Tag: Running Race

  • ಬೈಕ್ ಹಿಂದೆ ಎಮ್ಮೆ ಓಡುವ ಸ್ಪರ್ಧೆ – ಗೆದ್ದವರಿಗೆ ನಗದು, ಬಕೆಟ್ ಬಹುಮಾನ

    ಬೈಕ್ ಹಿಂದೆ ಎಮ್ಮೆ ಓಡುವ ಸ್ಪರ್ಧೆ – ಗೆದ್ದವರಿಗೆ ನಗದು, ಬಕೆಟ್ ಬಹುಮಾನ

    ಧಾರವಾಡ: ಮನರಂಜನೆಗಾಗಿ ಟಗರಿನ ಕಾಳಗ, ಚಕ್ಕಡಿ ಓಡಿಸುವ ಸ್ಪರ್ಧೆ, ಹೀಗೆ ಅನೇಕ ಸ್ಪರ್ಧೆಗಳನ್ನು ಅಲ್ಲಲ್ಲಿ ಆಯೋಜನೆ ಮಾಡುವುದು ಹಳ್ಳಿಗಳಲ್ಲಿ ಸಹಜ. ಇದೀಗ ಧಾರವಾಡದಲ್ಲಿ (Dharwada) ವಿಭಿನ್ನವಾದ ಸ್ಪರ್ಧೆಯೊಂದನ್ನು ಆಯೋಜನೆ ಮಾಡಲಾಗಿದೆ.

    ಧಾರವಾಡ ಎಮ್ಮೆ (Buffalo) ಬಹಳ ಫೇಮಸ್. ಧಾರವಾಡ ಗೌಳಿಗಲ್ಲಿಯಲ್ಲಿ ಎಮ್ಮೆ ಸಾಕುವವರು ದೀಪಾವಳಿ ಹಬ್ಬದ ನಂತರ ಎಮ್ಮೆ ಓಟದ (Running Race) ಸ್ಪರ್ಧೆ ಆಯೋಜನೆ ಮಾಡ್ತಾರೆ. ಪ್ರತಿ ವರ್ಷದಂತೆ ಈ ವರ್ಷ ಕೂಡಾ ಅವರು ಧಾರವಾಡ ಹೊರವಲಯದ ಹನುಮಂತನಗರದ ಹತ್ತಿರ ಈ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದರು. ಅನೇಕರು ತಮ್ಮ ಎಮ್ಮೆಗಳ ಸಮೇತ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನಸೆಳೆದರು. ಎಮ್ಮೆಗಳ ಮಾಲೀಕರು ಬೈಕ್ ತೆಗೆದುಕೊಂಡು ಮುಂದೆ ಹೋಗಿ ತಮ್ಮ ಎಮ್ಮೆ ಬೆನ್ನಟ್ಟಿಸಿಕೊಂಡು ಬರುವ ಮೂಲಕ ಸ್ಪರ್ಧೆಯ ಕಾವು ಹೆಚ್ಚಿತು. ಇದನ್ನೂ ಓದಿ: ನಮ್ಮ ಇಸ್ಲಾಂ ಧರ್ಮದಲ್ಲಿ ಪ್ರತಿಮೆಗೆ ಅವಕಾಶ ಇಲ್ಲ – ಟಿಪ್ಪು ಪ್ರತಿಮೆ ಸ್ಥಾಪನೆಗೆ ಇಬ್ರಾಹಿಂ ವಿರೋಧ

    ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ 20 ಸಾವಿರ, ದ್ವಿತೀಯ ಸ್ಥಾನ 15 ಸಾವಿರ ಹಾಗೂ ತೃತೀಯ ಸ್ಥಾನ ಪಡೆದವರಿಗೆ 12,500 ರೂಪಾಯಿ ಬಹುಮಾನ ನೀಡಲಾಯಿತು. ಅಲ್ಲದೇ ಸಮಾಧನಾಕರ ಬಹುಮಾನವಾಗಿ ಸ್ಟೀಲ್ ಪಾತ್ರೆ, ಬಕೆಟ್ ಸೇರಿ ಹಲವು ವಸ್ತುಗಳನ್ನು ನೀಡಲಾಯಿತು. ಇದರಲ್ಲಿ ಧಾರವಾಡದ ಎಮ್ಮೆ ಅಷ್ಟೇ ಅಲ್ಲ, ಗದಗ, ಹಾವೇರಿ, ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಯ ಎಮ್ಮೆ ಕೂಡಾ ಭಾಗವಹಿಸಿದ್ದವು. ಮುಂದೆ ಬೈಕ್ ಹೋಗುತ್ತಿದ್ದರೆ ಎಮ್ಮೆ ಹಿಂಬದಿಯಿಂದ ಓಡುವ ಮೂಲಕ ಕೇವಲ ಒಂದು ನಿಮಿಷದಲ್ಲಿ ನೂರು ಮೀಟರ್ ಓಡಬೇಕಾಯಿತು. ಅದರಲ್ಲಿ ಯಾವ ಎಮ್ಮೆ ಕಡಿಮೆ ಸಮಯದಲ್ಲಿ ಓಡುತ್ತೆ, ಅದಕ್ಕೆ ಬಹುಮಾನ ಕೊಡಲಾಯಿತು. ಇದನ್ನೂ ಓದಿ: ಹೆರಿಗೆಗೆಂದು ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ವ್ಯಕ್ತಿಯಿಂದ ಮಹಿಳಾ ಸಿಬ್ಬಂದಿಗೆ ಕಿರುಕುಳ

    Live Tv
    [brid partner=56869869 player=32851 video=960834 autoplay=true]

  • ಪತಿಯನ್ನು ಹೆಗಲ ಮೇಲೆ ಹೊತ್ತು ಓಡಿದ ಮಹಿಳೆಯರು

    ಪತಿಯನ್ನು ಹೆಗಲ ಮೇಲೆ ಹೊತ್ತು ಓಡಿದ ಮಹಿಳೆಯರು

    ಕಠ್ಮಂಡು: ಗಂಡದಿರು ಪತ್ನಿಯನ್ನು ಹೆಗಲ ಮೇಲೆ ಹೊತ್ತು ಓಡುವುದು ಸಾಮಾನ್ಯ. ಆದರೆ ನೇಪಾಳದಲ್ಲಿ ಪತ್ನಿಯರು ಗಂಡದಿರನ್ನು ಹೆಗಲ ಮೇಲೆ ಹೊತ್ತುಕೊಂಡು ಓಡುವ ಸ್ಪರ್ಧೆಯೊಂದರಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ.

    ಮಹಿಳಾ ದಿನಾಚರಣೆಯ ಅಂಗವಾಗಿ ದೇವ್ಘಾಟ್ ಗ್ರಾಮವೊಂದರ ಸ್ಥಳೀಯ ಶಾಲೆಯ ಆಡಳಿತ ಮಂಡಳಿ ಆಯೋಜಿಸಿದ್ದ 100 ಮೀ. ಓಡುವ ರೇಸ್ ಸ್ಪರ್ಧೆಯಲ್ಲಿ ವಿವಾಹಿತ ಮಹಿಳೆಯರು ತಮ್ಮ ಪತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಓಡಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿವಿಧ ವಯೋಮಾನದ 16 ಜೋಡಿಗಳು ಭಾಗವಹಿಸಿದ್ದರು.

    ಈ ಸುದ್ದಿ ಹಬ್ಬುತ್ತಿದಂತೆಯೇ ರಾಜಧಾನಿ ಕಠ್ಮಂಡುವಿನಿಂದ 150 ಕಿಲೋ ಮೀಟರ್ ದೂರದಲ್ಲಿರುವ ಶಾಲೆಯ ಮೈದಾನಕ್ಕೆ ಪಂದ್ಯ ವೀಕ್ಷಿಸಲು ಹಳ್ಳಿಯ ಸುತ್ತಮುತ್ತಲಿನ ಜನರು ಗುಂಪು ಗುಂಪಾಗಿ ಸೇರಿದ್ದರು. ಅಲ್ಲದೆ ಪಂದ್ಯದಲ್ಲಿ ಭಾಗವಹಿಸಿದ ಪ್ರತಿ ದಂಪತಿಗೂ ಪ್ರಮಾಣಪತ್ರ ನೀಡಿ ಶ್ಲಾಘಿಸಲಾಯಿತು.

    ಪಂದ್ಯದಲ್ಲಿ ಭಾಗವಹಿಸಿದ್ದ ಮಹಿಳೆಯೊಬ್ಬರು, ಈ ಸ್ಪರ್ಧೆಯಲ್ಲಿ ಭಾಗವಹಿಸಲು ನಾನು ತುಂಬಾ ಧೈರ್ಯ ಮಾಡಿ ಬಂದಿದ್ದೆ. ನಾನು ಸ್ಪರ್ಧೆಯಲ್ಲಿ ಉತ್ತಮ ಸ್ಥಾನ ಪಡೆಯದೇ ಇದ್ದರೂ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಮತ್ತು ಗೌರವ ನೀಡುತ್ತಿರುವುದಕ್ಕೆ ನನಗೆ ಬಹಳ ಸಂತಸವಾಗುತ್ತಿದೆ ಎಂದು ಹೇಳಿದ್ದಾರೆ.