Tag: Rupesh Shetty

  • ‘ಬಿಗ್ ಬಾಸ್’ ಫಿನಾಲೆ ವೇದಿಕೆಯ ಮೇಲೆ ಕಣ್ಣೀರಿಟ್ಟಿ ಸುದೀಪ್

    ‘ಬಿಗ್ ಬಾಸ್’ ಫಿನಾಲೆ ವೇದಿಕೆಯ ಮೇಲೆ ಕಣ್ಣೀರಿಟ್ಟಿ ಸುದೀಪ್

    ನಿನ್ನೆಯಷ್ಟೇ ಬಿಗ್ ಬಾಸ್ (Bigg Boss) ಸೀಸನ್ 9ರ ಗ್ರ್ಯಾಂಡ್ ಫಿನಾಲೆ ಮುಕ್ತಾಯವಾಗಿದೆ. ಸೋಲು ಗೆಲುವು ಏನೇ ಇರಲಿ, ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿದ್ದ ಅಷ್ಟೂ ಸ್ಪರ್ಧಿಗಳು ತಮ್ಮ ಸಾಮರ್ಥ್ಯವನ್ನು ಮೀರಿ ಮನರಂಜಿಸಲು ಪ್ರಯತ್ನಪಟ್ಟಿದ್ದಾರೆ. ತಮ್ಮದಲ್ಲದ ವ್ಯಕ್ತಿತ್ವವನ್ನು ತೋರಿಸಿದ್ದಾರೆ. ಕೆಲವರು ಒಂದೇ ವಾರಕ್ಕೆ ಮನೆಯಿಂದ ಆಚೆ ಬಂದರೆ, ಇನ್ನೂ ಕೆಲವರು ಫಿನಾಲೆ ವೇದಿಕೆ ಹತ್ತಿದ್ದಾರೆ. ಹಾಗಾಗಿ ಫಿನಾಲೆ ವೇದಿಕೆ ಒಂದು ರೀತಿಯಲ್ಲಿ ಭಾವುಕ ಪ್ರಪಂಚವನ್ನೇ ಸೃಷ್ಟಿ ಮಾಡಿತ್ತು.

    ಅದರಲ್ಲೂ ವೀಕೆಂಡ್ ನಲ್ಲಿ ಬಂದು ಸ್ಪರ್ಧಿಗಳ ಜೊತೆ ಮುಖಾಮುಖಿ ಆಗುವ, ಪ್ರತಿ ಸ್ಪರ್ಧಿಯ ಗುಣ ಅವಗುಣಗಳನ್ನು ತಿಳಿಸುವ, ಕೆಲವೊಂದು ಬಾರಿ ಕೋಪಗೊಳ್ಳುವ ಸುದೀಪ್ (Sudeep), ಫಿನಾಲೆ ವೇದಿಕೆಯ ಮೇಲೆ ಭಾವುಕರಾಗಿ ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು. ಸುದೀಪ್ ಅವರ ಬಿಗ್ ಬಾಸ್ ಜರ್ನಿಯ ತುಣುಕುಗಳನ್ನು ತೋರಿಸಲಾಯಿತು. ಅದನ್ನು ನೋಡುತ್ತಿದ್ದ ಸುದೀಪ್, ಅಕ್ಷರಶಃ ಕಣ್ಣೀರಿಟ್ಟರು. ಇದನ್ನೂ ಓದಿ: ದಿವ್ಯಾ ಉರುಡುಗ ಮೇಲೆ ಹಲವು ಅನುಮಾನ ವ್ಯಕ್ತ ಪಡಿಸಿದ ಆರ್ಯವರ್ಧನ್ ಗುರೂಜಿ

    ಬಿಗ್ ಬಾಸ್ ಜೊತೆಗಿನ ಬಾಂಧವ್ಯವನ್ನು ಹಂಚಿಕೊಂಡ ಸುದೀಪ್, ‘ಇದು ನನ್ನ ನೈಜ ಜೀವನ. ಬಣ್ಣ ಹಚ್ಚದೇ ಮಾತನಾಡುವ ಜೀವನ. ನಾನು ನಾನಾಗಿಯೇ ಕಾಣಿಸಿಕೊಳ್ಳುವ ವೇದಿಕೆ. ಈ ಪ್ರೀತಿಗೆ ನಾನು ಋಣಿಯಾಗಿದ್ದೇನೆ. ನಾನು ಯಾವತ್ತಿಗೂ ನಿಮ್ಮ ಪ್ರೀತಿ ಬಯಸಿಯೇ ಕಾಯುತ್ತೇನೆ’ ಎಂದು ಮಾತನಾಡಿದರು. ಕೆಲವೊತ್ತು ಮಾತುಗಳನ್ನೇ ನಿಲ್ಲಿಸಿ, ಕಣ್ಣೀರು ಒರೆಯಿಸಿಕೊಂಡರು.

    ಬಿಗ್ ಬಾಸ್ ಸೀಸನ್ 9ರ ತೊಂಬತ್ತೊಂಬತ್ತು ದಿನಗಳ ಆಟಕ್ಕೆ ನಿನ್ನೆ ಮುಕ್ತಾಯ ಹಾಡಲಾಗಿದೆ. ಈ ಬಾರಿ ರೂಪೇಶ್ ಶೆಟ್ಟಿ (Rupesh Shetty) ಬಿಗ್ ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದರೆ, ರಾಕೇಶ್ ಅಡಿಗ (Rakesh Adiga)ರನ್ನರ್ ಆಗಿದ್ದಾರೆ. ಬಿಗ್ ಬಾಸ್ ಟೈಟಲ್ ಗೆದ್ದ ರೂಪೇಶ್ ಶೆಟ್ಟಿ ಬಿಗ್ ಬಾಸ್ ಟ್ರೋಫಿ ಮತ್ತು 60 ಲಕ್ಷ ರೂಪಾಯಿಗಳ ಬಹುಮಾನ ಪಡೆದಿದ್ದಾರೆ. ತಮ್ಮ ಜರ್ನಿ ಯಾವತ್ತಿಗೂ ಮರೆಯಲಾರದ್ದು ಎಂದು ಪ್ರತಿಕ್ರಿಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ವಿನ್ನರ್ ಲಿಸ್ಟ್ ನಲ್ಲಿ ರಾಕೇಶ್ ಅಡಿಗ ಹೆಸರು

    ಬಿಗ್ ಬಾಸ್ ವಿನ್ನರ್ ಲಿಸ್ಟ್ ನಲ್ಲಿ ರಾಕೇಶ್ ಅಡಿಗ ಹೆಸರು

    ಬಿಗ್ ಬಾಸ್ ಸೀಸನ್ 9ರ ವಿಜೇತರು ಯಾರು ಎನ್ನುವುದು ಇನ್ನು ಕೆಲವೇ ಗಂಟೆಗಳಲ್ಲಿ ಘೋಷಣೆ ಆಗಲಿದೆ. ಅದಕ್ಕೂ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ಹಲವು ಹೆಸರುಗಳು ಕೇಳಿ ಬರುತ್ತಿವೆ. ಗ್ರ್ಯಾಂಡ್ ಫಿನಾಲೆ ವೇದಿಕೆ ಹತ್ತಿದ್ದ ಐದು ಸ್ಪರ್ಧಿಗಳಲ್ಲಿ ದಿವ್ಯಾ ಉರುಡುಗ, ರೂಪೇಶ್ ರಾಜಣ್ಣ ಮತ್ತು ದೀಪಿಕಾ ದಾಸ್ ಎಲಿಮಿನೇಟ್ ಆಗಿದ್ದಾರೆ. ಉಳಿದಿರುವುದು ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಮಾತ್ರ. ಇಬ್ಬರಲ್ಲಿ ಅದೃಷ್ಟ ಯಾರ ಪಾಲಾಗುತ್ತೋ ಕಾದು ನೋಡಬೇಕು.

    ಮಧ್ಯಾಹ್ನದಿಂದ ಎರಡನೇ ದಿನದ ಕಾರ್ಯಕ್ರಮ ಶುರುವಾಗಿದ್ದು, ಆಗಲೇ ರೂಪೇಶ್ ಶೆಟ್ಟಿ ಬಿಗ್ ಬಾಸ್ ಸೀಸನ್ 9ರ ವಿಜೇತ ಎಂದು ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುವ ಮೂಲಕ ಸಂಭ್ರಮಿಸುತ್ತಿದ್ದಾರೆ. ರೂಪೇಶ್ ಗೆಳೆಯರು ಕೂಡ ಶುಭ ಹಾರೈಸುತ್ತಿದ್ದಾರೆ. ಈ ಕಡೆ ರಾಕೇಶ್ ಅಡಿಗ ಬೆಂಬಲಿಗರು ಕೂಡ ತಮ್ಮ ನೆಚ್ಚಿನ ನಟನೇ ಬಿಗ್ ಬಾಸ್ ಗೆದ್ದಿರುವುದು ಎಂದು ವಾದಿಸುತ್ತಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್‌ನಿಂದ ಹೊರ ಬಂದ್ಮೇಲೆ ಸಾನ್ಯನ ತಬ್ಬಿಕೊಳ್ತೀನಿ: ರೂಪೇಶ್‌ ಶೆಟ್ಟಿ

    ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಇಬ್ಬರೂ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದಿಂದ ಬಿಗ್ ಬಾಸ್ ಸೀಸನ್ 9ಕ್ಕೆ ಆಯ್ಕೆಯಾಗಿ ಬಂದವರು. ಅಲ್ಲಿಯೂ ಚೆನ್ನಾಗಿಯೇ ಆಟವಾಡಿದ್ದರು. ಈ ಸೀಸನ್ ನಲ್ಲೂ ಚೆನ್ನಾಗಿ ಆಡಿದ್ದಾರೆ. ಹಾಗಾಗಿ ಇಬ್ಬರ ಮಧ್ಯ ತೀವ್ರ ಪೈಪೋಟಿ ನಡೆದಿದೆ. ಅಧಿಕೃತವಾಗಿ ಟ್ರೋಫಿ ಗೆದ್ದವರು ಯಾರು ಎಂದು ಬಹಿರಂಗ ಪಡಿಸದೇ ಇದ್ದರೂ, ಇಬ್ಬರ ಹೆಸರು ಓಡಾಡುತ್ತಿದೆ. ಈ ಮೂಲಕ ಕನ್ಫ್ಯೂಸ್ ಮಾಡುವಂತ ಕೆಲಸವೂ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ‘ಬಿಗ್ ಬಾಸ್’ ಮನೆಯಲ್ಲಿ ದಿವ್ಯಾಗೆ ಕ್ಲಾಸ್ ತಗೆದುಕೊಂಡು ಆರ್ಯವರ್ಧನ್ ಗುರೂಜಿ

    ‘ಬಿಗ್ ಬಾಸ್’ ಮನೆಯಲ್ಲಿ ದಿವ್ಯಾಗೆ ಕ್ಲಾಸ್ ತಗೆದುಕೊಂಡು ಆರ್ಯವರ್ಧನ್ ಗುರೂಜಿ

    ಚಿತ್ರ ವಿಚಿತ್ರ, ವಿಭಿನ್ನ ಟಾಸ್ಕ್ ಕೊಡೊವುದರಲ್ಲಿ ಬಿಗ್ ಬಾಸ್ (Big Boss) ಯಾವಾಗಲೂ ಮುಂದು. ಎಲ್ಲೂ ನೋಡಿರದ ಡಿಫರೆಂಟ್ ಟಾಸ್ಕ್ ಗಳನ್ನು ಮನೆಯಲ್ಲಿರುವ ಸ್ಪರ್ಧಿಗಳಿಗೆ ಬಿಗ್  ಬಾಸ್ ಕೊಡುತ್ತಾರೆ. ಇದೀಗ ಭಿನ್ನವಾಗಿ ಟಾಸ್ಕ್ ಗಳನ್ನು ಕೊಡುವ ಬಗ್ಗೆ ಗುರೂಜಿ, ರೂಪೇಶ್ ಶೆಟ್ಟಿ (Rupesh Shetty) ಮತ್ತು ದಿವ್ಯಾ (Divya) ಮಾತನಾಡಿದ್ದಾರೆ. ಆಗ ಸಣ್ಣ ಬುದ್ಧಿ ಮಾತನಾಡಬೇಡ ಎಂದು ದಿವ್ಯಾಗೆ ಆರ್ಯವರ್ಧನ್ ಗುರೂಜಿ ಅವಾಜ್ ಹಾಕಿದ್ದಾರೆ.

    95 ದಿನಗಳನ್ನು ಪೂರೈಸಿರುವ ದೊಡ್ಮನೆಯ ಆಟ ಇದೀಗ  ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.  ಫಿನಾಲೆಗೆ ಕೆಲವೇ ದಿನಗಳು ಬಾಕಿ ಇರುವ ಈ ವೇಳೆಯಲ್ಲಿ ಬಿಗ್ ಬಾಸ್ ಕೊಡುತ್ತಿರುವ ಟಾಸ್ಕ್ ನೋಡಿ ಮನೆಮಂದಿ ದಂಗಾಗಿದ್ದಾರೆ. ಟಾಸ್ಕ್ ಮಾಡುವ ಟೀಮ್  ವಿಚಾರದ ಬಗ್ಗೆ ಮಾತನಾಡುವಾಗ ಗುರೂಜಿಗೂ (Aryavardhan Guruji) ದಿವ್ಯಾಗೂ ಮಾತಿನ ಚಕಮಕಿ ನಡೆದಿದೆ. ಈ ವೇಳೆ ದಿವ್ಯಾಗೆ ಗುರೂಜಿ ಅವಾಜ್ ಹಾಕಿದ್ದಾರೆ. ಇದನ್ನೂ ಓದಿ: ‘ಪುಷ್ಪಾ 2’ ಟೀಮ್ ಸೇರಿಕೊಂಡ ನಟಿ ಸಾಯಿ ಪಲ್ಲವಿ: ರಶ್ಮಿಕಾ ಮಂದಣ್ಣ ಪಾತ್ರವೇನು?

    ಕ್ರಿಯೇಟಿವ್ ಆಗಿ ಟಾಸ್ಕ್ ಗಳನ್ನು ಸೃಷ್ಟಿಸುವ  ಟೀಮ್ ನ ಮೀಟ್ ಮಾಡಬೇಕು ಎಂದು ರೂಪೇಶ್ ಶೆಟ್ಟಿ ಹೇಳುತ್ತಾರೆ. ಆಗ ಗುರೂಜಿ, ಅವರೆಲ್ಲಾ ಇಲ್ಲಿ ಎಲ್ಲಿ ಇರುತ್ತಾರೆ. ಇಂಡಿಯಾದಲ್ಲೇ ಇರಲ್ಲವೇನೋ ಎಂದು ಹೇಳಿದ್ದಾರೆ. ನಾಲ್ಕನೇ ವ್ಯಕ್ತಿಯಿಂದ ಟಾಸ್ಕ್ ಬರುತ್ತೆ ಎಂದು ಟಾಸ್ಕ್ ಗಳನ್ನು ಕ್ರಿಯೇಟ್ ಮಾಡುವ ಟೀಮ್ ಬಗ್ಗೆ ಚರ್ಚೆ ನಡೆಯುತ್ತದೆ. ಟಾಸ್ಕ್ ಎಲ್ಲಿಂದ ಬರುತ್ತವೆ ಎನ್ನುವ ಕುರಿತು ಮಾತುಕತೆ ಆಗುತ್ತದೆ.

    ಈ ವೇಳೆ ಟಾಸ್ಕ್ ಕ್ರಿಯೇಟ್ ಮಾಡೋಕೆ ಎಂದೇ ಒಂದು ಕ್ರಿಯೇಟಿವ್ ಟೀಮ್ ಇದೆ ಗುರೂಜಿ ಎಂದು ದಿವ್ಯಾ ಹೇಳುತ್ತಾರೆ. ಇದರ ಬಗ್ಗೆ ಮಾತನಾಡುವಾಗ ಮಾತಿನ ಚಕಮಕಿ ಜೋರಾಗಿದೆ. ಆಗ ಸಣ್ಣ ಬುದ್ಧಿ ಮಾತನಾಡಬೇಡ, ನನ್ನ ಮಾತು ಕೇಳು, ನಾನು ಇಂಟರ್ ನ್ಯಾಷನಲ್ ಬ್ರೇನ್ ಬಗ್ಗೆ ಮಾತನಾಡುತ್ತಿದ್ದೀನಿ, ಇದನ್ನ ಕೇಳು ಅಂದ್ರೆ ನನ್ನ ಹತ್ತಿರನೇ ವಾದ ಮಾಡುತ್ತೀಯಾ ಎಂದು ದಿವ್ಯಾಗೆ ಗುರೂಜಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗುರೂಜಿಗೆ ಬಿಗ್ ಬಾಸ್ ಡಬಲ್ ಶಾಕ್: ಸೂಟ್ ಕೇಸ್ ರೆಡಿ ಮಾಡಿ ಎಂದ ನಟ ಸುದೀಪ್

    ಗುರೂಜಿಗೆ ಬಿಗ್ ಬಾಸ್ ಡಬಲ್ ಶಾಕ್: ಸೂಟ್ ಕೇಸ್ ರೆಡಿ ಮಾಡಿ ಎಂದ ನಟ ಸುದೀಪ್

    ಬಿಗ್ ಬಾಸ್ (Bigg Boss) ಮನೆಯ ‘ಸೂಪರ್ ಸಂಡ್ ವಿತ್ ಸುದೀಪ್’ (Sudeep) ಎಂದಿನಂತೆ ಇರಲಿಲ್ಲ. ಬಿಗ್ ಬಾಸ್ ಶುರುವಾಗಿ 50 ದಿನಗಳು ಕಳೆದ ಸಂರ್ಭದಲ್ಲಿ ಹಲವು ವಿಶೇಷತೆಗಳು ಮತ್ತು ಹಲವರಿಗೆ ಶಾಕ್ ಕಾದಿತ್ತು. ಲವಲವಿಕೆಯಿಂದಲೇ ತಮ್ಮ ಕಾರ್ಯಕ್ರಮವನ್ನು ನಡೆಸಿ ಕೊಡುವ ಸುದೀಪ್, ಎಲ್ಲ ಸ್ಪರ್ಧಿಗಳನ್ನು ಅಷ್ಟೇ ಪ್ರೀತಿಯಿಂದ ಮಾತನಾಡಿಸಿದರು. ಶನಿವಾರದ ಎಪಿಸೋಡ್ ಅಂದರೆ, ಅಲ್ಲೊಂದು ಎಲಿಮಿನೇಷನ್ ಇರತ್ತೆ. ಕಣ್ಣೀರು, ಕಲರವ ಎಲ್ಲವೂ ಬೆರೆತಿರುತ್ತದೆ. ಈ ವಾರವೂ ಅದೆಲ್ಲವೂ ಇತ್ತು. ಆದರೆ, ಕೊನೆಯ ಕ್ಷಣ ಮಾತ್ರ ಬೇರೆಯಾಗಿತ್ತು.

    ಶನಿವಾರ ಎಪಿಸೋಡ್ ಮುಗಿಯುತ್ತಿದ್ದಂತೆಯೇ ಆ ವಾರ ಬಿಗ್ ಬಾಸ್ (Kannada Bigg Boss)ಮನೆಯಿಂದ ಒಬ್ಬರನ್ನು ಹೊರಹಾಕಲಾಗುತ್ತದೆ. ಈ ವಾರ ಅಂಥದ್ದೊಂದು ಗಳಿಗೆ ಬಂದಿದ್ದು ಆರ್ಯವರ್ಧನ್ ಗುರೂಜಿಗೆ. ಈ ವಾರ ನೀವು ಮನೆಯಿಂದ ಹೊರ ಬರುತ್ತಿದ್ದೀರಿ ಎಂದು ಗುರೂಜಿಗೆ ಸುದೀಪ್ ಅವರು ಹೇಳಿ ಆಗಿತ್ತು. ‘ನನಗೆ 13 ನಂಬರ್ ಆಗಿ ಬರಲ್ಲ, ನಾಮಿನೇಟ್ ಮಾಡಬೇಡಿ ಅಂದರೂ ಕೇಳಲಿಲ್ಲ’ ಎಂದು ಗುರೂಜಿ ಕಣ್ಣೀರು ಕೂಡ ಇಟ್ಟರು. ಮನೆಯಲ್ಲಿದ್ದವರ ಹೃದಯ ಭಾರ ಭಾರ. ರೂಪೇಶ್ ಶೆಟ್ಟಿ (Rupesh Shetty) ಅತ್ತೇ ಬಿಟ್ಟರು. ಎಲ್ಲರೊಂದಿಗೆ ಖುಷಿಯಲ್ಲಿದ್ದ ಗುರೂಜಿ, ಎಲಿಮಿನೇಷನ್ ಸುದ್ದಿ ಸ್ಫೋಟವಾಗುತ್ತಿದ್ದಂತೆಯೇ ಕಣ್ಣೀರಿನೊಂದಿಗೆ ತಮ್ಮ ರೂಮ್‍ಗೆ ಹೊರಟರು.

    ಗುರೂಜಿ (Aryavardhan Guruji) ಮನೆಯಿಂದ ಆಚೆ ಬರಲು ಕೆಲವೇ ನಿಮಿಷಗಳ ವೇಳೆ ಕೊಟ್ಟಿದ್ದ ಕಾರಣಕ್ಕಾಗಿ ಸೂಟ್ ಕೇಸ್ ರೆಡಿ ಮಾಡಿಕೊಂಡು ಎಲ್ಲರಿಗೂ ಧನ್ಯವಾದ ಕೂಡ ಹೇಳಿದರು. ಕೆಲವರು ಅತ್ತರು, ಇನ್ನೂ ಕೆಲವರು ಕ್ಷಮೆ ಕೇಳಿದರು. ನಿತ್ಯ ಮನೆಯಲ್ಲಿ ಏನಾಗಬೇಕಿತ್ತೋ ಎಲ್ಲವೋ ಆಯಿತು. ಆ ನಂತರ ನೇರವಾಗಿ ನಾಮಿನೇಟ್ ಮಾಡುವಂತಹ ವಿಶೇಷ ಅಧಿಕಾರ ಕೂಡ ಗುರೂಜಿಗೆ ನೀಡಲಾಯಿತು. ಇನ್ನೇನು ಗುರೂಜಿ ನೇರ ನಾಮಿನೇಟ್ ಮಾಡಲು ಜನರನ್ನು ಹುಡುಕುವಾಗಲೇ ಮತ್ತೇ ಬಿಗ್ ಬಾಸ್ ಧ್ವನಿ ಬಂತು.

    ಅಲ್ಲಿವರೆಗೂ ಬಿಗ್ ಬಾಸ್ ಸಣ್ಣದೊಂದು ಗೇಮ್ ಆಡಿದ್ದರು. ಈ ವಾರ ಯಾವುದೇ ವೋಟಿಂಗ್ ಮತ್ತು ನಾಮಿನೇಷನ್ ಪ್ರಕ್ರಿಯೆ ಇರದೇ ಇರುವ ಕಾರಣಕ್ಕಾಗಿ ಈ ವಾರ ಯಾರೂ ಮನೆಯಿಂದ ಆಚೆ ಹೋಗುತ್ತಿಲ್ಲವೆಂದು ಘೋಷಣೆ ಮಾಡಿದರು. ಗುರೂಜಿ ನೀವು ಮನೆ ಒಳಗೆ ಹೋಗಬಹುದು ಎಂದು ಸರ್ ಪ್ರೈಸ್ ನೀಡಿದರು. ಗುರೂಜಿ ಮತ್ತೆ ಕಣ್ಣೀರು ಹಾಕುತ್ತಲೇ ವಿಶೇಷ ಧನ್ಯವಾದಗಳನ್ನು ತಿಳಿಸಿ ಬಿಗ್ ಬಾಸ್ ಮನೆ ಒಳಗೆ ಹೋದರು. ತಮಗೆ 13 ನಂಬರ್ ಆಗಿ ಬರುವುದಿಲ್ಲ ಎನ್ನುವುದನ್ನು ಬಿಗ್ ಬಾಸ್ ಸುಳ್ಳಾಗಿಸುವ ಮೂಲಕ ಬಿಗ್ ಶಾಕ್ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿ ನಟನೆಯ ಚಿತ್ರದ ಫ್ಯಾಥೋ ಹಾಡು ರಿಲೀಸ್

    ಬಿಗ್ ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿ ನಟನೆಯ ಚಿತ್ರದ ಫ್ಯಾಥೋ ಹಾಡು ರಿಲೀಸ್

    ಬಿಗ್ ಬಾಸ್ ಸೀಸನ್ 9ರ (Bigg Boss) ಸ್ಪರ್ಧಿ, ನಟ ರೂಪೇಶ್ ಶೆಟ್ಟಿ ಅಭಿನಯದ ‘ಮಂಕು ಭಾಯ್ ಫಾಕ್ಸಿ ರಾಣಿ’  (Manku Bhai Foxy Rani) ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಟೈಟಲ್ ಮೂಲಕವೇ ಎಲ್ಲರ ಗಮನ ಸೆಳೆಯುತ್ತಿರುವ ಚಿತ್ರತಂಡ ಸಿನಿಮಾ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ಚಿತ್ರದ ಹಾಡುಗಳ ಮೂಲಕ ಎಲ್ಲರ ಮನಸೂರೆಗೊಳ್ಳುತ್ತಿದೆ. ಸದ್ಯ ಈ ಚಿತ್ರದ ‘ತಂಗಾಳಿಯೇ ತಲುಪಿಸು’ ಹಾಡು ಬಿಡುಗಡೆಯಾಗಿ (Release) ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    ಚಿತ್ರದ ಪ್ಯಾಥೋ ಸಾಂಗ್ ಆಗಿರುವ ‘ತಂಗಾಳಿಯೇ ತಲುಪಿಸು’ ಹಾಡು ಬಿಡುಗಡೆಯಾಗಿದ್ದು, ತಮಿಳಿನ ಖ್ಯಾತ ಗಾಯಕ ಹರಿಚರಣ್ ಹಾಡಿಗೆ (Song) ದನಿಯಾಗಿದ್ದಾರೆ. ಕೀರ್ತನ್ ಭಂಡಾರಿ ಸಾಹಿತ್ಯ, ವಿನ್ಯಾಸ್ ಮದ್ಯ ಸಂಗೀತ ಸಂಯೋಜನೆ ಈ ಹಾಡಿಗಿದ್ದು ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಈ ಹಿಂದೆ ಬಿಡುಗಡೆಯಾದ ಸೋನು ನಿಗಮ್ ಕಂಠಸಿರಿಯಲ್ಲಿ ಮೂಡಿಬಂದ ‘ಮಿಂಚಂತೆ ಮಿನುಗುತಿರೊ’ ಹಾಡು ಕೂಡ ಕೇಳುಗ ಪ್ರಿಯರ ಮನಗೆದ್ದಿತ್ತು. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ

    ಬಿಗ್ ಬಾಸ್ ಒಟಿಟಿ ಸೀಸನ್ ವಿನ್ನರ್, ಬಿಗ್ ಬಾಸ್ ಸೀಸನ್ 9ರ ಸ್ಪರ್ಧಿ ಕೂಡ ಆಗಿರುವ ರೂಪೇಶ್ ಶೆಟ್ಟಿ (Rupesh Shetty) ಈಗಾಗಲೇ ಹಲವು ತುಳು ಹಾಗೂ ಕನ್ನಡ ಸಿನಿಮಾಗಳಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಚಿತ್ರದಲ್ಲಿ ವಿಭಿನ್ನ ಗೆಟಪ್ ನಲ್ಲಿ ಕಾಣಸಿಕೊಂಡಿದ್ದು, ಇವರಿಗೆ ನಾಯಕಿಯರಾಗಿ ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ಗೀತಾ ಭಾರತಿ, ಪಂಚಮಿ ರಾವ್  ಅಭಿನಯಿಸಿದ್ದಾರೆ. ಲವ್, ಸಸ್ಪೆನ್ಸ್ ಕಥಾಹಂದರ ಒಳಗೊಂಡ ಈ ಚಿತ್ರಕ್ಕೆ ಯುವ ಪ್ರತಿಭೆ ಗಗನ್ ಎಂ ಆಕ್ಷನ್ ಕಟ್ ಹೇಳಿದ್ದಾರೆ. ಕಿರುಚಿತ್ರ ಹಾಗೂ ಕೆಲ ತುಳು ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಇವರಿಗಿದ್ದು, ‘ಮಂಕು ಭಾಯ್ ಫಾಕ್ಸಿ ರಾಣಿ’ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಹೊರ ಹೊಮ್ಮಿದ್ದಾರೆ.

    ನಿರ್ಮಾಪಕ ಜೋಶ್ವ ಜೈಶಾನ್ ಕ್ರಾಸ್ತ ‘ಜೋಶ್ವ ಮೀಡಿಯಾ ಪ್ರೈವೇಟ್’ ಲಿಮಿಟೆಡ್ ಬ್ಯಾನರ್ ನಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ವಿನ್ಯಾಸ್ ಮದ್ಯ, ಶಮೀರ್ ಮುಡಿಪು ಸಂಗೀತ ನಿರ್ದೇಶನ, ಶಿನೋಯ್ ವಿ ಜೋಸೆಫ್ ಹಿನ್ನೆಲೆ ಸಂಗೀತ, ಎಂ.ಕೆ ಷಜಹಾನ್ ಕ್ಯಾಮೆರಾ ನಿರ್ದೇಶನ, ಸುಶಾಂತ್ ಶೆಟ್ಟಿ, ಪ್ರಜ್ವಲ್ ಸುವರ್ಣ ಸಂಕಲನ ಚಿತ್ರಕ್ಕಿದೆ. ಪ್ರಕಾಶ್ ತೂಮಿನಾಡು, ಅರ್ಜುನ ಕಜೆ, ಪ್ರಶಾಂತ್ ಅಂಚನ್, ವಿವೇಕ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರೂಪೇಶ್ ರಾಜಣ್ಣ- ಪ್ರಶಾಂತ್ ಸಂಬರ್ಗಿ ‘ಲೇ..’ ಜಗಳ: ರಣರಂಗವಾಯ್ತು ಬಿಗ್ ಬಾಸ್ ಮನೆ

    ರೂಪೇಶ್ ರಾಜಣ್ಣ- ಪ್ರಶಾಂತ್ ಸಂಬರ್ಗಿ ‘ಲೇ..’ ಜಗಳ: ರಣರಂಗವಾಯ್ತು ಬಿಗ್ ಬಾಸ್ ಮನೆ

    ಬಿಗ್ ಬಾಸ್ ಮನೆಯಲ್ಲಿ ಹಾವು ಮುಂಗಸಿಯಂತಿದ್ದ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ (Prashant Sambargi) ಕಳೆದೊಂದು ವಾರದಿಂದ ತೀರಾ ಹತ್ತಿರವಾಗಿದ್ದರು. ಒಡಹುಟ್ಟಿದವರಂತೆ ಅನ್ಯೋನ್ಯವಾಗಿದ್ದರು. ಸ್ವತಃ ಬಿಗ್ ಬಾಸ್ಸೇ ಅಚ್ಚರಿ ಪಡುವಷ್ಟು ಒಬ್ಬರಿಗೊಬ್ಬರು ಗೌರವ ಕೊಟ್ಟುಕೊಂಡು ದಿನಗಳನ್ನು ದುಡುತ್ತಿದ್ದರು. ಆದರೆ, ದೀಪಾವಳಿ ದಿನದಂದು ಲಕ್ಷ್ಮಿ ಪಟಾಕಿ ಸಿಡಿಯುವಂತೆ ಇಬ್ಬರೂ ಸಿಡಿದುಕೊಂಡಿದ್ದಾರೆ. ಇವರಿಬ್ಬರ ಮಾತಿಗೆ ಬಿಗ್ ಬಾಸ್ ಮನೆ ರಣರಂಗವಾಗಿ ಮಾರ್ಪಟಿದೆ.

    ಕಳೆದ ನಾಲ್ಕೈದು ದಿನಗಳಿಂದ ರೂಪೇಶ್ ರಾಜಣ್ಣ (Rupesh Rajanna)ನನ್ನು ಪ್ರ್ಯಾಂಕ್ ಮಾಡುತ್ತಾ, ಮಜಾ ತಗೆದುಕೊಳ್ಳುತ್ತಿದ್ದರು ಪ್ರಶಾಂತ್ ಸಂಬರ್ಗಿ. ದೆವ್ವದ ವಿಚಾರವಾಗಿ ಕಾವ್ಯಶ್ರೀ ಗೌಡ ಮತ್ತು ಪ್ರಶಾಂತ್ ಸಂಬರ್ಗಿ ಹೂಡಿದ್ದ ಆಟಕ್ಕೆ ರೂಪೇಶ್ ರಾಜಣ್ಣ ಕ್ಲೀನ್ ಬೋಲ್ಡ್ ಆಗಿದ್ದರು. ಹೀಗಾಗಿ ರೂಪೇಶ್ ಮತ್ತು ಪ್ರಶಾಂತ್ ನಡುವೆ ಸ್ನೇಹ ಗಟ್ಟಿಯಾಗುತ್ತಿತ್ತು. ಆದರೆ, ದೀಪಾವಳಿ ದಿನದಂದು ಆಡಿದ ಆಟ ಮಾತ್ರ ಇಬ್ಬರನ್ನೂ ಕೆರಳಿಸಿತ್ತು. ದೀಪಾವಳಿ ಸಂಭ್ರಮವನ್ನು ನುಂಗಿತ್ತು. ಇಬ್ಬರ ಕಿತ್ತಾಟದಲ್ಲಿ ಬಿಗ್ ಬಾಸ್ ಮನೆಯ ಉಳಿದ ಸದಸ್ಯರು ಕೂಡ ಆತಂಕಗೊಂಡರು. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ

    ‘ಉಡುಗೊರೆ ಬೇಕಾ, ಕ್ಯಾಪ್ಟನ್ಸಿ ಪಾಯಿಂಟ್ಸ್ ಬೇಕಾ’ ವಿಚಾರವು ಅರುಣ್ ಸಾಗರ್ (Arun Sagar) ಸೇರಿದಂತೆ ಹಲವು ಸದಸ್ಯರನ್ನು ಚರ್ಚೆಗೀಡು ಮಾಡಿತ್ತು. ಮೊದಲ ಹಂತದ ಚರ್ಚೆಯಲ್ಲಿ ಅರುಣ್ ಸಾಗರ್ ಮತ್ತು ರೂಪೇಶ್ ರಾಜಣ್ಣ ಸಣ್ಣದಾಗಿ ಕಿತ್ತಾಡಿಕೊಂಡರು. ರೂಪೇಶ್ ಅವರಿಗೆ ದುರಾಸೆ ಎಂದು ಅರುಣ್ ಆಡಿದ ಮಾತು ರೂಪೇಶ್ ರಾಜಣ್ಣರನ್ನು ಕೆರಳಿಸಿತ್ತು. ಇವರಿಬ್ಬರ ನಡುವಿನ ಕಿತ್ತಾಟದಲ್ಲಿ ಪ್ರಶಾಂತ್ ಸಂಬರ್ಗಿ ಮೂಗು ತೂರಿಸಿದರು. ಪ್ರಶಾಂತ್ ಎಂಟ್ರಿ ಕೊಡುತ್ತಿದ್ದಂತೆಯೇ ಜಗಳ ಬೇರೆ ಹಂತ ತಲುಪಿತು.

    ಅರುಣ್ ಮತ್ತು ರೂಪೇಶ್ ನಡುವಿನ ಗಲಾಟೆಗೆ  ಉರಿವ ಬೆಂಕಿಗೆ ತುಪ್ಪ ಸುರಿದಂತೆ ಅರುಣ್ ಪರ ಬ್ಯಾಟ್ ಬೀಸಿದರು ಪ್ರಶಾಂತ್. ಅದರಿಂದ ಮತ್ತಷ್ಟು ಕುಪಿತಗೊಂಡ ರೂಪೇಶ್ ರಾಜಣ್ಣ ಸಿಡಿದೆದ್ದು ಬಿಟ್ಟರು. ಮಾತಿನ ಭರಾಟೆಯಲ್ಲಿ ರೂಪೇಶ್ ಅವರನ್ನು ‘ಲೇ..’ ಎಂದು ಕರೆದುಬಿಟ್ಟರು ಪ್ರಶಾಂತ್ ಸಂಬರ್ಗಿ. ರೂಪೇಶ್ ರಾಜಣ್ಣ ಮತ್ತಷ್ಟು ಸಿಟ್ಟಾಗಿ ಹೊಡೆಯಲೆಂದು ಹೊರಟರು. ಇಬ್ಬರೂ ಕೈ ಕೈ ಮಿಲಾಯಿಸಿದರು. ದೀಪಾವಳಿ ಸಂಭ್ರಮದಲ್ಲಿದ್ದ ಬಿಗ್ ಬಾಸ್ ಮನೆ ರಣರಂಗವಾಯಿತು. ರೂಪೇಶ್ ಶೆಟ್ಟಿ (Rupesh Shetty) ಇವರನ್ನು ಸಮಾಧಾನ ಪಡಿಸದೇ ಇದ್ದರೆ, ಬಿಗ್ ಬಾಸ್ ಮನೆ ಇನ್ನೇನಾಗುತ್ತಿತ್ತೋ. ಈ ಗಲಾಟೆ ಕಿಚ್ಚನ ಪಂಚಾಯತಿಯಲ್ಲಿ ಯಾವೆಲ್ಲ ಚರ್ಚೆಯನ್ನು ಹುಟ್ಟು ಹಾಕತ್ತೋ ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಯಲ್ಲಿ ದೆವ್ವ: ಲಿಂಬೆಹಣ್ಣು ಇಟ್ಕೊಂಡಿದ್ದಾರಂತೆ ಪ್ರಶಾಂತ್ ಸಂಬರ್ಗಿ

    ಬಿಗ್ ಬಾಸ್ ಮನೆಯಲ್ಲಿ ದೆವ್ವ: ಲಿಂಬೆಹಣ್ಣು ಇಟ್ಕೊಂಡಿದ್ದಾರಂತೆ ಪ್ರಶಾಂತ್ ಸಂಬರ್ಗಿ

    ಬಿಗ್ ಬಾಸ್ (Bigg Boss Season 9 ) ಮನೆಯಲ್ಲಿ ಇದೀಗ ದೆವ್ವದ್ದೇ ಸದ್ದು. ಪ್ರಶಾಂತ್ ಸಂಬರ್ಗಿ, ರೂಪೇಶ್ ಶೆಟ್ಟಿ ಹಾಗೂ ಕಾವ್ಯಶ್ರೀ ಗೌಡ ಮಧ್ಯೆ ದೆವ್ವಗಳ ಬಗ್ಗೆ ರಸವತ್ತಾದ ಚರ್ಚೆ ನಡೆಯುತ್ತಿದೆ. ರೂಪೇಶ್ ಕೊಂಚ ಭಯಗೊಂಡಂತೆ ಕಂಡರೆ, ಇವರನ್ನು ಭಯಕ್ಕೆ ಬೀಳಿಸಿದ್ದಾರೆ ಕಾವ್ಯಶ್ರೀ ಗೌಡ. ಈ ಕಥೆಗೆ ಸ್ಕ್ರಿಪ್ಟ್ ಬರೆದು, ನಿರ್ದೇಶನ ಮಾಡಿದ್ದಾರೆ ಪ್ರಶಾಂತ್ ಸಂಬರ್ಗಿ. ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ದೆವ್ವಗಳ ಕಾರುಬಾರು ಶುರುವಾಗಿದೆ. ಪ್ರಶಾಂತ್ ಸಂಬರ್ಗಿ ತನ್ನ ಜೇಬಿನಲ್ಲಿ ಲಿಂಬೆಹಣ್ಣು ಇಟ್ಟುಕೊಂಡು ದೆವ್ವಗಳಿಂದ ರಕ್ಷಣೆ ಪಡೆದುಕೊಂಡಿದ್ದಾರಂತೆ.

    ರೂಪೇಶ್ ಶೆಟ್ಟಿ ಬಳಿ ಬರುವ ಕಾವ್ಯಶ್ರೀ ಗೌಡ (Kavyashree Gowda), ದೆವ್ವಗಳ ವಿಚಾರವನ್ನು ಪ್ರಸ್ತಾಪಿಸುತ್ತಾರೆ. ‘ಪ್ರಶಾಂತ್ ಸಂಬರ್ಗಿ ಸಖತ್ ಪುಕ್ಕಲು. ಯಾವುದೋ ಒಂದು ಶಬ್ದಕ್ಕೆ ಹೆದರಿಕೊಂಡಿದ್ದಾರೆ. ದೆವ್ವಗಳು ಇರುವುದು ಅನುಭವಕ್ಕೆ ಬಂದರೆ, ಮಂಚದ ಕೆಳಗೆ ಈರುಳ್ಳಿ ಇಟ್ಟುಕೊಳ್ಳಲು ಅವರ ತಾಯಿ ಹೇಳಿದ್ದಾರಂತೆ. ಹಾಗಾಗಿ ಅವರು ಈರುಳ್ಳಿ ಇಟ್ಟುಕೊಂಡಿದ್ದಾರೆ. ರಾತ್ರಿ ಒಬ್ಬರೇ ಬಾತ್ ರೂಮ್ ಗೆ ಹೋಗುವುದಕ್ಕೂ ಹೆದರಿಕೊಳ್ಳುತ್ತಾರೆ. ಸಡನ್ನಾಗಿ ಮಧ್ಯರಾತ್ರಿ ಎದ್ದು ಕೂರುತ್ತಾರೆ’ ಎಂದೆಲ್ಲ ರೂಪೇಶ್ ಬಳಿ ಕಥೆ ಕಟ್ಟಿದ್ದಾರೆ.

    ಅಷ್ಟಕ್ಕೂ ರೂಪೇಶ್ ಬಳಿಯೇ ಕಾವ್ಯಶ್ರೀ ಗೌಡ ಈ ಕಥೆ ಹೇಳುವುದಕ್ಕೆ ಕಾರಣವಿದೆ. ರೂಪೇಶ್ ಗೆ ಭಯ ಪಡಿಸುವುದಕ್ಕಾಗಿ ಪ್ರಶಾಂತ್ ಸಂಬರ್ಗಿ (Prashant Sambargi), ಕಾವ್ಯಶ್ರೀ ಗೌಡ ಅವರನ್ನು ಬಳಸಿಕೊಂಡಿದ್ದಾರೆ. ದೆವ್ವ (Devil), ಲಿಂಬೆಹಣ್ಣಿನ ಕಥೆಯನ್ನು ಕಾವ್ಯಶ್ರೀ ಗೌಡರಿಂದ ರೂಪೇಶ್ ಶೆಟ್ಟಿಗೆ ಹೇಳಿಸಿದ್ದಾರೆ. ಕೊಂಚ ಭಯದಲ್ಲಿಯೇ ಇರುವ ರೂಪೇಶ್, ತನ್ನ ಅನುಭವಕ್ಕೆ ಬಂದರೆ ಮಾತ್ರ ದೆವ್ವವನ್ನು ನಂಬುತ್ತೇನೆ ಎಂದು ಮಾತನಾಡಿದ್ದಾರೆ. ಅಲ್ಲದೇ, ತಮಗೆ ಇವರಿಬ್ಬರೂ ಫ್ರಾಂಕ್ ಮಾಡುತ್ತಿರಬಹುದಾ? ಎಂದು ಅನುಮಾನವನ್ನೂ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ

    ಪ್ರಶಾಂತ್ ಸಂಬರ್ಗಿ ಮತ್ತು ರೂಪೇಶ್ ಶೆಟ್ಟಿ (Rupesh Shetty) ಮತ್ತೆ ಮತ್ತೆ ದೆವ್ವಗಳ ವಿಚಾರವನ್ನು ಚರ್ಚೆ ಮಾಡುತ್ತಾ, ಮನೆಯ ಇತರ ಸದಸ್ಯರಿಗೂ ಭಯ ಹುಟ್ಟಿಸುತ್ತಿದ್ದಾರೆ. ಅದರಲ್ಲೂ ಪ್ರಶಾಂತ್ ಸಂಬರ್ಗಿ ಹೂಡಿರುವ ಈ ನಾಟಕಕ್ಕೆ ರೂಪೇಶ್ ಶೆಟ್ಟಿ ಬಕ್ರಾ ಆಗ್ತಾರಾ? ಅಥವಾ ಇವರು ತಮಾಷೆ ಮಾಡುತ್ತಿರುವ ವಿಚಾರವನ್ನು ಅರಿತುಕೊಳ್ಳುತ್ತಾರಾ ಎನ್ನುವುದೇ ಸದ್ಯಕ್ಕಿರುವ ಕುತೂಹಲ. ದೆವ್ವದ ಕಥೆ ಸದ್ಯಕ್ಕೆ ರೋಚಕತೆ ಹುಟ್ಟು ಹಾಕಿದೆ. ದೆವ್ವ ಯಾರನ್ನು ಎಷ್ಟು ಕಾಡುತ್ತದೆ ಎಂದು ಕಾದು ನೋಡೋಣ.

    Live Tv
    [brid partner=56869869 player=32851 video=960834 autoplay=true]

  • ರೂಪೇಶ್ ಶೆಟ್ಟಿ ಮತ್ತು ಸಾನ್ಯ ಐಯ್ಯರ್ ನಡುವೆ ಕಿರಿಕಿರಿ, ಬ್ರೇಕಪ್ ಸೂಚನೆ

    ರೂಪೇಶ್ ಶೆಟ್ಟಿ ಮತ್ತು ಸಾನ್ಯ ಐಯ್ಯರ್ ನಡುವೆ ಕಿರಿಕಿರಿ, ಬ್ರೇಕಪ್ ಸೂಚನೆ

    ಟ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ (Sanya Iyer) ಮನಸ್ತಾಪ ಬಿಗ್ ಬಾಸ್ (Bigg Boss Season 9) ನೋಡುಗರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಚಿಕ್ಕ ಚಿಕ್ಕ ವಿಷಯಕ್ಕೂ ರೂಪೇಶ್ ಮೇಲೆ ಸಾನ್ಯ ಕೋಪ ಮಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ರೂಪೇಶ್ ಸದಾ ತನ್ನ ಜೊತೆಯೇ ಇರಬೇಕು ಎಂದು ಸಾನ್ಯ ಬಯಸುತ್ತಿದ್ದಾಳೆ. ಈ ಕಿರಿಕಿರಿ ಕೇವಲ ನೋಡುಗರಿಗೆ ಮಾತ್ರವಲ್ಲ, ಸ್ವತಃ ರೂಪೇಶ್ ತಟ್ಟಿದೆ. ಹಾಗಾಗಿಯೇ ಸಾನ್ಯಾ ಮೇಲೆ ರೂಪೇಶ್ ಅಸಮಾಧಾನ ತೋಡಿಕೊಂಡಿದ್ದಾರೆ. ‘ದಯವಿಟ್ಟು ನನ್ನಿಂದ ದೂರ ಇರು’ ಎಂದು ಬಾಯ್ಬಿಟ್ಟೂ ಹೇಳಿದ್ದಾರೆ.

    ರೂಪೇಶ್ ಶೆಟ್ಟಿ (Rupesh Shetty) ಮತ್ತು ಸಾನ್ಯಾ ಐಯ್ಯರ್ ಇಬ್ಬರೂ ಬಿಗ್ ಬಾಸ್ ಮನೆಯ ‘ದಿ ಬೆಸ್ಟ್ ಜೋಡಿ’ ಎಂದೇ ಬಿಂಬಿಸಲಾಗಿತ್ತು. ಇಬ್ಬರ ನಡುವೆ ರಿಲೇಶನ್ ಶಿಪ್ ಇದೆ ಎಂದೂ ಹಲವರು ಮಾತನಾಡಿಕೊಂಡರು. ಅವರೂ ಹಾಗೆಯೇ ಇದ್ದರು. ಅವರ ಮಾತುಕತೆ, ಮನೆಯಲ್ಲಿ ನಡೆದುಕೊಳ್ಳುತ್ತಿದ್ದ ರೀತಿ ಥೇಟ್ ಪ್ರೇಮಿಗಳಂತೆಯೇ ಇರುತ್ತಿದ್ದವು.  ಸದಾ ಅಂಟಿಕೊಂಡೇ ಇರುತ್ತಿದ್ದ ಜೋಡಿಯನ್ನು ಅಗಲುವಂತೆ (Break Up) ಮಾಡಿದ್ದು ಕಿಚ್ಚ ಸುದೀಪ್. ಅಲ್ಲಿಂದ ರೂಪೇಶ್ ವರಸೆಯೇ ಬದಲಾಗಿದೆ.

    ಬಿಗ್ ಬಾಸ್ ಮನೆಯಲ್ಲಿ ಮೈಮರೆತು ಮಲಗಿದ್ದ ಈ ಜೋಡಿ ಕಂಡು ಸುದೀಪ್ ಕಿಡಿಕಾರಿದ್ದರು. ಬಿಗ್ ಬಾಸ್ ಮನೆ ಇರುವುದು ಅಂಥದ್ದಕ್ಕಲ್ಲ ಎಂದೂ ಎಚ್ಚರಿಸಿದ್ದರು. ಸುದೀಪ್ ಆಡಿದ ಮಾತಿಗೆ ರೂಪೇಶ್ ಕಣ್ಣೀರೂ ಕೂಡ ಹಾಕಿದ್ದರು. ಅಲ್ಲಿಂದ ರೂಪೇಶ್ ಬದಲಾಗುತ್ತಾ ಬರುತ್ತಿದ್ದಾರೆ. ಸಾಧ್ಯವಾದಷ್ಟು ಸಾನ್ಯರಿಂದ ದೂರವಿರಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಸಾನ್ಯಾ ಮಾತ್ರ ರೂಪೇಶ್ ನಿಂದ ದೂರ ಹೋಗುತ್ತಿಲ್ಲ. ರೂಪೇಶ್ ದೂರ ಹೋದಷ್ಟು ಸಾನ್ಯ ಮತ್ತಷ್ಟು ಹತ್ತಿರಕ್ಕೆ ಬರುತ್ತಿದ್ದಾಳೆ. ಇದು ರೂಪೇಶ್ ಅವರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುವಂತಾಗಿದೆ. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ

    ಊಟ ಮಾಡುತ್ತಿದ್ದ ರೂಪೇಶ್ ಬಳಿ ಬಂದು ತನ್ನನ್ನು ಬಿಟ್ಟು ಊಟ ಮಾಡಿದ್ದಕ್ಕೆ ಸಾನ್ಯ ಕೋಪಿಸಿಕೊಳ್ಳುತ್ತಾಳೆ. ಪದೇ ಪದೇ ಯಾಕೆ ಹೀಗೆ ನನ್ನನ್ನು ನೋಯಿಸ್ತೀಯಾ ಎಂದು ಕೇಳುತ್ತಾಳೆ. ಉದ್ದೇಶ ಪೂರ್ವಕವಾಗಿಯೇ ನೀನು ಹೀಗೆ ಮಾಡ್ತಿದ್ದೀಯಾ ಎಂದು ಆರೋಪಿಸುತ್ತಾಳೆ. ಅದರಲ್ಲೂ ತನ್ನನ್ನು ಬಿಟ್ಟು ರೂಪೇಶ್ ಊಟ ಮಾಡಿದ್ದು, ಸಾನ್ಯಾಗೆ ಅಪಾರ ನೋವು ತಂದಿದೆ. ಅದನ್ನು ಹೇಳಿಯೂ ಕೊಳ್ತಾಳೆ. ಆದರೆ, ರೂಪೇಶ್ ಮಾತ್ರ ಆಕೆಯ ಮಾತನ್ನು ಕೇಳಿಸಿಕೊಳ್ಳುತ್ತಿಲ್ಲ. ಸಾನ್ಯಳಿಂದ ದೂರ ಇರುವುದಕ್ಕಾಗಿಯೇ ಈ ರೀತಿ ಮಾಡುತ್ತಿದ್ದಾರೆ. ಆದರೆ, ಸಾನ್ಯಾಗೆ ಮಾತ್ರ ಇನ್ನೂ ಅದು ಅರ್ಥವಾಗುತ್ತಿಲ್ಲ. ಬಹುಶಃ ರೂಪೇಶ್ ದೂರ ಇರುವ ಮೂಲಕ ಸಾನ್ಯಾರಿಂದ ಸ್ನೇಹ ಕಡಿದುಕೊಳ್ಳುವ ಸೂಚನೆಯನ್ನಂತೂ ಕೊಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಳೆಯಲ್ಲಿ ಮೈಚಳಿ ಬಿಟ್ಟು ಕುಣಿದು ಸೈ ಅನಿಸಿಕೊಂಡ ಸಾನ್ಯ ಅಯ್ಯರ್: ನಾಚಿದ ಮಳೆಹನಿ

    ಮಳೆಯಲ್ಲಿ ಮೈಚಳಿ ಬಿಟ್ಟು ಕುಣಿದು ಸೈ ಅನಿಸಿಕೊಂಡ ಸಾನ್ಯ ಅಯ್ಯರ್: ನಾಚಿದ ಮಳೆಹನಿ

    ವಿವಾರ ಕಿಚ್ಚನ ಪಂಚಾಯತಿಯಲ್ಲಿ ಬೈಯಿಸಿಕೊಂಡು ಡಲ್ ಆಗಿದ್ದ ಸಾನ್ಯ ಅಯ್ಯರ್ (Sanya Iyer), ನಿನ್ನೆ ಬಿಂದಾಸ್ ಆಗಿ ಕುಣಿಯುವ ಮೂಲಕ ಆ ನೋವು ಮರೆತಿದ್ದಾರೆ. ಜೊತೆಗೆ ರೂಪೇಶ್ ಶೆಟ್ಟಿ (Rupesh Shetty) ಕೂಡ ಇವರಿಂದ ದೂರ ಆಗಲು ಪ್ರಯತ್ನಿಸುತ್ತಿದ್ದಾರೆ. ಸಾನ್ಯ ಜೊತೆ ರೂಪೇಶ್ ಈವರೆಗೂ ಸರಿಯಾಗಿ ಮಾತನಾಡುತ್ತಿಲ್ಲ. ಈ ಎಲ್ಲ ಸಂಕಟಗಳನ್ನು ಮರೆಯಲು ಮಳೆಗೆ ಮೈಯೊಡ್ಡಿದ್ದರು ಸಾನ್ಯ. ಒಂದು ಕಡೆ ಮಳೆ, ಮತ್ತೊಂದು ಕಡೆ ಸ್ವಾತಿ ಮುತ್ತಿನ ಮಳೆ ಹನಿಯೇ ಹಾಡು. ಈ ಎರಡಕ್ಕೂ ಸೆಡ್ಡು ಹೊಡೆಯುವಂತೆ ಹಳದಿ ಬಣ್ಣದ ಸೀರೆಯಲ್ಲಿ ಸಾನ್ಯ ಸಖತ್ತಾಗಿ ಕಾಣಿಸುತ್ತಿದ್ದರು.

    ಬೆಂಗಳೂರಿನಲ್ಲಿ ಸತತವಾಗಿ ಮಳೆ ಬರುತ್ತಿರುವುದರಿಂದ ಮಳೆಯಲ್ಲಿ (rain) ನೆನೆಯಬೇಕು, ಕುಣಿಯಬೇಕು (dance) ಎನ್ನುವುದು ದೊಡ್ಮನೆಯಲ್ಲಿ ಇರುವವರ ಆಸೆ ಆಗಿತ್ತು. ಮಳೆ ಬಂದಾಗೆಲ್ಲ ಈ ಬಯಕೆಯನ್ನು ಬಿಗ್ ಬಾಸ್ ಎದುರು ಇಡುತ್ತಿದ್ದರು ಮನೆಯ ಸದಸ್ಯರು. ಆದರೆ, ಅದಕ್ಕೆ ಈವರೆಗೂ ಅವಕಾಶ ಸಿಕ್ಕಿರಲಿಲ್ಲ. ನಿನ್ನೆಯೂ ಬೆಂಗಳೂರಿನಲ್ಲಿ ಜೋರಾಗಿ ಮಳೆಬಿತ್ತು. ಮತ್ತೆ ತಮ್ಮ ಆಸೆಯನ್ನು ಸದಸ್ಯರು ವ್ಯಕ್ತ ಪಡಿಸಿದರು. ಆಗ ಇದ್ದಕ್ಕಿದ್ದಂತೆಯೇ ‘ಸ್ವಾತಿ ಮುತ್ತಿನ ಮಳೆ ಹನಿಯೇ ಹಾಡು’ ಕೇಳಿ ಬಂತು. ಹಾಡು ಕೇಳುತ್ತಿದ್ದಂತೆಯೇ ಮನೆಯ ಬಹುತೇಕ ಸದಸ್ಯರು ಮಳೆಗೆ ಮೈಯೊಡ್ಡಿದರು. ಇದನ್ನೂ ಓದಿ:ಕೊಟ್ಟ ಮಾತಿನಂತೆ ದಾವಣಗೆರೆ ಬೆಣ್ಣೆದೋಸೆ ಸವಿದ ಸ್ಯಾಂಡಲ್ ವುಡ್ ಕ್ವೀನ್

    ಹಳದಿ ಸೀರೆ, (yellow saree) ಕುತ್ತಿಗೆ ಮುಚ್ಚುವಷ್ಟು ಆಭರಣ ಧರಿಸಿದ್ದ ಸಾನ್ಯ, ಅದ್ಯಾವುದನ್ನೂ ಲೆಕ್ಕಿಸದೇ ಸ್ವಿಮಿಂಗ್ ಫುಲ್ ನತ್ತ ಕುಣಿಯುತ್ತಲೇ ಹೆಜ್ಜೆ ಹಾಕಿದರು. ಜೊತೆಗೆ ರೂಪೇಶ್ ಶೆಟ್ಟಿ ಸೇರಿದಂತೆ ಅನೇಕ ಸಹಸ್ಪರ್ಧಿಗಳು ಬಂದಿದ್ದರಿಂದ, ಅವರೊಂದಿಗೆ ಕೈ ಹಿಡಿದು ಕುಣಿದರು. ಮಳೆಯಲ್ಲಿ ನೆನೆದರು. ಹೆಚ್ಚೆಚ್ಚು ರೂಪೇಶ್ ಶೆಟ್ಟಿ ಜೊತೆಯೇ ಸೊಂಟ ಬಳಕಿಸುವ ಪ್ರಯತ್ನಿಸಿದರು. ಹಳದಿ ಸೀರೆ, ಮಳೆಯಲ್ಲಿ ತೊಯ್ದ ನಾರಿ ಎಲ್ಲವೂ ಸೂಪರ್ ಆಗಿದ್ದರಿಂದ, ಆ ವಿಡಿಯೋ ಕೂಡ ವೈರಲ್ ಆಗಿದೆ.

    ರವಿವಾರ ಕಿಚ್ಚನ ಪಂಚಾಯತಿ ಮುಗಿದ ಮೇಲೆ ಸಾನ್ಯ ಮತ್ತು ರೂಪೇಶ್ ತುಂಬಾ ಬೇಸರದಲ್ಲಿದ್ದರು. ಒಂದು ಹಂತದಲ್ಲಿ ರೂಪೇಶ್ ಕಣ್ಣೀರಿಟ್ಟರು. ಇವರನ್ನು ಸಮಾಧಾನಿಸಲು ಸಾನ್ಯ ಬಂದರೂ, ತಮ್ಮತ್ತ ಸಾನ್ಯರನ್ನು ಬಿಟ್ಟುಕೊಳ್ಳಲಿಲ್ಲ ರೂಪೇಶ್. ಸರಿಯಾಗಿ ಊಟ ಮಾಡದೇ, ನಿದ್ದೆ ಮಾಡದೇ ಎರಡು ದಿನಗಳಿಂದ ರೂಪೇಶ್ ಡಲ್ ಹೊಡೆದಿದ್ದರು. ಮಳೆ ಮತ್ತು ತನ್ನಿಷ್ಟದ ಗೆಳತಿ ಜೊತೆ ಮಳೆಯಲ್ಲಿ ಡಾನ್ಸ್ ಮಾಡಿ ಮತ್ತೆ ಫ್ರೆಶ್ ಅಪ್ ಆಗಿದ್ದಾರೆ. ಸಾನ್ಯ ಮತ್ತು ರೂಪೇಶ್ ಅವರನ್ನು ಮಳೆ ಮತ್ತೆ ಒಂದು ಮಾಡಿದೆ. ಮುಂದಿನ ದಿನಗಳಲ್ಲಿ ಅವರು ಹೇಗಿರುತ್ತಾರೋ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಸಾನ್ಯ ಅಯ್ಯರ್ ಜೊತೆ ರೂಪೇಶ್ ಶೆಟ್ಟಿ ಬ್ರೇಕ್ ಅಪ್ : ಪ್ರಣಯ ಹಕ್ಕಿಗಳು ದೂರ ದೂರ

    ಸಾನ್ಯ ಅಯ್ಯರ್ ಜೊತೆ ರೂಪೇಶ್ ಶೆಟ್ಟಿ ಬ್ರೇಕ್ ಅಪ್ : ಪ್ರಣಯ ಹಕ್ಕಿಗಳು ದೂರ ದೂರ

    ಬಿಗ್ ಬಾಸ್ (Bigg Boss Season 9) ಮನೆಯ ಪ್ರಣಯ ಪಕ್ಷಿಗಳಲ್ಲಿ ಮುಂಚೂಣಿಯಲ್ಲಿದ್ದವರು ರೂಪೇಶ್ ಶೆಟ್ಟಿ (Rupesh Shetty) ಹಾಗೂ ಸಾನ್ಯ ಅಯ್ಯರ್. ಈ ಜೋಡಿಯ ಬಗ್ಗೆ ಪ್ರೇಕ್ಷಕರು ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೂ ಈ ಜೋಡಿ ಹೀಗೆಯೇ ನಗ್ತಾ ಇರಲಿ ಎಂದು ಹಾರೈಸಿದ್ದರು. ಹಾಗಂತ ರೂಪೇಶ್ ಶೆಟ್ಟಿ ಆಗಲಿ, ಸಾನ್ಯ ಅಯ್ಯರ್ ಆಗಲಿ ನೋಡುಗರಿಗೆ ಮುಜುಗರ ಪಡುವಂತೆ ಯಾವತ್ತೂ ನಡೆದುಕೊಂಡವರಲ್ಲ. ಆದರೆ, ಮೊನ್ನೆ ಹಾಗಾಗಲಿಲ್ಲ. ಅವರ ಉದ್ದೇಶ ಅದಾಗದೇ ಇರಬಹುದು. ಅದೇ ಇರಬಹುದು ಎನ್ನುವ ಕಾರಣಕ್ಕಾಗಿ ಸುದೀಪ್ ಸಿಡಿದೆದ್ದರು.

    ಬಿಗ್ ಬಾಸ್ ಮನೆಯ ಕ್ಯಾಪ್ಟೆನ್ಸಿ ರೂಮ್ ನಲ್ಲಿ ರೂಪೇಶ್ ಶೆಟ್ಟಿ ಮೈಮೇಲೆ ಸಾನ್ಯ ಅಯ್ಯರ್  (Sanya Iyer) ಮಲಗಿಕೊಂಡಿದ್ದರು. ರೂಪೇಶ್ ಶೆಟ್ಟಿ ತಮ್ಮ ತೊಳಿನಿಂದ ಸಾನ್ಯ ಅಯ್ಯರ್ ಅನ್ನು ಬಿಗಿದಪ್ಪಿದ್ದರು. ಇವರ ಎದುರು ಆರ್ಯವರ್ಧನ್ (Aryavardhan Guruji) ಮಲಗಿದ್ದರು. ಮೂವರು ಮಲಗಿಕೊಂಡೇ ಹರಟೆ ಹೊಡೆಯುತ್ತಿದ್ದರು. ತಾವು ಮಲಗಿದ ರೀತಿ ಸರಿ ಇಲ್ಲ ಅಂತ ರೂಪೇಶ್ ಗಾಗಲಿ, ಸಾನ್ಯ ಅಯ್ಯರ್ ಗಾಗಲೇ ಅನಿಸದೇ ಇರಬಹುದು. ಆದರೆ, ಅದನ್ನು ಬಿಗ್ ಬಾಸ್ ನೋಟಿಸ್ ಮಾಡಿದ್ದಾರೆ. ಆ ರೀತಿ ವರ್ತಿಸೋದು ತಪ್ಪು ಎಂದು ಸುದೀಪ್ ಮೂಲಕ ಹೇಳಿಸಿದ್ದಾರೆ. ಇದನ್ನೂ ಓದಿ:ಕೊಟ್ಟ ಮಾತಿನಂತೆ ದಾವಣಗೆರೆ ಬೆಣ್ಣೆದೋಸೆ ಸವಿದ ಸ್ಯಾಂಡಲ್ ವುಡ್ ಕ್ವೀನ್

    ರೂಪೇಶ್ ಮತ್ತು ಸಾನ್ಯ ಆ ರೀತಿ ಮಾಡಿದ್ದಕ್ಕೆ  ಗರಂ ಆದ ಸುದೀಪ್ (Kichcha Sudeep) ‘ಕ್ಯಾಪ್ಟೆನ್ಸಿ ರೂಮ್ ನಲ್ಲಾಗಿದ್ದು ನಾಟ್ ಆಕ್ಸೆಪ್ಟಬಲ್. ಇದರಿಂದ ಕಂಟೆಂಟ್ ಸಿಗುತ್ತದೆ ಅಂದುಕೊಂಡಿದ್ದರೆ, ದಿಸ್ ಈಸ್ ನಾಟ್ ಎ ಶೋ ಫಾರ್ ದಟ್. ಈ ಮನೆ ಅದಕ್ಕಲ್ಲ’ ಎಂದು ಕಿಚ್ಚ ಖಡಕ್ಕಾಗಿಯೇ ವಾರ್ನಿಂಗ್ ಕೊಟ್ಟರು. ಸುದೀಪ್ ಅವರ ಮಾತಿನಿಂದ ಶಾಕ್ ಗೆ ಒಳಗಾದ ಈ ಜೋಡಿಗೆ ನಂತರ ಸಮಾಧಾನ ಮಾಡ್ತಾ, ‘ಯಾವುದೂ ಏನೂ ಹೊರಗೆ ಡ್ಯಾಮೇಜ್ ಆಗಿಲ್ಲ. ನೆಕ್ಸ್ಟ್ ಆಗೋದನ್ನ ತಡೆಯೋ ಪ್ರಯತ್ನ. ಫೋಕಸ್ ಮಿಸ್ ಮಾಡಬೇಡಿ’ ಎಂದು ಎಚ್ಚರಿಕೆ ನೀಡಿದರು.

    ಈ ಎಚ್ಚರಿಕೆಯನ್ನು ರೂಪೇಶ್ ಶೆಟ್ಟಿ ತುಂಬಾ ಸೀರಿಯಸ್ ಆಗಿ ತಗೆದುಕೊಂಡಿದ್ದಾರೆ. ಈ ಘಟನೆಯಿಂದ ನೊಂದುಕೊಂಡಿದ್ದ ರೂಪೇಶ್ ಮೊದಲು ಕಣ್ಣೀರು ಹಾಕಿದರು. ಇದೀಗ ಸಾನ್ಯರಿಂದ ದೂರ ಉಳಿಯುತ್ತಿದ್ದಾರೆ. ರೂಪೇಶ್ ಜೊತೆ ಊಟ ಮಾಡಲು ಸಾನ್ಯ ಕಾಯುತ್ತಿದ್ದರೂ, ಹೋಗಲಿಲ್ಲ. ಅಲ್ಲದೇ, ಸಾನ್ಯ ಜೊತೆ ಸರಿಯಾಗಿಯೂ ಅವರು ಮಾತನಾಡುತ್ತಿಲ್ಲ. ಪ್ರತಿ ನಿತ್ಯ ಸಾನ್ಯ ಜೊತೆನೇ ಕೂತು ಊಟ ಮಾಡುತ್ತಿದ್ದ ರೂಪೇಶ್, ಕಿಚ್ಚನ ಎಚ್ಚರಿಕೆಯ ಮಾತುಗಳ ನಂತರ ಸಾನ್ಯ ಜೊತೆ ಅಂತರವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ‘ಈ ರೀತಿ ನೀನು ಮಾಡಬೇಡ’ ಎಂದು ಸಾನ್ಯ ಹೇಳಿದರೂ, ರೂಪೇಶ್ ಈವರೆಗೂ ಬದಲಾಗಿಲ್ಲ.

    ರೂಪೇಶ್ ಈ ನಡೆಯಿಂದ ಸಾನ್ಯ ಕೂಡ ಅಪ್ ಸೆಟ್ ಆಗಿದ್ದಾರೆ. ನೇರವಾಗಿಯೇ ರೂಪೇಶ್ ಬಳಿ ಬಂದು ‘ಮೊದಲಿನ ಹಾಗೆ ನೀನು ಇಲ್ಲ. ತುಂಬಾ ಚೇಂಜ್ ಆಗಿದ್ದೀಯಾ. ನಿನಗೆ ಅಪ್ ಸೆಟ್ ಆಗಿದೆ ಅಂತಾನೇ ನಿನ್ನ ಜೊತೆ ನಾನು ಇರಬೇಕು ಅಂತ ಬರ್ತಿರೋದು. ಆದರೆ, ನೀನು ಅವೈಡ್ ಮಾಡ್ತಿದ್ದೀಯಾ’ ಎಂದು ಹಲವು ಪ್ರಶ್ನೆಗಳನ್ನು ಬೇಸರದಿಂದಲೇ ಕೇಳಿದರು ಸಾನ್ಯ. ‘ನನ್ನ ಬಗ್ಗೆ ಸದ್ಯ ನೀನೇ ಏನೇ ಅಂದುಕೊಂಡಿದ್ದರೂ, ನಿನ್ನ ಮೇಲಿನ ಕಾಳಜಿ ಬದಲಾಗಲ್ಲ’ ಎನ್ನುವ ಮೂಲಕ ರೂಪೇಶ್ ಆಕೆಗೆ ಸಮಾಧಾನ ಮಾಡಿದ್ದಾರೆ. ಆದರೆ, ಈ ಪ್ರೀತಿ ಹಾಗೆಯೇ ಉಳಿಯತ್ತಾ? ಅಥವಾ ಸುದೀಪ್ ಅವರ ಮಾತಿನ ಕಾರಣದಿಂದಾಗಿ ಬ್ರೇಕ್ ಅಪ್ ಆಗತ್ತಾ ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]