ನವದೆಹಲಿ: ಆಪರೇಶನ್ ಗಂಗಾ ಕಾರ್ಯಾಚರಣೆಯ ಅಂಗವಾಗಿ ಯುದ್ಧಗ್ರಸ್ಥ ಉಕ್ರೇನ್‍ನಿಂದ ಭಾರತೀಯರನ್ನು ಕರೆತರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ 5ನೇ ಉನ್ನತ ಮಟ್ಟದ ಸಭೆ ನಡೆಸಿದರು.
ಯುದ್ಧ ಪ್ರಾರಂಭವಾದಾಗಿನಿಂದ 18,000 ಕ್ಕೂ ಹೆಚ್ಚು ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ ಎಂದು ಪ್ರಧಾನಿ ಮೋದಿಗೆ ವಿವರಿಸಿದರು. ಒಡೆಸ್ಸಾ ಹಾಗೂ ಸುಮಿ ಪ್ರದೇಶಗಳಲ್ಲಿ ಸಿಲುಕಿರುವ ಭಾರತೀಯರ ಪರಿಸ್ಥಿತಿ ಹಾಗೂ ಅವರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಮಾರ್ಗಗಗಳ ಬಗ್ಗೆ ತಿಳಿಸಿಲಾಯಿತು.
ಸಭೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್, ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಪ್ರಧಾನಿ ಪ್ರಧಾನ ಕಾರ್ಯದರ್ಶಿ ಪಿಕೆ ಮಿಶ್ರಾ, ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ, ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಬಾಹ್ಯಾಕಾಶ ರಾಕೆಟ್‌ನಿಂದ ಅಮೆರಿಕ, ಜಪಾನ್ ಧ್ವಜ ತೆಗೆದು ಭಾರತ ಧ್ವಜ ಉಳಿಸಿಕೊಂಡ ರಷ್ಯಾ- Video Viral
ಉಕ್ರೇನ್ ಗಡಿ ದೇಶಗಳಿಗೆ ಭಾರತದಿಂದ ನಾಲ್ಕು ಕೇಂದ್ರ ಸಚಿವರು ತೆರಳಿದ್ದು, ಇದೀಗ ಭಾರತೀಯರನ್ನು ಕರೆತರುವ ಪ್ರಕ್ರಿಯೆ ಚುರುಕುಗೊಂಡಿದೆ. ಅಧಿಕಾರಿಗಳು ಉಕ್ರೇನ್‍ನ ಉಜ್ಹೋರೋಡ್‍ಗೆ ಸಮೀಪವಿರುವ ವೈಸ್ನೆ ನೆಮೆಕೆಯಲ್ಲಿ ಹೊಸ ಚೆಕ್‍ಪಾಯಿಂಟ್ ಗುರುತಿಸಿದ್ದಾರೆ. ಭಾರತೀಯ ವಿದ್ಯಾರ್ಥಿಗಳಿಗೆ ಹಂಗೇರಿಯ ಬುಡಾಪೆಸ್ಟ್‍ಗೆ ಹೋಗುವ ಬದಲು ಸ್ಲೋವಾಕಿಯಾಗೆ ತೆರಳಲು ಸಲಹೆ ನೀಡಲಾಗಿದೆ. ಭಾರತೀಯರನ್ನು ಕರೆತರಲು ಮಾಡಲಾದ ವ್ಯವಸ್ಥೆಯನ್ನು ಪರೀಕ್ಷಿಸಲು ಕೇಂದ್ರ ಸಚಿವ ಕಿರಣ್ ರಿಜಿಜು ಖುದ್ದಾಗಿ ಸ್ಥಳಕ್ಕೆ ಭೆಟಿ ನೀಡಿದ್ದಾರೆ.
ಮಡಿಕೇರಿ: ಉಕ್ರೇನ್-ರಷ್ಯಾ ದೇಶಗಳ ನಡುವೆ ನಡೆಯುತ್ತಿರುವ ಯುದ್ಧ ಇಂದು 9ನೇ ದಿನಕ್ಕೆ ಕಾಲಿಟ್ಟಿದೆ. ಸಾವಿರಾರು ಭಾರತೀಯರು ಯುದ್ಧ ಪೀಡಿತ ಪ್ರದೇಶವನ್ನು ಕಂಡು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ಮಕ್ಕಳ ಪರಿಸ್ಥಿತಿ ಕಂಡು ಪೋಷಕರು ಕಂಗಾಲು ಆಗಿದ್ದಾರೆ. ಇನ್ನೂ ಕೆಲ ಪೋಷಕರು ಮಕ್ಕಳಿಗೆ ಧೈರ್ಯ ತುಂಬಿ ಯುದ್ಧ ಪೀಡಿತ ಪ್ರದೇಶದಿಂದ ಹೊರಡುವ ಪ್ರಯತ್ನ ಮಾಡಿ ಎಂದು ಹೇಳುತ್ತಿದ್ದಾರೆ. ಇದರಿಂದ ಅಲ್ಲಿರುವ ವಿದ್ಯಾರ್ಥಿಗಳು ಹೈ ರಿಸ್ಕ್ ತೆಗೆದುಕೊಂಡು ತಾಯ್ನಾಡಿಗೆ ಬರಲು ಮುಂದಾಗಿದ್ದಾರೆ.
ಕೊಡಗು ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳು ಹೈ ರಿಸ್ಕ್ ತೆಗೆದುಕೊಂಡು ಉಕ್ರೇನ್ ಖಾರ್ಕಿವ್ ನಗರದಿಂದ ಸ್ವಂತ ರಿಸ್ಕ್ ನಲ್ಲಿ ತಾಯ್ನಾಡಿಗೆ ಆಗಮಿಸಿದ್ದಾರೆ. ಹೌದು, ಫೆಬ್ರವರಿ 23 ರಲ್ಲಿ ಉಕ್ರೇನ್ ರಷ್ಯಾ ದೇಶಗಳಲ್ಲಿ ಆರಂಭವಾದ ಯುದ್ಧ ಇಂದಿಗೂ ಮುಗಿದಿಲ್ಲ. ಎಂಬಿಬಿಎಸ್ ವಿದ್ಯಾಭ್ಯಾಸ ಮಾಡಲು ಹೋದ ಕರ್ನಾಟಕ ವಿದ್ಯಾರ್ಥಿಗಳು ಈ ಯುದ್ಧವನ್ನು ಕಂಡು ಕಂಗಾಲು ಆಗಿದ್ದಾರೆ. ಹೇಗಾದರೂ ಮಾಡಿ ತಮ್ಮ ತಾಯ್ನಾಡಿಗೆ ಹೋಗಬೇಕು ಎಂದು ಕಾಲ್ನಡಿಗೆಯಲ್ಲೇ ಕೆಲ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಇದನ್ನೂ ಓದಿ: ಉತ್ತರಕನ್ನಡದ ಕರಾವಳಿ ಭಾಗಕ್ಕೆ ಬಜೆಟ್‍ನಲ್ಲಿ ಸಿಕ್ಕಿದ್ದೇನು?
ಕೊಡಗು ಜಿಲ್ಲೆಯ 19 ವಿದ್ಯಾರ್ಥಿಗಳ ಪೈಕಿ ಈಗಾಗಲೇ ಜಿಲ್ಲೆಗೆ 4 ವಿದ್ಯಾರ್ಥಿಗಳು ಹೈ ರಿಸ್ಕ್ ತೆಗೆದುಕೊಂಡು ತಮ್ಮ ಊರಿಗೆ ಮರಳಿದ್ದಾರೆ. ಕೊಡಗಿನ ಕುಶಾಲನಗರದ ಇಬ್ಬರು ವಿದ್ಯಾರ್ಥಿಗಳಾದ ಚಂದನ್ ಗೌಡ ಹಾಗೂ ಲಿಖಿತ್ ಹೈ ರಿಸ್ಕ್ ತೆಗೆದುಕೊಂಡು ಜಿಲ್ಲೆಗೆ ಇಂದು ಆಗಮಿಸಿದ್ದಾರೆ. ಅಷ್ಟೇ ಅಲ್ಲದೆ ಉಕ್ರೇನ್ ನಲ್ಲಿ ನಡೆದ ಕರಾಳ ದಿನಗಳ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ನಾವು ಅಲ್ಲಿಂದ ಬರುವಾಗ ನಮ್ಮ ಸ್ವಂತ ರಿಸ್ಕ್ ನಲ್ಲಿ ಬಂದಿದ್ದೇವೆ. ಊಟ ತಿಂಡಿ ಇಲ್ಲದೆ ಸುಮಾರು 16 ಗಂಟೆ ರೈಲಿನಲ್ಲೇ ನಿಂತುಕೊಂಡೆ ಪ್ರಯಾಣ ಮಾಡಿದ್ದೇವೆ. ಉಕ್ರೇನ್‍ನಲ್ಲಿ ಇರುವಾಗ ಅಲ್ಲಿಯ ಯುದ್ಧದ ಭೀಕರತೆ ಬಗ್ಗೆ ನೆನೆಸಿಕೊಂಡರೇ ಈಗಾಲೂ ನಮಗೆ ಭಯವಾಗುತ್ತದೆ. ಅಲ್ಲಿ ನಡೆಯುತ್ತಿದ್ದ ಯುದ್ಧದ ಶಬ್ದಗಳು ಈಗಲೂ ಇಲ್ಲೇ ಯುದ್ಧ ನಡೆಯುತ್ತಿದೆ ಅನಿಸುತ್ತದೆ. ಆ ಶಾಕ್ ನಿಂದ ಹೋರ ಬರಲು ಕೆಲ ದಿನಗಳು ಬೇಕು ಎಂದ ವಿದ್ಯಾರ್ಥಿಗಳು.
ತಮ್ಮ ರೂಂನಲ್ಲಿ ಜೊತೆಯಾಗಿದ್ದ ಮೃತ ನವೀನ್ ಅವರ ಬಗ್ಗೆ ನೆನೆಪು ಮಾಡಿಕೊಂಡು ಇದ್ದಾರೆ ತುಂಬಾ ನೋವು ಆಗುತ್ತದೆ. ಕಳೆದ ಎರಡು ವರ್ಷ ನವೀನ್ ನಾವು ಒಟ್ಟಿಗೆ ಇದ್ದೆವು. ಅವನ ಅಗಲಿಕೆ ಕೂಡ ನಮಗೆ ಬಹಳ ಬೇಸರ ತಂದಿದೆ. ಖಾರ್ಕಿವ್ ಪ್ರದೇಶದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ. ನಮ್ಮ ಯುನಿವರ್ಸಿಟಿ ಪಕ್ಕದ ಸಾಕಷ್ಟು ಯುನಿವರ್ಸಿಟಿಗಳು ಈಗಾಗಲೇ ನಾಮಾವಶೇಷವಾಗಿದೆ. ನಮ್ಮ ಯೂನಿವರ್ಸಿಟಿ ಉಳಿಯುತ್ತೋ ಅನ್ನೋದು ಕೂಡ ಗೊತ್ತಿಲ್ಲಾ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ‘ಕೊನೆಗೂ ಸಾಧಿಸಿದ್ವಿ’ – ರಷ್ಯಾ ಟ್ಯಾಂಕ್ ತೆಗೆದುಕೊಂಡು ಜಾಲಿ ರೈಡ್ ಮಾಡಿದ ಉಕ್ರೇನಿ ಪ್ರಜೆಗಳು!
ಸದ್ಯ ನಾವು ತಾಯ್ನಾಡಿಗೆ ಬಂದಿದ್ದೇವೆ. ಇದು ಬಹಳ ಸಂತೋಷ ತಂದಿದೆ. ನಮ್ಮ ಜೊತೆ ಇರುವ ಅನೇಕ ಸ್ನೇಹಿತರು ಅಲ್ಲಿಯೇ ಇದ್ದಾರೆ. ಅವರು ಬಂದರೆ ಮತ್ತಷ್ಟು ಖುಷಿಯಾಗುತ್ತದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.
ಬೆಂಗಳೂರು: ಉಕ್ರೇನ್‍ನಿಂದ ವಿದ್ಯಾರ್ಥಿಗಳು ಭಾರತದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಪುಟಿನ್ ನಮ್ಮ ಚಿಕ್ಕಪ್ಪ ಇದ್ದಂತೆ. ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡುವುದಿಲ್ಲ. ಮಾಧ್ಯಮಗಳು ಟಿಆರ್‌ಪಿಗಾಗಿ ಯುದ್ಧದ ವರದಿ ಮಾಡುತ್ತಿವೆ ಎಂದು ಹೇಳಿ ವ್ಯಂಗ್ಯಮಾಡಿದ್ದಾರೆ.
ರಷ್ಯಾ ದಾಳಿ ಮಾಡುವ ಸಾಧ್ಯತೆ ಹೆಚ್ಚಿದ್ದ ಕಾರಣ ಉಕ್ರೇನ್‍ನಲ್ಲಿರುವ ಭಾರತದ ರಾಯಭಾರ ಕಚೇರಿ ಫೆ. 15 ರಂದೇ ದೇಶವನ್ನು ತೊರೆಯುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿತ್ತು. ಆದರೆ ವಿದ್ಯಾರ್ಥಿಗಳು ಈ ಸೂಚನೆಯನ್ನು ಧಿಕ್ಕರಿಸಿ ಇಲ್ಲಿ ಏನು ನಡೆಯುವುದಿಲ್ಲ. ನಾವೆಲ್ಲ ನೃತ್ಯ, ಹಾಡನ್ನು ಹಾಡಿ ಎಂಜಾಯ್ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. 2 ವಾರದ ಹಿಂದೆ ಈ ವಿಡಿಯೋ ಅಪ್ಲೋಡ್ ಆಗಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಏನಿದೆ?
ಭಾರತೀಯ ಮೂಲದ ವೈದ್ಯಕೀಯ ವಿಧ್ಯಾರ್ಥಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾನೆ. ವೀಡಿಯೋದಲ್ಲಿ ವಿದ್ಯಾರ್ಥಿಯು ಉಕ್ರೇನ್‍ನವೊಂದು ಪ್ರತಿಷ್ಠಿತ ವೈದ್ಯಕೀಯ ಕಾಲೇಜಿಗೆ ತೆರಳಿದ್ದಾನೆ. ಅಲ್ಲಿಯ ಕೆಲ ಭಾರತೀಯ ವಿದ್ಯಾರ್ಥಿಗಳೊಂದಿಗೆ ಚಿಕ್ ಚಾಟ್ ಮಾಡಿದ ಅವನು, ಉಕ್ರೇನ್‍ನಲ್ಲಿ ನಮಗೆ ಯಾವುದೇ ರೀತಿಯ ಸಮಸ್ಯೆಯಾಗಿಲ್ಲ. ಫೆಬ್ರವರಿ 16ರಿಂದ ನಮಗೆ ಯಾವುದೇ ಸಮಸ್ಯೆ ಆಗಿಲ್ಲ. ನಾವೆಲ್ಲರೂ ಅಂದು ತರಗತಿಗೆ ತೆರಳಿ ಪಾಠ ಕೇಳಿ, ಆರಾಮವಾಗಿ ಮನೆಗೆ ತೆರಳಿ ವಿಶ್ರಾಂತಿ ಪಡೆದಿದ್ದೇವೆ ಸಮಯ ಹೋಗಿದ್ದೇ ಗೊತ್ತಾಗಿಲ್ಲ ಎಂದಿದ್ದಾಳೆ.
ರಷ್ಯಾವು ಉಕ್ರೇನ್‍ನಿಂದ ಟ್ಯಾಂಕರ್‌ಗಳನ್ನು ಹಿಂಪಡೆದ ವಿಚಾರವಾಗಿ ಮಾತನಾಡಿದ ಅವಳು, ಹಾಗೇನಿಲ್ಲ ಮಾಧ್ಯಮಗಳಿಗೆ ಮಾಡೋಕೆ ಬೇರೆನು ಕೆಲಸವಿಲ್ಲ. ಇಂತಹ ಕೆಲ ವಿಚಾರಗಳು ಸಿಕ್ಕರೆ ಟಿಆರ್‌ಪಿಗೋಸ್ಕರ್ ಏನೇನಾದರೂ ಮಾಡತ್ತಾರೆ. ಅವರಿಗೆ ಮಾಡೋಕೆ ಬೇರೆ ಯಾವ ಸುದ್ದಿಯಿಲ್ಲ. ಅದಕ್ಕೆ ಏನೇನೂ ಸುಳ್ಳು ಸುದ್ದಿ ಹಬ್ಬಿಸುತ್ತಾರೆ ಎಂದಳು. ಇದೇ ವೇಳೆ ವೀಡಿಯೋದಲ್ಲಿ ಮತ್ತೋರ್ವ ವಿದ್ಯಾರ್ಥಿನಿ ಮಾತನಾಡಿ, ಎನು ಆಗಿಲ್ಲ ಆದರೆ ಮನೆಯಲ್ಲಿ ಪೋಷಕರು ಸ್ವಲ್ಪ ಭಯಪಡುತ್ತಿದ್ದಾರೆ ಎಂದಳು.
ಮತ್ತೊಬ್ಬ ವಿದ್ಯಾರ್ಥಿ ಮಾತನಾಡಿ, ಉಕ್ರೇನ್‍ನಲ್ಲಿ ಯಾವುದೇ ಯುದ್ಧವೇ ಆಗಿಲ್ಲ. ರಷ್ಯಾದವರು ಉಕ್ರೇನ್ ಮೇಲೆ ದಾಳಿ ನಡೆಸುತ್ತಾರೆಂದು ಕಾಯುತ್ತಾ ಕುಳಿತ್ತಿದ್ದೆವು. ನನಗೆ ಯುದ್ಧ ನೋಡುವ ಆಸೆ ತುಂಬಾ ಇತ್ತು. ರಷ್ಯಾದ ಪುಟಿನ್‍ಗೆ ನಾನು ಕರೆ ಮಾಡಿ ಯುದ್ಧ ಬೇಡ ಎಂದು ಹೇಳಿದ್ದೇನೆ. ಪುಟಿನ್ ನಮ್ಮ ಚಿಕ್ಕಪ್ಪ ಇದ್ದಂತೆ ಎಂದು ವ್ಯಂಗ್ಯವಾಡಿದ್ದಾನೆ.
ಮತ್ತೊಬ್ಬ ವಿದ್ಯಾರ್ಥಿ ಮಾತನಾಡಿ, ಯುದ್ಧ ಏನೋ ನಡಿಯುತ್ತಿದೆ ನಡೆಯಲಿ ಬಿಡಿ. ಮುಖ್ಯವಾಗಿ ಹೇಳುವದಾದರೆ ಇಡೀ ದೇಶವೇ ಇಷ್ಟೊಂದು ಇಕ್ಕಟ್ಟಿನ ಪರಿಸ್ಥಿತಿಯಲ್ಲಿದೆ ಆದರೆ ನಮ್ಮ ವಿಶ್ವವಿದ್ಯಾಲಯದಿಂದ ಯಾರಿಗೆ ಡ್ಯಾನ್ಸ್ ಹಾಗೂ ಹಾಡಲು ಬರುತ್ತೆ ಹೇಳಿ ಎಂದು ಕೆಲವು ಸೂಚನೆಗಳು ಬರುತ್ತಿದ್ದವು ಎಂದು ಹೇಳಿದ್ದಾನೆ. ಅಷ್ಟೇ ಅಲ್ಲದೇ ವೀಡಿಯೋದ ಕೊನೆಯಲ್ಲಿ ಇಲ್ಲಿ ನಮಗೆ ಇಲ್ಲದ ಸಮಸ್ಯೆ ನಿಮಗ್ಯಾಕೆ ಎಂದು ಪ್ರಶ್ನಿಸಿ ಅಹಂಕಾರ ಮೆರೆದಿದ್ದಾರೆ.
ಕಾರವಾರ: ಉಕ್ರೇನ್‍ನ ಖಾರ್ಕಿವ್‍ನಲ್ಲಿ ಸಿಲುಕಿದ್ದ ಉತ್ತರಕನ್ನಡ ಜಿಲ್ಲೆಯ ಮುಂಡಗೋಡಿನ ಸ್ನೇಹಾ ಹೊಸಮನಿ ಇಂದು ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ದೆಹಲಿ ಕರ್ನಾಟಕ ಭವನಕ್ಕೆ ತೆರಳಿದ್ದಾರೆ.
ಸ್ನೇಹಾರೊಂದಿಗೆ 15ಕ್ಕೂ ಅಧಿಕ ಮಂದಿ ಕನ್ನಡಿಗರು ದೆಹಲಿಗೆ ಆಗಮಿಸಿದ್ದು, ಇಂದು ದೆಹಲಿಯಿಂದ ಬೆಂಗಳೂರಿಗೆ ತೆರಳಿ ಭಾನುವಾರ ಊರಿಗೆ ಮರಳಲಿದ್ದಾರೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.
ಸ್ನೇಹಾ ಅವರು ಉಕ್ರೆನ್‍ನ ಖಾರ್ಕಿವ್‍ನಲ್ಲಿ ನಾಲ್ಕನೇ ವರ್ಷದ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದು, ಉಕ್ರೇನ್‍ನ ಖಾರ್ಕಿವ್‍ನಲ್ಲಿ ಸಿಲುಕಿಕೊಂಡಿದ್ದರು. ಕೇಂದ್ರ ಗೃಹ ಇಲಾಖೆ ಹಾಗೂ ಉಕ್ರೇನ್ ಭಾರತೀಯ ರಾಯಭಾರಿ ಕಚೇರಿ ಸೂಚನೆಯಂತೆ ರುಮೇನಿಯಾಕ್ಕೆ ತನ್ನ ಸ್ನೇಹಿತರೊಂದಿಗೆ ಪ್ರಯಾಣ ಬೆಳಸಿದ್ದರು. ರುಮೇನಿಯಾ ಗಡಿಯಿಂದ ಭಾರತಕ್ಕೆ ಮರಳಿರುವ ಅವರು ಭಾನುವಾರ ಮನೆಗೆ ತೆರಳಲಿದ್ದಾರೆ. ಇದನ್ನೂ ಓದಿ: ಮತ್ತೊಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡೇಟು- ಆಸ್ಪತ್ರೆಗೆ ದಾಖಲು
ಕಳೆದ ಒಂದು ವಾರದಿಂದ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸುತ್ತಿದೆ. ಅದರಲ್ಲೂ ಉಕ್ರೇನ್‍ನ ಪ್ರಮುಖ ನಗರಗಳಾದ ಕೀವ್ ಮತ್ತು ಖಾರ್ಕಿವ್ ದಾಳಿಗೆ ತತ್ತರಿಸಿಹೋಗಿದೆ. ಅಲ್ಲಿನ ಭಾರತೀಯ ವಿದ್ಯಾರ್ಥಿಗಳು ಪ್ರಸ್ತುತ ಯುದ್ಧ ಪೀಡಿತ ದೇಶ ಉಕ್ರೇನ್‍ನಿಂದ ಪಲಾಯನ ಮಾಡುತ್ತಿದ್ದಾರೆ. ಭಾರತಕ್ಕೆ ಸುರಕ್ಷಿತವಾಗಿ ಮರಳಲು ಪೋಲೆಂಡ್‍ನ ಗಡಿಯನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಎಂ ಸಿಂಧಿಯಾ, ಕಿರಣ್ ರಿಜಿಜು ಮತ್ತು ಜನರಲ್ (ನಿವೃತ್ತ) ವಿಕೆ ಸಿಂಗ್ ಉಕ್ರೇನ್‍ಗೆ ಹೊಂದಿಕೊಂಡಿರುವ ದೇಶಗಳಲ್ಲಿರುವ ಭಾರತೀಯರನ್ನು ಸ್ಥಳಾಂತರಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದನ್ನೂ ಓದಿ: ನಾನೇನು ಕಚ್ಚುವುದಿಲ್ಲ, ಮತ್ತೇಕೆ ನಿಮಗೆ ಭಯ? – ಪುಟೀನ್‍ಗೆ ವ್ಯಂಗ್ಯ ಮಾಡಿದ ಉಕ್ರೇನ್ ಅಧ್ಯಕ್ಷ
ಇಂದು ಮುಂಜಾನೆ 3 ಗಂಟೆ ಸುಮಾರಿಗೆ ರಷ್ಯಾ ಸೇನೆಯಿಂದ ಜಪೋರಿಝಿಯಾ ಅಣುಸ್ಥಾವರ ಮೇಲೆ ದಾಳಿ ನಡೆದಿದೆ. ಯುರೋಪಿನಲ್ಲಿಯೇ ಅತೀ ದೊಡ್ಡದಾದ ಅಣುಸ್ಥಾವರ ಇದಾಗಿದೆ. ಇದೀಗ ರಷ್ಯಾ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಅಣುಸ್ಥಾವರದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಎನರ್‍ಗೋಡರ್‍ನ ಮೇಯರ್ ಹೇಳಿದ್ದಾರೆ. ಇದನ್ನೂ ಓದಿ: ನಾನೇನು ಕಚ್ಚುವುದಿಲ್ಲ, ಮತ್ತೇಕೆ ನಿಮಗೆ ಭಯ? – ಪುಟೀನ್‍ಗೆ ವ್ಯಂಗ್ಯ ಮಾಡಿದ ಉಕ್ರೇನ್ ಅಧ್ಯಕ್ಷ
Ukraine Foreign Affairs Minister Dmytro Kuleba says, "Russian army is firing from all sides upon Zaporizhzhia NPP, the largest nuclear power plant in Europe. Fire has already broken out. If it blows up, it will be 10 times larger than Chernobyl!" pic.twitter.com/e2eC0vkqQj
ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದ ಕಟ್ಟಡ ಹಾಗೂ ಘಟಕಗಳ ಶತ್ರುಗಳ ನಿರಂತರ ಶೆಲ್ ದಾಳಿಗೊಳಗಾಗಿದ್ದು, ಪರಿಣಾಮವಾಗಿ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರವು ಧಗಧಗಿಸುತ್ತಿದೆ. ಒಂದು ವೇಳೆ ಈ ಅಣುಸ್ಥಾವರ ಸ್ಫೊಟಗೊಂಡರೆ 1986ರ ಚರ್ನೋಬೆಲ್ ದುರಂತಕ್ಕಿಂತ 10 ಪಟ್ಟು ಭೀಕರವಾಗಲಿದೆ. ಇದನ್ನೂ ಓದಿ: ಗಡಿಗಳಲ್ಲಿ ಹೆಣ್ಮಕ್ಕಳ ಮೇಲೆ ಸೈನಿಕರಿಂದ ಹಲ್ಲೆ – ಕರಾಳತೆ ಬಿಚ್ಚಿಟ್ಟ ವಿದ್ಯಾರ್ಥಿನಿಯರು
#Ukraine tells IAEA that fire at site of #Zaporizhzhia Nuclear Power Plant has not affected “essential” equipment, plant personnel taking mitigatory actions: IAEA – International Atomic Energy Agency#RussianUkrainianCrisis
ಸ್ಥಳೀಯ ಪಡೆಗಳು ಮತ್ತು ರಷ್ಯಾದ ಪಡೆಗಳ ನಡುವೆ ಭೀಕರ ಹೋರಾಟ ನಡೆದಿದೆ. ಈ ದಾಳಿಯಲ್ಲಿ ಅಪಾರ ಸಾವು ನೋವುಗಳಾಗಿವೆ. ಇದಕ್ಕೂ ಮೊದಲು ರಷ್ಯಾ ಸೇನೆಯು, ಪರಮಾಣು ಸ್ಥಾವರ ವಶಪಡಿಸಿಕೊಳ್ಳಲು ಹವಣಿಸುತ್ತಿದೆ ಎಂದು ವರದಿಯಾಗಿತ್ತು. ಇದಕ್ಕಾಗಿ ರಷ್ಯಾ ಪಡೆಗಳು ಟ್ಯಾಂಕ್‍ಳೊಂದಿಗೆ ಜಪೋರಿಝಿಯಾ ಪ್ರವೇಶಿಸಿವೆ ಎಂದು ಹೇಳಲಾಗಿತ್ತು.
ಬೆಂಗಳೂರು: ಗಡಿಗಳಲ್ಲಿ ಹೆಣ್ಮಕ್ಕಳ ಮೇಲೆ ದೌರ್ಜನ್ಯ ಆಗುತ್ತಿದೆ. ಗಡಿಗಳಲ್ಲಿ ಸೈನಿಕರೇ ನಮ್ಮ ಮೇಲೆ ದಾಳಿ ಮಾಡಿದ್ರು. ನಮ್ಮ ಮೇಲೆ ಪೆಪ್ಪರ್ ಸ್ಪ್ರೇ ಮಾಡಿದ್ರು. ನಮ್ಮನ್ನು ಗಡಿ ದಾಟದಂತೆ ತಡೆದ್ರು ಎಂದು ಉಕ್ರೇನ್‍ನಿಂದ ವಾಪಸ್ಸಾದ ವಿದ್ಯಾರ್ಥಿನಿಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ವಿದ್ಯಾರ್ಥಿನಿಯರಾದ ಶ್ರೇಯಾ ಹಾಗೂ ಸಿಂಧು ಉಕ್ರೇನ್ ಗಡಿಯಲ್ಲಿನ ಭೀಕರತೆ ಬಿಚ್ಚಿಟ್ಟರು. ಭಾರೀ ಸಂಕಷ್ಟದ ಪರಿಸ್ಥಿತಿಯಲ್ಲಿ ಉಕ್ರೇನ್ ಗಡಿ ದಾಟಿ ಬಂದಿದ್ದೇವೆ. ಭಾರತೀಯ ಎಂಬೆಸಿ, ಅಧಿಕಾರಿಗಳು, ನಮ್ಮ ಸೀನಿಯರ್ಸ್ ಸಹಾಯದಿಂದ ನಾವು ಸೇಫಾಗಿ ಬಂದಿದ್ದೇವೆ ಎಂದರು. ಇದನ್ನೂ ಓದಿ: ಮೆಟ್ರೋ ನಿಲ್ದಾಣವೇ ಟಾರ್ಗೆಟ್ – ಇಲ್ಲಿಯವರೆಗೆ ರಷ್ಯಾ, ಉಕ್ರೇನ್‌ಗೆ ಆದ ನಷ್ಟ ಎಷ್ಟು?
ಖಾರ್ಕೀವ್, ಕೀವ್‍ನಲ್ಲಿರುವ ಭಾರತೀಯರು ಸೇಫಾಗಿ ಬರಲಿ. ಪೋಲೆಂಡ್, ಹಂಗೇರಿ, ರೊಮೇನಿಯಾದಲ್ಲಿ ಹೆಚ್ಚು ದಾಳಿ ಆಗ್ತಿದೆ. ದಯವಿಟ್ಟು ಎಂಬೆಸಿ ಆದಷ್ಟು ಬೇಗ ಅಲ್ಲಿರುವ ಜ್ಯೂನಿಯರ್ಸ್ ಅನ್ನು ಕರೆಸಿಕೊಳ್ಳಿ. ಅವರಿಗೆ ಇನ್ನು ಏನೂ ಗೊತ್ತಿಲ್ಲ. ಟ್ರಾನ್ಸ್‍ಪೋರ್ಟ್‍ಗೆ ಅಂತಿರುವ ಏರ್‍ಪೋರ್ಟ್, ಮೆಟ್ರೋ ಸ್ಟೇಷನ್ ಮೇಲೆ ರಷ್ಯಾ ದಾಳಿ ಮಾಡಿದೆ. ಹಂಗೇರಿ, ರೊಮೇನಿಯಾ ಗಡಿಯಲ್ಲಿ ಹೆಣ್ಮಕ್ಕಳ ಮೇಲೆ ಹಲ್ಲೆ ನಡೆದಿದೆ. ಅವರು ಪೆಪ್ಪರ್ ಸ್ಪ್ರೇ ಮಾಡಿದ್ರು. ನಾವು ಸ್ಲೋವೆಕಿಯಾದಿಂದ ಬಂದ್ವಿ. ಅಲ್ಲಿರುವವರನ್ನು ದಯವಿಟ್ಟು ಬೇಗ ಸುರಕ್ಷಿತವಾಗಿ ಕರೆ ತನ್ನಿ ಎಂದು ಮನವಿ ಮಾಡಿಕೊಂಡರು.
ಕೀವ್: ಉಕ್ರೇನ್ ಮೇಲೆ ರಷ್ಯಾ ಪಡೆಗಳು ರಣಹದ್ದುಗಳಂತೆ ಮುಗಿಬಿದ್ದು ಭಾರೀ ವಿಧ್ವಂಸ ಸೃಷ್ಟಿಸುತ್ತಿವೆ. ಎರಡು ದಿನಗಳಿಂದ ಭಾರೀ ದಾಳಿ ನಡೆಯುತ್ತಿದ್ದು, ರಷ್ಯಾ-ಉಕ್ರೇನ್ ಸೈನಿಕರ ಜೊತೆಗೆ ನಾಗರೀಕರ ಅಪಾರ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ.
ಪ್ರಧಾನ ನಗರಗಳನ್ನು ಗುರಿಯಾಗಿಸಿಕೊಂಡು ರಷ್ಯಾ ಪಡೆಗಳು ದಾಳಿ ಮುಂದುವರೆಸಿವೆ. ಸರ್ಕಾರಿ ಆಸ್ತಿಗಳು, ಕಚೇರಿಗಳ ಜೊತೆ ಜೊತೆಗೆ ಈಗ ಪೌರರನ್ನು ಗುರಿಯಾಗಿಸಿಕೊಂಡು ವಿಧ್ವಂಸಕಾಂಡ ಸೃಷ್ಟಿಸ್ತಿದೆ. ಆಸ್ಪತ್ರೆಗಳು, ಶಾಲೆಗಳನ್ನು ಉಡೀಸ್ ಮಾಡುತ್ತಿದೆ.
ಡ್ರುಬಿ ನರೋದಿವ್ ಮೆಟ್ರೋ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ ನಡೆದು, ಅಪಾರ ಹಾನಿ ಸಂಭವಿಸಿದೆ. ಚೆರ್ನಿಹೀವ್‍ನಲ್ಲಿ ತೈಲಗಾರಗಳನ್ನು ಸ್ಫೋಟಿಸಲಾಗಿದೆ. ಖಾರ್ಕೀವ್ ನಗರದ ಮೇಲೆ ಈಗಲೂ ದಾಳಿ ಮುಂದುವರೆದಿದ್ದು, ಇಡೀ ನಗರ ಸ್ಮಶಾನ ಸದೃಶವಾಗಿದೆ.
ಕೆಲವೆಡೆ ರಷ್ಯಾ ಪಡೆಗಳು, ನಾಗರಿಕರನ್ನು ನೇರವಾಗಿ ಗುಂಡಿಟ್ಟು ಕೊಲ್ಲುತ್ತಿವೆ. ಜನಭಯಭೀತರಾಗಿದ್ದಾರೆ. ಒಬ್ಲಾಸ್ಟ್, ಬಲಾಕ್ಲಿಯಾ, ಲವಿವ್, ಮೈಕೋಲಿವ್ ನಗರಗಳ ಮೇಲೆಯೂ ದಾಳಿಗಳು ಆರಂಭವಾಗಿವೆ. ಕೀವ್ ತೊರೆಯುತ್ತಿರುವ ಪೌರರಿಗೆ ರಷ್ಯಾ ಸೇನೆ ಅಡ್ಡಿಪಡಿಸುತ್ತಿಲ್ಲ ಎನ್ನಲಾಗಿದೆ. ಈವರೆಗೂ 10ಲಕ್ಷಕ್ಕೂ ಹೆಚ್ಚು ಮಂದಿ ಉಟ್ಟಬಟ್ಟೆಯಲ್ಲಿ ಉಕ್ರೇನ್ ತೊರೆದಿದ್ದಾರೆ ಎಂದು ವರದಿಯಾಗಿದೆ.
ಉಕ್ರೇನ್ ತಿರುಗೇಟು:
ರಷ್ಯಾ ಸೇನೆಗೆ ಪ್ರತಿಯಾಗಿ ಉಕ್ರೇನ್ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ರಷ್ಯಾದ ಸುಖೋಯ್ ಎಸ್-30 ಯುದ್ಧ ವಿಮಾನವನ್ನು ಉಕ್ರೇನ್ ಹೊಡೆದುರುಳಿಸಿದೆ. ಜಪೋರಿಷಿಯಾ ಅಣು ಸ್ಥಾವರಕ್ಕೆ ನುಗ್ಗದಂತೆ ರಷ್ಯಾ ಸೇನೆಯನ್ನು ಜನರೇ ತಡೆದಿದ್ದಾರೆ. ಟೈರ್, ಲಾರಿ ಅಡ್ಡ ನಿಲ್ಲಿಸಿ ಹೋರಾಟ ಮಾಡ್ತಿದ್ದಾರೆ.
ಎರಡೂ ಕಡೆಯೂ ಅಪಾರ ನಷ್ಟ ಸಂಭವಿಸಿದೆ. ಉಕ್ರೇನ್‍ಗೆ ಆದ ನಷ್ಟವನ್ನೇ ಮುಂದಿನ ದಿನಗಳಲ್ಲಿ ರಷ್ಯಾ ದೇಶವೇ ತುಂಬಿಕೊಡಬೇಕು ಹಾಗೇ ಮಾಡುತ್ತೇವೆ ಎಂದು ಅಧ್ಯಕ್ಷ ಝೆಲೆನ್‍ಸ್ಕಿ ಗುಡುಗಿದ್ದಾರೆ. ಯುದ್ಧದ ನಂತರ ಉಕ್ರೇನ್ ದೇಶವನ್ನು ಪುನರ್ ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: ಪುಟಿನ್‍ನನ್ನು ಬಂಧಿಸಿದವರಿಗೆ 7.5 ಕೋಟಿ – ರಷ್ಯನ್ ಉದ್ಯಮಿ ಘೋಷಣೆ!
ಉಕ್ರೇನ್‍ಗೆ ಆದ ನಷ್ಟ ಎಷ್ಟು?
2870 ಸೈನಿಕರು ಮೃತಪಟ್ಟಿದ್ದಾರೆ ಎಂದು ರಷ್ಯಾ ಹೇಳಿದ್ದರೆ 2 ಸಾವಿರಕ್ಕೂ ಹೆಚ್ಚು ಪೌರರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಹೇಳಿದೆ.
ರಷ್ಯಾಗೆ ಆದ ನಷ್ಟ ಎಷ್ಟು?
ಉಕ್ರೇನ್ ಪ್ರಕಾರ 9000 ಯೋಧರು ಸಾವನ್ನಪ್ಪಿದ್ದರೆ. 30 ಯುದ್ಧ ವಿಮಾನ, 42 ಎಂಎಲ್‍ಆರ್‌ಎಸ್ ಕ್ಷಿಪಣಿ, 31 ಹೆಲಿಕಾಪ್ಟರ್, 217 ಯುದ್ಧ ಟ್ಯಾಂಕ್ ಧ್ವಂಸವಾಗಿದೆ. ರಷ್ಯಾ ತನ್ನ ಕಡೆ 498 ಸೈನಿಕರು ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.
ಬೆಂಗಳೂರು : 2023ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ನೀಟ್ ನಿಂದ ಕರ್ನಾಟಕ ಹೊರಬರಲು ವಿಧಾನಮಂಡಲದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಕೇಂದ್ರ ಸರ್ಕಾರ ನೀಟ್ ಅನ್ನು ಸಂಪೂರ್ಣವಾಗಿ ರದ್ದು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ನೀಟ್ ಬಂದ ಮೇಲೆ ಬಡ, ಮಧ್ಯಮ ವರ್ಗದ ಮಕ್ಕಳಿಗೆ ಅನ್ಯಾಯ ಆಗಿದೆ. ಆದರೂ ಸರಕಾರ ವಿದ್ಯಾರ್ಥಿಗಳ ಆರ್ತನಾದ ಕೇಳುತ್ತಿಲ್ಲ ಎಂದರೆ ಸಚಿವರು ಮತ್ತು ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ ಎಂದು ಭಾವಿಸಬೇಕಾಗುತ್ತದೆ ಎಂದು ಕಿಡಿಕಾರಿದರು.
ನೀಟ್ ವಿರುದ್ಧ ಮಾತನಾಡಿದವರು ಧನದಾಹಿಗಳು ಹಾಗೂ ದೇಶ ದ್ರೋಹಿಗಳು ಎಂದಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಹಾಗೂ ವೈದ್ಯ ಶಿಕ್ಷಣ ಪಡೆಯಲು ವಿದೇಶಕ್ಕೆ ಹೋದ ವಿದ್ಯಾರ್ಥಿಗಳೆಲ್ಲರೂ ನೀಟ್ ಅರ್ಹತಾ ಪರೀಕ್ಷೆಯಲ್ಲಿ ಫೇಲಾದವರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿರುವುದು ಅಕ್ಷಮ್ಯ ಎಂದು ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ಒಲಿಂಪಿಕ್ಸ್ ಮುಗಿಯುವವರೆಗೆ ಯುದ್ಧವನ್ನು ಮುಂದೆ ಹಾಕಿ ಎಂದಿದ್ದ ಚೀನಾ!
ನಾನು ಅಶ್ವಥ್ ನಾರಾಯಣ ಅವರಿಗೆ ಕೇಳಲು ಬಯಸುತ್ತೇನೆ. ಮಕ್ಕಳು ಇರಲಿ, ಈಗ ಪಿಯುಸಿ ಪಾಠ ಮಾಡುತ್ತಿರುವ ಉಪನ್ಯಾಸಕರಿಂದ ಈಗಿನ ನೀಟ್ ಪರೀಕ್ಷೆ ಬರೆಸಿ. ಅವರಲ್ಲಿ ಎಷ್ಟು ಜನ ಪಾಸಾಗುತ್ತಾರೋ ನೋಡೋಣ. ಇನ್ನು, ನೀಟ್ ಪ್ರಶ್ನೆ ಪತ್ರಿಕೆಯಲ್ಲಿ ವೈದ್ಯ ಶಿಕ್ಷಣಕ್ಕೆ ಪೂರಕವಾದ ಪ್ರಶ್ನೆಗಳೇ ಇರುವುದಿಲ್ಲ ಎಂದು ಅನೇಕರು ಹೇಳುತ್ತಿದ್ದಾರೆ. ಕೆಲಸಕ್ಕೆ ಬಾರದ ಬೇರೆ ಬೇರೆ ವಿಷಯದ ಪ್ರಶ್ನೆಗಳಿರುತ್ತವೆ. ಎಂಸಿಕ್ಯೂ ಪ್ರಶ್ನೆಗಳಲ್ಲಿ ನೆಗೆಟೀವ್ ಅಂಕ ಬೇರೆ ಇರುತ್ತದೆ. ಇಂಥ ಕೆಟ್ಟ ವ್ಯವಸ್ಥೆಯಲ್ಲಿ ನಮ್ಮ ಮಕ್ಕಳು ಸಿಲುಕಿದ್ದಾರೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಲೋಕಸಭೆ ಸ್ಪೀಕರ್ ಅವರ ಕ್ಷೇತ್ರದಲ್ಲಿ ನೀಟ್ ಟ್ಯೂಷನ್ ಅಂಗಡಿಗಳು ನಾಯಿಕೊಡೆಗಳಂತೆ ಮೇಲೆದ್ದಿವೆ. ಅವುಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಿದ್ದಾರೆ. ಉತ್ತರ ಭಾರತದ ಟ್ಯೂಷನ್ ಮಾಫಿಯಾ ನೀಟ್ ಹಿಂದೆ ಇದೆ ಎನ್ನುವ ಅನುಮಾನವಿದೆ ಎಂದು ಮಾಜಿ ಮುಖ್ಯಮಂತ್ರಿಗಳು ತಿಳಿಸಿದರು. ಇದನ್ನೂ ಓದಿ: ರಷ್ಯಾ ಆಯ್ತು ಭಾರತದ ಮೇಲೆ ನಿರ್ಬಂಧ ಹೇರುತ್ತಾ ಅಮೆರಿಕ?
ನೀಟ್ ಕೋಚಿಂಗ್ ಗೆ 2 ಲಕ್ಷ ಏಳೆಂಟು ವಿದ್ಯಾರ್ಥಿಗಳು ನನ್ನ ಬಳಿಗೆ ಬಂದು, ನೀಟ್ ಕೋಚಿಂಗ್ ಗೆ ಸೇರಬೇಕು. ನಾವು ಬಡವರು, 2 ಲಕ್ಷ ರೂಪಾಯಿ ಫೀಸ್ ಕಟ್ಟಬೇಕು. ಸಹಾಯ ಮಾಡಿ ಎಂದು ಕೇಳಿದ್ದಾರೆ. ಅವರಿಗೆ ಸಚಿವ ಅಶ್ವಥ್ ನಾರಾಯಣ ಅವರನ್ನು ಭೇಟಿ ಮಾಡಲು ಆಗಿಲ್ಲ. ಬರೀ ಕೋಚಿಂಗ್ ತೆಗೆದುಕೊಳ್ಳಲಿಕ್ಕೇ 2 ಲಕ್ಷ ಬೇಕಾದರೆ, ಇನ್ನೂ ಇಡೀ ಮೆಡಿಕಲ್ ಕೋರ್ಸ್ ಮುಗಿಸಲಿಕ್ಕೆ ಎಷ್ಟು ಲಕ್ಷ ರೂಪಾಯಿ ಬೇಕು? ಬಡ ಮಕ್ಕಳು ಇಷ್ಟು ಖರ್ಚು ಮಾಡಲು ಸಾಧ್ಯವೇ? ಸತ್ಯ ಹೀಗಿರುವಾಗ ವಿದೇಶಕ್ಕೆ ಹೋದ ಮಕ್ಕಳ ಬಗ್ಗೆ ಲಘುವಾಗಿ ಮಾತನಾಡುವುದು, ನೀಟ್ ವ್ಯವಸ್ಥೆ ಪ್ರಶ್ನಿಸಿದವರನ್ನು ದ್ರೋಹಿಗಳು ಎನ್ನುವುದು ಸರಿಯಲ್ಲ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಎಷ್ಟು ವೈದ್ಯ ಕಾಲೇಜುಗಳಿವೆ, ಅವುಗಳನ್ನು ನಡೆಸುವವರ ಹಿನ್ನೆಲೆ ಏನು? ಸರ್ಕಾರಿ ಕಾಲೇಜುಗಳು ಎಷ್ಟಿವೆ? ಅವುಗಳಲ್ಲಿ ರಾಜ್ಯದ ಎಷ್ಟು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ? ಎನ್ನುವುದನ್ನು ಸರಕಾರ ಹೇಳಬೇಕು. ನಮ್ಮ ಜನರ ತೆರಿಗೆ ಹಣದಲ್ಲಿ ಕಟ್ಟಿದ ಕಾಲೇಜುಗಳಲ್ಲಿ ನೀಟ್ ಪಾಸಾದವರಿಗೆ ಸೀಟು ಕೊಡುತ್ತಾರೆ. ಪಿಯುಸಿಯಲ್ಲಿ 97% ಅಂಕ ಪಡೆದ ನವೀನ್ ಅಂಥವರಿಗೆ ಸೀಟು ಸಿಗಲ್ಲ. ಈ ಕಾರಣಕ್ಕಾಗಿಯೇ ತಮಿಳುನಾಡಿನ ಸ್ಟಾಲಿನ್ ಅವರ ಸರ್ಕಾರ ನೀಟ್ ವಿರುದ್ಧ ಕೈಗೊಂಡ ಕ್ರಮವನ್ನು ಅಭಿನಂದಿಸುವೆ. ಅಲ್ಲಿನ ವಿಧಾನಸಭೆಯಲ್ಲಿ ನೀಟ್ ವಿರುದ್ಧ ಅವಿರೋಧ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ನಮ್ಮ ರಾಜ್ಯದ ಮಕ್ಕಳು ವೈದ್ಯ ಶಿಕ್ಷಣ ಪಡೆಯಲು ಯುಕ್ರೇನ್ , ರಷ್ಯಾ ಅಥವಾ ಫಿಲಿಪ್ಪೀನ್ಸ್ ಗೆ ಹೋಗಬೇಕು. ಏಕೆಂದರೆ ರಾಜ್ಯದಲ್ಲಿ ಮೆಡಿಕಲ್ ಮುಗಿಸಲು ಒಂದೂವರೆ ಕೋಟಿ ರೂಪಾಯಿ ಕಟ್ಟಬೇಕು. ನೀಟ್ ಮೂಲಕ ಅರ್ಹತೆ ಪಡೆದವರೂ ಖಾಸಗಿ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕಾದರೆ ಇಷ್ಟು ಹಣ ತೆರಬೇಕು. ವರ್ಷಕ್ಕೆ 38 ಲಕ್ಷ ರೂಪಾಯಿ ಕಟ್ಟಲೇಬೇಕು. ಬರೀ ಐದು ವರ್ಷದ ಶುಲ್ಕಕ್ಕೆ 1.50ಯಿಂದ 1.75 ಕೋಟಿ ರೂಪಾಯಿ ಬೇಕು. ಬಡ, ಮಾಧ್ಯಮ ವರ್ಗದ ಮಕ್ಕಳಿಗೆ ಇಷ್ಟು ಹಣ ಹೊಂದಿಸಲು ಸಾಧ್ಯವೇ? ಹಾಗಾದರೆ ಆ ಮಕ್ಕಳು ಮೆಡಿಕಲ್ ವ್ಯಾಸಂಗ ಮಾಡಲೇಬಾರದೇ ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ಇಂಥ ಕೆಟ್ಟ ವ್ಯವಸ್ಥೆ ಬಗ್ಗೆ ಮಾತನಾಡುವುದು ದೇಶ ದ್ರೋಹವೇ? ಇದನ್ನು ಉನ್ನತ ಶಿಕ್ಷಣ ಸಚಿವರನ್ನು ಕೇಳಲು ಬಯಸುತ್ತೇನೆ. ಹಾಗೆಯೇ ಪ್ರಹ್ಲಾದ್ ಜೋಷಿ ಹೇಳ್ತಾರೆ, ನಮ್ಮ ದೇಹದಲ್ಲಿ ನೀಟ್ ಫೇಲ್ ಆದವರೆಲ್ಲ ಉಕ್ರೇನ್ ಗೆ ಮೆಡಿಕಲ್ ಮಾಡಲಿಕ್ಕೆ ಹೋಗಿದಾರೆ ಎಂದು. 97% ಅಂಕ ಪಡೆದ ಆ ವಿದ್ಯಾರ್ಥಿಗೆ ಅಷ್ಟು ಅಂಕ ಬಿಟ್ಟಿ ಬಂದಿದೆಯಾ? ಸಾಲ ಸೋಲ ಮಾಡಿ ಮಾಡಿ ಅಲ್ಲಿಗೆ ಕಳಿಸಿ ಇವತ್ತು ಮಗನನ್ನು ಕಳೆದುಕೊಂಡ ಆ ಕುಟುಂಬ ಇವತ್ತು ದುಃಖದಲ್ಲಿದೆ. ಇಂಥ ಹೇಳಿಕೆ ನೀಡುವ ಸಚಿವರಿಗೆ ಜವಾಬ್ದಾರಿ ಬೇಡವೇ? ಎಂದು ಮಾಜಿ ಮುಖ್ಯಮಂತ್ರಿಗಳು ಖಾರವಾಗಿ ಪ್ರತಿಕ್ರಿಯಿಸಿದರು.
ಬೆಂಗಳೂರು: ಉಕ್ರೇನ್‍ನಲ್ಲಿ ಸಂಕಷ್ಟಕ್ಕೆ ಸಿಲುಕಿದ ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ದೂರವಾಣಿ ಮೂಲಕ ಮಾತನಾಡಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು.
ಬೆಂಗಳೂರು ಮೂಲದ ವಿದ್ಯಾರ್ಥಿ ಗಗನ್ ಗೌಡ ಸೇರಿದಂತೆ ಇತರೆ ವಿದ್ಯಾರ್ಥಿಗಳ ಜೊತೆ ಸಿಎಂ ಮಾತನಾಡಿದರು. ಉಕ್ರೇನ್‍ನಲ್ಲಿ ತಮ್ಮ ಪರಿಸ್ಥಿತಿಯನ್ನು ವಿವರಿಸಿದ ವಿದ್ಯಾರ್ಥಿಗಳು, ಖಾರ್ಕಿವ್‍ನಿಂದ 30ಕಿಮೀ ದೂರದ ಪ್ರದೇಶಕ್ಕೆ ನಾವು ನಡೆದುಕೊಂಡು ಬಂದಿದ್ದೇವೆ ಸದ್ಯಕ್ಕೆ ನಾವು ಸುರಕ್ಷಿತವಾಗಿ ಇದ್ದೇವೆ ಎಂದು ಮುಖ್ಯ ಮಂತ್ರಿಗಳಿಗೆ ತಿಳಿಸಿದರು. ಇದನ್ನೂ ಓದಿ: ತಮಿಳುನಾಡಿನ ವಿದ್ಯಾರ್ಥಿಗಳ ರಕ್ಷಣೆಗಾಗಿ ವಿದೇಶಕ್ಕೆ ತೆರಳಲು ಸಿದ್ಧರಾದ ಮೂವರು ಎಂಪಿಗಳು
ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ ಸಿಎಂ, ಈ ಸಂಬಂಧ ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜೊತೆ ಕರ್ನಾಟಕ ಸರ್ಕಾರ ನಿರಂತರವಾಗಿ ಸಂಪರ್ಕದಲ್ಲಿದೆ. ನಿಮಗೆ ಎಲ್ಲ ರೀತಿಯ ಸಹಕಾರ ಸಿಗುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ನಿಮ್ಮನ್ನು ಅಲ್ಲಿಂದ ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಸರ್ವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಇದನ್ನೂ ಓದಿ: ರಷ್ಯಾ ಆಯ್ತು ಭಾರತದ ಮೇಲೆ ನಿರ್ಬಂಧ ಹೇರುತ್ತಾ ಅಮೆರಿಕ?
ರಾಜ್ಯದ 200 ವಿದ್ಯಾರ್ಥಿಗಳು ಖಾರ್ಕಿವ್‍ನಲ್ಲಿ ಇದ್ದಾರೆ. ಈಗಾಗಲೇ ರಾಜ್ಯದ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ವಾಪಸ್ ಕರೆದುಕೊಂಡು ಬರಲಾಗಿದೆ. ಉಳಿದ ಎಲ್ಲಾ ಕನ್ನಡಿಗರನ್ನು ಸುರಕ್ಷಿತವಾಗಿ ಕರೆದುಕೊಂಡು ಬರಲು ಅಗತ್ಯ ಕ್ರಮವಹಿಸುವಂತೆ ಮುಖ್ಯಮಂತ್ರಿಗಳು ನೋಡಲ್ ಅಧಿಕಾರಿಗೆ ಸೂಚನೆ ನೀಡಿದರು. ಅಲ್ಲದೆ ವಿದೇಶಾಂಗ ಸಚಿವರ ಜೊತೆ ನಿರಂತರವಾಗಿ ಮುಖ್ಯಮಂತ್ರಿಗಳು ಸಂಪರ್ಕದಲ್ಲಿ ಇದ್ದು ಆದಷ್ಟು ಬೇಗ ಕನ್ನಡಿಗರ ರಕ್ಷಣೆ ಮಾಡೋದಾಗಿ ವಿದ್ಯಾರ್ಥಿಗಳಿಗೆ ಭರವಸೆಯ ಮಾತುಗಳನ್ನಾಡಿದರು. ಇದನ್ನೂ ಓದಿ: ಉಕ್ರೇನ್‍ನಲ್ಲಿ ಭಾರತೀಯರು ಸಿಲುಕಿರುವಾಗ, ಮೋದಿ ಯುಪಿ ಚುನಾವಣಾ ಸಭೆಗಳಲ್ಲಿ ನಿರತರಾಗಿದ್ದಾರೆ: ಮಮತಾ ಬ್ಯಾನರ್ಜಿ ಕಿಡಿ
ಚೆನ್ನೈ: ರಷ್ಯಾ, ಉಕ್ರೇನ್ ಯುದ್ಧದ ನಡುವೆ ಅಪಾಯದಲ್ಲಿರುವ ತಮಿಳುನಾಡು ಮೂಲದ ವಿದ್ಯಾರ್ಥಿಗಳ ರಕ್ಷಣೆಗೆ ತಮಿಳುನಾಡಿನಿಂದ ವಿದೇಶಕ್ಕೆ ತೆರಳಲು ಮೂವರು ಡಿಎಂಕೆ ಸಂಸದರು ಮತ್ತು ಓರ್ವ ಶಾಸಕ ಮುಂದಾಗಿದ್ದಾರೆ.
ಉಕ್ರೇನ್‍ನಲ್ಲಿರುವ ತಮಿಳುನಾಡಿನ ವಿದ್ಯಾರ್ಥಿಗಳ ರಕ್ಷಣೆಗಾಗಿ ಹಂಗೇರಿ, ರೊಮೇನಿಯಾ ಪೋಲೆಂಡ್ ಮತ್ತು ಸ್ಲೋವಾಕಿಯಾಗೆ ತಮಿಳುನಾಡಿನ ಸಂಸದರಾದ ತಿರುಚಿ ಶಿವ, ಕಲಾನಿಧಿ ವೀರಸಾಮಿ, ಎಂ.ಎಂ ಅಬ್ದುಲ್ಲ, ಶಾಸಕ ಟಿ.ಆರ್.ಬಿ ರಾಜಾ ಮತ್ತು ಐಎಎಸ್ ಅಧಿಕಾರಿಗಳ ತಂಡ ತೆರಳಲು ಸಿದ್ಧವಾಗಿದೆ. ಇದನ್ನೂ ಓದಿ: ಉಕ್ರೇನ್ ವಿರುದ್ಧ ರಷ್ಯಾ ಯುದ್ಧ – ದಕ್ಷಿಣ ಏಷ್ಯಾ ರಾಷ್ಟ್ರಗಳು ಯಾರ ಪರ?
ಉಕ್ರೇನ್‍ನಲ್ಲಿ ತಮಿಳುನಾಡಿನ 5,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇದೀಗ ರಷ್ಯಾ ಘೋಷಿರುವ ಯುದ್ಧದಿಂದಾಗಿ ಉಕ್ರೇನ್‍ನಲ್ಲಿ ಅಪಾಯದಲ್ಲಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ಭಾರತೀಯರ ರಕ್ಷಣೆಗೆ ಮುಂದಾಗಿದೆ. ಆದರೆ ತಮಿಳುನಾಡಿನ ವಿದ್ಯಾರ್ಥಿಗಳು ಸಾಕಷ್ಟು ಮಂದಿ ಅಪಾಯದಲ್ಲಿರುವುದನ್ನು ಅರಿತು ಸ್ಟಾಲಿನ್ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ. ಮೂವರು ಎಂಪಿಗಳು, ಓರ್ವ ಶಾಸಕ ಮತ್ತು ಐಎಎಸ್ ಅಧಿಕಾರಿಗಳ ತಂಡ ಭಾರತದ ರಕ್ಷಣಾ ಕಾರ್ಯಚರಣೆಗೆ ಸಹಕರಿಸಲು ಮತ್ತು ತಮಿಳುನಾಡಿನ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆದುಕೊಂಡು ಬರಲು ಸಹಕರಿಸಲಿದೆ ಎಂದು ತಮಿಳುನಾಡಿನ ಸರ್ಕಾರಿ ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಪುಟಿನ್‍ನನ್ನು ಬಂಧಿಸಿದವರಿಗೆ 7.5 ಕೋಟಿ – ರಷ್ಯನ್ ಉದ್ಯಮಿ ಘೋಷಣೆ!
ಈಗಾಗಲೇ ಸ್ಟಾಲಿನ್ ನೇತೃತ್ವದಲ್ಲಿ ಸಭೆ ಕೂಡ ನಡೆದಿದ್ದು, ತಮಿಳುನಾಡಿನ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಪ್ಲಾನ್ ರೂಪಿಸಿಕೊಂಡಿದೆ. ತಮಿಳುನಾಡು ಸರ್ಕಾರ ಹೆಲ್ಪ್‍ಲೈನ್ ತೆರೆದಿದ್ದು, ಈಗಾಗಲೇ 3 ಸಾವಿರಕ್ಕೂ ಹೆಚ್ಚು ಫೋನ್ ಕಾಲ್, 4 ಸಾವಿರಕ್ಕೂ ಹೆಚ್ಚು ಇ-ಮೇಲ್‍ಗಳನ್ನು ತಮಿಳುನಾಡು ಸರ್ಕಾರ ರಿಸೀವ್ ಮಾಡಿದೆ. ಇಂದು 193 ತಮಿಳುನಾಡು ಮೂಲದ ವಿದ್ಯಾರ್ಥಿಗಳೂ ದೆಹಲಿಗೆ ಬಂದಿಳಿದಿದ್ದಾರೆ ಎಂದು ತಮಿಳುನಾಡು ಸರ್ಕಾರ ಸ್ಪಷ್ಟಪಡಿಸಿದೆ.