Tag: russia soldiers

  • ಮಹಿಳೆಯರ ಮೇಲೆ ರಷ್ಯಾ ಸೈನಿಕರಿಂದ ಅತ್ಯಾಚಾರ: ಉಕ್ರೇನ್‌ ಸಚಿವ ಆರೋಪ

    ಮಹಿಳೆಯರ ಮೇಲೆ ರಷ್ಯಾ ಸೈನಿಕರಿಂದ ಅತ್ಯಾಚಾರ: ಉಕ್ರೇನ್‌ ಸಚಿವ ಆರೋಪ

    ಲಂಡನ್‌: ರಷ್ಯಾ ಸೈನಿಕರು ಯುದ್ಧದ ನಡುವೆಯೇ ಉಕ್ರೇನಿಯನ್ನರ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಉಕ್ರೇನ್‌ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಗಂಭೀರ ಆರೋಪ ಮಾಡಿದ್ದಾರೆ.

    ನಗರಗಳ ಮೇಲೆ ಬಾಂಬ್‌ಗಳು ಬಿದ್ದಾಗ, ಆಕ್ರಮಿತ ನಗರಗಳಲ್ಲಿ ಸೈನಿಕರು ಮಹಿಳೆಯರನ್ನು ಅತ್ಯಾಚಾರ ಮಾಡಿದಾಗ, ದುರದೃಷ್ಟವಶಾತ್ ರಷ್ಯಾದ ಸೈನಿಕರು ಉಕ್ರೇನಿಯನ್ ನಗರಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರವೆಸಗಿರುವುದಕ್ಕೆ ಸಂಬಂಧಿಸಿದ ಹಲವಾರು ಪ್ರಕರಣಗಳು ನಮ್ಮಲ್ಲಿವೆ. ಆದರೆ ಅಂತಾರಾಷ್ಟ್ರೀಯ ಕಾನೂನಿನ ದಕ್ಷತೆಯ ಬಗ್ಗೆ ಮಾತನಾಡುವುದು ಕಷ್ಟ ಎಂದು ಲಂಡನ್‌ನಲ್ಲಿ ಕುಲೆಬಾ ಹೇಳಿದ್ದಾರೆ. ಇದನ್ನೂ ಓದಿ: ಯುದ್ಧ ಬೇಡ: ಲೈವ್‌ನಲ್ಲೇ ರಷ್ಯಾ ಟಿವಿ ಚಾನೆಲ್‌ ಸಿಬ್ಬಂದಿ ಸಾಮೂಹಿಕ ರಾಜೀನಾಮೆ

    ಈ ಯುದ್ಧವನ್ನು ಸಾಧ್ಯವಾಗಿಸಿದ ಎಲ್ಲರನ್ನೂ ನ್ಯಾಯಾಂಗದ ವ್ಯಾಪ್ತಿಗೆ ತರಲು ನನಗೆ ಲಭ್ಯವಿರುವ ಏಕೈಕ ಸಾಧನ ನಾಗರಿಕರು ಎಂದು ಕುಲೆಬಾ ಮಾತನಾಡಿದ್ದಾರೆ.

    ಉಕ್ರೇನ್‌ ವಿರುದ್ಧ ರಷ್ಯಾ ಕಳೆದ ವಾರದಿಂದ ನಿರಂತರವಾಗಿ ಯುದ್ಧವನ್ನು ನಡೆಸುತ್ತಿದೆ. ಈಗಾಗಲೇ ಹಲವು ನಗರಗಳನ್ನು ರಷ್ಯಾ ಸೇನಾ ಪಡೆ ತನ್ನ ವಶಕ್ಕೆ ತೆಗೆದುಕೊಂಡಿದೆ. ಸಾವಿರಾರು ಸಂಖ್ಯೆಯಲ್ಲಿ ಜನರು, ಸೈನಿಕರು ಮರಣವನ್ನಪ್ಪಿದ್ದಾರೆ. ರಷ್ಯಾ ಮತ್ತು ಉಕ್ರೇನ್‌ ನಡುವೆ ಈವರೆಗೆ ನಡೆದಿರುವ ಮಾತುಕತೆಗಳು ಸಫಲವಾಗಿಲ್ಲ. ಇದನ್ನೂ ಓದಿ: ದಯವಿಟ್ಟು ನನ್ನನ್ನು ಭಾರತಕ್ಕೆ ಕರೆಸಿಕೊಳ್ಳಿ: ಉಕ್ರೇನ್‍ನಲ್ಲಿ ಗುಂಡು ತಗುಲಿದ ವಿದ್ಯಾರ್ಥಿ

  • ರಷ್ಯಾದ ಇಬ್ಬರು ಸೈನಿಕರನ್ನು ಸೆರೆ ಹಿಡಿದ ಉಕ್ರೇನ್‌ ಸೇನೆ

    ರಷ್ಯಾದ ಇಬ್ಬರು ಸೈನಿಕರನ್ನು ಸೆರೆ ಹಿಡಿದ ಉಕ್ರೇನ್‌ ಸೇನೆ

    ಕೀವ್:‌ ಉಕ್ರೇನ್‌ ಮೇಲಿನ ರಷ್ಯಾ ದಾಳಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್‌ ರಾಜಧಾನಿ ಕೀವ್‌ ಮೇಲೆ ರಷ್ಯಾ ಸೈನಿಕರು ದಾಳಿ ಮುಂದುವರಿಸಿದ್ದಾರೆ. ಈ ವೇಳೆ ರಷ್ಯಾದ ಇಬ್ಬರು ಸೈನಿಕರನ್ನು ಸೆರೆ ಹಿಡಿಯಲಾಗಿದೆ ಎಂದು ಉಕ್ರೇನ್‌ ಸೇನೆ ತಿಳಿಸಿದೆ.

    ಉಕ್ರೇನ್‌ನ ಸಶಸ್ತ್ರ ಪಡೆಗಳ ಜನರಲ್‌ ಸ್ಟಾಫ್‌, ರಷ್ಯಾದ ಇಬ್ಬರು ಸೈನಿಕರ ಚಿತ್ರಗಳನ್ನು ಪೋಸ್ಟ್‌ ಮಾಡಿದ್ದಾರೆ. ಅವರು ಯಾಂಪೋಲ್‌ ಮೋಟಾರೈಸ್ಡ್‌ ರೈಫಲ್‌ನ 91701ನೇ ಘಟಕದಿಂದ ಬಂದವರು ಎಂದು ಹೇಳುತ್ತಿದ್ದಾರೆಂದು ತಿಳಿಸಿದ್ದಾರೆ. ಅಲ್ಲದೆ ಉಕ್ರೇನ್‌ ಸೇನೆಯಲ್ಲಿರುವ ರಷ್ಯಾ ಯೋಧರಿಗೆ ತಮ್ಮ ಕುಟುಂಬದವರ ಜೊತೆ ಪೋನಿನಲ್ಲಿ ಮಾತಾಡಲು ಅವಕಾಸ ಕೊಟ್ಟಿದ್ದಾರೆ. ಈ ವೇಳೆ ರಷ್ಯಾ ಯೋಧರು, ತಾವು ಉಕ್ರೇನ್‌ ಯೋಧರ ಸೆರೆಯಲ್ಲಿರುವುದಾಗಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.  ಇದನ್ನೂ ಓದಿ: ವಿಶ್ವವೇ ನಮ್ಮೊಂದಿಗಿದೆ, ಜಯ ನಮ್ಮದೆ: ಉಕ್ರೇನ್ ಅಧ್ಯಕ್ಷ

    ಉಕ್ರೇನ್‌ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಗುರುವಾರ ಯುದ್ಧ ಘೋಷಿಸಿದ್ದಾರೆ. ರಷ್ಯಾ ಸೈನಿಕರು ಆಕ್ರಮಣ ಮುಂದುವರಿಸಿದ್ದು, ಉಕ್ರೇನ್‌ ರಾಜಧಾನಿ ಕೀವ್‌ ವಶಕ್ಕೆ ಮುಂದಾಗಿದ್ದಾರೆ.

    ರಷ್ಯಾದ ಆಕ್ರಮಣ ನೀತಿಗೆ ಅಮೆರಿಕ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಇದೇ ವೇಳೆ ರಷ್ಯಾ ಮೇಲೆ ಪಾಶ್ಚಿಮಾತ್ಯ ಹಣಕಾಸು ನಿರ್ಬಂಧವನ್ನು ಅಮೆರಿಕ ಘೋಷಿಸಿದೆ. ಇದನ್ನೂ ಓದಿ: ಉಕ್ರೇನ್‌ ಯುದ್ಧ ಭೀಕರತೆ ನಡುವೆಯೂ ಹಸೆಮಣೆ ಏರಿ ಜೋಡಿ ಸಂಭ್ರಮ