Tag: russia

  • ಚರಂಡಿಗೆ ವೋಡ್ಕಾ ಸುರಿದು ರಷ್ಯಾ ವಿರುದ್ಧ ಅಮೆರಿಕನ್ನರ ಆಕ್ರೋಶ

    ವಾಷಿಂಗ್ಟನ್: ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದಾಗಿನಿಂದಲೂ ಎಲ್ಲೆಡೆ ಉಕ್ರೇನ್ ಮೇಲೆ ಅನುಕಂಪ ಹೆಚ್ಚಾಗಿದ್ದು, ರಷ್ಯಾ ಮೇಲಿನ ಕೋಪದ ಕಿಚ್ಚು ಹೆಚ್ಚಾಗಿದೆ.

    ಇದೀಗ ಅಮೆರಿಕ ರಷ್ಯಾ ಮೇಲೆ ಸೇಡು ತೀರಿಸಿಕೊಳ್ಳಲು ವಿಚಿತ್ರವಾಗಿ ಪ್ರತಿಭಟಿಸಲು ಮುಂದಾಗಿದೆ. ರಷ್ಯಾದಿಂದ ತರಿಸಲಾಗಿದ್ದ ವೋಡ್ಕಾ ಬಾಟಲಿಗಳನ್ನು ಅಲ್ಲಿನ ಜನರು ಒಡೆದು ಚರಂಡಿಗೆ ಸುರಿಯುತ್ತಿದ್ದಾರೆ. ಇದನ್ನೂ ಓದಿ: ಫಸ್ಟ್‌ ಟೈಂ ಸೆಬಿಗೆ ಮಹಿಳೆ ಬಾಸ್‌

    ಅಮೆರಿಕದ ಲಾಸ್ ವೆಗಾಸ್‍ನಲ್ಲಿ ಮದ್ಯ ಪ್ರಿಯರು ರಷ್ಯಾದ ಎಲ್ಲಾ ರೀತಿಯ ಮದ್ಯಗಳನ್ನೂ ನಿರಾಕರಿಸುತ್ತಿದ್ದಾರೆ. ಕೆಲವರು ದುಬಾರಿ ರಷ್ಯನ್ ವೋಡ್ಕಾ ಖರಿದಿಸಿ, ಅವುಗಳನ್ನು ಚರಂಡಿಗೆ ಚೆಲ್ಲುತ್ತಿದ್ದಾರೆ. ವ್ಯಕ್ತಿಯೊಬ್ಬ ವೋಡ್ಕಾವನ್ನು ಚೆಲ್ಲಿ ಬಾಟಲಿ ಖಾಲಿ ಮಾಡುತ್ತಿರುವ ವೀಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮಿಲಿಟರಿ ಅನುಭವ ಹೊಂದಿರುವ ಕೈದಿಗಳನ್ನು ಬಿಡುಗಡೆ ಮಾಡುತ್ತೇವೆ: ವೊಲೊಡಿಮಿರ್ ಝೆಲೆನ್ಸ್ಕಿ

    ದುಬಾರಿ ಮದ್ಯ ಖರೀದಿಯಿಂದ ಬಂದ ಹಣವನ್ನು ರೆಡ್ ಕ್ರಾಸ್ ವತಿಯಿಂದ ಉಕ್ರೇನ್‍ಗೆ ಮಾನವೀಯ ನೆರವು ಕಳುಹಿಸಲು ಬಳಸಲಾಗುವುದು ಎಂದು ವರದಿಗಳು ತಿಳಿಸಿವೆ. ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ನಡೆಸಿರುವುದನ್ನು ಕೆನಡಾ ಕೂಡಾ ಖಂಡಿಸಿದ್ದು, ರಷ್ಯಾದ ವೋಡ್ಕಾ ಖರೀದಿಸುವುದಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ.

  • ಮಿಲಿಟರಿ ಅನುಭವ ಹೊಂದಿರುವ ಕೈದಿಗಳನ್ನು ಬಿಡುಗಡೆ ಮಾಡುತ್ತೇವೆ: ವೊಲೊಡಿಮಿರ್ ಝೆಲೆನ್ಸ್ಕಿ

    ಮಿಲಿಟರಿ ಅನುಭವ ಹೊಂದಿರುವ ಕೈದಿಗಳನ್ನು ಬಿಡುಗಡೆ ಮಾಡುತ್ತೇವೆ: ವೊಲೊಡಿಮಿರ್ ಝೆಲೆನ್ಸ್ಕಿ

    ಕೀವ್: ರಷ್ಯಾದ ವಿರುದ್ಧ ಹೋರಾಡಲು ಮಿಲಿಟರಿ ಅನುಭವ ಹೊಂದಿರುವ ಕೈದಿಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಘೋಷಣೆ ಮಾಡಿದ್ದಾರೆ.

    ಉಲ್ಬಣಗೊಳ್ಳುತ್ತಿರುವ ಯುದ್ಧದ ಪರಿಸ್ಥಿತಿಯ ಮಧ್ಯೆ, ಅವರು ಸೋಮವಾರ (ಫೆಬ್ರವರಿ 28) ರಷ್ಯಾದೊಂದಿಗೆ ಹೋರಾಟದಲ್ಲಿ ಪಾಲ್ಗೊಳ್ಳಲು ಸಿದ್ಧರಿದ್ದರೆ ಹಿಂದಿನ ಮಿಲಿಟರಿ ಅನುಭವ ಹೊಂದಿರುವ ಕೈದಿಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಉಕ್ರೇನ್ ಗಡಿ ತಲುಪಿದ್ರೂ ಭಾರತಕ್ಕೆ ಬರಲಾಗದೆ ರಾಯಚೂರು ವಿದ್ಯಾರ್ಥಿಗಳು ಪರದಾಟ

    ರಷ್ಯಾದ ಪಡೆಗಳ ಆಕ್ರಮಣದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಉಕ್ರೇನ್ ವಿಶೇಷ ಕಾರ್ಯವಿಧಾನದ ಅಡಿಯಲ್ಲಿ ಸದಸ್ಯತ್ವವನ್ನು ಪಡೆಯಲು ತಕ್ಷಣವೇ ಅವಕಾಶ ನೀಡುವಂತೆ ಝೆಲೆನ್ಸ್ಕಿ ಯುರೋಪಿಯನ್ ಒಕ್ಕೂಟವನ್ನು ಕೇಳಿಕೊಂಡಿದ್ದಾರೆ.ಇದನ್ನೂ ಓದಿ: ನಮ್ಮ ಸ್ವಂತ ಜನರನ್ನು ನಾವು ಬಿಟ್ಟುಕೊಡಲು ಸಾಧ್ಯವಿಲ್ಲ: ಕೇಂದ್ರದ ವಿರುದ್ಧ ರಾಹುಲ್ ಕಿಡಿ

    ಝೆಲೆನ್ಸ್ಕಿಯು ರಷ್ಯಾದ ಸೈನಿಕರಿಗೆ ಯುದ್ಧವನ್ನು ನಿಲ್ಲಿಸುವಂತೆ ಮನವಿ ಮಾಡಿದ್ದು, ನಿಮ್ಮ ಪ್ರಾಣವನ್ನು ಉಳಿಸಿಕೊಂಡು ಇಲ್ಲಿಂದ ಹೊರಡಿ ಎಂದು ಹೇಳಿದ್ದಾರೆ.

  • ಬಂಕರ್‌ಗಳಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಒದ್ದು ಅಪಾರ್ಟ್ಮೆಂಟ್‌ಗೆ ಕಳುಹಿಸುತ್ತಿದ್ದಾರೆ: ವಿದ್ಯಾರ್ಥಿ

    ಬಂಕರ್‌ಗಳಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಒದ್ದು ಅಪಾರ್ಟ್ಮೆಂಟ್‌ಗೆ ಕಳುಹಿಸುತ್ತಿದ್ದಾರೆ: ವಿದ್ಯಾರ್ಥಿ

    ಕೀವ್: ಪಬ್ಲಿಕ್ ಬಂಕರ್‌ಗಳಲ್ಲಿ ಇರುವ ಭಾರತೀಯ ವಿದ್ಯಾರ್ಥಿಗಳನ್ನು ಒದ್ದು ವಾಪಸ್ ಅಪಾರ್ಟ್ಮೆಂಟ್‌ಗೆ ಕಳುಹಿಸುವ ಮೂಲಕ ಹಲ್ಲೆ ಎಸಗಲಾಗುತ್ತಿದೆ ಎಂದು ಉಕ್ರೇನ್‍ನಲ್ಲಿರುವ ಕರ್ನಾಟಕ ಮೂಲದ ವಿದ್ಯಾರ್ಥಿ ಬೇಸರ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ವಿದ್ಯಾರ್ಥಿ ಪ್ರಸಾದ್ ಮಾತನಾಡಿ, ವಿಶ್ವಸಂಸ್ಥೆಯ ಭಾರತ ಉಕ್ರೇನ್‍ಗೆ ಬೆಂಬಲ ನೀಡಿರಲಿಲ್ಲ. ಇದರಿಂದಾಗಿ ಸಿಟ್ಟಾಗಿರುವ ಸ್ಥಳೀಯ ಉಕ್ರೇನ್ ಜನತೆ ಒದ್ದು ಅಪಾರ್ಟ್ಮೆಂಟ್‌ಗೆ ತೆರಳುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ನೋವನ್ನು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಸ್ವಂತ ಸಾಮಾಜಿಕ ಮಾಧ್ಯಮ ಆ್ಯಪ್ ಬಿಡುಗಡೆ ಮಾಡಿದ ಟ್ರಂಪ್

    ಇಲ್ಲಿರುವ ಹಾಸ್ಟೆಲ್ ಬಂಕರ್‌ಗಳಲ್ಲಿ ವಿದ್ಯಾರ್ಥಿಗಳು ಮಾತ್ರ ಸುರಕ್ಷಿತವಾಗಿದ್ದಾರೆ. ಉಳಿದವರೆಲ್ಲರೂ ಅಪಾರ್ಟ್ಮೆಂಟ್‌ನಲ್ಲಿದ್ದಾರೆ. ಮತ್ತೊಂದು ವಿಚಾರವೆಂದರೆ ಇಲ್ಲಿ ತಿನ್ನಲು ಊಟ ಸಿಗುತ್ತಿಲ್ಲ. ಕುಡಿಯಲು ನೀರು ಸಹ ಸಿಗದೇ ಟ್ಯಾಪ್‍ನಿಂದ ಬರುವ ನೀರನ್ನು ಬಿಸಿ ಮಾಡಿಕೊಂಡು ಕುಡಿಯುತ್ತಿದ್ದೇವೆ. ಹೊರಗಡೆ ಹೋಗಲು ಕೂಡಾ ಆಗುತ್ತಿಲ್ಲ. ಏಕೆಂದರೆ ಎಲ್ಲಿ ಸ್ಥಳೀಯ ಜನರು ನಮ್ಮ ಮೇಲೆ ಹಲ್ಲೆ ಮಾಡುತ್ತಾರೆ ಅನ್ನುವ ಭಯ ಕಾಡುತ್ತಿದೆ ಎಂದು ತಮ್ಮ ಅಳಲು ತೊಡಿಕೊಂಡರು.

    ವಿದ್ಯಾರ್ಥಿ ಹೇಳಿದ್ದು ಏನು?
    ಉಕ್ರೇನ್‍ನಿನ ಬಾರ್ಡರ್‍ನಲ್ಲಿಯೂ ಸಹ ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಯುತ್ತಿದೆ ಅಂತ ಅಲ್ಲಿಯ ವಿದ್ಯಾರ್ಥಿಗಳು ನನಗೆ ವೀಡಿಯೋ ಮಾಡಿ ಬಿಡುತ್ತಿದ್ದಾರೆ. ರಷ್ಯಾ ಹಾಗೂ ಉಕ್ರೇನ ಯುದ್ದ ಪ್ರಾರಂಭಗೊಳ್ಳವ ಮುನ್ನ ಜನವರಿ 25ಕ್ಕೆ ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕೃತ ಫೇಸ್ ಬುಕ್ ಪೇಜ್‍ನಿಂದ ಒಂದು ಫಾರಂ ಬಂದಿತ್ತು.

    ಫಾರಂನಲ್ಲಿ ರಷ್ಯಾ ಗಡಿಯಲ್ಲಿ ಯಾವುದೇ ಯುದ್ಧ ನಡೆಯುವ ಸಂದರ್ಭ ಕಾಣುತ್ತಿಲ್ಲ. ಇಲ್ಲಿ ಪರಿಸ್ಥಿತಿ ತುಂಬಾ ಶಾಂತವಾಗಿದೆ. ಒಂದು ವೇಳೆ ಹಾಗೇನಾದರೂ ಯುದ್ಧ ನಡೆಯುವ ಸಂದರ್ಭ ಎದುರಾದರೆ ನಿಮ್ಮ ಸಹಾಯಕ್ಕೆ ನಾವು ಇದ್ದೇವೆ ಎಂದು ಹೇಳಿತ್ತು.

    ಯುದ್ಧ ಪ್ರಾರಂಭವಾಗುವ ಮುನ್ನ ಭಾರತಕ್ಕೆ ಬರಬೇಕೆಂದರೆ ಆವಾಗಾಗಲೇ ಉಕ್ರೇನ್‍ನ ಎಲ್ಲ ನಾಗರಿಕ ವಿಮಾನಗಳು ಬುಕ್ ಆಗಿದ್ದವು. ಕೀವ್‍ನ ಬಾರ್ಡರ್‍ನಲ್ಲಿ ಸೇರಿರುವ ವಿದ್ಯಾರ್ಥಿಗಳನ್ನು ಹೊರಗಡೆ ಹೋಗಲಿಕ್ಕೆ ಬಿಡುತ್ತಿಲ್ಲ. ವಾಪಸ್ ಹೋಗಿ ಅಂತ ಹಲ್ಲೆ ಮಾಡುತ್ತಿದ್ದಾರೆ. ಈಗಾಗಲೇ ಬಹುತೇಕ ವಿದ್ಯಾರ್ಥಿಗಳು ಭಾರತಕ್ಕೆ ಹೋಗಿದ್ದಾರೆ. ಕೇವಲ ಪಾಕಿಸ್ತಾನ ಮತ್ತು ನೈಜಿರೀಯಾದ ಕೆಲ ವಿದ್ಯಾರ್ಥಿಗಳು ಮಾತ್ರ ಇಲ್ಲಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನ ಸಮುದ್ರ, ಭೂ-ಆಧಾರಿತ ಪ್ರದೇಶದ ಮೇಲೆ ರಷ್ಯಾ ದಾಳಿ!

    ಕೀವ್ ಬಾರ್ಡರ್ ಬಿಟ್ಟು ಬೇರೆ ಬಾರ್ಡರ್‍ನಿಂದ ಈಗಾಗಲೇ ಕೆಲವೊಂದಿಷ್ಟು ವಿದ್ಯಾರ್ಥಿಗಳು ಪಾರಾಗಿದ್ದಾರೆ. ನಮಗೆ ಇಲ್ಲಿ ಪ್ರತೀ ಕ್ಷಣಕ್ಕೂ ಸತ್ತು ಬದುಕುತ್ತಿದ್ದೇವೆ. ಸ್ಥಳೀಯ ಜನರು ಯಾವಾಗ ನಮ್ಮ ಮೇಲೆ ದಾಳಿ ಮಾಡುತ್ತಾರೆ ಅನ್ನುವ ಭಯ ಕಾಡುತ್ತಿದೆ ಎಂದು ಭಯ ವ್ಯಕ್ತಪಡಿಸಿದರು. ?

    ಉಕ್ರೇನ್ ಮೇಲೆ ರಷ್ಯಾ ದಾಳಿಯನ್ನು ಖಂಡಿಸಿ ಶನಿವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆ ನಡೆದಿತ್ತು. ಅಮೆರಿಕ ಮತ್ತು ಆಲ್ಬೇನಿಯಾ ಸಂಯುಕ್ತವಾಗಿ ಮಂಡಿಸಿದ ನಿರ್ಣಯದ ಮೇಲೆ ಮತದಾನ ನಡೆದಿತ್ತು.

    ಭಾರತ, ಚೀನಾ, ಯುಎಇ ದೇಶಗಳು ಮತದಾನದಿಂದ ದೂರ ಉಳಿದಿದ್ದರೆ ಪೆÇೀಲೆಂಡ್, ಇಟಲಿ, ನ್ಯೂಜಿಲೆಂಡ್ ಸೇರಿ 11 ದೇಶಗಳು ನಿರ್ಣಯದ ಪರವಾಗಿ ಮತ ಹಾಕಿವೆ. ರಷ್ಯಾ ದೇಶ ಊಹಿಸಿದಂತೆಯೇ ವಿಟೋ ಅಧಿಕಾರ ಚಲಾಯಿಸಿ, ನಿರ್ಣಯ ಪಾಸ್ ಆಗದಂತೆ ತಡೆದಿದೆ.

    ಈ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ ಭಾರತದ ಶಾಶ್ವತ ರಾಯಭಾರಿ ತಿರುಮೂರ್ತಿ, ವಿವಾದ ಇತ್ಯರ್ಥಕ್ಕೆ ಚರ್ಚೆಯೊಂದೇ ಸಮಾಧಾನ. ಆದರೆ ಈ ಕ್ಷಣದಲ್ಲಿ ಅದು ಸಾಧ್ಯವಾಗಿಲ್ಲ. ಎರಡು ದೇಶಗಳು ರಾಜತಾಂತ್ರಿಕ ಮಾರ್ಗವನ್ನು ಕೈಬಿಟ್ಟಿದ್ದಕ್ಕೆ ವಿಷಾದವಿದೆ. ಸದ್ಯಕ್ಕೆ ಈ ಖಂಡನಾ ನಿರ್ಣಯದಿಂದ ದೂರ ಇರಲು ಭಾರತ ನಿರ್ಧರಿಸಿದೆ ಎಂದು ತಿಳಿಸಿದ್ದರು.

  • ಆಹಾರ ಇಲ್ಲದೇ ಚಾಕೊಲೇಟ್ ತಿನ್ನುತ್ತಾ ದಿನ ಕಳೆಯುತ್ತಿದ್ದೇವೆ: ವಿದ್ಯಾರ್ಥಿಗಳ ಅಳಲು

    ಆಹಾರ ಇಲ್ಲದೇ ಚಾಕೊಲೇಟ್ ತಿನ್ನುತ್ತಾ ದಿನ ಕಳೆಯುತ್ತಿದ್ದೇವೆ: ವಿದ್ಯಾರ್ಥಿಗಳ ಅಳಲು

    ಮಡಿಕೇರಿ: ಉಕ್ರೇನ್ ಹಾಗೂ ರಷ್ಯಾ ದೇಶಗಳ ನಡುವೆ ಭೀಕರವಾಗಿ ಯುದ್ಧ ನಡೆಯುತ್ತಿದೆ. ಯುದ್ಧ ಪರಿಣಾಮದಿಂದ ಅಲ್ಲಿನ ಜನರು ತತ್ತರಿಸಿ ಹೋಗುತ್ತಿದ್ದಾರೆ. ಅಲ್ಲದೆ ನಮ್ಮ ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಕ್ಕಿಕೊಂಡು ನಲಗುತ್ತಿದ್ದು, ಆಹಾರವಿಲ್ಲದೆ ಚಾಕೊಲೇಟ್ ತಿನ್ನುತ್ತ ದಿನ ಕಳೆಯುತ್ತಿದ್ದೇವೆ ಎಂಬ ಮನಮಿಡಿಯುವ ವೀಡಿಯೋ ಮಾಡಿ ಕಳುಹಿಸಿದ್ದಾರೆ.

    ಉಕ್ರೇನ್ ನಲ್ಲಿ ಉನ್ನತ ವ್ಯಾಸಂಗಕ್ಕೆ ಹೋಗಿರುವ ಕನ್ನಡಿಗರು ಸಾಕಷ್ಟು ಸಂಕಷ್ಟ ಎದುರಿಸುವ ಪರಿಸ್ಥಿತಿ ಯುದ್ಧದಿಂದ ನಿರ್ಮಾಣವಾಗಿದೆ. ಖಾರ್ಕಿವ್ ನಗರದಲ್ಲಿರುವ ಕೊಡಗಿನ ಕುಶಾಲನಗರದ ಚಂದನ್ ಗೌಡ ಸೇರಿದಂತೆ ರಾಜ್ಯದ ಬೇರೆ-ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳು ಕಟ್ಟಡ ತಳಭಾಗದಲ್ಲಿ ಇದ್ದಾರೆ. ಅವರೆಲ್ಲ ಅಲ್ಲಿನ ಪರಿಸ್ಥಿತಿ ಹಾಗೂ ಅವರಿಗೆ ಆಗುತ್ತಿರುವ ಅನುಭವದ ಬಗ್ಗೆ ವಿವರವಾಗಿ ಹೇಳುತ್ತಿದ್ದಾರೆ. ಇದನ್ನೂ ಓದಿ: ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿನಿಯ ವೀಡಿಯೋ ಶೇರ್ ಮಾಡಿದ ಪ್ರಿಯಾಂಕಾ!

    ತಮ್ಮ ಪರಿಸ್ಥಿತಿ ಕುರಿತು ಮಾತನಾಡಿದ ವಿದ್ಯಾರ್ಥಿಗಳು, ಕಟ್ಟಡದ ನೆಲ ಮಹಡಿಯಲ್ಲಿರುವ ನಮಗೆ ಸರಿಯಾದ ವಿದ್ಯುತ್, ಆಹಾರ ಇಲ್ಲ. ಇದರಿಂದ ನಮ್ಮ ಪರಿಸ್ಥಿತಿ ಶೋಚನೀಯವಾಗುತ್ತಿದೆ. ಇಷ್ಟು ದಿನ ಇದ್ದ ಆಹಾರಗಳನ್ನು ಬಳಸಿಕೊಂಡು ಇದ್ದೆವು. ಆದರೆ ಇದೀಗಾ ಆಹಾರ ಇಲ್ಲದೇ ಚಾಕೊಲೇಟ್ ತಿನ್ನುತ್ತ ದಿನ ಕಳೆಯುತ್ತಿದ್ದೇವೆ. ಎಷ್ಟು ದಿನ ಚಾಕೊಲೇಟ್ ತಿನ್ನಲು ಸಾಧ್ಯ. ಗ್ಯಾಸ್ ಸಿಲಿಂಡರ್ ಇರುವ ಕಟ್ಟಡ ಕೆಳಭಾಗದಲ್ಲಿ ನಾವು ಇದ್ದೇವೆ. ಕಟ್ಟಡ ಶೇಕ್ ಅಗುವುದರಿಂದ ಜೀವ ಭಯ ಕಾಡುತ್ತಿದೆ. ಅದಷ್ಟು ಬೇಗಾ ಭಾರತ ಸರ್ಕಾರ ನಮ್ಮನ್ನು ಕರೆಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

  • ರಷ್ಯಾ ಜೊತೆಗೆ ಮಾತುಕತೆಗೂ ಮುನ್ನ ಷರತ್ತು ವಿಧಿಸಿದ ಉಕ್ರೇನ್

    ರಷ್ಯಾ ಜೊತೆಗೆ ಮಾತುಕತೆಗೂ ಮುನ್ನ ಷರತ್ತು ವಿಧಿಸಿದ ಉಕ್ರೇನ್

    ಕೀವ್: ರಷ್ಯಾ, ಉಕ್ರೇನ್ ವಿರುದ್ಧ ಯುದ್ಧ ಸಾರಿ ಐದು ದಿನಗಳು ಕಳೆದಿದೆ. ಇದೀಗ ರಷ್ಯಾ ಮತ್ತು ಉಕ್ರೇನ್ ಸಂಧಾನಕ್ಕೆ ಮುಂದಾಗಿದ್ದು, ರಷ್ಯಾ ಕೂಡಲೇ ಕದನ ವಿರಾಮ ಘೋಷಿಸಿ ಸೇನಾ ಪಡೆಗಳನ್ನು ಹಿಂಪಡೆಯಲಿ ಎಂದು ಉಕ್ರೇನ್ ಷರತ್ತು ವಿಧಿಸಿದೆ.

    ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾದ ದಿನಗಳಿಂದ ವಿಶ್ವದ ಇತರ ರಾಷ್ಟ್ರಗಳು ವಿರೋಧಿಸುತ್ತಿದೆ. ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲಿ ಎಂದು ಅಭಿಪ್ರಾಯಪಟ್ಟಿದೆ. ಈ ನಡುವೆ ಎರಡು ದೇಶಗಳು ಕೂಡ ಸಂಧಾನಕ್ಕೆ ಮುಂದಾಗಿದ್ದು, ಬೆಲಾರಸ್‍ನ ಗಡಿ ಪ್ರದೇಶದಲ್ಲಿ ಸಂಧಾನ ಸಭೆಗಾಗಿ ಉಭಯ ದೇಶಗಳ ಪ್ರಮುಖರು ಸೇರಿದ್ದಾರೆ. ಇದನ್ನೂ ಓದಿ: ದಿಢೀರ್‌ ಭಾರೀ ಪ್ರಮಾಣದಲ್ಲಿ ಬಡ್ಡಿದರ ಏರಿಸಿದ ರಷ್ಯನ್‌ ಬ್ಯಾಕ್‌

    ಉಕ್ರೇನ್ ಷರತ್ತು:
    ರಷ್ಯಾದೊಂದಿಗೆ ಸಂಧಾನ ಮಾತುಕತೆಗೆ ಒಪ್ಪಿರುವ ಉಕ್ರೇನ್ ಮೊಟ್ಟ ಮೊದಲಾಗಿ ತಕ್ಷಣ ರಷ್ಯಾ ಸೇನಾಪಡೆ ಕದನ ವಿರಾಮ ಘೋಷಿಸಿ ಉಕ್ರೇನ್‍ನಿಂದ ಹೊರನಡೆಯಬೇಕೆಂದು ಪಟ್ಟು ಹಿಡಿದಿದೆ. ಅಲ್ಲದೆ ಈಗಾಗಲೇ ಸಾಕಷ್ಟು ಸಾವು ನೋವುಗಳು ಸಂಭವಿಸಿದ್ದು, ಇನ್ನಾದರೂ ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಲು ಸಹಕರಿಸಿ ಎಂದು ಮನವಿ ಮಾಡಿಕೊಂಡಿದೆ. ಇದನ್ನೂ ಓದಿ: ಉಕ್ರೇನ್ ಅಧ್ಯಕ್ಷನ ಹತ್ಯೆಗೆ 400 ರಷ್ಯಾ ಸೈನಿಕರು ಸಿದ್ಧತೆ

    ಸಂಧಾನ ಸಭೆಯಲ್ಲಿರುವ ಪ್ರಮುಖರು:
    ಸರ್ವೇಂಟ್ ಆಫ್ ದಿ ಪೀಪಲ್ ಬಣದ ಅಧ್ಯಕ್ಷ ಡೇವಿಡ್ ಅರಾಖಮಿಯಾ
    ಉಕ್ರೇನ್ ರಕ್ಷಣಾ ಸಚಿವ ಒಲೆಕ್ಸಿ ರೆಜ್ನಿಕೋವ್
    ಉಕ್ರೇನ್ ಅಧ್ಯಕ್ಷ ಕಚೇರಿಯ ಮುಖಸ್ಥ ಮಿಖಾಯಿಲ್ ಪೊಡ್ಯೊಲ್ಯಾಕ್
    ತ್ರಿಪಕ್ಷೀಯ ಸಂಪರ್ಕ ಗುಂಪಿನ ಉಕ್ರೇನಿಯನ್ ನಿಯೋಗದ ಮೊದಲ ಉಪ ಮುಖ್ಯಸ್ಥ ಆಂಡ್ರೆ ಕೋಸ್ಟಿನ್
    ಸಂಸತ್ತಿನ ಸದಸ್ಯ ರುಸ್ಟೆಮ್ ಉಮೆರೋವ್
    ಉಕ್ರೇನ್ ವಿದೇಶಾಂಗ ವ್ಯವಹಾರಗಳ ಉಪಮುಖ್ಯಮಂತ್ರಿ ನಿಕೊಲಾಯ್ ಟೊಚಿಟ್ಸ್ಕಿ ಸಂಧಾನ ಸಭೆಯಲ್ಲಿ ಭಾಗಿಯಾಗಿದ್ದಾರೆ.

    ಈ ಮೊದಲು ಉಕ್ರೇನ್ ಸೇನಾ ಪಡೆಯ ಕುರಿತು ಮಾತನಾಡಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ದೇಶವನ್ನು ರಕ್ಷಿಸಿ ನಿಮ್ಮವರ ರಕ್ಷಣೆಗಾಗಿ ಹೋರಾಡಿ. ನಾನು ಮಾತ್ರ ಈ ದೇಶದ ಅಧ್ಯಕ್ಷನಲ್ಲ ಇಲ್ಲಿರುವ ಪ್ರತಿಯೊಬ್ಬ ಪ್ರಜೆ ಕೂಡ ಅಧ್ಯಕ್ಷರೇ. ದೇಶದಲ್ಲಿರುವ ಪ್ರತಿಯೊಬ್ಬರು ಕೂಡ ಈ ದೇಶದ ಜವಾಬ್ದಾರಿಯುತ ಪ್ರಜೆಗಳಾಗಿದ್ದೀರಿ. ನಮ್ಮ ಸುಂದರ ಉಕ್ರೇನ್‍ನಲ್ಲಿ ಇದೀಗ ಅಶಾಂತಿ ಕಾಡುತ್ತಿದೆ. ಶಾಂತಿಗಾಗಿ ಎಲ್ಲಾ ಪ್ರಜೆಗಳು ಕೂಡ ಇದೀಗ ಯೋಧರಾಗಿ ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಉಕ್ರೇನ್‍ಗಡಿಗೆ ತಲುಪಿದ್ದರು ಭಾರತಕ್ಕೆ ಬರಲಾಗದೆ ಪರದಾಡುತ್ತಿರುವ ರಾಯಚೂರು ವಿದ್ಯಾರ್ಥಿಗಳು

    ಉಕ್ರೇನ್, ರಷ್ಯಾ ಯುದ್ಧದ ಬಗ್ಗೆ ಮಾತನಾಡಿದ ಭಾರತದ ಉಕ್ರೇನ್ ರಾಯಭಾರಿ, ಈಗಾಗಲೇ ಉಕ್ರೇನ್‍ನಲ್ಲಿ ಸಾಕಷ್ಟು ಸಾವುನೋವುಗಳು ಸಂಭವಿಸಿದೆ. 16 ಪುಟ್ಟ ಮಕ್ಕಳು ರಷ್ಯಾದ ಕ್ರೌರ್ಯಕ್ಕೆ ಬಲಿಯಾಗಿದ್ದಾರೆ. ಬಾಂಬ್ ಮತ್ತು ಕ್ಷಿಪಣಿಗಳ ಮೂಲಕ ರಷ್ಯಾ ಸೈನಿಕರು ಉಕ್ರೇನ್‍ನಲ್ಲಿ ರಕ್ತಪಾತ ನಡೆಸಿದ್ದಾರೆ. ಇದೀಗ ಸಂಧಾನಕ್ಕೆ ಮುಂದಾಗಿದ್ದು, ರಷ್ಯಾ ಕೂಡಲೇ ಉಕ್ರೇನ್‍ನಿಂದ ಹಿಂದೆ ಸರಿಯಲಿ ಎಂದು ತಿಳಿಸಿದ್ದಾರೆ.

  • ದಿಢೀರ್‌ ಭಾರೀ ಪ್ರಮಾಣದಲ್ಲಿ ಬಡ್ಡಿದರ ಏರಿಸಿದ ರಷ್ಯನ್‌ ಬ್ಯಾಕ್‌

    ದಿಢೀರ್‌ ಭಾರೀ ಪ್ರಮಾಣದಲ್ಲಿ ಬಡ್ಡಿದರ ಏರಿಸಿದ ರಷ್ಯನ್‌ ಬ್ಯಾಕ್‌

    ಮಾಸ್ಕೋ: ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದಾಗಿನಿಂದ ವಿದೇಶೀ ವಿನಿಮಯಕ್ಕೆ ಭಾರೀ ಹೊಡೆತ ಬಿದ್ದಿದೆ. ಹೀಗಾಗಿ ರಷ್ಯಾ ಸೆಂಟ್ರಲ್ ಬ್ಯಾಂಕ್ ತನ್ನ ಆರ್ಥಿಕತೆಯನ್ನು ಕಾಪಾಡಲು ಬಡ್ಡಿ ದರದಲ್ಲಿ ಭಾರೀ ಏರಿಕೆ ಮಾಡಿದೆ.

    ರಷ್ಯಾ ಸೆಂಟ್ರಲ್ ಬ್ಯಾಂಕ್‍ನ ಬಡ್ಡಿ ದರ ಈ ಹಿಂದೆ ಶೇ.9.5 ಇದ್ದು, ಇದೀಗ ಶೇ.20 ಕ್ಕೆ ಏರಿಕೆ ಮಾಡಿದೆ. ಈ ಮೂಲಕ ರಷ್ಯಾ ತನ್ನ ಹೂಡಿಕೆದಾರರನ್ನು ಕಾಪಾಡಲು ಪ್ರಯತ್ನಿಸುತ್ತಿದೆ.

    ರಷ್ಯಾ ಸೆಂಟ್ರಲ್ ಬ್ಯಾಂಕ್ ಸೋಮವಾರ ಪ್ರಮುಖ ಬಡ್ಡಿ ದರವನ್ನು ಶೇ.9.5 ರಿಂದ ಶೇ.20ಕ್ಕೆ ಏರಿಸುವುದಾಗಿ ಘೋಷಿಸಿದೆ. ರಷ್ಯಾದಲ್ಲಿ ಯುದ್ಧದ ಹಿನ್ನೆಲೆ ವಿದೇಶೀ ವಹಿವಾಟು ಕುಂಠಿತಗೊಂಡಿದ್ದು, ರೂಬೆಲ್(ರಷ್ಯಾ ಕರೆನ್ಸಿ) ಬೆಲೆ ಕುಸಿಯುತ್ತಿದೆ. ಈ ಹಣದುಬ್ಬರವನ್ನು ಸರಿದೂಗಿಸಲು ಬಡ್ಡಿ ದರದಲ್ಲಿ ಏರಿಕೆ ಮಾಡಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಬಿಕ್ಕಟ್ಟನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಿ: ದಲೈಲಾಮಾ

    ರಷ್ಯಾದಲ್ಲಿ ಸಂಭವಿಸುತ್ತಿರುವ ನಾಟಕೀಯ ಬೆಳವಣಿಗೆಯಿಂದ ಜನರು ಭಯಬೀತರಾಗಿ ತಮ್ಮ ಹಣವನ್ನು ಹಿಂಪಡೆಯಲು ಎಟಿಎಂನಲ್ಲಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಈ ಬೆಳವಣಿಗೆಯಿಂದ ರಷ್ಯಾ ಹೂಡಿಕೆದಾರರು ಕೈಜಾರಿ ಹೋಗಬಾರದೆಂಬ ಕಾರಣಕ್ಕೆ ಬಡ್ಡಿ ದರವನ್ನು ದ್ವಿಗುಣಗೊಳಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದನ್ನೂ ಓದಿ: ಭಾರತೀಯರನ್ನು ತಾಯ್ನಾಡಿಗೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಮೋದಿ ಸರ್ಕಾರ ಮಾಡುತ್ತಿದೆ: ಖೂಬಾ


    ಯುದ್ಧ ಪ್ರಾರಂಭವಾದಾಗಿನಿಂದ ರೂಬೆಲ್ ಮೌಲ್ಯ ಕುಸಿಯತೊಡಗಿದೆ. ಪ್ರತಿ ಡಾಲರ್‍ಗೆ ರೂಬೆಲ್ ಬೆಲೆ 119.50 ರಷ್ಟು ಕುಸಿದಿದೆ. ಶುಕ್ರವಾರದ ದಿಂದ ರೂಬೆಲ್ ಬೆಲೆ ಶೇ.30% ರಷ್ಟು ಕಡಿಮೆಯಾಗಿದೆ.

  • ಮಾನವೀಯತೆ ಇಲ್ಲದ ಪರಿಸ್ಥಿತಿ ರಷ್ಯಾದಿಂದ ಅಗುತ್ತಿದೆ: ಕೆ.ಜಿ ಬೋಪಯ್ಯ

    ಮಾನವೀಯತೆ ಇಲ್ಲದ ಪರಿಸ್ಥಿತಿ ರಷ್ಯಾದಿಂದ ಅಗುತ್ತಿದೆ: ಕೆ.ಜಿ ಬೋಪಯ್ಯ

    ಮಡಿಕೇರಿ: ಮಾನವೀಯತೆ ಇಲ್ಲದ ಪರಿಸ್ಥಿತಿ ರಷ್ಯಾದಿಂದ ಅಗುತ್ತಿದೆ ಎಂದು ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

    ಮಡಿಕೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತಾನಾಡಿದ ಅವರು, ಉಕ್ರೇನ್ ಹಾಗೂ ರಷ್ಯಾದ ನಡುವೆ ನಡೆಯುತ್ತಿರುವ ಯುದ್ದ ಹಿನ್ನೆಲೆ ಉಕ್ರೇನ್‍ನಲ್ಲಿ ಸಿಲುಕಿಕೊಂಡು ಇರುವ ಭಾರತೀಯರಿಗೆ ಅಹಾರ ಕೊರತೆ ಎದುರಾಗಿದ್ದು, ಮಾನವೀಯತೆ ಇಲ್ಲದ ಪರಿಸ್ಥಿತಿ ರಷ್ಯಾದಿಂದ ಅಗುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರ ಎಷ್ಟು ಜನರು ಭಾರತೀಯರು ಉಕ್ರೇನ್ ನಲ್ಲಿ ಸಿಲುಕಿಕೊಂಡು ಇದ್ದಾರೆ. ವಿದ್ಯಾರ್ಥಿಗಳು ಸಾರ್ವಜನಿಕರು ಅವರು ಎಲ್ಲಾರನ್ನು ಹೋಸ ಯೋಜನೆಯನ್ನೆ ಮಾಡಿ ಏರ್‌ಲಿಫ್ಟ್‌ ಮಾಡುವ ಕೆಲಸಗಳು ಅಗತ್ತ ಇದೆ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ರಾಜಕೀಯ ಕಾರಣಕ್ಕೆ ಮೇಕೆದಾಟು ಪಾದಯಾತ್ರೆ ಮಾಡುತ್ತಿದೆ : ಕೋಟಾ ಶ್ರೀನಿವಾಸ್ ಪೂಜಾರಿ

    ಉಕ್ರೇನ್‍ನಲ್ಲಿ ನಡೆಯುತ್ತಿರುವ ಯುದ್ದದಿಂದ ಅಲ್ಲಿಯ ಗಡಿಭಾಗದಲ್ಲಿ ಇರುವವರನ್ನು ಕರೆತರುವ ಕೆಲಸ ವಿಳಂಬ ಆಗಿದೆ. ಕೊಡಗು ಜಿಲ್ಲೆಯ ವಿದ್ಯಾರ್ಥಿಗಳು ಅಲ್ಲೇ ಸಿಲುಕಿರುವುದರಿಂದ ಜನಪ್ರತಿನಿಧಿಯಾಗಿ ನಾವು ಹೆಚ್ಚು ಗಮನ ಹರಿಸಬೇಕಿದೆ. ಸಂಬಂಧಪಟ್ಟ ಕರ್ನಾಟಕ ಆದಿಕಾರಿಗಳ ಜೊತೆಯು ದೂರವಾಣಿ ಸಂಪರ್ಕ ಮಾಡಿ ವ್ಯವಸ್ಥೆಗಳನ್ನು ಮಾಡವಂತೆ ಸೂಚನೆ ನೀಡಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ವಿದ್ಯುತ್ ಪೂರೈಕೆ ಉಚಿತವಲ್ಲ, ಬಿಲ್ ಪಾವತಿಸದಿದ್ದರೆ ಕರೆಂಟ್ ಕಟ್ : ನಿತಿನ್ ರಾವತ್

    ವಿದ್ಯಾರ್ಥಿಗಳಿಗೆ ಅಹಾರದ ಕೊರತೆ ಎದುರಾಗಿದೆ. ಮಾನವೀಯತೆ ಇಲ್ಲದ ಪರಿಸ್ಥಿತಿ ರಷ್ಯಾದಿಂದ ಅಗುತ್ತಿದೆ ಅದು ಅಗಬರದಾಗಿತ್ತು.ಅದ್ರೆ ಅವರು ಮಾಡುತ್ತಿದ್ದಾರೆ. ಸದ್ಯದಲ್ಲೇ ಬೇಗಾ ಏರ್‍ಲಿಪ್ಟ್ ಮಾಡುವ ಕೆಲಸ ಅದಷ್ಟು ಬೇಗಾ ಅಗುತ್ತದೆ ಎಂದು ನನ್ನ ಆಶಾಭಾವನೆಯಾಗಿದೆ. ದೇವರ ಕೃಪೆ ಇರಬೇಕು ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

  • ಬಿಕ್ಕಟ್ಟನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಿ: ದಲೈಲಾಮಾ

    ಬಿಕ್ಕಟ್ಟನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಿ: ದಲೈಲಾಮಾ

    ನವದೆಹಲಿ: ಉಕ್ರೇನ್ ಮತ್ತು ರಷ್ಯಾ ನಡುವಿನ ಸಮಸ್ಯೆ ಹಾಗೂ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ಟಿಬೆಟಿಯನ್ ಗುರು ದಲೈ ಲಾಮಾ ಸಲಹೆ ನೀಡಿದರು.

    ಈ ಬಗ್ಗೆ ಟ್ವೀಟ್ ಮಾಡಿದ ಅವರು ಉಕ್ರೇನ್‍ನಲ್ಲಿನ ಸಂಘರ್ಷದಿಂದ ತುಂಬಾ ಬೇಸರವಾಗಿದೆ. ನಮ್ಮ ಪ್ರಪಂಚವು ಪರಸ್ಪರ ಅವಲಂಬಿತವಾಗಿದೆ. ಆದರೆ ಎರಡು ದೇಶಗಳ ನಡುವಿನ ಹಿಂಸಾತ್ಮಕ ಸಂಘರ್ಷವು ಅನಿವಾರ್ಯವಾಗಿ ಉಳಿದ ದೇಶಗಳ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಯುದ್ಧವು ಹಳೆದಾಗಿದ್ದು, ಅಹಿಂಸೆಯೊಂದೇ ಏಕೈಕ ಮಾರ್ಗವಾಗಿದೆ. ಇತರರನ್ನು ಸಹೋದರ, ಸಹೋದರಿಯರಂತೆ ಪರಿಗಣಿಸುವ ಮೂಲಕ ನಾವು ಏಕತೆಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.

    ಸಮಸ್ಯೆಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಉತ್ತಮವಾಗಿ ಪರಿಹರಿಸಲಾಗುತ್ತದೆ. ಪರಸ್ಪರ ತಿಳುವಳಿಕೆ ಮತ್ತು ಯೋಗಕ್ಷೇಮವನ್ನು ಗೌರವಿಸದರೆ ಮಾತ್ರ ನಿಜವಾದ ಶಾಂತಿ ಸಿಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಭಾರತೀಯರನ್ನು ತಾಯ್ನಾಡಿಗೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಮೋದಿ ಸರ್ಕಾರ ಮಾಡುತ್ತಿದೆ: ಖೂಬಾ

    ಉಕ್ರೇನ್‍ನಲ್ಲಿ ಶಾಂತಿ ಶೀಘ್ರದಲ್ಲಿ ಮರುಸ್ಥಾಪಿಸಲಿ ಎಂದ ಅವರು, ನಾವು ಈ ಬಗ್ಗೆ ಭರವಸೆ ಕಳೆದುಕೊಳ್ಳಬಾರದು. 20ನೇ ಶತಮಾನವು ಯುದ್ಧ ಮತ್ತು ರಕ್ತಪಾತದ ಶತಮಾನವಾಗಿತ್ತು. ಆದರೆ 21ನೇ ಶತಮಾನವು ಸಂಭಾಷಣೆಯ ಶತಮಾನವಾಗಿರಬೇಕು ಎಂದರು. ಇದನ್ನೂ ಓದಿ:  ಯುದ್ಧ ಭೂಮಿಯಿಂದ ಇನ್ನೂ ಬಾರದ ಮಗಳ ನೆನೆದೆ ಇಡೀ ಕುಟುಂಬ ಕಣ್ಣೀರು

  • ಯುದ್ಧ ಭೂಮಿಯಿಂದ ಇನ್ನೂ ಬಾರದ ಮಗಳ ನೆನೆದು ಇಡೀ ಕುಟುಂಬ ಕಣ್ಣೀರು

    ಯುದ್ಧ ಭೂಮಿಯಿಂದ ಇನ್ನೂ ಬಾರದ ಮಗಳ ನೆನೆದು ಇಡೀ ಕುಟುಂಬ ಕಣ್ಣೀರು

    ಹುಬ್ಬಳ್ಳಿ: ಉಕ್ರೇನ್ ಯುದ್ಧ ಭೂಮಿಯಿಂದ ಮಗಳು ಇನ್ನೂ ಬಾರದ ಹಿನ್ನೆಲೆ ಆಕೆಯನ್ನು ನೆನೆದು ಇಡೀ ಕುಟುಂಬ ಕಣ್ಣೀರು ಹಾಕುತ್ತಿದೆ. ಮಗಳ ಪೋಟೋ ಹಿಡಿದು ತಂದೆ-ತಾಯಿ, ಅಜ್ಜಿ-ತಾತ ತೀವ್ರ ಚಿಂತೆಗೆ ಒಳಗಾಗಿದ್ದಾರೆ.

    ಉಕ್ರೇನ್ ಯುದ್ಧ ಪೀಡಿತ ಪ್ರದೇಶ ಖಾರ್ಕೀವ್‍ನಲ್ಲಿ ಹುಬ್ಬಳ್ಳಿಯ ವಿದ್ಯಾರ್ಥಿನಿ ಚೈತ್ರ ಸಂಶಿ ಸಿಲುಕಿದ್ದಾರೆ. ಖಾರ್ಕಿವ್‍ನಲ್ಲಿ ಎಂಬಿಬಿಎಸ್ ಓದುತ್ತಿದ್ದ ಚೈತ್ರ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ನಿವಾಸಿ. ನಿನ್ನೆ ಮಧ್ಯಾಹ್ನದಿಂದ ಚೈತ್ರ ಮೊಬೈಲ್ ಸಂಪರ್ಕ ಕಡಿತಗೊಂಡಿದೆ. ಇದನ್ನೂ ಓದಿ: ಭಾರತೀಯರನ್ನು ತಾಯ್ನಾಡಿಗೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಮೋದಿ ಸರ್ಕಾರ ಮಾಡುತ್ತಿದೆ: ಖೂಬಾ

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಚೈತ್ರ ಕುಟುಂಬ, ಎರಡು ದಿನದಿಂದ ನಮ್ಮ ಮಗಳು ಊಟ ಮಾಡಿಲ್ಲ. ಅಲ್ಲಿ ನೀರು ಸಹ ಸಿಗುತ್ತಿಲ್ಲ. ಮೊಬೈಲ್ ಸಂಪರ್ಕ ಕಡಿತಗೊಂಡಿದೆ. ದಯವಿಟ್ಟು ನಮ್ಮ ಮಗಳನ್ನು ಹಾಗೂ ರಾಜ್ಯದ ವಿದ್ಯಾರ್ಥಿಗಳನ್ನು ಬೇಗ ಕರೆತನ್ನಿ ಎಂದು ಕೈಮುಗಿದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ನಮ್ಮ ಮಕ್ಕಳು ವಾಸವಿರುವ ಬಿಲ್ಡಿಂಗ್ ಮೇಲೆ ಬಾಂಬ್ ಸ್ಫೋಟವಾಗುತ್ತಿವೆ: ಪೋಷಕರ ಕಣ್ಣೀರು

  • ಭಾರತೀಯರನ್ನು ತಾಯ್ನಾಡಿಗೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಮೋದಿ ಸರ್ಕಾರ ಮಾಡುತ್ತಿದೆ: ಖೂಬಾ

    ಭಾರತೀಯರನ್ನು ತಾಯ್ನಾಡಿಗೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಮೋದಿ ಸರ್ಕಾರ ಮಾಡುತ್ತಿದೆ: ಖೂಬಾ

    ಬೀದರ್: ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ನಾಗರಿಕರನ್ನು ಪ್ರಧಾನಿ ಮೋದಿ ಸರ್ಕಾರ ತಾಯ್ನಾಡಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಬೀದರ್‍ನಲ್ಲಿ ಕೇಂದ್ರ ಸಚಿವ ಭಗವಂತ್ ಖೂಬಾ ತಿಳಿಸಿದ್ದಾರೆ.

    ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಈಗಾಗಲೇ ನಮ್ಮ ಭಾರತೀಯರನ್ನು ಏರ್‍ಲಿಫ್ಟ್ ಮೂಲಕ ಕರೆತರಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಷ್ಯಾ ಹಾಗೂ ಉಕ್ರೇನ್ ಜೊತೆ ಮಾತಾನಾಡಿ ಎಲ್ಲ ನಮ್ಮ ನಾಗರಿಕರನ್ನು ತರುವ ಕೆಲಸ ಮಾಡಲಾಗುತ್ತಿದೆ ಎಂದಿದ್ದಾರೆ.

    ಯುದ್ಧ ನಡೆಯುವ ಸ್ಥಳದಲ್ಲಿ ಏರ್‍ಲಿಫ್ಟ್ ಮಾಡಲು ಕೆಲ ಸಮಸ್ಯೆಗಳು ಆಗುತ್ತವೆ. ಅದಕ್ಕೆ ನಮ್ಮ ಭಾರತೀಯರ ಸುರಕ್ಷಿತೆಗಾಗಿ ಭಾರತ ಸರ್ಕಾರ ಅಲ್ಲಿನ ಸರ್ಕಾರದ ಜೊತೆ ವಿಚಾರಗಳನ್ನು ಹಂಚಿಕೊಳ್ಳುತ್ತಿದೆ. ಯಾವುದೇ ಜೀವಕ್ಕೆ ಹಾನಿಯಾಗದಂತೆ ಈ ಸಮಯದಲ್ಲಿ ಯಾವ ನೀತಿಗಳನ್ನು ಅನುಸರಿಸಬೇಕು, ಅವುಗಳನ್ನು ಅನುಸರಿಸಿ ಭಾರತೀಯರನ್ನು ಕರೆತರುತ್ತೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಕಂಠೀರವ ಸ್ಟುಡಿಯೋ ಆವರಣದಲ್ಲಿ 14 ಅಡಿ ಎತ್ತರದ ಅಂಬರೀಶ್ ಪ್ರತಿಮೆ

    ನಮ್ಮ ಜಿಲ್ಲೆಯ ವೈದ್ಯಕೀಯ ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿಯನ್ನು ವಿದೇಶಾಂಗ ಕಾರ್ಯಾಲಯಕ್ಕೆ ಕಳುಹಿಸಲಾಗಿದೆ. ನಾನು ವಿದೇಶಾಂಗ ಸಚಿವರ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದು, ನಾವು ಎಲ್ಲ ಭಾರತೀಯರ ಕಾಳಜಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.