Tag: russia

  • Russia-Ukraine War: ಉಕ್ರೇನ್ ಯೂನಿಫಾರ್ಮ್ ಧರಿಸಿ ರಷ್ಯಾ ಸೈನಿಕರ ಎಂಟ್ರಿ – ಸಿಕ್ಕ ಸಿಕ್ಕಲ್ಲಿ ರಕ್ತಪಾತ

    Russia-Ukraine War: ಉಕ್ರೇನ್ ಯೂನಿಫಾರ್ಮ್ ಧರಿಸಿ ರಷ್ಯಾ ಸೈನಿಕರ ಎಂಟ್ರಿ – ಸಿಕ್ಕ ಸಿಕ್ಕಲ್ಲಿ ರಕ್ತಪಾತ

    ಮಾಸ್ಕೋ: ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾ ಸಿಕ್ಕ ಸಿಕ್ಕಲ್ಲಿ ರಕ್ತಪಾತ ಆರಂಭಿಸಿದೆ. ಉಕ್ರೇನ್ ಸೈನಿಕರ ಯೂನಿಫಾರ್ಮ್ ಧರಿಸಿ ರಷ್ಯಾದ ಮಿಲಿಟರಿ ಪಡೆ ಕೀವ್‍ನತ್ತ ಎಂಟ್ರಿ ಕೊಟ್ಟಿರುವ ಬಗ್ಗೆ ವರದಿಯಾಗಿದೆ.

    ರಷ್ಯಾದ ಮಿಲಿಟರಿ ಪಡೆಯ ಸೈನಿಕರು ಉಕ್ರೇನ್ ಸೈನ್ಯವನ್ನು ಹೊಳುವ ಯೂನಿಫಾರ್ಮ್ ಧರಿಸಿ ರಷ್ಯಾದ ಕೀವ್‍ಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ. ತಕ್ಷಣ ಕಾರ್ಯಪ್ರವೃತರಾದ ಉಕ್ರೇನ್ ಮಿಲಿಟರಿ ಪಡೆ ಉಕ್ರೇನ್ ಸೈನಿಕರನ್ನು ವಶಕ್ಕೆ ಪಡೆದು ಮಿಲಿಟರಿ ವಾಹನವನ್ನು ವಶಕ್ಕೆ ಪಡೆದಿದೆ ಎಂದು ಉಕ್ರೇನ್‍ನ ಹಿರಿಯ ಮಿಲಿಟರಿ ಅಧಿಕಾರಿಯೊಬ್ಬರು ಸ್ಥಳೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ಪ, ಅಮ್ಮಾ ಐ ಲವ್ ಯೂ – ಯೋಧನ ಕರುಳು ಹಿಂಡುವ ಸಂದೇಶ

    ಕ್ಷಣ ಕ್ಷಣಕ್ಕೂ ಉಕ್ರೇನ್ ಮೇಲೆ ರಷ್ಯಾ ದಾಳಿ ತೀವ್ರಗೊಳಿಸುತ್ತಿದ್ದು, ಸಿಕ್ಕ ಸಿಕ್ಕಲ್ಲಿ ಉಕ್ರೇನ್ ಯೋಧರ ಯೂನಿಫಾರ್ಮ್ ಧರಿಸಿ ರಷ್ಯಾ ಸೈನಿಕರು ಬರಲಾರಂಭಿಸಿದ್ದಾರೆ. ಉಕ್ರೇನ್‍ನ ಕೀವ್‍ನತ್ತ ರಷ್ಯಾದ ಯುದ್ಧ ಬಂಕರ್‌ಗಳು ಸೇನಾ ವಾಹನದಲ್ಲಿ ಪ್ರವೇಶಿಸುತ್ತಿದ್ದು, ಉಕ್ರೇನ್ ಸೈನಿಕರು ಮತ್ತು ರಷ್ಯಾ ಸೈನಿಕರ ಮಧ್ಯೆ ಗುಂಡಿನ ದಾಳಿ ಕೂಡ ನಡೆಯುತ್ತಿದೆ. ಈಗಾಗಲೇ ಉಕ್ರೇನ್‍ನ ಕಾಖೋವ್ಕಾದ ಜಲವಿದ್ಯುತ್ ಸ್ಥಾವರವನ್ನು ರಷ್ಯಾ ಸೇನೆ ವಶಕ್ಕೆ ಪಡೆದುಕೊಂಡು ರಷ್ಯಾ ಧ್ವಜವನ್ನು ಜಲವಿದ್ಯುತ್ ಸ್ಥಾವರದ ಮೇಲೆ ಹಾರಿಸಿದೆ. ಇದನ್ನೂ ಓದಿ: ಗಡಿ ಪ್ರವೇಶಿಸಿದ ಶಸ್ತ್ರಸಜ್ಜಿತ ರಷ್ಯಾ ಸೈನಿಕನಿಗೆ ಉಕ್ರೇನ್‌ ಮಹಿಳೆ ಛೀಮಾರಿ – ವೀಡಿಯೋ ವೈರಲ್‌

    ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧಕ್ಕೆ ಈಗಾಗಲೇ ಯುರೋಪ್ ಸೇರಿದಂತೆ ಹಲವು ದೇಶಗಳಿಂದ ವಿರೋಧ ವ್ಯಕ್ತವಾಗಿದೆ. ಈ ನಡುವೆ ಉಕ್ರೇನ್ ಮೇಲೆ ಸೈನ್ಯ ದಾಳಿ ನಡೆಸಿರುವ ರಷ್ಯಾ ಕೈವಾದಲ್ಲಿ ವಾಯು ನೆಲೆ ವಶಪಡಿಸಿಕೊಂಡಿದ್ದು, ಕೈವಾ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಸಾಧ್ಯತೆ ಇದೆ. ಈ ನಡುವೆ ಉಕ್ರೇನ್‍ಗೆ ಹಲವು ದೇಶಗಳಿಂದ ನೆರವು ಘೋಷಣೆ ಸಾಧ್ಯತೆ ಇದ್ದು, ಉಕ್ರೇನ್‍ಗೆ ಇತರ ದೇಶಗಳಿಂದ ಸೇನಾ ಬೆಂಬಲ ಘೋಷಣೆಯಾದರೇ ಯುದ್ಧ ಮತ್ತೊಂದು ಸ್ವರೂಪ ಪಡೆಯಲಿದೆ.  ಇದನ್ನೂ ಓದಿ: ಉಕ್ರೇನ್ ಪವರ್ ಪ್ಲಾಂಟ್‍ನಲ್ಲಿ ರಷ್ಯಾದ ಧ್ವಜ ಹಾರಿಸಿದ ಮಿಲಿಟರಿ ಪಡೆ

  • ಅಪ್ಪ, ಅಮ್ಮಾ ಐ ಲವ್ ಯೂ – ಯೋಧನ ಕರುಳು ಹಿಂಡುವ ಸಂದೇಶ

    ಅಪ್ಪ, ಅಮ್ಮಾ ಐ ಲವ್ ಯೂ – ಯೋಧನ ಕರುಳು ಹಿಂಡುವ ಸಂದೇಶ

    ಕೀವ್: ರಷ್ಯಾ ಉಕ್ರೇನ್ ಮೇಲೆ ಎರಗಿ ಬಾಂಬುಗಳ ಸುರುಮಳೆಗೈದಿದೆ. ಮಿಲಿಟರಿ ನೆಲೆ ನಾಶವಾಗಿ ನೂರಾರು ಸೈನಿಕರು ಈಗಾಗಲೇ ಹತರಾಗಿದ್ದಾರೆ. ಅದೆಷ್ಟೋ ಸೈನಿಕರು ಇನ್ನೂ ತಮ್ಮ ಉಸಿರನ್ನು ಬಿಗಿ ಹಿಡಿದು ದೇಶದ ರಕ್ಷಣೆಗಾಗಿ ಕೆಲಸ ಮಾಡುತ್ತಿದ್ದಾರೆ.

    ಮುಂದೊಂದು ದಿನದ ಬದುಕಿರುತ್ತೇವೋ ಇಲ್ಲವೋ ಎಂದು ಭಾವುಕನಾಗಿ ಯೋಧನೊಬ್ಬ ತನ್ನ ತಂದೆ ತಾಯಿಗೆ ಸಂದೇಶವನ್ನು ಕಳುಹಿಸಿರುವ ವೀಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ನೋಡಿದರೆ ಎಂಥವರ ಕರುಳು ಕೂಡ ಚುರುಕ್ ಅನ್ನದೇ ಇರಲಾರದು. ಇದನ್ನೂ ಓದಿ: ಗಡಿ ಪ್ರವೇಶಿಸಿದ ಶಸ್ತ್ರಸಜ್ಜಿತ ರಷ್ಯಾ ಸೈನಿಕನಿಗೆ ಉಕ್ರೇನ್‌ ಮಹಿಳೆ ಛೀಮಾರಿ – ವೀಡಿಯೋ ವೈರಲ್‌

    13 ಸೆಕೆಂಡುಗಳ ವೀಡಿಯೋದಲ್ಲಿ ಉಕ್ರೇನ್ ಸೈನಿಕ ತನ್ನ ತಂದೆ-ತಾಯಿಗೆ ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಭಾವುಕನಾಗಿ ಹೇಳುವುದನ್ನು ನೋಡಬಹುದಾಗಿದೆ. ಯೋಧನ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕೂಡ ಯೋಧನ ಸ್ಥಿತಿಗೆ ಮರುಗಿದ್ದಾರೆ. ಇಷ್ಟು ಸಣ್ಣ ವಯಸ್ಸಿನಲ್ಲಿ ಯೋಧನಿಗೆ ಇಂತಹ ಸ್ಥಿತಿ ಬರಬಾರದಿತ್ತು ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ವಯಸ್ಸು ಯಾವುದೇ ಇರಲಿ. ಯಾರೊಬ್ಬರಿಗೂ ಇಂತಹ ಸ್ಥಿತಿ ಬರಬಾರದು ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:  ರಷ್ಯಾ ವಿರುದ್ಧ ವಿಶ್ವದ ಟೆಕ್ಕಿಗಳಿಂದ `ಸೈಬರ್ ವಾರ್’ ಘೋಷಣೆ!

    ವೀಡಿಯೋ ಮಾಡಿರುವ ಯೋಧ ಯಾರು ಏನು ಎಂಬುದರ ಬಗ್ಗೆ ಮಾಹಿತಿಯಿಲ್ಲ. ಆದರೆ ವಿಶ್ವದಾದ್ಯಂತ ನೆಟ್ಟಿಗರು ಅವರ ಸ್ಥಿತಿಗೆ ದುಃಖ ವ್ಯಕ್ತಪಡಿಸಿದ್ದಾರೆ.

  • ಗಡಿ ಪ್ರವೇಶಿಸಿದ ಶಸ್ತ್ರಸಜ್ಜಿತ ರಷ್ಯಾ ಸೈನಿಕನಿಗೆ ಉಕ್ರೇನ್‌ ಮಹಿಳೆ ಛೀಮಾರಿ – ವೀಡಿಯೋ ವೈರಲ್‌

    ಗಡಿ ಪ್ರವೇಶಿಸಿದ ಶಸ್ತ್ರಸಜ್ಜಿತ ರಷ್ಯಾ ಸೈನಿಕನಿಗೆ ಉಕ್ರೇನ್‌ ಮಹಿಳೆ ಛೀಮಾರಿ – ವೀಡಿಯೋ ವೈರಲ್‌

    ಕೀವ್: ದಾಳಿ ನಡೆಸುತ್ತಾ ಉಕ್ರೇನ್‌ ಗಡಿ ದಾಟಿ ಒಳಪ್ರವೇಶಿಸಿದ ರಷ್ಯಾ ಸೈನಿಕನಿಗೆ ಉಕ್ರೇನ್‌ ಮಹಿಳೆ ಛೀಮಾರಿ ಹಾಕಿದ್ದಾರೆ. ರಷ್ಯಾ ಸೈನಿಕನೆದುರು ಧೈರ್ಯವಾಗಿ ನಿಂತ ಉಕ್ರೇನ್‌ ಮಹಿಳೆ, ನಿಮ್ಮ ದೇಶಕ್ಕೆ ವಾಪಸ್‌ ಹೋಗಿ ಎಂದು ಕೂಗಾಡಿದ್ದಾರೆ.

    ಉಕ್ರೇನ್‌ ಗಡಿ ಪ್ರವೇಶಿಸಿದ ಶಸಸ್ತ್ರಧಾರಿ ಸೈನಿಕನ ವಿರುದ್ಧ ಮಹಿಳೆ ಕೂಗಾಡುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ವೀಡಿಯೋದಲ್ಲಿರುವ ಮಹಿಳೆಯನ್ನು ʼನಿರ್ಭಯಾʼ ಎಂದು ಕರೆಯಲಾಗಿದ್ದು, ಟ್ವಿಟ್ಟರ್‌ನಲ್ಲಿ ಟ್ರೆಂಡ್‌ ಆಗಿದೆ. ಇದನ್ನೂ ಓದಿ: ರಷ್ಯಾ ವಿರುದ್ಧ ವಿಶ್ವದ ಟೆಕ್ಕಿಗಳಿಂದ `ಸೈಬರ್ ವಾರ್’ ಘೋಷಣೆ!

    ಗಡಿ ಪ್ರವೇಶಿಸಿದ ಸೈನಿಕನಿಗೆ, ನೀನು ಯಾರು ಎಂದು ಮಹಿಳೆ ಪ್ರಶ್ನಿಸಿದ್ದಾರೆ. ಅದಕ್ಕೆ ಸೈನಿಕ, ನಾವು ಇಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದೇವೆ. ದಯವಿಟ್ಟು ನೀವು ಇಲ್ಲಿಂದ ಹೊರಡಿ ಎಂದು ಹೇಳಿದ್ದಾನೆ. ಇದರಿಂದ ಕೋಪಗೊಂಡು ಮಾತನಾಡಿರುವ ಮಹಿಳೆ, ನೀವಿಲ್ಲಿ ಏನು ಮಾಡುತ್ತಿದ್ದೀರಾ? ನೀವ್ಯಾರು ನಮಗೆ ಬೇಡ ಎಂದು ಗರಂ ಆಗಿದ್ದಾರೆ.

    ಮಿಷನ್‌ ಗನ್‌ ಹಿಡಿದಿದ್ದ ಸೈನಿಕ ಮಹಿಳೆಯನ್ನು ಶಾಂತಗೊಳಿಸಲು ಪ್ರಯತ್ನಿಸಿದ್ದಾನೆ. ಅದಕ್ಕೆ ಸುಮ್ಮನಾಗದ ಮಹಿಳೆ, ನೀನೊಬ್ಬ ಆಕ್ರಮಣಕಾರಿ, ನೀನು ಸರ್ವಾಧಿಕಾರಿ. ಶಸಸ್ತ್ರಗಳನ್ನು ಹಿಡಿದುಕೊಂಡು ನಮ್ಮ ದೇಶದಲ್ಲಿ ಏನು ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

    ಈ ಸೂರ್ಯಕಾಂತಿ ಬೀಜಗಳನ್ನು ತೆಗೆದುಕೊಳ್ಳಿ. ಅವನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಿ. ನೀವೆಲ್ಲ ಇಲ್ಲಿ ಮಲಗಿದಾಗ ಕನಿಷ್ಠ ಪಕ್ಷ ಸೂರ್ಯಕಾಂತಿಯಾದರೂ ಬೆಳೆಯುತ್ತದೆ ಎಂದು ಸೈನಿಕನ ವಿರುದ್ಧ ಮಹಿಳೆ ಮಾರ್ಮಿಕವಾಗಿ ನುಡಿದಿದ್ದಾರೆ. ಸೂರ್ಯಕಾಂತಿ ಹೂ ಉಕ್ರೇನ್‌ ದೇಶದ ರಾಷ್ಟ್ರೀಯ ಹೂ ಆಗಿದೆ.

    ಈ ವೀಡಿಯೋವನ್ನು ಅಲ್ಲೇ ಓಡಾಡುತ್ತಿದ್ದ ಸ್ಥಳೀಯರು ಸೆರೆ ಹಿಡಿದಿದ್ದಾರೆ. ನಂತರ ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. ಇದನ್ನೂ ಓದಿ:  ವೈದ್ಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಉಕ್ರೇನ್, ರಷ್ಯಾಗೇ ಹೆಚ್ಚಾಗಿ ಯಾಕೆ ಹೋಗ್ತಾರೆ ಗೊತ್ತಾ?

    ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಗುರುವಾರ ಬೆಳಗ್ಗೆ ಉಕ್ರೇನ್‌ ಮೇಲೆ ಯುದ್ಧವನ್ನು ಘೋಷಿಸಿದರು. ದಾಳಿಯಿಂದಾಗಿ ಉಕ್ರೇನ್‌ನಲ್ಲಿ ಈವರೆಗೆ 137 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿದೆ. ರಷ್ಯಾ ದಾಳಿಗೆ ವಿಶ್ವದ ಅನೇಕ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ರಷ್ಯಾ ತನ್ನ ಕಾರ್ಯಾಚರಣೆ ಮುಂದುವರಿಸಿದೆ.

  • ರಷ್ಯಾ ವಿರುದ್ಧ ವಿಶ್ವದ ಟೆಕ್ಕಿಗಳಿಂದ `ಸೈಬರ್ ವಾರ್’ ಘೋಷಣೆ!

    ರಷ್ಯಾ ವಿರುದ್ಧ ವಿಶ್ವದ ಟೆಕ್ಕಿಗಳಿಂದ `ಸೈಬರ್ ವಾರ್’ ಘೋಷಣೆ!

    ವಾಷಿಂಗ್ಟನ್: ರಷ್ಯಾ ಉಕ್ರೇನ್ ವಿರುದ್ಧ ನಿನ್ನೆಯಿಂದ ದಾಳಿ ಮಾಡುತ್ತಿದೆ. ಇದೇ ಸಂದರ್ಭದಲ್ಲಿ ರಷ್ಯಾ ಸರ್ಕಾರದ ವಿರುದ್ಧ ವಿಶ್ವದಾದ್ಯಂತ ಟೆಕ್ಕಿಗಳು `ಸೈಬರ್ ವಾರ್’ ಘೋಷಣೆ ಮಾಡಿದ್ದಾರೆ.

    ಅನಾನಿಮಸ್ ಹ್ಯಾಕಿಂಗ್ ಗ್ರೂಪ್, ರಷ್ಯಾ ಸರ್ಕಾರದ ವಿರುದ್ಧ ಸೈಬರ್ ವಾರ್ ಮಾಡುವುದಾಗಿ ನಿನ್ನೆ ರಾತ್ರಿ ಘೋಷಿಸಿದೆ. ಬ್ರಿಟನ್‍ನಲ್ಲಿ ಪ್ರಸಾರವಾಗುವ ಕ್ರೆಮ್ಲಿನ್ ಬೆಂಬಲಿತ ಟಿವಿ ಚಾನೆಲ್ RT ವೆವ್‍ ಸೆಟ್ ಅನ್ನು ಹ್ಯಾಕ್ ಮಾಡಿದೆ. ಸಂಬಂಧಪಟ್ಟವರು ವೆವ್‍ ಸೆಟ್ ಪ್ರವೇಶಿಸಲು ಪ್ರಯತ್ನಿಸಿದಾಗ, ಇನ್‍ಆಕ್ಷೆಸಬಲ್ ಆಗಿದೆ. ಅಲ್ಲದೇ ವೆವ್‍ ಸೆಟ್ ಎರರ್ ಎಂದು ತೋರಿಸಿದೆ. ಇದನ್ನೂ ಓದಿ: ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

    Hacking Collective Anonymous Declares 'Cyber War' Against Vladimir Putin's Government

    ಪುಟಿನ್ ಸರ್ಕಾರದ ವಿರುದ್ಧ ‘ಅನಾನಿಮಸ್’ ಸೈಬರ್ ವಾರ್ ಘೋಷಣೆ ಮಾಡಿದ್ದು, ರಷ್ಯಾದ ಪ್ರಚಾರ ಕೇಂದ್ರ RT ನ್ಯೂಸ್ ವೆವ್‍ ಸೆಟ್ ತೆಗೆದುಕೊಳ್ಳಲಾಗಿದೆ ಎಂದು ಬರೆದು ಟ್ವೀಟ್ ಮಾಡಲಾಗಿದೆ. ‘ಅನಾನಿಮಸ್’ ಈ ಹಿಂದೆ ಕು ಕ್ಲುಕ್ಸ್ ಕ್ಲಾನ್ ಮತ್ತು ಇಸ್ಲಾಮಿಕ್ ಉಗ್ರಗಾಮಿಗಳ ಗುಂಪಿಗೆ ಸೇರಿದವರನ್ನು ಗುರಿಯಾಗಿಸಿಕೊಂಡಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ಜನರು ಈ ಕುರಿತು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ನೆಟ್ಟಿಗರೊಬ್ಬರು, ಥ್ಯಾಂಕ್ಸ್ `ಅನಾನಿಮಸ್’, ಅವರ ಹಣಕಾಸು ಬರಿದಾಗುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನೀವು ಅದ್ಭುತ, ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಥ್ಯಾಂಕ್ಸ್, ಲವ್ ಯೂ, ಇದು ನಿಜವಾಗಿಯೂ ಖುಷಿಯಾದ ವಿಷಯ ಎಂದು ಹೇಳಿದ್ದಾರೆ.

    ಪ್ರಸ್ತುತ ಈ ಹ್ಯಾಕರ್ಸ್ ‘ಅನಾನಿಮಸ್’ ಎಂದು ಹೆಸರಿಟ್ಟುಕೊಂಡಿದ್ದಾರೆ. ಅವರನ್ನು ಗೈ ಫಾಕ್ಸ್ ಮುಖವಾಡಗಳಿಂದ ಗುರುತಿಸಲಾಗುತ್ತದೆ. ಕಳೆದ ವರ್ಷ ಜುಲೈನಲ್ಲಿ, ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ ಅವರಿಗೂ ಹ್ಯಾಕರ್‍ಗಳು ಎಚ್ಚರಿಕೆ ನೀಡಿದ್ದರು. ಕ್ರಿಪ್ಟೋಕರೆನ್ಸಿ ಮಾರುಕಟ್ಟೆಗಳ ಮೇಲೆ ಹೆಚ್ಚಿನ ಅಧಿಕಾರವನ್ನು ಹೊಂದಿದ್ದೇವೆ ಎಂಬ ಮಸ್ಕ್ ಹೇಳಿಕೆಯನ್ನು ಗುರಿಯಾಗಿಸಿಕೊಂಡು ಅನಾನಿಮಸ್ ಎಚ್ಚರಿಕೆ ನೀಡಿತ್ತು. ಇದನ್ನೂ ಓದಿ:  ವೈದ್ಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಉಕ್ರೇನ್, ರಷ್ಯಾಗೇ ಹೆಚ್ಚಾಗಿ ಯಾಕೆ ಹೋಗ್ತಾರೆ ಗೊತ್ತಾ?

    ಸೈಬರ್ ಯುದ್ಧ ಘೋಷಣೆಯಾಗಿದ್ದು, ಮುಂದಿನ ದಿನಗಳಲ್ಲಿ ರಷ್ಯಾವನ್ನು ವ್ಯವಸ್ಥಿತ ಹ್ಯಾಕಿಂಗ್ ಪ್ರಯತ್ನಗಳಿಗೆ ಒಳಪಡಿಸುವ ನಿರೀಕ್ಷೆಯನ್ನು ಹುಟ್ಟುಹಾಕಲಾಗಿದೆ.

  • ಉಕ್ರೇನ್ ಪವರ್ ಪ್ಲಾಂಟ್‍ನಲ್ಲಿ ರಷ್ಯಾದ ಧ್ವಜ ಹಾರಿಸಿದ ಮಿಲಿಟರಿ ಪಡೆ

    ಉಕ್ರೇನ್ ಪವರ್ ಪ್ಲಾಂಟ್‍ನಲ್ಲಿ ರಷ್ಯಾದ ಧ್ವಜ ಹಾರಿಸಿದ ಮಿಲಿಟರಿ ಪಡೆ

    ಮಾಸ್ಕ್: ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ತನ್ನ ರಾಷ್ಟ್ರ ಧ್ವಜವನ್ನು ಉಕ್ರೇನ್‍ನಲ್ಲಿರುವ ಕಾಖೋವ್ಕಾ ಜಲವಿದ್ಯುತ್ ಸ್ಥಾವರದ ಮೇಲೆ ಹಾರಿಸಿರುವ ವೀಡಿಯೋ ಒಂದು ವೈರಲ್ ಆಗುತ್ತಿದೆ.

    ಉಕ್ರೇನ್‍ನ ಕಾಖೋವ್ಕಾದಲ್ಲಿರುವ ಡ್ನೀಪರ್ ನದಿಗೆ ಅಡ್ಡಲಾಗಿ ಡ್ಯಾಮ್ ಕಟ್ಟಿ ಜಲ ವಿದ್ಯತ್ ಸ್ಥಾವರವನ್ನು ಸ್ಥಾಪಿಸಿತ್ತು. ಈ ವಿದ್ಯುತ್ ಸ್ಥಾವರದಿಂದ ಉಕ್ರೇನ್‍ನ ಸಾಕಷ್ಟು ಭಾಗಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತಿತ್ತು. ಇದೀಗ ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾದ ಮಿಲಿಟರಿ ಪಡೆ ಪವರ್ ಪ್ಲಾಂಟ್ ವಶಪಡಿಸಿಕೊಂಡು ರಷ್ಯಾದ ರಾಷ್ಟ್ರ ಧ್ವಜವನ್ನು ಹಾರಿಸಿದೆ. ಇದನ್ನೂ ಓದಿ:  ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

    ಈಗಾಗಲೇ ರಷ್ಯಾ, ಉಕ್ರೇನ್ ಮೇಲೆ ದಾಳಿ ಮುಂದುವರಿಸಿದ್ದು, ಬಾಂಬ್ ಮತ್ತು ಇತರ ಯುದ್ಧೋಪಕರಣಗಳೊಂದಿಗೆ ರಷ್ಯಾದ ಮಿಲಿಟರಿ ಪಡೆ ಕಾಖೋವ್ಕಾದ ನಗರ ಪ್ರದೇಶಕ್ಕೆ ಲಗ್ಗೆ ಇಟ್ಟಿದೆ ಎಂದು ವರದಿಯಾಗಿದೆ. ಇದನ್ನೂ ಓದಿ:  ಉಕ್ರೇನ್‍ನಲ್ಲಿ ಸಿಲುಕಿದ್ದಾರೆ 10 ಮಂದಿ ಕರ್ನಾಟಕ ವಿದ್ಯಾರ್ಥಿಗಳು!

    ತಮ್ಮ ದೇಶದ ಮೇಲೆ ರಷ್ಯಾದ ಆಕ್ರಮಣದಿಂದಾಗಿ ಇದುವರೆಗೆ ನಾಗರಿಕರು ಮತ್ತು ಸೇನಾ ಸಿಬ್ಬಂದಿ ಸೇರಿ 137 ಮಂದಿ ಹತರಾಗಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾಹಿತಿ ನೀಡಿದ್ದಾರೆ. ಇಂದು ಬೆಳಗ್ಗೆ ಬಿಡುಗಡೆ ಮಾಡಿದ ವೀಡಿಯೋದಲ್ಲಿ ಈ ಯುದ್ಧದ ಸ್ಥಿತಿಗತಿ ಕುರಿತು ಮಾತನಾಡಿದ ಅವರು, ಮೃತರನ್ನು ಹೀರೋಗಳು ಎಂದು ಕರೆದಿದ್ದಾರೆ. ರಷ್ಯಾ ದಾಳಿ ಪರಿಣಾಮವಾಗಿ ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

  • ರಷ್ಯಾ ಉಕ್ರೇನ್ ಬಿಕ್ಕಟ್ಟು ಚಿತ್ರೀಕರಣಕ್ಕೆ ಮುಂದಾದ ಹಾಲಿವುಡ್ ಸ್ಟಾರ್

    ರಷ್ಯಾ ಉಕ್ರೇನ್ ಬಿಕ್ಕಟ್ಟು ಚಿತ್ರೀಕರಣಕ್ಕೆ ಮುಂದಾದ ಹಾಲಿವುಡ್ ಸ್ಟಾರ್

    ಕೀವ್: ಯುದ್ಧ ವಿರೋಧಿ ಮತ್ತು ಮಾನವೀಯ ಕಾರಣಗಳಿಗಾಗಿ ಸದಾ ಮಿಡಿಯುವ ಹಾಲಿವುಡ್ ತಾರೆ, ಆಸ್ಕರ್ ಪ್ರಶಸ್ತಿ ವಿಜೇತ ಸೀನ್ ಪೆನ್ ಉಕ್ರೇನ್‍ನಲ್ಲಿ ನಡೆಯುತ್ತಿರುವ ರಷ್ಯಾದ ಆಕ್ರಮಣದ ಕುರಿತು ಸಾಕ್ಷ್ಯ ಚಿತ್ರ ಮಾಡಲು ಮುಂದಾಗಿದ್ದಾರೆ.

    ಉಕ್ರೇನ್‍ನ ಸರ್ಕಾರಿ ಅಧಿಕಾರಿಗಳು ತಮ್ಮ ನೆಲದಲ್ಲಿ ನಡೆಯುತ್ತಿರುವ ಪ್ರಸ್ತುತ ಬಿಕ್ಕಟ್ಟಿನ ಕುರಿತು ಮಾತನಾಡುತ್ತಿದ್ದ ಪತ್ರಿಕಾಗೋಷ್ಠಿಯಲ್ಲೀ ಸೀನ್ ಭಾಗಿಯಾಗಿದ್ದರು. ಸಾಕ್ಷ್ಯ ಚಿತ್ರಕ್ಕೆ ಬೇಕಾದ ವಿವರಗಳನ್ನು ಅವರು ಪತ್ರಿಕಾಗೋಷ್ಠಿಯಲ್ಲಿ ಆಲಿಸುತ್ತಿದ್ದರು. ಈ ಸಾಕ್ಷ್ಯ ಚಿತ್ರವು ಡಾಕ್ ವೈಸ್ ವಲ್ರ್ಡ್ ನ್ಯೂಸ್ ಮತ್ತು ಎಂಡೀವರ್ ಕಂಟೆಂಟ್‍ನ ಸಹಯೋಗದೊಂದಿಗೆ ವೈಸ್ ಸ್ಟುಡಿಯೋಸ್ ಅಡಿಯಲ್ಲಿ ನಿರ್ಮಾಣವಾಗಲಿದೆ. ಇದನ್ನೂ ಓದಿ:  ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

    ಈ ಮೊದಲೇ ಸೀನ್ ಸಾಕ್ಷ್ಯ ಚಿತ್ರಕ್ಕಾಗಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. ಕೊನೆಯದಾಗಿ ನವೆಂಬರ್ 2021ರಲ್ಲಿ ಉಕ್ರೇನ್‍ಗೆ ಭೇಟಿ ನೀಡಿದ್ದ ಅವರು, ಈ ವೇಳೆ ಉಕ್ರೇನ್ ದೇಶದ ಮಿಲಿಟರಿ ಪ್ರತಿಷ್ಟಾನಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದರು ಎಂದು ವರದಿಯಾಗಿದೆ. ಅಲ್ಲದೇ, ಪೆನ್ ಅವರು ಉಕ್ರೇನಿಯನ್ ರಾಯಭಾರ ಕಚೇರಿಗೆ ಭೇಟಿ ನೀಡಿದ್ದರು. ಉಕ್ರೇನಿಯನ್ ಉಪ ಪ್ರಧಾನಿ ಐರಿನಾ ವೆರೆಶ್‍ಚುಕ್ ಜೊತೆಗೆ ಸ್ಥಳೀಯ ಪತ್ರಕರ್ತರು ಮತ್ತು ಉಕ್ರೇನಿಯನ್ ಮಿಲಿಟರಿಯ ಸದಸ್ಯರೊಂದಿಗೆ ಅವರು ಮಾತನಾಡಿ ಸಾಕಷ್ಟು ವಿಷಯ ಸಂಗ್ರಹಿಸಿದ್ದಾರೆ ಎನ್ನಲಾಗುತ್ತಿದೆ.  ಇದನ್ನೂ ಓದಿ:  ಉಕ್ರೇನ್‍ನಲ್ಲಿ ಸಿಲುಕಿದ್ದಾರೆ 10 ಮಂದಿ ಕರ್ನಾಟಕ ವಿದ್ಯಾರ್ಥಿಗಳು!

    ಉಕ್ರೇನಿಯನ್ ರಾಯಭಾರ ಕಚೇರಿಯು ಈ ಚಲನಚಿತ್ರ ನಿರ್ಮಾಪಕರನ್ನು ಶ್ಲಾಘಿಸಿ ಹೇಳಿಕೆ ನೀಡಿದ್ದು, ಉಕ್ರೇನ್‍ನಲ್ಲಿ ಪ್ರಸ್ತುತ ನಡೆಯುತ್ತಿರುವ ಎಲ್ಲಾ ಘಟನೆಗಳನ್ನು ರೆಕಾರ್ಡ್ ಮಾಡಲು ಮತ್ತು ನಮ್ಮ ದೇಶದ ಮೇಲೆ ರಷ್ಯಾದ ಆಕ್ರಮಣದ ಬಗ್ಗೆ ಜಗತ್ತಿಗೆ ಸತ್ಯವನ್ನು ತಿಳಿಸಲು ವಿಶೇಷವಾಗಿ ಪೆನ್ ಅವರು ಕೈವ್‍ಗೆ ಬಂದಿದ್ದಾರೆ ಎಂದು ತಿಳಿಸಿತು. ‘ಉಕ್ರೇನ್‍ಗೆ ಬೆಂಬಲ ನೀಡುವವರಲ್ಲಿ ಸೀನ್ ಪೆನ್ ಕೂಡಾ ಒಬ್ಬರಾಗಿದ್ದಾರೆ. ಅವರ ಧೈರ್ಯ ಮತ್ತು ಪ್ರಾಮಾಣಿಕತೆಗೆ ನಮ್ಮ ದೇಶವು ಅವರಿಗೆ ಸದಾ ಕೃತಜ್ಞರಾಗಿರಬೇಕು’ ಎಂದು ಶ್ಲಾಘಿಸಿದೆ.

  • ರಷ್ಯಾ ದಾಳಿಗೆ ಮೊದಲ ದಿನ 137 ಮಂದಿ ಸಾವು: ಉಕ್ರೇನಿಯನ್‌ ಅಧ್ಯಕ್ಷ

    ರಷ್ಯಾ ದಾಳಿಗೆ ಮೊದಲ ದಿನ 137 ಮಂದಿ ಸಾವು: ಉಕ್ರೇನಿಯನ್‌ ಅಧ್ಯಕ್ಷ

    ಕೀವ್: ತಮ್ಮ ದೇಶದ ಮೇಲೆ ರಷ್ಯಾದ ಆಕ್ರಮಣದಿಂದಾಗಿ ಇದುವರೆಗೆ ನಾಗರಿಕರು ಮತ್ತು ಸೇನಾ ಸಿಬ್ಬಂದಿ ಸೇರಿ 137 ಮಂದಿ ಹತರಾಗಿದ್ದಾರೆ ಎಂದು ಉಕ್ರೇನಿಯನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಮಾಹಿತಿ ನೀಡಿದ್ದಾರೆ.

    ಶುಕ್ರವಾರ ಬೆಳಗ್ಗೆ ಬಿಡುಗಡೆ ಮಾಡಿದ ವೀಡಿಯೋದಲ್ಲಿ ಈ ಯುದ್ಧದ ಸ್ಥಿತಿಗತಿ ಕುರಿತು ಮಾತನಾಡಿದ ಅವರು, ಮೃತರನ್ನು ಹೀರೋಗಳು ಎಂದು ಕರೆದಿದ್ದಾರೆ. ರಷ್ಯಾ ದಾಳಿ ಪರಿಣಾಮವಾಗಿ ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

    ಉಕ್ರೇನ್‌ ಮಿಲಿಟರಿಯನ್ನು ಮಾತ್ರ ಗುರಿಯಾಗಿಸಿಕೊಂಡು ದಾಳಿ ಮಾಡಲಾಗುವುದು. ಅಲ್ಲಿನ ಜನತೆಗೆ ಯಾವುದೇ ತೊಂದರೆ ಕೊಡುವುದಿಲ್ಲ ಎಂದು ರಷ್ಯಾ ಹೇಳಿತ್ತು. ಆದರೆ ದೇಶದ ಪ್ರಜೆಗಳ ನೆಲೆಗಳು ಸಹ ದಾಳಿಯಿಂದ ತತ್ತರಿಸಿ ಹೋಗಿವೆ ಎಂದು ಉಕ್ರೇನಿಯನ್‌ ಅಧ್ಯಕ್ಷರು ಗಂಭೀರ ಆರೋಪ ಮಾಡಿದ್ದಾರೆ.

    ಅವರು ಜನರನ್ನು ಕೊಲ್ಲುತ್ತಿದ್ದಾರೆ. ಶಾಂತಿಯಿಂದ ಕೂಡಿದ್ದ ನಗರಗಳನ್ನು ಮಿಲಿಟರಿ ಗುರಿಗಳಾಗಿ ಪರಿವರ್ತಿಸುತ್ತಿದ್ದಾರೆ. ಇದು ಮೋಸ, ಕ್ಷಮಿಸಲು ಅರ್ಹವಲ್ಲದ ನಡೆ ಎಂದು ರಷ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಉಕ್ರೇನ್‌ಗೆ ಆರ್ಥಿಕ ನೆರವು ನೀಡಲು ಸಿದ್ಧ: ವಿಶ್ವ ಬ್ಯಾಂಕ್‌

    ಒಡೆಸ್ಸಾ ಪ್ರದೇಶದ ಮಿನಿ ದ್ವೀಪದಲ್ಲಿ ಎಲ್ಲಾ ಗಡಿ ಕಾವಲುಗಾರರನ್ನು ಗುರುವಾರ ಕೊಲ್ಲಲಾಯಿತು. ದ್ವೀಪವನ್ನು ರಷ್ಯನ್ನರು ವಶಪಡಿಸಿಕೊಂಡಿದ್ದಾರೆ ಎಂದು ಉಕ್ರೇನ್‌ನ ಗಡಿ ಸಿಬ್ಬಂದಿ ವರದಿ ಮಾಡಿದ್ದಾರೆ ಎಂದು ವೊಲೊಡಿಮಿರ್‌ ತಿಳಿಸಿದ್ದಾರೆ. ಇದನ್ನೂ ಓದಿ:  Russia Ukraine War – ಯಾವ ರಾಷ್ಟ್ರದ ಬೆಂಬಲ ಯಾರಿಗೆ?

  • ವೈದ್ಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಉಕ್ರೇನ್, ರಷ್ಯಾಗೇ ಹೆಚ್ಚಾಗಿ ಯಾಕೆ ಹೋಗ್ತಾರೆ ಗೊತ್ತಾ?

    ವೈದ್ಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಉಕ್ರೇನ್, ರಷ್ಯಾಗೇ ಹೆಚ್ಚಾಗಿ ಯಾಕೆ ಹೋಗ್ತಾರೆ ಗೊತ್ತಾ?

    ನವದೆಹಲಿ: ಭಾರತೀಯರು ಸೇರಿ ವಿಶ್ವದಲ್ಲೇ ಹೆಚ್ಚಿನ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ಉಕ್ರೇನ್, ರಷ್ಯಾಗೆ ಯಾಕೆ ಹೋಗುತ್ತಾರೆ ಎಂಬ ಪ್ರಶ್ನೆಗೆ ಇಲ್ಲಿದೆ ಮಾಹಿತಿ.

    ಉನ್ನತ ಶಿಕ್ಷಣ ನೀಡುವಲ್ಲಿ ಭಾರತವೂ ಖ್ಯಾತಿ ಹೊಂದಿರುವಾಗ ಸಾವಿರಾರು ವಿದ್ಯಾರ್ಥಿಗಳು ಏಕೆ ರಷ್ಯಾ ಮತ್ತು ಉಕ್ರೇನ್‍ಗೆ ಮೆಡಿಕಲ್ ಮಾಡಲು ಹೋಗುತ್ತಾರೆ ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಬರುವುದು ಸಹಜವಾಗಿದೆ. ಇದಕ್ಕೆ ಉತ್ತರ ಇಲ್ಲಿದೆ. ಇದನ್ನೂ ಓದಿ:  ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

    Medical education needs to stop burning out students. Now - STAT

    ಭಾರತದಲ್ಲಿ ಸರ್ಕಾರಿ ಕೋಟಾದಡಿ ಸೀಟು ಸಿಕ್ಕವರು ಮೆಡಿಕಲ್ ಶಿಕ್ಷಣವನ್ನು ಸುಲಭವಾಗಿ ಪಡೆಯಬಹುದು. ಒಂದು ವೇಳೆ ಸಿಗದಿದ್ದರೆ ಖಾಸಗಿ ಕಾಲೇಜು ಕೇಳಿದಷ್ಟು ಹಣ ಕಟ್ಟಿ ಓದಬೇಕಾಗುತ್ತೆ. ಆದರೆ ಎಲ್ಲ ಜನರು ಸ್ಥಿತಿವಂತರಾಗಿರುವುದಿಲ್ಲ. ಭಾರತಕ್ಕೆ ಹೋಲಿಸಿದರೆ ಉಕ್ರೇನ್ ನಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಶುಲ್ಕ ಬಹಳ ಕಡಿಮೆ ಇರುತ್ತೆ. ಇಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಶೇ.60 ರಿಂದ 70ರಷ್ಟು ಕಡಿಮೆ ಅಗ್ಗದಲ್ಲಿ ಶುಲ್ಕವಿರುತ್ತದೆ.

    ಅಲ್ಲದೆ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡರೆ ಉಕ್ರೇನ್ ನಲ್ಲಿ ಸೀಟ್ ಪಡೆಯುವುದು ಸುಲಭದ ಕೆಲಸ. ಭಾರತಕ್ಕೆ ಹೋಲಿಸಿದರೆ ಉಕ್ರೇನ್‍ನಲ್ಲಿ ಜೀವನ ನಿರ್ವಹಣೆ ವೆಚ್ಚವೂ ಕಡಿಮೆ ಇರುತ್ತೆ. ಇದರ ಜೊತೆಗೆ ಇಲ್ಲಿನ ವೈದ್ಯಕೀಯ ಕಾಲೇಜುಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಯುನೆಸ್ಕೋ, ಯುರೋಪಿಯನ್ ದೇಶಗಳ ಮಾನ್ಯತೆ ಇದೆ.

    A Time for Change: Nutrition Education in Medicine

    ಉಕ್ರೇನ್ ನಲ್ಲಿ ವಿದ್ಯಾರ್ಥಿಗಳ ಜೀವನ ವೆಚ್ಚ ಅಗ್ಗವಾಗಿರುವುದರಿಂದ ಇಲ್ಲಿಗೆ ಎಷ್ಟೋ ಜನರು ಶಿಕ್ಷಣ ಪಡೆಯಲು ಬರುತ್ತಾರೆ.

    ಉಕ್ರೇನ್‍ನಲ್ಲಿ 20,000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಇದ್ದು, ಅವರನ್ನು ರಕ್ಷಿಸಲು ಭಾರತವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಸದ್ಯಕ್ಕೆ ಉಕ್ರೇನ್‍ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಯಿಂದಾಗಿ ನವದೆಹಲಿ ಮತ್ತು ಕೀವ್ ನಡುವಿನ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಪರ್ಯಾಯ ವ್ಯವಸ್ಥೆಗಳನ್ನು ಭಾರತ ಸರ್ಕಾರ ಮಾಡುತ್ತಿದೆ. ಇದನ್ನೂ ಓದಿ:  ಉಕ್ರೇನ್‍ನಲ್ಲಿ ಸಿಲುಕಿದ್ದಾರೆ 10 ಮಂದಿ ಕರ್ನಾಟಕ ವಿದ್ಯಾರ್ಥಿಗಳು!

  • ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ  ಉಕ್ರೇನ್ ಕರೆ!

    ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

    ವಾಷಿಂಗ್ಟನ್: ರಷ್ಯಾ ದಾಳಿಯಿಂದ ಮೂಲಸೌಕರ್ಯ ರಕ್ಷಿಸಿಕೊಳ್ಳಲು, ರಷ್ಯಾ ಸೈನ್ಯದ ವಿರುದ್ಧ ಸೈಬರ್ ಬೇಹುಗಾರಿಕೆ ಕಾರ್ಯಾಚರಣೆಗಳನ್ನು ನಡೆಸಲು ಉಕ್ರೇನ್ ಸರ್ಕಾರವು ದೇಶದ ಭೂಗತ ಹ್ಯಾಕರ್‌ಗಳಿಂದ ಸ್ವಯಂಸೇವಕರನ್ನು ಕೇಳುತ್ತಿದೆ.

    ರಷ್ಯಾದ ಪಡೆಗಳು ಉಕ್ರೇನ್ ನಗರಗಳ ಮೇಲೆ ದಾಳಿ ಮಾಡುತ್ತಿದ್ದಂತೆ, ಸ್ವಯಂಸೇವಕರಿಗೆ ನಿನ್ನೆ ಹ್ಯಾಕರ್ ಫೋರಮ್‍ಗಳಲ್ಲಿ ಕಾಣಿಸಿಕೊಳ್ಳಲು ಗೂಗಲ್ ಮೂಲಕ ತಿಳಿಸಲಾಗಿದೆ. ದಾಳಿ ಹಿನ್ನೆಲೆ ಅನೇಕ ನಿವಾಸಿಗಳು ರಾಜಧಾನಿ ಕೀವ್ ಬಿಟ್ಟು ಬೇರೆ ಕಡೆ ಹೋಗುತ್ತಿದ್ದಾರೆ. ಇದನ್ನೂ ಓದಿ:  ಉಕ್ರೇನ್‌ಗೆ ಆರ್ಥಿಕ ನೆರವು ನೀಡಲು ಸಿದ್ಧ: ವಿಶ್ವ ಬ್ಯಾಂಕ್‌

    ಉಕ್ರೇನಿಯನ್ ಸೈಬರ್ ಸಮುದಾಯ, ನಮ್ಮ ದೇಶದ ರಕ್ಷಣೆಯಲ್ಲಿ ತೊಡಗಿಸಿಕೊಳ್ಳಲು ಸಮಯವಾಗಿದೆ ಎಂದು ಉಕ್ರೇನ್ ಪೋಸ್ಟ್ ಮಾಡಿದೆ. ಹ್ಯಾಕರ್‍ಗಳು ಮತ್ತು ಸೈಬರ್ ಸೆಕ್ಯುರಿಟಿ ಪರಿಣಿತರನ್ನು ಗೂಗಲ್ ಡಾಕ್ಸ್ ಮೂಲಕ ಅಪ್ಲಿಕೇಶನ್ ಸಲ್ಲಿಸಲು ಕೇಳಿದೆ.

    ಕೀವ್‍ನಲ್ಲಿರುವ ಸೈಬರ್ ಸೆಕ್ಯುರಿಟಿ ಕಂಪನಿಯ ಸಹ-ಸಂಸ್ಥಾಪಕ ಯೆಗೊರ್ ಔಶೇವ್ ಅವರನ್ನು ನಿನ್ನೆ ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ಸಂಪರ್ಕಿಸಿದ್ದಾರೆ. ಈ ವೇಳೆ ಅವರು ಸೈಬರ್ ರಕ್ಷಣೆ ಬಗ್ಗೆ ಪೋಸ್ಟ್ ಮಾಡುವಂತೆ ಕೋರಿಕೊಂಡಿದ್ದು, ಇದನ್ನು ಬರೆದಿದ್ದಾರೆ ಎಂದು ರಾಯಿಟರ್ಸ್‍ಗೆ ತಿಳಿಸಿದರು. ಇದನ್ನೂ ಓದಿ:  Russia Ukraine War – ಯಾವ ರಾಷ್ಟ್ರದ ಬೆಂಬಲ ಯಾರಿಗೆ?

    ಔಶೇವ್ ಅವರ ಸಂಸ್ಥೆಯ ಸೈಬರ್ ಯೂನಿಟ್ ಟೆಕ್ನಾಲಜೀಸ್ ನಿರ್ಣಾಯಕ ಮೂಲಸೌಕರ್ಯಗಳ ರಕ್ಷಣೆಯಲ್ಲಿ ಉಕ್ರೇನ್ ಸರ್ಕಾರದೊಂದಿಗೆ ಕೆಲಸ ಮಾಡಲು ಹೆಸರುವಾಸಿಯಾಗಿದೆ.

  • ಉಕ್ರೇನ್‌ಗೆ ಆರ್ಥಿಕ ನೆರವು ನೀಡಲು ಸಿದ್ಧ: ವಿಶ್ವ ಬ್ಯಾಂಕ್‌

    ಉಕ್ರೇನ್‌ಗೆ ಆರ್ಥಿಕ ನೆರವು ನೀಡಲು ಸಿದ್ಧ: ವಿಶ್ವ ಬ್ಯಾಂಕ್‌

    ವಾಷಿಂಗ್ಟನ್: ರಷ್ಯಾದ ಆಕ್ರಮಣಕ್ಕೆ ತುತ್ತಾಗಿರುವ ಉಕ್ರೇನ್‌ಗೆ ಅಗತ್ಯ ಆರ್ಥಿಕ ನೆರವು ನೀಡುವುದಾಗಿ ವಿಶ್ವ ಬ್ಯಾಂಕ್‌ ಭರವಸೆ ನೀಡಿದೆ.

    ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ನಿರ್ಧಾರಕ್ಕೆ ಕಳವಳ ವ್ಯಕ್ತಪಡಿಸಿರುವ ವಿಶ್ವ ಬ್ಯಾಂಕ್‌, ನಾವು ಉಕ್ರೇನ್‌ಗೆ ತಕ್ಷಣದ ಬೆಂಬಲವನ್ನು ಒದಗಿಸಲು ಸಿದ್ಧರಿದ್ದೇವೆ. ಹಣಕಾಸು ಹಂಚಿಕೆ ಸೇರಿದಂತೆ ಇತರೆ ಬೆಂಬಲಕ್ಕಾಗಿ ಕ್ರಮಕೈಗೊಂಡಿದ್ದೇವೆ. ಇದಕ್ಕಾಗಿ ನಮ್ಮ ಎಲ್ಲಾ ಹಣಕಾಸು ಮತ್ತು ತಾಂತ್ರಿಕ ಬೆಂಬಲ ಸಾಧನಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದೆ. ಇದನ್ನೂ ಓದಿ: Russia Ukraine War – ಯಾವ ರಾಷ್ಟ್ರದ ಬೆಂಬಲ ಯಾರಿಗೆ?

    ವಿಶ್ವ ಬ್ಯಾಂಕ್‌ ಗ್ರೂಪ್‌ನ ಅಧ್ಯಕ್ಷ ಡೇವಿಡ್‌ ಮಾಲ್ಪಾಸ್‌ ಮಾತನಾಡಿ, ಉಕ್ರೇನ್‌ನಲ್ಲಿ ನಡೆಯುತ್ತಿರುವ ಘಟನೆಗಳ ಪರಿಣಾಮವಾಗಿ ಉಂಟಾಗಿರುವ ಹಿಂಸಾಚಾರ, ಜೀವಹಾನಿಯಿಂದ ವಿಶ್ವ ಬ್ಯಾಂಕ್‌ ಕಳವಳಗೊಂಡಿದೆ. ನಾವು ಉಕ್ರೇನ್‌ನ ದೀರ್ಘಕಾಲದ ಪಾಲುದಾರರಾಗಿದ್ದೇವೆ. ಇಂತಹ ನಿರ್ಣಾಯಕ ಕ್ಷಣದಲ್ಲಿ ದೇಶದ ಜನತೆಯ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೆಟ್ರೋ ಸುರಂಗದಲ್ಲಿ ಅವಿತಿದ್ದಾರೆ ಕನ್ನಡಿಗರು!

    ಉಕ್ರೇನ್‌ನಲ್ಲಿನ ವಿನಾಶಕಾರಿ ಬೆಳವಣಿಗೆಗಳು ದೂರಗಾಮಿ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳನ್ನು ಬೀರುತ್ತವೆ. ಈ ವೆಚ್ಚಗಳನ್ನು ನಿರ್ಣಯಿಸಲು ನಾವು ಐಎಂಎಫ್‌ನೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸುತ್ತೇವೆ ಎಂದು ವಿಶ್ವ ಬ್ಯಾಂಕ್‌ ತಿಳಿಸಿದೆ.

    ಮಾಲ್ಪಾಸ್‌ ಅವರು ಶಾನಿವಾರದಂದೇ ಮ್ಯೂನಿಚ್‌ನಲ್ಲಿ ಉಕ್ರೇನಿಯನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಅವರನ್ನು ಭೇಟಿಯಾಗಿದ್ದರು. ಉಕ್ರೇನ್‌ ಪ್ರದೇಶದ ಜನರಿಗೆ ವಿಶ್ವ ಬ್ಯಾಂಕ್‌ನ ಬೆಂಬಲ ಮತ್ತು ಸಹಾಯ ಒದಗಿಸುವ ಕುರಿತು ಆಶಯ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಡಲು ನಾಗರಿಕರಿಗೂ ಶಸ್ತ್ರಾಸ್ತ್ರ ನೀಡಿದ ಉಕ್ರೇನ್