Tag: Rules

  • ಕುರ್ತಾದ ಅಳತೆ ನೋಡಿ ವಿದ್ಯಾರ್ಥಿನಿಯರಿಗೆ ಕಾಲೇಜ್ ಒಳಗೆ ಎಂಟ್ರಿ- ವಿಡಿಯೋ ವೈರಲ್

    ಕುರ್ತಾದ ಅಳತೆ ನೋಡಿ ವಿದ್ಯಾರ್ಥಿನಿಯರಿಗೆ ಕಾಲೇಜ್ ಒಳಗೆ ಎಂಟ್ರಿ- ವಿಡಿಯೋ ವೈರಲ್

    ಹೈದರಾಬಾದ್: ಆಂಧ್ರಪ್ರದೇಶದ ರಾಜಧಾನಿಯಲ್ಲಿ ಪ್ರಸಿದ್ಧ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯರ ಡ್ರೆಸ್ ಕೋಡ್ ಭಾರೀ ಚರ್ಚೆಗೆ ಕಾರಣವಾಗಿದೆ. ಕಾಲೇಜಿನೊಳಗೆ ವಿದ್ಯಾರ್ಥಿನಿಯರ ಕುರ್ತಾದ ಉದ್ದವನ್ನು ಅಳತೆ ಮಾಡಿ ಬಳಿಕ ಅವರನ್ನು ಒಳಗೆ ಬಿಡುತ್ತಿರುವ ವಿಡಿಯೋ ಸದ್ಯ ಸಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಹೈದ್ರಾಬಾದ್‍ನ ಸೇಂಟ್ ಫ್ರಾನ್ಸಿಸ್ ಕಾಲೇಜಿನಲ್ಲಿರುವ ಈ ವಿಚಿತ್ರ ನಿಯಮ ಈಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಹೌದು. ಇಲ್ಲಿ ಕಾಲೇಜಿನೊಳಗೆ ಹೋಗುವ ಮೊದಲು ವಿದ್ಯಾರ್ಥಿನಿಯರ ಕುರ್ತಾದ ಉದ್ದವನ್ನು ಅಳತೆ ಮಾಡಿ, ಅದು ಮೊಣಕಾಲಿಗಿಂತ ಕೆಳಗಿದ್ದರೆ ಮಾತ್ರ ಅವರಿಗೆ ಒಳಗೆ ಪ್ರವೇಶ ನೀಡಲಾಗುತ್ತಿದೆ. ಈ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಕುರ್ತಾ ಅಥವಾ ಚೂಡಿದಾರವನ್ನು ಧರಿಸಿ ವಿದ್ಯಾರ್ಥಿನಿಯರು ಬರಬೇಕು ಎಂದು ಕಡ್ಡಾಯ ನಿಯಮ ಮಾಡಲಾಗಿದೆ.

    ಅಷ್ಟೇ ಅಲ್ಲದೆ ವಿದ್ಯಾರ್ಥಿನಿಯರ ಡ್ರೆಸ್ ಕೋಡ್ ಪರೀಕ್ಷಿಸಲು ಕಾಲೇಜಿನಲ್ಲಿ ಸಿಬ್ಬಂದಿಯನ್ನು ಕೂಡ ನೇಮಕ ಮಾಡಲಾಗಿದೆ. ವಿದ್ಯಾರ್ಥಿನಿಯರನ್ನು ಸಾಲಿನಲ್ಲಿ ನಿಲ್ಲಿಸಿ, ಒಬ್ಬರಾದ ಮೇಲೆ ಒಬ್ಬರ ಡ್ರೆಸ್ ಹಾಗೂ ಐಡಿ ಕಾರ್ಡ್ ನೋಡಿ ಮಹಿಳಾ ಸಿಬ್ಬಂದಿ ಕಾಲೇಜಿನ ಒಳಗೆ ಬಿಡುತ್ತಿದ್ದಾರೆ. ಆಗಸ್ಟ್ 1ರಿಂದಲೇ ಈ ನಿಯಮ ಜಾರಿಗೆ ಬಂದಿದೆ. ಆದರೆ ಈಗ ಕಾಲೇಜಿನ ಈ ನಿಯಮಕ್ಕೆ ವಿರೋಧ ವ್ಯಕ್ತವಾಗುತ್ತಿದೆ.

    ಕಾಲೇಜಿನ ಸಿಬ್ಬಂದಿ ವಿದ್ಯಾರ್ಥಿನಿಯರ ಡ್ರೆಸ್ ಅಳತೆ ಮಾಡಿ ಒಳಗೆ ಕಳುಹಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉದ್ದದ ಕುರ್ತಾ ಧರಿಸಿದವರಿಗೆ ಮಾತ್ರ ಕಾಲೇಜಿನ ಒಳಗೆ ಪ್ರವೇಶಿಸಲು ಅನುಮತಿ ನೀಡಿ, ಮೊಣಕಾಲಿನಿಂದ ಮೇಲೆ ಇರುವ ಕುರ್ತಾ ಧರಿಸಿರುವ ವಿದ್ಯಾರ್ಥಿನಿಯರನ್ನು ತಡೆದು ನಿಲ್ಲಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

    https://www.facebook.com/zanobia.tumbi/posts/2663054807072930

    ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪರ ವಿರೋಧ ಕಮೆಂಟ್‍ಗಳು ಬರುತ್ತಿದ್ದು, ಕಾಲೇಜಿನ ಕೆಲ ಮಾಜಿ ವಿದ್ಯಾರ್ಥಿಗಳು ಈ ನಿಯಮವನ್ನು ವಿರೋಧಿಸಿದ್ದಾರೆ. ವರ್ಷದ ಮಧ್ಯದಲ್ಲಿ ಹೇಗೆ ಇಂತಹ ನಿಯಮ ಜಾರಿಗೆ ತಂದಿದ್ದು ಯಾಕೆ? ಪ್ರತಿಷ್ಠಿತ ಕಾಲೇಜಿನಲ್ಲಿ ಈ ರೀತಿ ನಿಯಮ ಮಾಡುವುದು ತಪ್ಪು ಎಂದು ಕಮೆಂಟ್ ಮಾಡಿದ್ದಾರೆ. ಕೆಲವರು ಇದು ಒಳ್ಳೆಯ ವಿಚಾರ, ಹೀಗೆ ಉದ್ದದ ಕುರ್ತಾ ಧರಿಸುವುದರಿಂದ ಒಳ್ಳೆಯ ಮದುವೆ ಸಂಬಂಧ ಬರುತ್ತದೆ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಚಿಕ್ಕ ಕುರ್ತಾ ಧರಿಸಿದರೆ ತೊಡೆ ಕಾಣುತ್ತದೆ. ಅದು ಯುವಕರನ್ನು ಆಕರ್ಷಿಸುತ್ತದೆ, ಆದ್ದರಿಂದ ಉದ್ದದ ಕುರ್ತಾ ಧರಿಸುವ ನಿಯಮ ಮಾಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.

    ಈ ನಿಯಮ ವಿರೋಧಿಸಿ ಇಂದು ಕಾಲೇಜು ವಿದ್ಯಾರ್ಥಿನಿಯರು ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ಅಲ್ಲದೆ ಈ ರೀತಿ ನಿಯಮದಿಂದ ನಮಗೆ ಹಿಂಸೆ ಆಗುತ್ತಿದೆ. ಪ್ರತಿದಿನ ಕಾಲೇಜಿಗೆ ಬಂದಾಗಲೂ ಹೀಗೆ ಡ್ರೆಸ್ ನೋಡಿ ಒಳಗೆ ಬಿಡುವುದು ಕಿರುಕುಳ ನೀಡುತ್ತಿರುವಂತೆ ಅನಿಸುತ್ತದೆ ಎಂದು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕಡ್ಡಾಯ ಮಾಡಿರೋದಕ್ಕೆ ಡಮ್ಮಿ ಹೆಲ್ಮೆಟ್ ಮಾರಾಟ

    ಕಡ್ಡಾಯ ಮಾಡಿರೋದಕ್ಕೆ ಡಮ್ಮಿ ಹೆಲ್ಮೆಟ್ ಮಾರಾಟ

    ರಾಮನಗರ: ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಆದರೆ ಜಿಲ್ಲೆಯಲ್ಲಿ ಕಳಪೆ ಗುಣಮಟ್ಟದ ಹೆಲ್ಮೆಟ್‍ಗಳದ್ದೇ ಕಾರುಬಾರಾಗಿದೆ. ಜೀವರಕ್ಷಣೆ ಮಾಡಬೇಕಾದ ಹೆಲ್ಮೆಟ್‍ಗಳ ಬದಲಿಗೆ ರಸ್ತೆಯಲ್ಲೆಲ್ಲ ಕಳಪೆ ಗುಣಮಟ್ಟದ್ದೇ ಸೌಂಡ್ ಆಗಿದೆ. ಸಾವಿರ ರೂ. ಬದಲಿಗೆ ನೂರು ಇನ್ನೂರಕ್ಕೆ ಹೆಲ್ಮೆಟ್ ಸಿಗ್ತವೆ ಎಂದು ಸಾರ್ವಜನಿಕರು ಸಹ ಡಮ್ಮಿ ಹೆಲ್ಮೆಟ್‍ಗಳಿಗೆ ಮೊರೆ ಹೋಗಿದ್ದಾರೆ.

    ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಆದರೆ ಹೆಲ್ಮೆಟ್ ಕಡ್ಡಾಯಗೊಳಿಸುತ್ತಿದ್ದಂತೆ ಜಿಲ್ಲೆಯಲ್ಲಿ ಡಮ್ಮಿ ಹೆಲ್ಮೆಟ್‍ಗಳ ಮಾರಾಟ ಜೋರಾಗಿಯೇ ನಡೆಯುತ್ತಿದೆ. ಸಾವಿರಾರು ರೂಪಾಯಿ ಕೊಟ್ಟು ಹೆಲ್ಮೆಟ್ ಖರೀದಿಸಿ ಜೀವ ಹಾನಿ ತಪ್ಪಿಸಿಕೊಳ್ಳುವ ಬದಲಿಗೆ ನೂರೋ ಇನ್ನೋರೋ ರೂ. ಕೊಟ್ಟು ಡಮ್ಮಿ ಹೆಲ್ಮೆಟ್ ಖರೀದಿಗೆ ಮುಂದಾಗಿದ್ದಾರೆ. ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿಯೇ ಹೆಲ್ಮೆಟ್ ಮಾರಾಟ ಮಾಡಲಾಗುತ್ತಿದೆ. ಆದರೆ ಹೆಲ್ಮೆಟ್‍ಗಳು ಕಳಪೆ ಗುಣಮಟ್ಟದ್ದಾಗಿದ್ದು, ಜೀವಹಾನಿ ತಪ್ಪಿಸುವಷ್ಟು ಗುಣಮಟ್ಟದ್ದಾಗಿಲ್ಲ. ಅಲ್ಲದೇ ಐಎಸ್‍ಐ ಮಾರ್ಕ್ ಕೂಡ ನಕಲಿಯದ್ದು ಎಂಬ ಅನುಮಾನಗಳು ಸಾರ್ವಜನಿಕರಲ್ಲಿ ಮೂಡಿದ್ರೆ, ಹೆಲ್ಮೆಟ್ ಮಾರಾಟಗಾರರು ತಾವು ಉತ್ತಮ ಗುಣಮಟ್ಟದ ಹೆಲ್ಮೆಟ್‍ಗಳನ್ನೇ ಮಾರಾಟ ಮಾಡುತ್ತಿರುವುದಾಗಿ ವಾದ ಮಾಡುತ್ತಿದ್ದಾರೆ.

    ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ್ರೆ, ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸಿದ್ರೆ, ಮದ್ಯಪಾನ ಮಾಡಿ ವಾಹನ ಓಡಿಸಿದ್ರೆ ನೂತನ ನಿಯಮದ ಪ್ರಕಾರ ಅಧಿಕ ದಂಡ ಫಿಕ್ಸ್ ಆಗಿದೆ. ಆದರು ಕೂಡ ವಾಹನ ಸವಾರರು ತಮ್ಮ ಹಳೆ ಚಾಳಿಯನ್ನು ಮಾತ್ರ ನಿಲ್ಲಿಸಿಲ್ಲ. ಹೆಲ್ಮೆಟ್ ಧರಿಸದೇ, ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸುತ್ತಿದ್ದಾರೆ. ಇದಕ್ಕೆಲ್ಲಾ ಬ್ರೇಕ್ ಹಾಕುವ ಸಲುವಾಗಿ ರಾಮನಗರ ಎಸ್‍ಪಿ ಅನೂಪ್ ಶೆಟ್ಟಿಯವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು ಪೊಲೀಸ್ ಇಲಾಖೆಯ ಅಧಿಕಾರಿಗಳು ಸಹ ಸ್ಟ್ರಿಕ್ಟ್ ಆಗಿ ಕೆಲಸ ನಿರ್ವಹಿಸಲು ಕ್ರಮ ಕೈಗೊಂಡಿದ್ದಾರೆ.

    ಹೆಲ್ಮೆಟ್ ಕಡ್ಡಾಯವಾಗಿದ್ದು ವಾಹನ ಸವಾರರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ, ಜನರು ಮೊದಲು ಹೆಲ್ಮೆಟ್ ಹಾಕಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಲಿ. ಆ ನಂತರ ಡಮ್ಮಿ ಹೆಲ್ಮೆಟ್‍ಗಳ ಹಾವಳಿ ಹಾಗೂ ನಕಲಿ ಐಎಸ್‍ಐ ಮಾರ್ಕ್ ಹೊಂದಿರುವ ಕಳಪೆ ಗುಣಮಟ್ಟದ ಹೆಲ್ಮೆಟ್‍ಗಳ ಬಗ್ಗೆ ಸದ್ಯದಲ್ಲೇ ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲದೇ ಜನರು ಕೂಡ ನಿಯಮಗಳು ರೂಪಿತವಾಗಿರುವುದು ಯಾರಿಗೆ ಎಂಬುದನ್ನು ಅರ್ಥ ಮಾಡಿಕೊಂಡು ಹೆಲ್ಮೆಟ್ ಧರಿಸುವಂತೆ ಮನವಿ ಮಾಡಿದ್ದಾರೆ.

  • ರೂಲ್ಸ್ ಕೇಳೋಕೆ ಹೋದ ಮಹಿಳೆಯ ಮೇಲೆ ಟ್ರಾಫಿಕ್ ಪೊಲೀಸರಿಂದ ಹಲ್ಲೆ

    ರೂಲ್ಸ್ ಕೇಳೋಕೆ ಹೋದ ಮಹಿಳೆಯ ಮೇಲೆ ಟ್ರಾಫಿಕ್ ಪೊಲೀಸರಿಂದ ಹಲ್ಲೆ

    ಬೆಂಗಳೂರು: ಟ್ರಾಫಿಕ್ ರೂಲ್ಸ್ ಕೇಳೋಕೆ ಹೋದ ಮಹಿಳೆಯ ಮೇಲೆ ಬೆಂಗಳೂರು ಟ್ರಾಫಿಕ್ ಪೊಲೀಸರು ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ನಡೆದಿದೆ.

    ಪಿಎಸ್‍ಐ ನಂಜುಂಡ ಹಾಗೂ ಮಹಿಳಾ ಟ್ರಾಫಿಕ್ ಪೊಲೀಸ್ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಸೆಪ್ಟೆಂಬರ್ ಒಂದರಿಂದ ಕೆಲವೊಂದು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ ದಂಡದ ಪ್ರಮಾಣ ಹೆಚ್ಚಾಗಲಿದೆ. ಆದರೆ ಇಲ್ಲಿನ ಪೊಲೀಸರು ಮಾತ್ರ ಈಗಲೇ ದಂಡವನ್ನು ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.

    ಅಗಸ್ಟ್‍ನಲ್ಲಿಯೇ ಹೆಚ್ಚು ದಂಡ ಹಾಕಿದಕ್ಕೆ ದೇವಕಿ ಎಂಬವರು ಪಿಎಸ್‍ಐ ನಂಜುಂಡ ಎಂಬವರಿಗೆ ಪ್ರಶ್ನಿಸಿದ್ದಾರೆ. ಈ ವೇಳೆ ಪಿಎಸ್‍ಐ ನಂಜುಂಡ ನೇರವಾಗಿ ಲೇಡಿ ಪೊಲೀಸ್‍ಗೆ ಅವಳನ್ನು ಸ್ಟೇಷನ್‍ಗೆ ಎಳೆದುಕೊಂಡು ಬಾ ಎಂದು ಸೂಚನೆ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೆ ಮಹಿಳಾ ಪೊಲೀಸ್ ದೇವಕಿ ಮೇಲೆ ಪರಚಿ ಹಲ್ಲೆ ಮಾಡಿದ್ದಾರೆ.

    ಈ ವೇಳೆ ಪೊಲೀಸ್ ಹಾಗೂ ಮಹಿಳೆಯ ನಡುವೆ ಮಾತಿಗೆ ಮಾತು ಬೆಳೆದಿದೆ. ಬಳಿಕ ಇಬ್ಬರು ಹಲ್ಲೆ ಮಾಡಿದ್ದಾರೆ ಎಂದು ದೇವಕಿ ಆರೋಪಿಸುತ್ತಿದ್ದಾರೆ. ಪೊಲೀಸರ ಈ ವರ್ತನೆಗೆ ನಾಗರಿಕರು ಕಿಡಿಕಾರಿದ್ದು, ಇದೇನಾ ನಿಮ್ಮ ಕಾರ್ಯವೈಖರಿ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

    https://www.youtube.com/watch?v=Qq-UugAP79E

  • ರಾಮನಗರದಲ್ಲಿ ಹೆಲ್ಮೆಟ್ ಕಡ್ಡಾಯ – ತಪ್ಪಿದ್ರೆ ಹೊಸ ರೂಲ್ಸ್ ಪ್ರಕಾರ ದಂಡ

    ರಾಮನಗರದಲ್ಲಿ ಹೆಲ್ಮೆಟ್ ಕಡ್ಡಾಯ – ತಪ್ಪಿದ್ರೆ ಹೊಸ ರೂಲ್ಸ್ ಪ್ರಕಾರ ದಂಡ

    ರಾಮನಗರ: ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ದಿನನಿತ್ಯ ಒಂದಲ್ಲ ಒಂದು ಅಪಘಾತಗಳು ನಡೆದು ಪ್ರಾಣಹಾನಿಯಾಗುತ್ತಲೇ ಇದೆ. ಆದರೆ ಇದೀಗ ಅಪಘಾತಗಳ ತಡೆ ಹಾಗೂ ಪ್ರಾಣಹಾನಿ ತಪ್ಪಿಸುವ ನಿಟ್ಟಿನಲ್ಲಿ ರಾಮನಗರ ಪೊಲೀಸ್ ಇಲಾಖೆ ಹೆಲ್ಮೆಟ್ ಕಡ್ಡಾಯಕ್ಕೆ ಮುಂದಾಗಿದೆ. ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯವಾಗಿದ್ದು, ರೂಲ್ಸ್ ಬ್ರೇಕ್ ಮಾಡಿದವರಿಗೆ ಹೊಸ ರೂಲ್ಸ್ ಪ್ರಕಾರ ದಂಡ ವಿಧಿಸಲಾಗುತ್ತದೆ.

    ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಬೈಕ್ ಸವಾರರು ಮಾತ್ರವಲ್ಲ ಹಿಂಬದಿ ಸವಾರರು ಹೆಲ್ಮೆಟ್ ಧರಿಸಿ ಸಂಚಾರ ನಡೆಸಬೇಕಿದೆ. ನೂತನ ಎಸ್‍ಪಿಯಾಗಿ ಅಧಿಕಾರ ವಹಿಸಿಕೊಂಡಿರುವ ಅನೂಪ್ ಶೆಟ್ಟಿಯವರು ಸಂಚಾರಿ ನಿಯಮಗಳ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಹೀಗಾಗಿ ಈವರೆಗೂ ಸಂಚಾರಿ ನಿಯಮಗಳನ್ನ ಗಾಳಿಗೆ ತೂರಿದ್ದ ವಾಹನ ಸವಾರರಿಗೆ ಚಾಟಿ ಬೀಸಲು ದಂಡಾಸ್ತ್ರ ಪ್ರಯೋಗಿಸಿದ್ದಾರೆ. ಇದೀಗ ಕೊಪ್ಪಳದಲ್ಲಿ ಸಾಕಷ್ಟು ಅಕ್ರಮಗಳಿಗೆ ಬ್ರೇಕ್ ಹಾಕಿ ಉತ್ತಮ ಹೆಸರು ಗಳಿಸಿರುವ ಎಸ್‍ಪಿ ಅನೂಪ್ ಶೆಟ್ಟಿಯವರು ರಾಮನಗರದಲ್ಲೂ ಸಹ ಸಂಚಾರಿ ನಿಯಮಗಳ ಪಾಲನೆಗೆ ಖಡಕ್ ಆದೇಶ ನೀಡಿದ್ದಾರೆ. ಇದನ್ನೂ ಓದಿ:  ವಾಹನ ತಿದ್ದುಪಡಿ ಮಸೂದೆ ಪಾಸ್- ಸಂಚಾರ ನಿಯಮ ಉಲ್ಲಂಘನೆಗೆ ಭಾರೀ ದಂಡ

    ಹೆಲ್ಮೆಟ್ ಕಡ್ಡಾಯವಾಗಿದ್ದರೂ ಸಹ ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯವಾಗಿರಲಿಲ್ಲ. ರೂಲ್ಸ್ ಬ್ರೇಕ್ ಮಾಡಿಕೊಂಡು ವಾಹನ ಸವಾರರು ಓಡಾಟ ನಡೆಸುತ್ತಿದ್ದರು. ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ ಶೇ.40 ರಷ್ಟು ಅಪಘಾತ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ಪ್ರಾಣಹಾನಿ ತಪ್ಪಿಸುವ ದೃಷ್ಟಿಯಿಂದ ಹಾಗೂ ಸಂಚಾರಿ ನಿಯಮಗಳ ಪಾಲನೆಗಾಗಿ ಜಿಲ್ಲೆಯಾದ್ಯಂತ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ ಎಂದು ಎಸ್‍ಪಿ ಅನೂಪ್ ಎ.ಶೆಟ್ಟಿ ಅವರು ತಿಳಿಸಿದ್ದಾರೆ.

    ರಾಮನಗರ ಜಿಲ್ಲೆಯಾದ್ಯಂತ ಕಳೆದ 2013 ರಿಂದ ಇಲ್ಲಿಯ ತನಕ ರಸ್ತೆ ಅಪಘಾತದಲ್ಲಿ 300ಕ್ಕೂ ಹೆಚ್ಚು ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಅದರಲ್ಲೂ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಭವಿಸುವ ಅಪಘಾತಗಳು ಲೆಕ್ಕವೇ ಇಲ್ಲದಂತಾಗಿದೆ. ಹೀಗಾಗಿ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿ ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ಜಿಲ್ಲೆಯಾದ್ಯಂತ ಹೆಲ್ಮೆಟ್ ಕಡ್ಡಾಯದ ಬಗ್ಗೆ ಜಾಗೃತಿ ಮೂಡಿಸಲಾಗಿದೆ.

    ಸಂಚಾರಿ ನಿಯಮಗಳ ಪಾಲನೆ ಮಾಡದಿದ್ದಲ್ಲಿ ಹೊಸ ನಿಯಮದ ಪ್ರಕಾರ ದಂಡ ಪಾವತಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ಕೂಡ ನೀಡಲಾಗಿದೆ. ಈಗಾಗಲೇ ಜಿಲ್ಲೆಯ ಸಂಚಾರಿ ಠಾಣೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ರಸ್ತೆಗಿಳಿದು ಕಾರ್ಯನಿರ್ವಹಿಸುವ ಮುನ್ನ ತಮ್ಮಲ್ಲಿನ ಹಣದ ಲೆಕ್ಕ ಕೊಡುವಂತೆ ಆಯಾ ಠಾಣೆಯ ಇನ್ಸ್‌ಪೆಕ್ಟರ್‌ಗಳು ಸೂಚನೆ ನೀಡಲಾಗಿದೆ. ಈ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತಿದ್ದಾರೆ. ನೂತನ ಎಸ್‍ಪಿ ಅವರ ಕಾರ್ಯ ವೈಖರಿಯನ್ನ ಕೇಳಿ ತಿಳಿದವರು ಹೆಲ್ಮೆಟ್ ಕಡ್ಡಾಯಕ್ಕೆ ಸ್ವಾಗತ ಕೋರಿದ್ದಾರೆ ಎಂದು ಬೈಕ್ ಸವಾರರು ಹೇಳುತ್ತಿದ್ದಾರೆ.

  • ಮಾಣಿಕ್ ಷಾ ಮೈದಾನದಲ್ಲಿ ಸೆಲ್ಫಿ, ಕಪ್ಪು ಬಟ್ಟೆಗೆ ನೋ ಎಂಟ್ರಿ

    ಮಾಣಿಕ್ ಷಾ ಮೈದಾನದಲ್ಲಿ ಸೆಲ್ಫಿ, ಕಪ್ಪು ಬಟ್ಟೆಗೆ ನೋ ಎಂಟ್ರಿ

    ಬೆಂಗಳೂರು: ಆಗಸ್ಟ್ 15ರಂದು 73 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತದೆ. ಮೈದಾನದಲ್ಲಿ ಶಾಮಿಯಾನ, ವೇದಿಕೆ ನಿರ್ಮಾಣ, ಬ್ಯಾರಿಕೇಡ್ ಮತ್ತು ಆಸನಗಳ ವ್ಯವಸ್ಥೆಯಾಗಿದೆ. ಹಾಗೆಯೇ ಈ ಬಾರಿ ಹೊಸ ನಿಯಮಗಳನ್ನು ಕೂಡ ಮಾಡಲಾಗಿದ್ದು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗುವವರು ಇದನ್ನೂ ಪಾಲಿಸಬೇಕಿದೆ.

    ಈ ಬಗ್ಗೆ ಬಿಬಿಎಂಪಿ ಕಮೀಷನರ್, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಜಂಟಿ ಸುದ್ದಿಗೋಷ್ಠಿ ನಡೆಸಿ ಆ.15ರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಆ.15ರಂದು ಮುಖ್ಯಮಂತ್ರಿಗಳು ಬೆಳಿಗ್ಗೆ 8.58ಕ್ಕೆ ಮೈದಾನ ಪ್ರವೇಶಿಸಲಿದ್ದು, 9 ಗಂಟೆ ಸರಿಯಾಗಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಆಗ ಪುಷ್ಪವೃಷ್ಠಿ ಮಾಡಿ 3 ಸೇನಾದಳದಿಂದ ಗೌರವ ಸ್ವೀಕರಿಸಲಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದರು.

    ಇಂದು ಬೆಂಗಳೂರು ಪೊಲೀಸ್ ಕಮೀಷನರ್ ಹಾಗೂ ಬಿಬಿಎಂಪಿ ಕಮೀಷನರ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ತಾಲೀಮು ನಡೆಸಿದರು. ಈ ವೇಳೆ ಪರೇಡ್ ಮಾಡುವ ತಂಡಗಳು ಶಿಸ್ತು ಕಾಯ್ದುಕೊಳ್ಳುವಂತೆ ಪೊಲೀಸ್ ಕಮೀಷನರ್ ಕ್ಲಾಸ್ ತೆಗೆದುಕೊಂಡರು. ಸ್ವಾತಂತ್ರ್ಯ ದಿನಾಚರಣೆ ವೇಳೆ ಪಥಸಂಚಲದಲ್ಲಿ  ಕೆಎಸ್‌ಆರ್‌ಪಿ, ಸ್ಕೌಟ್ಸ್, ಗೈಡ್ಸ್, ಎನ್‍ಸಿಸಿ, ಸೇವಾದಳ ಹಾಗೂ ಶಾಲಾ ಮಕ್ಕಳನ್ನು ಒಳಗೊಂಡ ಕವಾಯತು ಮತ್ತು ಬ್ಯಾಂಡಿನ 34 ತುಕಡಿಗಳಲ್ಲಿ ಸುಮಾರು 1130 ಮಂದಿ ಭಾಗವಹಿಸಲಿದ್ದಾರೆ.

    ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 1250 ಶಾಲಾ ಮಕ್ಕಳು ಭಾಗಿಯಾಗಲಿದ್ದು, ನಾಡಗೀತೆ, ರೈತ ಗೀತೆ, ಭಾರತಾಂಬೆಯ ಮಡಿಲಿನ ಮಕ್ಕಳು, ಜಲಿಯನ್ ವಾಲಾಬಾಗ್ ಹತ್ಯಾಕಾಂಡ 1919, ಜಿಮ್ನಾಸ್ಟಿಕ್ಸ್, ಕಳರಿಪಯಟ್ಟು ಕಾರ್ಯಕ್ರಮ ಪ್ರದರ್ಶನ ನೀಡಲಿದ್ದಾರೆ. ಜೊತೆಗೆ ಈ ಬಾರಿ ಹೊಸ ನಿಯಮಗಳನ್ನು ಕೂಡ ಮಾಡಲಾಗಿದೆ.

    ಏನಿದು ನಿಯಮ?
    – ಮೈದಾನದ ಒಳಗಡೆ ಸೆಲ್ಫಿ ತೆಗೆಯಲು ಅವಕಾಶ ಇಲ್ಲ
    – ಕಪ್ಪು ಬಟ್ಟೆ ಹಾಕಿದ್ರೆ ನೋ ಎಂಟ್ರಿ
    – 1 ಗಂಟೆ ಮುಂಚಿತವಾಗಿ ಕಾರ್ಯಕ್ರಮಕ್ಕೆ ಆಗಮಿಸಬೇಕು
    – ಗುರುತಿನ ಚೀಟಿ ಇದ್ರೆ ಮಾತ್ರ ಪ್ರವೇಶ
    – ಶೌಚಾಲಯ, ನೀರಿನ ವ್ಯವಸ್ಥೆ ಇದೆ
    – ಅನಗತ್ಯ ಲಗೇಜ್ ತರುವಂತಿಲ್ಲ
    – ಸಿಗರೇಟ್, ಬೆಂಕಿ ಪೆಟ್ಟಿಗೆ, ಕರಪತ್ರಗಳು, ಬಣ್ಣದ ದ್ರಾವಣ, ವಿಡಿಯೋ ಮತ್ತು ಸ್ಡಿಲ್ ಕ್ಯಾಮರಾ, ನೀರಿನ ಬಾಟಲ್, ಕ್ಯಾನ್, ಶಸ್ತ್ರಾಸ್ತ್ರ, ಹರಿತವಾದ ವಸ್ತು, ಚಾಕು – ಚೂರಿ, ಕಪ್ಪು ಕರವಸ್ತ್ರಗಳು, ತಿಂಡಿ, ಮದ್ಯದ ಬಾಟಲ್, ಮಾದಕ ವಸ್ತುಗಳು, ಬಾವುಟ, ಪಟಾಕಿ ಮತ್ತು ಸ್ಫೋಟಕ ವಸ್ತುಗಳು ತರುವಂತಿಲ್ಲ.

    ಮೈದಾನದಲ್ಲಿ 13,200 ಆಸನಗಳ ವ್ಯವಸ್ಥೆಯಿದ್ದು, ಇಡೀ ಕಾರ್ಯಕ್ರಮ ಮುಗಿಯುವವರೆಗೂ ಕಬ್ಬನ್ ರಸ್ತೆ ವಾಹನ ಸಂಚಾರ ಸ್ಥಗಿತಗೊಳ್ಳಲಿದೆ. ಅಲ್ಲದೆ ಮೈದಾನದ ಸುತ್ತ ಪೊಲೀಸರ ಸರ್ಪಗಾವಲಿನ ಜೊತೆಗೆ 50 ಸಿಸಿಟಿವಿ ಅಳವಡಿಕೆಯಾಗಿದೆ.

  • ನೋ ಹೆಲ್ಮೆಟ್, ನೋ ಪೆಟ್ರೋಲ್- ಸಿಲಿಕಾನ್ ಸಿಟಿಯಲ್ಲಿ ಹೊಸ ರೂಲ್ಸ್

    ನೋ ಹೆಲ್ಮೆಟ್, ನೋ ಪೆಟ್ರೋಲ್- ಸಿಲಿಕಾನ್ ಸಿಟಿಯಲ್ಲಿ ಹೊಸ ರೂಲ್ಸ್

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೋ ಹೆಲ್ಮೆಟ್, ನೋ ಪೆಟ್ರೋಲ್ ಎಂಬ ಹೊಸ ರೂಲ್ಸ್ ಜಾರಿಗೆ ತರಲು ಸಿದ್ಧತೆ ನಡೆದಿದೆ.

    ಈ ವಿಚಾರವಾಗಿ ಟ್ರಾಫಿಕ್ ಪೊಲೀಸ್ ಕಮಿಷನರ್, ಪೆಟ್ರೋಲ್ ಬಂಕ್ ಮಾಲೀಕರ ಜೊತೆ ಮಾತುಕತೆ ನಡೆಸಿದ್ದಾರೆ. ಶನಿವಾರ ಮತ್ತೊಮ್ಮೆ ಈ ವಿಚಾರವಾಗಿ ಮಾತುಕತೆ ನಡೆಸಿ ಎಲ್ಲ ಅಂದುಕೊಂಡಂತೆ ಆದರೆ ಮುಂದಿನ ಸೋಮವಾರದಿಂದಲೇ ಈ ಹೊಸ ನಿಯಮ ಜಾರಿಯಾಗಲಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಈ ನಿಯಮ ಈಗಾಗಲೇ ಕೇರಳ, ಆಂಧ್ರ ಸೇರಿದಂತೆ ದೇಶದ ವಿವಿಧೆಡೆ ಜಾರಿಯಾಗಿದೆ. ಇದರ ಪ್ರಕಾರ ನಿಮ್ಮ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಸಬೇಕು ಎಂದರೆ ಹೆಲ್ಮೆಟ್ ಇರಲೇಬೇಕು. ಒಂದು ವೇಳೆ ನಿಮ್ಮ ಬಳಿ ಹೆಲ್ಮೆಟ್ ಇಲ್ಲ ಎಂದರೆ ಬಂಕ್‍ನವರು ನಿಮ್ಮ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕುವುದಿಲ್ಲ. ಬೆಂಗಳೂರಲ್ಲಿ ಬೈಕ್ ಅಪಘಾತದಿಂದ ಹೆಚ್ಚುತ್ತಿರುವ ಸಾವು-ನೋವು ತಡೆಗೆ ಈ ಹೊಸ ನಿಯಮವನ್ನು ತರಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

    ಕಳೆದ ವರ್ಷ ಬೈಕ್ ಅಪಘಾತಗಳಲ್ಲಿ ಸುಮಾರು 150 ಮಂದಿ ದುರ್ಮರಣಕ್ಕೀಡಾಗಿದ್ದರು. ದಂಡ ವಿಧಿಸುತ್ತಿದರೂ ಹೆಲ್ಮೆಟ್ ಬಳಸದೇ ವಾಹನ ಚಲಾಯಿಸುವವರ ಸಂಖ್ಯೆ ಕಡಿಮೆಯಾಗದಿದ್ದರಿಂದ, ಈ ನೂತನ ನಿಯಮ ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ.

  • ಗಲ್ಲಿ ಕ್ರಿಕೆಟ್ ನಿಯಮಗಳು ಐಸಿಸಿಗಿಂತಲೂ ಉತ್ತಮವಾಗಿರುತ್ತೆ – ನೆಟ್ಟಿಗರ ಆಕ್ರೋಶ

    ಗಲ್ಲಿ ಕ್ರಿಕೆಟ್ ನಿಯಮಗಳು ಐಸಿಸಿಗಿಂತಲೂ ಉತ್ತಮವಾಗಿರುತ್ತೆ – ನೆಟ್ಟಿಗರ ಆಕ್ರೋಶ

    ಲಂಡನ್: ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಜನಕರಿಗೆ ವಿಶ್ವಕಪ್ ಕಿರೀಟ ಒಲಿದಿದೆ. ಆದರೆ ಫೈನಲ್‍ನಲ್ಲಿ ಇಂಗ್ಲೆಂಡ್‍ಗೆ ಗೆಲುವು ನೀಡಿದ ಐಸಿಸಿ ನಿಯಮದ ವಿರುದ್ಧ ವಿಶ್ವದಾದ್ಯಂತ ನೆಟ್ಟಿಗರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಂದ್ಯ ಟೈ ಆದರು ಇಂಗ್ಲೆಂಡ್‍ಗೆ ಹೆಚ್ಚು ಬೌಂಡರಿಗಳ ಆಧಾರ ಮೇಲೆ ಗೆಲುವು ನೀಡಿದ ಐಸಿಸಿ ಈ ನಿಯಮವನ್ನು ಕಟುವಾಗಿ ಟೀಕಿಸಿರುವ ನೆಟ್ಟಿಗರು, ಪಂದ್ಯದಲ್ಲಿ ಬೌಂಡರಿಗಳ ಸಂಖ್ಯೆಯೂ ಒಂದೇ ಆಗಿದ್ದರೆ ಆಟಗಾರರ 10 ಮತ್ತು 12 ನೇ ತರಗತಿಯ ಅಂಕ ನೋಡಿ ವಿಶ್ವಕಪ್ ವಿನ್ನರ್‍ ತೀರ್ಮಾನ ಮಾಡುತ್ತಿದ್ದರು ಎಂದು ಐಸಿಸಿಯನ್ನು ಕಾಲೆಳದಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಾಲಿವುಡ್ ನಟ ಪರೇಶ್ ರಾವಲ್ ಐಸಿಸಿ ವಿರುದ್ಧ ಕಿಡಿಕಾರಿದ್ದು, ಧೋನಿ ಅವರ ಸೇನಾ ಚಿಹ್ನೆ ಇರುವ ಗ್ಲೋವ್ಸ್ ಬದಲಿಸಲು ಆಸಕ್ತಿ ತೋರಿಸುವ ಐಸಿಸಿ ತನ್ನ ಮೂರ್ಖ ಸೂಪರ್ ಓವರ್ ನಿಯಮಗಳನ್ನು ಬದಲಿಸಲಿ ಎಂದು ಟ್ವೀಟ್ ಮಾಡಿದ್ದಾರೆ.

    ಇಂಗ್ಲೆಂಡ್‍ನಲ್ಲಿ ವಿಶ್ವಕಪ್ ನಡೆಯುತ್ತಿರುವ ಕಾರಣ ಐಸಿಸಿ ನಿಯಮಗಳು ಇಂಗ್ಲೆಂಡ್ ಪರವಾಗಿ ಇದೆ. ಈ ನಿಯಮದ ಪ್ರಕಾರ ಇಂಗ್ಲೆಂಡ್ ವಿನ್ ಆಗಿದೆ. ಆದರೆ ಇಂಗ್ಲೆಂಡ್ ವಿಶ್ವಕಪ್ ನಲ್ಲಿ ಜಯಗಳಿಸಿದ ರೀತಿಯಲ್ಲಿ ಹೊರದೇಶದಲ್ಲಿ ಜಯಸಾಧಿಸಲು ಸಾಧ್ಯವಿಲ್ಲ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ಹಲವಾರು ನೆಟ್ಟಿಗರು ನಿಜವಾದ ವಿನ್ನರ್ ನ್ಯೂಜಿಲೆಂಡ್ ಎಂದು ಟ್ವೀಟ್ ಮಾಡಿದ್ದಾರೆ.

    ಇಬ್ಬರು ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಸಮಾನ ಅಂಕ ಬಂದಿದ್ದರೂ ಓರ್ವ ವಿದ್ಯಾರ್ಥಿ ಪ್ರಥಮ ಎಂದು ಘೋಷಿಸಲಾಯಿತು. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ನಾಲ್ಕು ಅಂಕದ ಪ್ರಶ್ನೆಗೆ ಜಾಸ್ತಿ ಉತ್ತರ ಬರೆದಿದ್ದರೆ ಇನ್ನೊಬ್ಬ ಎರಡು ಅಂಕದ ಪ್ರಶ್ನೆಗೆ ಉತ್ತರ ಬರೆದಿದ್ದ. ಈ ರೀತಿಯಾಗಿ ಇಂಗ್ಲೆಂಡ್ ಈ ಬಾರಿ ಟ್ರೋಫಿ ಗೆದ್ದುಕೊಂಡಿದೆ ಎಂದು ಜನ ಕಾಲೆಳೆಯುತ್ತಿದ್ದಾರೆ.

    ವಿಶ್ವಕಪ್ ರೀತಿಯ ದೊಡ್ಡ ಪಂದ್ಯಗಳಲ್ಲಿ ಈ ರೀತಿಯ ನಿಯಮವನ್ನು ಐಸಿಸಿ ಅಳವಡಿಸಿರುವುದು ಸರಿಯಲ್ಲ. ಇನ್ನೂ ಮುಂದೆ ಎದುರಾಳಿ ನೀಡಿದ ಮೊತ್ತವನ್ನು ಬೆನ್ನಟ್ಟಿದರೂ ಹೆಚ್ಚು ಬೌಂಡರಿ ಹೊಡೆದಿಲ್ಲ ಎಂದು ಹೇಳಿ ಎದುರಾಳಿ ತಂಡಕ್ಕೆ ಜಯವನ್ನು ನೀಡುವ ನಿಯಮ ಬಂದರೂ ಬರಬಹುದು ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

    46 ದಿನಗಳಲ್ಲಿ 48 ಪಂದ್ಯಗಳನ್ನು ಆಡಿಸಿ ವಿಶ್ವಕಪ್‍ನಂತಹ ಟೂರ್ನಿಗಳಲ್ಲಿ ಫೈನಲ್ ವಿಜೇತರನ್ನು ಬೌಂಡರಿಗಳ ಸಂಖ್ಯೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಎಂದರೆ ಸೆನ್ಸ್ ಲೆಸ್ ನಿಯಮಗಳನ್ನು ಐಸಿಸಿ ಹೊಂದಿದೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

    ಇನ್ನೂ ಕೆಲವರು ಇಂಗ್ಲೆಂಡ್‍ನ್ನು ಟೀಕಿಸಿ ವಿಡಿಯೋ ಪೋಸ್ಟ್ ಮಾಡಿದ್ದು, ಗಲ್ಲಿ ಕ್ರಿಕೆಟ್ ನಿಯಮಗಳು ಐಸಿಸಿ ಕ್ರಿಕೆಟ್ ನಿಯಮಗಳಿಗಿಂತ ಉತ್ತಮವಾಗಿವೆ ಎಂದು ಬರೆದುಕೊಂಡಿದ್ದಾರೆ. ಇನ್ನು ಕೆಲ ಇಂಡಿಯಾದ ಅಭಿಮಾನಿಗಳು ಸೆಮಿಫೈನಲ್ ಪಂದ್ಯದಲ್ಲಿ ಎಂಎಸ್ ಧೋನಿ ಅವರನ್ನು ಗುಡ್ ಥ್ರೋ ಮೂಲಕ ಔಟ್ ಮಾಡಿದ್ದ ಗುಪ್ಟಿಲ್ ಅವರನ್ನು ತಮ್ಮದೇ ಶೈಲಿಯಲ್ಲಿ ಟ್ರೋಲ್ ಮಾಡಿದ್ದಾರೆ.

    ಭಾನುವಾರ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಮಾಡಿತು. ನಿಗದಿತ 50 ಓವರ್‍ ಗಳಲ್ಲಿ ಇಂಗ್ಲೆಂಡ್‍ಗೆ 241 ರನ್‍ಗಳ ಗುರಿ ನೀಡಿತು. ಆದರೆ ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಈ ಗುರಿಯನ್ನು ಬೆನ್ನಟ್ಟಲಾಗದೆ ಕೊನೆಯಲ್ಲಿ ಬೆನ್ ಸ್ಟೋಕ್ಸ್ ಅವರ ಸೂಪರ್ ಬ್ಯಾಟಿಂಗ್‍ಯಿಂದ ಪಂದ್ಯದಲ್ಲಿ ಟೈ ಸಾಧಿಸಿತು.

    ಪಂದ್ಯ ಟೈ ಆದ ಕಾರಣ ಐಸಿಸಿ ನಿಯಮದಂತೆ ಸೂಪರ್ ಓವರ್ ಆಡಿಸಲು ತೀರ್ಮಾನ ಮಾಡಲಾಯಿತು. ಸೂಪರ್ ಓವರ್ ನಲ್ಲಿ ಮೊದಲ ಬ್ಯಾಟ್ ಮಾಡಿದ ಇಂಗ್ಲೆಂಡ್ ಬಟ್ಲರ್ ಮತ್ತು ಸ್ಟೋಕ್ಸ್ ಅವರು ತಲಾ ಒಂದೊಂದು ಬೌಡರಿ ಸಿಡಿಸಿ ನ್ಯೂಜಿಲೆಂಡ್ ತಂಡಕ್ಕೆ 15 ರನ್‍ಗಳ ಗುರಿ ನೀಡಿದರು. ಇದನ್ನು ಬೆನ್ನಟ್ಟಿದ ಕೀವೀಸ್ ಆಟಗಾರರಾದ ಜಿಮ್ಮಿ ನೀಶಮ್ ಮತ್ತು ಮಾರ್ಟಿನ್ ಗುಪ್ಟಿಲ್ ಜೋಫ್ರಾ ಆರ್ಚರ್ ಅವರ ಬೌಲಿಂಗ್ ನಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದರು ನೀಶಮ್ ಅವರು ಒಂದು ಸಿಕ್ಸರ್ ಸಿಡಿಸಿ ಗೆಲ್ಲುವ ಭರವಸೆ ಮೂಡಿಸಿದರು.

    https://twitter.com/sagarcasm/status/1150461607383719938

    ಆದರೆ ಕೊನೆಯ ಎಸೆತದಲ್ಲಿ ಗೆಲ್ಲಲು ನ್ಯೂಜಿಲೆಂಡ್‍ಗೆ 2 ರನ್ ಬೇಕಿತ್ತು. ಆಗ ಸ್ಟ್ರೈಕ್‍ನಲ್ಲಿ ಇದ್ದ ಅನುಭವಿ ಆಟಗಾರ ಮಾರ್ಟಿನ್ ಗುಪ್ಟಿಲ್ ಜೋಫ್ರಾ ಆರ್ಚರ್ ಎಸೆದ ಕೊನೆಯ ಎಸೆತದಲ್ಲಿ 2 ರನ್ ಕದಿಯಲು ವಿಫಲರಾದರು. ಜೋಫ್ರಾ ಅವರ ಎಸೆತವನ್ನು ಮಿಡ್ ವಿಕೆಟ್ ಕಡೆಗೆ ತಳ್ಳಿದ ಗುಪ್ಟಿಲ್ ಎರಡು ರನ್ ಕದಿಯುವಲ್ಲಿ ಯಶಸ್ವಿಯಾಗಲಿಲ್ಲ. ರಾಯ್ ಅವರು ಎಸೆದ ಉತ್ತಮ ಥ್ರೋವನ್ನು ಬಟ್ಲರ್ ಹಿಡಿದು ರನ್ ಔಟ್ ಮಾಡಿದರು. ಈ ಮೂಲಕ ಸೂಪರ್ ಓವರ್ ಕೂಡ ಟೈ ಆಯ್ತು.

    ಫೈನಲ್‍ನಲ್ಲಿ ಸೂಪರ್ ಓವರ್ ಕೂಡ ಟೈ ಆದ ಕಾರಣ ಐಸಿಸಿ ನಿಯಮದಂತೆ ಹೆಚ್ಚು ಬೌಂಡರಿ ಸಿಡಿಸಿದ ತಂಡಕ್ಕೆ ಗೆಲುವು ಎಂದು ಘೋಷಣೆ ಮಾಡಲಾಯಿತು. ಪಂದ್ಯದಲ್ಲಿ ಹೆಚ್ಚು ಬೌಂಡರಿ ಹೊಡೆದಿದ್ದ ಇಂಗ್ಲೆಂಡ್ ಗೆಲುವು ಸಾಧಿಸಿತು. ಈ ಮೂಲಕ ಮೊದಲ ಬಾರಿಗೆ ಇಂಗ್ಲೆಂಡ್ ವಿಶ್ವಕಪ್ ಮುತ್ತುಕ್ಕಿತು. ಸತತ ಎರಡನೇ ಬಾರಿ ಫೈನಲ್‍ನಲ್ಲಿ ಸೋತ ನ್ಯೂಜಿಲೆಂಡ್ ದ್ವಿತೀಯಸ್ಥಾನಿಯಾಗಿ ನಿರ್ಗಮಿಸಿತು.

  • ಫುಟ್‍ಪಾತ್ ಮೇಲೆ ವಾಹನಗಳ ಹಾವಳಿ- ಬೀದಿಗಿಳಿದ ಹಿರಿಯ ನಾಗರಿಕರು

    ಫುಟ್‍ಪಾತ್ ಮೇಲೆ ವಾಹನಗಳ ಹಾವಳಿ- ಬೀದಿಗಿಳಿದ ಹಿರಿಯ ನಾಗರಿಕರು

    ಬೆಂಗಳೂರು: ನಗರದಲ್ಲಿ ಫುಟ್ ಪಾತ್ ಗಳ ಪರಿಸ್ಥಿತಿ ಹೇಗಿದೆ ಅನ್ನೋದನ್ನು ಎಲ್ಲರೂ ನೋಡಿದ್ದೀವಿ. ಫುಟ್ ಪಾತ್ ಮೇಲೆ ನಡೆಯೋದಕ್ಕಿಂತ ರೋಡಲ್ಲೇ ನಡೆದು ಹೋಗಬಹುದೇನೋ ಅನ್ನುವ ಮಟ್ಟಿಗೆ ಫುಟ್ ಪಾತ್ ಅನ್ನು ದ್ವಿಚಕ್ರ ವಾಹನ ಸವಾರರು ಆಕ್ರಮಿಸಿಕೊಂಡಿರುತ್ತಾರೆ. ಆದರೆ ಇದನ್ನು ತಡೆಯಲು ವೃದ್ಧರಿಬ್ಬರು ಪಣ ತೊಟ್ಟಿದ್ದಾರೆ.

    ಹೌದು. ನಗರದ ಇಟ್ಟಮಡು ಜಂಕ್ಷನ್ ಬಳಿಯ ಅಕ್ಕಪಕ್ಕದ ಮನೆಯ ವೃದ್ಧರಾದ ಸುಬ್ರಮಣ್ಯಂ ಹಾಗೂ ಉಷಾ ಶ್ರೀಕಂಠನ್, ಪ್ರತಿ ದಿನ ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಆದರೆ ಇಲ್ಲಿನ ಫುಟ್ ಪಾತ್ ಮೇಲೆ ವಾಹನ ಚಾಲನೆಯಿಂದಾಗಿ ವೃದ್ಧರು, ಮಕ್ಕಳು ಮತ್ತು ವಿದ್ಯಾರ್ಥಿಗಳು ಗಾಬರಿ ಒಳಗಾಗುತ್ತಿದ್ದರು. ಹೀಗಾಗಿ ಸವಾರರಿಗೆ ರೂಲ್ಸ್ ಬ್ರೇಕ್ ಮಾಡಿಬೇಡಿ ಎಂದು ಎಂದು ವೃದ್ಧರು ಮನವಿ ಮಾಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

    ಇಬ್ಬರು ವೃದ್ಧರು ಕೈಯಲ್ಲಿ ಒಂದು ಬೋರ್ಡ್ ಹಿಡಿದು, ಫುಟ್ ಪಾತ್ ಮೇಲೆ ಬರೋ ಗಾಡಿ ಸವಾರರಿಗೆ ಬುದ್ಧಿ ಹೇಳುತ್ತಿದ್ದಾರೆ. ಕೆಲವರು ಸರಿ  ಎಂದು ಹೋದರೆ ಇನ್ನೂ ಕೆಲವರು ಇವರನ್ನು ಛೇಡಿಸಿ ಹೋಗುತ್ತಾರೆ. ಅದರೂ ಸುಮಾರು ಮೂರು- ನಾಲ್ಕು ಗಂಟೆಗಳ ಕಾಲ ರಸ್ತೆ ಬದಿಯ ಫುಟ್ ಪಾತ್ ಮೇಲೆ ನಿಂತು ನಿಯಮ ಪಾಲನೆ ಮಾಡುವಂತೆ ಬೈಕ್ ಸವಾರರಲ್ಲಿ ಕೇಳಿಕೊಳ್ಳುತ್ತಿದ್ದಾರೆ.

    ಜಾಗೃತಿ ಮೂಡಿಸಲು ಕಾರಣವೇನು?:
    ಒಂದು ದಿನ ಇವರು ತಮ್ಮ ನಾಯಿ ಜೊತೆಗೆ ಫುಟ್ ಪಾತ್ ಮೇಲೆ ವಾಕ್ ಮಾಡುವಾಗ ದ್ವಿಚಕ್ರ ವಾಹನ ಟಚ್ ಆಗಿದೆ. ಸ್ವಲ್ವದರಲ್ಲೇ ಒಂದು ಅನಾಹುತ ತಪ್ಪಿದೆ. ಇದನ್ನು ಇಲ್ಲಿಗೆ ಬಿಡಬಾರದು ಎಂದು ಪೊಲೀಸರಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ನಾವೇ ಇದರ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ತೀರ್ಮಾನಿಸಿ “ಟೂ ವೀಲರ್ಸ್ ಪ್ಲೀಸ್ ಯೂಸ್ ರೋಡ್ ನೋ ಫುಟ್ ಪಾತ್ “ಅನ್ನೊ ಬೋರ್ಡ್ ಹಿಡಿದುಕೊಂಡು ಗಂಟೆಗಳ ಕಾಲ ನಿಂತು ವಾಹನ ಸವಾರರಿಗೆ ಬುದ್ಧಿ ಹೇಳುತ್ತಿದ್ದಾರೆ. ಈ ಒಂದು ಘಟನೆಯೇ ವೃದ್ಧರು ಈ ವಯಸ್ಸಿನಲ್ಲಿ ಇಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣವಾಗಿದೆ.

    ಪರದೇಶಕ್ಕೆ ಹೋದಾಗ ನಮ್ಮವರೇ ನಿಯಮ ಪಾಲನೆ ಮಾಡುತ್ತಾರೆ. ಆದರೆ ನಮ್ಮ ದೇಶದಲ್ಲೇ ಈ ರೀತಿ ಮಾಡಿಲ್ಲ ಎಂದರೆ ಅದು ನಮ್ಮ ದೇಶಕ್ಕೆ ನಾವು ಮಾಡೋ ಅವಮಾನ. ಇನ್ನೂ ಕೆಲ ದಿನಗಳಲ್ಲೇ ನಮ್ಮ ಈ ಫುಟ್ ಪಾತ್ ಅನ್ನು ವೆಹಿಕಲ್ ಫ್ರೀ ಮಾಡುತ್ತೇವೆ ಎಂದು ವೃದ್ಧರು ಭರವಸೆ ನೀಡಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆಯೂ ಕೈ ಜೋಡಿಸಿದರೆ ಪಾದಚಾರಿಗಳಿಗೆ ಒಳಿತು ಮಾಡಿದಂತಾಗುತ್ತದೆ ಎಂಬುದು ಸಾರ್ವಜನಿಕರ ಆಶಯವಾಗಿದೆ.

  • ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ – ಮಹತ್ವದ ಆದೇಶ ಹೊರಡಿಸಿದ ಶಿಕ್ಷಣ ಇಲಾಖೆ

    ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ – ಮಹತ್ವದ ಆದೇಶ ಹೊರಡಿಸಿದ ಶಿಕ್ಷಣ ಇಲಾಖೆ

    ಬೆಂಗಳೂರು: ಶಿಕ್ಷಣ ಇಲಾಖೆ ಸ್ಕೂಲ್ ಬ್ಯಾಗ್‍ನ ತೂಕ ಇಳಿಸಬೇಕು ಎಂದು ಮಹತ್ವದ ಆದೇಶ ಹೊರಡಿಸಿದೆ. ಕೆಜಿ ಗಟ್ಟಲೆ ಸ್ಕೂಲ್ ಬ್ಯಾಗ್ ಹೊರುವುದರಿಂದ ಶಾಲಾ ಮಕ್ಕಳ ದೈಹಿಕ  ಸಾಮರ್ಥ್ಯ ಕಡಿಮೆಯಾಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

    1-10 ನೇ ತರಗತಿವರಗಿನ ಮಕ್ಕಳ ಬ್ಯಾಗ್ ತೂಕಕ್ಕೆ ಶಿಕ್ಷಣ ಇಲಾಖೆ ಹೊಸ ಆದೇಶ ಹೊರಡಿಸಿದೆ. ಬ್ಯಾಗ್ ತೂಕವು ಮಗುವಿನ ದೇಹದ ಸರಾಸರಿ ಶೇ.10 ರಷ್ಟು ಮೀರುವಂತೆ ಇಲ್ಲ. 1-2 ತರಗತಿ ಮಕ್ಕಳಿಗೆ ಇನ್ನು ಮುಂದೆ ಹೋಂ ವರ್ಕ್ ಕೊಡುವಂತಿಲ್ಲ ಎಂದು ಹೇಳಿದೆ. ಪ್ರತಿ ತಿಂಗಳ ಮೂರನೇ ಶನಿವಾರ ಬ್ಯಾಗ್ ರಹಿತ ದಿನ ಆಚರಣೆ ಕಡ್ಡಾಯವಾಗಿ ಆಗಬೇಕು. ಮಕ್ಕಳು ನೀರಿನ ಬಾಟಲ್ ತರುವುದು ತಪ್ಪಿಸಲು ಶಾಲೆಯಲ್ಲೇ ನೀರಿನ ವ್ಯವಸ್ಥೆ ಮಾಡಬೇಕು. ಈ ಎಲ್ಲಾ ಯೋಜನೆಗಳು ರಾಜ್ಯದ ಎಲ್ಲಾ ಶಾಲೆಗಳಲ್ಲೂ ಈ ಶೈಕ್ಷಣಿಕ ವರ್ಷದಿಂದಲೇ ಜಾರಿಯಾಗಬೇಕು ಎಂದು ಆದೇಶ ನೀಡಿದೆ.

    ಸ್ಕೂಲ್ ಬ್ಯಾಗ್ ರೂಲ್ಸ್!
    1. ಹೊಸ ಆದೇಶದ ಅನ್ವಯ ಮಕ್ಕಳ ಬ್ಯಾಗ್ ತೂಕವು ಮಗುವಿನ ದೇಹದ ಸರಾಸರಿ 10% ಮೀರುವಂತಿಲ್ಲ.
    2. 1-2 ತರಗತಿಗೆ ಇನ್ನುಂದೆ ಹೋಂ ವರ್ಕ್ ಕೊಡುವಂತಿಲ್ಲ.
    3. ಪ್ರತಿ ತಿಂಗಳ ಮೂರನೇ ಶನಿವಾರ ಬ್ಯಾಗ್ ರಹಿತ ದಿನ ಆಚರಣೆ ಕಡ್ಡಾಯ.
    4. ಮಕ್ಕಳು ನೀರಿನ ಬಾಟಲ್ ತರುವುದು ತಪ್ಪಿಸಲು ಶಾಲೆಯಲ್ಲೆ ನೀರಿನ ವ್ಯವಸ್ಥೆ ಮಾಡೋದು ಕಡ್ಡಾಯ.
    5. 100 ಹಾಳೆಗಳು ಮೀರದ ಪುಸ್ತಕವನ್ನೇ ಮಕ್ಕಳಿಗೆ ನೀಡಬೇಕು.
    6. ಬ್ಯಾಗ್ ತೂಕದ ಬಗ್ಗೆ ಪೋಷಕರಿಗೆ ಅರಿವು ಮೂಡಿಸುವ ಕೆಲಸ ಶಾಲೆಗಳು ಮಾಡಬೇಕು.
    7. ಮುಂಚಿತವಾಗಿಯೇ ಮಕ್ಕಳಿಗೆ ಆಯಾ ದಿನದ ವೇಳಾಪಟ್ಟಿಗೆ ಅನುಗುಣವಾಗಿ ಪುಸ್ತಕಗಳನ್ನು ತರಲು ಸೂಚನೆ ನೀಡುವುದು.
    8. ಮಕ್ಕಳಿಗೆ ಅಗತ್ಯವಾದ ಕಲಿಕಾ ಸಾಮಗ್ರಿಗಳನ್ನು ಆದಷ್ಟು ಶಾಲೆಗಳಲ್ಲಿ ಸಂಗ್ರಹ ಮಾಡುವ ವ್ಯವಸ್ಥೆ ಶಾಲೆ ಮಾಡಬೇಕು.

    ಹೊಸ ಆದೇಶದ ಅನ್ವಯ ಮಕ್ಕಳ ಶಾಲಾ ಬ್ಯಾಗ್ ತೂಕ ಹೀಗೆ ಇರಬೇಕು
    1. 2ನೇ ತರಗತಿ – 1.5 ರಿಂದ 2 ಕೆಜಿ.
    2. 3-5ನೇ ತರಗತಿ – 2 ರಿಂದ 3 ಕೆಜಿ
    3. 6-8ನೇ ತರಗತಿ – 3 ರಿಂದ 4 ಕೆಜಿ.
    4. 9-10ನೇ ತರಗತಿ – 4 ರಿಂದ 5 ಕೆಜಿ

    ಶಾಲಾ ಬ್ಯಾಗ್ ರಹಿತ ದಿನದ ಯಾವ ಚಟುವಟಿಕೆಗಳನ್ನು ಮಾಡಬೇಕು?
    1. ಕ್ಷೇತ್ರ ಸಂಚಾರ
    2. ವಾರ್ತಾಪತ್ರಿಕೆಗಳ ಚಟುವಟಿಕೆಗಳು
    3. ಗಣಿತ ವಿನೋದ, ಅಬ್ಯಾಕಸ್
    4. ವಿಜ್ಞಾನ ಪ್ರಯೋಗ ಮತ್ತು ಪ್ರದರ್ಶನಗಳು
    5. ಸಾಮಾನ್ಯ ಜ್ಞಾನ ಶೈಕ್ಷಣಿಕ ಸಂಘದ ಚಟುವಟಿಕೆಗಳು
    6. ಚಿತ್ರಕಲೆ, ಚಿತ್ರಗಳಿಗೆ ಬಣ್ಣ ತುಂಬುವುದು, ಕರಕುಶಲತೆ
    7. ಸಾಮಾಜಿಕ ಉಪಯೋಗಿತ ಉತ್ಪಾದನಾ ಕಾರ್ಯ
    8. ಭಕ್ತಿಗೀತೆಗಳು ಮತ್ತು ದೇಶಭಕ್ತಿಗೀತೆಗಳ ಚಟುವಟಿಕೆ (ಕನ್ನಡ, ಹಿಂದಿ, ಇಂಗ್ಲೀಷ್)
    9. ಚಿತ್ರ ಓದುವಿಕೆ ಮತ್ತು ನಕ್ಷೆ ಓದುವಿಕೆ
    10. ಒಳಾಂಗಣ ಕ್ರೀಡೆಗಳು (ಹಾವು ಮತ್ತು ಏಣಿ, ಕೇರಂ ಬೋರ್ಡ್ ಇತ್ಯಾದಿ)
    11. ಹೊರಾಂಗಣ ಕ್ರೀಡೆಗಳು
    12. ದೃಕ್ ಶ್ರವಣ ಮಾಧ್ಯಮಗಳ ಚಟುವಟಿಕೆಗಳು/ ಶ್ಲೋಕಗಳನ್ನು ಪಠಿಸುವುದು
    13. ನೃತ್ಯ/ ಚರ್ಚಾಸ್ಪರ್ಧೆ/ ನಾಟಕ/ ಏಕಪಾತ್ರಾಭಿನಾಯ/ ಆಶುಭಾಷಣ ಸ್ಪರ್ಧೆಗಳು/ ಧ್ಯಾನ/ ಯೋಗಗಳ ಚಟುವಟಿಕೆ
    14. ಶಾಲಾ ಪರಿಸರಕ್ಕೆ ಅನುಗುಣವಾದ ಶೈಕ್ಷಣಿಕ ಚಟುವಟಿಕೆಗಳು.

  • ಟ್ರಾಫಿಕ್ ನಿಯಮ ಉಲ್ಲಂಘಿಸಿದ ಯುವಕ – ಮದ್ವೆ ಮಾಡಿಸಿದ ಪೋಷಕರು

    ಟ್ರಾಫಿಕ್ ನಿಯಮ ಉಲ್ಲಂಘಿಸಿದ ಯುವಕ – ಮದ್ವೆ ಮಾಡಿಸಿದ ಪೋಷಕರು

    ಅಹಮಾದಾಬಾದ್: ಯುವಕನೊಬ್ಬ ಟ್ರಾಫಿಕ್ ನಿಯಮ ಉಲ್ಲಂಘಿಸಿರುವುದು, ಆತ ಪ್ರೀತಿಸುವ ಯುವತಿ ಜೊತೆಗೆ ಮದುವೆ ಆಗಲು ದಾರಿ ಮಾಡಿ ಕೊಟ್ಟಂತಾಗಿದೆ.

    ವತ್ಸಲ್ ಪಾರೇಕ್ ನಿಯಮ ಉಲ್ಲಂಘಿಸಿ ಮದುವೆಯಾದ ಯುವಕ. ವತ್ಸಲ್ ತನ್ನ ಪ್ರೇಯಸಿ ಜೊತೆ ಬೈಕಿನಲ್ಲಿ ಹೋಗುತ್ತಿದ್ದರು. ಈ ವೇಳೆ ಆತ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿದ್ದಾನೆ. ಇದನ್ನು ಗಮನಿಸಿದ ಟ್ರಾಫಿಕ್ ಪೊಲೀಸರು ಶನಿವಾರ ವತ್ಸಲ್ ಮನೆಗೆ ಚಲನ್ ಜೊತೆ ಬಂದಿದ್ದಾರೆ. ಅಲ್ಲದೆ ಟ್ರಾಫಿಕ್ ಉಲ್ಲಂಘಿಸಿದ ಫೋಟೋ ಕೂಡ ಕಳುಹಿಸಿದ್ದಾರೆ.

    https://twitter.com/VatsalParekh14/status/1122154769764814848?ref_src=twsrc%5Etfw%7Ctwcamp%5Etweetembed%7Ctwterm%5E1122154769764814848&ref_url=https%3A%2F%2Fzeenews.india.com%2Fhindi%2Foff-beat%2Ftraffic-police-e-challan-haled-couple-to-get-married-to-his-girl-friend%2F521784

    ಈ ಫೋಟೋ ನೋಡಿದ ವತ್ಸಲ್ ಪೋಷಕರು ಈ ಯುವತಿ ಯಾರು ಎಂದು ಪ್ರಶ್ನಿಸಿದ್ದಾರೆ. ಆಗ ವತ್ಸಲ್ ತನ್ನ ಪ್ರೀತಿಯ ಬಗ್ಗೆ ಪೋಷಕರ ಬಳಿ ಹೇಳಿಕೊಂಡಿದ್ದಾನೆ. ಇವಳು ನನ್ನ ಪ್ರೇಯಸಿ. ನಾನು ಈಕೆಯನ್ನು ತುಂಬಾ ಇಷ್ಟಪಡುತ್ತೇನೆ ಹಾಗೂ ನಾನು ಇವಳನ್ನೇ ಮದುವೆ ಆಗುತ್ತೇನೆ ಎಂದು ಹೇಳಿದ್ದಾನೆ. ಮಗನ ಮಾತು ಕೇಳಿದ ಪೋಷಕರು ಯುವತಿ ಮನೆಯವರನ್ನು ಕರೆಸಿ ಮದುವೆ ಮಾತುಕತೆ ನಡೆಸಿದ್ದಾರೆ.

    ಇಬ್ಬರ ಕುಟುಂಬದವರು ಇವರ ಪ್ರೀತಿಯನ್ನು ಒಪ್ಪಿ ಮದುವೆ ಮಾಡಿಸಲು ನಿರ್ಧರಿಸಿದ್ದರು. ಈಗ ಇಬ್ಬರ ಮದುವೆಯಾಗಿದೆ. ಮದುವೆಯಾದ ನಂತರ ವತ್ಸಲ್ ಅಹಮಾದಾಬಾದ್ ಟ್ರಾಫಿಕ್ ಪೊಲೀಸರಿಗೆ ಟ್ವಿಟ್ಟರಿನಲ್ಲಿ ಅವರಿಗೆ ಟ್ಯಾಗ್ ಮಾಡಿ ಧನ್ಯವಾದ ತಿಳಿಸಿದ್ದಾನೆ.

    ವತ್ಸಲ್ ತನ್ನ ಟ್ವಿಟ್ಟರಿನಲ್ಲಿ, “ನನಗೆ ಮೇಲ್ ಮೂಲಕ ಮೆಮೋ ಸಿಕ್ತು. ಇದರಿಂದ ಒಂದು ಹಾಸ್ಯಾಸ್ಪದ ವಿಷಯ ನಡೆದಿದೆ. ಏನೆಂದರೆ ಮೆಮೋ ಜೊತೆಯಲ್ಲಿ ನನ್ನ ಹಾಗೂ ನನ್ನ ಪ್ರೇಯಸಿಯ ಫೋಟೋ ಇತ್ತು. ನನ್ನ ಪೋಷಕರಿಗೆ ಆಕೆಯ ಬಗ್ಗೆ ತಿಳಿದಿರಲಿಲ್ಲ. ಈ ಮೆಮೋ ಮೂಲಕ ಅವರಿಗೆ ಗೊತ್ತಾಗಿದೆ” ಎಂದು ಟ್ವೀಟ್ ಮಾಡಿದ್ದಾನೆ.