Tag: russia pilot

  • ಉಕ್ರೇನ್‌ ಮೇಲಿನ ಯುದ್ಧ ಅಕ್ಷಮ್ಯ ಅಪರಾಧ: ರಷ್ಯಾ ಪೈಲಟ್‌ ಸಂದೇಶದ ವೀಡಿಯೋ ವೈರಲ್‌

    ಉಕ್ರೇನ್‌ ಮೇಲಿನ ಯುದ್ಧ ಅಕ್ಷಮ್ಯ ಅಪರಾಧ: ರಷ್ಯಾ ಪೈಲಟ್‌ ಸಂದೇಶದ ವೀಡಿಯೋ ವೈರಲ್‌

    ಮಾಸ್ಕೋ: ಉಕ್ರೇನ್‌ ಮೇಲೆ ಯುದ್ಧ ನಡೆಸುವುದು ಅಕ್ಷಮ್ಯ ಅಪರಾಧ ಎಂಬ ರಷ್ಯಾ ಪೈಲಟ್‌ ಹೇಳಿಕೆಗೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.

    ಉಕ್ರೇನ್ ಮೇಲೆ ತನ್ನ ದೇಶವು ನಡೆಸಿದ ದಾಳಿಯನ್ನು ರಷ್ಯಾ ಪೈಲಟ್‌ ಖಂಡಿಸಿದ್ದಾರೆ. ವಿಮಾನ ಟೇಕಾಫ್ ಆಗುವ ಮುನ್ನ ಪ್ರಯಾಣಿಕರನ್ನು ಉದ್ದೇಶಿಸಿ ಪೈಲಟ್ ಈ ಹೇಳಿಕೆ ನೀಡಿದ್ದಾರೆ. ಪೈಲಟ್‌ ಇಂಗ್ಲಿಷ್‌ ಮತ್ತು ರಷ್ಯನ್‌ ಭಾಷೆಗಳಲ್ಲಿ ಘೋಷಣೆ ಮಾಡುತ್ತಿದ್ದಂತೆ ಪ್ರಯಾಣಿಕರು ಚಪ್ಪಾಳೆ ಮೂಲಕ ಅಭಿನಂದಿಸಿದ್ದಾರೆ. ಇದನ್ನೂ ಓದಿ: ಪುಟಿನ್ ಮೆದುಳಿನ ಗಂಭೀರ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ: ಗುಪ್ತಚರ ವರದಿ

    ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಉಕ್ರೇನ್ ರಾಜತಾಂತ್ರಿಕ ಅಲೆಕ್ಸಾಂಡರ್ ಶೆರ್ಬಾ ಸೇರಿದಂತೆ ಹಲವರು ಪೈಲಟ್ ತೋರಿದ ಸೌಹಾರ್ದತೆಗೆ ಮೆಚ್ಚುಗೆ ವ್ಯಕ್ತವಾಗಿದೆ.

    ಮಾನ್ಯರೇ ಮತ್ತು ಮಹಿಳೆಯರೆ, ನಾನು ನಿಮ್ಮ ಕ್ಯಾಪ್ಟನ್‌ ಮಾತನಾಡುತ್ತಿದ್ದೇನೆ. ಅಂಟಲ್ಯಾಗೆ ನಿಮಗೆ ಸುಸ್ವಾಗತ. ಪೊಬೆಡಾದೊಂದಿಗೆ ಪ್ರಯಾಣಿಸುತ್ತಿರುವುದಕ್ಕಾಗಿ ನಿಮಗೆ ಧನ್ಯವಾದ. ಉಕ್ರೇನ್‌ ಮೇಲಿನ ಯುದ್ಧ ಅಕ್ಷಮ್ಯ ಅಪರಾಧ ಎಂಬುದು ನನ್ನ ವೈಯಕ್ತಿಕ ಭಾವನೆ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಕೊರೊನಾ

    #StandWithUkraine ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ರಷ್ಯಾ ಪೈಲಟ್‌ನ ಹೇಳಿಕೆಗೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಷ್ಯಾಕ್ಕೆ ಈ ಪೈಲಟ್‌ನಂತಹ ಹೆಚ್ಚು ಧೈರ್ಯಶಾಲಿಗಳ ಅಗತ್ಯವಿದೆ ಎಂದು ಟ್ವಿಟ್ಟರ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.