ಕೀವ್: ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾಗಿ ಇಂದಿಗೆ 15 ದಿನ. ಇಲ್ಲಿಯವರೆಗೆ ರಷ್ಯಾದ 12,000 ಸೈನಿಕರು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಶಸ್ತ್ರಾಸ್ತ್ರ ಪಡೆ ಗುರುವಾರ ತಿಳಿಸಿದೆ.
ಫೆಬ್ರವರಿ 24 ರಂದು ಉಕ್ರೇನ್-ರಷ್ಯಾ ಯುದ್ಧ ಪ್ರಾರಂಭವಾಗಿತ್ತು. ಅಂದಿನಿಂದ ರಷ್ಯಾದ ಯಾವೆಲ್ಲಾ ಮಿಲಿಟರಿ ಸವಲತ್ತುಗಳನ್ನು ಉಕ್ರೇನ್ ನಾಶಪಡಿಸಿದೆ ಎಂದು ಕೀವ್ ಇಂಡಿಪೆಂಡೆಂಟ್ ತಿಳಿಸಿದೆ.
These are the estimates of Russia’s losses as of March 10, according to the Armed Forces of Ukraine. pic.twitter.com/7BUHJDJ9eJ
— The Kyiv Independent (@KyivIndependent) March 10, 2022
12,000 ಕ್ಕೂ ಹೆಚ್ಚು ಸೈನಿಕರು, 49 ವಿಮಾನಗಳು, 81 ಹೆಲಿಕಾಪ್ಟರ್‌ಗಳು, 335 ಟ್ಯಾಂಕ್‌ಗಳು, 123 ಫಿರಂಗಿ ಹಾಗೂ 2 ದೋಣಿಗಳು, 1,105 ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕಗಳು, 56 ಬಹು ರಾಕೆಟ್ ಉಡಾವಣಾ ಯಂತ್ರಗಳು(ರಾಕೆಟ್ ಲಾಂಚಿಂಗ್ ಸಿಸ್ಟಮ್), 526 ವಾಹನಗಳು ಹಾಗೂ 60 ಇಂಧನ ಟ್ಯಾಂಕ್‌ಗಳು, 29 ವಿಮಾನ ವಿರೋಧಿ ಶಸ್ತ್ರಾಸ್ತ್ರಗಳು, 7 ಮಾನವರಹಿತ ವಿಮಾನ(ಡ್ರೋನ್)ಗಳನ್ನು ನಾಶಪಡಿಸಿರುವುದಾಗಿ ತಿಳಿಸಿದೆ. ಇದನ್ನೂ ಓದಿ: ಝೆಲೆನ್ಸ್ಕಿ ನಕಲಿ ಟೆಲಿಗ್ರಾಮ್ ಖಾತೆ – ಉಕ್ರೇನ್ ಯೋಧರು ಶರಣಾಗುವಂತೆ ಸುಳ್ಳು ಮಾಹಿತಿ ಹಂಚಿಕೆ
20 ಲಕ್ಷ ಉಕ್ರೇನಿಯನ್ನರು ಪಲಾಯನ:
ಯುದ್ಧ ಪೀಡಿತ ಉಕ್ರೇನ್‌ನಿಂದ 20 ಲಕ್ಷ ಜನರು ದೇಶದಿಂದ ಪಲಾಯನಗೈದಿದ್ದಾರೆ. ಅದರಲ್ಲಿ ಶೇ.50 ಪಾಲು ಮಕ್ಕಳೇ ಸೇರಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಉಕ್ರೇನ್ ತೊರೆದಿರುವ ಪ್ರಜೆಗಳಲ್ಲಿ ಹೆಚ್ಚಿನವರು ಪೋಲೆಂಡ್‌ಗೆ ಹೋಗಿದ್ದಾರೆ. ಸುಮಾರು 12 ಲಕ್ಷ ಜನರು ಪೋಲೆಂಡ್, 1.91 ಲಕ್ಷ ಜನರು ಹಂಗೇರಿ, 1.40 ಲಕ್ಷ ಜನರು ಸ್ಲೋವಾಕಿಯಾ, 99 ಸಾವಿರ ಜನರು ರಷ್ಯಾ ಹಾಗೂ 82 ಸಾವಿರ ಜನರು ಮಾಲ್ಡಿವ್ಸ್‌ಗೆ ಪಲಾಯನ ಮಾಡಿದ್ದಾರೆ ಎಂದು ತಿಳಿಸಿದೆ. ಇದನ್ನೂ ಓದಿ: ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಇಳಿಕೆ
ಕೀವ್: ರಷ್ಯಾ ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ಭೀಕರ ಯುದ್ಧ, ರಕ್ತಪಾತದ ನಡುವೆಯೂ ಯಾವೊಬ್ಬ ದೇಶವೂ ಶರಣಾಗುವ ಹಂತಕ್ಕೆ ಬಂದಿಲ್ಲ. ಆದರೆ ಉಕ್ರೇನ್ ಅಧ್ಯಕ್ಷನ ನಕಲಿ ಟೆಲಿಗ್ರಾಮ್ ಖಾತೆ ಸೈನಿಕರಲ್ಲಿ ಗೊಂದಲ ಸೃಷ್ಟಿಸುವಂತೆ ಮಾಡಿದೆ.
ಉಕ್ರೇನ್ ಅಧ್ಯಕ್ಷನ ಟೆಲಿಗ್ರಾಮ್ ಖಾತೆಯಂತೆಯೇ ಹೋಲುವ ನಕಲಿ ಖಾತೆಯೊಂದರಲ್ಲಿ ಉಕ್ರೇನ್ ಯೋಧರಿಗೆ ಶರಣಾಗುವಂತೆ ಸಂದೇಶ ನೀಡಲಾಗಿತ್ತು. ಈ ಸಂದೇಶ ದೇಶಾದ್ಯಂತ ವೈರಲ್ ಆಗುತ್ತಿದ್ದಂತೆ ಸೈನಿಕರಲ್ಲಿ ಗೊಂದಲ ಏರ್ಪಟ್ಟಿತು.
ಈ ಮಾಹಿತಿ ಹರಿದಾಡಲು ಪ್ರಾರಂಭವಾಗುತ್ತಿದ್ದಂತೆ ಉಕ್ರೇನ್ ಅಧ್ಯಕ್ಷ ಎಚ್ಚೆತ್ತು, ಇದು ತಪ್ಪು ಮಾಹಿತಿ ಎಂದು ತನ್ನ ಪ್ರಜೆಗಳಿಗೆ ತಿಳಿಸಿದ್ದಾರೆ. ಬಳಿಕ ಝೆಲೆನ್ಸ್ಕಿ ಹೆಸರಿನಲ್ಲಿದ್ದ ನಕಲಿ ಖಾತೆಯನ್ನು ಬ್ಯಾನ್ ಮಾಡಲಾಗಿದೆ. ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಲ್ಯಾಂಡಿಂಗ್
ಟೆಲಿಗ್ರಾಮ್ ಉಕ್ರೇನ್‌ನಲ್ಲಿ ವ್ಯಾಪಕವಾಗಿ ಬಳಸುವ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್ ಉಕ್ರೇನ್‌ನಲ್ಲಿ ಅತ್ಯಂತ ಉಪಯುಕ್ತವಾಗಿದ್ದು, ಇದರ ವೈಶಿಷ್ಯದಲ್ಲಿ 2ಲಕ್ಷ ಸದಸ್ಯರಿರುವ ಗುಂಪಿಗೂ ಸಂದೇಶ ಕಳುಹಿಸಲು ಸಾಧ್ಯವಿದೆ. ಆದರೆ ಟೆಲಿಗ್ರಾಮ್‌ನ ನಕಲಿ ಖಾತೆಯ ತಪ್ಪು ಮಾಹಿತಿಯಿಂದಾಗಿ ಸೈನಿಕರ ದಾರಿ ತಪ್ಪಿಸುವಂತೆ ಮಾಡಿದೆ.
ವಾಷಿಂಗ್ಟನ್: ಸಂಯುಕ್ತ ಅರಬ್ ಒಕ್ಕೂಟ(ಯುಎಇ) ತೈಲ ಉತ್ಪಾದನೆಯನ್ನು ಹೆಚ್ಚಳ ಮಾಡುವುದಾಗಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಕಚ್ಚಾ ತೈಲದ ಬೆಲೆಯು ಬಾರೀ ಇಳಿಕೆ ಕಂಡಿದೆ.
ತೈಲ ಕಾರ್ಟೆಲ್ ಒಪೆಕ್‍ನ ಸದಸ್ಯರಾದ ಯುಎಇ ಹೇಳಿಕೆಯನ್ನು ನೀಡಿದ ನಂತರ ಬ್ರೇಂಟ್ ಕಚ್ಚಾ ತೈಲ ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರ ಶೇ. 12ರಷ್ಟು ಇಳಿಕೆ ಕಂಡಿದ್ದು, ಸುಮಾರು 112 ಡಾಲರ್(8,549ರೂ.)ಗೆ ಇಳಿದಿದೆ.
ಇದರಿಂದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಇತರ ನಾಯಕರು ಸಭೆ ನಡೆಸಿ, ಕಚ್ಚಾ ತೈಲ ಬೆಲೆಯ ಒತ್ತಡವನ್ನು ತಗ್ಗಿಸುವ ಉದ್ದೇಶದಿಂದ ಅರಬ್ ರಾಷ್ಟ್ರಗಳ ತೈಲ ಉತ್ಪಾದಕರೊಂದಿಗೆ ಮಾತುಕತೆ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಯುಎಇ ರಾಯಭಾರಿ ಕಚೇರಿ, ನಾವು ತೈಲ ಉತ್ಪಾದನೆ ಮಟ್ಟವನ್ನು ಹೆಚ್ಚು ಮಾಡಲು ಒಲವು ತೋರಿಸಿದ್ದೇವೆ. ಉತ್ಪಾದನೆ ಮಟ್ಟವನ್ನು ಪರಿಗಣಿಸಲು ಒಪೆಕ್‍ನ್ನು ಪ್ರೋತ್ಸಾಹಿಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಲ್ಯಾಂಡಿಂಗ್
ರಷ್ಯಾ ಉಕ್ರೇನ್ ಯುದ್ಧದಿಂದ ಈಗಾಗಲೇ ಅಮೆರಿಕ ಹಾಗೂ ಕೆನಡಾ ರಾಷ್ಟ್ರಗಳು ರಷ್ಯಾದ ತೈಲ ಆಮದುಗಳನ್ನು ನಿಷೇಧಿಸಿದೆ. ಆದರೆ ಅಮೆರಿಕ ವರ್ಷಾಂತ್ಯದ ವೇಳೆಗೆ ಅವುಗಳನ್ನು ಹಂತ ಹಂತವಾಗಿ ತೆಗೆಯುವುದಾಗಿ ಹೇಳಿದೆ.
ಕೀವ್: ರಷ್ಯಾ ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ಅಲ್ಲಿನ ಜನರು ಮುಂದಿನ ಭವಿಷ್ಯದ ಬಗ್ಗೆ ಯೋಚನೆಯೂ ಮಾಡಲಾರದಂತಹ ಸ್ಥಿತಿಗೆ ಬಂದಿದ್ದಾರೆ. ಹೀಗಿರುವಾಗ ಭೀಕರ ಯುದ್ಧದ ನಡುವೆಯೂ ಉಕ್ರೇನ್‌ನ ಯೋಧನೊಬ್ಬ ತನ್ನ ಗೆಳತಿಗೆ ಪ್ರಪೋಸ್ ಮಾಡುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಯೋಧ ತನ್ನ ಗೆಳತಿಗೆ ಪ್ರಪೋಸ್ ಮಾಡುವ ಸಂದರ್ಭ ಎಂತಹವರ ಹೃದಯವನ್ನೂ ಕರಗಿಸುವಂತಿದೆ. ಈ ವೀಡಿಯೋ ಮೂಲಕ ಜೋಡಿ ಯುದ್ಧಕ್ಕಿಂತಲೂ ಪ್ರೀತಿ ಶಕ್ತಿಶಾಲಿ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಅಷ್ಟರಲ್ಲಿ ಯೋಧನೊಬ್ಬ ಪ್ರಯಾಣಿಕರೊಂದಿಗಿದ್ದ ಯುವತಿಯ ಹಿಂದುಗಡೆ ಮೊಣಕಾಲೂರಿ ಉಂಗುರವನ್ನು ನೀಡಲು ಮುಂದಾಗುತ್ತಾನೆ. ಇದರಿಂದ ಆಶ್ಚರ್ಯಕ್ಕೊಳಗಾದ ಯುವತಿ ಯೋಧ ನೀಡುವ ಉಂಗುರವನ್ನು ತೆಗೆದುಕೊಳ್ಳುತ್ತಾಳೆ. ಅವರಿಬ್ಬರೂ ನಿಜವಾಗಿ ಪ್ರೇಮಿಗಳೇ ಆಗಿರುತ್ತಾರೆ. ಅವರಿಬ್ಬರ ಪ್ರೀತಿಗೆ ಸ್ಥಳದಲ್ಲಿ ನೆರೆದಿದ್ದ ನೂರಾರು ಉಕ್ರೇನ್ ಯೋಧರೂ ಸಾಕ್ಷಿಯಾಗುತ್ತಾರೆ. ಇದನ್ನೂ ಓದಿ: ಉಕ್ರೇನ್ ಸರ್ಕಾರ ಉರುಳಿಸಲು ಯತ್ನಿಸಿಲ್ಲ: ರಷ್ಯಾ
ಈ ಅಪರೂಪದ ಸನ್ನಿವೇಶವನ್ನು ಅವರ ಸ್ನೇಹಿತರು ವೀಡಿಯೋ ರೆಕಾರ್ಡ್ ಮಾಡಿ ಸಾಮಾಜಿ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋವನ್ನು ಮಾರ್ಚ್ 7 ರಂದು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ಪ್ರಸ್ತಾಪವನ್ನು ಸೋಲಿಸಲು ಕಷ್ಟ (Kinda hard to beat this proposal) ಎಂದು ವೀಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ.
ವಾಷಿಂಗ್ಟನ್: ರಷ್ಯಾದಿಂದ ಆಮದಾಗುತ್ತಿದ್ದ ತೈಲಕ್ಕೆ ಅಮೆರಿಕ ನಿರ್ಬಂಧ ವಿಧಿಸಿದೆ. ಇದರ ನಡುವೆಯೇ ತೈಲ ಶ್ರೀಮಂತ ರಾಷ್ಟ್ರಗಳಾದ ಸೌದಿ ಅರೇಬಿಯಾ ಮತ್ತು ಸಂಯುಕ್ತ ಅರಬ್ ಒಕ್ಕೂಟ (ಯುಎಇ) ಸಂಪರ್ಕಿಸಲು ಅಮೆರಿಕ ಮುಂದಾಗಿದೆ. ಆದರೆ ಅಮೆರಿಕ ಅಧ್ಯಕ್ಷರ ಫೋನ್ ಕರೆಗೂ ಈ ಎರಡೂ ದೇಶಗಳ ರಾಜರು ಕ್ಯಾರೆ ಎಂದಿಲ್ಲ.
ಸೌದಿ ಅರೇಬಿಯಾದ ರಾಜ ಮಹಮ್ಮದ್ ಬಿನ್ ಸಲ್ಮಾನ್ ಮತ್ತು ಸಂಯುಕ್ತ ಅರಬ್ ಒಕ್ಕೂಟದ ಶೇಖ್ ಮಹಮ್ಮದ್ ಬಿನ್ ಜಯಾದ್ ಅಲ್ ನಹ್ಯಾನ್ ಅವರು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರೊಂದಿಗೆ ಫೋನ್ ಕರೆಯಲ್ಲಿ ಮಾತನಾಡಲು ನಿರಾಕರಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್ ಸರ್ಕಾರ ಉರುಳಿಸಲು ಯತ್ನಿಸಿಲ್ಲ: ರಷ್ಯಾ
ರಷ್ಯಾದಿಂದ ಆಮದಾಗುತ್ತಿದ್ದ ತೈಲಕ್ಕೆ ನಿರ್ಬಂಧ ವಿಧಿಸಿದ ಅಮೆರಿಕವು ತೈಲ ಶ್ರೀಮಂತ ರಾಷ್ಟ್ರಗಳಾದ ಸೌದಿ ಅರೇಬಿಯಾ, ಯುಎಇ ಅನ್ನು ಭೇಟಿಯಾಗಲು ಯೋಜನೆ ರೂಪಿಸಿತ್ತು. ಸೌದಿ ಮತ್ತು ಯುಎಇ ಅಧಿಕಾರಿಗಳು ಬೈಡೆನ್ ಆಡಳಿತದೊಂದಿಗೆ ಸಂವಾದ ನಡೆಸಲು ನಿರಾಕರಿಸಿದ್ದಾರೆ.
2018ರಲ್ಲಿ ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆ ಆರೋಪವನ್ನು ಸೌದಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಮೇಲೆ ಅಮೆರಿಕ ಹೊರಿಸಿತ್ತು. ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಸಹಿ ಹಾಕಿದ್ದ ಒಪ್ಪಂದವನ್ನು ರದ್ದುಪಡಿಸುವ ಮೂಲಕ ಸೌದಿ ಅರೆಬಿಯಾಕ್ಕೆ ಶಸ್ತ್ರಾಸ್ತ್ರಗಳ ಮಾರಾಟವನ್ನು ಬೈಡೆನ್ ಆಡಳಿತ ಸ್ಥಗಿತಗೊಳಿಸಿತ್ತು. ಇರಾನ್ ಪರಮಾಣು ಒಪ್ಪಂದವನ್ನು ಪುನರುಜ್ಜೀವನಗೊಳಿಸುವ ಯುಎಸ್ ಅಧ್ಯಕ್ಷರ ಪ್ರಯತ್ನ ಮತ್ತು ಆಸ್ಟ್ರಿಯಾದ ವಿಯೆನ್ನಾದ ಮಾತುಕತೆ ನಡೆಸುವುದು ಸೌದಿಯನ್ನು ಕೆರಳಿಸಿತ್ತು.
ಸುನ್ನಿ ಮುಸ್ಲಿಂ ಸೌದಿ ಅರೇಬಿಯಾ ಮತ್ತು ಅದರ ಶಿಯಾ ಪ್ರತಿಸ್ಪರ್ಧಿ ಇರಾನ್ ಎರಡರೊಂದಿಗೂ ರಷ್ಯಾ ಸೌಹಾರ್ದ ಸಂಬಂಧವನ್ನು ಹೊಂದಿದೆ. ಜೊತೆಗೆ ಸಿರಿಯಾದಲ್ಲಿ ಮಿಲಿಟರಿ ಹಸ್ತಕ್ಷೇಪ ಮಾಡಿದ ವಾಷಿಂಗ್ಟನ್ ವಿರುದ್ಧ ಇಡೀ ಮಧ್ಯಪ್ರಾಚ್ಯದೊಂದಿಗೆ ಅಧ್ಯಕ್ಷ ಪುಟಿನ್ ನಾಗರಿಕ ಯುದ್ಧದಲ್ಲಿ ಅಧ್ಯಕ್ಷ ಬಶರ್ ಅಸ್ಸಾದ್ ಅವರ ಬೆಂಬಲಕ್ಕೆ ನಿಂತಿದ್ದರು. ಇದನ್ನೂ ಓದಿ: ಉಕ್ರೇನ್ ನಟನ ಸಾವಿನ ಬೆನ್ನಲ್ಲೆ ಅವರ ಕೊನೆಯ ಪೋಸ್ಟ್ ವೈರಲ್
ರಷ್ಯಾದ ತೈಲ ಆಮದು ರದ್ದುಗೊಳಿಸುತ್ತಿದ್ದಂತೆ ಅಮೆರಿಕವು ತೈಲ ಶ್ರೀಮಂತ ರಾಷ್ಟ್ರ ಸೌದಿ ಅರೇಬಿಯಾ ಮತ್ತು ಯುಎಇನೊಂದಿಗೆ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಲು ಹರಸಾಹಸಪಟ್ಟಿದೆ. ಆದರೆ ಯುಎಇ ವಿದೇಶಾಂಗ ಸಚಿವಾಲಯವು ಕರೆಯನ್ನು ಮರು ನಿಗದಿಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.
ಮಾಸ್ಕೋ: ಯುದ್ಧದ ಭೀಕರತೆಗೆ ತತ್ತರಿಸಿರುವ ಉಕ್ರೇನ್, ರಷ್ಯಾದ ಎರಡು ಷರತ್ತುಗಳಿಗೆ ಒಪ್ಪಿಗೆ ಸೂಚಿಸಿದೆ. ಉಕ್ರೇನ್ ಸರ್ಕಾರವನ್ನು ಉರುಳಿಸಲು ನಾವು ಪ್ರಯತ್ನಿಸುತ್ತಿಲ್ಲ ಎಂದು ರಷ್ಯಾ ತನ್ನ ದಾಳಿ ಕುರಿತು ಸ್ಪಷ್ಟನೆ ನೀಡಿದೆ.
ಈ ಕುರಿತು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಮಾರಿಯಾ ಜಖರೋವಾ, ಉಕ್ರೇನ್‌ನಲ್ಲಿ ಜೈವಿಕ ಶಸ್ತ್ರಾಸ್ತ್ರಗಳನ್ನು ಯುಎಸ್‌ನಿಂದ ಅಭಿವೃದ್ಧಿಪಡಿಸಲಾಗುತ್ತಿದೆ ಎಂಬುದಕ್ಕೆ ಮಾಸ್ಕೋ ದಾಖಲೆಗಳ ಪುರಾವೆಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪುಟಿನ್‍ನ್ನು ತಡೆಯದಿದ್ದರೇ ಯಾರೂ ಸುರಕ್ಷಿತವಾಗಿರಲ್ಲ: ಉಕ್ರೇನ್ ಅಧ್ಯಕ್ಷರ ಪತ್ನಿ
ನಾವು ಶಾಂತಿ, ವೈಜ್ಞಾನಿಕ ಗುರಿಗಳ ಬಗ್ಗೆ ಮಾತನಾಡುತ್ತಿಲ್ಲ. ನೀವು ಅಲ್ಲಿ ಏನು ಮಾಡುತ್ತಿದ್ದೀರಿ? ಶಸ್ತ್ರಾಸ್ತ್ರಗಳ ಅಭಿವೃದ್ಧಿಗಾಗಿ ಯುಎಸ್ ರಕ್ಷಣಾ ಇಲಾಖೆಯಿಂದ ಹಣಕಾಸು ಒದಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಯುಎಸ್ ರಕ್ಷಣಾ ಇಲಾಖೆ ಮತ್ತು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷೀಯ ಆಡಳಿತವು ಉಕ್ರೇನ್‌ನಲ್ಲಿನ ಕಾರ್ಯಕ್ರಮಗಳ ಬಗ್ಗೆ ಅಧಿಕೃತವಾಗಿ ಜಾಗತಿಕ ಸಮುದಾಯಕ್ಕೆ ವಿವರಿಸಲು ನಿರ್ಬಂಧವನ್ನು ಹೊಂದಿದೆ. ನಾವು ಅದಕ್ಕೆ ಸಂಬಂಧಿಸಿದ ವಿವರಗಳನ್ನು ಕೇಳುತ್ತಿದ್ದೇವೆ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್ ನಟನ ಸಾವಿನ ಬೆನ್ನಲ್ಲೆ ಅವರ ಕೊನೆಯ ಪೋಸ್ಟ್ ವೈರಲ್
ಆದರೆ, ಜೈವಿಕ ಶಸ್ತ್ರಾಸ್ತ್ರಗಳ ಕುರಿತು ಆರೋಪವನ್ನು ಉಕ್ರೇನ್ ಈ ಹಿಂದೆಯೇ ನಿರಾಕರಿಸಿತ್ತು.
ಬೆಳಗಾವಿ: ಯದ್ಧಪೀಡಿತ ಉಕ್ರೇನ್‌ನಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಹೋಗಿ ವಾಪಸ್ಸಾಗಿರುವ ಭಾರತೀಯ ವೈದ್ಯ ವಿದ್ಯಾರ್ಥಿಗಳಿಗೆ ರಾಜ್ಯದ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ನೀಡಲಾಗುತ್ತದೆ ಎಂದು ಡೀಮ್ಡ್ ವಿಶ್ವವಿದ್ಯಾಲಯಗಳ ಒಕ್ಕೂಟ ಅಧ್ಯಕ್ಷ ಡಾ. ಪ್ರಭಾಕರ್ ಕೋರೆ ತಿಳಿಸಿದ್ದಾರೆ.
ಉಕ್ರೇನ್‌ನಲ್ಲಿ ಯುದ್ಧ ಆರಂಭವಾದ ಹಿನ್ನೆಲೆಯಲ್ಲಿ ಎಂಬಿಬಿಎಸ್ ಶಿಕ್ಷಣ ಅರ್ಧಕ್ಕೆ ತೊರೆದು ಬಂದಿರುವ ಭಾರತೀಯ ವೈದ್ಯ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಮುಂದುವರಿಸಲು ಅವಕಾಶ ನೀಡಲಾಗುತ್ತದೆ. ಉಕ್ರೇನ್ ಹಾಗೂ ರಷ್ಯಾ ಯುದ್ಧದಿಂದ ಸಾವಿರಾರು ಭಾರತೀಯ ವೈದ್ಯ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಕಾರಣಕ್ಕೆ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಅವಕಾಶ ನೀಡಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ರಾಷ್ಟ್ರಧ್ವಜದಿಂದಾನೆ ನಾವು ಇಂದು ಬದುಕಿ ತಾಯ್ನಾಡಿಗೆ ಬಂದಿದ್ದೇವೆ: ವಿದ್ಯಾರ್ಥಿ
ಪ್ರಧಾನಿ ಸೂಚಿಸಿರುವಂತೆ ಉಕ್ರೇನ್‌ನಲ್ಲಿ ಭಾರತೀಯ ವೈದ್ಯ ವಿದ್ಯಾರ್ಥಿಗಳು ಶಿಕ್ಷಣವನ್ನು ಮಧ್ಯದಲ್ಲಿಯೇ ತೊರೆದು ಬರುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದರೆ ಆ ವೈದ್ಯ ವಿದ್ಯಾರ್ಥಿಗಳ ಮುಂದಿನ ಕಲಿಕೆಗೆ ಯಾವುದೇ ತೊಂದರೆಯಾಗದಂತೆ ಕೇಂದ್ರ ಸರ್ಕಾರ ಹಲವು ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಅದೇ ರೀತಿ ರಾಜ್ಯದ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಸರ್ಕಾರದ ಸೂಚನೆ ಹಾಗೂ ನಿಯಮಗಳಿಗೆ ಅನುಗುಣವಾಗಿ ಉಕ್ರೇನ್‌ನಲ್ಲಿ ಕಲಿಯುತ್ತಿದ್ದ ಭಾರತೀಯ ವೈದ್ಯ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಮುಂದುವರಿಸಲು ಪ್ರವೇಶವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಬೀದರ್: ಉಕ್ರೇನ್‍ನಲ್ಲಿ ಸಿಲುಕಿದ್ದ ಬೀದರ್ ಮೂಲದ ಮತ್ತಿಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಗಡಿ ಜಿಲ್ಲೆ ಬೀದರ್‌ಗೆ ಬಂದಿದ್ದು ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ. ಇಷ್ಟು ದಿನ ಆತಂಕದಲ್ಲಿದ್ದ ಪೋಷಕರು ಮತ್ತು ಕುಟುಂಬಸ್ಥರು ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಸಂಭ್ರಮಪಟ್ಟರು.
ಶಶಾಂಕ್ ತಾಯ್ನಾಡಿಗೆ ಬರಲೇಬೇಕು ಎಂದು 40 ಕಿಮೀ ನಡೆದ ಕಥೆ ಮಾತ್ರ ರೋಚಕವಾಗಿದೆ. ಖಾರ್ಕಿವ್‍ನಲ್ಲಿ ಇದ್ದರೆ ಬಾರಿ ರಿಸ್ಕ್ ಆಗುತ್ತಿತ್ತು. ಹೀಗಾಗೀ ಅನಿವಾರ್ಯವಾಗಿ 40 ಕಿಮೀ ಯುದ್ಧಭೂಮಿಯಲ್ಲಿ ನಡೆದುಕೊಂಡು ಬಂದೆವು. 7ರಿಂದ 8ದಿನ ಬಂಕರ್‌ನಲ್ಲಿ ಇದ್ದೇವು. ಅಲ್ಲಿ ಊಟದ ಸಮಸ್ಯೆಯಾಗಿತ್ತು.
ನಮ್ಮ ರಾಷ್ಟ್ರಧ್ವಜದಿಂದಾನೆ ನಾವು ಇಂದು ಬದುಕಿ ತಾಯ್ನಾಡಿಗೆ ಬಂದಿದ್ದೇವೆ. ರಾಷ್ಟ್ರಧ್ವಜವೇ ನಮ್ಮ ಹೆಮ್ಮೆ, ರಾಷ್ಟ್ರಧ್ವಜವೇ ನಮ್ಮ ಪವರ್ ಎಂದು ರಾಷ್ಟ್ರಧ್ವಜದ ಬಗ್ಗೆ ಗೌರವ ವ್ಯಕ್ತಪಡಿಸಿದರು. ಅಲ್ಲಿ ಕೆಟ್ಟ ಪರಿಸ್ಥಿತಿ ಇತ್ತು. ಈಗಾ ಮನೆಗೆ ಮಗ ಬಂದಿದ್ದಾನೆ ಬಹಳ ಖುಷಿಯಾಗುತ್ತಿದೆ ಎಂದು ಪೋಷಕರು ಹರ್ಷ ವ್ಯಕ್ತಪಡಿಸುತ್ತಾರೆ. ಇದನ್ನೂ ಓದಿ: ಖಾರ್ಕೀವ್‍ನಲ್ಲಿ ಮೃತಪಟ್ಟ ನವೀನ್ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ
ಹಾವೇರಿ: ರಷ್ಯಾ ಸೈನಿಕರ ದಾಳಿಗೆ ಖಾರ್ಕೀವ್‍ನಲ್ಲಿ ಮೃತರಾಗಿದ್ದ ನವೀನ್ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ,ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಭೇಟಿ ನೀಡಿದ್ದಾರೆ.
ಹಾವೇರಿಯ ರಾಣೆಬೆನ್ನೂರಿನ ಚಳಗೇರಿಯಲ್ಲಿರುವ ನವೀನ್ ನಿವಾಸಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ, ವಿದ್ಯಾರ್ಥಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ನವೀನ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲದೆ ನವೀನ್ ಮೃತದೇಹ ತರುವ ಪ್ರಯತ್ನ ನಡೆಯುತ್ತಿದೆ ಎಂದು ಕುಟುಂಬಸ್ಥರಿಗೆ ಭರವಸೆ ನಿಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಕ್ರೇನ್ ನಲ್ಲಿ ಮೆಡಿಕಲ್ ಓಡಲು ಹೋಗಿದ್ದ ನವೀನ್ ನಾಲ್ಕನೇ ವರ್ಷದ ವಿದ್ಯಾರ್ಥಿ. ತಂದೆ-ತಾಯಿ ನವೀನ್ ಬಗ್ಗೆ ದೊಡ್ಡ ಆಸೆ ಇಟ್ಟುಕೊಂಡಿದ್ದರು. ದುರದೃಷ್ಟವಶಾತ್ ನವೀನ್ ಓದು ಮುಗಿಸಲು ಆಗಲಿಲ್ಲ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಮೃತಪಟ್ಟಿದ್ದಾನೆ. ಮಾರ್ಚ್ 1 ರಂದು ಬಂಕರ್ ನಲ್ಲಿದ್ದವರಿಗೆ ತಿಂಡಿ ತರೋಕೆ ಹೋಗಿದ್ನಂತೆ. ಕ್ಯೂನಲ್ಲಿ ನಿಂತಾಗ ಆಗಿದ್ದಂತಹ ಶೆಲ್ ದಾಳಿಗೆ ನವೀನ್ ಬಲಿಯಾಗಿದ್ದಾನೆ. ಮೃತದೇಹ ಅಲ್ಲಿಯೇ ಇದೆ ಎಂದರು. ಇದನ್ನೂ ಓದಿ: ನವೀನ್ ಕುಟುಂಬಸ್ಥರಿಗೆ 1 ಲಕ್ಷ ರೂ. ಚೆಕ್ ವಿತರಿಸಿದ ಸಲೀಂ ಅಹಮದ್
ಇನ್ನೂ ಬಾಳಿ ಬದುಕಬೇಕಾದ ಯುವಕ ನವೀನ್. ಸಮಾಜದಲ್ಲಿ ಆತನ ಮೇಲೆ ಹಲವು ನಿರೀಕ್ಷೆಗಳಿದ್ದವು. ಮೃತದೇಹ ತರುವ ಪ್ರಯತ್ನ ನಡೆಯುತ್ತಿವೆ. ಭಾರತ ಸರ್ಕಾರ ಕೂಡಲೇ ಮೃತದೇಹ ತರುವ ಪ್ರಯತ್ನ ಮಾಡಬೇಕು. ಸಂಬಂಧಿಸಿದವರಿಗೆ ಈ ಬಗ್ಗೆ ಮಾತನಾಡುವೆ. ಪ್ರಧಾನಮಂತ್ರಿಯವರಿಗೆ ಮೃತದೇಹ ತರಿಸುವ ಸಲುವಾಗಿ ಪತ್ರ ಬರೆಯುವೆ. ಕೋಳಿವಾಡರ ಪುತ್ರ ಅನುಮತಿ ಕೊಟ್ರೆ ತಮ್ಮ ವಿಮಾನದಲ್ಲಿ ಮೃತದೇಹ ತರುವುದಾಗಿ ಕೇಂದ್ರಕ್ಕೆ ಪತ್ರ ಬರೆದಿದ್ದರು. ಕೇಂದ್ರ ಸರ್ಕಾರದಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದರು.
ಚಿಕ್ಕವಯಸ್ಸಿನ ನವೀನ್ ಆತ್ಮಕ್ಕೆ ಚಿರಶಾಂತಿ ಸಿಗಲಿ. ಆತ ನಮ್ಮ ಮೈಸೂರಿನಲ್ಲಿ ಓದಿದ ಹುಡುಗ. ನಂಜನಗೂಡು ಪೇಪರ್ ಮಿಲ್ ನಲ್ಲಿ ಕೆಲಸ ಮಾಡ್ತಿದ್ರು ನವೀನ್ ತಂದೆ. ಮೃತ ನವೀನ್ ಅಣ್ಣ ಹರ್ಷ ಪಿಎಚ್‍ಡಿ ಮಾಡುತ್ತಿದ್ದಾನೆ. ನವೀನ್ ತಂದೆ-ತಾಯಿಗೆ ಬಹಳ ನೋವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ನೋವು ತಂದೆ-ತಾಯಿಗೆ ಕಾಡುತ್ತಿದೆ ಎಂದರು. ಇದನ್ನೂ ಓದಿ: ಮೃತ ನವೀನ್ ಕುಟುಂಬಕ್ಕೆ ಸಾಂತ್ವನ ಹೇಳಿ 25 ಲಕ್ಷ ರೂ. ಚೆಕ್ ಕೊಟ್ಟ ಸಿಎಂ
ಇಲ್ಲಿ ಸರ್ಕಾರಿ ಕೋಟಾದಲ್ಲಿ ಮೆಡಿಕಲ್ ಸೀಟು ಸಿಗದ್ದಕ್ಕೆ ನವೀನ್ ಉಕ್ರೇನ್ ಗೆ ಹೋಗಿದ್ದ. ಕೇಂದ್ರ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿತ್ತು. ರಾಜಕೀಯಕ್ಕೊಸ್ಕರ ಈ ಮಾತು ಹೇಳುತ್ತಿಲ್ಲ. ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆಗುತ್ತದೆ ಎಂಬುದು ಮಾಹಿತಿ ಇತ್ತು. ಯುದ್ಧ ಪ್ರಾರಂಭದ ಮುಂಚೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿತ್ತು. ಬೇರೆ ದೇಶದವರು ತಮ್ಮ ತಮ್ಮ ದೇಶದವರನ್ನ ಕರೆದುಕೊಂಡು ಹೋಗಿದ್ದಾರೆ. ಭಾರತ ದೇಶ ಮುಂಜಾಗ್ರತಾ ಕ್ರಮ ಕೈಗೊಂಡು ಅಲ್ಲಿನವರ ಕರೆದುಕೊಂಡು ಬರುವಲ್ಲಿ ಎಡವಿದೆ. ಅದನ್ನ ಮಾಡೋದರಲ್ಲಿ ಕೇಂದ್ರ ಸರ್ಕಾರ ಫೇಲ್ ಆಗಿದೆ. ಕೂಡಲೇ ನವೀನ್ ಮೃತದೇಹ ಭಾರತ ದೇಶಕ್ಕೆ ತರಿಸುವ ಕೆಲಸವನ್ನ ಮಾಡಬೇಕೆಂದು ಪ್ರಧಾನಿಯವರಿಗೆ ಒತ್ತಾಯಿಸಿದರು.
ಕೇಂದ್ರ ಸರ್ಕಾರ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದೆ ಎಂಬುದು ಗೊತ್ತಾಗುತ್ತದೆ. ವಿದೇಶಾಂಗ ಸಚಿವಾಲಯ ಜವಾಬ್ದಾರಿಯಿಂದ ಕೆಲಸ ಮಾಡಬೇಕಿತ್ತು. ಅವರು ಜಾಗೃತರಾಗಿದ್ದರೆ ನವೀನ್ ಜೀವ ಉಳಿಸಬಹುದಿತ್ತು. ನವೀನ್ ಮೃತದೇಹವನ್ನಾದರೂ ತರಿಸುವ ಕೆಲಸ ಮಾಡಬೇಕಿತ್ತು. 8-9 ದಿನಗಳ ಕಾಲ ವಿದ್ಯಾರ್ಥಿಗಳು ಬಂಕರ್ ನಲ್ಲಿ ಇದ್ದರಂತೆ. ಇದು ಬಹಳ ನೋವಿನ ಸಂಗತಿ. ಅಲ್ಲಿ ಓದಿ ಬಂದು ಹಳ್ಳಿನಲ್ಲಿ ಮಗ ಸೇವೆ ಮಾಡಬೇಕೆಂಬ ಆಸೆ ತಂದೆಯದಾಗಿತ್ತು. ಅದನ್ನ ಕೇಳಿ ಕರುಳು ಕಿತ್ತು ಬಂತು. ಯುವಕರು ದೇಶದ ಆಸ್ತಿ ಎಂದು ಸಿದ್ದರಾಮಯ್ಯ ಹೇಳಿದರು.
ಉಡುಪಿ: ರಷ್ಯಾ-ಉಕ್ರೇನ್ ನಡುವಿನ ಯುದ್ಧದಿಂದ ದಕ್ಷಿಣ ಭಾರತೀಯರಿಗೆ ಯುದ್ಧದ ಅನುಭವವಾದರೆ, ನನಗೆ ಮಾತೃಭೂಮಿ ಮೇಲೆ ಪ್ರೀತಿ ಜಾಸ್ತಿಯಾಯ್ತು ಎಂದು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಕಹಿ ಅನುಭವಗಳನ್ನು ಉಡುಪಿಯ ಅನೀಫ್ರೆಡ್ ರೆಡ್ಲೀ ಡಿಸೋಜಾ ವಿವರಿಸಿದರು.
ಪಬ್ಲಿಕ್ ಟಿವಿ ಜೊತೆ ಯುದ್ಧಭೂಮಿಯ ಅನುಭವ ಬಿಚ್ಚಿಟ್ಟ ಅವರು,ನಾವು ದಕ್ಷಿಣ ಭಾರತದವರು. ನಾವು ಯುದ್ಧ, ಬಾಂಬ್, ಶೆಲ್, ವಿಮಾನಗಳ ಓಡಾಟ ಯಾವುದನ್ನು ಕೂಡ ನಾವು ನೋಡಿಲ್ಲ. ಜೀವನದಲ್ಲಿ ಮೊದಲ ಬಾರಿಗೆ ಯುದ್ಧ ವಿಮಾನಗಳನ್ನು ನೋಡಿದ್ದೇನೆ. ಬಾಂಬ್‍ಗಳು ಶೆಲ್ ದಾಳಿ ಎಲ್ಲವೂ ಮೊದಲು. ಉತ್ತರ ಭಾರತದ ನನ್ನ ಫ್ರೆಂಡ್ಸ್ ಬಂಕರ್ ಒಳಗೆ ಇದ್ದಾಗಲೂ ಪಿಕ್ನಿಕ್ ರೀತಿಯಲ್ಲಿ ಇದ್ದರು. ಆದರೆ ನಾವು ಬಹಳ ಕಷ್ಟಪಟ್ಟು ಹತ್ತು ದಿನಗಳನ್ನು ಕಳೆದೆವು. ನಮಗೆ ಜೋರು ಹಸಿವಾಗ್ತಾ ಇದ್ರೂ ಸ್ವಲ್ಪ ಊಟ ಮಾಡಬೇಕಾಗಿತ್ತು. ಇಂದಿನ ಆಹಾರವನ್ನು ನಾಳೆ ಮತ್ತು ನಾಡಿದ್ದಿಗೆ ತೆಗೆದು ಇಡಬೇಕಾದ ಪರಿಸ್ಥಿತಿ ಎದುರಿಸಿದೆವು. ಏನೂ ಶಬ್ದ ಮಾಡದೆ ಸುಮ್ಮನೆ ಕುಳಿತುಕೊಳ್ಳುವುದೇ ನಮಗೆ ದೊಡ್ಡ ಶಿಕ್ಷೆಯ ಹಾಗೆ ಅನ್ನಿಸುತ್ತಿತ್ತು. ಹಗಲು ಮತ್ತು ರಾತ್ರಿ ನಾವು ಲೈಟ್ ಹಾಕದೆ ಕತ್ತಲಲ್ಲೇ ಕಳೆಯಬೇಕಾಗಿತ್ತು. ಇದು ನಮ್ಮ ಮನಸ್ಸಿಗೆ ಬಹಳ ಕಿರಿಕಿರಿಯಾಗುತ್ತಿತ್ತು ಎಂದು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಕಹಿ ಅನುಭವಗಳನ್ನು ವಿವರಿಸಿದರು. ಇದನ್ನೂ ಓದಿ: ಹೋಟೆಲ್‍ನಲ್ಲಿ ಅತ್ಯಾಚಾರಕ್ಕೆ ಯತ್ನ – ಬಿಹಾರ ಕ್ರಿಕೆಟ್ ಮುಖ್ಯಸ್ಥನ ವಿರುದ್ಧ ಆರೋಪ
ಖಾರ್ಕಿವ್‍ನ ಬಂಕರ್‍ನಲ್ಲಿ ನಾವು 10 ದಿನ ಕಳೆಯಬೇಕಾಯಿತು. ಸರಿಯಾಗಿ ನಿದ್ದೆ ಇಲ್ಲ ಊಟ ಇಲ್ಲ ಅದರ ಜೊತೆಗೆ ಜೀವಭಯ. ನಮಗೆ ರಾಯಭಾರಿ ಕಚೇರಿಯಿಂದ ಸಂದೇಶ ಬಂತು. ಕೂಡಲೇ ಬಂಕರ್ ಖಾಲಿ ಮಾಡಿ ಎಂದು. ಹೊರಬಂದು ನಾವು ಬಸ್‍ಗಾಗಿ ಬಹಳ ಕಾದೆವು. ಪ್ರೈವೇಟ್ ವಾಹನಗಳನ್ನು ಮಾಡಲು ಪ್ರಯತ್ನಪಟ್ಟೆವು. ಅದು ಸಾಧ್ಯವಾಗದಿದ್ದಾಗ ಸುಮಾರು ಎಂಟು ಕಿಲೋಮೀಟರ್‌ಗಳ ದೂರವನ್ನು ನಡೆದುಕೊಂಡು ಹೋಗಲು ನಿರ್ಧಾರ ಮಾಡಿದೆವು. ಶೆಲ್ ದಾಳಿ, ಬಾಂಬ್ ಸದ್ದು ವಿಮಾನಗಳ ಹೋರಾಟಗಳ ನಡುವೆ ನಡೆದುಕೊಂಡು ರೈಲು ನಿಲ್ದಾಣ ಸೇರಿದೆವು. ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಅವರ ‘ಮಿಷನ್ ಮಜ್ನು’ ಬರ್ತಿದ್ದಾನೆ, ದಾರಿ ಬಿಡಿ
ವಿಮಾನಗಳ ಓಡಾಟದ ಶಬ್ದ ಬಾಂಬ್‍ಗಳ ಶಬ್ದ ಕೇಳಿಸಿಕೊಂಡು ನಾವು ವಾಪಸ್ ಬರುತ್ತೇವೆ ಅಂತ ಅಂದುಕೊಂಡಿರಲಿಲ್ಲ. ನನ್ನ ಮನಸ್ಸಿನಲ್ಲಿ ನಾವು ವಾಪಸ್ ಬರಬೇಕು, ನಾನು ವಾಪಸ್ ಇಂಡಿಯಾಕ್ಕೆ ತಲುಪಬೇಕು. ನನ್ನ ಕುಟುಂಬವನ್ನು ಸೇರಿಕೊಳ್ಳಬೇಕು ಎಂದು ಗಟ್ಟಿ ನಿರ್ಧಾರ ಮಾಡಿದ ಕಾರಣ ನನಗೆ ವಾಪಸ್ ಬರಲು ಸಾಧ್ಯವಾಯಿತು. ನಾನು ವಾಪಸ್ ಉಡುಪಿಗೆ ಹೋಗಿ ತಂದೆ ತಾಯಿಯ ಮುಖ ನೋಡಬೇಕು ಎಂದು ಮನಸ್ಸಿನಲ್ಲಿ ಇದ್ದ ಕಾರಣ ನಾವು ವಾಪಸ್ ಬಂದೆ. ಇಲ್ಲದಿದ್ದರೆ ಅಲ್ಲೇ ಬಾಕಿಯಾಗಬೇಕಾಗಿತ್ತು ಎಂದು ನೆನಪು ಮಾಡಿಕೊಂಡರು.
ಉಕ್ರೇನಿಗರು ಥಳಿಸಿದರು:
ಹೊರಗೆ ನಾವು ರೈಲು ಹತ್ತುವಾಗ ಉಕ್ರೇನಿನ ಸ್ಥಳೀಯರು ನಮ್ಮ ಗುಂಪಿನ ಮೇಲೆ ಪೆಪ್ಪರ್ ಸ್ಪ್ರೇ ಮಾಡಿದರು. ರೈಲು ಹತ್ತಲು ಬಿಡಲಿಲ್ಲ. ಬಾಗಿಲಿನಲ್ಲಿ ತಳ್ಳಿದರು, ಹೊಡೆದರು. ನೀವು ಭಾರತೀಯರು ನಿಮ್ಮ ದೇಶಬಿಟ್ಟು ಇಲ್ಲಿ ಬಂದದ್ದು ಯಾಕೆ? ನೀವು ಇಲ್ಲೇ ಸತ್ತುಹೋಗಿ ಎಂದು ನಮ್ಮನ್ನು ರೈಲು ಹತ್ತಲು ಬಿಡುತ್ತಿರಲಿಲ್ಲ. ನಾವು ಅಲ್ಲಿನ ಪ್ರಜೆಗಳಿಗೆ ಸರಿಯಾಗಿ ಉತ್ತರಕೊಟ್ಟು ಅವರನ್ನು ತಳ್ಳಿ ರೈಲಿನಲ್ಲಿ ಜಾಗ ಮಾಡಿಕೊಂಡು ವಾಪಸ್ ಬಂದಿದ್ದೇವೆ ಎಂದು ಅನೀಫ್ರೆಡ್ ಡಿಸೋಜಾ ಅನುಭವ ಹಂಚಿಕೊಂಡರು.
ಖಾರ್ಕಿವ್ ಅಥವಾ ಕೀವ್‍ಗೆ ಹೆಲಿಕಾಪ್ಟರ್ ಅಥವಾ ವಿಮಾನವನ್ನು ತೆಗೆದುಕೊಂಡು ಭಾರತ ದೇಶ ಅಲ್ಲಿಗೆ ಬರಲು ಸಾಧ್ಯವಿರಲಿಲ್ಲ. ನಿರಂತರವಾಗಿ ಏರ್‍ಸ್ಟ್ರೈಕ್, ಮಿಸೈಲ್ ದಾಳಿ ಮತ್ತು ಬಾಂಬಿಂಗ್ ನಡೆಯುತ್ತಿರುವುದರಿಂದ ಹೊರದೇಶದವರು ಯಾರು ಉಕ್ರೇನಿಗೆ ಬರಲು ಸಾಧ್ಯವಿರಲಿಲ್ಲ. ಇಲ್ಲಿ ಬಂದು ಹೇಳಿದಷ್ಟು ಸುಲಭ ಇಲ್ಲ. ರಾಯಭಾರ ಕಚೇರಿ ಸಲಹೆಗಳನ್ನು ಕೊಟ್ಟು, ಬಂಕರ್‌ನಲ್ಲಿ ನಮ್ಮನ್ನು ಕಾಪಾಡಿದೆ. ಹಂಗೇರಿಯಿಂದ ನಮ್ಮನ್ನು ಸೇಫಾಗಿ ಸರ್ಕಾರ ಮನೆಗೆ ತಲುಪಿಸಿದೆ. ನಮಗೆ ನಮ್ಮ ಮಾತೃಭೂಮಿಯ ಮೇಲೆ ಮೊದಲೇ ಪ್ರೀತಿಯಿತ್ತು. ಈಗ ದೇಶದ ಮೇಲೆ ಪ್ರೀತಿ ಜಾಸ್ತಿಯಾಗಿದೆ ಎಂದರು. ಇದನ್ನೂ ಓದಿ: ಡ್ರಗ್ಸ್ ನಶೆಯಲ್ಲಿ ಕಲರ್ ಲೈಟ್ ನೋಡಿದ್ರೆ ಮತ್ತಷ್ಟು ಕಿಕ್ ಸಿಕ್ತಿತ್ತು
ನನ್ನ ಮಗಳಿಗೆ ಆರೋಗ್ಯ ಸಮಸ್ಯೆ ಇತ್ತು. ಡಸ್ಟ್ ಅಲರ್ಜಿ ಮತ್ತು ಆಸ್ತಮಾ ಇದ್ದ ಕಾರಣ ನಮಗೆ ಬಹಳ ಆತಂಕ ಆಗುತ್ತಿತ್ತು. ಯುದ್ಧ ಆರಂಭವಾಗಿದೆ ಎಂದು ತಿಳಿದ ಕೂಡಲೇ ನಾವು ಇಡೀ ದಿನ ಪ್ರಾರ್ಥನೆ ಮಾಡುತ್ತಿದ್ದೆವು. ದಿನಕ್ಕೆ ಎರಡು ಮೂರು ಬಾರಿ ಚರ್ಚಿಗೆ ಹೋಗಿ ದೇವರಲ್ಲಿ ಪೂಜೆ ಸಲ್ಲಿಸುತ್ತಿದ್ದೆವು. ಮಗಳ ಫೋನಿಗಾಗಿ ಕಾಯುವುದು ಮತ್ತು ಅವಳಿಗೆ ಕೆಲವು ಸಲಹೆಗಳನ್ನು ಕೊಡುವುದು ನಮ್ಮ ದಿನಚರಿಯಾಗಿತ್ತು. ಕಳೆದ ಹತ್ತು ದಿನಗಳಲ್ಲಿ ನಾವು ಬೇರೆ ಏನನ್ನು ಮಾಡಿಲ್ಲ. ನಮ್ಮ ಪ್ರಾರ್ಥನೆಯ ಫಲ ಮಗಳು ನಮ್ಮ ಮನೆಗೆ ಬಂದಿದ್ದಾಳೆ. ನಮಗೆ ಸರ್ಕಾರ ಮತ್ತು ರಾಯಭಾರ ಕಚೇರಿ ಬಹಳ ಸಹಾಯ ಆಗಿದೆ. ಕ್ಷಣಕ್ಷಣಕ್ಕೂ ಅಲ್ಲಿನ ಬೆಳವಣಿಗೆಗಳನ್ನು ನಮಗೆ ತಿಳಿಸಿದ್ದಾರೆ. ಮಕ್ಕಳಿಗೆ ಸರಿಯಾಗಿ ಮಾರ್ಗದರ್ಶನ ಮಾಡಿದ್ದಾರೆ. ಚಾನಲ್ ಮತ್ತು ವೆಬ್‌ಸೈಟ್‌ಗಳ ಮೂಲಕ ನಮಗೆ ನಿರಂತರ ಮಾಹಿತಿಗಳನ್ನು ಕೊಡುತ್ತಿದ್ದರು ಇದು ನಮಗೆ ಬಹಳ ಉಪಕಾರವಾಯಿತು ಎಂದು ತಾಯಿ ಶೋಭಾ ಡಿಸೋಜಾ ಹೇಳಿದರು.