Tag: rukmini vijaykumar

  • 10 ಲಕ್ಷದ ಡೈಮಂಡ್ ರಿಂಗ್, 9 ಲಕ್ಷ ಮೌಲ್ಯದ ವಾಚ್- ‘ಭಜರಂಗಿ’ ನಟಿ ಬ್ಯಾಗ್ ಕದ್ದ ಆರೋಪಿ ಅರೆಸ್ಟ್

    10 ಲಕ್ಷದ ಡೈಮಂಡ್ ರಿಂಗ್, 9 ಲಕ್ಷ ಮೌಲ್ಯದ ವಾಚ್- ‘ಭಜರಂಗಿ’ ನಟಿ ಬ್ಯಾಗ್ ಕದ್ದ ಆರೋಪಿ ಅರೆಸ್ಟ್

    ‘ಭಜರಂಗಿ’ ಖ್ಯಾತಿಯ (Bhajarangi) ನಟಿ ರುಕ್ಮಿಣಿ ವಿಜಯ್‌ಕುಮಾರ್ (Rukmini Vijaykumar) ಅವರ 10 ಲಕ್ಷ ಡೈಮಂಡ್ ರಿಂಗ್, 9 ಲಕ್ಷ ಮೌಲ್ಯದ ರಿಂಗ್ ಕದ್ದ ಆರೋಪಿ ಮಹಮ್ಮದ್ ಮಸ್ತಾನ್‌ನನ್ನು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ:11 ವರ್ಷಗಳ ಬಳಿಕ ‘ಪಿಕೆ’ ನಿರ್ದೇಶಕನ ಜೊತೆ ಕೈಜೋಡಿಸಿದ ಆಮೀರ್ ಖಾನ್

    ನಟಿ ರುಕ್ಮಿಣಿ ಅವರ ಬ್ಯಾಗ್‌ನಲ್ಲಿ ದುಬಾರಿ ವಸ್ತುಗಳನ್ನು ಕದ್ದ ಕ್ಯಾಬ್ ಚಾಲಕನಾಗಿದ್ದ ಮಹಮ್ಮದ್ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಘಟನೆ ಮೇ 11ರಂದು ಬೆಳಗ್ಗೆ ನಟಿ ವಾಕಿಂಗ್‌ಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಚಿನ್ನಸ್ವಾಮಿ ಸ್ಟೇಡಿಯಂ ಬಳಿಯ ಗೇಟ್ ನಂ.18 ಬಳಿ ರುಕ್ಮಿಣಿ ತಮ್ಮ ಕಾರನ್ನು ನಿಲ್ಲಿಸಿದ್ದರು. ತಮ್ಮ ಕಾರಿನ ಒಳಗೆ ದುಬಾರಿ ಬೆಲೆಯ ಹ್ಯಾಂಡ್‌ಬ್ಯಾಗ್, ಪರ್ಸ್, ಎರಡು ಡೈಮಂಡ್ ರಿಂಗ್, ರೊಲೆಕ್ಸ್ ವಾಚ್ ಇಟ್ಟುಹೋಗಿದ್ದರು. ಆದರೆ, ಅವರು ವಾಕಿಂಗ್ ಹೋಗುವಾಗ ತಮ್ಮ ಕಾರನ್ನು ಲಾಕ್ ಮಾಡುವುದನ್ನು ಮರೆತುಬಿಟ್ಟಿದ್ದರು. ಇದನ್ನು ಕ್ಯಾಬ್ ಚಾಲಕ ಗಮನಿಸಿದ್ದ, ಕಾರಿನೊಳಗಿನ ವಸ್ತುಗಳನ್ನು ಕದ್ದು ಪರಾರಿ ಆಗಿದ್ದ. ಇದನ್ನೂ ಓದಿ:ಬೆಡ್‌ರೂಮಲ್ಲಿ ಬಿಕಿನಿ ತೊಟ್ಟು ಸೆಲ್ಫಿ ಕ್ಲಿಕ್ಕಿಸಿದ ನಟಿ – ದಿಶಾ ಪಟಾನಿ ಮೈಮಾಟಕ್ಕೆ ಪಡ್ಡೆ ಹುಡುಗರು ಬೋಲ್ಡ್

    ಈ ಘಟನೆ ನಡೆದ ಬೆನ್ನಲ್ಲೇ ನಟಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಕೂಡಲೇ ಪೊಲೀಸರು ತನಿಖೆ ಕೈಗೊಂಡಿದ್ದರು. ಇದೀಗ ಕ್ಯಾಬ್ ಚಾಲಕನನ್ನು ಬಂಧಿಸಿ ಕದ್ದ ದುಬಾರಿ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. 1,50,000 ರೂ. ಮೌಲ್ಯದ ಬ್ಯಾಗ್, 75000 ಮೌಲ್ಯದ ಪರ್ಸ್, 10 ಲಕ್ಷ ಮೌಲ್ಯದ ಡಬಲ್ ಬ್ಯಾಂಡೆಡ್ ಡೈಮಂಡ್ ರಿಂಗ್, 9 ಲಕ್ಷ ಮೌಲ್ಯದ ರೊಲೆಕ್ಸ್ ವಾಚ್, 3 ಲಕ್ಷ ಮೌಲ್ಯದ ಡೈಮಂಡ್ ರಿಂಗ್ ಸೇರಿ ಒಟ್ಟು 23 ಲಕ್ಷ ಮೌಲ್ಯದ ವಸ್ತುಗಳು ವಶಕ್ಕೆ ಪಡೆಯಲಾಗಿದೆ.

    ಶಿವಣ್ಣ ನಟನೆಯ ಭಜರಂಗಿ ಸಿನಿಮಾದಲ್ಲಿ ಕೃಷ್ಣೆ ಪಾತ್ರದಲ್ಲಿ ರುಕ್ಮಿಣಿ ನಟಿಸಿದ್ದರು. ತಮಿಳಿನ ಕೊಚಾಡಿಯನ್, ಹಿಂದಿಯ ಶಮಿತಾಭ್‌ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.