Tag: run

  • 2018ರಲ್ಲಿ 12 ಅಂತರಾಷ್ಟ್ರೀಯ ಕ್ರಿಕೆಟಿಗರನ್ನು ಹಿಂದಿಕ್ಕಿದ ಕೊಹ್ಲಿ!

    2018ರಲ್ಲಿ 12 ಅಂತರಾಷ್ಟ್ರೀಯ ಕ್ರಿಕೆಟಿಗರನ್ನು ಹಿಂದಿಕ್ಕಿದ ಕೊಹ್ಲಿ!

    ಮುಂಬೈ: ವಿಶ್ವ ಕ್ರಿಕೆಟ್‍ನಲ್ಲಿ ತಮ್ಮ ಬ್ಯಾಟಿಂಗ್ ವೈಭವವನ್ನು ಮುಂದುವರಿಸಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸತತ 3ನೇ ವರ್ಷ ವಿಶ್ವ ಕ್ರಿಕೆಟಿನಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.

    2017 ರಲ್ಲಿ 2,818 ರನ್ ಸಿಡಿಸಿದ್ದ ಕೊಹ್ಲಿ ಈ ಬಾರಿ 2,735 ರನ್ ಸಿಡಿಸಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ ಹಾಗೂ ಟೆಸ್ಟ್ ಎರಡು ಮಾದರಿಗಳಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಅಲ್ಲದೇ ವಿಶ್ವ ಕ್ರಿಕೆಟಿನಲ್ಲಿ ಹೆಚ್ಚು ರನ್ ಗಳಿಸಿದ 24ನೇ ಆಟಗಾರರಾಗಿದ್ದು, ಈ ಮೂಲಕ ಕಳೆದ ಬಾರಿಗಿಂತ 12 ಮಂದಿ ಆಟಗಾರರನ್ನ ಹಿಂದಿಕ್ಕಿ ಈ ಹೆಗ್ಗಳಿಕೆ ಪಡೆದಿದ್ದಾರೆ.

    ಆಸ್ಟ್ರೇಲಿಯಾದ ಮಾರ್ಕ್ ವಾ 16,529 ರನ್, ಮೈಕಲ್ ಕ್ಲಾಕ್ 17,236 ರನ್, ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ 17,236 ರನ್, ಟೀಂ ಇಂಡಿಯಾದ ವೀರೇಂದ್ರ ಸೆಹ್ವಾಗ್ 17,253 ರನ್, ಪಾಕಿಸ್ತಾನದ ಮೊಹಮ್ಮದ್ ಯೂಸುಫ್ 17,300 ರನ್, ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ 17,671 ರನ್, ಆಸೀಸ್ ತಂಡದ ಅಲನ್ ಬಾರ್ಡರ್ 17,698 ರನ್, ಪಾಕ್‍ನ ಯೂನಿಸ್ ಖಾನ್ 17,790 ರನ್, ಹಶೀಮ್ ಆಮ್ಲ 18,066* ರನ್, ಸ್ಟೀವ್ ವಾ 18,496 ರನ್, ಕ್ರಿಸ್ ಗೇಲ್ 18,548* ರನ್ ಹಾಗೂ 18,575 ರನ್ ಗಳಿಸಿರುವ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ.

    2018ರಲ್ಲಿ 47 ಇನ್ನಿಂಗ್ಸ್ ಗಳಲ್ಲಿ 11 ಶತಕ, 9 ಅರ್ಧ ಶತಕಗಳನ್ನು ಸಿಡಿಸಿದ್ದು, 68.37 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಕೊಹ್ಲಿ ಒಟ್ಟಾರೆ 18,989 ರನ್ ಗಳಿಸಿದ್ದು, 19 ಸಾವಿರ ರನ್ ಪೂರ್ಣಗೊಳಿಸಲು 11 ರನ್ ಮಾತ್ರಬಾಕಿ ಇದೆ. ಐಸಿಸಿ ಟೆಸ್ಟ್ ಮತ್ತು ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಕೊಹ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

    ಕೊಹ್ಲಿ ಬ್ಯಾಟಿಂಗ್ ಅಂಕಿ ಅಂಶಗಳು ಇಂತಿದೆ:
    ಟೆಸ್ಟ್: 76 ಪಂದ್ಯ, 6,590 ರನ್, 54.01 ಸರಾಸರಿ.
    ಏಕದಿನ: 216 ಪಂದ್ಯ, 10,230 ರನ್ 59.83 ಸರಾಸರಿ.
    ಟಿ20: 65 ಪಂದ್ಯ, 2,167 ರನ್, 49.25 ಸರಾಸರಿ.
    ಒಟ್ಟು: 398 ಇನ್ನಿಂಗ್ಸ್, 18,989 ರನ್, 56.34 ಸರಾಸರಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂತಿಮ ಎಸೆತದಲ್ಲಿ ಜಯದ ನಗೆ ಬೀರಿದ ಟೀಂ ಇಂಡಿಯಾ – ವಿಂಡೀಸ್ ಕ್ಲೀನ್ ಸ್ವೀಪ್

    ಅಂತಿಮ ಎಸೆತದಲ್ಲಿ ಜಯದ ನಗೆ ಬೀರಿದ ಟೀಂ ಇಂಡಿಯಾ – ವಿಂಡೀಸ್ ಕ್ಲೀನ್ ಸ್ವೀಪ್

    ಚೆನ್ನೈ: ಇಲ್ಲಿನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಜಯಗಳಿಸಿದ್ದು, ಈ ಮೂಲಕ ರೋಹಿತ್ ಶರ್ಮಾ ನಾಯಕತ್ವದ ತಂಡ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.

    ಟೀಂ ಇಂಡಿಯಾ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಶಿಖರ್ ಧವನ್, ರಿಷಭ್ ಪಂತ್ ಅರ್ಧ ಶತಕ ಮಿಂಚಿದರು.  ಕೇವಲ 36 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ ಧವನ್ ಅಂತಿಮವಾಗಿ 62 ಎಸೆತಗಳಲ್ಲಿ 92 ರನ್ ಗಳಿಸಿದರು. ಧವನ್‍ಗೆ ಸಾಥ್ ನೀಡಿದ ಯುವ ಆಟಗಾರ ರಿಷಭ್ ಪಂತ್ ಕೇವಲ 30 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ಆಕರ್ಷಕ 3 ಸಿಕ್ಸರ್, 5 ಬೌಂಡರಿ ಸಿಡಿಸಿದ ಪಂತ್ 58 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

    ವೆಸ್ಟ್ ಇಂಡೀಸ್ ನೀಡಿದ 182 ರನ್ ಸವಾಲಿನ ಮೊತ್ತ ಬೆನ್ನತ್ತಿದ್ದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ನಾಯಕ ರೋಹಿತ್ ಶರ್ಮಾ (4 ರನ್) ಹಾಗೂ ಕೆಎಲ್ ರಾಹುಲ್ (17 ರನ್) ಗಳಿಸಿ ಪೆವಿಲಿಯನ್ ಸೇರಿದರು. ಈ ಹಂತದಲ್ಲಿ ಟೀಂ ಇಂಡಿಯಾ 5.2 ಓವರ್ ಗಳಲ್ಲಿ 45 ರನ್ ಗಳಿಸಿತ್ತು. ಈ ವೇಳೆ ತಂಡಕ್ಕೆ ಆಸರೆಯಾದ ಧವನ್, ರಿಷಭ್ ಪಂತ್ ಜೋಡಿ ಭರ್ಜರಿ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾದರು. ಈ ಇಬ್ಬರ ಜೋಡಿ 3ನೇ ವಿಕೆಟ್‍ಗೆ ಬರೋಬ್ಬರಿ 130 ರನ್ ಜೊತೆಯಾಟ ನೀಡಿತು. ಅಂತಿಮ 9 ಎಸೆತಗಳಲ್ಲಿ ಭಾರತ ಗೆಲುವಿಗೆ 7 ರನ್ ಗಳಿಸಬೇಕಿತ್ತು. 19ನೇ ಓವರ್ ನಲ್ಲಿ ಮನೀಷ್ ಪಾಂಡೇ 2 ಗಳಿಸಿದರು. ಅಂತಿಮ ಓವರ್ ನಲ್ಲಿ 5 ರನ್ ಗಳಿಸ ಬೇಕಿದ್ದ ವೇಳೆ ಧವನ್ 3 ರನ್ ಗಳಿಸಿ ಕ್ಯಾಚ್ ನೀಡಿ ನಿರ್ಗಮಿಸಿದರು. ಅಂತಿಮವಾಗಿ ಮನೀಷ್ ಪಾಂಡೇ ಪಂದ್ಯದ ಕೊನೆಯ ಎಸೆತದಲ್ಲಿ 1 ರನ್ ಗಳಿಸಿ ತಂಡವನ್ನು ಗೆಲುವಿನ ಗುರಿ ತಲುಪಿಸಿದರು. ಈ ವೇಳೆ ವೆಸ್ಟ್ ಇಂಡೀಸ್ ತಂಡದ ಆಟಗಾರರು ಮಾಡಿದ ಮಿಸ್ ಫೀಲ್ಡ್  ನಿಂದ  ಭಾರತ ಗೆಲುವಿನ ಸಿಹಿ ಪಡೆಯಿತು.

    ರಿಷಭ್ ಭಾರತ ಪರ ಟಿ20 ಮಾದರಿಯಲ್ಲಿ ಅರ್ಧ ಶತಕ ಸಿಡಿಸಿ 2ನೇ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದರು. 21 ವರ್ಷ 38 ದಿನ ವಯಸ್ಸಿನ ರಿಷಭ್ ಪಂದ್ಯದಲ್ಲಿ ತಮ್ಮ ಮೊದಲ ಟಿ20 ಅರ್ಧ ಶತಕ ಗಳಿಸಿದರು. ಭಾರತದ ಪರ ರೋಹಿತ್ ಶರ್ಮಾ 20 ವರ್ಷ, 143 ದಿನಗಳಲ್ಲಿ ಟಿ20 ಮಾದರಿಯಲ್ಲಿ ಅರ್ಧ ಶತಕ ಸಿಡಿಸಿದ್ದರು.

    ಇದಕ್ಕು ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡ ಅನುಭವಿ ಆಟಗಾರ ಡಾರೆನ್ ಬ್ರಾವೊ ಮತ್ತು ನಿಕೋಲಸ್ ಪೂರನ್ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳ ಮುಕ್ತಾಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿತ್ತು. ವಿಂಡೀಸ್ ಪರ 25 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ನೆರವಿನಿಂದ ಪೂರನ್ 53 ರನ್ ಗಳಿಸಿ ಅಜೇಯರಾಗುಳಿದರೆ, ಬ್ರಾವೊ 37 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ನೆರವಿನಿಂದ 42 ರನ್ ಗಳಿಸಿದರು. ಉಳಿದಂತೆ ಶಾಯ್ ಹೋಪ್ 24, ಹಿಟ್ಮೆಯರ್ 26 ರನ್, ದಿನೇಶ್ ರಾಮ್‍ದಿನ್ 15 ರನ್ ಗಳಿಸಿದರು. ಟೀಂ ಇಂಡಿಯಾ ಪರ ಯಜುವೇಂದ್ರ ಚಹಾಲ್ 2, ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ವಿಂಡೀಸ್ ಪಂದ್ಯದಲ್ಲಿ ದಾಖಲೆ ಬರೆಯಲಿದ್ದರಾ ರೋಹಿತ್ ಶರ್ಮಾ!

    ವಿಂಡೀಸ್ ಪಂದ್ಯದಲ್ಲಿ ದಾಖಲೆ ಬರೆಯಲಿದ್ದರಾ ರೋಹಿತ್ ಶರ್ಮಾ!

    ಚೆನ್ನೈ: ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ವಿಂಡೀಸ್ ವಿರುದ್ಧ ಅಂತಿಮ ಟಿ20 ಪಂದ್ಯದಲ್ಲಿ ರೋಹಿತ್ ಮಹತ್ವದ ದಾಖಲೆ ಬರೆಯುವ ಸನೀಹದಲ್ಲಿದ್ದಾರೆ.

    ರೋಹಿತ್ ಈಗಾಗಲೇ ಟಿ20 ಮಾದರಿಯಲ್ಲಿ ಭಾರತದ ಪರ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದು, ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದರು. ಭಾನುವಾರ ನಡೆಯುಲಿರುವ ಪಂದ್ಯದಲ್ಲಿ ರೋಹಿತ್ ಶರ್ಮಾ 67 ರನ್ ಗಳಿಸಿದರೆ ಟಿ20 ಮಾದರಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನ ಮಾಡಲಿದ್ದಾರೆ. ಸದ್ಯ ರೋಹಿತ್ ಶರ್ಮಾ 2,203 ರನ್ ಗಳಿಸಿದ್ದು, ನ್ಯೂಜಿಲೆಂಡ್ ತಂಡದ ಮಾರ್ಟಿನ್ ಗುಪ್ಟಿಲ್ ರನ್ನು ಹಿಂದಿಕ್ಕಲು ಕೇವಲ 67 ರನ್ ಗಳಿಸಬೇಕಿದೆ. ರೋಹಿತ್ ಈ ಸಾಧನೆ ಮಾಡಿದರೆ ಕ್ರಿಕೆಟ್‍ನ ಮೂರು ಮಾದರಿಯಲ್ಲಿ ಭಾರತೀಯರೆ ಅತಿಹೆಚ್ಚು ರನ್ ಗಳಿಸಿದ ಆಟಗಾರರು ಎನಿಸಿಕೊಳ್ಳಲಿದ್ದಾರೆ. ಸಚಿನ್ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‍ನಲ್ಲಿ ಅತಿಹೆಚ್ಚು ರನ್ ಗಳಿಸಿದ್ದಾರೆ.

    ಉಳಿದಂತೆ ಟಿ20 ಮಾದರಿಯಲ್ಲಿ ಪಾಕಿಸ್ತಾನದ ಶೋಯಿಬ್ ಮಲಿಕ್ 108 ಪಂದ್ಯಗಳಿಂದ 2,190 ರನ್ ಗಳಿಸಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ನ್ಯೂಜಿಲೆಂಡ್ ಬ್ರೆಂಡನ್ ಮೆಕಲಮ್ 71 ಪಂದ್ಯಗಳಿಂದ 2,140 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ 62 ಪಂದ್ಯಗಳಿಂದ 2,102 ರನ್ ಸಿಡಿಸಿದ್ದಾರೆ.

    ಭಾರತದ ಪರ ಸುರೇಶ್ ರೈನಾ 1,605 ರನ್, ಧೋನಿ 1.487 ರನ್, ಯುವರಾಜ್ ಸಿಂಗ್ 1,177 ರನ್ ಗಳಿಸಿದ್ದಾರೆ. ರೋಹಿತ್ ಟಿ20 ಮಾದರಿಯಲ್ಲಿ 4 ಶತಕಗಳನ್ನು ಸಿಡಿಸಿದ ಸಾಧನೆಯನ್ನು ಮಾಡಿದ್ದು, ವಿಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ರೋಹಿತ್, ಧವನ್ ಜೋಡಿ 123 ಸಿಡಿಸಿದ್ದು, ಇದುವರೆಗೂ 39 ಇನ್ನಿಂಗ್ಸ್ ಗಳಿಂದ ಈ ಜೋಡಿ 1,154 ರನ್ ಸಿಡಿಸಿದೆ. ಈ ಪಟ್ಟಿಯಲ್ಲಿ ಆಸೀಸ್ ಆಟಗಾರರಾದ ಡೇವಿಡ್ ವಾರ್ನರ್ , ಶೇನ್ ವ್ಯಾಟ್ಸನ್ ಜೋಡಿ 37 ಇನ್ನಿಂಗ್ಸ್ ಗಳಿಂದ 1,154 ರನ್ ಗಳಿಸಿ ಮುಂಚೂಣಿಯಲ್ಲಿದೆ.

    ವಿಂಡೀಸ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳ ಟಿ20 ಟೂರ್ನಿಯಲ್ಲಿ 2 ಪಂದ್ಯಗಳನ್ನು ಗೆದ್ದು ಸರಣಿ ಕೈವಶ ಮಾಡಿಕೊಂಡಿರುವ ಟೀಂ ಸರಣಿ ಇಂಡಿಯಾ ಕ್ಲೀನ್ ಸ್ವಿಪ್ ಮಾಡುವತ್ತ ಗಮನ ಹರಿಸಿದೆ. ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಟಿ20 ಪಂದ್ಯ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಇಂದು ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಒಂದೇ ಓವರ್‌ನಲ್ಲಿ 43 ರನ್ – ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳಿಂದ ವಿಶ್ವದಾಖಲೆ!

    ಒಂದೇ ಓವರ್‌ನಲ್ಲಿ 43 ರನ್ – ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳಿಂದ ವಿಶ್ವದಾಖಲೆ!

    ಹ್ಯಾಮಿಲ್ಟನ್: ನ್ಯೂಜಿಲೆಂಡ್ ನ ಇಬ್ಬರು ಬ್ಯಾಟ್ಸ್ ಮನ್ ಗಳು ಲಿಸ್ಟ್ ಎ ಏಕದಿನ ಪಂದ್ಯದ ಓವರ್ ಒಂದರಲ್ಲಿ 43 ರನ್ ಚಚ್ಚುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

    ಕೀವಿಸ್ ನಾರ್ಥರ್ನ್ ಡಿಸ್ಟ್ರಿಕ್ಟ್ಸ್ ತಂಡದ ಬ್ಯಾಟ್ಸ್ ಮನ್‍ಗಳಾದ ಜೋಯಿ ಕಾರ್ಟರ್ ಮತ್ತು ಬ್ರೆಟ್ ಹ್ಯಾಂಪ್ಟನ್ ಬುಧವಾರ ನಡೆದ ಫೋರ್ಡ್ ಟ್ರೋಫಿ ಪಂದ್ಯದಲ್ಲಿ ಎದುರಾಳಿ ತಂಡವಾದ ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ವಿರುದ್ಧ ಈ ವಿಶೇಷ ಸಾಧನೆ ಮಾಡಿದ್ದಾರೆ.

    ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ತಂಡದ ಮಧ್ಯಮ ವೇಗಿ ವಿಲ್ಲೆಮ್ ಲುಡಿಕ್ ಓವರ್ ನಲ್ಲಿ ಈ ಸಾಧನೆ ಮಾಡಿದ್ದು, ಓವರ್ ಮೊದಲ ಐದು ಬಾಲ್ ಎದುರಿಸಿದ ಲುಡಿಕ್ ಕ್ರಮವಾಗಿ 4, 6 (ನೋಬಾಲ್), 6 (ನೋಬಾಲ್), 6, 1 ರನ್ ಬಾರಿಸಿದರು. ಬಳಿಕ ಸ್ಟ್ರೈಕ್ ಪಡೆದ ಕಾರ್ಟರ್ ಅಂತಿಮ ಮೂರು ಎಸೆತಗಳನ್ನು ಸಿಕ್ಸರ್ ಸಿಡಿಸಿ ಮಿಂಚಿದರು. ಪಂದ್ಯದಲ್ಲಿ 10 ಓವರ್ ಬೌಲ್ ಮಾಡಿದ ಲುಡಿಕ್ ಮೊದಲ 9 ಓವರ್ ಗಳಲ್ಲಿ ಕೇವಲ 42 ರನ್ ಮಾತ್ರ ನೀಡಿದ್ದರು. ಆದರೆ ಅಂತಿಮ 10ನೇ ಓವರ್ ಮುಕ್ತಾಯದ ವೇಳೆ 85 ರನ್ ನೀಡಿದ್ದರು.

    ಪಂದ್ಯದಲ್ಲಿ ಕಾರ್ಟರ್ 5 ರನ್ ಗಳಿಂದ ಶತಕ ವಂಚಿತರಾದರೆ, ಲುಡಿಕ್ 102 ರನ್ ಸಿಡಿಸಿ ಶತಕ ಪೂರೈಸಿದರು. ಈ ಇಬ್ಬರ ಜೋಡಿ 6ನೇ ವಿಕೆಟ್‍ಗೆ 178 ರನ್ ಜೊತೆಯಾಟ ನೀಡಿತು. ಇಬ್ಬರ ಭರ್ಜರಿ ಬ್ಯಾಟಿಂಗ್ ನಿಂದಾಗಿ ನಾರ್ಥರ್ನ್ ಡಿಸ್ಟ್ರಿಕ್ಟ್ಸ್ ತಂಡ ನಿಗದಿತ 50 ಓವರ್ ಗಳಲ್ಲಿ 317 ರನ್ ಗಳಿಸಿತು. ಬಳಿಕ ಬೃಹತ್ ಮೊತ್ತ ಬೆನ್ನತ್ತಿದ್ದ ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ತಂಡ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 288 ರನ್ ಗಳಿಸಲಷ್ಟೇ ಶಕ್ತವಾಯಿತು.

    ಈ ಹಿಂದೆ 2013ರ ಲಿಸ್ಟ್ ಎ ಢಾಕಾದ ಪ್ರೀಮಿಯರ್ ಲೀಗ್ ನಲ್ಲಿ ಬಾಂಗ್ಲಾದೇಶದ ಅಲಾವುದ್ದೀನ್ ಬಾಬು 39 ರನ್ ಬಿಟ್ಟುಕೊಟ್ಟಿದ್ದರು. ಈ ಪಂದ್ಯದಲ್ಲಿ ಜಿಂಬಾಂಬ್ವೆ ತಂಡದ ಎಲ್ಟನ್ ಚಿಗುಂಬರ ಈ ಸಾಧನೆ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಯಕ್ಕಾಗಿ ಓವರ್‌ನ 6 ಎಸೆತಗಳಲ್ಲೂ ಡೈವ್ ಮಾಡಲು ನಾನು ಸಿದ್ಧ – ವಿರಾಟ್

    ಜಯಕ್ಕಾಗಿ ಓವರ್‌ನ 6 ಎಸೆತಗಳಲ್ಲೂ ಡೈವ್ ಮಾಡಲು ನಾನು ಸಿದ್ಧ – ವಿರಾಟ್

    ಮುಂಬೈ: ದೇಶಕ್ಕಾಗಿ ಆಟದಲ್ಲಿ ಪ್ರತಿನಿಧಿಸುವುದು ಹೆಮ್ಮೆಯ ವಿಚಾರವಾಗಿದ್ದು, ತಂಡಕ್ಕಾಗಿ ಓವರ್‌ನ 6 ಎಸೆತಗಳಲ್ಲಿಯೂ ಡೈವ್ ಮಾಡಲು ನಾನು ಸಿದ್ಧನಿದ್ದೇನೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

    ಅಂತರಾಷ್ಟ್ರೀಯ ಪಂದ್ಯಗಳಲ್ಲಿ ದೇಶದ ಪರ ಆಡುವ ಸಂದರ್ಭದಲ್ಲಿ ಪ್ರತಿಯೊಂದು ರನ್‍ಗಾಗಿ ನಾವು ಪೂರ್ಣ ಪ್ರಮಾಣದ ಪರಿಶ್ರಮ ಹಾಕಬೇಕಿದೆ. ಏಕೆಂದರೆ ತಂಡಕ್ಕಾಗಿ ಓವರ್ ಒಂದರ 6 ಎಸೆತಗಳಲ್ಲಿ ಡೈವ್ ಮಾಡಲು ನಾನು ಸಿದ್ಧ. ಇದು ಆಟಗಾರನಾಗಿ ನನ್ನ ಕರ್ತವ್ಯ ಎಂದು ಬಿಸಿಸಿಐ ನೀಡಿರುವ ಸಂದರ್ಶನದಲ್ಲಿ ಕೊಹ್ಲಿ ಹೇಳಿದ್ದಾರೆ.

    ತಂಡದ ಪರ ರನ್ ಗಳಿಸುವುದು ನಾನು ಬೇರೊಬ್ಬರ ಪರವಾಗಿ ಆಡಿದಂತೆ ಅಲ್ಲ ಅಥವಾ ನಾನು ಸಂಪೂರ್ಣ ಆಟಕ್ಕೆ ಬದ್ಧರಾಗಿದ್ದೇನೆ ಎಂದು ತೋರಿಸುವುದು ಅಲ್ಲ. ಕೇವಲ ತಂಡಕ್ಕಾಗಿ ಒಂದು ರನ್ ಅಧಿಕವಾಗಿ ಗಳಿಸುವುದು ಮಾತ್ರ ಇದರ ಉದ್ದೇಶವಾಗಿರುತ್ತದೆ. ಇದುವೇ ನನ್ನ ಉದ್ದೇಶವೂ ಆಗಿತ್ತು ಎಂದು ಸ್ಪಷ್ಟಪಡಿಸಿದರು. ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಡೈವ್ ಮಾಡಿ 150 ರನ್ ಪೂರ್ಣಗೊಳಿಸಿದ್ದರು.

    ಇದೇ ವೇಳೆ ತಮ್ಮ ದಾಖಲೆ ಕುರಿತು ಪ್ರತಿಕ್ರಿಯೆ ನೀಡಿದ ಕೊಹ್ಲಿ, ಅವು ಜೀವನದಲ್ಲಿ ಅಲ್ಪ ಭಾಗವಷ್ಟೇ. ಆದರೆ ಅವುಗಳನ್ನು ನೀವು ಎಲ್ಲಿಂದ ಆರಂಭಿಸಿದ್ದೀರಿ ಎನ್ನುವುದನ್ನು ಹೇಳುತ್ತದೆ. 10 ವರ್ಷಗಳಿಂದ ಆಡುತ್ತಿರುವುದು ವಿಶೇಷ ಎನಿಸುತ್ತಿದೆ. ನಾನು ನನ್ನ ಆಟವನ್ನು ಪ್ರೀತಿಸುತ್ತೇನೆ ಎಂದರು.

    ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‍ನಲ್ಲಿ ವೇಗವಾಗಿ 10 ಸಾವಿರ ರನ್ ಪೂರೈಸಿದ ಆಟಗಾರ ಎಂಬ ದಾಖಲೆ ಬರೆದಿದ್ದರು. ಅಲ್ಲದೇ ಪಂದ್ಯದಲ್ಲಿ 157 ರನ್ ಸಿಡಿಸಿ ಹಲವು ಸಾಧನೆಗಳನ್ನು ಮಾಡಿದ್ದರು. ಇದನ್ನು ಓದಿ : ಒಂದೇ ಪಂದ್ಯದಲ್ಲಿ ಕೊಹ್ಲಿ 3 ವಿಶೇಷ ಸಾಧನೆ ನಿರ್ಮಾಣ!

    ವೆಸ್ಟ್ ಇಂಡೀಸ್ ವಿರುದ್ಧ 5 ಪಂದಗಳ ಏಕದಿನ ಟೂರ್ನಿಯಲ್ಲಿ ಮುಂದಿನ 3 ಪಂದ್ಯಗಳಿಗೆ ಬಿಸಿಸಿಐ ತಂಡವನ್ನು ಪ್ರಕಟಿಸಿದ್ದು, ಭುವನೇಶ್ವರ್ ಕುಮಾರ್, ಬುಮ್ರಾ ತಂಡಕ್ಕೆ ಆಯ್ಕೆ ಆಗಿದ್ದಾರೆ. ಉಳಿದಂತೆ ಮೊಹಮ್ಮದ್ ಶಮಿ ಅವರನ್ನು ತಂಡದಿಂದ ಕೈ ಬಿಡಲಾಗಿದೆ. 3ನೇ ಏಕದಿನ ಪಂದ್ಯ ಶನಿವಾರ ಪುಣೆಯಲ್ಲಿ ನಡೆಯಲಿದೆ.

  • ಒಂದೇ ಪಂದ್ಯದಲ್ಲಿ ಕೊಹ್ಲಿ 3 ವಿಶೇಷ ಸಾಧನೆ ನಿರ್ಮಾಣ!

    ಒಂದೇ ಪಂದ್ಯದಲ್ಲಿ ಕೊಹ್ಲಿ 3 ವಿಶೇಷ ಸಾಧನೆ ನಿರ್ಮಾಣ!

    ವಿಶಾಖಪಟ್ಟಣ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಲ್ಲಿ ನಡೆಸುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದು, ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್‍ನಲ್ಲಿ ವೇಗವಾಗಿ 10 ಸಾವಿರ ರನ್ ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. 212 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಕೊಹ್ಲಿ 205 ಇನ್ನಿಂಗ್ಸ್ ಗಳಲ್ಲಿ 92.51 ಸ್ಟ್ರೈಕ್ ರೇಟ್‍ನಲ್ಲಿ 10 ಸಾವಿರ ರನ್ ಪೂರೈಸಿದ್ದಾರೆ.

    ವಿಶ್ವ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಪೂರೈಸಿದ 13ನೇ ಆಟಗಾರ, ಭಾರತದ ಪರ 5ನೇ ಆಟಗಾರ ಕೊಹ್ಲಿ ಆಗಿದ್ದಾರೆ. ಈ ಹಿಂದೆ 2001ರ ಮಾರ್ಚ್ ನಲ್ಲಿ ಸಚಿನ್ ತೆಂಡೂಲ್ಕರ್ 266 ಪಂದ್ಯ, 259 ಇನ್ನಿಂಗ್ಸ್ ಗಳಲ್ಲಿ 10 ಸಾವಿರ ರನ್ ಪೂರೈಸಿದ್ದರು. ಅಲ್ಲದೇ ಗಂಗೂಲಿ 263 ಇನ್ನಿಂಗ್ಸ್, 272 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ಉಳಿದಂತೆ ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್, 272 ಪಂದ್ಯ, 266 ಇನ್ನಿಂಗ್ಸ್, ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಜ್ಯಾಕ್ ಕಾಲಿಸ್ 286 ಪಂದ್ಯ, 272 ಇನ್ನಿಂಗ್ಸ್, ಧೋನಿ 320 ಪಂದ್ಯ, 273 ಇನ್ನಿಂಗ್ಸ್, ಬ್ರಿಯಾನ್ ಲಾರಾ 287 ಪಂದ್ಯ, 278 ಇನ್ನಿಂಗ್ಸ್ ಗಳಲ್ಲಿ 10 ಸಾವಿರ ರನ್ ಸಿಡಿಸಿದ ಸಾಧನೆ ಮಾಡಿದ್ದರು.

    ಇದೇ ಪಂದ್ಯದಲ್ಲಿ ಮತ್ತೊಂದು ಸಾಧನೆಯನ್ನು ಕೊಹ್ಲಿ ನಿರ್ಮಿಸಿದ್ದಾರೆ. ಕೊಹ್ಲಿ ತವರು ನೆಲದಲ್ಲಿ ಕೇವಲ 78 ಇನ್ನಿಂಗ್ಸ್ ಗಳಲ್ಲಿ ಏಕದಿನ ಕ್ರಿಕೆಟ್‍ನಲ್ಲಿ 4 ಸಾವಿರ ರನ್ ಪೂರೈಸಿದ್ದಾರೆ. ಈ ಹಿಂದೆ ಎಬಿಡಿ ವಿಲಿಯರ್ಸ್ ದಕ್ಷಿಣ ಆಫ್ರಿಕಾದಲ್ಲಿ 91 ಇನ್ನಿಂಗ್ಸ್ ಗಳಲ್ಲಿ 4 ಸಾವಿರ ಪೂರೈಸಿದ್ದರು. ಕೊಹ್ಲಿ ಅವರ ಹೆಸರಿನಲ್ಲಿ ಈಗಾಗಲೇ 36 ಶತಕ, 48 ಅರ್ಧ ಶತಕಗಳು ದಾಖಲಾಗಿದೆ.

    ವಿಶಾಖಪಟ್ಟಣ ಕ್ರೀಡಾಂಗಣದಲ್ಲಿ ಕೊಹ್ಲಿ ಇದುವರೆಗೂ 4 ಏಕದಿನ ಪಂದ್ಯಗಳನ್ನು ಆಡಿದ್ದು 118, 117, 99, 65 ರನ್ ಹಾಗೂ ಟೆಸ್ಟ್ ಪಂದ್ಯದಲ್ಲಿ 167 ರನ್, 81 ರನ್ ಸಿಡಿಸಿ ರನ್ ಹೊಳೆ ಹರಿಸಿದ್ದರು. ಇಂದಿನ ಪಂದ್ಯದಲ್ಲೂ ತಮ್ಮ ಬ್ಯಾಟಿಂಗ್ ಬಲವನ್ನು ಮುಂದುವರಿಸಿರುವ ಕೊಹ್ಲಿ 56 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ಅರ್ಧ ಶತಕದ ಬಳಿಕ ತಮ್ಮ ಆಕ್ರಮಣಕಾರಿ ಮುಂದುವರಿಸಿದ ಕೊಹ್ಲಿ 129 ಎಸೆತಗಳಲ್ಲಿ 13 ಬೌಂಡರಿ, 4 ಸಿಕ್ಸರ್ ನೆರವಿನಿಂದ 157 ರನ್ ಸಿಡಿಸಿ ಔಟಾಗದೆ ಉಳಿದರು. 50 ಓವರ್ ಗಳಲ್ಲಿ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 321 ರನ್ ಪೂರೈಸಿದೆ. ಪಂದ್ಯದಲ್ಲಿ ಕೊಹ್ಲಿಗೆ ಸಾಥ್ ನೀಡಿದ ರಾಯುಡು 80 ಎಸೆತಗಳಲ್ಲಿ 73 ರನ್ ಸಿಡಿಸಿ ಔಟಾದರು.

    ಉಳಿದಂತೆ ಕೊಹ್ಲಿ ವಿಂಡೀಸ್ ವಿರುದ್ಧ ದ ಭಾರತದ ಪರ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಕೊಹ್ಲಿ ವಿಂಡೀಸ್ ವಿರುದ್ಧದ 29 ನೇ ಇನ್ನಿಂಗ್ಸ್ ನಲ್ಲಿ 1,574 ರನ್ ಗಳಿಸಿದ್ದಾರೆ. ಈ ಮೂಲಕ 39 ಇನ್ನಿಂಗ್ಸ್ ಗಳಲ್ಲಿ ಸಚಿನ್ ತೆಂಡೂಲ್ಕರ್ 1,573 ರನ್ ಗಳಿಸಿದ್ದರು. ಅಲ್ಲದೇ ವಿಂಡೀಸ್ ವಿರುದ್ಧ ಅತೀ ಹೆಚ್ಚು ಶತಕಗಳನ್ನು ಸಿಡಿಸಿದ ಆಟಗಾರರಾಗಿದ್ದು, 6 ಶತಕಗಳನ್ನು ಸಿಡಿಸಿದ್ದಾರೆ. ಈ ಹಿಂದೆ ಗಿಬ್ಸ್, ಎಬಿಡಿ ವಿಲಿಯರ್ಸ್, ಅಮ್ಲ 5 ಶತಕಗಳನ್ನು ಸಿಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಡೇಜಾ ಸ್ಕೋರ್ ಗಿಂತ ಭಾರತದಲ್ಲಿ ಪೆಟ್ರೋಲ್ ದರವೇ ಹೆಚ್ಚು: ರಮ್ಯಾ

    ಜಡೇಜಾ ಸ್ಕೋರ್ ಗಿಂತ ಭಾರತದಲ್ಲಿ ಪೆಟ್ರೋಲ್ ದರವೇ ಹೆಚ್ಚು: ರಮ್ಯಾ

    ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದ ಆಟಗಾರ ಇಂಗ್ಲೆಂಡ್ ವಿರುದ್ಧ ಗಳಿಸಿದ ರನ್‍ಗಿಂತ ಭಾರತದಲ್ಲಿ ಪೆಟ್ರೋಲ್ ದರವೇ ದುಬಾರಿ ಎನ್ನುವ ಮೂಲಕ ಮಾಜಿ ಸಂಸದೆ ರಮ್ಯಾ ಟ್ವಿಟ್ಟರ್ ನಲ್ಲಿ ಕೇಂದ್ರ ಸರ್ಕಾರದ ಕಾಲೆಳೆದಿದ್ದಾರೆ.

    ರಮ್ಯಾರವರು ತಮ್ಮ ಟ್ವಿಟ್ಟರ್ ಮೂಲಕ, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ಪರ ವೈಯಕ್ತಿಕವಾಗಿ ರವೀಂದ್ರ ಜಡೇಜಾರವರು 86 ರನ್ ಗಳಿಸಿದ್ದಾರೆ. ಆದರೆ ಅವರು ಗಳಿಸಿದ್ದು ಭಾರತದಲ್ಲಿ 2ನೇ ಅತ್ಯಧಿಕ ರನ್ ಆಗಿದೆ. ಮೊದಲನೇಯ ಅತ್ಯಧಿಕ ರನ್ ಭಾರತದ ಪೆಟ್ರೋಲ್ ದರವೇ 87 ಆಗಿದೆ ಎಂದು ಬರೆದುಕೊಂಡಿದ್ದರು.

    ಭಾನುವಾರ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲನೇ ಇನ್ನಿಂಗ್ಸ್ ಕ್ರಿಕೆಟ್ ಪಂದ್ಯದಲ್ಲಿ ಭಾರತದ ಪರ ರವೀಂದ್ರ ಜಡೇಜಾರವರು 86 ರನ್ ಗಳಿಸುವ ಮೂಲಕ ಭಾರತ ಪರ ವೈಯಕ್ತಿಕವಾಗಿ ಅತಿ ಹೆಚ್ಚು ರನ್‍ಗಳಿಸಿದ್ದರು. ರವೀಂದ್ರ ಜಡೇಜಾ ಅಜೇಯಾ 86 ರನ್ (156 ಎಸೆತ, 11 ಬೌಂಡರಿ, 1 ಸಿಕ್ಸರ್) ನೆರವಿನ ಹೊರತಾಗಿಯೂ ಟೀಂ ಇಂಡಿಯಾ 292 ರನ್‍ಗಳಿಗೆ ಅಲೌಟ್ ಆಗಿ 40 ರನ್ ಗಳ ಅಲ್ಪ ಹಿನ್ನಡೆ ಪಡೆಯಿತು. ಈ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 10 ವಿಕೆಟ್ ನಷ್ಟಕ್ಕೆ 332 ರನ್‍ಗಳಿಸಿತ್ತು.

    ದಿನದಿಂದ ದಿನಕ್ಕೆ ತೈಲ ಬೆಲೆಗಳು ಗಗನಕ್ಕೇರುತ್ತಿದ್ದರೂ, ಕೇಂದ್ರ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ, ಹೀಗಾಗಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಕಾಂಗ್ರೆಸ್ ಸೋಮವಾರ ಭಾರತ್ ಬಂದ್ ಗೆ ಕರೆ ನೀಡಿತ್ತು. ಕರ್ನಾಟಕದಲ್ಲಿಯೂ ಬಂದ್‍ಗೆ ಸಂಪೂರ್ಣ ಸಹಕಾರ ದೊರೆತಿದ್ದು, ಬಹುತೇಕ ಸಾರಿಗೆ ವ್ಯವಸ್ಥೆ ಸ್ತಭ್ದವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗಿದ್ದು, ಅಂಗಡಿ-ಮುಗ್ಗಟ್ಟುಗಳು ಮುಚ್ಚಿವೆ. ಬೇರೆ ಊರಿನಿಂದ ಬಂದ ಪ್ರಯಾಣಿಕರು ತಮ್ಮ ತಮ್ಮ ಸ್ಥಳಗಳಿಗೆ ತೆರಳಲು ಹರಸಾಹಸ ಪಡುತ್ತಿದ್ದಾರೆ. ಇದನ್ನೂ ಓದಿ: ತೈಲ ಬೆಲೆ ಏರಿಕೆ ವಿರೋಧಿಸಿ ಸೋಮವಾರ ಭಾರತ್ ಬಂದ್- ಏನಿರುತ್ತೆ..? ಏನಿರಲ್ಲ..?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲಾರಾ ವಿಶ್ವದಾಖಲೆ ಮುರಿದ ವಿರಾಟ್, ಸಚಿನ್‍ರನ್ನೂ ಹಿಂದಿಕ್ಕಿದ್ರು!

    ಲಾರಾ ವಿಶ್ವದಾಖಲೆ ಮುರಿದ ವಿರಾಟ್, ಸಚಿನ್‍ರನ್ನೂ ಹಿಂದಿಕ್ಕಿದ್ರು!

    – ಸಚಿನ್, ದ್ರಾವಿಡ್, ಗಂಗೂಲಿ ದಿಗ್ಗಜರ ಸಾಲಿಗೆ ಕೊಹ್ಲಿ

    ಲಂಡನ್: ಓವೆಲ್ ಕ್ರೀಡಾಂಗಣ ನಡೆಯುತ್ತಿರುವ ಇಂಗ್ಲೆಂಡ್ ಅಂತಿಮ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಹತ್ವದ ಸಾಧನೆ ಮಾಡಿದ್ದು, ವಿಶ್ವ ಕ್ರಿಕೆಟ್‍ನಲ್ಲಿ ವೇಗವಾಗಿ 18 ಸಾವಿರ ರನ್ ಪೂರೈಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

    ಕೊಹ್ಲಿ 382 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದು, ಈ ಹಿಂದೆ ವೆಸ್ಟ್ ಇಂಡೀಸ್‍ನ ಬ್ರಿಯಾನ್ ಲಾರಾ 411 ಇನ್ನಿಂಗ್ಸ್ 18 ಸಾವಿರ ರನ್ ಪೂರೈಸಿದ್ದರು. ಇನ್ನು ಸಚಿನ್ ತೆಂಡೂಲ್ಕರ್ 412 ಇನ್ನಿಂಗ್ಸ್‍ಗಳಲ್ಲಿ ಈ ಸಾಧನೆ ಮಾಡಿದ್ದರು. ಟೀಂ ಇಂಡಿಯಾ ಪರ ಸಚಿನ್ (34,357) ಸೇರಿದಂತೆ ರಾಹುಲ್ ದ್ರಾವಿಡ್ (24,208), ಸೌರವ್ ಗಂಗೂಲಿ (18,575) ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಕೊಹ್ಲಿ ಟೀಂ ಇಂಡಿಯಾ ಪರ 18 ಸಾವಿರ ರನ್ ಪೂರೈಸಿದ 4ನೇ ಆಟಗಾರನಾಗಿ ದಿಗ್ಗಜರ ಸಾಲಿಗೆ ಸೇರಿದ್ದಾರೆ.

    ಅಂತಿಮ 5ನೇ ಟೆಸ್ಟ್ ಪಂದ್ಯದಲ್ಲಿ ಅರ್ಧ ಶತಕದಿಂದ ವಂಚಿತರಾದ ಕೊಹ್ಲಿ 49 ರನ್ ಗಳಿಗೆ ಬೇನ್ ಸ್ಟೋಕ್ಸ್‍ಗೆ ವಿಕೆಟ್ ಒಪ್ಪಿಸಿದರು. ಟೀಂ ಇಂಡಿಯಾ 174 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸುವ ಸಂಕಷ್ಟದಲ್ಲಿದ್ದು, ಇನ್ನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಲು ಇನ್ನು 158 ರನ್ ಗಳಿಸಬೇಕಿದೆ. ಮೊದಲ ಟೆಸ್ಟ್ ಪಂದ್ಯವಾಡುತ್ತಿರುವ ಹನುಮ ವಿಹಾರಿ 25 ರನ್ ಮತ್ತು ಜಡೇಜಾ 8 ರನ್ ಗಳಿಸಿ 3ನೇ ದಿನದಾಟಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ.

    ಕೊಹ್ಲಿ ರನ್ ಸಾಧನೆ:
    15 ಸಾವಿರ ರನ್ (333 ಇನ್ನಿಂಗ್ಸ್)
    16 ಸಾವಿರ ರನ್ (350 ಇನ್ನಿಂಗ್ಸ್)
    17 ಸಾವಿರ ರನ್ (363 ಇನ್ನಿಂಗ್ಸ್)
    18 ಸಾವಿರ ರನ್ (382 ಇನ್ನಿಂಗ್ಸ್)

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಧೋನಿ, ಬ್ರಾವೋ 3 ರನ್ ಡ್ಯಾಶ್ ಚಾಲೆಂಜ್ – ವಿಡಿಯೋ ನೋಡಿ

    ಧೋನಿ, ಬ್ರಾವೋ 3 ರನ್ ಡ್ಯಾಶ್ ಚಾಲೆಂಜ್ – ವಿಡಿಯೋ ನೋಡಿ

    ಮುಂಬೈ: ಕ್ರೀಡೆಯಲ್ಲಿ ವಯಸ್ಸು ಕೇವಲ ನಂಬರ್ ಎಂದು ಸಾಬೀತು ಪಡಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ, ತಮ್ಮದೇ ತಂಡದ ಆಟಗಾರ ಬ್ರಾವೋ ಜೊತೆ 3 ರನ್ ಚಾಲೆಂಜ್ ಸ್ವೀಕರಿಸಿ ತಾವು ಫಿಟ್ ಇರುವುದಾಗಿ ತೋರಿಸಿಕೊಟ್ಟಿದ್ದಾರೆ.

    ಸದ್ಯ ಧೋನಿ ಹಾಗೂ ಬ್ರಾವೋ ರ ವಿಡಿಯೋವನ್ನು ಚೆನ್ನೈ ಸೂಪರ್ ಕಿಂಗ್ಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ವಿಡಿಯೋದಲ್ಲಿ 3 ರನ್ ಓಡುವ ಚಾಲೆಂಜ್ ಪಡೆಯುವ ಧೋನಿ ಹಾಗೂ ಬ್ರಾವೋ ನಡುವೆ ನೆಕ್ ಟು ನೆಕ್ ಫೈಟ್ ನಡೆಯುತ್ತದೆ. ಈ ವೇಳೆ ಧೋನಿ ಗೆದ್ದು ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಹೈದರಾಬಾದ್ ವಿರುದ್ಧ ಗೆಲುವಿನ ಬಳಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಇಬ್ಬರ ನಡುವಿನ 3 ರನ್ ಡ್ಯಾಶ್ ಚಾಲೆಂಜ್ ನಡೆದಿದೆ.

    ಸ್ಟಪಿಂಗ್ ದಾಖಲೆ: ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಧೋನಿ ಸ್ಟಪಿಂಗ್ ದಾಖಲೆಯನ್ನು ಮಾಡಿದ್ದು, ಐಪಿಎಲ್ ನಲ್ಲಿ ಅತೀ ಹೆಚ್ಚು ಸ್ಟಪಿಂಗ್ ಮಾಡಿದ ರಾಬಿನ್ ಉತ್ತಪ್ಪ ದಾಖಲೆಯನ್ನು ಮುರಿದಿದ್ದಾರೆ. ಇದರೊಂದಿಗೆ ಪಟ್ಟಿಯಲ್ಲಿ 175 ಪಂದ್ಯದಲ್ಲಿ 33 ಸ್ಟಪಿಂಗ್ ಮಾಡಿರುವ ಧೋನಿ ಮೊದಲ ಸ್ಥಾನದಲ್ಲಿದ್ದರೆ, ರಾಬಿನ್ ಉತ್ತಪ್ಪ (32, 165 ಪಂದ್ಯ), ದಿನೇಶ್ ಕಾರ್ತಿಕ್ (32, 168 ಪಂದ್ಯ), ಸಹಾ (15, 115 ಪಂದ್ಯ) ಗಳೊಂದಿಗೆ ನಂತರದ ಸ್ಥಾನ ಪಡೆದಿದ್ದಾರೆ.

    ಒಟ್ಟಾರೆ ಐಪಿಎಲ್ ನಲ್ಲಿ 175 ಪಂದ್ಯಗಳನ್ನು ಆಡಿರುವ ಧೋನಿ 40.16 ಸರಾಸರಿಯಲ್ಲಿ 4,016 ರನ್ ಗಳಿಸಿದ್ದು, ಇದರಲ್ಲಿ 20 ಅರ್ಧ ಶತಕಗಳು ಸೇರಿದೆ.

  • ಬೆನ್ ಸ್ಟೋಕ್ಸ್ 1 ರನ್ ಗೆ ಬರೋಬ್ಬರಿ 6 ಲಕ್ಷ ರೂ. ನೀಡಿದ ರಾಜಸ್ಥಾನ ರಾಯಲ್ಸ್!

    ಬೆನ್ ಸ್ಟೋಕ್ಸ್ 1 ರನ್ ಗೆ ಬರೋಬ್ಬರಿ 6 ಲಕ್ಷ ರೂ. ನೀಡಿದ ರಾಜಸ್ಥಾನ ರಾಯಲ್ಸ್!

    ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2018 ರ ಟೂರ್ನಿಯ ವಿದೇಶಿ ಆಟಗಾರರಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾಗಿ ಇಂಗ್ಲೆಂಡ್ ನ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಗಮನ ಸೆಳೆದಿದ್ದರು. ಆದರೆ ರಾಜಸ್ಥಾನ ಪರ ಆಡಿದ್ದ ಸ್ಟೋಕ್ 13 ಇನ್ನಿಂಗ್ಸ್ ಗಳಿಂದ ಕೇವಲ 196 ರನ್ ಗಳಿಸಿದ್ದಾರೆ.

    ಬೆಂಗಳೂರಿನಲ್ಲಿ ನಡೆದ ಐಪಿಎಲ್ ಟೂರ್ನಿಯ ಹರಾಜು ಪ್ರಕ್ರಿಯೆಲ್ಲಿ ಬೆನ್ ಸ್ಟೋಕ್ಸ್ ರನ್ನು ರಾಜಸ್ಥಾನ ರಾಯಲ್ಸ್ 12.5 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ ಟೂರ್ನಿಯಲ್ಲಿ ಬೆನ್ ಸ್ಟೋಕ್ಸ್ 13 ಇನ್ನಿಂಗ್ಸ್ ಗಳಿಂದ 196 ರನ್ ಗಳಿಸಿದ್ದು ಅವರು ಪಡೆದ ಮೊತ್ತಕ್ಕೆ ಹೋಲಿಸಿದರೆ ಪ್ರತಿ ರನ್ ಗೆ 6.37 ಲಕ್ಷ ರೂ. ನೀಡಿದಂತಾಗುತ್ತದೆ. ಇನ್ನು ಈ ಟೂರ್ನಿಯಲ್ಲಿ ಸ್ಟ್ರೋಕ್ಸ್ 8 ವಿಕೆಟ್ ಪಡೆದಿದ್ದು, ಪ್ರತಿ ವಿಕೆಟ್ ಗೆ 1.56 ಕೋಟಿ ನೀಡಿದಂತಾಗುತ್ತದೆ. 26 ವರ್ಷದ ಬೆನ್ ಸ್ಟ್ರೋಕ್ ಟೂರ್ನಿಯ ಮಧ್ಯದಲ್ಲೇ ರಾಷ್ಟ್ರೀಯ ತಂಡದ ಪರ ಆಡಲು ಹಿಂದಿರುಗಿದ್ದಾರೆ.

    ಸದ್ಯ ರಾಜಸ್ಥಾನ ರಾಯಲ್ಸ್ ತಂಡ ಟೂರ್ನಿಯಲ್ಲಿ 14 ಪಂದ್ಯಗಳಲ್ಲಿ 7 ರಲ್ಲಿ ಜಯಗಳಿಸಿ 14 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಆರ್ ಸಿಬಿ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಕನ್ನಡಿಗ ಗೋಪಾಲ್ ಮಿಂಚಿನ ಬೌಲಿಂಗ್ ಪ್ರದರ್ಶನ ನೀಡಿ ಆರ್ ಸಿಬಿ ಸೋಲಿಗೆ ಕಾರಣರಾದರು. ಪಂದ್ಯದಲ್ಲಿ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖ ಆಟಗಾರರ 4 ವಿಕೆಟ್ ಪಡೆದ ಗೋಪಾಲ್ ಕೇವಲ 16 ರನ್ ಬಿಟ್ಟುಕೊಟ್ಟರು. ತಂಡದ ಗೆಲುವಿಗೆ ಕಾರಣರಾದ ಗೋಪಾಲ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು.