Tag: russia president

  • ಇಂಜೆಕ್ಷನ್ ತೆಗೆದುಕೊಳ್ಳಲು ದೇಹದ ಭಾಗಗಳು ಸ್ಪಂದಿಸುತ್ತಿಲ್ಲ – ಪುಟಿನ್ ಆರೋಗ್ಯ ಮತ್ತಷ್ಟು ಕ್ಷೀಣ

    ಮಾಸ್ಕೋ: ಉಕ್ರೇನ್ (Ukraine) ವಿರುದ್ಧ ಸಮರ ಸಾರಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರ ಆರೋಗ್ಯ (Health) ಮತ್ತಷ್ಟು ಕ್ಷೀಣಿಸುತ್ತಿದೆ. ದೇಹದ ಇತರ ಭಾಗಗಳು ಚುಚ್ಚುಮದ್ದು ತೆಗೆದುಕೊಳ್ಳಲು ಸ್ಪಂದಿಸದಂತಾಗಿದೆ ಎಂಬುದಾಗಿ ವೈದ್ಯರು (Doctors) ತಿಳಿಸಿದ್ದಾರೆ.

    ಪುಟಿನ್ ದೇಹದ ಮೇಲೆ ವಿಚಿತ್ರ ಗುರುತುಗಳು ಪತ್ತೆಯಾಗಿದ್ದು, ಈ ಕುರಿತ ಫೋಟೋಗಳು ಜಾಲತಾಣದಲ್ಲಿ (Social Media) ಹರಿದಾಡುತ್ತಿವೆ. ಇದು ಆರೋಗ್ಯ ಕ್ಷೀಣಿಸಿರುವ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಇದನ್ನೂ ಓದಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹತ್ಯೆಗೆ ಯತ್ನ

    ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ನಿವೃತ್ತ ಬ್ರಿಟಿಷ್ ಸೇನಾಧಿಕಾರಿ ಮತ್ತು ಹೌಸ್ ಆಫ್ ಲಾರ್ಡ್ಸ್ ಸದಸ್ಯ ರಿಚರ್ಡ್ ಡಾನಾಟ್, ಪುಟಿನ್ ಅವರ ಚಿತ್ರಗಳು ಅವರು ಎಷ್ಟು ಆರೋಗ್ಯವಾಗಿದ್ದಾರೆ ಎಂಬುದನ್ನೂ ಸೂಚಿಸುತ್ತದೆ. ಅವರ ಕೈಗಳ ಮೇಲ್ಬಾಗದಲ್ಲಿ ಕಪ್ಪು ಬಣ್ಣದ ಗುರುತುಗಳು ಕಾಣುತ್ತಿವೆ. ಅಲ್ಲದೇ ಪುಟಿನ್ ದೇಹದ ಇತರ ಭಾಗಗಳು ಇಂಜೆಕ್ಷನ್ (Injection) ತೆಗೆದುಕೊಳ್ಳಲು ಸ್ಪಂದಿಸುತ್ತಿಲ್ಲ. ಪುಟಿನ್ ಆರೋಗ್ಯವಾಗಿದ್ದಾರೆ, ಆದರೂ ಅವರ ಬಗ್ಗೆ ಎಚ್ಚರ ವಹಿಸಬೇಕಾದ ಅಗತ್ಯವಿದೆ ಎಂದು ರಿಚರ್ಡ್ ಡಾನಾಟ್ ಅವರು ಹೇಳಿದ್ದಾರೆ.

    ಕ್ಯಾನ್ಸರ್ (Cancer) ಕಾಯಿಲೆಯಿಂದ ಬಳಲುತ್ತಿರುವ ರಷ್ಯಾ ಅಧ್ಯಕ್ಷ (Russia President) ಪುಟಿನ್ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಹೆಚ್ಚೆಂದರೆ ಅವರಿನ್ನು 3 ವರ್ಷ ಬದುಕಬಹುದೆಂದು ವೈದ್ಯರು ಹೇಳಿರುವುದಾಗಿ ರಷ್ಯಾದ ಬೇಹುಗಾರಿಕಾ ಸಂಸ್ಥೆ ಎಫ್‌ಎಸ್‌ಬಿಯ ವರದಿ ಕೆಲ ದಿನಗಳ ಹಿಂದೆ ಹೇಳಿತ್ತು. ಇದನ್ನೂ ಓದಿ: ಭಾರತಕ್ಕೆ 5 ರನ್‍ಗಳ ರೋಚಕ ಗೆಲುವು – ಹರ್ಷ ತಂದ ಅರ್ಷದೀಪ್

    ಪುಟಿನ್ ಅವರ ಕಣ್ಣಿನ ದೃಷ್ಟಿ ಗಂಭೀರವಾಗಿ ಹದಗೆಟ್ಟಿದೆ. ಅವರ ಬೆರಳುಗಳೂ ನಿಯಂತ್ರಿಸಲಾಗದಷ್ಟು ಅಲುಗಾಡತೊಡಗಿವೆ ಎಂದು ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿದ್ದವು. ಬ್ರಿಟನ್ನಲ್ಲಿ ಪುಟಿನ್ ಹತ್ಯೆ ಮಾಡಲು ಸಂಚು ರೂಪಿಸಿರುವವರಿಗೆ ತಿಳಿಯದಂತೆ ಬಚ್ಚಿಡಲಾಗಿದೆ. ದುರ್ಬಲತೆಗೆ ಕಾರಣವಾಗುತ್ತದೆ ಎಂಬ ಭಯದಿಂದ ಗ್ಲಾಸ್ ಧರಿಸಲು ಪುಟಿನ್ ತಿರಸ್ಕರಿಸುತ್ತಿದ್ದಾರೆ ಎಂಬುದಾಗಿ ಗುಪ್ತಚರ ಇಲಾಖೆ ಮೂಲಗಳು ಮಾಧ್ಯಮಗಳಿಗೆ ತಿಳಿಸಿದ್ದವು.

    Live Tv
    [brid partner=56869869 player=32851 video=960834 autoplay=true]

  • ವ್ಲಾಡಿಮಿರ್‌ ಪುಟಿನ್‌ ಎಷ್ಟು ಶ್ರೀಮಂತ? ರಷ್ಯಾ ನಾಯಕನ ಜೀವನ ಶೈಲಿ ಹೇಗಿದೆ ಗೊತ್ತಾ?

    ವ್ಲಾಡಿಮಿರ್‌ ಪುಟಿನ್‌ ಎಷ್ಟು ಶ್ರೀಮಂತ? ರಷ್ಯಾ ನಾಯಕನ ಜೀವನ ಶೈಲಿ ಹೇಗಿದೆ ಗೊತ್ತಾ?

    ಮಾಸ್ಕೋ: ಉಕ್ರೇನ್‌ ವಿರುದ್ಧ ಯುದ್ಧ ಸಾರಿದ ನಂತರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಒಂದಲ್ಲ ಒಂದು ವಿಷಯದಲ್ಲಿ ಚರ್ಚೆಗೆ ಒಳಗಾಗುತ್ತಿದ್ದಾರೆ. ಆಡಳಿತ ಹಾಗೂ ಯುದ್ಧ ತಂತ್ರಗಾರಿಕೆ ಅಷ್ಟೇ ಅಲ್ಲ, ಪುಟಿನ್‌ ತಮ್ಮ ಜೀವನ ಶೈಲಿಯಲ್ಲೂ ಕುತೂಹಲಕಾರಿ ವ್ಯಕ್ತಿತ್ವದವರು.

    ಯುದ್ಧದ ಕಾರಣದಿಂದಾಗಿ ಅಂತರರಾಷ್ಟ್ರೀಯ ರಾಜಕೀಯದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿ ಪುಟಿನ್‌ ಗುರುತಿಸಿಕೊಂಡಿದ್ದಾರೆ. ಅವರು ದಶಕಗಳಿಂದ ರಷ್ಯಾದಲ್ಲಿ ವ್ಯವಹಾರಗಳ ಚುಕ್ಕಾಣಿ ಹಿಡಿದಿದ್ದಾರೆ. ಪಾಶ್ಚಿಮಾತ್ಯರು ಮಾತ್ರ ಪುಟಿನ್‌ ಮೇಲೆ ಎಚ್ಚರಿಕೆ ಕಣ್ಣಿಟ್ಟಿದ್ದಾರೆ. 21 ನೇ ಶತಮಾನದಲ್ಲಿ ಉಕ್ರೇನ್‌ ಮೇಲೆ ಯುದ್ಧವನ್ನು ಪ್ರಾರಂಭಿಸುವ ಪುಟಿನ್ ನಿರ್ಧಾರವು ಕೆಲವು ಅನುಭವಿ ರಾಜತಾಂತ್ರಿಕರು ಮತ್ತು ನೀತಿ ನಿರೂಪಕರನ್ನು ಸಹ ಚಕಿತರನ್ನಾಗಿಸಿದೆ. ಇದನ್ನೂ ಓದಿ: ಉಕ್ರೇನ್‌ ಯುದ್ಧದ ನಡುವೆಯೇ ಸುದ್ದಿಯಾಗ್ತಿದ್ದಾರೆ ಪುಟಿನ್‌ ಗರ್ಲ್‌ಫ್ರೆಂಡ್‌- ಯಾರೀಕೆ?

    ತಮ್ಮ ವ್ಯಕ್ತಿತ್ವ ಹಾಗೂ ನಿರ್ಧಾರಗಳ ಮೂಲಕವೇ ಜಗತ್ತನ್ನು ಚಕಿತಗೊಳಿಸುವ ಪುಟಿನ್‌ ಎಷ್ಟು ಶ್ರೀಮಂತರು ಗೊತ್ತೆ? ಅವರ ಜೀವನಶೈಲಿ ಹೇಗಿದೆ ಎಂದು ತಿಳಿದಿದೆಯೇ?

    ಫಾರ್ಚೂನ್ ಪ್ರಕಾರ ಪುಟಿನ್ ವಾರ್ಷಿಕ ‌1.06 ಕೋಟಿ ರೂ. (1,40,000 ಯುಎಸ್‌ ಡಾಲರ್) ವೇತನವನ್ನು ಗಳಿಸುತ್ತಾರೆ ಎಂದು ಕ್ರೆಮ್ಲಿನ್ ಉಲ್ಲೇಖಿಸಿದೆ. ಅವರು ಸಾರ್ವಜನಿಕವಾಗಿ ಘೋಷಿಸಿದ ಆಸ್ತಿಗಳಲ್ಲಿ 800 ಚದರಡಿ ಅಪಾರ್ಟ್‌ಮೆಂಟ್, ಟ್ರೇಲರ್ ಮತ್ತು ಮೂರು ಕಾರುಗಳು ಸೇರಿವೆ ಎಂದು ವರದಿ ತಿಳಿಸಿದೆ.

    ಆದರೆ ಪುಟಿನ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ. ಹೂಡಿಕೆ ಮತ್ತು ಆಸ್ತಿ ನಿರ್ವಹಣಾ ಕಂಪನಿ ಹರ್ಮಿಟೇಜ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್ 2017 ರಲ್ಲಿ ಪುಟಿನ್ ಅವರ ವೈಯಕ್ತಿಕ ಸಂಪತ್ತು 200 ಬಿಲಿಯನ್ ಡಾಲರ್‌ ಎಂದು ತಿಳಿಸಿದೆ.

    ಐಷಾರಾಮಿ ವಾಚ್‌ಗಳು
    ಪುಟಿನ್ ಐಷಾರಾಮಿ ಕೈಗಡಿಯಾರಗಳನ್ನು ಧರಿಸುತ್ತಾರೆ. 4.57 ಕೋಟಿ ರೂ. ಮೌಲ್ಯದ ಪಾಟೆಕ್ ಫಿಲಿಪ್ ಹಾಗೂ 3.81 ಕೋಟಿ ರೂ. ಮೌಲ್ಯದ ಲ್ಯಾಂಗ್ ಮತ್ತು ಸೊಹ್ನ್‌ ಟೂಬೊಗ್ರಾಫ್ ವಾಚ್‌ಗಳನ್ನು ಹಾಕುತ್ತಾರೆ.

    ಹತ್ತು ವರ್ಷಗಳ ಹಿಂದೆ ಎಬಿಸಿ ನ್ಯೂಸ್, ರಷ್ಯಾದ ವಿರೋಧ ಗುಂಪು ಸಾಲಿಡಾರಿಟಿ ಬಿಡುಗಡೆ ಮಾಡಿದ ವೀಡಿಯೋವನ್ನು ಆಧರಿಸಿ ವರದಿಯೊಂದನ್ನು ಮಾಡಿತ್ತು. ಅದರಲ್ಲಿ ಪುಟಿನ್ 5.33 ಕೋಟಿ ರೂ. ಮೌಲ್ಯದ ಐಷಾರಾಮಿ ಕೈಗಡಿಯಾರಗಳನ್ನು ಹೊಂದಿದ್ದಾರೆಂದು. ಅಂದರೆ ಅವರ ಅಧಿಕೃತ ಸಂಬಳದ ಆರು ಪಟ್ಟು ಬೆಲೆ ಆ ವಾಚ್‌ನದ್ದು. ಇದನ್ನೂ ಓದಿ: ರಷ್ಯಾ ಯುದ್ಧವನ್ನು 2ನೇ ಮಹಾಯುದ್ಧಕ್ಕೆ ಹೋಲಿಸಿದ ಝೆಲೆನ್ಸ್ಕಿ

    ಕಪ್ಪು ಸಮುದ್ರ ದಂಡೆಯಲ್ಲಿ ಮಹಲು
    ಪುಟಿನ್, ಕಪ್ಪು ಸಮುದ್ರದ ದಂಡೆಯಲ್ಲಿರುವ 1,90,000 ಚದರಡಿ ಮಹಲಿನ ಮಾಲೀಕ. ಈ ಬಂಗಲೆಯಲ್ಲಿ ಅಮೃತಶಿಲೆಯ ಈಜುಕೊಳ, ಸ್ಪಾ, ಆಂಫಿಥಿಯೇಟರ್, ಅತ್ಯಾಧುನಿಕ ಐಸ್ ಹಾಕಿ ರಿಂಕ್, ವೇಗಾಸ್ ಶೈಲಿಯ ಕ್ಯಾಸಿನೊ ಮತ್ತು ರಾತ್ರಿ ಕ್ಲಬ್. ನೂರಾರು ಡಾಲರ್ ಮೌಲ್ಯದ ವೈನ್‌ಗಳಿರುವ ಬಾರ್‌ ಹೊಂದಿದೆ.

    ಶ್ರೀಮಂತ ಪುಟಿನ್‌ ಅವರ ಮಹಲಿನ ಚಿತ್ರಗಳನ್ನು ಈ ಹಿಂದೆ ರಷ್ಯಾದ ವಿರೋಧ ಪಕ್ಷದ ನಾಯಕರು ಬಿಡುಗಡೆ ಮಾಡಿದ್ದರು. ಅದನ್ನು ʼಪುಟಿನ್ ಕಂಟ್ರಿ ಕಾಟೇಜ್ʼ ಎಂದು ಕರೆದಿದ್ದರು. 3.81 ಕೋಟಿ ಮೌಲ್ಯದ ಊಟದ ಕೋಣೆಯ ಪೀಠೋಪಕರಣಗಳು, 41.17 ಲಕ್ಷ ರೂ. ಮೌಲ್ಯದ ಬಾರ್ ಟೇಬಲ್, ಅಲಂಕಾರಿಕ 64,809 ರೂ. ಇಟಾಲಿಯನ್ ಟಾಯ್ಲೆಟ್ ಬ್ರಷ್‌ಗಳು ಮತ್ತು 95,308 ರೂ. ಮೌಲ್ಯದ ಟಾಯ್ಲೆಟ್ ಪೇಪರ್ ಹೋಲ್ಡರ್‌ಗಳೊಂದಿಗೆ ಅಲಂಕರಿಸಿದ ಸ್ನಾನಗೃಹ ಈ ಮಹಲಿನಲ್ಲಿದೆ. ಇದನ್ನೂ ಓದಿ: ಕಚ್ಚಾತೈಲ ಬೆಲೆ ಮತ್ತೆ ಶೇ.3 ಏರಿಕೆ; ಮಾರುಕಟ್ಟೆಯಿಂದ ಹೊರಬೀಳಲಿದೆಯಾ ರಷ್ಯಾ ತೈಲ

    ವಿಮಾನದಲ್ಲಿ ಚಿನ್ನದ ಶೌಚಾಲಯ
    ಕಪ್ಪು ಸಮುದ್ರದ ಮಹಲು ಹೊರತುಪಡಿಸಿಯೂ, 69 ವರ್ಷ ವಯಸ್ಸಿನ ರಷ್ಯಾ ಅಧ್ಯಕ್ಷ ಪುಟಿನ್‌ ಅವರು 19 ಇತರೆ ಮನೆಗಳು, 700 ಕಾರುಗಳು, 58 ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಮಾಲೀಕರಾಗಿದ್ದಾರೆ. ಈ ವಿಮಾನಗಳಲ್ಲಿ ಒಂದು ʻದಿ ಫ್ಲೈಯಿಂಗ್ ಕ್ರೆಮ್ಲಿನ್ʼ ಅನ್ನು ಬಹುಕೋಟಿ ವೆಚ್ಚದಲ್ಲಿ ರೂಪಿಸಲಾಗಿದೆ. ಚಿನ್ನದಿಂದ ಮಾಡಿದ ಶೌಚಾಲಯವನ್ನು ವಿಮಾನ ಹೊಂದಿದೆ.