Tag: Rumors of childrens thieves

  • ನಿಲ್ಲದ ಮಕ್ಕಳ ಕಳ್ಳರ ವದಂತಿ: ಬೆಂಗ್ಳೂರಿನಲ್ಲಿ ಮರಕ್ಕೆ ಕಟ್ಟಿ ಅಮಾಯಕನಿಗೆ ಥಳಿತ

    ನಿಲ್ಲದ ಮಕ್ಕಳ ಕಳ್ಳರ ವದಂತಿ: ಬೆಂಗ್ಳೂರಿನಲ್ಲಿ ಮರಕ್ಕೆ ಕಟ್ಟಿ ಅಮಾಯಕನಿಗೆ ಥಳಿತ

    ಬೆಂಗಳೂರು: ಮಕ್ಕಳ ಕಳ್ಳರ ವದಂತಿ ಬಗ್ಗೆ ಈಗಾಗಲೇ ಪೊಲೀಸ್ ಇಲಾಖೆ ಜಾಗೃತಿ ಮೂಡಿಸಿದೆ. ಆದರೂ ಸಿಲಿಕಾನ್ ಸಿಟಿಯಲ್ಲಿ ಮಕ್ಕಳ ಕಳ್ಳನೆಂದು ತಿಳಿದು ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿ ಥಳಿಸಲಾಗಿದೆ.

    ಕಾಡುಗೋಡಿ ಠಾಣಾ ವ್ಯಾಪ್ತಿಯ ಪಟಾಲಮ್ಮ ಲೇಔಟ್‍ನಲ್ಲಿ ಈ ಘಟನೆ ನಡೆದಿದ್ದು, ಬೇರೆ ಭಾಷೆಯಲ್ಲಿ ಮಾತನಾಡಿದ ವ್ಯಕ್ತಿಯ ಮೇಲೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಆತನನ್ನು ಮರಕ್ಕೆ ಕಟ್ಟಿ ಮನಬಂದಂತೆ ಥಳಿಸಿದ್ದಾರೆ.

    ಎಷ್ಟು ಜನ ಬಂದಿರುವಿರಿ? ಎಲ್ಲಿದೆ ನಿನ್ನ ಆಧಾರ್ ಕಾರ್ಡ್? ನಿಂಗೆ ತಿನ್ನೋಕೆ ಕೊಡಬೇಕಾ ಅಂತಾ ಕೇಳುತ್ತಲೇ ಕಪಾಳಕ್ಕೆ ಹೊಡೆದು ಅಮಾನವೀಯತೆ ಮೆರೆದಿದ್ದಾರೆ. ಕೆಲವರಂತು ಮರದ ತುಂಡಿನಿಂದ ಥಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv