Tag: russia

  • ಉಕ್ರೇನ್ ಸುತ್ತುವರಿದ ರಷ್ಯಾ ಸೇನೆ – ಯುದ್ಧವಾಹನ, ಟ್ಯಾಂಕ್‍ಗಳು, ಫಿರಂಗಿಗಳೊಂದಿಗೆ ಆಗಮನ

    ಉಕ್ರೇನ್ ಸುತ್ತುವರಿದ ರಷ್ಯಾ ಸೇನೆ – ಯುದ್ಧವಾಹನ, ಟ್ಯಾಂಕ್‍ಗಳು, ಫಿರಂಗಿಗಳೊಂದಿಗೆ ಆಗಮನ

    ಮಾಸ್ಕೋ: ರಷ್ಯಾ-ಉಕ್ರೇನ್ ನಡುವೆ ಯುದ್ಧದ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಖಾಸಗಿ ಸಂಸ್ಥೆ ಬಿಡುಗಡೆ ಮಾಡಿರುವ ಉಪಗ್ರಹದ ಚಿತ್ರಗಳಲ್ಲಿ ರಷ್ಯಾ ಸೇನೆ ಸಂಪೂರ್ಣವಾಗಿ ಉಕ್ರೇನ್‍ನನ್ನು ಸುತ್ತುವರಿದಿದೆ.

    ರಷ್ಯಾ ಸೇನೆ ಅಗತ್ಯ ವಸ್ತುಗಳನ್ನು ರವಾನಿಸುತ್ತಿರೋದು ಗೊತ್ತಾಗಿದೆ. ದಕ್ಷಿಣ ಬೆಲಾರಸ್‍ನ ಮೊಜ್ಯೂರ್ ಏರ್‍ಫೀಲ್ಡ್ ಬಳಿ 100 ವಾಹನಗಳು ನಿಂತಿದ್ದು ಗುಡಾರಗಳನ್ನು ಹಾಕಿರೋದು ಕಂಡು ಬಂದಿದೆ. ಇಲ್ಲಿಂದ ಉಕ್ರೇನ್ ವಿಮಾನನಿಲ್ದಾಣ ಕೇವಲ 40 ಕಿ.ಮೀ ದೂರದಲ್ಲಿದೆ. ಅಷ್ಟೇ ಅಲ್ಲದೆ ಬೆಲ್ಗ್ರೋಡ್‍ನ ಮಿಲಿಟರಿ ಗ್ಯಾರಿಸನ್‍ನಲ್ಲಿ ಹೊಸ ಆಸ್ಪತ್ರೆಯನ್ನೂ ನಿರ್ಮಿಸಲಾಗಿದೆ. ಇದರ ಜೊತೆಗೆ ಉಕ್ರೇನ್‍ನಿಂದ 20 ಕಿ.ಮೀ ದೂರದಲ್ಲಿ ಯುದ್ದೋಪಕರಣಗಳ ಜೊತೆಗೆ ಸೇನಾಪಡೆಯನ್ನೂ ನಿಯೋಜಿಸಲಾಗಿದೆ. ಇದನ್ನೂ ಓದಿ: ಉಕ್ರೇನ್ ದೇಶವನ್ನೇ ಮೂರು ಭಾಗ ಮಾಡಿದ ರಷ್ಯಾ

    ಉತ್ತರ ಉಕ್ರೇನ್‍ನ 40 ಕಿ.ಮೀ. ದೂರದಲ್ಲಿ ಯುದ್ಧವಾಹನಗಳು, ಟ್ಯಾಂಕ್‍ಗಳು, ಫಿರಂಗಿಗಳು, ಭಾರೀ ಸಾಮಾಗ್ರಿಗಳನ್ನು ರಷ್ಯಾ ಸೇನೆ ರವಾನಿಸಿದೆ. ಪಶ್ಚಿಮ ರಷ್ಯಾದ ಪೊಚೆಪ್ ಬಳಿ ಹೆಚ್ಚುವರಿ ಸೇನೆ ನಿಯೋಜಿಸಲು ದೊಡ್ಡ ಪ್ರದೇಶವನ್ನು ತೆರವುಗೊಳಿಸಲಾಗ್ತಿದೆ. ಇನ್ನು, ರಷ್ಯಾ ವರ್ತನೆಗೆ ಯುರೋಪ್‍ನ ಹಲವು ದೇಶಗಳು ಕೆಂಡಾಮಂಡಲವಾಗಿವೆ. ಈಗಾಗಲೇ ಅಮೆರಿಕ ಆರ್ಥಿಕ ಸಂಸ್ಥೆಗಳ ವೆಬ್‍ಸೈಟ್ ಹಾಗೂ ಸೈನಿಕ ಬ್ಯಾಂಕ್‍ಗಳ ಮೇಲೆ ನಿರ್ಬಂಧ ವಿಧಿಸಿದೆ. ಪಶ್ಚಿಮ ದೇಶಗಳು ರಷ್ಯಾ ಜೊತೆಗಿನ ವ್ಯಾಪಾರ ಹಾಗೂ ವಾಣಿಜ್ಯ ವ್ಯವಹಾರಗಳನ್ನು ಬಂದ್ ಮಾಡೋದಾಗಿ ಹೇಳಿವೆ. ಉಕ್ರೇನ್‍ನಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವುದರಿಂದ 242 ಭಾರತೀಯರು ತವರಿಗೆ ಬಂದಿದ್ದಾರೆ. ಇದನ್ನೂ ಓದಿ: ಉಕ್ರೇನ್ ಉದ್ವಿಗ್ನತೆ ಬಗ್ಗೆ ವಿಶ್ವಸಂಸ್ಥೆಯಲ್ಲಿ ಭಾರತ ಆತಂಕ

  • 100 ಡಾಲರ್ ಗಡಿಯಲ್ಲಿ ಕಚ್ಚಾ ತೈಲ – ಭಾರೀ ಬೆಲೆ ಏರಿಕೆ ಸಾಧ್ಯತೆ

    100 ಡಾಲರ್ ಗಡಿಯಲ್ಲಿ ಕಚ್ಚಾ ತೈಲ – ಭಾರೀ ಬೆಲೆ ಏರಿಕೆ ಸಾಧ್ಯತೆ

    ನವದೆಹಲಿ: ರಷ್ಯಾ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ಉಕ್ರೇನ್‍ಗೆ ಪತ್ರ ಕಳುಹಿಸಿದ ಬಳಿಕ ಮಂಗಳವಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಏರಿಕೆಯಾಗಿದ್ದು 100 ಡಾಲರ್(7,459 ರೂ.) ಹತ್ತಿರ ಬಂದಿದೆ. ಭಾರತದಲ್ಲಿ ಸದ್ಯ ತೈಲಬೆಲೆ ಏರಿಕೆಯಾಗಿಲ್ಲವಾದರೂ ಶೀಘ್ರವೇ ಏರಿಕೆಯಾಗುವ ಸಾಧ್ಯತೆ ಇದೆ.

    ಏಪ್ರಿಲ್‍ನಲ್ಲಿ ಮಾರಾಟವಾಗುವ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.4.18 ರಷ್ಟು ಏರಿಕೆಯಾಗಿದ್ದು ಬೆಲೆ 99.38 ಡಾಲರ್(7,415 ರೂ.)ಗೆ ತಲುಪಿದೆ. ಈಗ ಪಂಚರಾಜ್ಯ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಹೀಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲಬೆಲೆ ಏರಿಕೆಯಾಗಿದ್ದರೂ ಭಾರತದಲ್ಲಿ ಏರಿಕೆ ಕಂಡಿಲ್ಲ. ಪಂಚರಾಜ್ಯ ಚುನಾವಣೆ ಅಂತ್ಯವಾದ ಬಳಿಕ ತೈಲಬೆಲೆ ಭಾರತದಲ್ಲೂ ಹೆಚ್ಚಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಬಿಯರ್ ಪ್ರಿಯರಿಗೆ ಕಹಿ ಸುದ್ದಿ

    ನವೆಂಬರ್ 4 ರಿಂದ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿತ್ತು. ಜಾಗತಿಕ ಮಟ್ಟದಲ್ಲಿ ತೈಲಬೆಲೆ ಏರಿಕೆಯಾಗಿರುವುದರಿಂದ ಭಾರತದಲ್ಲೂ ಬೆಲೆ ಏರಿಸುವುದು ಅನಿವಾರ್ಯ. ಇದನ್ನೂ ಓದಿ: ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಕಹಳೆ – ರಷ್ಯಾ ಮೇಲೆ ಹಣಕಾಸು ಸೇರಿ ವಿವಿಧ ನಿರ್ಬಂಧ ಹೇರಿದ ಅಮೆರಿಕ!

    ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ನಡೆಸುವ ಸಾಧ್ಯತೆ ಹೆಚ್ಚಿದ್ದು, ಇದರಿಂದ ಕಚ್ಚಾತೈಲ ಪೂರೈಕೆಗೆ ಅಡ್ಡಿಯಾಗುವ ಸಾಧ್ಯತೆಯೂ ಇದೆ. 2014ರ ಬಳಿಕ ಇಲ್ಲಿಯವರೆಗೆ ತೈಲ ಬೆಲೆ 100ರ ಗಡಿ ದಾಟಿಲ್ಲ. ಈಗ ಯುದ್ಧ ಭೀತಿ ನಿರ್ಮಾಣಗೊಂಡಿದ್ದು ಭಾರತದಲ್ಲೂ ತೈಲ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.

  • ಬಿಯರ್ ಪ್ರಿಯರಿಗೆ ಕಹಿ ಸುದ್ದಿ

    ಬಿಯರ್ ಪ್ರಿಯರಿಗೆ ಕಹಿ ಸುದ್ದಿ

    ಮುಂಬೈ: ರಷ್ಯಾ-ಉಕ್ರೇನ್‍ನ ಸಂಭವನೀಯ ಯುದ್ಧದಿಂದ ಬಿಯರ್ ಕಂಪನಿಗಳಿಗೆ ಭಾರೀ ಹೊಡೆತ ಬೀಳುವ ಸಾಧ್ಯತೆ ಇದೆ. ಬೇಸಿಗೆ ಕಾಲ ಪ್ರಾರಂಭವಾದಂತೆ ರಷ್ಯಾ-ಉಕ್ರೇನ್ ಗಡಿಯಲ್ಲಿ ಕಲಹ ಎದುರಾಗಿದ್ದು, ಇದರಿಂದ ಬಿಯರ್ ಕಂಪನಿಗಳಿಗೆ ಸಮಸ್ಯೆಯಾಗಲಿದೆ.

    ಬಿಯರ್ ಉತ್ಪಾದನೆಗೆ ಮುಖ್ಯವಾಗಿ ಬಳಕೆಯಾಗುವುದು ಬಾರ್ಲಿ. ಪ್ರಪಂಚದಲ್ಲೇ ಅತೀ ಹೆಚ್ಚು ಬಾರ್ಲಿ ಬೆಳೆಯುವ 5 ರಾಷ್ಟ್ರಗಳಲ್ಲಿ ಉಕ್ರೇನ್ ಕೂಡಾ ಒಂದು. ಈಗಾಗಲೇ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಲು ಸಜ್ಜಾಗಿ ನಿಂತಿದೆ. ಹೀಗಾಗಿ ಇತರ ದೇಶಗಳಿಗೆ ಉಕ್ರೇನ್‍ನಿಂದ ಬಾರ್ಲಿ ಸರಬರಾಜು ಕಷ್ಟಕರವಾಗಿದೆ. ಇದನ್ನೂ ಓದಿ: ಸೋಶಿಯಲ್ ಮೀಡಿಯಾ ಸ್ಟಾರ್ ಕಿಲಿ ಪೌಲ್‍ಗೆ ಭಾರತೀಯ ಹೈ ಕಮಿಷನ್ ಗೌರವ

    ಕೋವಿಡ್ ಸಾಂಕ್ರಾಮಿಕ ಪ್ರಾರಂಭವಾದಾಗಿನಿಂದಲೇ ಮದ್ಯ ಮಾರುಕಟ್ಟೆಗೆ ಹೊಡೆತ ಬಿದ್ದಿತ್ತು. ಈಗ ಲಾಕ್‍ಡೌನ್ ತೆರವಾಗಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ ಮದ್ಯ ಉದ್ಯಮ ಚೇತರಿಕೆ ಕಾಣಲು ಆರಂಭವಾಗಿತ್ತು. ಈ ಮಧ್ಯೆ ದಿಢೀರ್ ಆಗಿ ಸೃಷ್ಟಿಯಾಗಿರುವ ರಷ್ಯಾ-ಉಕ್ರೇನ್ ಕಲಹದಿಂದ ಮತ್ತೆ ಮದ್ಯ ಮಾರುಕಟ್ಟೆಗೆ ಹೊಡೆತ ಬೀಳುವ ಸಾಧ್ಯತೆ ಇದೆ. ಇದನ್ನೂ ಓದಿ: 17,500 ಅಡಿ ಎತ್ತರದಲ್ಲಿ 55ರ ಐಟಿಬಿಪಿ ಅಧಿಕಾರಿಯ 65 ಪುಶ್ ಅಪ್ ವಿಡಿಯೋ ವೈರಲ್

    ಮಾರ್ಚ್ ಹಾಗೂ ಜುಲೈ ನಡುವಿನ ಅವಧಿ ವಾರ್ಷಿಕ ಬಿಯರ್ ಮಾರಾಟದ ಶೇ.40-50 ಪಾಲನ್ನು ಹೊಂದಿರುತ್ತದೆ. ಇದೀಗ ಭಾರತ ಸೇರಿದಂತೆ ಇತರ ದೇಶಗಳಲ್ಲಿ ಉಕ್ರೇನ್‍ನಿಂದ ಸರಬರಾಜಾಗುವ ಬಾರ್ಲಿಗೆ ತಡೆಯಾಗಿದ್ದು, ಬಿಯರ್ ಉತ್ಪಾದನೆಯೂ ಕುಂಠಿತವಾಗಲಿದೆ. ಇದರಿಂದ ಬಿಯರ್ ದರ ಹೆಚ್ಚಾಗುವ ಸಾಧ್ಯತೆಯೂ ಇದೆ.

  • ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಕಹಳೆ – ರಷ್ಯಾ ಮೇಲೆ ಹಣಕಾಸು ಸೇರಿ ವಿವಿಧ ನಿರ್ಬಂಧ ಹೇರಿದ ಅಮೆರಿಕ!

    ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಕಹಳೆ – ರಷ್ಯಾ ಮೇಲೆ ಹಣಕಾಸು ಸೇರಿ ವಿವಿಧ ನಿರ್ಬಂಧ ಹೇರಿದ ಅಮೆರಿಕ!

    ವಾಷಿಂಗ್ಟನ್: ರಷ್ಯಾ, ಉಕ್ರೇನ್ ವಿರುದ್ಧ ಯುದ್ದ ಕಹಳೆ ಕೂಗಿದ್ದು, ರಷ್ಯಾದ ಸೈನ್ಯ ಉಕ್ರೇನ್‍ನಲ್ಲಿದೆ. ಈ ಹಿನ್ನೆಲೆ ಅಮೆರಿಕ, ರಷ್ಯಾ ಮೇಲೆ ಹಣಕಾಸು ಸೇರಿ ವಿವಿಧ ನಿರ್ಬಂಧಗಳನ್ನು ಹೇರಿದೆ.

    ಅಮೆರಿಕ ಅಧ್ಯಕ್ಷ ಜೋ ಬೈಡನ್ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಎನ್‍ಎಟಿಒ ಒಪ್ಪಂದದಡಿ ರಷ್ಯಾದ ಮೇಲೆ ಕೆಲವೊಂದು ನಿರ್ಬಂಧ ಹೇರಲಾಗಿದೆ. ಉಕ್ರೇನ್ ನ ಮತ್ತು ಅಮೆರಿಕದ ಯಾವುದೇ ಪ್ರದೇಶಗಳ ಮೇಲೆ ನಿರ್ಧಾರ ಕೈಗೊಳ್ಳುವ, ಯಾವುದೇ ವ್ಯಕ್ತಿ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಉಕ್ರೇನ್ ದೇಶವನ್ನೇ ಮೂರು ಭಾಗ ಮಾಡಿದ ರಷ್ಯಾ

    ಉಕ್ರೇನ್‍ನ ಡಿಎನ್‍ಆರ್ ಮತ್ತು ಎಲ್‍ಎನ್‍ಆರ್ ಎಂದು ಕರೆಯಲ್ಪಡುವ ಡೊನಸ್ಕ್ ಮತ್ತು ಲಂಗಸ್ಕ್ ಪ್ರದೇಶದಲ್ಲಿ ಅಮೆರಿಕದ ಪ್ರಜೆಗಳು ಯಾವುದೇ ಹೊಸ ಹೂಡಿಕೆ, ವ್ಯಾಪಾರ ಮತ್ತು ಹಣಕಾಸು ನೆರವು ನೀಡುವುದನ್ನು ನಿಷೇಧಿಸಲಾಗಿದೆ ಎಂದು ಶ್ವೇತಭವನದಲ್ಲಿ ಹೇಳಿದರು.

    ಈ ರೀತಿಯ ಫೋಷಣೆಯಿಂದ 2 ಸ್ವಯಂಫೋಷಿತ ಪ್ರಜಾಪ್ರಭುತ್ವ ರಾಷ್ಟ್ರಗಳು ಈ ರೀತಿ ನಿರ್ಬಂಧ ಹೇರಿಕೊಂಡರೆ ಸೋವಿಯತ್ ಒಕ್ಕೂಟದ ಪತನವಾಗುವ ಸಾಧ್ಯತೆ ಇದೆ. ಪೂರ್ವ-ಪಶ್ಚಿಮ ಸಂಘರ್ಷದಲ್ಲಿ ಇದು ಹೊಸ ಯುಗಕ್ಕೆ ನಾಂದಿಯಾಗುತ್ತೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

    ಉಕ್ರೇನ್‍ನ ಅಪಾಯಕಾರಿ ಪ್ರದೇಶಗಳಿಂದ 241 ಮಂದಿ ಭಾರತೀಯರನ್ನು ವಾಪಸ್ ಕರೆಸಿಕೊಳ್ಳಲಾಗಿದೆ. ಇದನ್ನೂ ಓದಿ: ಉಕ್ರೇನ್ ತೊರೆಯಿರಿ – ವಿದ್ಯಾರ್ಥಿಗಳಿಗೆ ಭಾರತ ಸಲಹೆ

    ಈ ಹಿಂದೆ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳ ನಿಯಂತ್ರಣದಲ್ಲಿರುವ ದೋನೆಟ್‍ಸ್‍ಕೋ, ಲುಹಾನ್‍ಸ್‍ಕೋ ಪ್ರಾಂತ್ಯಗಳನ್ನು ಎರಡು ಪ್ರತ್ಯೇಕ ದೇಶಗಳೆಂದು ಗುರುತಿಸಿ ಪುಟಿನ್ ಆದೇಶ ಹೊರಡಿಸಿದ್ದರು. ಹೊಸ ದೇಶಗಳಲ್ಲಿ ಶಾಂತಿ ಸ್ಥಾಪನೆ ಆಗುವವರೆಗೂ ರಷ್ಯಾದ ಶಾಂತಿಪಾಲನಾ ಪಡೆಗಳನ್ನು ನಿಯೋಜಿಸಲು ತೀರ್ಮಾನಿಸಿದೆ. ಈ ಮೂಲಕ ಉಕ್ರೇನ್ ಅಸ್ತಿತ್ವವನ್ನೇ ಪ್ರಶ್ನಿಸಿ ಯೂರೋಪ್ ದೇಶಗಳಿಗೆ ಪುಟಿನ್ ಭಯ ಹುಟ್ಟಿಸಿದ್ದರು.

  • ಉಕ್ರೇನ್ ದೇಶವನ್ನೇ ಮೂರು ಭಾಗ ಮಾಡಿದ ರಷ್ಯಾ

    ಉಕ್ರೇನ್ ದೇಶವನ್ನೇ ಮೂರು ಭಾಗ ಮಾಡಿದ ರಷ್ಯಾ

    ಮಾಸ್ಕೋ: ಕಾಲುಕೆರೆದು ಕದನಕ್ಕೆ ಸಜ್ಜಾಗಿರುವ ರಷ್ಯಾ, ಇದೀಗ ಉಕ್ರೇನ್ ದೇಶವನ್ನು ಮೂರು ಭಾಗ ಮಾಡಿ ಘೋಷಣೆ ಹೊರಡಿಸಿದೆ.

    ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳ ನಿಯಂತ್ರಣದಲ್ಲಿರುವ ದೋನೆಟ್ಸ್‍ಕೋ, ಲುಹಾನ್ಸ್‍ಕೋ ಪ್ರಾಂತ್ಯಗಳನ್ನು ಎರಡು ಪ್ರತ್ಯೇಕ ದೇಶಗಳೆಂದು ಗುರುತಿಸಿ ಪುಟಿನ್ ಆದೇಶ ಹೊರಡಿಸಿದ್ದಾರೆ. ಹೊಸ ದೇಶಗಳಲ್ಲಿ ಶಾಂತಿ ಸ್ಥಾಪನೆ ಆಗುವವರೆಗೂ ರಷ್ಯಾದ ಶಾಂತಿಪಾಲನಾ ಪಡೆಗಳನ್ನು ನಿಯೋಜಿಸಲು ತೀರ್ಮಾನಿಸಿದೆ. ಈ ಮೂಲಕ ಉಕ್ರೇನ್ ಅಸ್ತಿತ್ವವನ್ನೇ ಪ್ರಶ್ನಿಸಿ ಯುರೋಪ್ ದೇಶಗಳಿಗೆ ಪುಟಿನ್ ಭಯ ಹುಟ್ಟಿಸಿದ್ದಾರೆ.

    ನಾವು ಶಾಂತಿಯನ್ನು ಬಯಸುತ್ತೇವೆ. ಒಂದಿಂಚೂ ಭಾಗವನ್ನು ಇತರರು ಆಕ್ರಮಿಸಲು ಬಿಡುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ಸ್ಪಷ್ಟಪಡಿಸಿದ್ದಾರೆ. ನಮ್ಮ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರಲು ರಷ್ಯಾ ನೋಡುತ್ತಿದೆ. ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಅಧ್ಯಕ್ಷ ಜೆಲೆನ್ ಸ್ಕೀ ಗುಡುಗಿದ್ದಾರೆ. ಇದನ್ನೂ ಓದಿ: ಉಕ್ರೇನ್ ಉದ್ವಿಗ್ನತೆ ಬಗ್ಗೆ ವಿಶ್ವಸಂಸ್ಥೆಯಲ್ಲಿ ಭಾರತ ಆತಂಕ

    ರಷ್ಯಾದ ನಡೆ ಬಗ್ಗೆ ವಿಶ್ವಸಂಸ್ಥೆಯ ಭದ್ರತಾಮಂಡಳಿಯಲ್ಲಿ ಬಿಸಿಬಿಸಿ ಚರ್ಚೆ ನಡೆದಿದೆ. ರಷ್ಯಾ ಕ್ರಮವನ್ನು ಅಮೆರಿಕ, ಬ್ರಿಟನ್, ಯುರೋಪ್ ಒಕ್ಕೂಟ, ಆಸ್ಟ್ರೇಲಿಯಾ ತೀವ್ರವಾಗಿ ಖಂಡಿಸಿವೆ. ಉಕ್ರೇನ್‍ನಿಂದ ಬೇರ್ಪಟ್ಟ 2 ಪ್ರಾಂತ್ಯಗಳಿಗೆ ಆರ್ಥಿಕ ನಿರ್ಬಂಧ ಹೇರಿ ಅಮೆರಿಕ, ಬ್ರಿಟನ್, ಯುರೋಪ್ ಒಕ್ಕೂಟದ ಹಲವು ದೇಶಗಳು ಶಾಕ್ ನೀಡಿವೆ.

    ಸರಕು, ಸೇವೆ, ತಂತ್ರಜ್ಞಾನಗಳನ್ನು ಯಾವುದೇ ರೂಪದಲ್ಲಿಯೂ ಸರಬರಾಜು ಮಾಡಬಾರದೆಂದು ನಿರ್ಧರಿಸಿದೆ. ರಷ್ಯಾ ಮೇಲೆಯೂ ಕಠಿಣ ನಿರ್ಬಂಧಕ್ಕೆ ಅಮೆರಿಕಾ ಚಿಂತನೆ ನಡೆಸಿದೆ. ಈ ಮಧ್ಯೆ ಉಕ್ರೇನ್ ವಿಚಾರದಲ್ಲಿ ಎಲ್ಲಾ ದೇಶಗಳು ಸಂಯಮ ಪಾಲಿಸಬೇಕೆಂದು ಭಾರತ ಕರೆ ನೀಡಿದೆ. ಇದನ್ನೂ ಓದಿ: ಉಕ್ರೇನ್ ತೊರೆಯಿರಿ – ವಿದ್ಯಾರ್ಥಿಗಳಿಗೆ ಭಾರತ ಸಲಹೆ

    ಯಾವುದೇ ಕ್ಷಣದಲ್ಲಿ ಯುದ್ಧ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ, ಈ ಕೂಡಲೇ ಉಕ್ರೇನ್ ತೊರೆಯುವಂತೆ ಭಾರತೀಯ ವಿದ್ಯಾರ್ಥಿಗಳಿಗೆ ಭಾರತ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಉಕ್ರೇನ್‍ನಲ್ಲಿರುವ ಭಾರತೀಯರನ್ನು ಕರೆತರಲು ಇಂದು ಬೆಳಗ್ಗೆ ಏರ್ ಇಂಡಿಯಾ ವಿಮಾನವೊಂದು ದೆಹಲಿಯಲ್ಲಿ ಟೇಕ್ ಆಫ್ ಆಗಿದೆ. ಇನ್ನಷ್ಟು ವಿಮಾನಗಳನ್ನು ಕಳಿಸುವುದಾಗಿ ತಿಳಿಸಿದೆ.

  • ಉಕ್ರೇನ್ ತೊರೆಯಿರಿ – ವಿದ್ಯಾರ್ಥಿಗಳಿಗೆ ಭಾರತ ಸಲಹೆ

    ಉಕ್ರೇನ್ ತೊರೆಯಿರಿ – ವಿದ್ಯಾರ್ಥಿಗಳಿಗೆ ಭಾರತ ಸಲಹೆ

    ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ನಡೆಸಬಹುದಾದ ದಾಳಿ ಬಗ್ಗೆ ಭಾರತ ಭೀತಿ ವ್ಯಕ್ತಪಡಿಸುತ್ತಿದೆ. ಉಕ್ರೇನ್‍ನಲ್ಲಿ ವಿದ್ಯಾಭ್ಯಾಸಕ್ಕೆ ತೆರಳಿರುವ ವಿದ್ಯಾರ್ಥಿಗಳಿಗೆ ಸದ್ಯದ ಪರಿಸ್ಥಿತಿಯಲ್ಲಿ ಉಕ್ರೇನ್ ತೊರೆಯುವಂತೆ ಸಲಹೆ ನೀಡಿದೆ.

    ಉಕ್ರೇನ್‍ನ ಭಾರತೀಯ ರಾಯಭಾರಿ ಕಚೇರಿಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಸಲಹೆ ನೀಡಿದೆ. ಉಕ್ರೇನ್‍ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಸದ್ಯದ ಪರಿಸ್ಥಿತಿಯಲ್ಲಿ ಮುಂಜಾಗೃತಾ ಕ್ರಮವಾಗಿ ಉಕ್ರೇನ್ ತೊರೆಯುವುದು ಉತ್ತಮ ಎಂದು ಸಲಹೆ ನೀಡಿದೆ. ಇದನ್ನೂ ಓದಿ: ಉಕ್ರೇನ್ ಉದ್ವಿಗ್ನತೆ ಬಗ್ಗೆ ವಿಶ್ವಸಂಸ್ಥೆಯಲ್ಲಿ ಭಾರತ ಆತಂಕ

    ಭಾರತ ರಾಯಭಾರಿ ಕಚೇರಿಗೆ ಈ ವರೆಗೆ ವೈದ್ಯಕೀಯ ವಿಶ್ವವಿದ್ಯಾಲಯಗಳಿಂದ ಆನ್‍ಲೈನ್ ತರಗತಿಯ ದೃಢೀಕರಣದ ಬಗ್ಗೆ ಹಲವು ಬಾರಿ ಕರೆಗಳು ಬಂದಿವೆ. ಆದರೆ ವಿದ್ಯಾರ್ಥಿಗಳಿಗೆ ತಮ್ಮ ಸುರಕ್ಷತೆಯ ಹಿತಾಸಕ್ತಿಯಿಂದ ಅಧಿಕೃತ ದೃಢೀಕರಣಕ್ಕೆ ಕಾಯುವ ಬದಲು ತಾತ್ಕಾಲಿಕವಾಗಿ ಉಕ್ರೇನ್ ತೊರೆಯುವುದು ಉತ್ತಮ ಎಂದು ಸಲಹೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ರಷ್ಯಾ-ಉಕ್ರೇನ್‌ ಬಿಕ್ಕಟ್ಟು: ಭಾರತೀಯರನ್ನು ಕರೆತರಲು ಉಕ್ರೇನ್‌ಗೆ ಹೊರಟ ಏರ್‌ ಇಂಡಿಯಾ ವಿಮಾನ

    ಉಕ್ರೇನ್ ಮೇಲೆ ರಷ್ಯಾ ನಡೆಸಬಹುದಾದ ದಾಳಿಯ ಭೀತಿಗೆ ವಿದೇಶೀ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿಮಾನಗಳ ಸಂಖ್ಯೆಯನ್ನೂ ಹೆಚ್ಚಿಸಿದೆ. ಉಕ್ರೇನ್‍ನಲ್ಲಿರುವ ಭಾರತೀಯರನ್ನು ಕರೆತರಲು ಮಂಗಳವಾರ ಬೆಳಗ್ಗೆ ಏರ್ ಇಂಡಿಯಾ ವಿಮಾನವೊಂದು ತೆರಳಿದ್ದು, ಇನ್ನಷ್ಟು ವಿಮಾನಗಳನ್ನು ಕಳುಹಿಸುವುದಾಗಿ ತಿಳಿಸಿದೆ.

  • ಉಕ್ರೇನ್ ಉದ್ವಿಗ್ನತೆ ಬಗ್ಗೆ ವಿಶ್ವಸಂಸ್ಥೆಯಲ್ಲಿ ಭಾರತ ಆತಂಕ

    ಉಕ್ರೇನ್ ಉದ್ವಿಗ್ನತೆ ಬಗ್ಗೆ ವಿಶ್ವಸಂಸ್ಥೆಯಲ್ಲಿ ಭಾರತ ಆತಂಕ

    ನ್ಯೂಯಾರ್ಕ್: ರಷ್ಯಾ ಉಕ್ರೇನ್ ಮೇಲೆ ನಡೆಸಬಹುದಾದ ದಾಳಿ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮಂಗಳವಾರ ತುರ್ತು ಸಭೆ ನಡೆಸಿದೆ. ರಷ್ಯಾ-ಉಕ್ರೇನ್ ಗಡಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಬಗ್ಗೆ ಭಾರತ ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದೆ.

    ನಾವು ಉಕ್ರೇನ್ ಸಂಬಂಧಿಸಿದ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸುತ್ತಿದ್ದೇವೆ. ಉಕ್ರೇನ್-ರಷ್ಯಾ ಗಡಿಯ ಸನ್ನಿವೇಶ ಹಾಗೂ ರಷ್ಯನ್ ಒಕ್ಕೂಟ ಸಂಬಂಧಿತ ಘೋಷಣೆಯ ಮೇಲೂ ಗಮನ ಹರಿಸುತ್ತಿದ್ದೇವೆ ಎಂದು ಭಾರತದ ಕಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿ ವಿಶ್ವಸಂಸ್ಥೆ ತಿಳಿಸಿದ್ದಾರೆ.

    ಉಕ್ರೇನ್ ಗಡಿಯಲ್ಲಿ ಹುಟ್ಟಿಸುತ್ತಿರುವ ಉದ್ವಿಗ್ನತೆ ಆತಂಕಕರವಾಗಿದೆ. ಈ ಬೆಳವಣಿಗೆಗಳು ಶಾಂತಿ ಹಾಗೂ ಭದ್ರತೆಗೆ ಅಪಾಯವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನ ಸಮುದ್ರ, ಭೂ-ಆಧಾರಿತ ಪ್ರದೇಶದ ಮೇಲೆ ರಷ್ಯಾ ದಾಳಿ!

    ಉಕ್ರೇನ್ ಮೇಲೆ ರಷ್ಯಾ ನಡೆಸಬಹುದಾದ ದಾಳಿ ಕುರಿತಂತೆ ಅಮೆರಿಕ ಹಾಗೂ ಮಿತ್ರ ರಾಷ್ಟ್ರಗಳು ತುರ್ತು ಸಭೆ ನಡೆಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಮನವಿ ಮಾಡಿತ್ತು. ಉಕ್ರೇನ್ ಮೇಲೆ ರಷ್ಯಾದ ಸಂಭವನೀಯ ಆಕ್ರಮಣ ತಡೆಯಲು ರಾಜತಾಂತ್ರಿಕ ಪ್ರಯತ್ನಗಳು ತಡೆಯುತ್ತಿವೆ. ಇದನ್ನೂ ಓದಿ: ಸ್ವಂತ ಸಾಮಾಜಿಕ ಮಾಧ್ಯಮ ಆ್ಯಪ್ ಬಿಡುಗಡೆ ಮಾಡಿದ ಟ್ರಂಪ್

    ಅಮೆರಿಕ ಮತ್ತು ಯುರೋಪ್ ದೇಶಗಳು ರಷ್ಯಾ ವಿರುದ್ಧವಾಗಿದ್ದರೆ ಭಾರತದ ನಡೆ ಏನು ಎನ್ನುವು ಕುತೂಹಲ ಇತ್ತು. ಆದರೆ ಭಾರತ ಯಾವ ಕಡೆಯೂ ಇಲ್ಲದೇ ಶಾಂತಿ ಮಾತುಕತೆಯಿಂದ ಸಮಸ್ಯೆ ಪರಿಹರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

  • ರಷ್ಯಾ-ಉಕ್ರೇನ್‌ ಬಿಕ್ಕಟ್ಟು: ಭಾರತೀಯರನ್ನು ಕರೆತರಲು ಉಕ್ರೇನ್‌ಗೆ ಹೊರಟ ಏರ್‌ ಇಂಡಿಯಾ ವಿಮಾನ

    ರಷ್ಯಾ-ಉಕ್ರೇನ್‌ ಬಿಕ್ಕಟ್ಟು: ಭಾರತೀಯರನ್ನು ಕರೆತರಲು ಉಕ್ರೇನ್‌ಗೆ ಹೊರಟ ಏರ್‌ ಇಂಡಿಯಾ ವಿಮಾನ

    ನವದೆಹಲಿ: ಉಕ್ರೇನ್‌ ಮೇಲೆ ರಷ್ಯಾದ ಸಂಭವನೀಯ ಆಕ್ರಮಣದ ಭೀತಿ ಹೆಚ್ಚಿದೆ. ಹೀಗಾಗಿ ಆತಂಕವಿರುವ ಪ್ರದೇಶಗಳಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳನ್ನು ವಾಪಸ್‌ ಕರೆಸಿಕೊಳ್ಳಲು ಟಾಟಾ ಒಡೆತನದ ಏರ್‌ ಇಂಡಿಯಾ ಇಂದು ರಾತ್ರಿ ಉಕ್ರೇನ್‌ ತಲುಪಲಿದೆ.

    ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ಪ್ರಜೆಗಳನ್ನು ವಾಪಸ್‌ ಕರೆಸಿಕೊಳ್ಳಲು ಭಾರತ ಸರ್ಕಾರ ಮುಂದಾಗಿದೆ. ಉಕ್ರೇನ್‌ನಲ್ಲಿ ನೆಲೆಸಿರುವ ಭಾರತೀಯರು ಸುರಕ್ಷಿತವಾಗಿ ಹಿಂದಿರುಗಲು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ಇದನ್ನೂ ಓದಿ: ಹಿಜಬ್ ಹೆಸರಿನಲ್ಲಿ ಮಕ್ಕಳಿಗೆ ವಿಭಜನೆ ವಿಷವನ್ನು ತಿನ್ನಿಸಬಾರದು: ಸದ್ಗುರು ಜಗ್ಗಿ ವಾಸುದೇವ್

    ಏರ್‌ ಇಂಡಿಯಾದ ಎಐ-1946 ಮೊದಲ ವಿಶೇಷ ವಿಮಾನದಲ್ಲಿ ಭಾರತೀಯ ಪ್ರಜೆಗಳು ಇಂದು ರಾತ್ರಿ ತವರು ದೇಶಕ್ಕೆ ಮರಳಲಿದ್ದಾರೆ ಎಂದು ಏರ್‌ಲೈನ್‌ ಮೂಲಗಳು ತಿಳಿಸಿವೆ. ಏರ್‌ ಇಂಡಿಯಾ ಫೆರ್ರಿ ವಿಮಾನವು ಸೋಮವಾರ ಉಕ್ರೇನ್‌ನಿಂದ ಭಾರತೀಯರನ್ನು ವಾಪಸ್‌ ಕರೆತಂದಿತ್ತು. ಏರ್‌ ಇಂಡಿಯಾದ ಮೂರು ವಿಮಾನಗಳು ಈ ಕಾರ್ಯಾಚರಣೆಯಲ್ಲಿವೆ.

    ಏರ್‌ ಇಂಡಿಯಾದ ಮೂರು ವಿಮಾನಗಳು ಫೆ.22, 24 ಮತ್ತು 26ರಂದು ಭಾರತ ಮತ್ತು ಉಕ್ರೇನ್‌ ನಡುವೆ ಕಾರ್ಯಾಚರಣೆ ನಡೆಸಲಿದೆ ಎಂದು ತಿಳಿಸಲಾಗಿದೆ. ಉಕ್ರೇನ್‌ಗೆ ವಿಶೇಷ ಕಾರ್ಯಾಚರಣೆಯ ಭಾಗವಾಗಿ ದೆಹಲಿಯಿಂದ ಬೋಯಿಂಗ್‌ ಡ್ರೀಮ್‌ಲೈನರ್‌ ಎಐ-1947 ವಿಮಾನವು ಟೇಕ್‌ ಆಫ್‌ ಆಗಿದೆ. ಇದು 200ಕ್ಕೂ ಹೆಚ್ಚು ಆಸನಗಳ ಸಾಮರ್ಥ್ಯವನ್ನು ಹೊಂದಿದೆ. ಇದನ್ನೂ ಓದಿ: ಹಿಜಬ್ ಬಗ್ಗೆ ಕೊನೆಗೂ ಮೌನ ಮುರಿದ ಅಮಿತ್ ಶಾ

    ರಷ್ಯಾದೊಂದಿಗೆ ಉಕ್ರೇನ್ ಗಡಿಯಲ್ಲಿ ಉಲ್ಬಣಗೊಳ್ಳುತ್ತಿರುವ ಉದ್ವಿಗ್ನತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತ ಮಂಗಳವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಶೇಷ ಸಭೆಯಲ್ಲಿ ಪರಸ್ಪರ ಸೌಹಾರ್ದಯುತ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಕಡೆಯವರು ಅತ್ಯಂತ ಸಂಯಮ ಮತ್ತು ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡಬೇಕು ಎಂದು ಬಲವಾಗಿ ಪ್ರತಿಪಾದಿಸಿತ್ತು.

  • ಉಕ್ರೇನ್‍ನ ಸಮುದ್ರ, ಭೂ-ಆಧಾರಿತ ಪ್ರದೇಶದ ಮೇಲೆ ರಷ್ಯಾ ದಾಳಿ!

    ಉಕ್ರೇನ್‍ನ ಸಮುದ್ರ, ಭೂ-ಆಧಾರಿತ ಪ್ರದೇಶದ ಮೇಲೆ ರಷ್ಯಾ ದಾಳಿ!

    ವಾಷಿಂಗ್ಟನ್: ಸಮುದ್ರ ಮತ್ತು ಭೂ-ಆಧಾರಿತ ಪ್ರದೇಶದ ಮೇಲೆ ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳನ್ನು ಗುರಿಯಾಗಿಟ್ಟುಕೊಂಡು ರಷ್ಯಾ ಸೇನೆಯೂ ಉಕ್ರೇನ್ ಮೇಲೆ ದಾಳಿ ಮಾಡಿದೆ.

    ಬೆಲರೂಸಿಯನ್ ಕೌಂಟರ್‍ನ ಮೇಲ್ವಿಚಾರಣೆಯ ಕಾರ್ಯತಂತ್ರದ ಪರಮಾಣು ವ್ಯಾಯಾಮದ ಭಾಗವಾಗಿ ರಷ್ಯಾ ಇಂದು ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳ ಸಮುದ್ರ ಮತ್ತು ಭೂ-ಆಧಾರಿತ ಪ್ರದೇಶಗಳ ಮೇಲೆ ದಾಳಿ ಮಾಡಿತು ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ. ಕಿಂಜಾಲ್ ಮತ್ತು ಸಿರ್ಕಾನ್ ಹೈಪರ್ಸಾನಿಕ್ ಕ್ಷಿಪಣಿಗಳ ಉಡಾವಣೆಗಳು ಮತ್ತು ಹಲವಾರು ಇತರ ಶಸ್ತ್ರಾಸ್ತ್ರಗಳನ್ನು ಒಳಗೊಂಡು ಈ ದಾಳಿ ಮಾಡಲಾಗಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪಂಜಾಬ್ ಚುನಾವಣೆಗೂ ಮುನ್ನಾ ದಿನ 12,430 ಹೊಸ ಸ್ಮಾರ್ಟ್ ತರಗತಿ ಉದ್ಘಾಟಿಸಿದ ಕೇಜ್ರಿವಾಲ್

    ನಡೆದಿದ್ದೇನು?
    ಪೂರ್ವ ಉಕ್ರೇನ್ ಡೊನೆಟ್ಕ್ಸ್‍ನ ಉತ್ತರದಲ್ಲಿ ಇಂದು ಬೆಳಗ್ಗೆ ಬಹುಸ್ಫೋಟ ಸಂಭವಿಸಿದೆ. ಈ ಸ್ಫೋಟಗಳ ಬಗ್ಗೆ ಸರಿಯಾಗಿ ಯಾವುದೇ ರೀತಿಯ ಮಾಹಿತಿಯಿಲ್ಲ. ಈ ಕುರಿತು ಪ್ರತ್ಯೇಕತಾವಾದಿ ಅಧಿಕಾರಿಗಳಿಂದ ಅಥವಾ ಕೈವ್‍ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪೂರ್ವ ಉಕ್ರೇನ್‍ನಲ್ಲಿ ಇಂದು ಬೆಳಗ್ಗೆ ರಷ್ಯಾ ಸೇನೆ ನಡೆಸಿದ ಶೆಲ್ ದಾಳಿಯಿಂದ ಸೈನಿಕರೊಬ್ಬರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನಿಯನ್ ಮಿಲಿಟರಿ ತಿಳಿಸಿದೆ.

    Putin launches nuclear drills as U.S. says Russia poised to invade Ukraine | Reuters

    ಶನಿವಾರದಂದು ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಮಾತನಾಡಿದ ಯುಎಸ್ ಉಪಾಧ್ಯಕ್ಷ ಕಮಲಾ ಹ್ಯಾರಿಸ್, ರಷ್ಯಾ, ಉಕ್ರೇನ್ ಮೇಲೆ ಆಕ್ರಮಣ ಮಾಡಿದರೆ ಆರ್ಥಿಕವಾಗಿ ತುಂಬಾ ಪೆಟ್ಟು ಬೀಳುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:  ಮುಂದಿನ ದಿನಗಳಲ್ಲಿ ಉಕ್ರೇನ್ ಮೇಲೆ ರಷ್ಯಾ ದಾಳಿ ಸಾಧ್ಯತೆ: ಬೈಡನ್

    ಮುಂಬರುವ ದಿನಗಳಲ್ಲಿ ಉಕ್ರೇನ್ ಮೇಲೆ ದಾಳಿ ಮಾಡಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿರ್ಧರಿಸಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದರು. ಅಂದಾಜು 40% ರಿಂದ 50% ರಷ್ಟಿರುವ ರಷ್ಯಾದ ಪಡೆಗಳು ಉಕ್ರೇನಿಯನ್ ಗಡಿಯ ಸಮೀಪದಲ್ಲಿ ಇದ್ದಾರೆ ಎಂದು ಯುಎಸ್ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಉಕ್ರೇನ್‍ನಲ್ಲಿರುವ ಭಾರತೀಯರಿಗೆ ನೆರವಾಗಲು ಮುಂದಾದ ಏರ್ ಇಂಡಿಯಾ ವಿಮಾನ

    ಉಕ್ರೇನ್‍ನಲ್ಲಿರುವ ಭಾರತೀಯರಿಗೆ ನೆರವಾಗಲು ಮುಂದಾದ ಏರ್ ಇಂಡಿಯಾ ವಿಮಾನ

    ನವದೆಹಲಿ: ರಷ್ಯಾ-ಉಕ್ರೇನ್ ನಡುವೆ ಯುದ್ಧದ ಕಾರ್ಮೋಡ ಆವರಿಸುತ್ತಿದ್ದಂತೆ, ಉಕ್ರೇನ್‍ನಲ್ಲಿರುವ ಭಾರತೀಯರು ಭಾರತಕ್ಕೆ ಬರಲು ಏರ್ ಇಂಡಿಯಾದ ಮೂರು ವಿಮಾನಗಳು ನೆರವಾಗಲು ಮುಂದಾಗಿದೆ.

    ಉಕ್ರೇನ್‍ನಲ್ಲಿರುವ ಭಾರತೀಯರು ದೇಶಕ್ಕೆ ಮರಳುವಂತೆ ವಿದೇಶಾಂಗ ಇಲಾಖೆ ಸೂಚನೆ ನೀಡಿದ್ದು, ವಿದ್ಯಾರ್ಥಿಗಳು ಆದ್ಯತೆ ಮೇರೆಗೆ ದೇಶ ತೊರೆಯುವಂತೆ ಉಕ್ರೇನ್‍ನ ರಾಜಧಾನಿ ಕೀವ್‍ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಕೆಲ ದಿನಗಳ ಹಿಂದೆ ಮಾಹಿತಿ ರವಾನಿಸತ್ತು. ಈ ಬೆನ್ನಲ್ಲೇ ಏರ್ ಇಂಡಿಯಾ ಮೂರು ವಿಮಾನಗಳ ಹಾರಾಟಕ್ಕೆ ನಿರ್ಧರಿಸಿದ್ದು ಇದೀಗ ಅಧಿಕೃತ ವೆಬ್‍ಸೈಟ್‍ನಲ್ಲಿ ಬುಕ್ಕಿಂಗ್ ಕೂಡ ಆರಂಭಗೊಂಡಿದೆ. ಇದನ್ನೂ ಓದಿ: ಉಕ್ರೇನ್‌ನಲ್ಲಿರುವ ಭಾರತೀಯರು ಭಾರತಕ್ಕೆ ಬನ್ನಿ – ವಿದೇಶಾಂಗ ಇಲಾಖೆ

    ಉಕ್ರೇನ್‍ನ ಬೋರಿಸ್ಪಿಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾದ ಮೂರು ವಿಮಾನಗಳು ಟೇಕ್ ಆಫ್ ಆಗಲಿದ್ದು, ಏರ್ ಇಂಡಿಯಾ ಬುಕಿಂಗ್ ಕಚೇರಿಗಳು, ವೆಬ್‍ಸೈಟ್, ಕಾಲ್ ಸೆಂಟರ್ ಮತ್ತು ಅಧಿಕೃತ ಟ್ರಾವೆಲ್ ಏಜೆಂಟ್‍ಗಳ ಮೂಲಕ ಬುಕಿಂಗ್ ಮಾಡಬಹುದು ಎಂದು ಏರ್ ಇಂಡಿಯಾ ಶುಕ್ರವಾರ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ಏರ್ ಇಂಡಿಯಾ ವಿಶ್ವದಲ್ಲೇ ಅತ್ಯುತ್ತಮವಾಗಿಸುವುದು ನಮ್ಮ ಗುರಿ: ಎನ್ ಚಂದ್ರಶೇಖರನ್

    ಇತ್ತ ರಷ್ಯಾ ಉಕ್ರೇನ್ ಗಡಿ ವಿವಾದ ತಾರಕಕ್ಕೇರಿದ್ದು ಎರಡು ಕಡೆಯ ಸೇನೆಗಳು ಜಮಾವಣೆಗೊಂಡಿವೆ. ರಷ್ಯಾ ಹೆಚ್ಚು ಸೈನಿಕರನ್ನು ನಿಯೋಜನೆ ಮಾಡಿದ್ದು ಯುದ್ಧಕ್ಕೆ ಸನ್ನದ್ಧವಾಗಿದೆ ಎಂದು ಉಕ್ರೇನ್ ಆರೋಪಿಸಿದೆ. ಆದರೆ ಈ ಆರೋಪವನ್ನು ರಷ್ಯಾ ನಿರಾಕರಿಸಿದೆ. ಈ ನಡುವೆ ರಷ್ಯಾ-ಉಕ್ರೇನ್ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತವೂ ಸೇರಿದಂತೆ ಇತರ ರಾಷ್ಟ್ರಗಳು ಮುಂದಾಬೇಕು ಎಂದು ಅಮೆರಿಕಾ ಅಭಿಪ್ರಾಯಪಟ್ಟಿದೆ.