ್ರ್ಯಾಶ್ ಸ್ಟ್ರೀಮ್ಸ್ ಎಂದು ಕರೆಯುತ್ತಾರೆ. ಅಂದರೆ ವಿವಿಧ ರೀತಿಯ ಸ್ಟಂಟ್ಸ್, ಭಯಾನಕ ಸವಾಲುಗಳ ಮೂಲಕ ನೋಡುಗರನ್ನು ಸೆಳೆಯುತ್ತಾರೆ. ಹೆಚ್ಚು ವ್ಯೂವ್ಸ್ ಪಡೆಯಲು ಬೇರೊಬ್ಬರಿಗೆ ಹಣ ನೀಡಿ ಇಂತಹ ಸ್ಟಂಟ್ ಮಾಡಿಸುತ್ತಾರೆ. ಅದೇ ರೀತಿ ಮಾಡಲು ಹೋಗಿ ಇದೀಗ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ.

    ರಷ್ಯಾ ಮೂಲದ 60 ವರ್ಷದ ವೃದ್ಧನನ್ನು ಯೂರಿ ದುಶೆಚ್ಕಿನ್ ಎಂದು ಗುರುತಿಸಲಾಗಿದ್ದು, ವೃದ್ಧನಿಗೆ ಹಣ ನೀಡುವುದಾಗಿ ಯೂಟ್ಯೂಬರ್ ಆಫರ್ ಮಾಡಿದ್ದ. ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್ ವೇಳೆ ಮದ್ಯ ಅಥವಾ ಹಾಟ್ ಸಾಸ್ ಸೇವಿಸಿದರೆ ಹಣ ನೀಡುವುದಾಗಿ ಆಫರ್ ಮಾಡಿದ್ದ.

    ವೃದ್ಧ ಬರೋಬ್ಬರಿ 1.5 ಲೀಟರ್ ಓಡ್ಕಾ ಸೇವಿಸುತ್ತಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಯೂಟ್ಯೂಬ್‍ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದಾಗಲೇ ಈ ಘಟನೆ ಸಂಭವಿಸಿದ್ದು, ವೀವರ್ಸ್ ಈ ಘಟನೆ ನೋಡಿ ಆಘಾತಕ್ಕೊಳಗಾಗಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ರಷ್ಯನ್ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಿಂಸಾಚಾರವನ್ನು ಪ್ರಚೋದಿಸುವ ಟ್ರ್ಯಾಶ್ ಸ್ಟ್ರೀಮ್ಸ್ ಗಳನ್ನು ಬ್ಯಾನ್ ಮಾಡಬೇಕೆಂದು ರಷ್ಯಾದ ಸೆನೆಟರ್ ಅಲೆಕ್ಸಿ ಪುಷ್ಕೋವ್ ಒತ್ತಾಯಿಸಿದ್ದಾರೆ.

  • ಸ್ನಾನದ ವೇಳೆ ಬಾತ್‍ಟಬ್‍ನಲ್ಲಿ ಬಿದ್ದ ಐ ಫೋನ್ – 24ರ ಯುವತಿಯ ಸಾವು

    ಸ್ನಾನದ ವೇಳೆ ಬಾತ್‍ಟಬ್‍ನಲ್ಲಿ ಬಿದ್ದ ಐ ಫೋನ್ – 24ರ ಯುವತಿಯ ಸಾವು

    – ಸಾವಿನ ಬಳಿಕ ಪೊಲೀಸರಿಂದ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ

    ಮಾಸ್ಕೋ: ಬಾತ್‍ಟಬ್ ನಲ್ಲಿ ಐಫೋನ್ ಬಿದ್ದಿದ್ದರಿಂದ ವಿದ್ಯುತ್ ಪ್ರವಹಿಸಿ 24 ವರ್ಷದ ಯುವತಿ ಸಾವನ್ನಪ್ಪಿರುವ ಘಟನೆ ರಷ್ಯಾದ ಅರ್ಖಾಂಗೆಲ್ಕಸ್ ನಗರದಲ್ಲಿ ನಡೆದಿದೆ.

    ಓಲೆಸ್ಯಾ ಸೆಮೆನೋವಾ ಮೃತ ಯುವತಿ. ಸ್ನಾನಕ್ಕೂ ಮುನ್ನ ತನ್ನ ಐ ಫೋನ್ -8 ಚಾರ್ಜಿಂಗ್ ಹಾಕಿದ್ದರು. ಚಾರ್ಜಿಂಗ್ ಹಾಕಿದ್ದ ಮೊಬೈಲ್ ವೈಯರ್ ನಿಂದ ಕಳಚಿ ಬಾತ್‍ಟಬ್ ನೊಳಗೆ ಬಿದ್ದಿದೆ. ಮೊಬೈಲ್ ನಿಂದ ಹರಿದ ವಿದ್ಯುತ್ ನಿಂದ ಓಲೆಸ್ಯಾ ಮೃತಪಟ್ಟಿದ್ದಾಳೆ. ಅಲೆಸ್ಯಾಳ ಮೃತದೇಹವನ್ನ ಮೊದಲು ಆಕೆಯ ಗೆಳತಿ ಡಾರಿಯಾ ನೋಡಿ ಎಮೆರ್ಜೆನ್ಸಿ ನಂಬರ್ ಗೆ ಕರೆ ಮಾಡಿ ಸಹಾಯ ಕೇಳಿದ್ದಾಳೆ.

    ಸ್ಥಳಕ್ಕಾಗಮಿಸಿದ ವೈದ್ಯರು ಅಲೆಸ್ಯಾ ಮೃತಪಟ್ಟಿರೋದನ್ನ ಖಚಿತ ಪಡಿಸಿದ್ದಾರೆ. ಅಲೆಸ್ಯಾ ಅರ್ಖಾಂಗೆಲ್ಕಸ್ ನಗರದ ಬಟ್ಟೆ ಮಳಿಗೆಯಲ್ಲಿ ಕೆಲಸ ಮಾಡಿಕೊಂಡು ಗೆಳತಿ ಜೊತೆ ವಾಸವಾಗಿದ್ದಳು. ಅಲೆಸ್ಯಾ ಮೃತದೇಹ ಹಳದಿ ಬಣ್ಣಕಕ್ಕೆ ತಿರುಗಿತ್ತು. ಆಕೆಯ ನಾಡಿ ಬಡಿತ ಸಹ ನಿಂತಿತ್ತು ಎಂದು ಡಾರಿಯಾ ಹೇಳಿದ್ದಾಳೆ.

    ಪೊಲೀಸರಿಂದ ಎಚ್ಚರಿಕೆ ಸಂದೇಶ: ಅಲೆಸ್ಯಾ ಸಾವಿನ ಬಳಿಕ ಪೊಲೀಸರು ಸಾರ್ವಜನಿಕ ಪ್ರಕಟನೆ ಹೊರಡಿಸಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಮೊಬೈಲ್ ನೀರಿನಲ್ಲಿ ಬಂದ್ರೆ ಅದು ಹಾಳಾಗುತ್ತೆ ಎಂದು ನಿಮಗೆ ತಿಳಿದಿರುತ್ತೆ. ಕೆಲ ಮೊಬೈಲ್ ಗಳು ನೆಟ್‍ವರ್ಕ್ ಜೊತೆ ಸಂಪರ್ಕದಲ್ಲಿದ್ದ ವೇಳೆ ನೀರಿನಲ್ಲಿ ಬಿದ್ದರೆ ವಿದ್ಯುತ್ ಪ್ರವಹಿಸುತ್ತದೆ. ಹಾಗಾಗಿ ಸಣ್ಣ ತಪ್ಪುಗಳಿಂದ ಜೀವವೇ ಹೋಗುತ್ತದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದೆ.

    ಈ ಘಟನೆಗೂ ಮುನ್ನ 15 ವರ್ಷದ ಎನಾ ಸಾವು ಇದೇ ರೀತಿ ಸಂಭವಿಸಿತ್ತು. ಕಳೆದ ವರ್ಷ ಪೋಕರ್ ಸ್ಟಾರ್ ಲಿಲಿಯಾ ನೊವಿಕೊವಾ ಸಹ ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿದ್ದರು.

  • ಪಾಕ್‍ಗೆ ಶಸ್ತ್ರಾಸ್ತ್ರ ನೀಡಲ್ಲ ಎಂದ ರಷ್ಯಾ – ಭಾರತಕ್ಕೆ ದೊಡ್ಡ ಗೆಲುವು

    ಪಾಕ್‍ಗೆ ಶಸ್ತ್ರಾಸ್ತ್ರ ನೀಡಲ್ಲ ಎಂದ ರಷ್ಯಾ – ಭಾರತಕ್ಕೆ ದೊಡ್ಡ ಗೆಲುವು

    – ಭಾರತದ ಮನವಿಗೆ ಸ್ಪಂದಿಸಿ ರಷ್ಯಾ ನಿರ್ಧಾರ

    ಮಾಸ್ಕೋ: ಭಯೋತ್ಪಾದನೆಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಭಾರತಕ್ಕೆ ಮತ್ತೊಂದು ಬಹುದೊಡ್ಡ ಗೆಲುವು ಲಭಿಸಿದ್ದು, ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡಬಾರದು ಎಂಬ ಭಾರತ ಮನವಿಯನ್ನು ರಷ್ಯಾ ಪುರಸ್ಕರಿಸಿದೆ. ಪಾಕಿಸ್ತಾನಕ್ಕೆ ಯಾವುದೇ ರೀತಿಯ ಶಸ್ತ್ರಾಸ್ತ್ರಗಳನ್ನು ಪೂರೈಸುವುದಿಲ್ಲ ಎಂದು ಹೇಳಿದೆ.

    ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಸಂಜೆ ಮಾಸ್ಕೋದಲ್ಲಿ ಜನರಲ್ ಸರ್ಜರಿ ಶೋಯಿಗು ಅವರನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸಿದ್ದಾರೆ. ಈ ವೇಳೆ ಪಾಕಿಸ್ತಾನಕ್ಕೆ ಯಾವುದೇ ರೀತಿಯ ಶಸ್ತ್ರಾಸ್ತ್ರ ಪೂರೈಸುವುದಿಲ್ಲ. ಹಿಂದಿನ ನೀತಿಯನ್ನೇ ಮುಂದುವರಿಸುತ್ತೇವೆ ಎಂದು ರಷ್ಯಾ ಸ್ಪಷ್ಟಪಡಿಸಿದೆ.

    ಮಾತುಕತೆ ವೇಳೆ ರಷ್ಯಾ ತನ್ನ ನೀತಿಯನ್ನು ಪುನರುಚ್ಛರಿಸಿದ್ದು, ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಸುವುದಿಲ್ಲ. ಭಾರತದ ಮನವಿಯನ್ನು ಪುರಸ್ಕರಿಸುತ್ತೇವೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಭಾರತ ರಕ್ಷಣಾ ಸಚಿವಾಲಯ ಸಹ ಈ ಕುರಿತು ಸ್ಪಷ್ಟಪಡಿಸಿತ್ತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಜನರಲ್ ಶೋಯಿಗು ನಡುವೆ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಸಭೆ ನಡೆದಿದ್ದು, ಮಾಸ್ಕೋದ ರಷ್ಯನ್ ರಕ್ಷಣಾ ಸಚಿವಾಲಯದಲ್ಲಿ ನಡೆದಿತ್ತು ಎಂದು ಈ ಹಿಂದೆ ತಿಳಿಸಿತ್ತು.

    ಸಭೆಯಲ್ಲಿ ಉಭಯ ದೇಶಗಳ ನಡುವೆ ಸಹಕಾರ ಹಾಗೂ ಸಂಬಂಧದ ಕುರಿತು ನಡೆದಿದ್ದು, ಎರಡು ದೇಶಗಳ ರಕ್ಷಣಾ ವಿಭಾಗಕ್ಕೆ ಶಕ್ತಿ ತುಂಬುವುದು ಹಾಗೂ ಎರಡೂ ದೇಶಗಳ ನಡುವೆ ಸಹಕಾರ, ಸಂಬಂಧ ವೃದ್ಧಿ ಕುರಿತು ಮಾತುಕತೆ ನಡೆಸಿದ್ದಾರೆ.

    ಸಭೆ ಬಳಿಕ ಟ್ವೀಟ್ ಮಾಡಿದ್ದ ರಾಜನಾಥ್ ಸಿಂಗ್, ರಷ್ಯಾದ ರಕ್ಷಣಾ ಸಚಿವ ಜನರಲ್ ಸೆರ್ಗೆ ಶೋಯಿಗು ಅವರೊಂದಿಗೆ ಅದ್ಭುತ ಸಭೆ ನಡೆದಿದ್ದು, ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿದೆವು. ರಕ್ಷಣಾ ವಿಭಾಗದ ಕುರಿತು ಆಳವಾಗಿ ಚರ್ಚೆ ನಡೆಸಿದ್ದೇವೆ. ಎರಡೂ ದೇಶಗಳ ನಡುವೆ ಸ್ನೇಹ, ಸಂಬಂಧ ವೃದ್ಧಿಸುವ ಕುರಿತು ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.

  • ಮಹಿಳೆಯ ಹೊಟ್ಟೆಯಲ್ಲಿ 4 ಅಡಿ ಹಾವು ಪತ್ತೆ- ವಿಡಿಯೋ

    ಮಹಿಳೆಯ ಹೊಟ್ಟೆಯಲ್ಲಿ 4 ಅಡಿ ಹಾವು ಪತ್ತೆ- ವಿಡಿಯೋ

    – ಬಾಯಿಯಿಂದ ಜೀವಂತವಾಗಿ ಬಂದ ನಾಗಪ್ಪ
    – ಹೇಗೆ ಹೊಟ್ಟೆ ಸೇರಿತ್ತು ಗೊತ್ತಾ?

    ಮಾಸ್ಕೋ: ಮಹಿಳೆಯ ಹೊಟ್ಟೆಯಿಂದ ಸುಮಾರು 4 ಅಡಿ ಉದ್ದದ ಹಾವನ್ನು ತೆಗೆಯುವುದನ್ನು ನೋಡಿದರೇನೆ ಒಂದು ಕ್ಷಣ ಹೃದಯ ಬಡಿತವೇ ಹೆಚ್ಚಾಗುತ್ತೆ. ಇಂತಹದ್ದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಮಹಿಳೆಯ ಹೊಟ್ಟೆಯೊಳಗೆ ಸುಮಾರು 4 ಅಡಿ ಉದ್ದದ ಹಾವು ಪತ್ತೆಯಾಗಿರುವ ಘಟನೆ ರಷ್ಯಾದ ಡಾಗೆಸ್ಥಾನ್‍ನ ಲೆವಾಶಿಯಲ್ಲಿ ನಡೆದಿದೆ. ವೈದ್ಯರು ಮಹಿಳೆಯ ಬಾಯಿಯಿಂದ ಬರೋಬ್ಬರಿ ನಾಲ್ಕು ಅಡಿ ಉದ್ದದ ಹಾವನ್ನು ಹೊರ ತೆಗೆದಿದ್ದಾರೆ. ಹೊಟ್ಟೆ ನೋವಿನಿಂದ ಮಹಿಳೆ ಒದ್ದಾಡುತ್ತಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರಂಭದಲ್ಲಿ ವೈದ್ಯರಿಗೂ ಈ ಕುರಿತು ಏನೂ ತಿಳಿದಿಲ್ಲ. ನಂತರ ಪರೀಕ್ಷೆ ನಡೆಸಿದಾಗ ಹೊಟ್ಟೆಯಲ್ಲಿ ಏನೋ ಇದೆ ಎಂಬುದು ಅರಿವಾಗಿದೆ. ನಂತರ ಮಹಿಳೆಗೆ ಅರವಳಿಕೆ ನೀಡಿ ಪ್ರಜ್ಞಾಹೀನಗೊಳಿಸಿದ್ದಾರೆ.

    ಬಾಯಿಯಿಂದ ಟ್ಯೂಬ್ ಹಾಕಿ ಏನಿದೆ, ಇದರಿಂದ ತೆಗೆಯಬಹುದೇ ಎಂದು ಟ್ಯೂಬ್ ಹಾಕಿ ಪರಿಶೀಲಿಸಿದ್ದಾರೆ. ಈ ವೇಳೆ ಹಾವು ಬುಸ್ ಎಂದು ಹೊರ ಬಂದಿದೆ. ಇದನ್ನು ನೋಡಿದ ವೈದ್ಯೆ ಒಂದು ಕ್ಷಣ ಗಾಬರಿಯಾಗಿದ್ದಾರೆ. ಹಾವನ್ನು ಹೊಟ್ಟೆಯಿಂದ ಹೊರ ತೆಗೆಯುವ ಸಂಪೂರ್ಣ ಚಿತ್ರಣವನ್ನು ವಿಡಿಯೋ ಮಾಡಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

    ಹಾವು ಹೊಟ್ಟೆ ಹೊಕ್ಕಿದ್ದು ಹೇಗೆ?
    ತೋಟದ ಮನೆಯಲ್ಲಿ ಮಹಿಳೆ ಮಲಗಿದಾಗ ಬಾಯಿ ತೆರೆದಿದ್ದು, ಈ ವೇಳೆ ಸಮೀಪಕ್ಕೆ ಬಂದ ಹಾವು ಬಿಲದಂತೆ ಕಂಡ ಬಾಯಿಯಲ್ಲೇ ಹೊಕ್ಕಿದೆ. ಮಹಿಳೆ ಎದ್ದ ತಕ್ಷಣ ಭಾರೀ ಪ್ರಮಾಣ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ವೈದ್ಯರು ಹಾವನ್ನು ಹೊರ ತೆಗೆದಿದ್ದಾರೆ. ಆದರೆ ಹಾವಿನ ಹಾಗೂ ಮಹಿಳೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

  • ಗೆಳೆಯನ ಕಾಪಾಡಲು ಹೋಗಿ ಆತನೂ ಸೇರಿ ನಾಲ್ವರು ಮೆಡಿಕಲ್ ವಿದ್ಯಾರ್ಥಿಗಳ ದುರ್ಮರಣ

    ಗೆಳೆಯನ ಕಾಪಾಡಲು ಹೋಗಿ ಆತನೂ ಸೇರಿ ನಾಲ್ವರು ಮೆಡಿಕಲ್ ವಿದ್ಯಾರ್ಥಿಗಳ ದುರ್ಮರಣ

    – ವಾಕ್ ಮಾಡ್ತಿದ್ದಾಗ ನದಿಗೆ ಬಿದ್ದ ಸ್ನೇಹಿತ
    – ರಷ್ಯಾದಿಂದ ಬಂದ ವಿದ್ಯಾರ್ಥಿಗಳ ಮೃತದೇಹ

    ಚೆನ್ನೈ: ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳು ರಷ್ಯಾದ ನದಿಯೊಂದರಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಇದೀಗ ನಾಲ್ವರ ಮೃತದೇಹಗಳನ್ನು ಶುಕ್ರವಾರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ನಾಲ್ವರು ವಿದ್ಯಾರ್ಥಿಗಳು ತಮಿಳುನಾಡಿನವರಾಗಿದ್ದು, ಆಗಸ್ಟ್ 8 ರಂದು ರಷ್ಯಾದ ವೋಲ್ಗಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದರು.

    ಶುಕ್ರವಾರ ಮೃತದೇಹಗಳನ್ನು ಕಾರ್ಗೋ ವಿಮಾನದ ಮೂಲಕ ಚೆನ್ನೈಗೆ ಬಂದಿವೆ. ಅವರ ಕುಟುಂಬದವರು ಮೃತದೇಹವನ್ನು ಪಡೆಯಲು ವಿಮಾನ ನಿಲ್ದಾಣದಲ್ಲಿದ್ದರು. ಅಲ್ಲದೇ ವಿಮಾನ ಬಂದಾಗ ಬಿಜೆಪಿ ರಾಜ್ಯ ಅಧ್ಯಕ್ಷ ಎಲ್. ಮುರುಗನ್ ವಿಮಾನ ನಿಲ್ದಾಣದಲ್ಲಿದ್ದರು ಎಂದು ವರದಿಯಾಗಿದೆ.

    ಏನಿದು ಪ್ರಕರಣ?
    ಆಗಸ್ಟ್ 8 ರಂದು ಮನೋಜ್ ಆನಂದ್ (22), ಆರ್.ವಿಘ್ನೇಶ್ (22), ಆಶಿಕ್ (22) ಮತ್ತು ಸ್ಟೀಫನ್ ಲೆಬಾಕು (20) ಸೇರಿದಂತೆ 11 ವಿದ್ಯಾರ್ಥಿಗಳು ರಷ್ಯಾದ ವೋಲ್ಗಾ ನದಿಯ ಬಳಿ ವಾಕ್ ಮಾಡಲು ಹೋಗಿದ್ದರು. ನಾಲ್ವರಲ್ಲಿ ಓರ್ವ ಕಾಲು ಜಾರಿ ನದಿಗೆ ಬಿದ್ದಿದ್ದಾನೆ. ಮುಳುಗುತ್ತಿರುವ ತಮ್ಮ ಸ್ನೇಹಿತನಿಗೆ ಸಹಾಯ ಮಾಡಲು ಇತರರು ಪ್ರಯತ್ನಿಸಿದ್ದಾರೆ. ಆದರೆ ನಾಲ್ವರು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಉಳಿದ ವಿದ್ಯಾರ್ಥಿಗಳು ರಷ್ಯಾದ ತುರ್ತು ಸೇವೆಗಳಿಗೆ ಫೋನ್ ಮಾಡಿ ತಿಳಿಸಿದ್ದರು.

    ಮುಳುಗಿದ ನಾಲ್ವರು ವಿದ್ಯಾರ್ಥಿಗಳು ರಷ್ಯಾದ ವೋಲ್ಗೊಗ್ರಾಡ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದರು. ಆಶಿಕ್, ಮನೋಜ್ ಮತ್ತು ವಿಘ್ನೇಶ್ ಮೂವರು ಇನ್ನೂ ಕೆಲವು ತಿಂಗಳಲ್ಲಿ ಎಂಡಿ ಪದವಿ ಮುಗಿಸುತ್ತಿದ್ದರು. ಇನ್ನೂ ಸ್ಟೀಫನ್ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದನು. ಆಶಿಕ್ ತಿರುಪ್ಪೂರು ಜಿಲ್ಲೆಯ ಧರಪುರಂ ಮೂಲದವನಾಗಿದ್ದರೆ, ಮನೋಜ್ ಆನಂದ್ ಸೇಲಂ ಜಿಲ್ಲೆಯ ತಲೈವಾಸಲ್ ಮೂಲದವನು. ವಿಘ್ನೇಶ್ ಕಡಲೂರು ಜಿಲ್ಲೆಯ ತಿಟ್ಟಕ್ಕುಡಿ ಮತ್ತು ಸ್ಟೀಫನ್ ಚೆನ್ನೈ ಮೂಲದವನು ಎಂದು ತಿಳಿದುಬಂದಿದೆ.

    ಈ ಹಿಂದೆಯೇ ನಾಲ್ವರು ವಿದ್ಯಾರ್ಥಿಗಳ ಕುಟುಂಬದವರು ಮೃತದೇಹವನ್ನು ತಮ್ಮ ಮನೆಗಳಿಗೆ ತರಲು ಸಹಾಯ ಮಾಡುವಂತೆ ರಾಜ್ಯ ಸರ್ಕಾರವನ್ನು ಕೋರಿದ್ದರು. ನಂತರ ಇದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದರು. ಅಷ್ಟೇ ಅಲ್ಲದೇ ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಕೂಡ ಕುಟುಂಬದವರನ್ನ ಸಂಪರ್ಕಿಸಿ ಮೃತದೇಹಗಳನ್ನು ತಮಿಳುನಾಡಿಗೆ ಮರಳಿ ತರಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಭರವಸೆ ನೀಡಿದ್ದರು.

  • ರಷ್ಯಾದ ವಿರೋಧ ಪಕ್ಷದ ನಾಯಕನಿಗೆ ವಿಷ ಪ್ರಾಶನ – ಕೋಮಾಗೆ ಜಾರಿದ ನಾಯಕ

    ರಷ್ಯಾದ ವಿರೋಧ ಪಕ್ಷದ ನಾಯಕನಿಗೆ ವಿಷ ಪ್ರಾಶನ – ಕೋಮಾಗೆ ಜಾರಿದ ನಾಯಕ

    ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರನ್ನು ಪ್ರಬಲವಾಗಿ ಟೀಕಿಸುತ್ತಿದ್ದ ವಿಪಕ್ಷ ನಾಯಕ ಏಕಾಏಕಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಕೋಮಾದಲ್ಲಿದ್ದಾರೆ.

    ರಷ್ಯಾ ಆಫ್‌ದ ಫ್ಯೂಚರ್‌ನ ನಾಯಕ ಅಲೆಕ್ಸಿ ನವಲ್ನಿ (44) ಸೈಬೀರಿಯಾದ ಟೋಮ್ಸ್‌ನಿಂದ ಮಾಸ್ಕೋಗೆ ವಿಮಾನದಲ್ಲಿ ಬರುತ್ತಿದ್ದಾಗ ಅಸ್ವಸ್ಥಗೊಂಡಿದ್ದಾರೆ. ಸದ್ಯ ಅವರು ಸೈಬೀರಿಯಾದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಅಲೆಕ್ಸಿ ನವಲ್ನಿ ಆರೋಗ್ಯವಾಗಿದ್ದರು. ಅವರಿಗೆ ಆಹಾರದಲ್ಲಿ ವಿಷವನ್ನು ನೀಡಿರುವ ಸಾಧ್ಯತೆಯಿದೆ ಎಂದು ನವಲ್ನಿ ಅವರ ವಕ್ತಾರೆ ಕಿರಾ ಯರ್ಮೈಶ್‌ ಗಂಭೀರ ಆರೋಪ ಮಾಡಿದ್ದಾರೆ.

    ಮಾಸ್ಕೋಗೆ ಬರುತ್ತಿದಾಗ ದಿಢೀರ್‌ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿದೆ. ಹೀಗಾಗಿ ವಿಮಾನವನ್ನು ತುರ್ತು ಲ್ಯಾಂಡಿಗ್‌ ಮಾಡಿ ನವಲ್ನಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ನವಲ್ನಿ ಅವರು ಬೆಳಗ್ಗೆ ಚಹಾ ಮಾತ್ರ ಸೇವಿಸಿದ್ದಾರೆ. ಹೀಗಾಗಿ ಚಹಾದಲ್ಲಿ ವಿಷ ಹಾಕಿರುವ ಸಾಧ್ಯತೆಯಿದೆ ಎಂದು ವಕ್ತಾರೆ ಸಂಶಯ ವ್ಯಕ್ತ ಪಡಿಸಿದ್ದಾರೆ. ವಕ್ತಾರೆಯ ಆರೋಪದ ಹಿನ್ನೆಲೆಯಲ್ಲಿ ಈಗ ಕೆಫೆಯಲ್ಲಿರುವ ಸಿಸಿಟಿವಿ ಪರೀಶಲನೆ ನಡೆಸಲಾಗುತ್ತಿದೆ.

    ಆಸ್ಪತ್ರೆಯ ವೈದ್ಯರು ಮಾಧ್ಯಮಗಳ ಜತೆಗೆ ಮಾತನಾಡಿ ಅಲೆಕ್ಸಿ ನವಲ್ನಿ ಅವರಿಗೆ ವಿಷ ಪ್ರಾಶನ ಮಾಡಲಾಗಿದೆ ಎಂಬ ಅಂಶ ಇದುವರೆಗೆ ದೃಢಪಟ್ಟಿಲ್ಲ ಎಂದು ಹೇಳಿದ್ದಾರೆ.

    ಪುಟಿನ್‌ ನೇತೃತ್ವದ ಯುನೈಟೆಡ್‌ ರಷ್ಯಾ ಪಕ್ಷ ಕಳ್ಳರು ಮತ್ತು ವಂಚರ ಪಕ್ಷವೆಂದು ದೂರಿದ್ದ ನವಲ್ನಿ ಭ್ರಷ್ಟಾಚಾರದ ಆರೋಪ ಮಾಡಿದ್ದರು. 2011ರಲ್ಲಿ ಅವರನ್ನು ಬಂಧಿಸಿ 15 ದಿನಗಳ ಕಾಲ ಜೈಲಿನಲ್ಲಿ ಇರಿಸಲಾಗಿತ್ತು. 2013ರಲ್ಲಿ ಪ್ರಕರಣವೊಂದರಲ್ಲಿ ಶಿಕ್ಷೆ ಅನುಭವಿಸಿದ್ದರು.