Tag: russia

  • ನವೀನ್ ಬೆಳಗ್ಗೆ ನಮ್ಮೊಂದಿಗೆ ಬರುತ್ತಿದ್ದರೆ ಉಳಿಯುತ್ತಿದ್ದ: ಸ್ನೇಹಿತೆ ವರ್ಷಿತಾ

    ನವೀನ್ ಬೆಳಗ್ಗೆ ನಮ್ಮೊಂದಿಗೆ ಬರುತ್ತಿದ್ದರೆ ಉಳಿಯುತ್ತಿದ್ದ: ಸ್ನೇಹಿತೆ ವರ್ಷಿತಾ

    ಕೋಲಾರ: ನವೀನ್ ಬೆಳಗ್ಗೆ 6 ಗಂಟೆಗೆ ನಮ್ಮ ಜೊತೆ ಬರುತ್ತಿದ್ದರೆ ಉಳಿಯುತ್ತಿದ್ದ. 10 ಗಂಟೆಗೆ ನವೀನ್ ಶೆಲ್ ದಾಳಿಯಲ್ಲಿ ಮೃತಪಟ್ಟಿದ್ದಾರೆ ಅನ್ನೋದನ್ನು ಕೇಳಿ ಅತೀವ ದುಃಖವಾಯಿತು ಎಂದು ಉಕ್ರೇನ್‍ನಿಂದ ವಾಪಸ್ ಆದ ಕೋಲಾರದ ವರ್ಷಿತಾ ಬೇಸರ ವ್ಯಕ್ತಪಡಿಸಿದ್ದಾರೆ.

    ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ನವೀನ್ ಒಳ್ಳೆಯ ಸ್ನೇಹಿತರು. ಇಬ್ಬರೂ ವಾಪಸ್ ಭಾರತಕ್ಕೆ ಬರುವ ಬಗ್ಗೆ ಮಾತನಾಡಿಕೊಂಡಿದ್ದವು. ಎಲ್ಲದರಲ್ಲೂ ನವೀನ್ ತುಂಬಾ ಒಳ್ಳೆಯ ಸ್ನೇಹಿತನಾಗಿದ್ದ. ಎಲ್ಲರೊಂದಿಗೆ ಸಂತೋಷದಿಂದ, ತಮಾಷೆ ಮಾಡಿಕೊಂಡು ನಗುನಗುತ್ತಾ ಇರ್ತಿದ್ದ. ನವೀನ್‍ಗೆ ಯಾರೂ ವಿರೋಧಿಗಳಿರಲಿಲ್ಲ. ಎಲ್ಲರೊಂದಿಗೆ ಕುಟುಂಬಸ್ಥರಂತೆ ಬೆರೆಯುತ್ತಿದ್ದ ಎಂದು ಹೇಳಿದರು.

    ನಾನು ರೈಲ್ವೇ ನಿಲ್ದಾಣದಲ್ಲಿದ್ದಾಗ ನವೀನ್ ಇಲ್ಲಾ ಅನ್ನೋ ವಿಷಯ ಕೇಳಿ ದು:ಖವಾಯಿತು. ನನಗೆ ಹೆಚ್ಚಾಗಿ ಉಕ್ರೇನ್‍ನಲ್ಲಿ ಏನೂ ಗೊತ್ತಿರಲಿಲ್ಲ, ಎಲ್ಲವನ್ನೂ ತೋರಿಸಿ ನನ್ನ ಜೊತೆಗಿದ್ದವನು ನವೀನ್. ಇಂದಿಗೂ ನವೀನ್ ಇಲ್ಲಾ ಅನ್ನೋದನ್ನ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಕಣ್ಣೀರು ಹಾಕಿದರು. ಇದನ್ನೂ ಓದಿ: ಚಿಕ್ಕೋಡಿ ಯೋಧನಿಂದ ನಾಲ್ಕು ಯೋಧರಿಗೆ ಗುಂಡು – ಹತ್ಯೆಯ ಹಿಂದಿನ ಕಾರಣ ರಿವೀಲ್

    ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ, ರಾಯಭಾರಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ಪೋಲ್ಯಾಂಡ್ ಗಡಿಯಿಂದ ನಮ್ಮ ಮನೆಯವರೆಗೆ ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ. ಬಾಂಬ್ ದಾಳಿ, ಗುಂಡಿನ ದಾಳಿ ನೋಡಿದರೆ ನಾನು ವಾಪಸ್ ಬರುತ್ತೇನೆ ಅನ್ನೋ ನಂಬಿಕೆ ಇರಲಿಲ್ಲ. ತಂದೆ-ತಾಯಿ ಧೈರ್ಯ ಹೇಳಿದ ಮೇಲೆ ಎಲ್ಲಾ ಕಷ್ಟವನ್ನು ಎದುರಿಸಿಕೊಂಡು ಇಂದು ವಾಪಸ್ಸಾಗಿದ್ದೇನೆ. ಅಷ್ಟು ದೂರದಿಂದ ಇಲ್ಲಿಗೇಕೆ ಬಂದೆ ಎನ್ನಿಸಿತ್ತು. ಆದರೆ ತಂದೆ ಹೇಳಿದ ಧೈರ್ಯದ ಮಾತುಗಳಿಂದ ನಾನು ವಾಪಸ್ಸಾಗಿದ್ದೇನೆ ಎಂದರು.

    ಕೇಂದ್ರ ಸರ್ಕಾರ ಜವಬ್ದಾರಿ ವಹಿಸಿದ್ದಕ್ಕೆ ನಾನು ಇಂದು ಸುರಕ್ಷಿತವಾಗಿ ವಾಪಸ್ಸಾಗಿದ್ದೇನೆ. ಎಲ್ಲ ವ್ಯವಸ್ಥೆಗಳನ್ನು ಮಾಡಿ ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದು ವರ್ಷಿತಾ ತಿಳಿಸಿದರು. ಇದನ್ನೂ ಓದಿ: ಭಾರತೀಯರಿಗೆ ಎರಡು ಮಾರ್ಗ ತೆರೆದ ರಷ್ಯಾ

  • ಅರ್ಧಗಂಟೆ ಸಮಯ ಸಿಕ್ಕರೆ ಅಷ್ಟರಲ್ಲೇ ಭಯದಿಂದ ಅಡುಗೆ ಮಾಡಿ ತಿನ್ನುತ್ತಿದ್ದೆವು: ವಿದ್ಯಾರ್ಥಿನಿ ಅಕ್ಷಿತಾ

    ಅರ್ಧಗಂಟೆ ಸಮಯ ಸಿಕ್ಕರೆ ಅಷ್ಟರಲ್ಲೇ ಭಯದಿಂದ ಅಡುಗೆ ಮಾಡಿ ತಿನ್ನುತ್ತಿದ್ದೆವು: ವಿದ್ಯಾರ್ಥಿನಿ ಅಕ್ಷಿತಾ

    ಮಡಿಕೇರಿ: ಉಕ್ರೇನ್ ಮತ್ತು ರಷ್ಯಾ ದೇಶದ ನಡುವೆ ನಡೆಯುತ್ತಿರುವ ಯುದ್ಧ ಪ್ರಮಾಣ 12 ದಿನವಾದ್ರೂ ಇಂದಿಗೂ ಮುಂದುವರೆದಿದೆ. ಉಕ್ರೇನ್‍ನಲ್ಲಿ ಸಿಲುಕಿರುವ ಸಾವಿರಾರು ವಿದ್ಯಾರ್ಥಿಗಳು ಸಾಕಷ್ಟು ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ವಿದ್ಯಾರ್ಥಿಗಳು ಹೈ ರಿಸ್ಕ್ ತೆಗೆದುಕೊಂಡು ಭಾರತಕ್ಕೆ ಅಗಮಿಸುತ್ತಿದ್ದಾರೆ.

    ಈ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಮಲ್ಲೇನಹಳ್ಳಿಯ ರಮೇಶ್ ಮತ್ತು ಸವಿತಾ ದಂಪತಿ ಮಗಳು ಅಕ್ಷಿತಾ ಸುರಕ್ಷಿತವಾಗಿ ಜಿಲ್ಲೆಗೆ ಆಗಮಿಸಿದ್ದಾರೆ. ಉಕ್ರೇನ್ ನ ಖಾರ್ಕಿವ್ ನಗರದಲ್ಲಿ ಎಂಬಿಬಿಎಸ್ ಓದುತ್ತಿದ್ದ ಅಕ್ಷಿತಾ. ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಎರಡನೇ ವರ್ಷದ ಎಂಬಿಬಿಎಸ್ ಓದುತ್ತಿದ್ದಾರೆ. ಉಕ್ರೇನ್ ಯುದ್ಧ ಅರಂಭವಾದ ಬಳಿಕ ಸಾಕಷ್ಟು ಸಂಕಷ್ಟ ಎದುರಿಸಿ ಮನೆಗೆ ಬಂದ ಮಗಳನ್ನು ಪೋಷಕರು ಅಪ್ಪಿ ಮುದ್ದಾಡಿದ್ದಾರೆ. ಇದನ್ನೂ ಓದಿ: ಮುದ್ದಿನ ಸಾಕುಪ್ರಾಣಿಗಳಾದ ಪ್ಯಾಂಥರ್, ಚಿರತೆ ಇಲ್ಲದೇ ದೇಶಕ್ಕೆ ಮರಳಲ್ಲ: ಭಾರತೀಯ ವೈದ್ಯ

    ಅಕ್ಷಿತಾಳಿಗೆ ಆರತಿ ಬೆಳಗಿ ತಾಯಿ ಸವಿತಾ ಸ್ವಾಗತಿಸಿದ್ದು, ನಂತರ ಸಿಹಿ ತಿನ್ನಿಸಿ ಆನಂದಿಸಿದ ಬಂಧು-ಬಾಂಧವರು. 8 ದಿನಗಳ ಕಾಲ ಘೋರ ಯುದ್ಧಭೂಮಿ ಖಾರ್ಕಿವ್ ನಲ್ಲಿ ಸಿಲುಕಿದ್ದ ಅಕ್ಷಿತಾ ಮಾಧ್ಯಮಗಳೊಂದಿಗೆ ಮಾತಾನಾಡಿದ್ದು, ನಾವು ಬದುಕಿ ಬರುತ್ತೇವೆ ಎಂಬ ನಂಬಿಕೆ ನಮಗೆ ಇರಲಿಲ್ಲ. ಐದೈದು ನಿಮಿಷಕ್ಕೂ ಬಾಂಬಿಂಗ್, ಶೆಲ್ಲಿಂಗ್ ಆಗುತ್ತಿತ್ತು. ಬಾಂಬ್ ಸಿಡಿತ ಮೊರೆತಗಳ ನಡುವೆ ಕಾಲ ಕಳೆಯಬೇಕಾಗಿತ್ತು. ಅಷ್ಟು ದಿನಗಳ ಕಾಲ ಬಂಕರ್‍ನಲ್ಲಿಯೇ ಆಶ್ರಯ ಪಡೆದಿದ್ದು, ಅರ್ಧಗಂಟೆ ಸಮಯ ಸಿಕ್ಕರೆ ಅಷ್ಟರಲ್ಲೇ ಭಯದಿಂದ ಅಡುಗೆ ಮಾಡಿ ತಿನ್ನುತ್ತಿದ್ದೆವು ಎಂದು ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

    ಕೊನೆಗೂ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದೇವೆ. ಲಿವ್ಯುವ್ ಒಂದಷ್ಟು ಸುರಕ್ಷಿತವಾದ ಸ್ಥಳವಾಗಿತ್ತು. ಆದರೆ ಅಲ್ಲಿಗೆ ತಲುಪುವುದಕ್ಕೆ 1500 ಕಿ.ಮೀ ಪ್ರಯಾಣಿಸಬೇಕಾಗಿತ್ತು. ಅಲ್ಲಿಂದ ಪೋಲೆಂಡ್ ಮೂಲಕ ದೆಹಲಿ ತಲುಪಿದ್ದೆವು. ಅದಕ್ಕೆಲ್ಲ ಮೋದಿ ಜೀ ಸರ್ಕಾರ ತುಂಬಾ ಸಹಾಯ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಚಿಕ್ಕೋಡಿ ಯೋಧನಿಂದ ನಾಲ್ಕು ಯೋಧರಿಗೆ ಗುಂಡು – ಹತ್ಯೆಯ ಹಿಂದಿನ ಕಾರಣ ರಿವೀಲ್

  • ಭಾರತೀಯರಿಗೆ ಎರಡು ಮಾರ್ಗ ತೆರೆದ ರಷ್ಯಾ

    ಭಾರತೀಯರಿಗೆ ಎರಡು ಮಾರ್ಗ ತೆರೆದ ರಷ್ಯಾ

    ಕೀವ್: ಈಗಾಗಲೇ ಉಕ್ರೇನ್‍ನ ಪ್ರಮುಖ 4 ನಗರಗಳಲ್ಲಿ ಕದನ ವಿರಾಮ ಘೋಷಣೆಯಾಗಿದ್ದು, ಸುಮಿಯಲ್ಲಿ ಸಿಲುಕಿರುವ ಭಾರತೀಯರಿಗೆ ದೇಶಕ್ಕೆ ಮರಳಲು ರಷ್ಯಾದ 2 ಮಾರ್ಗಗಳನ್ನು ತೆರೆದಿದೆ.

    ಸುಮಿ- ಸುದ್ಝಾ- ಬಲ್ಗ್ರೋಡಾ ಒಂದು ಮಾರ್ಗವಾದರೆ ಮತ್ತೊಂದು ಮಾರ್ಗ ಸುಮಿ-ಗೊಲುಬೊವ್ಕಾ-ರೊಮ್ನಿ-ಲೋಖ್ವಿಟ್ಸಾ-ಲುಬ್ನಿ-ಪೋಲ್ಟವಾ (ಮಧ್ಯ ಉಕ್ರೇನ್)ದ ಮೂಲಕ ತೆರಳಲು ಅವಕಾಶ ನೀಡಿದೆ. ಇದರಿಂದಾಗಿ ಸುಮಿಯಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ಸ್ವಲ್ಪ ರಿಲಿಫ್ ಸಿಕ್ಕಿದೆ.

    ರಷ್ಯಾ ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಸುಮಿ ವಿವಿಯಲ್ಲಿ ಸುಮಾರು 700ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಇವರು ಕಳೆದ 12 ದಿನಗಳಿಂದ ಮೂಲಭೂತ ಸೌಕರ್ಯ ಇಲ್ಲದೇ ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇವರಿಗೆ ತನ್ನ ದೇಶದ ಮೂಲಕ ಹೊಗಲು ಅವಕಾಶ ಮಾಡಿಕೊಟ್ಟಿದೆ. ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ – ಬಂಗಾರದ ಬೆಲೆ ಭಾರೀ ಏರಿಕೆ

    ಸುಮಿ ಪೂರ್ವ ಭಾಗದಲ್ಲಿದೆ. ರೊಮೆನಿಯಾ ಪಶ್ಚಿಮ ಭಾಗದಲ್ಲಿದೆ. ಅಲ್ಲಿ ತೆರಳಲು ಸುಮಿಯಲ್ಲಿರುವ ವಿದ್ಯಾರ್ಥಿಗಳು ಸುಮಾರು 1500 ಕಿಮೀ ಅಧಿಕ ಕ್ರಮಿಸಬೇಕಾಗುತ್ತದೆ. ಯುದ್ಧದ ಹಿನ್ನೆಲೆಯಲ್ಲಿ ಅತ್ಯಲ್ಪ ಸಮಯದಲ್ಲಿ ಅಲ್ಲಿಗೆ ತೆರಳುವುದು ಅಸಾಧ್ಯವಾಗಿದೆ. ಇದರಿಂದಾಗಿ ರೋಮೆನಿಯಾದ ಬದಲು ಸುಮಾರು 50-60 ಕಿಮೀ ದೂರದಲ್ಲಿರುವ ರಷ್ಯಾದಿಂದ ಚಲಿಸಲು ಅವಕಾಶ ಮಾಡಿಕೊಟ್ಟಿದೆ. ಇದನ್ನೂ ಓದಿ: ಉಕ್ರೇನ್‍ನ 4 ನಗರಗಳಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ

    ರಷ್ಯಾ ಭಾರತೀಯ ಕಾಲಮಾನ ಮಧ್ಯಾಹ್ನ 12:30ರಿಂದ ಕದನ ವಿರಾಮ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ರಷ್ಯಾದ ಮೂಲಕ ಸ್ವದೇಶಕ್ಕೆ ಬರುವ ಸಾಧ್ಯತೆಯಿದೆ.

  • ಮುದ್ದಿನ ಸಾಕುಪ್ರಾಣಿಗಳಾದ ಪ್ಯಾಂಥರ್, ಚಿರತೆ ಇಲ್ಲದೇ ದೇಶಕ್ಕೆ ಮರಳಲ್ಲ: ಭಾರತೀಯ ವೈದ್ಯ

    ಮುದ್ದಿನ ಸಾಕುಪ್ರಾಣಿಗಳಾದ ಪ್ಯಾಂಥರ್, ಚಿರತೆ ಇಲ್ಲದೇ ದೇಶಕ್ಕೆ ಮರಳಲ್ಲ: ಭಾರತೀಯ ವೈದ್ಯ

    ಕೀವ್: ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ತೀವ್ರವಾಗುತ್ತಿದ್ದು, ಇಂದು 12ನೇ ದಿನಕ್ಕೆ ಕಾಲಿಟ್ಟಿದೆ. ಈ ಬೆನ್ನಲ್ಲೇ ಉಕ್ರೇನ್ ನಲ್ಲಿ ಹಲವು ಭಾರತೀಯರು ಸಿಕ್ಕಿಹಾಕಿಕೊಂಡಿದ್ದು, ಅವರನ್ನು ಕರೆತರುವ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಂಡಿದೆ. ಈ ನಡುವೆ ಭಾರತೀಯರು ತಮ್ಮ ಸಾಕು ಪ್ರಾಣಿಗನ್ನು ಯುದ್ಧಭೂಮಿಯಲ್ಲಿ ಬಿಟ್ಟುಬರಲು ಮನಸ್ಸಿಲ್ಲದೇ ತಮ್ಮ ಜೊತೆಗೇ ಕರೆದುಕೊಂಡು ಬರುತ್ತಿದ್ದಾರೆ. ಅದರಲ್ಲೂ ಇಲ್ಲೊಬ್ಬ ವೈದ್ಯ ತಾನು ಮುದ್ದಾಗಿ ಸಾಕಿದ ಪ್ಯಾಂಥರ್ ಮತ್ತು ಚಿರತೆಯನ್ನು ಉಕ್ರೇನ್‍ನಲ್ಲಿ ಬಿಟ್ಟು ಭಾರತಕ್ಕೆ ಬರಲು ಹಿಂದೇಟು ಹಾಕಿದ್ದಾನೆ.

    ಡಾನ್‍ಬಾಸ್ ಪ್ರದೇಶದ ಸೆವೆರೊಡೊನೆಟ್ಸ್ಕ್‍ನಲ್ಲಿರುವ ಭಾರತೀಯ ವೈದ್ಯ ಡಾ.ಗಿರಿಕುಮಾರ್ ಪಾಟೀಲ್ ಯುದ್ಧ ಪೀಡಿತ ಉಕ್ರೇನ್‍ನಲ್ಲಿ ಸಿಲುಕಿಕೊಂಡಿದ್ದು, ತನ್ನ ನೆಲಮಾಳಿಗೆಯಲ್ಲಿ ಪ್ಯಾಂಥರ್ ಮತ್ತು ಚಿರತೆ ಸಾಕಿಕೊಂಡಿದ್ದಾರೆ. ಯುದ್ಧದ ಹಿನ್ನೆಲೆ ಗಿರಿಕುಮಾರ್ ಅವರು ತಮ್ಮ ಮನೆಯ ಕೆಳಗಿನ ಬಂಕರ್‍ನಲ್ಲಿ ವಾಸಿಸುತ್ತಿದ್ದಾರೆ. ಯುದ್ಧದ ಹಿನ್ನೆಲೆ ಗಿರಿಕುಮಾರ್ ಅವರನ್ನು ತಮ್ಮ ದೇಶಕ್ಕೆ ಮರಳುವಂತೆ ಅಧಿಕಾರಿಗಳು ಹೇಳಲಾಗಿದೆ. ಆದರೆ ಆವರು ಮಾತ್ರ ತಮ್ಮ ಪ್ರಾಣಿಗಳನ್ನು ಬಿಡಲು ಸಿದ್ಧವಿಲ್ಲ ಎಂದು ಖಡಕ್ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ನಾಯಿ ಬಿಡದಿದ್ದರೆ ನಾನು ಭಾರತಕ್ಕೆ ಬರುತ್ತಿರಲಿಲ್ಲ: ರಂಜಿತ್ ರೆಡ್ಡಿ

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಜೀವವನ್ನು ಉಳಿಸಲು ನಾನು ನನ್ನ ಸಾಕುಪ್ರಾಣಿಗಳನ್ನು ಎಂದಿಗೂ ಬಿಡುವುದಿಲ್ಲ. ಯುದ್ಧದ ಹಿನ್ನೆಲೆ ನನ್ನ ಕುಟುಂಬ ಸಹ ನನ್ನನ್ನು ಹಿಂತಿರುಗುವಂತೆ ಒತ್ತಾಯಿಸುತ್ತಿದೆ. ಆದರೆ ನನ್ನ ಸಾಕುಪ್ರಾಣಿಗಳು ನನ್ನ ಮಕ್ಕಳು. ನಾನು ಅವರೊಂದಿಗೆ ಇರುತ್ತೇನೆ. ನನ್ನ ಕೊನೆಯ ಉಸಿರು ಇರುವವರೆಗೂ ಅವರನ್ನು ರಕ್ಷಿಸುತ್ತೇನೆ ಎಂದು ಭಾವನಾತ್ಮಕವಾಗಿ ತಿಳಿಸಿದ್ದಾರೆ.

    AP doc refuses to abandon 'pet' jaguar, panther; stays behind in Ukraine

    ಡಾ.ಪಾಟೀಲ್ 2007ರಲ್ಲಿ ವೈದ್ಯಕೀಯ ಅಧ್ಯಯನಕ್ಕಾಗಿ ಉಕ್ರೇನ್‍ಗೆ ಹೋಗಿದ್ದು, ಬಳಿಕ ಡಾನ್‍ಬಾಸ್‍ನಲ್ಲೇ ನೆಲೆಸಿದರು. ಅವರು ಅಲ್ಲೇ ಸರ್ಕಾರಿ ಆಸ್ಪತ್ರೆಯಲ್ಲಿ ಮೂಳೆಚಿಕಿತ್ಸಕರಾಗಿ ಸೇರಿಕೊಂಡರು. ಅವರು ಮೃಗಾಲಯದಲ್ಲಿ ಈ ಎರಡು ಪ್ರಾಣಿಗಳನ್ನು ನೋಡಿ ಅಧಿಕಾರಿಗಳ ಅನುಮತಿ ಮೇರೆಗೆ ದತ್ತು ಪಡೆದು ಸಾಕಲು ಪ್ರಾರಂಭಿಸಿದ್ದಾರೆ. ಅಲ್ಲದೆ ಈ ಪ್ರಾಣಿಗಳಿಗೆ ಜಾಗ್ವಾರ್ ಮತ್ತು ಪ್ಯಾಂಥರ್ ಎಂದು ಹೆಸರನ್ನು ಇಟ್ಟಿದ್ದಾರೆ.

    ಜಾಗ್ವಾರ್ ಗೆ 20 ತಿಂಗಳು ಮತ್ತು ಹೆಣ್ಣು ಪ್ಯಾಂಥರ್ ಆರು ತಿಂಗಳು ವಯಸ್ಸಾಗಿದೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ. ಪಾಟೀಲ್ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ತನುಕುಗೆ ಸೇರಿದವರು. ತನ್ನ ಸಾಕುಪ್ರಾಣಿಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಭಾರತ ಸರ್ಕಾರವು ಅವಕಾಶ ನೀಡುತ್ತದೆ ಎಂದು ಪಾಟೀಲ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಂಬ್ಯುಲೆನ್ಸ್​ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ!

  • ನಾಯಿ ಬಿಡದಿದ್ದರೆ ನಾನು ಭಾರತಕ್ಕೆ ಬರುತ್ತಿರಲಿಲ್ಲ: ರಂಜಿತ್ ರೆಡ್ಡಿ

    ನಾಯಿ ಬಿಡದಿದ್ದರೆ ನಾನು ಭಾರತಕ್ಕೆ ಬರುತ್ತಿರಲಿಲ್ಲ: ರಂಜಿತ್ ರೆಡ್ಡಿ

    ನವದೆಹಲಿ: ಆಪರೇಷನ್ ಗಂಗಾ ಮಿಷನ್ ಅಡಿಯಲ್ಲಿ ಕೇಂದ್ರ ಸರ್ಕಾರ ಉಕ್ರೇನ್‍ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತಂದಿದೆ. ಈ ನಡುವೆ ಅನೇಕ ಮಂದಿ ತಮ್ಮ ಅಚ್ಚು-ಮೆಚ್ಚಿನ ಸಾಕು ಪ್ರಾಣಿಗಳನ್ನು ಭಾರತಕ್ಕೆ ಕರೆತಂದಿದ್ದಾರೆ.

    ಸದ್ಯ ಕಾರ್ಕಿವ್‍ನಿಂದ ದೆಹಲಿಗೆ ಬಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ನಿವಾಸಿ ರಂಜಿತ್ ರೆಡ್ಡಿ ಅವರು ಒಂದು ವರ್ಷ ನಾಲ್ಕು ತಿಂಗಳ ಹೈಬ್ರೀಡ್ ನಾಯಿಯನ್ನು ಜೊತೆಗೆ ಕರೆದೊಯ್ದಿದ್ದಾರೆ. ನೋಡಲು ಸಿಂಹದಂತಿರುವ ಈ ಶ್ವಾನವನ್ನು ಭಾರತಕ್ಕೆ ಕರೆದುಕೊಂಡು ಬರಲು ಹರಸಾಹಸ ಪಟ್ಟಿದ್ದಾರೆ. ಈ ಕುರಿತಂತೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ರಂಜಿತ್ ನಾಯಿ ತರಲು ಪಟ್ಟ ಕಷ್ಟವನ್ನು ವಿವರಿಸಿದ್ದಾರೆ. ಇದನ್ನೂ ಓದಿ:  ಮಧ್ಯೆ ಕೆಟ್ಟು ನಿಂತ ಬಸ್ – ರೊಮೆನಿಯಾ ತಲುಪದ 37 ಕನ್ನಡಿಗರು

    ರಂಜಿತ್ ಹೇಳಿದ್ದೇನು?
    ನನಗೆ ಪ್ರಾಣಿಗಳೆಂದರೆ ಬಹಳ ಇಷ್ಟ. ಈ ನಾಯಿಯನ್ನು ನಾನು ಬಹಳ ಇಷ್ಟಪಟ್ಟು ಖರೀದಿಸಿದೆ. ಇದನ್ನು ನಾನು ಉಕ್ರೇನ್‍ನಲ್ಲಿಯೇ ಬಿಟ್ಟು ಬರಲು ಇಷ್ಟವಿರಲಿಲ್ಲ. ನನ್ನ ಜೊತೆ ಒಂದು ವರ್ಷದಿಂದ ಈ ನಾಯಿ ಇದ್ದು, ಇಬ್ಬರಿಗೂ ಒಬ್ಬರನ್ನೊಬ್ಬರು ಬಿಟ್ಟು ಇರಲು ಆಗುವುದಿಲ್ಲ. ಹಾಗಾಗಿ ಹೇಗಾದರೂ ನಾಯಿಯನ್ನು ನನ್ನ ಜೊತೆಗೆ ಕರೆದುಕೊಂಡು ಬರಲೆಬೇಕೆಂದು ನಿರ್ಧರಿಸಿದೆ.

     

    ನಂತರ ಕಾರ್ಕಿವ್‍ನಿಂದ ಗಡಿಗೆ ಮೂರು ದಿನಗಳವರೆಗೆ ಕಾರಿನಲ್ಲಿ ನಾವು ಪ್ರಯಾಣಿಸಿದೆವು. ಬಳಿಕ ನಮ್ಮ ರಾಯಭಾರ ಕಚೇರಿ ಅವರು ಮನುಷ್ಯರಷ್ಟೇ ಅಲ್ಲದೇ ಪ್ರಾಣಿಗಳನ್ನು ಸಹ ಭಾರತಕ್ಕೆ ಕರೆದುಕೊಂಡು ಬರಲು ಸಹಾಯ ಮಾಡಿದರು. ಸಚಿವ ಹಾರ್ದಿಕ್ ಸಿಂಗ್ ಪೂರಿ ಅವರು ನಾಯಿಯನ್ನು ಕರೆದುಕೊಂಡು ಬರಲು ನಮಗೆ ಬಹಳ ಸಹಾಯ ಮಾಡಿದರು. ಒಂದು ವೇಳೆ ನಾಯಿ ಬರಲು ಅವಕಾಶ ನೀಡದಿದ್ದರೆ ನಾನು ಸಹ ಭಾರತಕ್ಕೆ ಬರುತ್ತಿರಲಿಲ್ಲ. ಇದನ್ನೂ ಓದಿ :ಜೇಮ್ಸ್ ಅಪ್ಪು ನಟನೆಯ ಕೊನೆ ಸಿನಿಮಾವಲ್ಲ: ಜೇಮ್ಸ್ ನಂತರವೂ ಮತ್ತೊಂದು ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್

    ಯುದ್ಧದ ಸಂದಭದಲ್ಲಿ ಜನರನ್ನು ಸ್ಥಳಾಂತರಿಸುವ ವಿಮಾನದಲ್ಲಿ ಪ್ರಾಣಿಗಳನ್ನು ತರಲು ಅವಕಾಶವಿಲ್ಲ. 3 ಜನರ ಜಾಗ ನಾಯಿಗೆ ಬೇಕಿದ್ದ ಕಾರಣ ಎರಡು ವಿಮಾನವನ್ನು ಬಿಟ್ಟಿದ್ದೆ. ಈ ವೇಳೆ ನಾಯಿ ಮತ್ತು ನಾನು ಕೆಳಗಡೆ ಕುಳಿತುಕೊಂಡು ಬರುತ್ತೇನೆ ಎಂದು ಹೇಳಿದ್ದೆ. ಕೊನೆಗೆ ಸಚಿವರು ವಿಶೇಷ ಮನವಿ ಮಾಡಿ ವಿಮಾನದ ಮೂಲಕ ಬರಲು ಸಹಾಯ ಮಾಡಿದರು.

    ಇದೊಂದು ಒರಿಜಿನಲ್ ಚೌಚೌ ಬ್ರಿಡ್. ಇದರ ಒಂದು ಮರಿ 1 ಲಕ್ಷ ರೂ. ಅಥವಾ 2 ಲಕ್ಷ ರೂ.ಗಳಷ್ಟು ಬೆಲೆ ಬಾಳುತ್ತದೆ. ಲಂಡನ್‍ನಲ್ಲಿ ಈ ನಾಯಿಯ ಬೆಲೆ 3-4 ಲಕ್ಷ ಆಗಿದ್ದು, ಹಲವಾರು ಮಂದಿ ನಾಯಿಯನ್ನು ತಮಗೆ ಮಾರುವಂತೆ ಕೇಳಿದರು. ಆದರೆ ನಾನು ಯಾರಿಗೂ ನೀಡಲಿಲ್ಲ. ಈ ಶ್ವಾನ ದಿನಕ್ಕೆ 5 ರಿಂದ 10 ಬಾರಿ ಊಟ ಮಾಡುತ್ತದೆ. ಅದರಲ್ಲಿಯೂ ಮೊಟ್ಟೆ, ರೈಸ್ ಬಹಳ ಇಷ್ಟ ಎಂದು ತಿಳಿಸಿದರು.

    ಇದೇ ವೇಳೆ ಉಕ್ರೇನ್ ಪರಿಸ್ಥಿತಿ ಕಣ್ಣಲ್ಲಿ ನೀರು ತರಿಸುವಂತಿದ್ದು, ಉಕ್ರೇನ್ ಪರಿಸ್ಥಿತಿ ಸುಧಾರಿಸಲು ಇನ್ನೂ 3 ಅಥವಾ 6 ತಿಂಗಳು ಬೇಕಾಗುತ್ತದೆ ಎಂದರು. ನಂತರ ನವೀನ್ ಸಾವಿನ ಕುರಿತಂತೆ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ : ಕಬ್ಜ ಟೀಮ್ ಸೇರಿಕೊಂಡ ಶ್ರೀಯಾ ಶರಣ್ : ಉಪೇಂದ್ರಗೆ ಶ್ರೀಯಾ ನಾಯಕಿ?

  • ಉಕ್ರೇನ್‍ನ 4 ನಗರಗಳಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ

    ಉಕ್ರೇನ್‍ನ 4 ನಗರಗಳಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ

    ಕೀವ್: ರಷ್ಯಾ ಎರಡನೇ ಬಾರಿಗೆ ಉಕ್ರೇನ್‍ನಲ್ಲಿ ತಾತ್ಕಾಲಿಕವಾಗಿ ಕದನ ವಿರಾಮ ಘೋಷಿಸಿದ್ದು, ಕೀವ್, ಖಾರ್ಕಿವ್, ಸುಮಿ, ಮರಿಯುಪೋಲ್‍ನ ಜನರಿಗೆ ನಗರವನ್ನು ಬಿಟ್ಟು ತೆರಳಲು ಸೂಚಿಸಿದೆ.

    ರಷ್ಯಾ ಉಕ್ರೇನ್‍ನ ಮೇಲೆ ನಡೆಸುತ್ತಿರುವ ದಾಳಿ 12ನೇ ದಿನಕ್ಕೆ ಕಾಲಿಟ್ಟಿದ್ದು, ಎರಡನೇ ಬಾರಿಗೆ 4 ನಗರಗಳಲ್ಲಿ ಕದನ ವಿರಾಮ ಘೋಷಣೆ ಮಾಡಿದೆ. ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 12:30ನಂತರ ತಾತ್ಕಾಲಿಕವಾಗಿ ಕದನ ವಿರಾಮ ಘೋಷಣೆ ಮಾಡಿದೆ.

    ಫ್ರಾನ್ಸ್ ಅಧ್ಯಕ್ಷರ ಸೂಚನೆ ಮೇರೆಗೆ ಕದನ ವಿರಾಮ ಘೋಷಿಸಲಾಗಿದೆ. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಕದನ ವಿರಾಮಕ್ಕೆ ವೈಯಕ್ತಿಕವಾಗಿ ಕೋರಿಕೆಯನ್ನು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ 4 ನಗರಗಳಲ್ಲಿ ಕದನ ವಿರಾಮವನ್ನು ಘೋಷಿಸಿ, ನಾಗರಿಕರನ್ನು ತೆರಳುವಂತೆ ಸೂಚಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ಕನದ ವಿರಾಮದ ನಂತರದಲ್ಲಿ ಉಕ್ರೇನ್‍ನ ಈ 4 ನಗರಗಳಲ್ಲಿ ರಷ್ಯಾ ಭಾರೀ ದಾಳಿ ನಡೆಸುವ ಸಾಧ್ಯತೆಯಿದೆ. ಇದನ್ನೂ ಓದಿ: ಮಧ್ಯೆ ಕೆಟ್ಟು ನಿಂತ ಬಸ್ – ರೊಮೆನಿಯಾ ತಲುಪದ 37 ಕನ್ನಡಿಗರು

    ಈಗಾಗಲೇ ಉಕ್ರೇನ್‍ನ ಅಣು ವಿದ್ಯುತ್ ಸ್ಥಾವರಗಳ ಮೇಲೆ ರಷ್ಯಾ ದಾಳಿ ಮಾಡಿದ್ದು, ಅಣು ವಿದ್ಯುತ್ ಸ್ಥಾವರಗಳ ಮೇಲೆ ದಾಳಿಯಿಂದ ದೊಡ್ಡ ಪ್ರಮಾದ ಉಂಟಾಗಿದೆ. ಚೆರ್ನೋಬಿಲ್, ಝಫೋರಿಝೀಯಾ ಎರಡು ಸ್ಥಾವರಗಳನ್ನು ರಷ್ಯಾ ಕೈವಶ ಮಾಡಿಕೊಂಡಿದೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಯುದ್ಧ – 14 ವರ್ಷದ ಬಳಿಕ ಕಚ್ಚಾತೈಲ ಬೆಲೆ ಭಾರೀ ಏರಿಕೆ

  • ರಷ್ಯಾ, ಉಕ್ರೇನ್ ಯುದ್ಧ – 14 ವರ್ಷದ ಬಳಿಕ ಕಚ್ಚಾತೈಲ ಬೆಲೆ ಭಾರೀ ಏರಿಕೆ

    ರಷ್ಯಾ, ಉಕ್ರೇನ್ ಯುದ್ಧ – 14 ವರ್ಷದ ಬಳಿಕ ಕಚ್ಚಾತೈಲ ಬೆಲೆ ಭಾರೀ ಏರಿಕೆ

    ಲಂಡನ್: ಉಕ್ರೇನ್ ಮತ್ತು ರಷ್ಯಾ ಯುದ್ಧದಿಂದಾಗಿ ಬ್ರೆಂಟ್ ಕಚ್ಚಾ ತೈಲದ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದೆ. ಸೋಮವಾರ 1 ಬ್ಯಾರಲ್‍ಗೆ 130 ಡಾಲರ್ (10,006 ರೂ.) ಆಗಿದ್ದು, ಇದೇ ಮೊದಲ ಬಾರಿಗೆ ಕಳೆದ 14 ವರ್ಷಗಳಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ.

    ಈಗಾಗಲೇ ರಷ್ಯಾ, ಉಕ್ರೇನ್ ಯುದ್ಧ ಜಾಗತೀಕ ಮಟ್ಟದಲ್ಲಿ ಸಾಕಷ್ಟು ಪರಿಣಾಮ ಬೀರುತ್ತಿದೆ. ಜೊತೆಗೆ ವಿಶ್ವ ಮಟ್ಟದಲ್ಲಿ ಕಚ್ಚಾ ತೈಲ ಪೂರೈಕೆ ಮೇಲೆ ಅಗಾಧ ಪರಿಣಾಮ ಬೀರಿದ್ದು, ದರ ಶೇ.7 ರಷ್ಟು ಅಧಿಕ ಏರಿಕೆಯಾಗಿದೆ. ಈ ಏರಿಕೆಯು 2008ರ ಜುಲೈ ನಂತರ ಇದು ಅತ್ಯಧಿಕ ಮಟ್ಟದಲ್ಲಿ ಏರಿಕೆಯಾಗಿದೆ. 2008ರಲ್ಲಿ 143 ಡಾಲರ್(10,991 ರೂ.) ಏರಿಕೆಯಾಗಿತ್ತು.

    ಈ ಹಿಂದೆ ಬ್ರೆಂಟ್ ಕಚ್ಚಾ ತೈಲದ ಬೆಲೆಯು 2013ರ ಫೆಬ್ರವರಿಯಲ್ಲಿ ಮೊದಲ ಬಾರಿಗೆ ಒಂದು ಬ್ಯಾರೆಲ್‍ಗೆ 119 ಡಾಲರ್ (9,144 ರೂ.) ಏರಿಕೆಯಾಗಿತ್ತು. ಇದು ಈವರೆಗೆ ಗರಿಷ್ಠ ಮಟ್ಟದ ಏರಿಕೆಯಾಗಿತ್ತು. ಕಳೆದ ಬುಧವಾರ 1 ಬ್ಯಾರಲ್‍ಗೆ 113 ಡಾಲರ್‌ಗೆ (8,565 ರೂಪಾಯಿ) ಏರಿಕೆಯಾಗಿತ್ತು.

    ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಸ್ಥಿರಗೊಳಿಸುವ ಯತ್ನದಲ್ಲಿ ಮಿತ್ರರಾಷ್ಟ್ರಗಳೊಂದಿಗೆ ತನ್ನ ಆಯಾಕಟ್ಟಿನ ಮೀಸಲುಗಳಿಂದ ಅಮೆರಿಕ ಸುಮಾರು 60 ಮಿಲಿಯನ್ ಬ್ಯಾರಲ್ ಬಿಡುಗಡೆ ಮಾಡಿದೆ. ಆದರೂ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗಿದೆ. ಇದನ್ನೂ ಓದಿ: ರಷ್ಯಾ- ಉಕ್ರೇನ್‌ ಯುದ್ಧ: ಕಚ್ಚಾ ತೈಲ ಬೆಲೆ ಭಾರೀ ಏರಿಕೆ

    ತೈಲದ ಜಾಗತಿಕ ಬೆಲೆ ಏರಿಕೆಯು ಭಾರತದ ಮೇಲೆ ಪರಿಣಾಮ ಬೀರಲಿದೆ. ಭಾರತ ತನ್ನ ಅಗತ್ಯಗಳಲ್ಲಿ ಶೇ.85 ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಇದು ಭಾರತದ ಹಣದುಬ್ಬರದ ಒತ್ತಡಕ್ಕೆ ಕಾರಣವಾಗಬಹುದು. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಬಹುದು.

    ಕಳೆದ ನವೆಂಬರ್‌ನಲ್ಲಿ ಪೆಟ್ರೋಲ್-ಡೀಸೆಲ್ ಮೇಲಿನ ಸುಂಕವನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿತ್ತು. ಬಳಿಕ ತೈಲ ದರ ಪರಿಷ್ಕರಣೆಯಾಗಿಲ್ಲ. ಇದೀಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗುತ್ತಿದ್ದರೂ ತೈಲ ಮಾರಾಟ ಕಂಪನಿಗಳು ಪಂಚ ರಾಜ್ಯಗಳ ಚುನಾವಣೆ ಕಾರಣಕ್ಕೆ ದರ ಏರಿಕೆಯನ್ನು ತಡೆ ಹಿಡಿದಿವೆ. ಇದನ್ನೂ ಓದಿ: 100 ಡಾಲರ್ ಗಡಿಯಲ್ಲಿ ಕಚ್ಚಾ ತೈಲ – ಭಾರೀ ಬೆಲೆ ಏರಿಕೆ ಸಾಧ್ಯತೆ

  • ರಾಹುಲ್ ಗಾಂಧಿ ಟ್ವೀಟ್‍ಗಳು ಸುಳ್ಳಿನಕಂತೆ: ಕೇಂದ್ರ ಸಚಿವ

    ರಾಹುಲ್ ಗಾಂಧಿ ಟ್ವೀಟ್‍ಗಳು ಸುಳ್ಳಿನಕಂತೆ: ಕೇಂದ್ರ ಸಚಿವ

    ಪಾಟ್ನಾ: ರಾಹುಲ್ ಗಾಂಧಿ ಅವರು ಮಾಡಿದ ಟ್ವೀಟ್‍ಗೆ ಅರ್ಥವಿಲ್ಲ ಹಾಗೂ ಇದೊಂದು ಸುಳ್ಳಿನಕಂತೆ ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ಕಿಡಿಕಾರಿದರು.

    ಉಕ್ರೇನ್‍ನಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವ ಕುರಿತು ರಾಹುಲ್ ಗಾಂಧಿ ಮಾಡಿದ್ದ ಟ್ವೀಟ್‍ಗಳಿಗೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ಮೋದಿ ಅವರು ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸುತ್ತಿರುವ ಕಾರ್ಯವನ್ನು ಜನರು ಮೆಚ್ಚುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಎಲ್ಲರೂ ಭಾರತದತ್ತ ನೋಡುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಈ ಹಿಂದೆ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಉಕ್ರೇನ್‍ನಲ್ಲಿ ನಡೆಯುತ್ತಿರುವ ರಷ್ಯಾ ದಾಳಿಯ ನಡುವೆ ಸಿಲುಕಿರುವ ಭಾರತೀಯರನ್ನು ದೇಶಕ್ಕೆ ಮರಳಿ ತರಲು ಪ್ರಾರಂಭಿಸಲಾದ ಆಪರೇಷನ್ ಗಂಗಾ ಕುರಿತು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದನ್ನೂ ಓದಿ: ಉಕ್ರೇನ್‌ ದೇಶವಾಗಿ ಉಳಿಯುವುದೇ ಅನುಮಾನ: ಪುಟಿನ್‌ ನೇರ ಎಚ್ಚರಿಕೆ

    ಯುದ್ಧ ಪೀಡಿತ ಉಕ್ರೇನ್‍ನಲ್ಲಿ ಶೌಚಾಲಯಗಳನ್ನು ಸ್ವಚ್ಛಗೊಳಿಸುವಂತೆ ಭಾರತೀಯ ವಿದ್ಯಾರ್ಥಿಗಳಿಗೆ ಆದೇಶಿಸಲಾಗಿದೆ. ಅಸಹಾಯಕ ವಿದ್ಯಾರ್ಥಿಗಳ ಜೊತೆಗೆ ಇಂತಹ ನಾಚಿಕೆಗೇಡಿನ ವರ್ತನೆ ಇಡೀ ದೇಶಕ್ಕೆ ಮಾಡಿದ ಅವಮಾನ. ಆಪರೇಷನ್ ಗಂಗಾದ ಈ ಕಹಿ ಸತ್ಯವು ಮೋದಿ ಸರ್ಕಾರದ ನೈಜ ಮುಖವನ್ನು ತೆರೆದಿಟ್ಟಿದೆ ಎಂದು ಟೀಕಿಸಿದ್ದರು.

    ರಷ್ಯಾ ಆಕ್ರಮಣದ ಹಿನ್ನೆಲೆಯಲ್ಲಿ ಉಕ್ರೇನ್ ವಾಯುಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ಉಕ್ರೇನ್‍ನ ನೆರೆ ದೇಶಗಳಾದ ನಿಯಾ, ಹಂಗೆರಿ, ಸ್ಲೋವಾಕಿಯಾ ಮತ್ತು ಪೋಲೆಂಡ್‍ನಿಂದ ಭಾರತೀಯರನ್ನು ತೆರವುಗೊಳಿಸಲಾಗುತ್ತಿದೆ. ಈ ಕಾರ್ಯಾಚರಣೆಗೆ ಆಪರೇಷನ್ ಗಂಗಾ ಎಂದು ಹೆಸರಿಡಲಾಗಿದೆ.

    ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ರಕ್ಷಿಸಲು ಆಪರೇಷನ್ ಗಂಗಾ ಅಡಿಯಲ್ಲಿ ವಿಶೇಷ ವಿಮಾನಗಳು ಪ್ರಾರಂಭವಾದಾಗಿನಿಂದ 15,900ಕ್ಕೂ ಹೆಚ್ಚು ಭಾರತೀಯರನ್ನು ಮರಳಿ ಕರೆತರಲಾಗಿದೆ. ಇದನ್ನೂ ಓದಿ: ಉಕ್ರೇನ್‍ನಿಂದ ಮರಳಿದ ವಿದ್ಯಾರ್ಥಿಗಳಿಗೆ ಸೀಟ್ ನೀಡಿ ಶುಲ್ಕವನ್ನು ಸರ್ಕಾರವೇ ಭರಿಸಲಿ: ದಿಗ್ವಿಜಯ್ ಸಿಂಗ್

  • ಉಕ್ರೇನ್‍ನಿಂದ ಮರಳಿದ ವಿದ್ಯಾರ್ಥಿಗಳಿಗೆ ಸೀಟ್ ನೀಡಿ ಶುಲ್ಕವನ್ನು ಸರ್ಕಾರವೇ ಭರಿಸಲಿ: ದಿಗ್ವಿಜಯ್ ಸಿಂಗ್

    ಉಕ್ರೇನ್‍ನಿಂದ ಮರಳಿದ ವಿದ್ಯಾರ್ಥಿಗಳಿಗೆ ಸೀಟ್ ನೀಡಿ ಶುಲ್ಕವನ್ನು ಸರ್ಕಾರವೇ ಭರಿಸಲಿ: ದಿಗ್ವಿಜಯ್ ಸಿಂಗ್

    ಭೋಪಾಲ್: ಯುದ್ಧ ಪೀಡಿತ ಉಕ್ರೇನ್‍ನಿಂದ ತಾಯ್ನಾಡಿಗೆ ಮರಳಿದ ವಿದ್ಯಾರ್ಥಿಗಳಿಗೆ ಭಾರತದ ವಿವಿಧ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡಲು ಪ್ರವೇಶ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಸಂಸದ ದಿಗ್ವಿಜಯ್ ಸಿಂಗ್ ಪತ್ರ ಬರೆದಿದ್ದಾರೆ.

    ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ ದಿಗ್ವಿಜಯ್ ಸಿಂಗ್ ಅವರು, ಉಕ್ರೇನ್ ಮೂಲದ ವೈದ್ಯಕೀಯ ಕಾಲೇಜುಗಳಲ್ಲಿ ಓದಲು ಈಗಾಗಲೇ ಈ ವಿದ್ಯಾರ್ಥಿಗಳ ಪೋಷಕರು ಸಾಕಷ್ಟು ಹಣವನ್ನು ಖರ್ಚು ಮಾಡಿದ್ದಾರೆ ಮತ್ತು ಅಂತಹ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರ ಭರಿಸಬೇಕೆಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‌ ದೇಶವಾಗಿ ಉಳಿಯುವುದೇ ಅನುಮಾನ: ಪುಟಿನ್‌ ನೇರ ಎಚ್ಚರಿಕೆ

    ದೇಶ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಯುಕ್ರೇನ್‍ನಿಂದ ವಾಪಸ್ಸಾದ ವೈದ್ಯಕೀಯ ವಿದ್ಯಾರ್ಥಿಗಳಿಗೆ ದೇಶದ ವಿವಿಧ ಖಾಸಗಿ ಮತ್ತು ಸರ್ಕಾರಿ ಕಾಲೇಜುಗಳಲ್ಲಿ ಎಂಬಿಬಿಎಸ್ ಕೋರ್ಸ್‍ಗಳನ್ನು ಮಾಡಲು ಪ್ರವೇಶ ನೀಡಲು ಕೇಂದ್ರವು ವಿಶೇಷ ಯೋಜನೆಯನ್ನು ರೂಪಿಸಬೇಕು ಎಂದು ತಿಳಿಸಿದ್ದಾರೆ.

    ರಷ್ಯಾದ ದಾಳಿಯಿಂದಾಗಿ ಉಕ್ರೇನ್‍ನ ವಿವಿಧ ವೈದ್ಯಕೀಯ ಕಾಲೇಜುಗಳು ಮತ್ತು ಸಂಸ್ಥೆಗಳು ಈಗಾಗಲೇ ನಾಶವಾಗಿವೆ. ಈ ನಿಟ್ಟಿನಲ್ಲಿ ಕೇಂದ್ರವು ನಿರ್ಧಾರ ತೆಗೆದುಕೊಂಡು ಈ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಅನಿಶ್ಚಿತತೆಯನ್ನು ಹೋಗಲಾಡಿಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಗಟ್ಸ್ ಇಲ್ಲ ಅನ್ನೋರು ಮೊದಲು ಉಕ್ರೇನ್ ಗಡಿವರೆಗೆ ತಲುಪಿ ಧಮ್ ತೋರಿಸಬೇಕಿತ್ತು: ಸುಜಯ್

  • ಉಕ್ರೇನ್‌ ದೇಶವಾಗಿ ಉಳಿಯುವುದೇ ಅನುಮಾನ: ಪುಟಿನ್‌ ನೇರ ಎಚ್ಚರಿಕೆ

    ಉಕ್ರೇನ್‌ ದೇಶವಾಗಿ ಉಳಿಯುವುದೇ ಅನುಮಾನ: ಪುಟಿನ್‌ ನೇರ ಎಚ್ಚರಿಕೆ

    ಮಾಸ್ಕೋ: ಉಕ್ರೇನ್‌ ರಾಜ್ಯತ್ವ(ಸ್ಟೇಟ್‌ಹುಡ್‌) ಅಪಾಯದಲ್ಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ನೇರವಾದ ಎಚ್ಚರಿಕೆ ನೀಡಿದ್ದಾರೆ.

    ಉಕ್ರೇನ್‌ ದೇಶದವರು ಈಗ ಏನು ಮಾಡುತ್ತಿದ್ದಾರೋ ಅದನ್ನು ಮುಂದುವರಿಸಿದರೆ ದೇಶವಾಗಿ ಉಳಿಯವುದು ಅನುಮಾನ. ಹಾಗೆ ಏನಾದರೂ ಆದರೆ ಉಕ್ರೇನಿಗರೇ ಕಾರಣ ಎಂದು ಪುಟಿನ್‌ ಹೇಳಿಕೆ ನೀಡಿದ್ದಾರೆ.

    ಈ ಮೊದಲು ಈಗಿರುವ ಉಕ್ರೇನ್‌ ಸರ್ಕಾರವನ್ನು ಪತನಗೊಳಿಸಿ ತನ್ನ ಕೈಗೊಂಬೆ ವ್ಯಕ್ತಿಯನ್ನು ನೇಮಿಸುವ ಮೂಲಕ ಹೊಸ ಸರ್ಕಾರ ಸ್ಥಾಪನೆಗೆ ಪುಟಿನ್‌ ಮುಂದಾಗಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಈ ಹೊಸ ಹೇಳಿಕೆಯಿಂದ ಉಕ್ರೇನ್‌ ದೇಶವನ್ನೇ ಪುಟಿನ್‌ ಸಂಪೂರ್ಣವಾಗಿ ಕೈವಶ ಮಾಡುವ ಭೀತಿ ಎದುರಾಗಿದೆ.

    ಈಗಾಗಲೇ ಶಸ್ತ್ರಾಸ್ತ್ರ ಗೋದಾಮುಗಳು, ಯುದ್ಧಸಾಮಗ್ರಿ ಡಿಪೋಗಳು, ವಾಯುಯಾನ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳು ಸೇರಿದಂತೆ ಉಕ್ರೇನ್‌ನ ಪ್ರಮುಖ ಮಿಲಿಟರಿ ಮೂಲಸೌಕರ್ಯವನ್ನು ನಾಶಪಡಿಸುವ ಕಾರ್ಯಾಚರಣೆಯನ್ನು ರಷ್ಯಾ ಪ್ರಾಯೋಗಿಕವಾಗಿ ಪೂರ್ಣಗೊಳಿಸಿದೆ ಎಂದು ಪುಟಿನ್‌ ಹೇಳಿದರು. ಇದನ್ನೂ ಓದಿ: ಉಕ್ರೇನ್ ಮೇಲೆ ಮುಗಿಬಿದ್ದ ರಷ್ಯಾ – ಬಾಂಬ್, ಕ್ಷಿಪಣಿ ದಾಳಿಗೆ ಕೀವ್ ನಗರ ತತ್ತರ

    ಉಕ್ರೇನ್‌ ದೇಶದ ಈ ಸ್ಥಿತಿಗೆ ಅಲ್ಲಿನ ನಾಯಕತ್ವವೇ ಕಾರಣ. ಪಾಶ್ಚಾತ್ಯ ದೇಶಗಳು ನಿರ್ಬಂಧ ನಮ್ಮ ಮೇಲೆ ಯುದ್ಧ ಸಾರಿದಂತೆ. ರಷ್ಯಾದ ಪಡೆಗಳು ತಮಗೆ ನಿಯೋಜಿಸಲಾದ ಕಾರ್ಯಗಳನ್ನು ಪೂರೈಸುತ್ತವೆ ಮತ್ತು ಉಕ್ರೇನ್‌ನಲ್ಲಿ ಕಾರ್ಯಾಚರಣೆಯು ಯೋಜನೆ ಮತ್ತು ವೇಳಾಪಟ್ಟಿಗೆ ಅನುಗುಣವಾಗಿ ಮುಂದುವರಿಯುತ್ತದೆ ಎಂದು ಅವರು ತಿಳಿಸಿದರು.ಇದನ್ನೂ ಓದಿ: ಭಾರತಕ್ಕೆ ಗಟ್ಸ್ ಇಲ್ಲ ಅನ್ನೋರು ಮೊದಲು ಉಕ್ರೇನ್ ಗಡಿವರೆಗೆ ತಲುಪಿ ಧಮ್ ತೋರಿಸಬೇಕಿತ್ತು: ಸುಜಯ್

    ರಷ್ಯಾದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರುವ ಅಗತ್ಯವಿಲ್ಲ. ಉಕ್ರೇನ್‌ನಲ್ಲಿ ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರ್ಧಾರ ಕಷ್ಟವಾಗಿತ್ತು ಎಂದರು.