Tag: run

  • 2 ಪಂದ್ಯವಾಡಿದ್ರೂ ವಿಶೇಷ ಸಾಧನೆಗೈದ ಜಡೇಜಾ

    2 ಪಂದ್ಯವಾಡಿದ್ರೂ ವಿಶೇಷ ಸಾಧನೆಗೈದ ಜಡೇಜಾ

    ಲಂಡನ್: ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಆಡಲು ಅವಕಾಶ ಪಡೆದ ರವೀಂದ್ರ ಜಡೇಜಾ ಟೂರ್ನಿಯಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧದ ಸೆಮಿ ಫೈನಲ್ ಪಂದ್ಯ 2 ಪಂದ್ಯಗಳನ್ನು ಆಡಿರುವ ಜಡೇಜಾ ಒಟ್ಟು 41 ರನ್ ಗಳನ್ನು ಸೇವ್ ಮಾಡುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಆಟಗಾರರು ಗಾಯಗೊಂಡಾಗ, ಬೌಲರ್ ವಿಶ್ರಾಂತಿ ಪಡೆದಾಗ ಕ್ಷೇತ್ರ ರಕ್ಷಣೆಯಲ್ಲಿ ಮೋಡಿ ಮಾಡಿರುವ ಜಡೇಜಾ ಇನ್ನರ್ ರಿಂಗ್ ನಲ್ಲಿ 24 ರನ್ ಗಳನ್ನು ತಡೆದಿದ್ದರೆ, ಔಟ್‍ಫೀಲ್ಡ್‍ನಲ್ಲಿ 17 ರನ್ ಗಳನ್ನು ಸೇವ್ ಮಾಡಿದ್ದಾರೆ. 2 ಪಂದ್ಯಗಳಲ್ಲಿ ಜಡೇಜಾ ಈ ಸಾಧನೆ ಮಾಡಿರುವುದು ವಿಶೇಷವಾಗಿದೆ.

    ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿರುವ ಮಾರ್ಟಿನ್ ಗುಪ್ಟಿಲ್ 9 ಪಂದ್ಯಗಳಿಂದ 34 ರನ್, ಗ್ಲೇನ್ ಮ್ಯಾಕ್ಸ್ ವೇಲ್ 9 ಪಂದ್ಯಗಳಿಂದ 32 ರನ್, 4ನೇ ಸ್ಥಾನದಲ್ಲಿ ಇರುವ ಸ್ಟೋಯಿನ್ಸ್ 7 ಪಂದ್ಯಗಳಿಂದ 27 ರನ್‍ಗಳನ್ನು ಸೇವ್ ಮಾಡಿದ್ದಾರೆ.

    ಶ್ರೀಲಂಕಾ ವಿರುದ್ಧ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಿದ್ದ ಜಡೇಜಾ – ಧೋನಿ ವಿರೋಧಿ ತಂಡ ಒಟ್ಟು 29 ಬ್ಯಾಟ್ಸ್ ಮನ್ ಗಳನ್ನು ಬಲಿ ಪಡೆದ ಸಾಧನೆ ಮಾಡಿದರು. ಇದಕ್ಕೂ ಮುನ್ನ ಭಾರತ ಪರ ನಯನ್ ಮೋಗಿಯಾ ಹಾಗೂ ವೆಂಕಟೇಶ್ ಪ್ರಸಾದ್ ಜೋಡಿ 28 ಬ್ಯಾಟ್ಸ್ ಮನ್ ಗಳನ್ನು ಬಲಿ ಪಡೆದಿತ್ತು. ಉಳಿದಂತೆ ಈ ಪಟ್ಟಿಯಲ್ಲಿ 25 ಬ್ಯಾಟ್ಸ್ ಮನ್ ಗಳನ್ನು ಬಲಿ ಪಡೆದ ಧೋನಿ – ಹರ್ಭಜನ್ ಜೋಡಿ 3ನೇ ಸ್ಥಾನದಲ್ಲಿದೆ.

    https://twitter.com/mohankrish_mk48/status/1148902745845272576

  • ಬಾಂಗ್ಲಾ 7 ರನ್ ಗಳಿಸುತ್ತಿದ್ದಂತೆ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಪಾಕ್

    ಬಾಂಗ್ಲಾ 7 ರನ್ ಗಳಿಸುತ್ತಿದ್ದಂತೆ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಪಾಕ್

    ಲಂಡನ್: 2019ರ ವಿಶ್ವಕಪ್ ಟೂರ್ನಿಯಿಂದ ಪಾಕಿಸ್ತಾನ ತಂಡ ಅಧಿಕೃತವಾಗಿ ಹೊರ ಬಿದ್ದಿದ್ದು, ಬಾಂಗ್ಲಾದೇಶದ ವಿರುದ್ಧ ಪಂದ್ಯದಲ್ಲಿ ಬಾಂಗ್ಲಾ ತಂಡ 7ನೇ ರನ್ ಗಳಿಸುತ್ತಿದ್ದಂತೆ ಪಾಕ್ ಹೊರ ನಡೆಯುವುದು ಅಧಿಕೃತವಾಗಿದೆ.

    ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ್ದ ಪಾಕಿಸ್ತಾನ 315 ರನ್ ಗಳಿಸಿತ್ತು. ಇದರಂತೆ ಪಾಕ್ ವಿಶ್ವಕಪ್ ಸೆಮಿ ಫೈನಲ್ ಹಂತ ಪ್ರವೇಶ ಮಾಡಲು 308 ರನ್ ಅಂತರದೊಂದಿಗೆ ಗೆಲುವು ಪಡೆಯಬೇಕಿತ್ತು. ಇದಕ್ಕಾಗಿ ಬಾಂಗ್ಲಾ ತಂಡವನ್ನು 7 ರನ್‍ಗೆ ಆಲೌಟ್ ಮಾಡುವ ಅನಿವಾರ್ಯತೆಯನ್ನು ಎದುರಿಸಿತ್ತು. ಆದರೆ ಪಾಕಿಸ್ತಾನ ಗುರಿ ಬೆನ್ನತ್ತಿದ ಬಾಂಗ್ಲಾ ಆಟಗಾರರು ಉತ್ತಮ ಆಟದೊಂದಿಗೆ ಇನ್ನಿಂಗ್ಸ್ ಆರಂಭಿಸಿದ್ದಾರೆ.

    ವಿಶ್ವಕಪ್ ಆರಂಭದಿಂದಲೂ ಏಳು-ಬೀಳುಗಳ ನಡುವೆ ಸಾಗಿದ್ದ ಪಾಕಿಸ್ತಾನ ತಂಡ ಟೂರ್ನಿಯ 7ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲುವು ಪಡೆದು ಸೆಮಿ ಫೈನಲ್ ಕಾಣುವ ಕನಸು ಉಳಿಸಿಕೊಂಡಿತ್ತು. ಆದರೆ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡ ಪರಿಣಾಮ ಪಾಕ್ ಲೆಕ್ಕಾಚಾರಗಳು ತಲೆಕೆಳಗಾಗಿತ್ತು. ಲೀಗ್ ಹಂತದ ಅಂತಿಮ ಪಂದ್ಯದಲ್ಲಿಯೂ 315 ರನ್ ಗಳನ್ನಷ್ಟೇ ಪಾಕ್ ಗಳಿಸಲು ಸಾಧ್ಯವಾಗಿತ್ತು. ಒಂದೊಮ್ಮೆ ಪಾಕ್ ಬಾಂಗ್ಲಾ ವಿರುದ್ಧ ಗೆಲುವು ಪಡೆದರೆ ಜಯದೊಂದಿಗೆ ತನ್ನ ಪ್ರಯಾಣವನ್ನು ಅಂತ್ಯಗೊಳಿಸುತ್ತದೆ. ಇನ್ನು ವಿಶ್ವಕಪ್ ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್ 4ನೇ ತಂಡವಾಗಿ ಸೆಮಿ ಫೈನಲ್‍ಗೆ ಆಯ್ಕೆ ಆಗಿದೆ. ಟೀಂ ಇಂಡಿಯಾಗೂ ಮೊದಲು ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಸೆಮಿ ಫೈನಲ್‍ಗೆ ಆರ್ಹತೆ ಪಡೆದಿದ್ದವು.

  • ಸಚಿನ್, ಲಾರಾ ವಿಶ್ವದಾಖಲೆ ಮುರಿಯುವ ಸನಿಹದಲ್ಲಿ ಕೊಹ್ಲಿ

    ಸಚಿನ್, ಲಾರಾ ವಿಶ್ವದಾಖಲೆ ಮುರಿಯುವ ಸನಿಹದಲ್ಲಿ ಕೊಹ್ಲಿ

    ಲಂಡನ್: ಪಾಕಿಸ್ತಾನ ವಿರುದ್ಧ ಅರ್ಧ ಶತಕ ಸಿಡಿಸಿ ವೇಗವಾಗಿ ಏಕದಿನ ಕ್ರಿಕೆಟಿನಲ್ಲಿ 11 ಸಾವಿರ ರನ್ ಸಿಡಿಸಿ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಶನಿವಾರ ನಡೆಲಿರುವ ಅಫ್ಘಾನಿಸ್ತಾನದ ವಿರುದ್ಧ ಪಂದ್ಯದಲ್ಲಿ ಮತ್ತೊಂದು ವಿಶ್ವದಾಖಲೆ ನಿರ್ಮಿಸುವ ಸನಿಹದಲ್ಲಿದ್ದಾರೆ.

    2019 ರ ವಿಶ್ವಕಪ್ ಟೂರ್ನಿಯಲ್ಲಿ ಶತಕ ಸಿಡಿಸಬೇಕಿರುವ ಕೊಹ್ಲಿ, 104 ರನ್ ಗಳಿಸಿದರೆ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ವೇಗವಾಗಿ 20 ಸಾವಿರ ರನ್ ಸಿಡಿಸಿದ ವಿಶ್ವ ದಾಖಲೆ ಬರೆಯಲಿದ್ದಾರೆ.

    ವಿರಾಟ್ ಕೊಹ್ಲಿ 415 ಇನ್ನಿಂಗ್ಸ್ ಅಂದರೆ 131 ಟೆಸ್ಟ್, 222 ಏಕದಿನ ಪಂದ್ಯ ಹಾಗೂ 62 ಟಿ20 ಪಂದ್ಯಗಳಿಂದ ಒಟ್ಟು 19,896 ರನ್ ಸಿಡಿಸಿದ್ದಾರೆ. ಸದ್ಯ ಕೊಹ್ಲಿ 20 ಸಾವಿರ ರನ್ ಸಾಧನೆ ಮಾಡಲು 104 ರನ್ ಮಾತ್ರ ಅಗತ್ಯವಿದ್ದು, ಅಫ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ ಈ ಸಾಧನೆ ನಿರ್ಮಿಸುವ ಅವಕಾಶ ಹೊಂದಿದ್ದಾರೆ.

    ಈ ಹಿಂದೆ ಸಚಿನ್ ತೆಂಡೂಲ್ಕರ್ ಹಾಗೂ ಲಾರಾ 453 ಇನ್ನಿಂಗ್ಸ್ ಗಳಿಂದ 20 ಸಾವಿರ ರನ್ ಸಿಡಿಸಿದ್ದರು. ಉಳಿದಂತೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಟಿಂಗ್ 468 ಇನ್ನಿಂಗ್ಸ್ ಗಳಿಂದ ಈ ಸಾಧನೆ ಮಾಡಿದ್ದರು. ಮೂವರು ದಿಗ್ಗಜರನ್ನು ಹಿಂದಿಕ್ಕುವ ಅವಕಾಶವನ್ನು ಕೊಹ್ಲಿ ಹೊಂದಿದ್ದಾರೆ.

    ವಿಶ್ವಕಪ್ ಟೂರ್ನಿಯಲ್ಲಿ ಕೊಹ್ಲಿ, ಸೌತ್ ಆಫ್ರಿಕಾ ವಿರುದ್ಧ 18 ರನ್, ಆಸ್ಟ್ರೇಲಿಯಾ ವಿರುದ್ಧ 82 ರನ್ ಹಾಗೂ ಪಾಕಿಸ್ತಾನದ ವಿರುದ್ಧ 77 ರನ್ ಸಿಡಿಸಿದ್ದಾರೆ. ಸದ್ಯ ಟೀಂ ಇಂಡಿಯಾ ವಿಶ್ವಕಪ್ ಅಂಕಪಟ್ಟಿಯಲ್ಲಿ 4 ಸ್ಥಾನದಲ್ಲಿದ್ದು, ಟೂರ್ನಿಯಲ್ಲಿ ನಾವು ಯಾವುದೇ ತಂಡವನ್ನು ಸುಲಭವಾಗಿ ಪರಿಗಣಿಸುವುದಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಏಕದಿನ ಕ್ರಿಕೆಟಿನಲ್ಲಿ ಇಂಗ್ಲೆಂಡ್ 500 ರನ್ ಗಳಿಸುವ ಮೊದಲ ತಂಡವಾಗಲಿದೆ: ಕೊಹ್ಲಿ ಭವಿಷ್ಯ

    ಏಕದಿನ ಕ್ರಿಕೆಟಿನಲ್ಲಿ ಇಂಗ್ಲೆಂಡ್ 500 ರನ್ ಗಳಿಸುವ ಮೊದಲ ತಂಡವಾಗಲಿದೆ: ಕೊಹ್ಲಿ ಭವಿಷ್ಯ

    ಲಂಡನ್: ವಿಶ್ವಕಪ್ ಕ್ರಿಕೆಟ್ ಟೂರ್ನಿ ಆರಂಭವಾಗಲು ಒಂದು ವಾರ ಬಾಕಿ ಇರುವ ಸಂದರ್ಭದಲ್ಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರಮುಖ ಹೇಳಿಕೆಯೊಂದನ್ನು ನೀಡಿದ್ದು, ಇಂಗ್ಲೆಂಡ್ ತಂಡ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ 500 ರನ್ ಗಳಿಸುವ ಸಾಧ್ಯತೆ ಇದೆ ಎಂದಿದ್ದಾರೆ.

    ಈ ಹಿಂದೆ 1996ರ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ಕೀನ್ಯಾ ಎದುರು 398 ರನ್ ಗಳಿಸಿ ದಾಖಲೆ ಬರೆದಿತ್ತು. ಆ ಸಂದರ್ಭದಲ್ಲಿ ಈ ದಾಖಲೆಯನ್ನು ಮುರಿಯುವುದು ಅಸಾಧ್ಯ ಎಂದೇ ಹಲವರು ಭಾವಿಸಿದ್ದರು. ಆದರೆ 2005 ರಲ್ಲಿ ಆಸ್ಟ್ರೇಲಿಯಾ ತಂಡ ಎರಡು ಬಾರಿ 434, 438 ರನ್ ಸಿಡಿಸಿ ಈ ಹಿಂದಿನ ದಾಖಲೆಗಳನ್ನು ಮುರಿದುಹಾಕಿತ್ತು.

    ಇತ್ತೀಚೆಗೆ ಇಂಗ್ಲೆಂಡ್ ತಂಡ ಪಾಕಿಸ್ತಾನದ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ 400 ಪ್ಲಸ್ ರನ್ ಗಳಿಸಿತ್ತು. ಪರಿಣಾಮ ವಿಶ್ವಕಪ್ ಟೂರ್ನಿಯಲ್ಲಿ ಈ ಬಾರಿ ಅತೀ ಹೆಚ್ಚು ರನ್ ಗಳಿಸುವ ಪಂದ್ಯಗಳಿಗೆ ಸಾಕ್ಷಿಯಾಗಬಹುದು. ಏಕದಿನ ಕ್ರಿಕೆಟ್‍ನಲ್ಲಿ ಇಂಗ್ಲೆಂಡ್‍ಗೆ 500 ರನ್ ಗಳಿಸುವ ಅವಕಾಶ ಇದೆ ಎಂದು ಕೊಹ್ಲಿ ಹೇಳಿದ್ದಾರೆ.

    ಈ ಬಾರಿಯ ಟೂರ್ನಿಯಲ್ಲಿ ಒತ್ತಡವನ್ನು ನಿಭಾಯಿಸುವುದು ಪ್ರಮುಖ ಅಂಶವಾಗಲಿದ್ದು, ತಂಡದ ಆಟಗಾರರು ಒತ್ತಡಕ್ಕೆ ಸಿಲುಕಿದರೆ 260 ರಿಂದ 270 ರನ್ ಗಳಿಸುವುದು ಕಷ್ಟಸಾಧ್ಯವಾಗಲಿದೆ. ಆದರೆ ಈ ಬಾರಿಯ ಟೂರ್ನಿಯಲ್ಲಿ 370 ರಿಂದ 380 ರನ್ ಗುರಿ ಬೆನ್ನಟ್ಟುವ ಸಂದರ್ಭಗಳನ್ನು ನಿರೀಕ್ಷೆ ಮಾಡಬಹುದಾಗಿದೆ. ಪರಿಣಾಮ ಪಂದ್ಯದ ಸಂದರ್ಭದಲ್ಲಿ ಒತ್ತಡವನ್ನು ನಿಭಾಯಿಸುವುದು ಅತಿ ಮುಖ್ಯ ಎಂದು ಕೊಹ್ಲಿ ಅಭಿಪ್ರಾಯ ಪಟ್ಟಿದ್ದಾರೆ.

    ಏಕದಿನ ಕ್ರಿಕೆಟಿನಲ್ಲಿ ಇಂಗ್ಲೆಂಡ್ ಅತೀ ಹೆಚ್ಚು ರನ್ ಗಳಿಸಿದ ತಂಡದ ಸ್ಥಾನವನ್ನು ಪಡೆದುಕೊ0ಡಿದ್ದು, ಆಸ್ಟ್ರೇಲಿಯಾ ವಿರುದ್ಧ ಕಳೆದ ವರ್ಷ 481 ರನ್ ಸಿಡಿಸಿತ್ತು.

  • ಒಂಟಿ ರನ್ ಕದಿಯಲು ನಿರಾಕರಿಸಿದ್ದು ಏಕೆ – ಧೋನಿ ಸ್ಪಷ್ಟನೆ

    ಒಂಟಿ ರನ್ ಕದಿಯಲು ನಿರಾಕರಿಸಿದ್ದು ಏಕೆ – ಧೋನಿ ಸ್ಪಷ್ಟನೆ

    ಬೆಂಗಳೂರು: ಆರ್ ಸಿಬಿ ವಿರುದ್ಧ ಪಂದ್ಯದಲ್ಲಿ ಧೋನಿ ಮತ್ತೊಮ್ಮೆ ನಾಯಕತ್ವದ ಹಿಂದಿನ ಭಿನ್ನ ಲೆಕ್ಕಾಚಾರಗಳನ್ನು ತೆರೆದಿಟ್ಟಿದ್ದು, ಬ್ಯಾಟಿಂಗ್ ವೇಳೆ ಒಂಟಿ ರನ್ ಕದಿಯಲು ನಿರಾಕರಿಸಿದ್ದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ಏಕಾಂಗಿಯಾಗಿ ಪಂದ್ಯದ ಜವಾಬ್ದಾರಿಯನ್ನ ವಹಿಸಿಕೊಂಡ ಧೋನಿ ಕ್ಯಾಪ್ಟನ್ ಆಗಿ ಅಭಿಮಾನಿಗಳ ಮನಗೆದ್ದಿದ್ದಾರೆ. ಗೆಲ್ಲಲು ಕಷ್ಟಸಾಧ್ಯ ಎಂಬ ಸಂದರ್ಭದಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳದ ಧೋನಿ ಆ ಸಂದರ್ಭದಲ್ಲಿ ತಮ್ಮ ಚಿಂತನೆ ಏನಿತ್ತು ಎಂಬುವುದನ್ನು ತಿಳಿಸಿದ್ದಾರೆ.

    ಪಂದ್ಯದ ಬಳಿಕ ಮಾತನಾಡಿದ ಧೋನಿ, ಪಂದ್ಯದಲ್ಲಿ ಅತಿ ಹೆಚ್ಚು ರನ್ ಬೇಕಾಗಿರುವುದರಿಂದ ಸ್ಟ್ರೈಕ್ ನಾನೇ ಎದುರಿಸಲು ನಿರ್ಧರಿಸಿದ್ದೆ. ಏಕೆಂದರೆ ಇಂತಹ ಸಂದರ್ಭದಲ್ಲಿ ಹೊಸ ಬ್ಯಾಟ್ಸ್ ಮನ್‍ಗೆ ಕ್ರಿಸ್‍ಗೆ ಹೊಂದಿಕೊಳ್ಳುವುದು ಕಷ್ಟಸಾಧ್ಯವಾಗುತ್ತದೆ. ಆ ವೇಳೆಗೆ ಕೆಲ ಎಸೆತಗಳು ವ್ಯರ್ಥವಾಗುವ ಸಂಭವ ಹೆಚ್ಚು. ಆದ್ದರಿಂದ ಈ ಜವಾಬ್ದಾರಿಯನ್ನು ನಾನು ತೆಗೆದುಕೊಂಡೆ. ಅಂತಿಮವಾಗಿ ಕೆಲವೇ ರನ್ ಗಳ ಅಂತರದಿಂದ ಸೋಲುಂಡ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡುವುದು ಹೆಚ್ಚು. ಆದರೆ ಒಮ್ಮೆ ಬ್ಯಾಟ್ಸ್ ಮನ್ ಆಡುತ್ತಿದ್ದರೆ ಆತ ತಂಡದ ಗೆಲುವಿಗಾಗಿ ಮಾತ್ರ ಚಿಂತಿಸುತ್ತಾನೆ ಎಂದಿದ್ದಾರೆ.

    ಧೋನಿ ಅವರ ಈ ನಿರ್ಧಾರವನ್ನು ಸಿಎಸ್‍ಕೆ ಕೋಚ್ ಸ್ಟಿಫನ್ ಫ್ಲೆಮಿಂಗ್ ಕೂಡ ಪ್ರಶ್ನೆ ಮಾಡುವುದಿಲ್ಲ ಎಂದು ತಿಳಿಸಿದ್ದು, ಧೋನಿ ಹೆಚ್ಚು ಬೌಂಡರಿ, ಸಿಕ್ಸರ್ ಸಿಡಿಸಲು ಚಿಂತಿಸಿದ್ದರು. ಇದಕ್ಕೆ ಅವರದ್ದೇ ಆದ ಕೆಲ ಚಿಂತನೆಗಳು ಇರುತ್ತವೆ. ಅವರು ತುಂಬಾ ಚಿಂತನೆ ನಡೆಸಿಯೇ ಆಡುತ್ತಾರೆ. ಯಾವುದೇ ಕಾರಣಕ್ಕೂ ಇದನ್ನ ಪ್ರಶ್ನೆ ಮಾಡಲ್ಲ ಎಂದಿದ್ದಾರೆ.

    ಪ್ರಶ್ನೆ ಎದ್ದಿದ್ದು ಯಾಕೆ?
    ಆರ್‍ಸಿಬಿ 1 ರನ್ ಅಂತರದಲ್ಲಿ ಪಂದ್ಯವನ್ನು ಗೆದ್ದಿದ್ದರೂ ಕೊನೆಯ ಸ್ಲಾಗ್ ಓವರ್ ನಲ್ಲಿ ಮೂರು ಒಂಟಿ ರನ್ ಗಳನ್ನು ಪಡೆಯಲು ಧೋನಿ ಮುಂದಾಗಿರಲಿಲ್ಲ. ಒಂದು ವೇಳೆ ಧೋನಿ ರನ್ ಗಳಿಸಿದ್ದರ ಪಂದ್ಯವನ್ನು ಚೆನ್ನೈ ಗೆದ್ದುಕೊಳ್ಳುವ ಸಾಧ್ಯತೆ ಇತ್ತು ಎನ್ನುವುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ.

    ಕೊನೆಯ ಓವರ್ ಹೀಗಿತ್ತು:
    ಕೊನೆಯ 6 ಎಸೆತದಲ್ಲಿ ಚೆನ್ನೈ ತಂಡ 26 ರನ್ ಗಳಿಸಬೇಕಿತ್ತು. ಉಮೇಶ್ ಯಾದವ್ ಎಸೆದ ಮೊದಲ ಎಸೆತವನ್ನು ಧೋನಿ ಬೌಂಡರಿಗೆ ಅಟ್ಟಿದರೆ ನಂತರದ ಎರಡು ಎಸೆತಗಳನ್ನು ಸಿಕ್ಸರ್‍ಗೆ ಅಟ್ಟಿದರು. ನಾಲ್ಕನೇಯ ಎಸೆತದಲ್ಲಿ 2 ರನ್ ಓಡಿದ ಧೋನಿ 5ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದರು. ಕೊನೆಯ ಎಸೆತದಲ್ಲಿ ಎರಡು ಬೇಕಿತ್ತು. ಧೋನಿ ಸ್ಟ್ರೈಕ್ ನಲ್ಲಿದ್ದ ಕಾರಣ ಚೆನ್ನೈ ಪಂದ್ಯ ಗೆಲ್ಲುತ್ತದೆ ಎನ್ನುವ ನಿರೀಕ್ಷೆ ಇತ್ತು. ಆದರೆ ಕೊನೆಯ ಎಸೆತ ಧೋನಿ ಬ್ಯಾಟಿಗೆ ಸಿಗದೇ ಬಾಲ್ ಕೀಪರ್ ಪಾರ್ಥಿವ್ ಪಟೇಲ್ ಕೈಗೆ ಸಿಕ್ಕಿತು. ಆದರೂ ಒಂದು ರನ್ ಓಡಲು ಪ್ರಯತ್ನಿಸುತ್ತಿದ್ದಾಗ ಪಾರ್ಥಿವ್ ಪಟೇಲ್ ಶಾರ್ದೂಲ್ ಠಾಕೂರ್ ಅವರನ್ನು ರನೌಟ್ ಮಾಡಿದರು. ಈ ಮೂಲಕ ಬೆಂಗಳೂರು ತಂಡ 1 ರನ್‍ನಿಂದ ಪಂದ್ಯವನ್ನು ರೋಚಕವಾಗಿ ಗೆದ್ದುಕೊಂಡಿತು.

  • ಶತಕ ಸಿಡಿಸಿ ರಿಕಿ ಪಾಟಿಂಗ್ ದಾಖಲೆ ಮುರಿದ ಕ್ಯಾಪ್ಟನ್ ಕೊಹ್ಲಿ

    ಶತಕ ಸಿಡಿಸಿ ರಿಕಿ ಪಾಟಿಂಗ್ ದಾಖಲೆ ಮುರಿದ ಕ್ಯಾಪ್ಟನ್ ಕೊಹ್ಲಿ

    ನಾಗ್ಪುರ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶತಕ ಸಿಡಿಸಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ವೇಗವಾಗಿ 9 ಸಾವಿರ ರನ್ ಗಳಿಸಿದ ನಾಯಕ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.

    9 ಸಾವಿರ ರನ್ ಪೂರ್ಣಗೊಳಿಸಿದ ವಿಶ್ವದ 6ನೇ ನಾಯಕರಾಗಿರುವ ಕೊಹ್ಲಿ, ಕೇವಲ 159 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಹಿಂದೆ ಆಸೀಸ್ ಮಾಜಿ ನಾಯಕ ರಿಕಿ ಪಾಟಿಂಗ್ 204 ಇನ್ನಿಂಗ್ಸ್ ಗಳಲ್ಲಿ 9 ಸಾವಿರ ರನ್ ಪೂರೈಸಿ ದಾಖಲೆ ಬರೆದಿದ್ದರು. ಉಳಿದಂತೆ ಗ್ರೇಮ್ಸ್ ಸ್ಮಿತ್ 220 ಇನ್ನಿಂಗ್ಸ್, ಧೋನಿ 253 ಇನ್ನಿಂಗ್ಸ್, ಅಲಾನ್ ಬರ್ಡರ್ 257 ಇನ್ನಿಂಗ್ಸ್, ಸ್ಟಿಫನ್ ಫ್ಲೆಮಿಂಗ್ 272 ಇನ್ನಿಂಗ್ಸ್ ಗಳಲ್ಲಿ 9 ಸಾವಿರ ರನ್ ಗಳಿಸಿದ್ದರು.

    ಆಸೀಸ್ ವಿರುದ್ಧ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಕೊಹ್ಲಿ ಕಳೆದ 6 ಇನ್ನಿಂಗ್ಸ್ ಗಳಲ್ಲಿ ಕ್ರಮವಾಗಿ 91, 59, 117, 0, 92, 116 ರನ್ ಗಳಿಸಿದ್ದಾರೆ. ಅಲ್ಲದೇ ಇಂದಿನ ಪಂದ್ಯದಲ್ಲಿ ಶತಕದ ಸಾಧನೆಯನ್ನು ಮಾಡಿದ್ದು, ಏಕದಿನ ಕ್ರಿಕೆಟ್‍ನಲ್ಲಿ 40ನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಇದು 18ನೇ ಶತಕವಾಗಿದೆ.

    ಇತ್ತ ಏಕದಿನ ಕ್ರಿಕೆಟ್‍ನಲ್ಲಿ ಸಚಿನ್ 49 ಶತಕಗಳನ್ನು ಸಿಡಿಸಿ ದಾಖಲೆ ನಿರ್ಮಿಸಿದ್ದು, ಸಚಿನ್‍ರನ್ನು ಹಿಂದಿಕ್ಕಲು ಕೊಹ್ಲಿಗೆ ಕೇವಲ 10 ಶತಕಗಳ ಅಗತ್ಯವಿದೆ. ಒಟ್ಟಾರೆ ಅಂತರಾಷ್ಟ್ರಿಯ ಕ್ರಿಕೆಟ್‍ನಲ್ಲಿ ಕೊಹ್ಲಿ 65 ಶತಕ ಸಿಡಿಸಿದ್ದು, ಟಿ20 ಮಾದರಿಯಲ್ಲಿ ಶತಕ ದಾಖಲಿಸಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟಿ20 ಕ್ರಿಕೆಟ್ ಮಾದರಿಯಲ್ಲಿ ವಿಶ್ವ ದಾಖಲೆ ಬರೆದ ‘ಹಿಟ್’ಮ್ಯಾನ್

    ಟಿ20 ಕ್ರಿಕೆಟ್ ಮಾದರಿಯಲ್ಲಿ ವಿಶ್ವ ದಾಖಲೆ ಬರೆದ ‘ಹಿಟ್’ಮ್ಯಾನ್

    – ಭಾರತಕ್ಕೆ 7 ವಿಕೆಟ್‍ಗಳ ಜಯ – ಸರಣಿ ಸಮಬಲ

    ಆಕ್ಲೆಂಡ್: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟಿ20 ಕ್ರಿಕೆಟ್ ಸರಣಿಯ 2ನೇ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‍ಗಳ ಗೆಲುವು ಪಡೆದಿದೆ. ಕೇವಲ 28 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಸಾಧನೆಯನ್ನು ಮಾಡಿದ್ದಾರೆ.

    3 ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ 1-1 ಅಂತರದಲ್ಲಿ ಸಮಬಲ ಸಾಧಿಸಿದ್ದು, ಭಾನುವಾರ ನಡೆಯಲಿರುವ ಸರಣಿಯ ಅಂತಿಮ ಪಂದ್ಯ ತೀವ್ರ ಕುತೂಹಲ ಮೂಡಿಸಿದೆ.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಕಿವೀಸ್ ನಿಗಧಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿತು. ಟೀಂ ಇಂಡಿಯಾ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಕೃಣಾಲ್ ಪಾಂಡ್ಯ 28 ರನ್ ನೀಡಿ 3 ವಿಕೆಟ್ ಪಡೆದರು. ಖಲೀಲ್ ಅಹ್ಮದ್ 2 ವಿಕೆಟ್, ಭುವನೇಶ್ವರ್ ಕುಮಾರ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಉರುಳಿಸಿದರು.

    ನ್ಯೂಜಿಲೆಂಡ್ ನೀಡಿದ ಗುರಿ ಬೆನ್ನತ್ತಿದ ಟೀಂ ಇಂಡಿಯಾಗೆ ಆರಂಭಿಕ ಬ್ಯಾಟ್ಸ್ ಮನ್‍ಗಳು ಉತ್ತಮ ಆರಂಭ ನೀಡಿದರು. ಕಿವೀಸ್ ಬೌಲರ್ ಗಳನ್ನು ತಮ್ಮ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ಮೂಲಕವೇ ದಂಡಿಸಿದ ನಾಯಕ ರೋಹಿತ್ ಶರ್ಮಾ 29 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಗಳ ನೆರವಿನಿಂದ 50 ರನ್ ಗಳಿಸಿದರೆ, ಧವನ್ 31 ಎಸೆತಗಳಲ್ಲಿ 30 ರನ್ ಗಳಿಸಿದರು. ಈ ಜೋಡಿ ಮೊದಲ ವಿಕೆಟ್‍ಗೆ 79 ರನ್ ಜೊತೆಯಾಟ ನೀಡಿತು.

    ಇತ್ತ ಯುವ ಆಟಗಾರ ರಿಷಭ್ ಪಂತ್ ಕೂಡ ಭರ್ಜರಿ ಬ್ಯಾಟಿಂಗ್ ನಡೆಸಿ ಕೇವಲ 28 ಎಸೆತಗಳಲ್ಲಿ 40 ರನ್ ಸಿಡಿಸಿ ಅಜೇಯರಾಗಿ ಉಳಿದರು. ಮತ್ತೊಬ್ಬ ಯುವ ಬ್ಯಾಟ್ಸ್ ಮನ್ ಶಂಕರ್ 14 ರನ್ ಗಳಿಸಿದರೆ, ಮಾಜಿ ನಾಯಕ ಎಂಎಸ್ ಧೋನಿ 17 ಎಸೆತಗಳಲ್ಲಿ 20 ರನ್ ಗಳಿಸಿ ಅಜೇಯರಾಗಿ ಉಳಿದರು. ಕಿವೀಸ್ ಪರ ಸೌಧಿ, ಮಿಚೆಲ್, ಫಾಗ್ರ್ಯೂಸನ್ ತಲಾ 1 ವಿಕೆಟ್ ಪಡೆದರು.

    ರೋಹಿತ್ ದಾಖಲೆ: ಪಂದ್ಯದಲ್ಲಿ 35 ರನ್ ಗಳಿಸಿದ್ದ ವೇಳೆ ರೋಹಿತ್ ನ್ಯೂಜಿಲೆಂಡಿನ ಮಾರ್ಟಿನ್ ಗುಪ್ಟಿಲ್ ದಾಖಲೆ ಮುರಿದು ಟಿ20 ಹೆಚ್ಚು ರನ್ ಗಳಿಸಿದ ಆಟಗಾರ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದರು. ರೋಹಿತ್ 92 ಪಂದ್ಯಗಳಲ್ಲಿ 2,288 ರನ್ ಗಳಿಸಿದ್ದರೆ, ಗುಪ್ಟಿಲ್ 76 ಪಂದ್ಯಗಳಲ್ಲಿ 2,272 ರನ್ ಗಳಿಸಿದ್ದಾರೆ. ವಿಶೇಷೆಂದರೆ ರೋಹಿತ್ ಟಿ20ಯಲ್ಲಿ ಅತೀ ಹೆಚ್ಚು ಶತಕ (4 ಶತಕ) ಮತ್ತು ಅರ್ಧ ಶತಕ (16) ಶತಕಗಳನ್ನು ಗಳಿಸಿದ್ದಾರೆ. ಗುಪ್ಟಿಲ್ 2 ಶತಕ, 14 ಅರ್ಧ ಶತಕಗಳನ್ನು ಗಳಿಸಿದ್ದಾರೆ. ವಿರಾಟ್ ಕೊಹ್ಲಿ 19 ಅರ್ಧ ಶತಕಗಳನ್ನು ಸಿಡಿಸಿ 2ನೇ ಸ್ಥಾನದಲ್ಲಿದ್ದಾರೆ.

    ಟಿ20 ಕ್ರಿಕೆಟಿನಲ್ಲಿ ರೋಹಿತ್ ಮತ್ತೊಂದು ಸಾಧನೆಯನ್ನು ಮಾಡಿದ್ದು, 102 ಸಿಕ್ಸರ್ ಗಳೊಂದಿಗೆ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 100 ಸಿಕ್ಸರ್ ಸಾಧನೆ ಮಾಡಿದ 3ನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಉಳಿದಂತೆ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ಹಾಗೂ ಗುಪ್ಟಿಲ್ ತಲಾ 103 ಸಿಕ್ಸರ್ ಸಾಧನೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹ್ಯಾಟ್ರಿಕ್ ಫಿಫ್ಟಿ – ಟೀಕೆಗಳಿಗೆ ಬ್ಯಾಟ್‍ನಿಂದಲೇ ಉತ್ತರಿಸಿದ ಎಂಎಸ್‍ಡಿ

    ಹ್ಯಾಟ್ರಿಕ್ ಫಿಫ್ಟಿ – ಟೀಕೆಗಳಿಗೆ ಬ್ಯಾಟ್‍ನಿಂದಲೇ ಉತ್ತರಿಸಿದ ಎಂಎಸ್‍ಡಿ

    ಮೆಲ್ಬರ್ನ್: ಕಳಪೆ ಪ್ರದರ್ಶನದ ಕಾರಣ ನೀಡಿ ನಿವೃತ್ತಿ ನೀಡುವಂತೆ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ವಿರುದ್ಧ ಟೀಕೆ ಮಾಡಿದ್ದವರಿಗೆ ಎಂಎಸ್‍ಡಿ ಹ್ಯಾಟ್ರಿಕ್ ಫಿಫ್ಟಿ ಸಿಡಿಸುವ ಮೂಲಕ ಉತ್ತರಿಸಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧ ಏಕದಿನ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿರುವ ಧೋನಿ ಹ್ಯಾಟ್ರಿಕ್ ಫಿಫ್ಟಿ ಸಿಡಿಸಿ ವೃತ್ತಿ ಜೀವನದ 70ನೇ ಅರ್ಧ ಶತಕ ಪೂರೈಸಿದರು. ಉಳಿದಂತೆ ಮೊದಲ ಪಂದ್ಯದಲ್ಲಿ 96 ಎಸೆತಗಳಲ್ಲಿ 51 ರನ್, 2ನೇ ಪಂದ್ಯದಲ್ಲಿ 54 ಎಸೆತಗಳಲ್ಲಿ 55* ರನ್ ಹಾಗೂ 3ನೇ ಪಂದ್ಯದಲ್ಲಿ 114 ಎಸೆತಗಳಲ್ಲಿ 87* ರನ್ ಸಿಡಿಸಿದ್ದಾರೆ.

    ಧೋನಿ ಈ ಹಿಂದೆ 2 ಬಾರಿ ಹ್ಯಾಟ್ರಿಕ್ ಅರ್ಧ ಶತಕ ಗಳಿಸಿದ ಸಾಧನೆ ಮಾಡಿದ್ದು, 2011 ಇಂಗ್ಲೆಂಡ್, 2014 ನ್ಯೂಜಿಲೆಂಡ್, ಸರಣಿಯಲ್ಲಿ ಹ್ಯಾಟ್ರಿಕ್ ಅರ್ಧ ಶತಕ ಸಿಡಿಸಿದ್ದರು. ಉಳಿದಂತೆ 2018ರಲ್ಲಿ 13 ಇನ್ನಿಂಗ್ಸ್ ಗಳನ್ನು ಆಡಿದ್ದ ಧೋನಿ ಒಂದು ಅರ್ಧ ಶತಕ ಕೂಡ ಗಳಿಸಿರಲಿಲ್ಲ. ಅಲ್ಲದೇ 2018ರಲ್ಲಿ 20 ಏಕದಿನ ಪಂದ್ಯಗಳಿಂದ 275 ರನ್ ಮಾತ್ರ ಗಳಿಸಿದ್ದರು.

    ಟೀಂ ಇಂಡಿಯಾ ಪರ ಧೋನಿ 6ನೇ ಬಾರಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಹಿಂದೆ ಸಚಿನ್ 14 ಬಾರಿ, ಯುವರಾಜ್ ಸಿಂಗ್ 7 ಬಾರಿ ಹಾಗೂ ಸೌರವ್ ಗಂಗೂಲಿ, ಕೊಹ್ಲಿ ತಲಾ 6 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

    1 ಸಾವಿರ ರನ್: ಧೋನಿ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಆಸೀಸ್ ವಿರುದ್ಧ ಏಕದಿನ ಮಾದರಿಯಲ್ಲಿ 1 ಸಾವಿರ ರನ್ ಪೂರೈಸಿದರು. ಈ ಮೂಲಕ ಸಚಿನ್, ಕೊಹ್ಲಿ, ರೋಹಿತ್ ಶರ್ಮಾ ಬಳಿಕ ಈ ಸಾಧನೆ ಮಾಡಿದ ಭಾರತೀಯ ಆಟಗಾರ ಎನಿಸಿಕೊಂಡರು.

    ನಂ.4: ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ, ಧೋನಿ ಪರ ಬ್ಯಾಟ್ ಮಾಡಿದ್ದರು. ಈ ವೇಳೆ ಧೋನಿಗೆ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಅವಕಾಶ ನೀಡುವುದು ಉತ್ತಮ ಎಂದು ತಿಳಿಸಿದ್ದರು. ಈ ಕುರಿತು ಅರಿತ ನಾಯಕ ಕೊಹ್ಲಿ, ಧೋನಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಿದ್ದರು. ಒಟ್ಟಾರೆ 2018ರ ವೈಫಲ್ಯಗಳ ಧೋನಿ ಬ್ಯಾಟಿಂಗ್‍ನಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘ಶಾರ್ಟ್ ರನ್’ – ಧೋನಿ ತಪ್ಪಿಲ್ಲ: ಅಭಿಮಾನಿಯ ಡೌಟ್ ಕ್ಲಿಯರ್ ಮಾಡಿದ ಗಿಲ್‍ಕ್ರಿಸ್ಟ್

    ‘ಶಾರ್ಟ್ ರನ್’ – ಧೋನಿ ತಪ್ಪಿಲ್ಲ: ಅಭಿಮಾನಿಯ ಡೌಟ್ ಕ್ಲಿಯರ್ ಮಾಡಿದ ಗಿಲ್‍ಕ್ರಿಸ್ಟ್

    ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಜಯ ಪಡೆದು ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಆದರೆ ಪಂದ್ಯದ ವೇಳೆ ಧೋನಿ ರನ್ ಪೂರ್ಣಗೊಳಿಸದೇ ಇರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಆಸೀಸ್ ಮಾಜಿ ಆಟಗಾರ, ವಿಕೆಟ್ ಕೀಪರ್ ಗಿಲ್‍ಕ್ರಿಸ್ಟ್ ಘಟನೆಯಲ್ಲಿ ಧೋನಿ ನಿಯಮವನ್ನು ಉಲ್ಲಂಘಿಸಿಲ್ಲ ಎಂದು ತಿಳಿಸಿದ್ದಾರೆ.

    ಧೋನಿ ಶಾರ್ಟ್ ರನ್ ಕುರಿತು ಅಭಿಮಾನಿಯೊಬ್ಬರು ಟ್ವೀಟ್ ಮಾಡಿ ಗಿಲ್‍ಕ್ರಿಸ್ಟ್ ಅಭಿಪ್ರಾಯವನ್ನು ಕೇಳಿದ್ದು, ಈ ಟ್ವೀಟ್‍ಗೆ ಗಿಲ್‍ಕ್ರಿಸ್ಟ್ ಪ್ರತಿಕ್ರಿಯೆ ನೀಡಿದ್ದಾರೆ. ಧೋನಿ ನಿಯಮಗಳ ವಿರುದ್ಧ ಏನೂ ಮಾಡಿಲ್ಲ. ಇದು ಸಾಮಾನ್ಯವಾಗಿ ಕಂಡುಬಾರದ ಸಂದರ್ಭ ಎಂದು ಹೇಳಿ ಧನ್ಯವಾದ ತಿಳಿಸಿದ್ದಾರೆ.

    ಧೋನಿ ಶಾರ್ಟ್ ರನ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತು ಗಿಲ್‍ಕ್ರಿಸ್ಟ್ ಅವರನ್ನು ಪ್ರಶ್ನಿಸಿರುವ ದರ್ಶಕ್ ಪಟೇಲ್ ಎಂಬವರು, ಪಂದ್ಯದಲ್ಲಿ ಬ್ಯಾಟ್ಸ್ ಮನ್ 2ನೇ ರನ್ ಅಥವಾ ಅದಕ್ಕಿಂತ ಹೆಚ್ಚಿನ ರನ್ ಪಡೆಯುವ ಸಂದರ್ಭದಲ್ಲಿ ಶಾರ್ಟ್ ರನ್ ಸಂಭವಿಸಿದರೆ ಮಾತ್ರ ಅದನ್ನು ಪರಿಗಣಿಸಲಾಗುತ್ತದೆ. ಒಮ್ಮೆ ಬ್ಯಾಟ್ಸ್ ಮನ್ ಮೊದಲ ರನ್ ಪೂರ್ಣಗೊಳಿಸಿದ ವೇಳೆ ಬಳಿಕ ಫೀಲ್ಡಿಂಗ್ ತಂಡ ಏನನ್ನು ಮಾಡಬಾರದು ಎಂದು ನಿರ್ಧರಿಸಿದರೆ ಅದು ರನ್ ಆಗುತ್ತದೆ ಅಲ್ಲವೇ? ಇದನ್ನು ಬಗೆಹರಿಸಿ ಎಂದು ಗಿಲ್‍ಕ್ರಿಸ್ಟ್ ಅವರಲ್ಲಿ ಕೇಳಿದ್ದರು.

    ನಡೆದಿದ್ದೇನು?
    ಅಡಿಲೇಡ್ ಏಕದಿನ ಪಂದ್ಯದ 45ನೇ ಓವರಿನಲ್ಲಿ ಧೋನಿ ಒಂದು ರನ್ ಪಡೆದು ಮುಂದಿನ ಓವರಿಗೆ ಬ್ಯಾಟಿಂಗ್ ಕಾಯ್ದುಕೊಳ್ಳಲು ನಿರ್ಧರಿಸಿದ್ದರು. ಆದರೆ ಈ ವೇಳೆ ರನ್ ಪೂರ್ಣಗೊಳಿಸದೆ ಕೆಲವೇ ಇಂಚುಗಳ ಅಂತರದಲ್ಲಿ ಮರಳಿ ಹಿಂದಕ್ಕೆ ತೆರಳಿದ್ದರು. ಧೋನಿ ಅವರ ಈ ಎಡವಟ್ಟನ್ನು ಅಂಪೈರ್ ಹಾಗೂ ಎದುರಾಳಿ ತಂಡದ ಆಟಗಾರರು ಕೂಡ ಗಮನಿಸಿರಲಿಲ್ಲ.

    ಪಂದ್ಯದ ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಹಲವರು, ತಂಡಕ್ಕೆ 18 ಎಸೆತಗಳಲ್ಲಿ 25ರನ್ ಬೇಕಿತ್ತು. ಒಂದೊಮ್ಮೆ ಧೋನಿ ಬ್ಯಾಟಿಂಗ್ ಸ್ಟ್ರೈಕ್ ಪಡೆಯದಿದ್ದರೆ, ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

    https://twitter.com/ALL_IN_ONE_MAN/status/1085528833183236096

    ನಿಯಮ ಏನು ಹೇಳುತ್ತೆ: ಮೆಲ್ಬರ್ನ್ ಕ್ರಿಕೆಟ್ ಕ್ಲಬ್(ಎಂಸಿಸಿ) ಕ್ರಿಕೆಟ್ ನಿಯಮವಾಳಿಯ (18.4.1) ಪ್ರಕಾರ ಆಟಗಾರ 2ನೇ ರನ್ ಪಡೆಯುವ ಅಥವಾ ಚೆಂಡು ಬೌಂಡರಿ ಗೆರೆದಾಟಿದೆ ಎಂದು ಭಾವಿಸಿ ರನ್ ಶಾಟ್ ರನ್ ಮಾಡಿದರೆ ಮಾತ್ರ ಅದನ್ನು ಅಂಪೈರ್ ಪರಿಗಣಿಸಬಹುದಾಗಿದೆ. ಆದರೆ ಧೋನಿ ಹಾಗೂ ದಿನೇಶ್ ಕಾರ್ತಿಕ್ ಇಬ್ಬರು 2ನೇ ರನ್ ಪಡೆಯಲು ಯತ್ನಿಸದಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 11 ರನ್ ಗಳಿಸಿ ಸಚಿನ್ ದಾಖಲೆ ಮುರಿದ ವಿರಾಟ್ ಕೊಹ್ಲಿ

    11 ರನ್ ಗಳಿಸಿ ಸಚಿನ್ ದಾಖಲೆ ಮುರಿದ ವಿರಾಟ್ ಕೊಹ್ಲಿ

    ಸಿಡ್ನಿ: ನನ್ನ ದಾಖಲೆಗಳನ್ನು ಮುರಿಯುವ ಶಕ್ತಿ, ಸಾಮರ್ಥ್ಯವನ್ನು ವಿರಾಟ್ ಕೊಹ್ಲಿ ಹೊಂದಿದ್ದಾರೆ ಎಂಬ ಸಚಿನ್ ಮಾತಿನಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗ ಮತ್ತೊಂದು ದಾಖಲೆ ಮುರಿದಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಸಚಿನ್‍ರ ಮತ್ತೊಂದು ದಾಖಲೆಯನ್ನು ಮುರಿದಿರುವ ಕೊಹ್ಲಿ, ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ವೇಗವಾಗಿ 17 ಸಾವಿರ ರನ್ ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.

    ಕೊಹ್ಲಿ ಈ ಪಂದ್ಯದಲ್ಲಿ 23 ರನ್ ಗಳಿಸಿ ಪೆವಿಲಿಯನ್ ಸೇರಿ ನಿರಾಸೆ ಮೂಡಿಸಿದರು ಕೂಡ 11 ರನ್ ಗಳಿಸಿದ್ದ ವೇಳೆ ಟಿ20, ಏಕದಿನ ಹಾಗೂ ಟೆಸ್ಟ್ ಮೂರು ಮಾದರಿಗಳಲ್ಲಿ 19 ಸಾವಿರ ರನ್ ಪೂರ್ಣಗೊಳಿಸಿದ್ದರು. ಕೊಹ್ಲಿ ಈ ಸಾಧನೆಯನ್ನು 399 ಇನ್ನಿಂಗ್ಸ್ ಗಳಲ್ಲಿ ಮಾಡಿದ್ದು, ಸಚಿನ್ 432 ಇನ್ನಿಂಗ್ಸ್ ಗಳಲ್ಲಿ 19 ಸಾವಿರ ರನ್ ಹೊಡೆದಿದ್ದರು.

    ಉಳಿದಂತೆ ವೆಸ್ಟ್ ಇಂಡೀಸ್ ತಂಡದ ಲಾರಾ 433 ಇನ್ನಿಂಗ್ಸ್, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 444 ಇನ್ನಿಂಗ್ಸ್, ಸೌತ್ ಆಫ್ರಿಕಾದ ಜಾಕ್ ಕಾಲಿಸ್ 458 ಇನ್ನಿಂಗ್ಸ್ ಗಳಲ್ಲಿ 19 ಸಾವಿರ ಪೂರ್ಣಗೊಳಿಸಿ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕೊಹ್ಲಿ 2018 ರಲ್ಲಿ 2,735 ರನ್ ಗಳಿಸಿ ಟಾಪ್ ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದರು. ಅಲ್ಲದೇ 2019 ಆರಂಭದಲ್ಲೇ ಮಹತ್ವದ ದಾಖಲೆ ಮಾಡುವ ಮೂಲಕ ಶುಭಾರಂಭ ಮಾಡಿದ್ದಾರೆ.

    ಎಷ್ಟು ಇನ್ನಿಂಗ್ಸ್ ಗಳಲ್ಲಿ ಎಷ್ಟು ರನ್?
    15 ಸಾವಿರ ರನ್ (333 ಇನ್ನಿಂಗ್ಸ್)
    16 ಸಾವಿರ ರನ್ (350 ಇನ್ನಿಂಗ್ಸ್)
    17 ಸಾವಿರ ರನ್ (363 ಇನ್ನಿಂಗ್ಸ್)
    18 ಸಾವಿರ ರನ್ (382 ಇನ್ನಿಂಗ್ಸ್)
    19 ಸಾವಿರ ರನ್ (399 ಇನ್ನಿಂಗ್ಸ್)

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv