ಕೀವ್: ರಷ್ಯಾ-ಉಕ್ರೇನ್ ಯುದ್ಧ ನಡೆಯುತ್ತಿರುವಂತೆಯೇ, ಎಲ್ವಿವ್‍ನ ಅರ್ಮೇನಿಯನ್ ಕ್ಯಾಥೆಡ್ರಲ್‍ನಲ್ಲಿರುವ ಯೇಸುಕ್ರಿಸ್ತನ ಶಿಲ್ಪವನ್ನು ಸ್ಥಳಾಂತರ ಮಾಡಲಾಗಿದೆ ಎಂದು ಪೂರ್ವ ಯುರೋಪಿಯನ್ ಮಾಧ್ಯಮ ಸಂಸ್ಥೆ ನೆಕ್ಸ್‌ಟಾ ಮಂಗಳವಾರ ವರದಿ ಮಾಡಿದೆ.
ಈ ಹಿಂದೆ ವಿಶ್ವ ಸಮರ 2ರ (1939-1945) ಸಮಯದಲ್ಲಿ ಕ್ಯಾಥೆಡ್ರಲ್ ಚರ್ಚ್‍ನಿಂದ ಕೊನೆಯ ಬಾರಿಗೆ ಈ ಯೇಸುಕ್ರಿಸ್ತನ ಪ್ರತಿಮೆಯನ್ನು ಸ್ಥಳಾಂತರಿಸಲಾಗಿತ್ತು. ಫೆಬ್ರವರಿ 24 ರಂದು ರಷ್ಯಾ ಉಕ್ರೇನಿಯನ್ ನಗರಗಳನ್ನು ಆಕ್ರಮಿಸಿದೆ. ಇದನ್ನೂ ಓದಿ: ಬಿಹಾರ ವರನ ಕೈ ಹಿಡಿದ ಜರ್ಮನಿ ಮಹಿಳೆ
ಹೋರಾಟ ಪ್ರಾರಂಭವಾದಾಗಿನಿಂದ ಕನಿಷ್ಠ 331 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ದೃಢಪಡಿಸಲಾಗಿದೆ. ಆದರೆ ನಿಜವಾದ ಸಂಖ್ಯೆ ಬಹುಶಃ ಹೆಚ್ಚು ಎಂದು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಹೇಳಿದೆ. ಇದರ ಮಧ್ಯೆ 1.5 ದಶಲಕ್ಷಕ್ಕೂ ಹೆಚ್ಚು ಜನರು ಉಕ್ರೇನ್‍ನಿಂದ ಪಲಾಯನ ಮಾಡಿದ್ದಾರೆ.
ಚೆನ್ನೈ: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ 21 ವರ್ಷದ ಸಾಯಿನಿಕೇಶ್ ರವಿಚಂದ್ರನ್ ಎಂಬ ವಿದ್ಯಾರ್ಥಿ ರಷ್ಯಾದ ವಿರುದ್ಧ ಹೋರಾಡಲು ಉಕ್ರೇನ್‍ನಲ್ಲಿ ಅರೆಸೈನಿಕ ಪಡೆಯನ್ನು ಸೇರಿಕೊಂಡಿದ್ದಾರೆ.
2018ರಲ್ಲಿ ಸೈನಿಕೇಶ್ ಖಾರ್ಕಿವ್‍ನಲ್ಲಿರುವ ನ್ಯಾಷನಲ್ ಏರೋಸ್ಪೇಸ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಉಕ್ರೇನ್‍ಗೆ ತೆರಳಿದ್ದರು. ಜುಲೈ 2022ರೊಳಗೆ ಕೋರ್ಸ್ ಪೂರ್ಣಗೊಳಿಸಬೇಕಿತ್ತು. ಈ ನಡುವೆ ಉಕ್ರೇನ್‍ನಲ್ಲಿ ಯುದ್ಧ ಆರಂಭವಾಗಿದ್ದು, ಸಾಯಿನಿಕೇಶ್ ಜೊತೆಗೆ ಪೋಷಕರು ಸಂಪರ್ಕ ಕಳೆದುಕೊಂಡಿದ್ದಾರೆ. ಭಾರತೀಯ ರಾಯಭಾರ ಕಚೇರಿಗೆ ಮನವಿ ಮಾಡಿದ ನಂತರ ಸಾಯಿನಿಕೇಶ್ ರವಿಚಂದ್ರನ್ ಅವರನ್ನು ಸಂಪರ್ಕಿಸಲು ಸಾಧ್ಯವಾಯಿತು. ಈ ವೇಳೆ ರಷ್ಯಾದ ವಿರುದ್ಧ ಹೋರಾಡಲು ಉಕ್ರೇನಿಯನ್ ಅರೆಸೈನಿಕ ಪಡೆಯನ್ನು ಸೇರಿಕೊಂಡಿರುವುದಾಗಿ ತಮ್ಮ ಕುಟುಂಬಸ್ಥರಿಗೆ ತಿಳಿಸಿದರು.
ಕೀವ್: ಖಾರ್ಕಿವ್ ಯುದ್ಧದಲ್ಲಿ ರಷ್ಯಾದ ಜನರಲ್ ವಿಟಾಲಿ ಗೆರಾಸಿಮೊವ್ ಸೋಮವಾರ ಸಾವನ್ನಪ್ಪಿದ್ದು, ಹಿರಿಯ ಕಮಾಂಡರ್ ಕಳೆದುಕೊಂಡು ರಷ್ಯಾಗೆ ಮತ್ತೊಂದು ದೊಡ್ಡ ನಷ್ಟವುಂಟಾಗಿದೆ ಎಂದು ಉಕ್ರೇನ್ ತಿಳಿಸಿದೆ.
ಮೇಜರ್ ಜನರಲ್ ವಿಟಾಲಿ ಗೆರಾಸಿಮೊವ್ ರಷ್ಯಾದ ಕೇಂದ್ರ ಮಿಲಿಟರಿ ಜಿಲ್ಲೆಯ 41 ನೇ ಸೈನ್ಯದ ಮೊದಲ ಉಪ ಕಮಾಂಡರ್ ಆಗಿದ್ದರು. ಎರಡನೇ ಚೆಚೆನ್ ಯುದ್ಧ ಮತ್ತು ಸಿರಿಯಾದಲ್ಲಿ ನಡೆದ ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳಲ್ಲಿ ವಿಟಾಲಿ ಗೆರಾಸಿಮೊವ್ ಅವರ ಪಾತ್ರವಿದ್ದು, ಅವರಿಗೆ 2014 ರಲ್ಲಿ ‘ಕ್ರೈಮಿಯಾ ಹಿಂದಿರುಗುವಿಕೆಗಾಗಿ ಪದಕವನ್ನು ನೀಡಲಾಗಿತ್ತು. ಇದನ್ನೂ ಓದಿ: ರೇಣುಕಾಚಾರ್ಯ, ಪ್ರತಾಪಸಿಂಹ ವಿರುದ್ಧದ 4 ಕೇಸ್ ವಾಪಸ್ ಪಡೆದ ಸರ್ಕಾರ- ಹೈಕೋರ್ಟ್ ಗರಂ
Ukraine kills Russian Major General Vitaly Gerasimov near Kharkiv, reports The Kyiv Independent quoting Ukraine’s Chief Directorate of Intelligence of the Defense Ministry
ಈಗಾಗಲೇ ರಷ್ಯಾದ ಅನೇಕ ಹಿರಿಯ ರಕ್ಷಣಾ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ. ರಷ್ಯಾ ಸೈನ್ಯದಲ್ಲಿನ ಸಂವಹನ ಮತ್ತು ಘಟಕಗಳ ಸ್ಥಳಾಂತರಿಸುವಿಕೆಯೊಂದಿಗೆ ಗಮನಾರ್ಹ ಸಮಸ್ಯೆಗಳನ್ನು ಸೂಚಿಸುತ್ತದೆ ಎಂದು ಉಕ್ರೇನಿಯನ್ ರಕ್ಷಣಾ ಸಚಿವಾಲಯ ಹೇಳಿದೆ. ಇದನ್ನೂ ಓದಿ: ಬಿಹಾರ ವರನ ಕೈ ಹಿಡಿದ ಜರ್ಮನಿ ಮಹಿಳೆ
ರಷ್ಯಾದ 7ನೇ ವಾಯುಸೇನೆ ವಿಭಾಗದ ಕಮಾಂಡಿಂಗ್ ಜನರಲ್ ಆಂಡ್ರೇ ಸುಖೋವೆಟ್ಸ್ಕಿ ಮತ್ತು 41 ನೇ ಕಂಬೈನ್ಡ್ ಆಮ್ರ್ಸ್ ಆರ್ಮಿಯ ಉಪ ಕಮಾಂಡರ್ ಅನ್ನು ಸ್ನೈಪರ್ ಮೃತಪಟ್ಟ ನಂತರ ಇದೀಗ ವಿಟಾಲಿ ಗೆರಾಸಿಮೊವ್ ಸಾವನ್ನಪ್ಪಿದ್ದಾರೆ.
ಕೀವ್: ಯಾರಿಗೂ ಹೆದರಿ ಅಡಗಿಕೊಂಡಿಲ್ಲ ಎಂದು ತಿಳಿಸಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಾವು ಇರುವ ಸ್ಥಳವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಇನ್‍ಸ್ಟಾಗ್ರಾಮ್‌ನಲ್ಲಿ ಮತ್ತೊಂದು ವೀಡಿಯೋ ಪೋಸ್ಟ್ ಮಾಡಿರುವ ಅವರು, ನಾನು ಬ್ಯಾಂಕೋವಾ ಸ್ಟ್ರೀಟ್‍ನಲ್ಲಿರುವ ಕೀವ್‍ನಲ್ಲಿ ಇರುತ್ತೇನೆ. ನಾನು ಯಾರಿಗವೂ ಹೆದರಿ ಅಡಗಿಕೊಳ್ಳುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
ರಷ್ಯಾ ಉಕ್ರೇನ್ ಯುದ್ಧದ ನಡುವಯೇ ಉಕ್ರೇನ್ ಅಧ್ಯಕ್ಷ ಪೋಲೆಂಡ್‍ಗೆ ಪಲಾಯನ ಮಾಡಿದ್ದಾರೆ ಎನ್ನುವ ಆರೋಪಗಳನ್ನು ಝೆಲೆನ್ಸ್ಕಿ ತಿರಸ್ಕರಿಸಿದ್ದಾರೆ. ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಝೆಲೆನ್ಸ್ಕಿ ವೀಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಗೋವಾದಲ್ಲಿ ಮತ್ತೆ ಬಿಜೆಪಿ ಗೆಲ್ಲಲಿದೆ: ಪ್ರಮೋದ್ ಸಾವಂತ್
ರಷ್ಯಾ ಯುದ್ಧ ಆರಂಭಿಸಿದ ನಂತರ ಉಕ್ರೇನಿನ ಅಧ್ಯಕ್ಷ ಝೆಲೆನ್ಸ್ಕಿ ಹತ್ಯೆಗೆ ಮೂರು ಬಾರಿ ಪ್ರಯತ್ನ ನಡೆಸಲಾಗಿತ್ತು. ಆದರೆ ಉಕ್ರೇನಿನ ಅಧಿಕಾರಿಗಳಿಗೆ ಈ ಬಗ್ಗೆ ಮೊದಲೇ ಮಾಹಿತಿ ಲಭ್ಯವಾಗಿದ್ದ ಹಿನ್ನೆಲೆಯಲ್ಲಿ ಸಂಚು ವಿಫಲಗೊಳ್ಳುವಂತೆ ಮಾಡಿದ್ದರು ಎಂದು ವರದಿಗಳು ತಿಳಿಸಿವೆ.
ಮಾಸ್ಕೋ: ರಷ್ಯಾದ (Russia) ಹಲವು ಬೇಡಿಕೆಗಳನ್ನು ಉಕ್ರೇನ್ (Ukraine) ಒಪ್ಪಿದ ಮರುಕ್ಷಣವೇ ಆ ದೇಶದ ಮೇಲಿನ ಯುದ್ಧವನ್ನು ನಿಲ್ಲಿಸುವುದಾಗಿ ರಷ್ಯಾ ಘೋಷಣೆ ಮಾಡಿದೆ.
ರಷ್ಯಾ ಬೇಡಿಕೆ ಏನು?: ಉಕ್ರೇನ್ ತನ್ನ ಸೇನಾ ಚಟುವಟಿಕೆಗಳನ್ನು ನಿಲ್ಲಿಸಬೇಕು. ನ್ಯಾಟೊ ಸೇರಿ ಯಾವುದೇ ಒಕ್ಕೂಟವನ್ನು ಉಕ್ರೇನ್ ಸೇರದಂತೆ ಸಂವಿಧಾನ ಬದಲಾವಣೆ ಹಾಗೂ ಡೊನೆಟ್‍ಸ್ಕ್ ಮತ್ತು ಲುಗಾನ್‍ಸ್ಕ್ ಪ್ರತ್ಯೇಕ ಪ್ರದೇಶಗಳನ್ನು ಸ್ವಾಯತ್ತ ಪ್ರಾಂತ್ಯಗಳೆಂದು ಗುರುತಿಸಬೇಕು ಎಂಬುದು ರಷ್ಯಾದ ಬೇಡಿಕೆಗಳಾಗಿವೆ. ಈ ಎಲ್ಲಾ ಬೇಡಿಕೆಗಳು ಈಡೇರಿದ ಮರುಕ್ಷಣವೇ ಉಕ್ರೇನ್ ಮೇಲಿನ ದಾಳಿ ನಿಲ್ಲಲಿದೆ ಎಂದು ಕ್ರೆಮ್ಲಿನ್ (Kremlin spokesman)ವಕ್ತಾರ ಡಿಮಿಟ್ರಿ ಪೆಸ್ಕೋವ್ (Dmitry Peskov) ಅವರು ಹೇಳಿದ್ದಾರೆ.
ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಪೆಸ್ಕೋವ್ ಅವರು, ನಮ್ಮ ಬೇಡಿಕೆಗಳಿಗೆ ಒಪ್ಪಿದ ಮರುಕ್ಷಣವೇ ನಮ್ಮ ಸೇನಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಿದ್ದೇವೆ ಎಂಬ ಸಂದೇಶವನ್ನು ಉಕ್ರೇನ್‍ಗೆ ನೀಡಿದ್ದೇವೆ. ಈ ನಮ್ಮ ಷರತ್ತುಗಳು ಏನು ಎಂಬುದು ಉಕ್ರೇನ್‍ಗೆ ಚೆನ್ನಾಗಿ ಗೊತ್ತಿದೆ. ನ್ಯಾಟೊ ಸೇರಿದಂತೆ ಯಾವುದೇ ಅಂತರರಾಷ್ಟ್ರೀಯ ಒಕ್ಕೂಟಕ್ಕೆ ಉಕ್ರೇನ್ ಸೇರಬಾರದು. ಇದಕ್ಕಾಗಿ ಉಕ್ರೇನ್ ತನ್ನ ಸಂವಿಧಾನವನ್ನು ತಿದ್ದುಪಡಿ ಮಾಡಬೇಕು. ಜೊತೆಗೆ ಮೊದಲು ಉಕ್ರೇನ್ ಯೋಧರು ಯುದ್ಧವನ್ನು ನಿಲ್ಲಿಸಬೇಕು. ಆಗ ಯಾರೂ ಸಹ ಅವರ ಮೇಲೆ ದಾಳಿ ನಡೆಸುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಜಾಗತಿಕ ರಾಷ್ಟ್ರಗಳ ನಿರ್ಬಂಧಕ್ಕೆ ರಷ್ಯಾ ಸೆಡ್ಡು- ಇಂಟರ್‌ನೆಟ್ ಸ್ವಾವಲಂಬನೆಯತ್ತ ಹೆಜ್ಜೆ
ರಷ್ಯಾದ ಸೇನಾ ಪಡೆಗಳು ಉಕ್ರೇನ್ ಮೇಲೆ ಶೆಲ್ ದಾಳಿಗಳನ್ನು ಹೆಚ್ಚಿಸುತ್ತಿರುವ ಬೆನ್ನಲ್ಲೇ, ರಷ್ಯಾದ ಮೇಲಿನ ನಿಬರ್ಂಧಗಳನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‍ಸ್ಕಿ ಅವರು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ.
ದಾಳಿ ಕುರಿತು ಮಾತನಾಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, ಉಕ್ರೇನ್ ಮೇಲೆ ಹಾರಾಟ ನಿಷೇಧ ವಲಯವನ್ನು ರೂಪಿಸಿ ಎಂದು ನಾನು ಐರೋಪ್ಯ ರಾಷ್ಟ್ರಗಳಲ್ಲಿ ಮತ್ತೆ ಕೇಳುತ್ತಿದ್ದೇನೆ. ರಷ್ಯಾದ ಕ್ಷಿಪಣಿಗಳ ದಾಳಿ ಮಾಡದಂತೆ ಹಾರಾಟ ನಿಷೇಧ ವಲಯ ರೂಪಿಸಿ ಎಂದು ಒತ್ತಾಯಿಸಿದ್ದಾರೆ.
ಐರೋಪ್ಯ ಒಕ್ಕೂಟದ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಅವರು, ಉಕ್ರೇನ್ ಮೇಲೆ ಹಾರಾಟ ನಿಷೇಧ ವಲಯ ರೂಪಿಸಿದರೆ ವಿಶ್ವಯುದ್ಧವನ್ನು ಹುಟ್ಟುಹಾಕಿದಂತಾಗುತ್ತದೆ ಎಂದು ಉಕ್ರೇನ್ ಮನವಿಯನ್ನು ತಿರಸ್ಕರಿಸಿತ್ತು. ಇದಕ್ಕೆ ಉಕ್ರೇನ್ ಅಧ್ಯಕ್ಷ ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ರಷ್ಯಾ, ಉಕ್ರೇನ್ ಯುದ್ಧ – 14 ವರ್ಷದ ಬಳಿಕ ಕಚ್ಚಾತೈಲ ಬೆಲೆ ಭಾರೀ ಏರಿಕೆ
ಮಾಸ್ಕೋ: ಉಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವ ಕಾರಣ ಅಮೆರಿಕ ಸೇರಿದಂತೆ ಐರೋಪ್ಯ ರಾಷ್ಟ್ರಗಳ ಒಕ್ಕೂಟದಿಂದ ಹಲವು ನಿರ್ಬಂಧಗಳ ಪರಿಣಾಮವನ್ನು ಎದುರಿಸುತ್ತಿರುವ ರಷ್ಯಾ ಈಗ ಇಂಟರ್‌ನೆಟ್ ವಲಯದಲ್ಲಿ ಸ್ವಾವಲಂಬಿಯಾಗುವತ್ತ ಹೆಜ್ಜೆ ಇಟ್ಟಿದೆ.
ಯೂರೋಪ್ ರಾಷ್ಟ್ರಗಳ ವಿವಿಧ ಕಂಪನಿಗಳು ರಷ್ಯಾ ವಿರುದ್ಧ ಇಂಟರ್‌ನೆಟ್ ನಿರ್ಬಂಧ ಹೇರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮಾ.11ರ ಹೊತ್ತಿಗೆ ಜಾಗತಿಕ ಇಂಟರ್‌ನೆಟ್ ಸಂಪರ್ಕದಿಂದ ದೂರ ಉಳಿಯಲು ರಷ್ಯಾ ಮುಂದಾಗಿದೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಯುದ್ಧ – 14 ವರ್ಷದ ಬಳಿಕ ಕಚ್ಚಾತೈಲ ಬೆಲೆ ಭಾರೀ ಏರಿಕೆ
ಮಾ.11ರ ನಂತರ ಎಲ್ಲಾ ಸರ್ವರ್ ಮತ್ತು ಡೊಮೈನ್‌ಗಳನ್ನು ರಷ್ಯಾ ವಲಯಕ್ಕೆ ವರ್ಗಾಯಿಸಿಕೊಳ್ಳಲು ಕ್ರಮವಹಿಸಲಾಗಿದೆ. ಸೈಟ್‌ಗಳ ನೆಟ್‌ವರ್ಕ್ ಮೂಲಸೌಕರ್ಯದ ವಿವರವಾದ ಡೇಟಾವನ್ನು ಸಂಗ್ರಹಿಸಲಾಗುತ್ತಿದೆ. ಅಗತ್ಯ ದತ್ತಾಂಶಗಳ ಸುರಕ್ಷತೆ ಹಾಗೂ ನಿರ್ವಹಣೆಗಾಗಿ ರಷ್ಯಾ ಕ್ರಮಕೈಗೊಂಡಿದೆ.
#Russia began active preparations for disconnection from the global Internet
No later than March 11, all servers and domains must be transferred to the #Russian zone. In addition, detailed data on the network infrastructure of the sites is being collected. pic.twitter.com/wOCdRqOJej
ರಷ್ಯಾದ ಈ ಕ್ರಮದಿಂದ ಯೂರೋಪ್ ರಾಷ್ಟ್ರಗಳು ವಿಧಿಸಿರುವ ನಿರ್ಬಂಧದಿಂದ ಯಾವುದೇ ಗಂಭೀರ ಸಮಸ್ಯೆಯಾಗುವುದಿಲ್ಲ. ಸ್ವತಃ ರಷ್ಯಾ, ಸರ್ವರ್ ಮತ್ತು ಡೊಮೈನ್‌ಗಳನ್ನು ವರ್ಗಾಯಿಸಿಕೊಳ್ಳುತ್ತಿರುವುದು ಮುಂದೆ ಎದುರಾಗಬಹುದಾದ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರವಾಗಲಿದೆ. ಇದನ್ನೂ ಓದಿ:ರಷ್ಯಾ- ಉಕ್ರೇನ್ ಯುದ್ಧ: ಕಚ್ಚಾ ತೈಲ ಬೆಲೆ ಭಾರೀ ಏರಿಕೆ
ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧ ವಿರೋಧಿಸಿ ಅಮೆರಿಕ ಅನೇಕ ನಿರ್ಬಂಧಗಳನ್ನು ವಿಧಿಸಿದೆ. ಆರ್ಥಿಕ ನಿರ್ಬಂಧವನ್ನೂ ಹೇರಲಾಗಿದೆ. ಇದಕ್ಕೆ ಅನೇಕ ರಾಷ್ಟ್ರಗಳು ಬೆಂಬಲ ಸೂಚಿಸಿವೆ. ಇದರಿಂದ ರಷ್ಯಾ ಸೇರಿದಂತೆ ಆ ದೇಶವನ್ನು ಅವಲಂಬಿಸಿರುವ ಅನೇಕ ರಾಷ್ಟ್ರಗಳು ತೊಂದರೆ ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ರಷ್ಯಾ ಸ್ವಾವಲಂಬನೆಯತ್ತ ಹೆಜ್ಜೆ ಇರಿಸಿದೆ.
ನವದೆಹಲಿ: ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಯಾವುದೇ ನಿಲುವು ಪ್ರಕಟಿಸದೇ ತಟಸ್ಥ ಧೋರಣೆ ತೋರಿದ ಭಾರತಕ್ಕೆ ರಷ್ಯಾ ಭರ್ಜರಿ ಆಫರ್ ಪ್ರಕಟಿಸಿದೆ.
ಹೌದು. ರಷ್ಯಾ ದಾಳಿಯಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಭಾರೀ ಏರಿಕೆ ಕಾಣುತ್ತಿದೆ. ಈ ಬೆನ್ನಲ್ಲೇ ಭಾರೀ ರಿಯಾಯಿತಿ ದರದಲ್ಲಿ ಭಾರತಕ್ಕೆ ಕಚ್ಚಾ ತೈಲ ನೀಡಲು ರಷ್ಯಾ ಮುಂದಾಗಿದೆ ಎಂದು ವರದಿಯಾಗಿದೆ.
ಬ್ರೆಂಟ್ ಕಚ್ಚಾ ತೈಲ ದರಕ್ಕಿಂತ ಶೇ.25-27 ರಷ್ಟು ರಿಯಾಯಿತಿ ದರದಲ್ಲಿ ತೈಲ ನೀಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ರಷ್ಯಾದ ಪ್ರತಿಷ್ಠಿತ ಕಚ್ಚಾ ತೈಲ ಕಂಪನಿಗಳಲ್ಲಿ ಒಂದಾದ ರೋಸ್ನೆಫ್ಟ್ ಆಯಿಲ್ ಕಂಪನಿಯೂ ಭಾರತಕ್ಕೆ ಬ್ರೆಂಟ್ ಕಚ್ಚಾ ತೈಲವನ್ನು ನೀಡಲು ಮುಂದಾಗಿದೆ.
ಕಳೆದ ಡಿಸೆಂಬರ್‌ನಲ್ಲಿ ಪುಟಿನ್ ಭಾರತಕ್ಕೆ ಬಂದಾಗ ರೋಸ್ನೆಫ್ಟ್ ಆಯಿಲ್ ಕಂಪನಿ ಹಾಗೂ ಭಾರತದ ತೈಲ ಕಂಪನಿಗಳು ಒಪ್ಪಂದವನ್ನು ಮಾಡಿಕೊಂಡಿತ್ತು. ಈ ಒಪ್ಪಂದದಲ್ಲಿ 2022ರ ಕೊನೆಯವರೆಗೆ ಭಾರತಕ್ಕೆ 2 ಮಿಲಿಯನ್ ಟನ್ ತೈಲವನ್ನು ನೊವೊರೊಸಿಸ್ಕ್ ಬಂದರಿನ ಮೂಲಕ ರಫ್ತು ಮಾಡಲು ಒಪ್ಪಿಕೊಂಡಿತ್ತು.
ರಷ್ಯಾದ ಆಫರ್ ಭಾರತಕ್ಕೆ ಇಷ್ಟವಾಗಿದ್ದರೂ ಹಣ ವ್ಯವಹಾರ ಮಾಡುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ರುಪಿ- ರೂಬೆಲ್ ಮೂಲಕ ವ್ಯವಹಾರ ನಡೆಸಬಹುದಾದರೂ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
ಈಗ ಯಾಕೆ ಕಷ್ಟ?:
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿರುವ ಮಧ್ಯೆ, ಅಮೆರಿಕ, ಕೆನಡಾ, ಬ್ರಿಟನ್ ಮತ್ತು ಪಶ್ಚಿಮ ದೇಶಗಳು ಅಂತರಾಷ್ಟ್ರೀಯ ಹಣಕಾಸು ವ್ಯವಹಾರ ವಿನಿಮಯ ಸಂಸ್ಥೆ ಸ್ವಿಫ್ಟ್ (Society For Worldwide Interbank Financial Telecommunications) ನಿಂದ ರಷ್ಯಾವನ್ನು ದೂರವಿಟ್ಟಿದೆ. ಇದರಿಂದಾಗಿ ಡಾಲರ್ ಮೂಲಕ ತೈಲವನ್ನು ಖರೀದಿ ಮಾಡುವುದು ಕಷ್ಟವಾಗಿದೆ.
ಏನಿದು ಸ್ವಿಫ್ಟ್ ?
SWIFT ಇದು ಅಂತರಾಷ್ಟ್ರೀಯ ನಗದು ವ್ಯವಹಾರಗಳ ಸಂಸ್ಥೆಯಾಗಿದ್ದು, ವಿವಿಧ ದೇಶಗಳ ನಡುವೆ ವೇಗವಾಗಿ ನಗದು ವ್ಯವಹಾರ ನಡೆಯಲು ನೆರವಾಗುವಂತಹ ವ್ಯವಸ್ಥೆ ಸ್ವಿಫ್ಟ್‍ನಲ್ಲಿದೆ. 1973ರಲ್ಲಿ ಬೆಲ್ಜಿಯಂನಲ್ಲಿ ಆರಂಭವಾದ ಸ್ವಿಫ್ಟ್ ನೆಟ್‍ವರ್ಕನಲ್ಲಿ 200 ದೇಶಗಳ 11 ಸಾವಿರ ಬ್ಯಾಂಕುಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿದೆ. ಸರ್ಕಾರಗಳು, ಸಂಸ್ಥೆಗಳ ಮಧ್ಯೆ ಲಕ್ಷ ಕೋಟಿ ಡಾಲರ್‌ಗಳ ವ್ಯವಹಾರ ನಡೆಯುತ್ತದೆ. ಇದನ್ನೂ ಓದಿ: Russia-Ukraine Crisis: ರಷ್ಯಾಗೆ ಮತ್ತೊಂದು ಶಾಕ್ – SWIFTನಿಂದ ರಷ್ಯಾವನ್ನು ದೂರವಿಡಲು ತೀರ್ಮಾನ
ರಷ್ಯಾಗೆ ನಷ್ಟವೇನು?
ಸ್ವಿಫ್ಟ್‌ನ ಒಟ್ಟು ವ್ಯವಹಾರದಲ್ಲಿ ರಷ್ಯಾ ಪಾಲು ಶೇ.1 ರಷ್ಟಿದ್ದು, ಸ್ವಿಫ್ಟ್ ನೆರವಿಲ್ಲದೇ ಅಂತರಾಷ್ಟ್ರೀಯ ಆರ್ಥಿಕ ವ್ಯವಹಾರ ಕಷ್ಟವಾಗಬಹುದಾಗಿದೆ. ಅಂತರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯಲ್ಲಿ ರಷ್ಯಾ ಒಬ್ಬಂಟಿಯಾಗಲಿದೆ. ದಿಗ್ಬಂಧನ ತಡೆದುಕೊಳ್ಳಲು ರಷ್ಯಾ ಬಳಿ 600 ಬಿಲಿಯನ್ ಡಾಲರ್‍ಗಳಷ್ಟು ಅಂತರಾಷ್ಟ್ರೀಯ ಮೀಸಲು ನಿಧಿ ಇದೆ. ಈ ಮೀಸಲು ನಿಧಿಯನ್ನು ರಷ್ಯಾದ ಸೆಂಟ್ರಲ್ ಬ್ಯಾಂಕ್ ಬಳಸಿಕೊಳ್ಳದಂತೆ ಬ್ಯಾನ್ ಆಗಲಿದೆ. ಅಲ್ಲದೇ ಸ್ಥಳೀಯ ಕರೆನ್ಸಿಗಾಗಿ ಸೆಂಟ್ರಲ್ ಬ್ಯಾಂಕ್ ಬಳಿಯ ವಿದೇಶಿ ಆಸ್ತಿ ಮಾರಲಾಗುವುದಿಲ್ಲ. ವಿದೇಶಗಳಲ್ಲಿರುವ ರಷ್ಯಾದ ಮೀಸಲು ನಿಧಿ ಫ್ರೀಜ್ ಆಗಲಿದ್ದು, ರೂಬುಲ್ ಕರೆನ್ಸಿ ಮೌಲ್ಯ ಪತನಗೊಳ್ಳಲಿದೆ. ಆಗ ಇದರ ಬಳಕೆ ಕಷ್ಟವಾಗಬಹುದು. ಇದೆಲ್ಲದರ ಜೊತೆಗೆ ತೈಲ, ಅನಿಲ ಮಾರಾಟದಿಂದ ಬರುವ ಆದಾಯ ಗಣನೀಯವಾಗಿ ಕುಸಿಯಲಿದೆ. ರಷ್ಯಾದ ಆದಾಯದಲ್ಲಿ ತೈಲ, ಅನಿಲ ಮಾರಾಟದ ಪಾಲು ಶೇ.40 ರಷ್ಟಿದೆ. 2012ರಲ್ಲಿ ಸ್ವಿಫ್ಟ್‍ನಿಂದ ಇರಾನ್ ದೇಶವನ್ನು ಹೊರಗಿಡಲಾಗಿತ್ತು. ಇದರಿಂದ ಇರಾನ್ ಆರ್ಥಿಕವಾಗಿ ತುಂಬಾ ನಷ್ಟ ಅನುಭವಿಸಿತ್ತು. ಶೇಕಡಾ 50 ರಷ್ಟು ತೈಲಾದಾಯ, ಶೇಕಡಾ 30 ರಷ್ಟು ವಿದೇಶಿ ವ್ಯಾಪಾರ ಕಳೆದುಕೊಂಡಿತ್ತು.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಸಮಾಲೋಚನೆ ನಡೆಸಿದರು.
ಅಧ್ಯಕ್ಷ ಝೆಲೆನ್ಸ್ಕಿ ಅವರು ಸಂಘರ್ಷದ ಪರಿಸ್ಥಿತಿ, ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಮಾತುಕತೆಗಳ ಬಗ್ಗೆ ಮೋದಿ ಅವರಿಗೆ ವಿಸ್ತøತವಾಗಿ ವಿವರಿಸಿದರು. ಸಂಘರ್ಷ ನಡೆಯುತ್ತಿರುವುದು ಮತ್ತು ಅದರ ಪರಿಣಾಮವಾಗಿ ಉದ್ಭವಿಸಿರುವ ಮಾನವೀಯ ಬಿಕ್ಕಟ್ಟಿನ ಬಗ್ಗೆ ಮೋದಿ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು. ತಕ್ಷಣವೇ ಹಿಂಸಾಚಾರವನ್ನು ನಿಲ್ಲಿಸಬೇಕೆಂಬ ತಮ್ಮ ಕರೆಯನ್ನು ಪುನರುಚ್ಚರಿಸಿದ ಮೋದಿ ಅವರು ಭಾರತವು ಸದಾ ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಲು ಮತ್ತು ಉಭಯ ಪಕ್ಷಗಳ ನಡುವೆ ನೇರ ಮಾತುಕತೆಯ ಪರವಾಗಿ ನಿಂತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಅರ್ಧಗಂಟೆ ಸಮಯ ಸಿಕ್ಕರೆ ಅಷ್ಟರಲ್ಲೇ ಭಯದಿಂದ ಅಡುಗೆ ಮಾಡಿ ತಿನ್ನುತ್ತಿದ್ದೆವು: ವಿದ್ಯಾರ್ಥಿನಿ ಅಕ್ಷಿತಾ
ಉಕ್ರೇನ್‍ನಿಂದ 20,000ಕ್ಕೂ ಅಧಿಕ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಉಕ್ರೇನಿಯನ್ ಅಧಿಕಾರಿಗಳಿಗೆ ಮೋದಿ ಅವರು ಧನ್ಯವಾದ ಸಲ್ಲಿಸಿದರು. ಉಕ್ರೇನ್‍ನಲ್ಲಿ ಇನ್ನೂ ಉಳಿದಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಭದ್ರತೆತೆಯ ಬಗ್ಗೆ ತೀವ್ರ ಕಾಳಜಿಯನ್ನು ವ್ಯಕ್ತಪಡಿಸಿದರು. ಅವರ ತ್ವರಿತ ಮತ್ತು ಸುರಕ್ಷಿತ ಸ್ಥಳಾಂತರ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದರು.
ನವದೆಹಲಿ: ಯುದ್ಧಪೀಡಿತ ಉಕ್ರೇನ್‌ನಲ್ಲಿ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಭಾರತದ ವಿದ್ಯಾರ್ಥಿ ಇಂದು ಭಾರತಕ್ಕೆ ವಾಪಸ್ ಆಗುತ್ತಿದ್ದಾರೆ.
ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ಗುಂಡೇಟಿನಿಂದ ಆಸ್ಪತ್ರೆ ಸೇರಿದ್ದ ವಿದ್ಯಾರ್ಥಿಯನ್ನು ಪೋಲೆಂಡ್ ದೇಶದಲ್ಲಿ ಕೇಂದ್ರ ಸಚಿವ ವಿ.ಕೆ.ಸಿಂಗ್ ಅವರು ಭೇಟಿಯಾಗಿದ್ದಾರೆ. ಅಲ್ಲದೇ ʼಆಪರೇಷನ್ ಗಂಗಾʼ ಕಾರ್ಯಾಚರಣೆಯಡಿ ವಿದ್ಯಾರ್ಥಿಯನ್ನು ಭಾರತಕ್ಕೆ ವಾಪಸ್ ಕರೆತರಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾಯಿ ಬಿಡದಿದ್ದರೆ ನಾನು ಭಾರತಕ್ಕೆ ಬರುತ್ತಿರಲಿಲ್ಲ: ರಂಜಿತ್ ರೆಡ್ಡಿ
ಸ್ಟ್ರೆಚರ್‌ನಲ್ಲಿದ್ದ 31 ವರ್ಷದ ವಿದ್ಯಾರ್ಥಿಯೊಂದಿಗೆ ಸಿಂಗ್ ಅವರು ರ್ಜೆಸ್ಜೋವ್ ವಿಮಾನ ನಿಲ್ದಾಣದಲ್ಲಿ ಮಾತನಾಡಿ ಆರೋಗ್ಯ ವಿಚಾರಿಸಿದ್ದಾರೆ. ವಿದ್ಯಾರ್ಥಿಯನ್ನು ಸುರಕ್ಷಿತವಾಗಿ ಕರೆದುಕೊಂಡು ಬರುವ ಭರವಸೆ ನೀಡುತ್ತೇನೆ. ಆತ ತನ್ನ ಕುಟುಂಬದೊಂದಿಗೆ ಮತ್ತೆ ಒಂದಾಗುವುದನ್ನು ನೋಡಲು ನಾನು ಎದುರು ನೋಡುತ್ತಿದ್ದೇನೆ. ಬಹುಬೇಗ ಗುಣಮುಖರಾಗಲಿ ಎಂದು ಆಶಿಸುತ್ತೇನೆ ಎಂದು ಸಿಂಗ್ ತಿಳಿಸಿದ್ದಾರೆ.
One of the passengers on the @iaf_mcc C-17 today will be Harjot Singh. Let me assure the country that he is in good hands. The worst is behind him. I look forward to seeing him reunited with his family. Hope he recuperates well and fast.#OperationGanga#NoIndianLeftBehindpic.twitter.com/TGlKa9EP8V
ವಿದ್ಯಾರ್ಥಿ ಹರ್ಜೋತ್ ಸಿಂಗ್ ಪ್ರಯಾಣಿಸುವ ವಿಮಾನ ರಾತ್ರಿ 7 ಗಂಟೆಗೆ ದೆಹಲಿ ತಲುಪಲಿದೆ. ಆತನೊಂದಿಗೆ 200 ಮಂದಿ ಭಾರತೀಯರು ಪೋಲೆಂಡ್‌ನಿಂದ ಪ್ರಯಾಣ ಬೆಳೆಸಲಿದ್ದಾರೆ. ಸದ್ಯ ವಿದ್ಯಾರ್ಥಿ ಉಕ್ರೇನ್‌ನಿಂದ ಪೋಲೆಂಡ್‌ಗೆ ಬಂದಿದ್ದಾರೆ. ಇದನ್ನೂ ಓದಿ: ಮಧ್ಯೆ ಕೆಟ್ಟು ನಿಂತ ಬಸ್ – ರೊಮೆನಿಯಾ ತಲುಪದ 37 ಕನ್ನಡಿಗರು
ಕೀವ್‌ನಲ್ಲಿ ಭಾರತದ ಹರ್ಜೋತ್ ಸಿಂಗ್‌ಗೆ ಗುಂಡೇಟು ಬಿದ್ದಿತ್ತು. ಈ ವೇಳೆ ಆತ ತನ್ನ ಪಾಸ್‌ಪೋರ್ಟ್ ಕೂಡ ಕಳೆದುಕೊಂಡಿದ್ದಾರೆ. ಹರ್ಜೋತ್ ನಾಳೆ ನಮ್ಮೊಂದಿಗೆ ಭಾರತವನ್ನು ತಲುಪುತ್ತಿದ್ದಾರೆ ಎಂದು ತಿಳಿಸಲು ಸಂತೋಷವಾಗಿದೆ ಎಂದು ಸಚಿವ ಟ್ವೀಟ್ ಮಾಡಿದ್ದಾರೆ.