Tag: Rupesh Shetty

  • ‘ಬಿಗ್ ಬಾಸ್ ಸೀಸನ್ 9’ರ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ದೀಪಿಕಾ ದಾಸ್ ಆಯ್ಕೆ

    ‘ಬಿಗ್ ಬಾಸ್ ಸೀಸನ್ 9’ರ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ದೀಪಿಕಾ ದಾಸ್ ಆಯ್ಕೆ

    ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗುವ ಕನಸನ್ನು ಕೊನೆಗೂ ನನಸು ಮಾಡಿಕೊಂಡಿದ್ದಾರೆ ನಟಿ ದೀಪಿಕಾ ದಾಸ್ (Deepika Das). ಇಂಥದ್ದೊಂದು ಅವಕಾಶ ಸಿಕ್ಕಿದ್ದಕ್ಕೆ ಮನೆಯ ಅಷ್ಟೂ ಸದಸ್ಯರಿಗೆ ಅವರು ಧನ್ಯವಾದ ಹೇಳಿದ್ದಾರೆ. ನಾನು ಕ್ಯಾಪ್ಟನ್ ಆಗುತ್ತೇನೆ ಎಂದು ಕನಸು ಮನಸಲ್ಲೂ ಅಂದುಕೊಂಡಿರಲಿಲ್ಲ. ಆದರೆ, ಕ್ಯಾಪ್ಟನ್ (Captain) ಆಗಬೇಕು ಎನ್ನುವ ಹಠ ನನ್ನಲ್ಲಿತ್ತು ಎಂದು ಅವರು ಹೇಳಿದ್ದಾರೆ.

    ಇತ್ತ ಮಗಳು ಬಿಗ್ ಬಾಸ್ ಮನೆಯಲ್ಲಿ ಮೂರನೇ ಕ್ಯಾಪ್ಟನ್ ಆಗಿ ಆಯ್ಕೆ ಆಗುತ್ತಿದ್ದಂತೆಯೇ ದೀಪಿಕಾ ದಾಸ್ ತಾಯಿಯು ಮಗಳಿಗೆ ವಾಯ್ಸ್ ನೋಟ್ಸ್ ಕಳುಹಿಸಿ ಅಭಿನಂದಿಸಿದ್ದಾರೆ. ‘ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದೇವೆ. ನೀನು ಕ್ಯಾಪ್ಟನ್ ಆಗಿದ್ದಕ್ಕೆ ಎಲ್ಲರಿಗೂ ಖುಷಿಯಾಗಿದೆ. ಆರಾಮಾಗಿ ಆಟವಾಡು. ಎಲ್ಲರೊಂದಿಗೆ ಹೊಂದಿಕೊಂಡಿರು. ಜಾಸ್ತಿ ಮಾತಾಡು, ಜಾಸ್ತಿ ಆಡು’ ಎಂದು ಮಗಳಿಗೆ ತಾಯಿ ವಾಯ್ಸ್ ನೋಟ್ ಕಳುಹಿಸಿದ್ದಾರೆ.

    ದೀಪಿಕಾ ದಾಸ್ ಬಿಗ್ ಬಾಸ್ ಸೀಸನ್ 7ರಲ್ಲಿಯೂ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶ ಮಾಡಿದ್ದರು. 16 ವಾರಗಳ ಕಾಲ ಅವರು ಮನೆಯಲ್ಲಿದ್ದರು. ಆದರೆ, ಒಂದು ಬಾರಿಯೂ ಅವರಿಗೆ ಕ್ಯಾಪ್ಟನ್ ಆಗುವಂತಹ ಅವಕಾಶ ಸಿಕ್ಕಿರಲಿಲ್ಲ. ಸೀಸನ್ 9ಕ್ಕೂ (Bigg Boss Season 9) ಅವರು ಮರು ಆಯ್ಕೆಯಾಗಿ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಮೂರನೇ ವಾರಕ್ಕೆ ಅವರು ಕ್ಯಾಪ್ಟನ್ ಆಗಿ ಹೊರ ಹೊಮ್ಮಿದ್ದಾರೆ. ಸೀಸನ್ 9ರಲ್ಲಿ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ಆಯ್ಕೆ ಆಗಿರುವ ಹೆಮ್ಮೆ ಅವರದ್ದು.

    ಕ್ಯಾಪ್ಟೆನ್ಸಿ ಆಯ್ಕೆಯಾಗಿ ಹಲವು ಟಾಸ್ಕ್ ಗಳನ್ನು ಸ್ಪರ್ಧಿಗಳು ಆಡಬೇಕಿತ್ತು. ಕ್ಯಾಪ್ಟೆನ್ಸಿಗಾಗಿಯೇ ಟಾಸ್ಕ್ ಗಳು ಸಿದ್ಧವಾಗಿದ್ದವು. ಗೋಲ್ಡ್ ಮೈನ್  ಟಾಸ್ಕ್ ನಲ್ಲಿ ಔಟ್ ಆಗಿದ್ದ ದೀಪಿಕಾ ದಾಸ್ ನಂತರ ನಾಲಿಗೆ ನುಲಿ ಚಟುವಟಿಕೆಯಲ್ಲಿ ಗೆಲುವು ಸಾಧಿಸಿ ಮತ್ತೆ ಆಟಕ್ಕೆ ಹಿಂದಿರುಗಿದರು. ಆಕೃತಿ ಹುಡುಕಾಟದಲ್ಲಿ ದೀಪಿಕಾ ದಾಸ್ ಗೆಲ್ಲುವ ಮೂಲಕ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಈ ಪಟ್ಟಕ್ಕಾಗಿ ಅನುಪಮಾ ಗೌಡ (Anupama Gowda) ಹಾಗೂ ರೂಪೇಶ್ ಶೆಟ್ಟಿ (Rupesh Shetty) ಕೂಡ ರೇಸ್ ನಲ್ಲಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸಾನ್ಯ ಅಯ್ಯರ್ ತಂಟೆಗೆ ಬಂದವರಿಗೆ ರೂಪೇಶ್ ಶೆಟ್ಟಿ ಖಡಕ್ ವಿಲನ್ : ಪ್ರಶಾಂತ್ ಸಂಬರ್ಗಿ ಎಚ್ಚರಿಕೆ

    ಸಾನ್ಯ ಅಯ್ಯರ್ ತಂಟೆಗೆ ಬಂದವರಿಗೆ ರೂಪೇಶ್ ಶೆಟ್ಟಿ ಖಡಕ್ ವಿಲನ್ : ಪ್ರಶಾಂತ್ ಸಂಬರ್ಗಿ ಎಚ್ಚರಿಕೆ

    ಕಿರುತೆರೆಯ ಬಿಗ್ ಶೋ ಬಿಗ್ ಬಾಸ್‌ನ ಲವ್ ಬರ್ಡ್ಸ್ ಆಗಿ ಮಿಂಚುತ್ತಿರುವ ಸಾನ್ಯ ಅಯ್ಯರ್ ಮತ್ತು ರೂಪೇಶ್ ಶೆಟ್ಟಿ ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಸಾನ್ಯ ತಂಟೆಗೆ ಬಂದ್ರೆ ರೂಪೇಶ್ ವಿಲನ್ ಆಗುತ್ತಾನೆ ಎಂದು ಸಂಬರ್ಗಿ ಮಾತನಾಡಿರುವ ಮಾತು ಹೈಲೆಟ್ ಆಗಿದೆ.

    ಸಾನ್ಯ ಮತ್ತು ರೂಪೇಶ್ ಲವ್ವಿ ಡವ್ವಿ ವಿಚಾರ ಮನೆಮಂದಿಗೆ ಮಾತ್ರವಲ್ಲ ನೋಡುಗರಿಗೆ ಈ ಜೋಡಿ ಇಷ್ಟವಾಗಿದೆ. ಹಾಗೆಯೇ ಮನೆಯಲ್ಲಿ ಈ ಜೋಡಿಯನ್ನು ಕಂಡ್ರೆ‌ ಉರಿದುಕೊಳ್ಳುವವರು ಇದ್ದಾರೆ. ಸದ್ಯ ರೂಪೇಶ್ ಮತ್ತು ಸಾನ್ಯ ಬಗ್ಗೆ ರಾಕೇಶ್ ಬಳಿ ಸಂಬರ್ಗಿ ಚರ್ಚಿಸಿದ್ದಾರೆ. ಮನೆಮಂದಿಯ ಬಗ್ಗೆ ಈ‌ ಮೊದಲೇ ತಿಳಿದುಕೊಂಡು‌ ಬಂದಿದ್ದೇನೆ. ಅವರ ಪಾಸಿಟಿವ್ & ನೆಗೆಟಿವ್ ಗೊತ್ತು ಎಂದು ರಾಕಿ ಬಳಿ ಪ್ರಶಾಂತ್ ಸಂಬರ್ಗಿ ಚರ್ಚೆ ಮಾಡಿದ್ದಾರೆ. ಇದನ್ನೂ ಓದಿ:ತಮಿಳು ಬಿಗ್ ಬಾಸ್‌ಗೆ ಕಾಲಿಟ್ಟ ಕನ್ನಡತಿ ರಚಿತಾ ಮಹಾಲಕ್ಷ್ಮಿ

    ಮನೆಮಂದಿಯ ಪಾಸಿಟಿವ್ ಮತ್ತು ನೆಗೆಟಿವ್ ಬಗ್ಗೆ ರಾಕಿ ಮತ್ತು ಸಂಬರ್ಗಿ ಡಿಸ್ಕಸ್ ಮಾಡಿದ್ದಾರೆ. ಈ ವೇಳೆ ಸಾನ್ಯ, ರೂಪೇಶ್ ಬಗ್ಗೆ ಸಂಬರ್ಗಿ ಮಾತನಾಡಿದ್ದಾರೆ. ಸಾನ್ಯ ಒಳ್ಳೆಯ ಹುಡುಗಿ, ರೂಪೇಶ್ ಹಾರ್ಟ್ಲಿ ಒಳ್ಳೆಯ ಹುಡುಗ. ಆದರೆ ಅವನ ಕೆಲವೊಂದು ವೈಯಕ್ತಿಕ ವಿಚಾರಕ್ಕೆ ಕೈ ಹಾಕಿದ್ರೆ ಅವನಿಗೆ ಆಗಲ್ಲ. ಊಟ, ಸ್ನಾನ, ಸಾನ್ಯ ವಿಚಾರಕ್ಕೆ ರೂಪೇಶ್ ವಿಲನ್ ಆಗುತ್ತಾರೆ ಎಂದು ಸಂಬರ್ಗಿ ರಾಕೇಶ್ ಅಡಿಗ ಬಳಿ ಹೇಳಿದ್ದಾರೆ. ಸಾನ್ಯ ತಂಟೆಗೆ ಬಂದ್ರೆ ಶೆಟ್ರು ವಿಲನ್ ಆಗುತ್ತಾರೆ ಎಂಬ ಮಾತನ್ನ ಸಂಬರ್ಗಿ ಮಾತನಾಡಿದ್ದಾರೆ.

    ಕೆಲ ದಿನಗಳ ಹಿಂದೆ ರೂಪೇಶ್ ಯಾವಾಗಲೂ ಶೌಚಾಲಯದಲ್ಲಿಯೇ ಇರುತ್ತಾರೆ ಎಂದು ದೊಡ್ಡ ಚರ್ಚೆ ಆಗಿತ್ತು. ಆಗ ರೂಪೇಶ್ ಖಡಕ್ ಆಗಿಯೇ ಉತ್ತರ ನೀಡಿದ್ದರು. ಹಾಗಾಗಿ ರೂಪೇಶ್ ಆದ್ಯತೆ ಕೊಡುವ ಸ್ಥಾನದಲ್ಲಿ ಸಾನ್ಯ ಕೂಡ ಇದ್ದಾರೆ ಎಂಬ ಮಾತನ್ನ ಸಂಬರ್ಗಿ ಆಡಿದ್ದಾರೆ. ಮುಂದಿನ ದಿನಗಳಲ್ಲಿ ದೊಡ್ಮನೆ ಆಟ ಯಾವ ರೀತಿ ತಿರುವು ಪಡೆಯಲಿದೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಮಹಿಳಾ ಸ್ಪರ್ಧಿಗಳ ವಿಚಾರದಲ್ಲಿ ರಾಕೇಶ್ ಅಡಿಗಗೆ ಸೆಡ್ಡು ಹೊಡೆದ ರೂಪೇಶ್ ಶೆಟ್ಟಿ ಕಾಲೆಳೆದ ಸುದೀಪ್

    ಮಹಿಳಾ ಸ್ಪರ್ಧಿಗಳ ವಿಚಾರದಲ್ಲಿ ರಾಕೇಶ್ ಅಡಿಗಗೆ ಸೆಡ್ಡು ಹೊಡೆದ ರೂಪೇಶ್ ಶೆಟ್ಟಿ ಕಾಲೆಳೆದ ಸುದೀಪ್

    ಟಿಟಿಯಿಂದ ಪರಿಚಿತರಾದ ಸಾನ್ಯ ಅಯ್ಯರ್ (Sanya Iyer) ಮತ್ತು ರೂಪೇಶ್ ಶೆಟ್ಟಿ (Rupesh Shetty) ಲವ್ವಿ-ಡವ್ವಿ ಬಿಗ್‍ಬಾಸ್ ಮನೆಯಲ್ಲಿ ಜೋರಾಗಿ ನಡೆಯುತ್ತಿದೆ. ಈ ಜೋಡಿಯನ್ನು ಸಾಕಷ್ಟು ಜನ ಮೆಚ್ಚಿಕೊಂಡಿದ್ದಾರೆ. ಇದೀಗ ವೀಕೆಂಡ್ ಪಂಚಾಯಿತಿಯಲ್ಲಿ ಮಹಿಳಾ ಸ್ಪರ್ಧಿಗಳ ಜೊತೆ ರೂಪೇಶ್ ಮಿಂಗಲ್ ಆಗುವುದನ್ನು ನೋಡಿ, ನೀವು ಬಿಗ್‍ಬಾಸ್ (BiggBoss) ಮನೆಯ ಯೂನಿವರ್ಸಿಟಿ ಎಂದು ಸುದೀಪ್ (Sudeep) ಕಾಲೆಳೆದಿದ್ದಾರೆ.

    ದೊಡ್ಮನೆಯಲ್ಲಿ ಸಾನ್ಯ ಜೊತೆ ರೂಪೇಶ್ ಶೆಟ್ಟಿ ಆತ್ಮೀಯವಾಗಿದ್ದಾರೆ. ಒಟಿಟಿ ಸೀಸಸ್‍ನಿಂದ ಇವರ ಕೆಮಿಸ್ಟ್ರಿ ಸಖತ್ ಆಗಿ ವರ್ಕೌಟ್ ಆಗಿದೆ. ಈ ಜೋಡಿಗೆ ರಾಜ್ಯಾದ್ಯಂತ ಅಭಿಮಾನಿಗಳಿದ್ದಾರೆ. ಸಾಕಷ್ಟು ಫ್ಯಾನ್ ಪೇಜ್ ಕ್ರಿಯೇಟ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಕಮಾಲ್ ಮಾಡುತ್ತಿದೆ. ನಮ್ಮ ಮಧ್ಯೆ ಇರೋದು ಫ್ರೆಂಡ್‍ಶಿಪ್ ಮಾತ್ರ ಎಂದು ರೂಪೇಶ್ ಶೆಟ್ಟಿ ಆಗಾಗ ಸ್ಪಷ್ಟನೆ ನೀಡುತ್ತಲೇ ಇರುತ್ತಾರೆ. ಆದರೆ ಇವರ ಆತ್ಮೀಯತೆ ಸ್ನೇಹಕ್ಕೂ ಮೀರಿದ ಬಾಂಧವ್ಯದಂತೆ ಕಾಣುತ್ತಿದೆ. ಈಗ ಟಿವಿ ಸೀಸಸ್‍ನಲ್ಲಿ ರೂಪೇಶ್ ಶೆಟ್ಟಿ ಅವರು ಸಾನ್ಯ ಜೊತೆಗೆ ಅನೇಕ ಮಹಿಳಾ ಸ್ಪರ್ಧಿಗಳ ಜತೆ ಕ್ಲೋಸ್ ಆಗಿದ್ದಾರೆ. ಈ ವಿಚಾರದಲ್ಲಿ ಸುದೀಪ್ ಅವರು ತಮಾಷೆ ಮಾಡಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್ ಮನೆಯಿಂದ ನವಾಜ್ ಔಟ್- ಇಷ್ಟವಾಗಲಿಲ್ಲ ಹುಡುಗನ ನಡೆ

    ರೂಪೇಶ್ ಅವರೇ ನೀವು ಬಿಗ್ ಬಾಸ್ ಮನೆಯ ಯೂನಿವರ್ಸಿಟಿ ಎಂದರು ಸುದೀಪ್. ಇದು ಏಕೆ ಎಂದು ರೂಪೇಶ್ ಶೆಟ್ಟಿ ಪ್ರಶ್ನೆ ಮಾಡಿದರು. ಅದಕ್ಕೆ ಸುದೀಪ್ ನಗುತ್ತಲೇ ಉತ್ತರ ನೀಡಿದರು. ‘ರೂಪೇಶ್ ಅವರು ಈ ಬಾರಿ ಎಲ್ಲರ ಜೊತೆ ಕ್ಲೋಸ್ ಆಗಿದ್ದಾರೆ. ಅಡುಗೆ ಮನೆಯಲ್ಲಿ ಯಾರ ಜೊತೆ ಮಾತನಾಡಬೇಕು, ಬಾತ್‍ರೂಂನಲ್ಲಿದ್ದಾಗ ಯಾರ ಜೊತೆ ಮಾತನಾಡಬೇಕು, ಲೈಟ್ ಆಫ್ ಆದಾಗ ಯಾರ ಜೊತೆ ಮಾತನಾಡಬೇಕು ಎಂಬುದು ಅವರಿಗೆ ಗೊತ್ತಿದೆ ಎಂದು ಸುದೀಪ್ ಹೇಳಿದರು. ಇದನ್ನು ಕೇಳಿದ ರೂಪೇಶ್ ಆ ರೀತಿ ಇಲ್ಲ ಎಂದು ನಕ್ಕರು.

    ಇನ್ನೂ ರೂಪೇಶ್ ಯೂನಿವರ್ಸಿಟಿ ಆದರೆ ರಾಕೇಶ್ ಅಡಿಗ (Rakesh Adiga) ನೀವು ಪ್ರಿ ಯೂನಿವರ್ಸಿಟಿ ಎಂದಿದ್ದಾರೆ. ಹಾಗೆಯೇ ದರ್ಶ್ ಚಂದ್ರಪ್ಪಗೆ ರೂಪೇಶ್ ಶೆಟ್ಟಿ ಅವರನ್ನು ನೀವು ಗುರುವಾಗಿ ಸ್ವೀಕರಿಸಿ, ಅವರಿಂದ ಸಾಕಷ್ಟು ಕಲಿಯುತ್ತೀರಿ ಎಂದು ಸುದೀಪ್ ಹೇಳಿದ್ದಾರೆ. ಇದನ್ನೂ ಓದಿ: ಕಾವ್ಯಶ್ರೀಗೆ ಕೈ ಕೊಯ್ದುಕೊಳ್ತೀನಿ ಎಂದು ಹೆದರಿಸಿದ ಆರ್ಯವರ್ಧನ್ ಗುರೂಜಿ

    Live Tv
    [brid partner=56869869 player=32851 video=960834 autoplay=true]

  • ಪ್ರಶಾಂತ್ ಸಂಬರ್ಗಿಗೆ ‘ಕುತಂತ್ರಿ ಕಲಾವಿದ’ ಎಂದ ಸಾನ್ಯ ಅಯ್ಯರ್

    ಪ್ರಶಾಂತ್ ಸಂಬರ್ಗಿಗೆ ‘ಕುತಂತ್ರಿ ಕಲಾವಿದ’ ಎಂದ ಸಾನ್ಯ ಅಯ್ಯರ್

    ಬಿಗ್ ಬಾಸ್ ಓಟಿಟಿಯಲ್ಲಿ ನೋಡುಗರಿಗೆ ಸಖತ್ ಮೋಡಿ ಮಾಡಿದ್ದ ಸಾನ್ಯ ಅಯ್ಯರ್, ಬಿಗ್ ಬಾಸ್ ಸೀಸನ್ 9ರಲ್ಲಿ (Bigg Boss Season 9) ಕೊಂಚ ಡಲ್ ಹೊಡೆದಂತೆ ಕಾಣ್ತಿದ್ದಾರೆ.  ಸದಾ ಲವಲವಿಕೆ, ಜಾಣ್ಮೆಯಿಂದ ಆಟ ಆಡುತ್ತಿದ್ದ,  ರೂಪೇಶ್ ಶೆಟ್ಟಿ ಜೊತೆಲಿ ಯಾವಾಗಲೂ ಅಂಟಿಕೊಂಡೇ ಇರುತ್ತಿದ್ದ ಈ ಪುಟ್ಟ ಗೌರಿ, ಇದೀಗ ಗುಂಪಿನಲ್ಲಿ ಗೋವಿಂದ ಆಗಿದ್ದಾರೆ. ಹೀಗಾಗಿಯೇ ಪ್ರಶಾಂತ್ ಸಂಬರ್ಗಿಗೆ ಸಾನ್ಯ ಕುತಂತ್ರಿ ಕಲೆ ಎನ್ನುವ ಬ್ಯಾಂಡ್ ಕಟ್ಟಿ ನಲಿದಿದ್ದಾರೆ.

    ಬಿಗ್ ಬಾಸ್ ಮನೆ ಒಳಗೆ ಬರುವ ಪ್ರತಿಯೊಬ್ಬರಿಗೂ ಕಿಚ್ಚ ಸುದೀಪ್, ಒಂದೊಂದು ಬ್ಯಾಂಡ್ ಕೊಟ್ಟು ಕಳುಹಿಸಿದ್ದರು. ಆ ಬ್ಯಾಂಡ್ ಮೇಲೆ ಒಂದೊಂದು ಹೆಸರಿತ್ತು. ಅದನ್ನು ಮನೆಯಲ್ಲಿರುವ ತಮ್ಮಿಷ್ಟದ ವ್ಯಕ್ತಿಗೆ ಕಟ್ಟಲು ಸೂಚಿಸಿದ್ದರು. ಆ ಟಾಸ್ಕ್ ಈಗ ನಡೆದಿದೆ. ಸಾನ್ಯಗೆ ಸಿಕ್ಕ ಬ್ಯಾಂಡ್ ನಲ್ಲಿ ‘ಕಲಾವಿದ’ ಎಂದು ಬರೆಯಲಾಗಿತ್ತು. ಕಲಾವಿದ ಪದವನ್ನು ಕುತಂತ್ರಿ ಕಲೆ ಎಂದು ಬದಲಾಯಿಸಿ ಸಾನ್ಯ ಅಯ್ಯರ್ (Sanya Iyer), ಸಂಬರ್ಗಿಗೆ ಕಟ್ಟಿದರು. ಇದರಿಂದ ಸಾಂಬರ್ಗಿ ಶ್ಯಾನೇ ಬೇಜಾರು ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಸಿನಿಮಾದ ಟೈಟಲ್ ಲಾಂಚ್ ಗೆ ಮುಹೂರ್ತ ಫಿಕ್ಸ್

    ಪ್ರಶಾಂತ್ ಸಂಬರ್ಗಿ (Prashant Sambargi) ದೊಡ್ಮನೆಲಿ ಒಂದು ರೀತಿ ಫೈಯರ್ ಬ್ರ್ಯಾಂಡ್. ನೇರವಾಗಿ ಮಾತಾಡೋ ಮೂಲಕ ಹಲವರ ವಿರೋಧ ಕೂಡ ಕಟ್ಟಿಕೊಂಡಿದ್ದಾರೆ. ಹಾಗಾಗಿ ಪ್ರಶಾಂತ್ ಕೈಲಿ ಈಗ ಕುತಂತ್ರಿ ಕಲಾವಿದ ಬ್ಯಾಂಡ್ ರಾರಾಜಿಸುತ್ತಿದೆ. ಇಂಥದೊಂದು ಬ್ಯಾಂಡ್ ಕಟ್ಟಿರೋ ಸಾನ್ಯಗೆ ಮುಂದಿನ ದಿನಗಳಲ್ಲಿ ಪ್ರಶಾಂತ್ ಅದ್ಯಾವ ರೀತಿಯಲ್ಲಿ ನೆಡೆಸ್ಕೋತಾರೋ ಬಿಗ್ ಬಾಸ್ ನೇ ಬಲ್ಲ.

    ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ಎಲ್ಲರ ಗಮನ ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದ್ದರೆ, ಸಾನ್ಯ ಮಾತ್ರ ಆಗಾಗ್ಗೆ ಮೌನಕ್ಕೆ ಜಾರಿ ಬಿಡ್ತಾರೆ. ರೂಪೇಶ್ ಶೆಟ್ಟಿ (Rupesh Shetty) ಕೂಡ ಆಕೆಯಿಂದ  ಅಂತರ ಕಾಪಾಡಿಕೊಳ್ತಿರೊದ್ರಿಂದ ತಾಯಿಯನ್ನು ಕಳೆದುಕೊಂಡ ಕರುವಿನಂತಾಗಿದ್ದಾರೆ ಸಾನ್ಯ. ಆದರೂ, ಒಂದೊಂದು ಸಲ ಚಾರ್ಜ್ ಆಗಿ ಅಚ್ಚರಿ ಮೂಡಿಸುವಷ್ಟು ಚಟುವಟಿಕೆಯಲ್ಲಿ ಇರ್ತಾರೆ ಮುದ್ದು ಮುಖದ ಹುಡುಗಿ. ಮುಂದಿನ ದಿನಗಳಲ್ಲಿ ಸಾನ್ಯ ಅದು ಹೇಗೆ ಆಟ ಆಡ್ತಾರೋ ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ರೂಪೇಶ್ ಶೆಟ್ಟಿ ನನ್ನ ಮಗ ಇದ್ದಂತೆ ಎಂದು ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಗುರೂಜಿ

    ರೂಪೇಶ್ ಶೆಟ್ಟಿ ನನ್ನ ಮಗ ಇದ್ದಂತೆ ಎಂದು ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಗುರೂಜಿ

    ಬಿಗ್ ಬಾಸ್ (Bigg Boss Season 9) ಮನೆ ಒಳಗೆ ಪ್ರವೇಶ ಮಾಡುವಾಗ ಪ್ರತಿ ಸ್ಪರ್ಧಿಗೂ ಸುದೀಪ್ (Sudeep) ಒಂದೊಂದು ಬ್ಯಾಂಡ್ ಕೊಟ್ಟು ಮನೆ ಒಳಗೆ ಕಳುಹಿಸಿದ್ದರು. ಬಿಗ್ ಬಾಸ್ ಆದೇಶ ಮಾಡೋ ತನಕ ಈ ಪಟ್ಟಿ ನಿಮ್ಮ ಬಳಿ ಇರಲಿ ಎಂದು ಎಚ್ಚರಿಕೆಯನ್ನೂ ಕೊಟ್ಟು ಕಳುಹಿಸಿದ್ದರು. ಬಿಗ್ ಬಾಸ್ ಆದೇಶದ ನಂತರ ನಿಮಗೆ ಇಷ್ಟವಾದ ಸದಸ್ಯರಿಗೆ ಈ ಪಟ್ಟಿಯನ್ನು ಕೈಗೆ ಕಟ್ಬೇಕು, ಅದಕ್ಕೆ ಕಾರಣವನ್ನೂ ತಿಳಿಸಬೇಕು ಎಂದು ಹೇಳಲಾಗಿತ್ತು. ಇದೀಗ ಆ ಬ್ಯಾಂಡ್ (Band) ಕಟ್ಟುವ ಸಮಯ ಬಂದಿದೆ.

    ಮನೆಯ ಸದಸ್ಯರು ತಮಗೆ ಸಿಕ್ಕಿರುವ ಬ್ಯಾಂಡ್ ಅನ್ನು ತಮಗಿಷ್ಟದ ವ್ಯಕ್ತಿಗಳಿಗೆ ಕಟ್ಟಿದ್ದಾರೆ. ಅದಕ್ಕೆ ಕಾರಣವನ್ನೂ ಕೊಟ್ಟಿದ್ದಾರೆ. ಆದರೆ, ಆರ್ಯವರ್ಧನ್  (Aryavardhan) ಗುರೂಜಿ ಆಯ್ಕೆ ಮಾಡಿಕೊಂಡ ವ್ಯಕ್ತಿ ಮತ್ತು ಅವರು ಕೊಟ್ಟ ಕಾರಣದಿಂದಾಗಿ ಬಿಗ್ ಬಾಸ್ ಮನೆಯ ಸದಸ್ಯರು ಕೆಲ ನಿಮಿಷಗಳ ಕಾಲ ಭಾವುಕತೆಗೆ ಸಾಕ್ಷಿಯಾದರು. ಸ್ವತಃ ಗುರೂಜಿ (Guruji) ಕಣ್ಣೀರಿಟ್ಟು ಆ ಬ್ಯಾಂಡ್ ಅನ್ನು ವ್ಯಕ್ತಿಗೆ ನೀಡಿದರು. ಇದನ್ನೂ ಓದಿ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಆಸ್ಪತ್ರೆ ದಾಖಲು: ಅಭಿಮಾನಿಗಳಿಗೆ ಹೆಚ್ಚಿದೆ ಆತಂಕ

    ನಾನು ಸೋತ ವೇಳೆಯಲ್ಲಿ, ಹತಾಶನಾದ ಟೈಮ್ನಲ್ಲಿ ನನ್ನ ಜೊತೆ ನಿಂತವನು ರೂಪೇಶ್ ಶೆಟ್ಟಿ (Rupesh Shetty), ನಾನು ನನ್ನ ಮಗನನ್ನು ಎಷ್ಟು ಪ್ರೀತಿಸುತ್ತೇನೋ ಅಷ್ಟೇ ಪ್ರೀತಿಯನ್ನು ರೂಪೇಶ್‍ ಗೆ ಕೊಡುವೆ. ಅವನು ನನ್ನ ಮಗನಿದ್ದಂತೆ ಎಂದು ಘೋಷಿಸಿದರು. ಈ ವೇಳೆಯಲ್ಲಿ ಭಾವುಕರೂ ಆದರು. ಭಾವುಕತೆಯ ತೀವ್ರ ಎಷ್ಟಿತ್ತು ಅಂದರೆ, ರೂಪೇಶ್ ಹೆಸರಿನ ಬದಲಾಗಿ ರಾಕೇಶ್ (Rakesh Adiga) ಎಂದು ಹೇಳಿದರು. ಈ ಮಾತು ಕೇಳಿ ರಾಕೇಶ್ ಅಚ್ಚರಿ ವ್ಯಕ್ತ ಪಡಿಸಿದರು. ಕೊನೆಗೆ ರಾಕೇಶ್ ಅಲ್ಲ ರೂಪೇಶ್ ಎಂದು ತಿದ್ದಿಕೊಂಡು ರೂಪೇಶ್ ಗೆ ಬ್ಯಾಂಡ್ ಕಟ್ಟಿದರು ಗುರೂಜಿ.

    ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ರಕ್ಷಣಾತ್ಮಕವಾಗಿ ಆಟ ಆಡುತ್ತಿದ್ದಾರೆ. ಬಿಗ್ ಬಾಸ್ ಓಟಿಟಿಯಲ್ಲಿಯ ಅನುಭವವನ್ನೂ ಈ ಮನೆಯಲ್ಲೂ ಉಪಯೋಗಿಸ್ತಿದ್ದಾರೆ. ಹಾಗಾಗಿ ರೂಪೇಶ್ ಎಲ್ಲರ ನೆಚ್ಚಿನ ಡಾರ್ಲಿಂಗ್ ಆಗಿದ್ದಾರೆ. ಅದರಲ್ಲೂ ಸದಾ ಗುರೂಜಿಯ ಬೆನ್ನಿಗೆ ನಿಂತ ಕಾರಣದಿಂದಾಗಿ ಪ್ರೀತಿಯ ಬ್ಯಾಂಡ್ ಅನ್ನು ಪಡೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನ ‘ರೆಸಾರ್ಟ್ ಬಂಧನ’ದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು: ಆ ನಾಲ್ವರ ಸುಳಿವು ಪತ್ತೆ

    ಬೆಂಗಳೂರಿನ ‘ರೆಸಾರ್ಟ್ ಬಂಧನ’ದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು: ಆ ನಾಲ್ವರ ಸುಳಿವು ಪತ್ತೆ

    ಬಿಗ್ ಬಾಸ್ ಓಟಿಟಿಯ (Bigg Boss OTT) ಆವೃತ್ತಿಯಲ್ಲಿ ಆಯ್ಕೆಯಾಗಿರುವ ಸಾನ್ಯ ಅಯ್ಯರ್, ಆರ್ಯವರ್ಧನ್ ಗುರೂಜಿ (Aryavardhan Guruji), ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ (Rupesh Shetty) ಇನ್ನೂ ತಮ್ಮ ತಮ್ಮ ಮನೆ ತಲುಪಿಲ್ಲ. ಸದ್ಯಕ್ಕೆ ಅವರು ತಲುವುದೂ ಇಲ್ಲ. ಅಂದು ಓಟಿಟಿ ಫಿನಾಲೆ ಮುಗಿದ ತಕ್ಷಣವೇ ಈ ನಾಲ್ವರನ್ನೂ ನಿಗೂಢ ಜಾಗಕ್ಕೆ ಕರೆದುಕೊಂಡು ಹೋಗಲಾಗಿದ್ದು, ಅಲ್ಲಿಯೇ ಅವರು ದಿನಗಳನ್ನು ಕಳೆಯುತ್ತಿದ್ದಾರೆ. ಸೆ.24ರವರೆಗೂ ಅವರು ಈಗಿರುವ ಸ್ಥಳದಲ್ಲೇ ಇರಬೇಕಾಗಿದೆ.

    ಈ ಮೊದಲು ಬೆಂಗಳೂರಿನ (Bangalore) ಪ್ರತಿಷ್ಠಿತ ಹೋಟೆಲ್ ವೊಂದರಲ್ಲಿ ಆ ನಾಲ್ವರನ್ನೂ ಇಡಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಅಸಲಿಯಾಗಿ ಅವರು ಇರುವುದು ಬೆಂಗಳೂರು ಕನಕಪುರ (Kanakpur) ರಸ್ತೆಯಲ್ಲಿರುವ ರೆಸಾರ್ಟ್ ವೊಂದರಲ್ಲಿ ಎಂದು ಗೊತ್ತಾಗಿದೆ. ಯಾರ ಸಂಪರ್ಕಕ್ಕೂ ಸಿಗದೇ ಇರುವ ರೀತಿಯಲ್ಲಿ ಅವರನ್ನು ರೆಸಾರ್ಟ್ನಲ್ಲಿ ಇಡಲಾಗಿದ್ದು, ಬಿಗ್ ಬಾಸ್ ಸೀಸನ್ 9 ವೇದಿಕೆಯ ಮೇಲೆಯೇ ಈ ನಾಲ್ವರು ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ನೆಗೆಟಿವ್ ಕಾಮೆಂಟ್ ಗೆ ಹೆದರಲ್ಲ, ತುಂಬಾ ಜನ ನನ್ನನ್ನು ಪ್ರೀತಿಸ್ತಾರೆ ಎಂದ ಸೋನು ಶ್ರೀನಿವಾಸ್ ಗೌಡ

    ಬೆಂಗಳೂರು ಕನಪುರ ರಸ್ತೆಯಲ್ಲಿನ ಪೈಪ್ ಲೈನ್ ರೋಡಿನಲ್ಲಿರುವ ಐಷಾರಾಮಿ ರೆಸಾರ್ಟ್ ನಲ್ಲಿ (Resort) ನಾಲ್ವರು ಇದ್ದರು, ಅವರನ್ನು ಯಾರಿಂದಲೂ ಸಂಪರ್ಕಿಸಲು ಸಾಧ್ಯವಾಗದಂತೆ ನೋಡಿಕೊಳ್ಳಲಾಗಿದೆ. ಅಲ್ಲದೇ, ರೆಸಾರ್ಟ್ಗೆ ಹೋಗುವ ದಾರಿಯಲ್ಲಿ ಕಾವೇರಿ ನೀರು ಯೋಜನೆ ಕಾಮಗಾರಿ ನಡೆಯುತ್ತಿರುವುದರಿಂದ ಸುಲಭಕ್ಕೆ ಹೋಗುವುದು ಅಸಾಧ್ಯ ಎನ್ನುವ ಕಾರಣಕ್ಕಾಗಿ ಆ ರೆಸಾರ್ಟ್ ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ.

    ಈ ಮಧ್ಯೆಯೂ ನಿನ್ನೆ ಸಾನ್ಯ ಐಯ್ಯರ್ ಅವರ ಹುಟ್ಟು ಹಬ್ಬವನ್ನು ಅದೇ ರೆಸಾರ್ಟ್ ನಲ್ಲಿ ಆಚರಿಸಲಾಗಿದೆ. ರೂಪೇಶ್, ರಾಕೇಶ್ ಅಡಿಗ (Rakesh Adiga) ಮತ್ತು ಆರ್ಯವರ್ಧನ್ ಗುರೂಜಿ ಕೇಕ್ ತರಿಸಿ, ಸಾನ್ಯ (Sanya Iyer) ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕುಟುಂಬಕ್ಕೆ ಅವಕಾಶವನ್ನು ನಿರಾಕರಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ಮೊನ್ನೆಯಷ್ಟೇ ಈ ನಾಲ್ವರು ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದಾರೆ ಎನ್ನುವುದು ಮತ್ತೊಂದು ಮಾಹಿತಿ.

    Live Tv
    [brid partner=56869869 player=32851 video=960834 autoplay=true]

  • ಆರ್ಯವರ್ಧನ್ ಗುರೂಜಿಯವರಲ್ಲಿ ಅಪ್ಪನ ಪ್ರೀತಿ ಕಂಡೆ: ರೂಪೇಶ್ ಭಾವುಕ

    ಆರ್ಯವರ್ಧನ್ ಗುರೂಜಿಯವರಲ್ಲಿ ಅಪ್ಪನ ಪ್ರೀತಿ ಕಂಡೆ: ರೂಪೇಶ್ ಭಾವುಕ

    ಬಿಗ್ ಬಾಸ್ ಮನೆಯಲ್ಲಿ ಉಳಿದಿರುವುದು ಈಗ ಕೇವಲ ಹನ್ನೊಂದು ಮಂದಿ. ಈಗ ಇರುವವರ ನಡುವೆ ಬೆಸೆದಿರುವ ಸ್ನೇಹ ಎಂಥದ್ದು ಎಂಬುದು ತುಂಬಾ ಮುಖ್ಯವಾಗುತ್ತದೆ. ಅಂತೆಯೇ ಇತ್ತೀಚೆಗೆ ರೂಪೇಶ್ ಗೆ ಗುರೂಜಿ ಎಷ್ಟು ಮುಖ್ಯ ಎಂಬುದು ಸಾಬೀತಾಗಿದೆ.

    ಬಿಗ್ ಬಾಸ್ ಇಂದು ಮನೆ ಸದಸ್ಯರಿಗೆ ಹೊಸದೊಂದು ಗೇಮ್ ನೀಡಿದ್ದರು. ಅದು ಇಷ್ಟ-ಕಷ್ಟ ಎಂಬುದಾಗಿತ್ತು. ಈ ಆಟದಿಂದ ಯಾರ ಮನಸ್ಸಲ್ಲಿ ಯಾರಿಗೆ ಎಷ್ಟು ಸ್ಥಾನ ಇದೆ ಎಂಬುದು ಕೂಡ ಸ್ಪಷ್ಟವಾಗಿತ್ತು. ನೀಲಿ ಮತ್ತು ಕೆಂಪು ಬಣ್ಣದ ದೊಡ್ಡ ಬಾಕ್ಸ್ ನಲ್ಲಿ ಒಂದಷ್ಡು ಗಿಫ್ಟ್ ಐಟಂ ಗಳನ್ನು ಇಟ್ಟಿದ್ದರು. ಅದರಲ್ಲಿ ಯಾವುದಾದರೊಂದು ಗಿಫ್ಟನ್ನು ತಾನು ಇಷ್ಟಪಟ್ಟವರಿಗೆ ವಿವರಣೆ ಸಮೇತ ನೀಡಬೇಕಾಗಿತ್ತು.

    ಮೊದಲು ಹೋದ ಆರ್ಯವರ್ಧನ್, ಒಂದು ಗೊಂಬೆಯನ್ನು ಎತ್ತಿಕೊಂಡರು. ಅದನ್ನು ತನ್ನ ಮಗಳೆಂದರು. ನನಗೆ ನನ್ನ ಮಗಳೆಂದರೆ ತುಂಬಾನೇ ಪ್ರೀತಿ. ಈ ಪ್ರೀತಿಯ ಗೊಂಬೆಯನ್ನು ನನ್ನ ಮಗಳೆಂದೇ ಅಂದುಕೊಂಡಿದ್ದೀನಿ. ಇದನ್ನು ನಾನು ತುಂಬಾ ಇಷ್ಟಪಡುವ ರೂಪೇಶ್‍ಗೆ ಕೊಡುತ್ತೀನಿ ಎಂದಿದ್ದಾರೆ. ರೂಪೇಶ್ ತನ್ನ ಮೇಲೆ ಬರೆದಿದ್ದ ಹಾಡು ತುಂಬಾನೇ ಇಷ್ಟವಾಯಿತು. ಹೀಗಾಗಿ ಈ ಗೊಂಬೆಯನ್ನು ರೂಪೇಶ್ ಗೆ ಕೊಡುತ್ತಿದ್ದೀನಿ ಎಂದರು.  ಇದನ್ನೂ ಓದಿ: ನನಗೇನೂ 18 ವರ್ಷವಲ್ಲ. ನಾನು 23 ವರ್ಷದ ಹುಡುಗಿ, ನನಗೆ ಎಲ್ಲಾ ಗೊತ್ತಿದೆ ಅಂದ ಸೋನು

    ಇತ್ತ ರೂಪೇಶ್ ನ ಸರದಿ ಬಂದಾಗ, ಅಲ್ಲಿ ಸಾನ್ಯಾ ಕೂಡ ತುಂಬಾ ಮುಖ್ಯವಾಗಿದ್ದಳು. ಆದರೆ ರೂಪೇಶ್ ಇಬ್ಬರನ್ನು ತುಂಬಾ ಅದ್ಭುತವಾಗಿ ಮೆಂಟೈನ್ ಮಾಡಿದರು. ಸಾನ್ಯಾ ನನ್ನ ಬೆಸ್ಟ್ ಫ್ರೆಂಡ್. ನಾನು ಒಂಟಿಯಾಗಿದ್ದಾಗೆಲ್ಲ ನನ್ನ ಕಣ್ಣೀರು ಒರೆಸಿದ್ದಾಳೆ. ಯಾರು ಏನೇ ಹೇಳಲಿ ಅವಳನ್ನು ನಾನು ಎಂದಿಗೂ ಬಿಟ್ಟುಕೊಡುವುದಿಲ್ಲ. ನಂಗೆ ಲೈಫ್ ನಲ್ಲಿ ಸಿಕ್ಕಂತ ಒಳ್ಳೆ ಫ್ರೆಂಡ್. ಯಾವಾಗಲೂ ಕಾಪಾಡಿಕೊಳ್ಳುತ್ತೀನಿ. ಆದರೆ ಈ ಗಿಫ್ಟ್ ಅನ್ನು ಆರ್ಯವರ್ಧನ್ ಅವರಿಗೆ ಕೊಡಬೇಕು ಎನಿಸಿದೆ ಅಂದ್ರು. ಇದನ್ನೂ ಓದಿ: ಸೋನುಗೆ ಚೈತ್ರಾ ಚಪ್ಪಲಿ ಗಿಫ್ಟ್ ಕೊಟ್ಟಿದ್ಯಾಕೆ..?

    ಅಲ್ಲದೆ ಅದಕ್ಕೆ ಕಾರಣ ಕೂಡ ನೀಡಿದರು. ನಾನು ಅಮ್ಮನನ್ನು ಬೇಗ ಕಳೆದುಕೊಂಡೆ, ತಂದೆಯ ಪ್ರೀತಿ ಬೇಕು ಎಂಬ ಹಂಬಲ ಇತ್ತು. ಆದರೆ ಅಪ್ಪನಿಗೆ ಮೂವರು ಮಕ್ಕಳನ್ನು ನೋಡಿಕೊಳ್ಳುವುದರ ಜೊತೆಗೆ, ಮನೆಯ ಜವಾಬ್ದಾರಿ ಕೂಡ ಇತ್ತು. ಹೀಗಾಗಿ ಅಪ್ಪನ ಪ್ರೀತಿ ಹೆಚ್ಚು ಸಿಗಲಿಲ್ಲ. ಆದರೆ ಆರ್ಯವರ್ಧನ್ ಅವರಲ್ಲಿ ನನ್ನ ಅಪ್ಪನನ್ನು ಕಂಡೆ ಎಂದು ಭಾವುಕರಾಗಿದ್ದಾರೆ.

    ಇಂದು ಬೆಳಗ್ಗೆ ಅಪ್ಪನ ಕನಸು ಕೂಡ ಬಿದ್ದಿದೆ. ಗುರೂಜಿ ಅವರ ಜೀವನ ಯಾವತ್ತು ಬೆಳಗುತ್ತಾ ಇರಲಿ, ನೀವೂ ಬೆಳಗುತ್ತಾ ಇರಬೇಕು ಎಂದು ಆ ಗಿಫ್ಟ್ ನೀಡಿದ್ದಾರೆ. ಜೊತೆಗೆ ಆರ್ಯವರ್ಧನ್ ನನ್ನನ್ನು ಮಗ, ಕಂದಾ ಎಂದು ಮಾತನಾಡುವಾಗ ನನಗೆ ತಂದೆ ಕರೆದಷ್ಟೇ ಖುಷಿಯಾಗುತ್ತದೆ ಎಂದಿದ್ದಾರೆ. ಗಿಫ್ಟ್ ತೆಗೆದುಕೊಳ್ಳಲು ಹೋದಾಗ ಆರ್ಯವರ್ಧನ್ ತುಂಬಾ ಖುಷಿಪಟ್ಟಿದ್ದಾರೆ. ಜೀವನದಲ್ಲಿ ರೂಪೇಶ್ ಬರೆದಿರುವ ಹಾಡನ್ನು ಯಾವತ್ತಿಗೂ ಮರೆಯಲ್ಲ. ಇವನು ಬರೆದಿರುವ ಹಾಡನ್ನು ಬೆಳ್ಳಿಯಲ್ಲಿ ಬರೆಸುತ್ತೀನಿ. ಬೆಳ್ಳಿ ಫ್ರೇಮ್ ಹಾಕಿ ಮನೆಯಲ್ಲಿ ಇಟ್ಟುಕೊಳ್ಳುತ್ತೀನಿ ಎಂದ ಗುರೂಜಿ ಮತ್ತೊಮ್ಮೆ ಆ ಪ್ರೀತಿಗಾಗಿ ಆ ಹಾಡನ್ನು ಹಾಡು ಎಂದು ರಿಕ್ವೆಸ್ಟ್ ಮಾಡಿದ್ದಾರೆ. ಎಲ್ಲರ ಅನುಮತಿ ಪಡೆದ ರೂಪೇಶ್ ಮತ್ತೊಮ್ಮೆ ಆ ಬ್ರಹ್ಮ ಬರೆದ ಬರಹ ನೀನು ಎಂಬ ಹಾಡನ್ನು ಹಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್:  ವಾಶ್ ರೂಮ್ ನಲ್ಲಿದ್ದ ಜಿರಳೆ ಕಂಡು ಕಿರುಚಿದ ಸಾನ್ಯಾ ಅಯ್ಯರ್, ಸಹಾಯಕ್ಕೆ ಬಂದವನೇ ರೂಪೇಶ್

    ಬಿಗ್ ಬಾಸ್: ವಾಶ್ ರೂಮ್ ನಲ್ಲಿದ್ದ ಜಿರಳೆ ಕಂಡು ಕಿರುಚಿದ ಸಾನ್ಯಾ ಅಯ್ಯರ್, ಸಹಾಯಕ್ಕೆ ಬಂದವನೇ ರೂಪೇಶ್

    ಬಿಗ್ ಬಾಸ್ ಮನೆಯಲ್ಲಿ ಪುಟ್ಟಗೌರಿ ಮದುವೆ ಖ್ಯಾತಿಯ ಸಾನ್ಯಾ ಅಯ್ಯರ್ ಮತ್ತು ನಟ ರೂಪೇಶ್ ಶೆಟ್ಟಿ ಮಧ್ಯೆ ಏನೋ ನೆಡೀತಾ ಇದೆ ಎನ್ನುವುದು ಸ್ವತಃ ಬಿಗ್ ಬಾಸ್ ಮನೆಯಲ್ಲಿರುವವರ ಅನುಮಾನ. ಈ ಜೋಡಿ ಕೂಡ ಅನುಮಾನ ಬರುವ ಹಾಗೆಯೇ ನಡೆದುಕೊಳ್ಳುತ್ತಿದೆ. ತಮ್ಮ ಮಧ್ಯೆ ಅಂಥದ್ದು ಏನೂ ಇಲ್ಲ ಎಂದು ಇಬ್ಬರೂ ಹೇಳುತ್ತಿದ್ದರೂ, ಮತ್ತೆ ಮತ್ತೆ ಜೊತೆಯಾಗುತ್ತಿರುವುದು ಅನುಮಾನಕ್ಕೆ ಮತ್ತಷ್ಟು ಬಲ ಬಂದಿದೆ.

    ಸಾನ್ಯಾ ನಿನ್ನೆ ವಾಶ್ ರೂಮ್ ನಲ್ಲಿದ್ದಾಗ, ಅವರ ಸಮೀಪದಲ್ಲೇ ಇದ್ದವರು  ರೂಪೇಶ್ ಶೆಟ್ಟಿ. ವಾಶ್ ರೂಮ್ ನಲ್ಲಿದ್ದ ಸಾನ್ಯಾ ಇದ್ದಕ್ಕಿದ್ದಂತೆ ಕಿರುಚಿಕೊಳ್ಳುತ್ತಾರೆ. ಆ ಹುಡುಗಿಗೆ ಏನೋ ಆಯಿತು ಎಂಬ ಆತಂಕದಿಂದ ವಾಶ್ ರೂಮ್ ಒಳಗೆ ಕಾಲಿಡುತ್ತಾರೆ ರೂಪೇಶ್. ಕೊನೆಗೆ ಅವರಿಗೆ ಗೊತ್ತಾಗಿದ್ದು, ವಾಶ್ ರೂಮ್ ಗೆ ಎಂಟ್ರಿ ಕೊಟ್ಟು ಸಾನ್ಯಾನ ಹೆದರಿಸಿದ್ದು ಜಿರಳೆ ಅಂತ. ಮೊದಲು ಇದನ್ನು ಆಚೆ ಹಾಕಿ ಎಂದು ಆ ಹುಡುಗಿ ಕಿರುಚುತ್ತಾಳೆ. ಅಲ್ಲೊಂದು ವಿಚಿತ್ರ ಸನ್ನಿವೇಶವೇ ಸೃಷ್ಟಿ ಆಗುತ್ತದೆ. ಇದನ್ನೂ ಓದಿ:ಪುನೀತ್ ರಾಜ್‌ಕುಮಾರ್ ಮಾಡಬೇಕಿದ್ದ ಪಾತ್ರಕ್ಕೆ `ಪುಷ್ಪ’ ಸ್ಟಾರ್ ಫೈನಲ್

    ಆತಂಕದಲ್ಲಿದ್ದ ಸಾನ್ಯಾರನ್ನು ಸಮಾಧಾನಿಸುವ ಬದಲು, ತನ್ನ ಕೈಯಲ್ಲಿ ಜಿರಳೆ ಹಿಡಿದುಕೊಳ್ಳುವ ರೂಪೇಶ್, ನಾನು ಹೇಳಿದಂತೆ ಕೇಳದೇ ಇದ್ದರೆ, ಇದನ್ನು ಆಚೆ ಹಾಕಲಾರೆ ಎಂದು ಸಾನ್ಯಾಗೆ ಮತ್ತಷ್ಟು ಭಯ ಹುಟ್ಟಿಸುತ್ತಾರೆ. ಕೊನೆಗೆ ನೀನು ಹೇಳಿದಂತೆ ನಾನು ಕೇಳುತ್ತೇನೆ ಎನ್ನುತ್ತಾಳೆ ಸಾನ್ಯ. ಅಲ್ಲಿಗೆ ಸಾನ್ಯ ಮತ್ತು ರೂಪೇಶ್ ಮಧ್ಯೆದ ಅನುಮಾನ ಮತ್ತಷ್ಟು ಗಟ್ಟಿಗೊಂಡಿದ್ದಂತೂ ಸುಳ್ಳಲ್ಲ.

    Live Tv
    [brid partner=56869869 player=32851 video=960834 autoplay=true]

  • ನಾನು ಮತ್ತು ರೂಪೇಶ್ ಶೆಟ್ಟಿ ಜಸ್ಟ್ ಫ್ರೆಂಡ್ಸ್, ಅಂಥದ್ದೇನೂ ಇಲ್ಲ: ಸಾನ್ಯಾ ಅಯ್ಯರ್

    ನಾನು ಮತ್ತು ರೂಪೇಶ್ ಶೆಟ್ಟಿ ಜಸ್ಟ್ ಫ್ರೆಂಡ್ಸ್, ಅಂಥದ್ದೇನೂ ಇಲ್ಲ: ಸಾನ್ಯಾ ಅಯ್ಯರ್

    ಬಿಗ್ ಬಾಸ್ ಮನೆಯಲ್ಲಿ ಒಂಟಿಯಾಗಿ ಹೋದವರು, ವಾಪಸ್ಸು ಜಂಟಿಯಾಗಿಯೇ ಬರುತ್ತಾರೋ ಎನ್ನುವಷ್ಟು ಪ್ರೇಮಕಥೆಗಳು ಅರಳುತ್ತಿವೆ. ಈಗಾಗಲೇ ಸ್ಫೂರ್ತಿ ಗೌಡ, ರಾಕೇಶ್ ಅಡಿಗ ಮತ್ತು ಸೋನು ಶ್ರೀನಿವಾಸ್ ಗೌಡ ನಡುವೆ ತ್ರಿಕೋನ ಪ್ರೇಮ ಶುರುವಾಗಿದೆ. ಯಾರು, ಯಾರನ್ನು ಲವ್ ಮಾಡುತ್ತಿದ್ದಾರೋ ಅವರಿಗೇ ಗೊತ್ತಿರುವ ವಿಚಾರವಾದರೂ, ಜನರಿಗೆ ತಮ್ಮ ಮೂವರೊಳಗೆ ಇನ್ನ್ಯಾರೋ ಇದ್ದಾರೆ ಎನ್ನುವಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಮತ್ತೊಂದು ಲವ್ ಸ್ಟೋರಿ ಚಿಗುರೊಡೆಯುತ್ತಿದೆ.

    ಈಗಾಗಲೇ ಜೀವನಲ್ಲಿ ಒಂದು ಲವ್ ಫೆಲ್ಯೂವರ್ ಕಂಡಿರುವ ಪುಟ್ಟಗೌರಿ ಖ್ಯಾತಿಯ ಸಾನ್ಯಾ ಅಯ್ಯರ್ ಮತ್ತು ರೂಪೇಶ್ ಶೆಟ್ಟಿ ನಡುವೆ ಏನೋ ನಡೀತಾ ಇದೆ ಎನ್ನುವುದು ಬಿಗ್ ಬಾಸ್ ಮನೆಯಲ್ಲಿದ್ದವರ ಗುಮಾನಿ. ಅದಕ್ಕೆ ಪುಷ್ಠಿ ಎನ್ನುವಂತೆ ಈ ಜೋಡಿ ಸದಾ ಜೊತೆಯಾಗಿಯೇ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುತ್ತದೆ. ತಮ್ಮ ನಡುವೆ ಏನೋ ಇದೆ ಎನ್ನುವಂತೆ ನಡೆದುಕೊಳ್ಳುತ್ತಿದೆ. ಹೀಗಾಗಿ ದೊಡ್ಮನೆಯಲ್ಲಿ ಈ ಜೋಡಿಯ ಬಗ್ಗೆ ಗುಸುಗುಸು ಶುರುವಾಗಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಟ್ರಯಾಂಗಲ್ ಲವ್ ಸ್ಟೋರಿ: ರಾಕೇಶ್ ಅಡಿಗ ಪ್ರೇಮ ಪುರಾಣ

    ರೂಪೇಶ್ ಮತ್ತು ತಮ್ಮ ನಡುವಿನ ಅತೀ ಸಲುಗೆ ಇರುವ ವಿಚಾರವು ಬಿಗ್ ಬಾಸ್ ಮನೆಯಲ್ಲಿ ಇರುವವರಿಗೆ ತಿಳಿದಿದೆ ಎಂದು ಸ್ವತಃ ಸಾನ್ಯಾಗೂ ಗೊತ್ತಾಗಿದೆ. ಹಾಗಾಗಿಯೇ ಅವರು ಇದಕ್ಕೆ ಸ್ಪಷ್ಟ ಪಡಿಸಲು ಹೋಗುತ್ತಾರೆ. ರೂಪೇಶ್ ಮತ್ತು ತಮ್ಮ ನಡುವೆ ಅಂಥದ್ದೂ ಏನೂ ಇಲ್ಲ, ನಾವು ಜಸ್ಟ್ ಫ್ರೆಂಡ್ಸ್ ಎಂದು ಹೇಳುವ ಮೂಲಕ ತಿಳಿಗೊಳಿಸಲು ಪ್ರಯತ್ನಿಸುತ್ತಾರೆ. ಏನೇ ಪ್ರಯತ್ನಿಸಿದರೂ, ಅವರುಗಳ ನಡೆ ಮಾತ್ರ ಈಗಲೂ ಪ್ರೇಮಿಗಳ ಲಕ್ಷಣಗಳಂತೆ ಗೋಚರಿಸುತ್ತಿರುವುದನ್ನು ಸ್ಪರ್ಧಿಗಳು ನೋಟಿಸ್ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಅನುಷ್ಕ’ ಚಿತ್ರದ ಚಿತ್ರೀಕರಣ ಮುಕ್ತಾಯ

    ‘ಅನುಷ್ಕ’ ಚಿತ್ರದ ಚಿತ್ರೀಕರಣ ಮುಕ್ತಾಯ

    ಬೆಂಗಳೂರು: ಶ್ರೀ ನಂಜುಂಡೇಶ್ವರ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ಎಸ್.ಕೆ.ಗಂಗಾಧರ್ ಅವರು ನಿರ್ಮಿಸುತ್ತಿರುವ `ಅನುಷ್ಕ` ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ರವೀಂದ್ರ ಮುದ್ದಿ ಬರೆದಿರುವ `ಇವಳೇ ನೋಡು ನಮ್ಮ ತಾಯಿ` ಎಂಬ ಹಾಡಿನ ಚಿತ್ರೀಕರಣ ಆದಿಚುಂಚನಗಿರಿ ಮಠದಲ್ಲಿ ನಡೆದಿದೆ. ಅಮೃತ ಅಯ್ಯಂಗಾರ್ ಈ ಹಾಡಿನ ಚಿತ್ರೀಕರಣದಲ್ಲಿ ಅಭಿನಯಿಸಿದ್ದರು.

    ಈ ಹಾಡಿನ ಚಿತ್ರೀಕರಣದೊಂದಿಗೆ ‘ಅನುಷ್ಕ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಮೈಸೂರು, ಅರಸೀಕೆರೆ ಹಾಗೂ ಬ್ಯಾಂಕಾಕ್‍ನಲ್ಲಿ ಚಿತ್ರಕ್ಕೆ 72 ದಿನಗಳ ಚಿತ್ರೀಕರಣ ನಡೆದಿದೆ.

    ದೇವರಾಜ್‍ಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವೀನಸ್ ಮೂರ್ತಿ ಅವರ ಛಾಯಾಗ್ರಹಣವಿದೆ. ವಿಕ್ರಂ ಸೆಲ್ವ ಸಂಗೀತ ನಿರ್ದೇಶನ, ಶ್ರೀಧರ್ ಸಂಕಲನ, ಅಶೋಕ್, ಸಿದ್ದಾರಾಜು, ನರಸಿಂಹ, ಚಂದ್ರು ಸಾಹಸ ನಿರ್ದೇಶನ, ಅವಿನ್ ನೃತ್ಯ ನಿರ್ದೇಶನ ಹಾಗೂ ಬಾಬುಖಾನ್ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸಾಧುಕೋಕಿಲ, ರೂಪೇಶ್ ಶೆಟ್ಟಿ, ಅಮೃತ ಅಯ್ಯಂಗಾರ್, ರೂಪ ಶರ್ಮ, ಬಾಲರಾಜ್, ಆದಿಲೋಕೇಶ್ ಮುಂತಾದವರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv