Tag: russia ukraine conflict

  • ನಿಮ್ಮೊಂದಿಗೆ ನಾವಿದ್ದೇವೆ: ಐಫೆಲ್‌ ಟವರ್‌ನಲ್ಲಿ ಉಕ್ರೇನ್‌ ರಾಷ್ಟ್ರೀಯ ವರ್ಣ ಬೆಳಗಿಸಿ ಫ್ರಾನ್ಸ್‌ ಅಭಯ

    ನಿಮ್ಮೊಂದಿಗೆ ನಾವಿದ್ದೇವೆ: ಐಫೆಲ್‌ ಟವರ್‌ನಲ್ಲಿ ಉಕ್ರೇನ್‌ ರಾಷ್ಟ್ರೀಯ ವರ್ಣ ಬೆಳಗಿಸಿ ಫ್ರಾನ್ಸ್‌ ಅಭಯ

    ಪ್ಯಾರಿಸ್: ಉಕ್ರೇನ್‌ ಮೇಲೆ ಆಕ್ರಮಣ ನಡೆಸುತ್ತಿರುವ ರಷ್ಯಾ ನಡೆಗೆ ಅಮೆರಿಕ ಸೇರಿದಂತೆ ಅನೇಕ ಪಾಶ್ಚಾತ್ಯ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಪ್ಯಾರಿಸ್‌ನಲ್ಲಿರುವ ಐಫೆಲ್‌ ಟವರ್‌ನಲ್ಲಿ ಉಕ್ರೇನ್‌ ರಾಷ್ಟ್ರೀಯ ವರ್ಣವನ್ನು ವಿದ್ಯುತ್‌ ದೀಪಾಲಂಕಾರದಿಂದ ಬೆಳಗಿಸುವ ಮೂಲಕ ರಷ್ಯಾ ಯುದ್ಧವನ್ನು ಫ್ರಾನ್ಸ್‌ ವಿರೋಧಿಸಿದೆ.

    ಪ್ಯಾರಿಸ್‌ ಮೇಯರ್‌ ಆನ್ನೆ ಹಿಡಾಲ್ಗೊ ಅವರ ಕೋರಿಕೆಯ ಮೇರೆಗೆ ಐಫೆಲ್‌ ಟವರ್‌ ಶುಕ್ರವಾರ ಉಕ್ರೇನ್‌ನ ರಾಷ್ಟ್ರೀಯ ನೀಲಿ ಮತ್ತು ಹಳದಿ ಬಣ್ಣಗಳಲ್ಲಿ ಬೆಳಗಿತು. ರಷ್ಯಾದ ದಾಳಿಯ ಹಿನ್ನೆಲೆಯಲ್ಲಿ ಉಕ್ರೇನ್‌ ಜನರೊಂದಿಗೆ ಒಗ್ಗಟ್ಟನ್ನು ಸೂಚಿಸುವ ಸಂಕೇತ ಇದು ಎಂದು ಮೇಯರ್‌ ತಿಳಿಸಿದ್ದಾರೆ. ಇದನ್ನೂ ಓದಿ: ಪೋಷಕರನ್ನು ಕಳೆದುಕೊಂಡು ನಡುಬೀದಿಯಲ್ಲೇ ಬಾಲಕನ ಆಕ್ರಂದನ

    ರಷ್ಯಾ ಸೇನಾ ಪಡೆ ಈಗಾಗಲೇ ಉಕ್ರೇನ್‌ ರಾಜಧಾನಿ ಕೀವ್‌ ಪ್ರವೇಶಿಸಿದ್ದು, ಗಗನಚುಂಬಿ ಕಟ್ಟಡಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಕ್ಷಿಪಣಿ ದಾಳಿಯಿಂದಾಗಿ ದೇಶದ ಜನತೆ ತತ್ತರಿಸಿ ಹೋಗಿದ್ದಾರೆ. ಎಲ್ಲರೂ ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.

    ಉಕ್ರೇನ್‌ ಮಿಲಿಟರಿ ಮೇಲೆ ನಿಯಂತ್ರಣ ಸಾಧಿಸಲು ಈ ಯುದ್ಧ ನಡೆಸಲಾಗುತ್ತಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ತಿಳಿಸಿದ್ದಾರೆ. ಆದರೆ ಪುಟಿನ್‌ ನಿರ್ಧಾರಕ್ಕೆ ಅಮೆರಿಕ ಸೇರಿ ಅನೇಕ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಇದನ್ನೂ ಓದಿ: ಯುದ್ಧ ಬೇಡ: ತನ್ನ ದೇಶಕ್ಕೆ ರಷ್ಯಾ ಟೆನಿಸ್‌ ತಾರೆ ಮನವಿ

    ಉಕ್ರೇನ್‌ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಳ್ಳುತ್ತಿರುವ ಸಂದರ್ಭದಲ್ಲಿ ಫ್ರೆಂಚ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌, ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮತ್ತು ರಷ್ಯಾ ಅಧ್ಯಕ್ಷ ಪುಟಿನ್‌ ಇಬ್ಬರೊಂದಿಗೂ ಮಾತುಕತೆ ನಡೆಸಿದ್ದಾರೆ.

  • ಉಕ್ರೇನ್‌ ಬಿಕ್ಕಟ್ಟು – ಬೆಂಗಳೂರು ವಿದ್ಯಾರ್ಥಿನಿಯ ವೀಡಿಯೋ ಶೇರ್‌ ಮಾಡಿ ಕೇಂದ್ರಕ್ಕೆ ರಾಗಾ ಮನವಿ

    ಉಕ್ರೇನ್‌ ಬಿಕ್ಕಟ್ಟು – ಬೆಂಗಳೂರು ವಿದ್ಯಾರ್ಥಿನಿಯ ವೀಡಿಯೋ ಶೇರ್‌ ಮಾಡಿ ಕೇಂದ್ರಕ್ಕೆ ರಾಗಾ ಮನವಿ

    ನವದೆಹಲಿ: ಯುದ್ಧ ಭೂಮಿ ಉಕ್ರೇನ್‌ನ ಬಂಕರ್‌ಗಳಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ತುರ್ತಾಗಿ ಅಲ್ಲಿಂದ ಸ್ಥಳಾಂತರಿಸಲು ಕ್ರಮವಹಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮನವಿ ಮಾಡಿದ್ದಾರೆ.

    ರಷ್ಯಾ ಯುದ್ಧ ಘೋಷಣೆಯಿಂದಾಗಿ ಉಕ್ರೇನ್‌ನ ಬಂಕ್‌ಗಳಲ್ಲಿ ತೊಂದರೆಗೆ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ರಾಹುಲ್‌ ಗಾಂಧಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಿನ್ನೆ ಮದುವೆಯಾಗಿ ಇಂದು ದೇಶ ಸೇವೆಗೆ ಗನ್‌ ಹಿಡಿದ ದಂಪತಿ

    ಬಂಕರ್‌ಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಪ್ರಾಣ ಭೀತಿಯ ದೃಶ್ಯಗಳು ಆತಂಕಕಾರಿಯಾಗಿವೆ. ಭಾರೀ ದಾಳಿಗೆ ಒಳಗಾಗಿರುವ ಪೂರ್ವ ಉಕ್ರೇನ್‌ನಲ್ಲಿ ಹಲವರು ಸಿಲುಕಿಕೊಂಡಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿರುವವರ ಕುಟುಂಬದ ಸದಸ್ಯರ ಆತಂಕದ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ಎಲ್ಲರ ತುರ್ತು ಸ್ಥಳಾಂತರಕ್ಕೆ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿ ಮನವಿ ಮಾಡಿದ್ದಾರೆ.

    https://twitter.com/RahulGandhi/status/1497417864155832320

    ಬೆಂಗಳೂರಿನ ಮೇಘಾ ಎಂಬ ವಿದ್ಯಾರ್ಥಿನಿ ವೀಡಿಯೋವೊಂದನ್ನು ಶೇರ್‌ ಮಾಡಿದ್ದರು. ಭಾರತದ ನಾನಾ ಭಾಗಗಳ ಪ್ರಜೆಗಳು ಉಕ್ರೇನ್‌ನ ಬಂಕರ್‌ನಲ್ಲಿ ಸಿಲುಕಿದ್ದೇವೆ. ತಿನ್ನಲು ಅನ್ನವಿಲ್ಲ, ಕುಡಿಯಲು ನೀರಿಲ್ಲ. ನಮಗೆ ಸಹಾಯ ಬೇಕಾಗಿದೆ. ಸಹಾಯ ಮಾಡಲು ಯಾರೂ ಮುಂದಾಗುತ್ತಿಲ್ಲ. ನಮ್ಮನ್ನು ಕರೆದೊಯ್ಯಲು ಯಾವುದೇ ವಿಶೇಷ ವಿಮಾನ ಇಲ್ಲ. ಬಂಕರ್‌ಗಳಲ್ಲಿ ಇರುವುದು ತುಂಬಾ ಕಷ್ಟಕರವಾಗಿದೆ. ದಯಮಾಡಿ ನಮಗೆ ಸಹಾಯ ಒದಗಿಸಿ ಎಂದು ಅಂಗಲಾಚುತ್ತಿರುವ ವೀಡಿಯೋವನ್ನು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ. ಇದನ್ನೂ ಓದಿ: ಯುದ್ಧ ಬೇಡ: ತನ್ನ ದೇಶಕ್ಕೆ ರಷ್ಯಾ ಟೆನಿಸ್‌ ತಾರೆ ಮನವಿ

    ಯುದ್ಧಪೀಡಿತ ಉಕ್ರೇನ್‌ನಲ್ಲಿ ಭಾರತದ ಸಾವಿರಾರು ಮಂದಿ ಸಿಲುಕಿಕೊಂಡಿದ್ದಾರೆ. 15,000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಅವರನ್ನು ಕರೆತರಲು ಏರ್‌ ಇಂಡಿಯಾ ಕಾರ್ಯಾಚರಣೆ ನಡೆಸುತ್ತಿದೆ. ನಾವು ತಿಳಿಸುವವರೆಗೂ ಯಾರು ಕೂಡ ದೇಶದ ಗಡಿ ಭಾಗಗಳಿಗೆ ಹೋಗಬೇಡಿ. ನೀವಿರುವ ಸ್ಥಳದಲ್ಲೇ ಇರಿ ಎಂದು ಭಾರತದ ರಾಯಭಾರಿ ಕಚೇರಿ ಸೂಚನೆ ನೀಡಿದೆ.

  • ಯುದ್ಧ ಬೇಡ: ತನ್ನ ದೇಶಕ್ಕೆ ರಷ್ಯಾ ಟೆನಿಸ್‌ ತಾರೆ ಮನವಿ

    ಯುದ್ಧ ಬೇಡ: ತನ್ನ ದೇಶಕ್ಕೆ ರಷ್ಯಾ ಟೆನಿಸ್‌ ತಾರೆ ಮನವಿ

    ಮಾಸ್ಕೋ: ಉಕ್ರೇನ್‌ ಮೇಲಿನ ರಷ್ಯಾ ಮಿಲಿಟರಿ ದಾಳಿಗೆ ರಷ್ಯನ್ನರಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ರಷ್ಯಾದ ಅನೇಕ ಕಡೆಗಳಲ್ಲಿ ಯುದ್ಧ ವಿರೋಧಿಸಿ ಪ್ರತಿಭಟನೆ ನಡೆಯುತ್ತಿವೆ. ಅಂತೆಯೇ ಉಕ್ರೇನ್‌ ಮೇಲಿನ ಯುದ್ಧವನ್ನು ಖಂಡಿಸಿ ರಷ್ಯಾದ ಟೆನಿಸ್‌ ತಾರೆ ಆಂಡ್ರೆ ರುಬ್ಲೆವ್‌ ಸಂದೇಶವೊಂದನ್ನು ನೀಡಿದ್ದಾರೆ.

    ರಷ್ಯಾದ ಟೆನಿಸ್‌ ತಾರೆ ಆಂಡ್ರೆ ರುಬ್ಲೆವ್‌ ಅವರು ಶುಕ್ರವಾರ ನಡೆದ ದುಬೈ ಟೆನಿಸ್‌ ಚಾಂಪಿಯನ್‌ಶಿಪ್‌ ಸೆಮಿ-ಫೈನಲ್‌ ಪಂದ್ಯ ವಿಜೇತರಾಗಿದ್ದಾರೆ. ಈ ವೇಳೆ ʼಯುದ್ಧ ಬೇಡʼ ಎಂದು ತನ್ನ ದೇಶಕ್ಕೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ನನಗೆ ಸ್ಥಳಾಂತರ ಬೇಡ, ಮದ್ದುಗುಂಡುಗಳು ಬೇಕು – ಅಮೆರಿಕ ಆಫರ್ ತಿರಸ್ಕರಿಸಿದ ಉಕ್ರೇನ್ ಅಧ್ಯಕ್ಷ

    ʼದಯವಿಟ್ಟು ಯುದ್ಧ ಬೇಡʼ ಎಂದು ಹೇಳಿರುವ ಆಂಡ್ರೆ, ಉಕ್ರೇನ್‌ನಲ್ಲಿ ತನ್ನ ರಾಷ್ಟ್ರದ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ತಮ್ಮ ಭಾವನೆಗಳನ್ನು ಸ್ಪಷ್ಟಪಡಿಸಿದ್ದಾರೆ. ಆಂಡ್ರೆ ತನ್ನ ನಿಲುವನ್ನು ಛಾಯಾಗ್ರಾಹಕರೊಬ್ಬರು ಹಿಡಿದಿದ್ದ ಕ್ಯಾಮೆರಾದ ಲೆನ್ಸ್‌ ಮೇಲೆ ಬರೆದಿದ್ದಾರೆ. ಈ ವೀಡಿಯೋವನ್ನು ಕೆನಡಾ ಸ್ಫೋರ್ಟ್ಸ್‌ ಲೀಡರ್‌ ತನ್ನ ಅಧಿಕೃತ ಟ್ವಿಟ್ಟರ್‌ನಲ್ಲಿ ಟ್ವೀಟ್‌ ಮಾಡಿದೆ.

    ಆಂಡ್ರೆ ರುಬ್ಲೆವ್‌ ಶುಕ್ರವಾರ ಸೆಮಿ-ಫೈನಲ್‌ ಪಂದ್ಯದಲ್ಲಿ ಹಬರ್ಟ್‌ ಹರ್ಕಾಜ್‌ ವಿರುದ್ಧ 3-6, 7-5, 7-6 (7/5) ಅಂತರದಲ್ಲಿ ಜಯಗಳಿಸಿದ್ದಾರೆ. ನಂತರ ದುಬೈನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಂತಿ ಮತ್ತು ಏಕತೆಯನ್ನು ನಂಬಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶಾಂತಿಯುತವಾಗಿ ಬಿಕ್ಕಟ್ಟು ಪರಿಹರಿಸಿಕೊಳ್ಳಿ: ಉಕ್ರೇನ್‌, ರಷ್ಯಾಗೆ ತಾಲಿಬಾನ್‌ ಸಲಹೆ

    ಉಕ್ರೇನ್‌ ಮೇಲಿನ ರಷ್ಯಾದ ಆಕ್ರಮಣದ ಹಿನ್ನೆಲೆಯಲ್ಲಿ, ರುಬ್ಲೆವ್‌ ಎರಡೂ ರಾಷ್ಟ್ರಗಳ ಧ್ವಜಗಳ ಬಣ್ಣಗಳನ್ನು ಒಳಗೊಂಡಿರುವ ಫೀಚರ್‌ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ರಷ್ಯಾ ವಿರುದ್ಧದ UNSC ನಿರ್ಣಯದಿಂದ ದೂರ ಉಳಿದ ಭಾರತ – ಧನ್ಯವಾದ ತಿಳಿಸಿದ ರಷ್ಯಾ

  • ರಷ್ಯಾ ವಿರುದ್ಧದ UNSC ನಿರ್ಣಯದಿಂದ ದೂರ ಉಳಿದ ಭಾರತ – ಧನ್ಯವಾದ ತಿಳಿಸಿದ ರಷ್ಯಾ

    ರಷ್ಯಾ ವಿರುದ್ಧದ UNSC ನಿರ್ಣಯದಿಂದ ದೂರ ಉಳಿದ ಭಾರತ – ಧನ್ಯವಾದ ತಿಳಿಸಿದ ರಷ್ಯಾ

    ನವದೆಹಲಿ: ಉಕ್ರೇನ್‌ ವಿರುದ್ಧದ ರಷ್ಯಾ ಆಕ್ರಮಣವನ್ನು ಖಂಡಿಸುವ ಯುಎನ್‌ಎಸ್‌ಸಿ ನಿರ್ಣಯದಿಂದ ಭಾರತ ದೂರ ಉಳಿದಿದೆ. ರಷ್ಯಾ ವಿರುದ್ಧ 11 ರಾಷ್ಟ್ರಗಳು ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದರೆ, ಭಾರತ ಸೇರಿ ಮೂರು ರಾಷ್ಟ್ರಗಳು ನಿರ್ಣಯದಿಂದ ದೂರ ಉಳಿದು ತಟಸ್ಥ ನೀತಿ ಅನುಸರಿಸಿವೆ.

    ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಿರ್ಣಯ ಮಂಡಿಸಲಾಗಿತ್ತು. ಭಾರತ, ಚೀನಾ, ಯುಎಇ ಈ ಮೂರು ರಾಷ್ಟ್ರಗಳು ಯುಎನ್‌ಎಸ್‌ಸಿ ನಿರ್ಣಯದಿಂದ ದೂರ ಉಳಿದಿವೆ. ಆದರೆ 11 ರಾಷ್ಟ್ರಗಳು ರಷ್ಯಾ ವಿರುದ್ಧ ಮತ ಚಲಾಯಿಸಿವೆ. ಈ ವೇಳೆ ರಷ್ಯಾ ತನ್ನ ವಿಟೋ ಅಧಿಕಾರವನ್ನು ಬಳಸಿದೆ. ಇದನ್ನೂ ಓದಿ: ರಷ್ಯಾದ ಇಬ್ಬರು ಸೈನಿಕರನ್ನು ಸೆರೆ ಹಿಡಿದ ಉಕ್ರೇನ್‌ ಸೇನೆ

    ಅಮೆರಿಕ, ಅಲ್ಬೇನಿಯಾ ಸೇರಿದಂತೆ ಪೋಲ್ಯಾಂಡ್‌, ಇಟಲಿ, ಜರ್ಮನಿ, ಎಸ್ಟೋನಿಯಾ, ಲಕ್ಸೆಂಬರ್ಗ್‌, ಜರ್ಮನಿ ಸೇರಿದಂತೆ 11 ರಾಷ್ಟ್ರಗಳು ರಷ್ಯಾ ಆಕ್ರಮಣ ಖಂಡಿಸುವ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿವೆ.

    ಉಕ್ರೇನ್‌ನಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದ ಭಾರತವು ವಿಚಲಿತವಾಗಿದೆ. ಹಿಂಸಾಚಾರ ಮತ್ತು ಹಗೆತನವನ್ನು ತಕ್ಷಣವೇ ನಿಲ್ಲಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ. ಕೇವಲ ಪರಿಹಾರಗಳಿಂದಾಗಿ ನಾವು ಮನುಷ್ಯ ಜೀವಗಳಿಗೆ ಬೆಲೆ ಕೊಡಲು ಸಾಧ್ಯವಿಲ್ಲ ಎಂದು UN ರಾಯಭಾರದ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವವೇ ನಮ್ಮೊಂದಿಗಿದೆ, ಜಯ ನಮ್ಮದೆ: ಉಕ್ರೇನ್ ಅಧ್ಯಕ್ಷ

    ರಾಜತಾಂತ್ರಿಕತೆಯ ಹಾದಿ ಕೈಬಿಟ್ಟಿರುವುದು ವಿಷಾದದ ಸಂಗತಿ. ನಾವು ಮತ್ತೆ ಅದಕ್ಕೆ ಹಿಂತಿರುಗಬೇಕು. ಈ ಎಲ್ಲಾ ಕಾರಣಗಳಿಗಾಗಿ, ಭಾರತವು ಈ ನಿರ್ಣಯದಿಂದ ದೂರವಿರಲು ನಿರ್ಧರಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಭಾರತವು ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಅಂತರರಾಷ್ಟ್ರೀಯ ಕಾನೂನು ಮತ್ತು ಯುಎನ್‌ ಚಾರ್ಟರ್‌ನ ತತ್ವಗಳನ್ನು ಗೌರವಿಸಲು ಕರೆ ನೀಡಿದೆ. ಭಾರತೀಯ ಸಮುದಾಯದ ಭದ್ರತೆ, ಉಕ್ರೇನ್‌ನಲ್ಲಿ ಸಿಕ್ಕಿರುವ ವಿದ್ಯಾರ್ಥಿಗಳನ್ನು ಅಲ್ಲಿಂದ ಸ್ಥಳಾಂತರಿಸುವುದು ತಕ್ಷಣದ ಆದ್ಯತೆಯಾಗಿದೆ. ಇದನ್ನೂ ಓದಿ: ಉಕ್ರೇನ್‌ ಯುದ್ಧ ಭೀಕರತೆ ನಡುವೆಯೂ ಹಸೆಮಣೆ ಏರಿ ಜೋಡಿ ಸಂಭ್ರಮ

    ಭಾರತಕ್ಕೆ ರಷ್ಯಾ ಧನ್ಯವಾದ
    ಯುಎನ್‌ಎಸ್‌ಸಿ ನಿರ್ಣಯದಿಂದ ದೂರ ಉಳಿದ ಭಾರತ ಸೇರಿ ಮೂರು ರಾಷ್ಟ್ರಗಳಿಗೆ ರಷ್ಯಾ ಧನ್ಯವಾದ ತಿಳಿಸಿದೆ. ರಷ್ಯಾ ವಿರುದ್ಧದ ಮತದಾನದಿಂದ ಭಾರತ, ಚೀನಾ, ಯುಎಇ ದೂರ ಉಳಿದಿದ್ದು, ತಟಸ್ಥವಾಗಿವೆ. ಹೀಗಾಗಿ ರಷ್ಯಾ ಕೃತಜ್ಞತೆ ಸಲ್ಲಿಸಿದೆ.