Tag: rumours

  • ಚಹಲ್-ಧನಶ್ರೀ ದಾಂಪತ್ಯ ಜೀವನದಲ್ಲಿ ಬಿರುಕು ರೂಮರ್ಸ್‍ಗೆ ಟ್ವಿಸ್ಟ್

    ಚಹಲ್-ಧನಶ್ರೀ ದಾಂಪತ್ಯ ಜೀವನದಲ್ಲಿ ಬಿರುಕು ರೂಮರ್ಸ್‍ಗೆ ಟ್ವಿಸ್ಟ್

    ಮುಂಬೈ: ಟೀಂ ಇಂಡಿಯಾದ ಸ್ಪಿನ್ನರ್ ಯಜುವೇಂದ್ರ ಚಹಲ್ ಮತ್ತು ನಟಿ ಧನಶ್ರೀ ನಡುವಿನ ದಾಂಪತ್ಯ ಜೀವನದಲ್ಲಿ ಒಡಕು ಪ್ರಕರಣಕ್ಕೆ ಅಂತ್ಯ ಹಾಡಲು ಧನಶ್ರೀ ಮುಂದಾಗಿದ್ದಾರೆ.

    ಕೆಲದಿನಗಳಿಂದ ಚಹಲ್ ಮತ್ತು ಧನಶ್ರೀ ನಡುವೆ ಒಡಕು ಮೂಡಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ಇದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರು ಹಾಕಿದ್ದ ಪೋಸ್ಟ್‌ಗಳು ಅನುಮಾನ ಮೂಡಿಸಿತ್ತು. ಇದನ್ನೂ ಓದಿ: ಪಟ್ಟವಿಲ್ಲದಿದ್ದರೂ ನಾನು ನಾಯಕನೇ: ಡೇವಿಡ್ ವಾರ್ನರ್

    ಇದೀಗ ಈ ಬಗ್ಗೆ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿರುವ ಧನಶ್ರೀ, ಕಳೆದ 14 ದಿನಗಳಿಂದ ತುಂಬಾ ಕಷ್ಟದ ದಿನವನ್ನು ಅನುಭವಿಸುತ್ತಿದ್ದೆ. ಡ್ಯಾನ್ಸ್ ಮಾಡುವಾಗ ಬಿದ್ದು ಕಾಲು ಮುರಿತಕ್ಕೊಳಗಾಗಿತ್ತು. ಆ ಬಳಿಕ ಚಿಕಿತ್ಸೆ ಪಡೆದು ಇದೀಗ ಚೇತರಿಕೆ ಕಾಣುತ್ತಿದೆ. ಈ ಕಷ್ಟದ ಸಮಯದಲ್ಲಿ ನನ್ನೊಂದಿಗೆ ನನ್ನ ಕುಟುಂಬದವರು, ಮನೆಯವರು ಮತ್ತು ನನ್ನ ಗಂಡ ಧೈರ್ಯ ತುಂಬಿದ್ದಾರೆ. ಇದೀಗ ಶಸ್ತ್ರಚಿಕಿತ್ಸೆ ಬಳಿಕ ಮತ್ತೆ ನೃತ್ಯದತ್ತ ಗಮನ ಹರಿಸಲು ಮುಂದಾಗುತ್ತೇನೆ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.

    ಈ ಪೋಸ್ಟ್‌ಗೆ ಚಹಲ್ ಕಾಮೆಂಟ್ ಮಾಡಿದ್ದು, ನನ್ನ ಮಹಿಳೆ ಎಂದು ಅಧಿಕೃತ ಖಾತೆಯಿಂದ ಕಾಮೆಂಟ್ ಹಾಕಲಾಗಿದೆ. ಈ ಮೂಲಕ ಕೆಲದಿನಗಳಿಂದ ಹರಿದಾಡುತ್ತಿದ್ದ ದಾಂಪತ್ಯ ಜೀವನದಲ್ಲಿ ಬಿರುಕು ಸುದ್ದಿಗೆ ಅಂತ್ಯ ಹಾಡಲು ಮುಂದಾಗಿದ್ದಾರೆ. ಧನಶ್ರೀ ಮಾಡಿರುವ ಪೋಸ್ಟ್‌ಗೆ ಕಾಮೆಂಟ್ ಮಾಡುವ ಮೂಲಕ ಚಹಲ್ ಕೂಡ ಈ ರೂಮರ್ಸ್‍ಗಳು ಸುಳ್ಳು ಎಂಬುದನ್ನು ನಿರೂಪಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನದಲ್ಲಿ ಬಿರುಕು – ಚಹಲ್‍ರನ್ನು ಕೈಬಿಟ್ರಾ ಧನಶ್ರೀ?

     

    View this post on Instagram

     

    A post shared by Dhanashree Verma (@dhanashree9)

    ಚಹಲ್ ಕೆಲದಿನಗಳ ಹಿಂದೆ ಹೊಸ ಜೀವನ ಆರಂಭ ಎಂದು ಪೋಸ್ಟ್ ಹಾಕಿಕೊಂಡಿದ್ದರು. ಅದೇ ಸಮಯಕ್ಕೆ ಧನಶ್ರೀ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿದ್ದ ಸರ್ ನೇಮ್ ಚಹಲ್ ಪದವನ್ನು ಕಿತ್ತುಹಾಕಿ ಧನಶ್ರೀ ವರ್ಮಾ ಎಂದು ಬದಲಾವಣೆ ಮಾಡಿಕೊಂಡಿದ್ದರು. ಇದನ್ನು ಗಮನಿಸಿದ ಅಭಿಮಾನಿಗಳು ಇವರಿಬ್ಬರ ದಾಂಪತ್ಯ ಜೀವನ ಮುರಿದುಬಿದ್ದಿದೆ ಎಂಬ ವದಂತಿ ಹರಿದಾಡಿತ್ತು.

    Live Tv
    [brid partner=56869869 player=32851 video=960834 autoplay=true]

  • ತಾಯಿಯಾಗ್ತಿದ್ದಾರಾ ಪ್ರಿಯಾಂಕಾ ಚೋಪ್ರಾ?

    ತಾಯಿಯಾಗ್ತಿದ್ದಾರಾ ಪ್ರಿಯಾಂಕಾ ಚೋಪ್ರಾ?

    ವಾಷಿಂಗ್ಟನ್: ಬಾಲಿವುಟ್ ನಟಿ ಪ್ರಿಯಾಂಕಾ ಚೋಪ್ರಾ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲಾ ಒಂದು ವಿಚಾರಗಳಿಗೆ ಸುದ್ದಿಯಾಗುತ್ತಿರುತ್ತಾರೆ. ಇದೀಗ ಅವರು ಮಗುವನ್ನು ಪಡೆಯುವ ನೀರಿಕ್ಷೆಯಲ್ಲಿದ್ದಾರೆ ಎನ್ನುವ ಗಾಳಿಸುದ್ದಿಯೊಂದು ಹರಿದಾಡುತ್ತಿದೆ.

    ನೆಟ್‌ಫ್ಲಿಕ್ಸ್‌ನಲ್ಲಿ ಜೋನಸ್ ಸಹೋದರರ ಹೊಸ ಕಾರ್ಯಕ್ರಮ ಆರಂಭವಾಗಿದೆ. ಜೋನಸ್ ಬ್ರದರ್ಸ್ ಫ್ಯಾಮಿಲಿ ರೋಸ್ಟ್‌ನಲ್ಲಿ ಹಾಡು, ನೃತ್ಯ, ಚೇಷ್ಟೆ ಎಲ್ಲವೂ ಇರುತ್ತದೆ. ಈ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಭಾಗಿಯಾಗಿದ್ದರು. ಮೈಕ್ ಹಿಡಿದು ಸ್ಟೇಜ್ ಮೇಲೆ ಬಂದ ಪ್ರಿಯಾಂಕಾ ಚೋಪ್ರಾ ತಮ್ಮ ಪತಿಯ ಕಾಲೆಳೆಯಲು ಶುರುಮಾಡಿದರು. ಅಲ್ಲದೇ ಕೆಲವೇ ಹೊತ್ತಿನಲ್ಲಿ ನಮ್ಮ ಕುಟುಂಬದಲ್ಲಿ ಮಕ್ಕಳಿಲ್ಲದ ಏಕೈಕ ದಂಪತಿ ಎಂದರೆ ನಾನು ಮತ್ತು ನಿಕ್. ಆದರೆ ಸದ್ಯದಲ್ಲೇ ನಾವು ಮಕ್ಕಳನ್ನು ಪಡೆಯಲಿದ್ದೇವೆ ಅಂತ ಅನೌನ್ಸ್ ಮಾಡಿ ಪತಿಗೆ ಶಾಕ್ ನೀಡಿದ್ದಾರೆ. ಈ ಮಾತುಗಳನ್ನು ಪ್ರಿಯಾಂಕಾ ಬಾಯಲ್ಲಿ ಕೇಳುತ್ತಿದ್ದಂತೆ ಒಂದು ಕ್ಷಣ ಗಾಬರಿಗೊಂಡ ನಿಕ್ ಇನ್ನೇನು ತನ್ನ ಖುಷಿ ವ್ಯಕ್ತಪಡಿಸಬೇಕು ಅನ್ನೋವಾಗ್ಲೇ, ಜೋರಾಗಿ ನಕ್ಕ ಪ್ರಿಯಾಂಕಾ ತಮಾಷೆಗಾಗಿ ಹೇಳಿದ್ದು ಎಂದು ಶಾಕ್ ನೀಡಿದ್ದಾರೆ. ಇದನ್ನೂ ಓದಿ: ಪತಿಯಿಂದ ವಿಚ್ಛೇದನ ಪಡೆಯುತ್ತಾರಾ ಪ್ರಿಯಾಂಕಾ ಚೋಪ್ರಾ?

    ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ವಯಸ್ಸಿನ ಅಂತರದಿಂದಾಗಿ ತೀವ್ರ ವಿವಾದಕ್ಕೆ ಒಳಪಟ್ಟಿದ್ದರು. ಇದರ ಬಗ್ಗೆಯೂ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಿಯಾಂಕಾ ವಯಸ್ಸಿನ ಅಂತರ ಎಷ್ಟು ಪರಿಣಾಮ ಬೀರಿದೆ ಅನ್ನೋದನ್ನು ಕೂಡ ಹೇಳಿದ್ದಾರೆ. 90ರ ದಶಕದಲ್ಲಿ ಪಾಪ್ ಸಂಸ್ಕೃತಿ ಹೇಗಿತ್ತು ಎನ್ನೋದು ಅರ್ಥ ಆಗೋದಿಲ್ಲ, ನಾನು ಅದನ್ನ ಅವನಿಗೆ ಕಲಿಸಬೇಕಾಯಿತು. ನನಗೆ ಹೊಸ ಜಮಾನದ ಟಿಕ್ ಟಾಕ್ ಹೇಗೆ ಬಳಸಬೇಕು ಅನ್ನೋದನ್ನ ನಿಕ್ ಕಲಿಸಿದ. ಅಲ್ಲದೆ ಒಬ್ಬ ಯಶಸ್ವಿ ನಟನಾ ವೃತ್ತಿ ಜೀವನ ಹೇಗಿರುತ್ತದೆ ಎಂದು ಅವರಿಗೆ ನಾನು ಕಲಿಸಿದೆ ಅಂತ ಹೇಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರ ಮೊಗದಲ್ಲಿ ಪ್ರಿಯಾಂಕ ನಗೂ ಮೂಡಿಸಿದರು. ಇದನ್ನೂ ಓದಿ: ಐಷಾರಾಮಿ ರೆಸ್ಟೋರೆಂಟ್ ಆರಂಭಿಸಿದ ಪ್ರಿಯಾಂಕಾ ಚೋಪ್ರಾ

    ಪ್ರಿಯಾಂಕಾ ಅವರು ಪಾಪ್ ಸ್ಟಾರ್ ನಿಕ್ ಜೋನಾಸ್ ಅವರನ್ನು 2018 ಡಿಸೆಂಬರ್ 1ರಂದು ವಿವಾಹವಾಗಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಪ್ರಿಯಾಂಕಾ ಅಮೆರಿಕದಲ್ಲಿ ನೆಲೆಸಿದ್ದಾರೆ. ಮದುವೆಯ ನಂತರ ಪ್ರಿಯಾಂಕಾ ಚೋಪ್ರಾ ಇನ್‍ಸ್ಟಾಗ್ರಾಮ್‍ನಲ್ಲಿ ತಮ್ಮ ಹೆಸರಿನ ಜೊತೆಗೆ ಜೋನಾಸ್ ಎಂದು ಸೇರಿಸಿಕೊಂಡಿದ್ದರು. ಇತ್ತೀಚೆಗೆ ಜೋನಾಸ್ ಹೆಸರನ್ನು ಸೋಶಿಯಲ್ ಮೀಡಿಯಾದಿಂದ ತೆಗೆದುಹಾಕಿದ್ದರು. ಇಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿಯೊಂದು ಬಾಲಿವುಡ್ ಅಂಗಳಲದಲ್ಲಿ ಹರಿದಾಡುತ್ತಿತ್ತು. ಈ ವೇಳೆ ನಿಕ್ ಜೋನಾಸ್ ಹಾಕಿರುವ ವೀಡಿಯೋಗೆ ಪ್ರಿಯಾಂಕಾ ನಿನ್ನ ತೋಳಿನಲ್ಲಿ ನಾನು ಸಾಯಬೇಕು ಎಂದು ಕಾಮೆಂಟ್ ಮಾಡುವ ಮೂಲಕವಾಗಿ ಗಾಸಿಪ್‍ಗೆ ತೆರೆ ಎಳೆದಿದ್ದಾರೆ.

  • ಬಾಬಾ ರಾಮ್‍ದೇವ್ ಅಪಘಾತದ ಬಗ್ಗೆ ವದಂತಿ ಶೇರ್ ಮಾಡೋ ಮುನ್ನ ಈ ಸುದ್ದಿ ಓದಿ

    ಬಾಬಾ ರಾಮ್‍ದೇವ್ ಅಪಘಾತದ ಬಗ್ಗೆ ವದಂತಿ ಶೇರ್ ಮಾಡೋ ಮುನ್ನ ಈ ಸುದ್ದಿ ಓದಿ

    ಹರಿದ್ವಾರ್: ಯೋಗ ಗುರು ಬಾಬಾ ರಾಮ್ ದೇವ್ ಮುಂಬೈ-ಪುಣೆ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದಾರೆ ಎಂಬ ಸುದ್ದಿಯೊಂದು ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅಲ್ಲದೆ ಅಪಘಾತ ಸಂಭವಿಸಿದೆ ಎಂದು ನಂಬಿಸಲು ಕೆಲವು ಚಿತ್ರಗಳನ್ನೂ ಕೂಡ ಹಾಕಲಾಗಿತ್ತು. ಆದ್ರೆ ಇದು ಸುಳ್ಳು ಸುದ್ದಿ. ನಾನು ಆರೋಗ್ಯವಾಗಿದ್ದೇನೆ. ಭಕ್ತರು ವದಂತಿಗಳಿಗೆ ಕಿವಿಗೊಡಬೇಡಿ ಅಂತಾ ಸ್ವತಃ ಬಾಬಾ ರಾಮ್‍ದೇವ್ ಸ್ಪಷ್ಟ ಪಡಿಸಿದ್ದಾರೆ.

    ಟ್ವೀಟ್ ಮೂಲಕ ವದಂತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಹರಿದ್ವಾರದಲ್ಲಿದ್ದು, ಸಾವಿರಾರು ಭಕ್ತರಿಗೆ ಯೋಗ ಶಿಬಿರ ನಡೆಸಿದೆ. ನಾನು ಸುರಕ್ಷಿತನಾಗಿದ್ದೇನೆ, ಆರೋಗ್ಯವಾಗಿದ್ದೇನೆ. ವದಂತಿಗಳನ್ನ ನಂಬಬೇಡಿ ಅಂತಾ ಭಕ್ತರಿಗೆ ಮನವಿ ಮಾಡಿದ್ದಾರೆ.

    ಈ ಬಗ್ಗೆ ಹೆದ್ದಾರಿ ನಿಯಂತ್ರಣ ಅಧಿಕಾರಿಗಳು ಕೂಡ ಪ್ರತಿಕ್ರಿಯಿಸಿದ್ದು, ಮುಂಬೈ-ಪುಣೆ ಹೆದ್ದಾರಿಯಲ್ಲಿ ಇಂತಹ ಯಾವುದೇ ಅಪಘಾತ ಸಂಭವಿಸಿಲ್ಲ. ಇದೊಂದು ಸುಳ್ಳು ಸುದ್ದಿ ಅಂತಾ ತಿಳಿಸಿದ್ದಾರೆ.

    ಬಾಬಾ ರಾಮ್‍ದೇವ್ ಅವರನ್ನ ಸ್ರೆಚ್ಚರ್‍ನಲ್ಲಿ ಕೊಂಡೊಯ್ಯಲಾಗುತ್ತಿರುವ ಫೋಟೋಗಳು 2011ನೇ ವರ್ಷದ್ದಾಗಿದೆ. ಈ ಹಿಂದೆ ಬಿಹಾರದಲ್ಲಿ ಬಾಬಾ ರಾಮ್ ದೇವ್ ಅಪಘಾತಕ್ಕೀಡಾಗಿದ್ದಾಗ ತಗೆಯಲಾದ ಈ ಫೋಟೋಗಳನ್ನು ಬಳಸಿಕೊಂಡು ಕಿಡಿಗೇಡಿಗಳು ಈ ವದಂತಿಯನ್ನ ಹರಡಿದ್ದಾರೆ.

    https://youtu.be/83aa2bwBgTw