Tag: runaway

  • ವಿಂಡೀಸ್ ದೈತ್ಯ ಆಟಗಾರ ಕಾರ್ನ್‌ವಾಲ್ ಫನ್ನಿ ರನೌಟ್ – ವಿಡಿಯೋ

    ವಿಂಡೀಸ್ ದೈತ್ಯ ಆಟಗಾರ ಕಾರ್ನ್‌ವಾಲ್ ಫನ್ನಿ ರನೌಟ್ – ವಿಡಿಯೋ

    ಸೇಂಟ್ ಲೂಸಿಯಾ: ವಿಶ್ವದ ಕ್ರಿಕೆಟ್‍ನ ದೈತ್ಯ ಆಟಗಾರ ಎಂದೇ ಕರೆಯಿಸಿಕೊಂಡಿರುವ ವೆಸ್ಟ್ ಇಂಡೀಸ್ ತಂಡ ರಖೀಮ್ ಕಾರ್ನ್‌ ವಾಲ್ ಫನ್ನಿ ರೀತಿಯಲ್ಲಿ ರನೌಟ್ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಇತ್ತೀಗಷ್ಟೇ ಭಾರತ ವಿರುದ್ಧ ನಡೆದ ಸರಣಿಯಲ್ಲಿ ಆಡುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದ ಕಾರ್ನ್‌ ವಾಲ್ 6.6 ಅಡಿ ಎತ್ತರ, 140 ಕೆಜಿ ತೂಕ ಹೊಂದಿದ್ದಾರೆ. ಪರಿಣಾಮ ವಿಶ್ವ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ತೂಕ ಹೊಂದಿರುವ ಅಂತರಾಷ್ಟ್ರೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಆಸೀಸ್ ಆಟಗಾರ ವಾರ್ವಿಕ್ ಆರ್ಮ್ ಸ್ಟ್ರಾಂಗ್ 133 ಕೆಜಿ ತೂಕದೊಂದಿಗೆ ದೈತ್ಯ ಕ್ರಿಕೆಟಿಗ ಎಂಬ ದಾಖಲೆಯನ್ನು ಹೊಂದಿದ್ದರು.

    ದೈತ್ಯ ದೇಹವನ್ನು ಹೊಂದಿರುವ ಕಾರ್ನ್‌ವಾಲ್ ರನ್ ಗಳಿಸುವುದು ಕಷ್ಟಸಾಧ್ಯ ಎಂಬ ವಿಮರ್ಶೆಗಳು ಅವರ ಪಾದಾರ್ಪಣೆ ಪಂದ್ಯದ ವೇಳೆ ಕೇಳಿ ಬಂದಿದ್ದವು. ಸದ್ಯ ಕೆರಿಬಿಯನ್ ಲೀಗ್ ಆಡುತ್ತಿರುವ ಕಾರ್ನ್‍ವಾಲ್ ಗಯಾನಾ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ರನೌಟ್ ಆಗಿದ್ದಾರೆ. ರನ್ ಕದಿಯುವ ವೇಳೆ ಆಟಗಾರರು ಸಾಮಾನ್ಯವಾಗಿ ತಮ್ಮ ಬ್ಯಾಟನ್ನು ಕ್ರಿಸ್‍ನಲ್ಲಿಟ್ಟು ಬಳಿಕ ಮುಂದೆ ಓಡುತ್ತಾರೆ. ಆದರೆ ಕಾರ್ನ್‌ ವಾಲ್ ಮಾತ್ರ ದೈತ್ಯ ದೇಹ ಹೊಂದಿರುವ ಕಾರಣ ಬ್ಯಾಟ್ ನೆಲಕ್ಕೆ ತಾಗಿಸಲು ತಡ ಮಾಡಿದ ಹಿನ್ನೆಲೆಯಲ್ಲಿ ರನೌಟಾಗಿದ್ದಾರೆ. ಪಂದ್ಯದಲ್ಲಿ 12 ಎಸೆತಗಳಲ್ಲಿ 6 ರನ್ ಗಳಿಸಿದ ಕಾರ್ನ್‌ ವಾಲ್ ಸಿಂಗಲ್ ರನ್ ಕದಿಯುವ ವೇಳೆ ರನೌಟ್ ಆಗಿ ಬೆಲೆ ತೆತ್ತರು.

    ಅಂದಹಾಗೇ ವೆಸ್ಟ್ ಇಂಡೀಸ್ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ 260ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ. ಆಫ್ ಸ್ಪಿನ್ ಬೌಲಿಂಗ್ ನೊಂದಿಗೆ ಬ್ಯಾಟಿಂಗ್‍ನಲ್ಲೂ ತಂಡಕ್ಕೆ ನೆರವಾಗುವ ಸಾಮರ್ಥ್ಯವನ್ನು ಕಾರ್ನ್‌ ವಾಲ್ ಹೊಂದಿದ್ದಾರೆ. 55 ಪ್ರಥಮ ದರ್ಜೆ ಪಂದ್ಯಗಳಲ್ಲಿ 2,224 ರನ್ ಗಳಿಸಿದ್ದಾರೆ.

  • ರನ್‍ವೇಯಿಂದ ಸ್ಕಿಡ್ ಆಗಿ ಸಮುದ್ರದ ದಂಡೆ ಬದಿಯಲ್ಲಿ ನಿಂತ ವಿಮಾನ!

    ರನ್‍ವೇಯಿಂದ ಸ್ಕಿಡ್ ಆಗಿ ಸಮುದ್ರದ ದಂಡೆ ಬದಿಯಲ್ಲಿ ನಿಂತ ವಿಮಾನ!

    ಇಸ್ತಾಂಬುಲ್: ವಿಮಾನವೊಂದು ರನ್ ವೇಯಲ್ಲಿ ಸ್ಕಿಡ್ ಆಗಿ ಕಪ್ಪು ಸಮುದ್ರ ದಂಡೆಯ ಬಳಿ ಬಿದ್ದಿರುವ ಘಟನೆ ಉತ್ತರ ಟರ್ಕಿಯ ಟ್ರಬ್‍ಜಾನ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.

    ಪೆಗಾಸಸ್ ಕಂಪೆನಿಯ ಜೆಟ್ ವಿಮಾನ ಲ್ಯಾಂಡ್ ಆಗಿ ರನ್ ವೇಯಲ್ಲಿ ಮುಂದಕ್ಕೆ ಚಲಿಸುತ್ತಿದ್ದಾಗ ಸ್ಕಿಡ್ ಆಗಿದೆ. ಸ್ಕಿಡ್ ಆದ ವಿಮಾನ ತಿರುಗಿ ಕಪ್ಪು ಸಮುದ್ರದ ಬಳಿ ಚಲಿಸಿ ನಿಂತುಕೊಂಡಿದೆ.

    ಸಿಬ್ಬಂದಿ ಪ್ರಯಾಣಿಕರು ಸೇರಿ ಒಟ್ಟು 168 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಪ್ಪು ಸಮುದ್ರದ ಕಲ ಅಡಿ ದೂರದಲ್ಲಿ ವಿಮಾನ ನಿಂತುಕೊಂಡಿದೆ. ಒಂದು ವೇಳೆ ವಿಮಾನ ಸಮುದ್ರಕ್ಕೆ ಉರುಳಿ ಬಿದ್ದಿದ್ದಾರೆ ಭಾರೀ ಸಾವು ನೋವು ಸಂಭವಿಸುವ ಸಾಧ್ಯತೆ ಇತ್ತು.

    ಯಾವ ಕಾರಣಕ್ಕೆ ವಿಮಾನ ಸ್ಕಿಡ್ ಆಗಿದೆ ಎನ್ನುವುದಕ್ಕೆ ತನಿಖೆ ನಡೆಸಲಾಗುವುದು ಎಂದು ಪೆಗಾಸಸ್ ಮಾಧ್ಯಮಗಳಿಗೆ ತಿಳಿಸಿದೆ. ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ದುರಂತ

    https://youtu.be/5ghagEwvS1g