Tag: Rukmini Vasanth

  • ಇಂಗ್ಲಿಷ್‍ನಲ್ಲಿ ತೆರೆ ಕಾಣಲು ಸಿದ್ಧವಾದ ಕಾಂತಾರ

    ಇಂಗ್ಲಿಷ್‍ನಲ್ಲಿ ತೆರೆ ಕಾಣಲು ಸಿದ್ಧವಾದ ಕಾಂತಾರ

    ದೇಶವ್ಯಾಪಿ ಅಬ್ಬರಿಸುತ್ತಿರುವ ಕಾಂತಾರ ಚಾಪ್ಟರ್ 1 ಚಿತ್ರ (Kantara Chapter 1) ಇದೀಗ ಒಂದು ಹೆಜ್ಜೆ ಮುಂದಿಟ್ಟಿದೆ. ಚಿತ್ರಕ್ಕೆ ಬಹು ಬೇಡಿಕೆ ಇರುವ ಕಾರಣ ಇಂಗ್ಲಿಷ್ ವರ್ಷನ್‍ನಲ್ಲಿ ಕಾಂತಾರ ಚಿತ್ರವನ್ನ ಹೊಂಬಾಳೆ ಫಿಲಂಸ್ ತಯಾರು ಮಾಡಿದೆ.

    ಈ ಮೂಲಕ ಚಂದನವನದ ಕೀರ್ತಿಯನ್ನು ವಿಶ್ವವ್ಯಾಪಿ ತಲುಪಿಸಲು ಹೊಂಬಾಳೆ ಫಿಲಂಸ್ ಸಜ್ಜಾಗಿದೆ. ಇದೇ ಅಕ್ಟೋಬರ್ 31ಕ್ಕೆ ಚಿತ್ರ ರಿಲೀಸ್ ಆಗಲಿದೆ. ಈ ವಿಚಾರವನ್ನ ಹೊಂಬಾಳೆ ಫಿಲಂಸ್ ಅಧಿಕೃತವಾಗಿ ಘೋಷಣೆ ಮಾಡಿದೆ. ಈ ಮೂಲಕ ತುಳು ನೆಲದ ಕತೆ, ಮನರಂಜನೆಯನ್ನು ವಿದೇಶಿಗರಿಗೂ ತಲುಪಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಕಾಂತಾರ ಚಿತ್ರ ವಿಶ್ವದೆಲ್ಲೆಡೆ ಏಕಕಾಲದಲ್ಲಿ ಏಳು ಭಾಷೆಯಲ್ಲಿ ರಿಲೀಸ್ ಆಗಿತ್ತು. ಇಂಗ್ಲಿಷ್ ಸಬ್‍ಟೈಟಲ್ ಹೊಂದಿತ್ತು. ಆದರೀಗ ಇಂಗ್ಲಿಷ್ ಭಾಷೆಯಲ್ಲೇ ಡಬ್ ಆಗಿ ವಿಶ್ವದೆಲ್ಲೆಡೆ ರಿಲೀಸ್ ಆಗುತ್ತಿದೆ. ವಿಶೇಷವೆಂದರೆ ಮೂಲ ಚಿತ್ರ 148 ನಿಮಿಷಗಳ ಅವಧಿಯನ್ನ ಹೊಂದಿತ್ತು. ಇದೀಗ ಇಂಗ್ಲಿಷ್ ವರ್ಷನ್ 02 ಗಂಟೆ 14 ನಿಮಿಷ 45 ಸೆಕೆಂಡ್ ಅವಧಿಯನ್ನು ಹೊಂದಿದೆ. ಇದರಿಂದ ಸಿನಿಮಾದ ಕೆಲ ದೃಶ್ಯಕ್ಕೆ ಕತ್ತರಿ ಪ್ರಯೋಗವಾಗಿರುವುದು ಕಾಣುತ್ತಿದೆ.

    ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಹೇಳಬೇಕಿದೆಯಷ್ಟೆ. ಒಟ್ಟಿನಲ್ಲಿ ಕಾಂತಾರ ಇಂಗ್ಲಿಷ್‍ನಲ್ಲೂ ಬರುತ್ತಿರುವುದು ಚಂದನವನಕ್ಕೆ ವಿಶ್ವಮಟ್ಟದಲ್ಲಿ ದೊಡ್ಡ ಮಟ್ಟದ ಮಾರ್ಕೇಟ್ ಓಪನ್ ಆಗೋದಕ್ಕೆ ದಾರಿ ಮಾಡಿ ಕೊಟ್ಟಂತಾಗಿದೆ.

  • ಕಾಂತಾರ ಚಾಪ್ಟರ್‌ 1 ಬ್ಲಾಕ್‌ಬಸ್ಟರ್‌ ಹಿಟ್; 2 ವಾರದಲ್ಲಿ 717 ಕೋಟಿ ಕಲೆಕ್ಷನ್‌

    ಕಾಂತಾರ ಚಾಪ್ಟರ್‌ 1 ಬ್ಲಾಕ್‌ಬಸ್ಟರ್‌ ಹಿಟ್; 2 ವಾರದಲ್ಲಿ 717 ಕೋಟಿ ಕಲೆಕ್ಷನ್‌

    ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಚಾಪ್ಟರ್‌ 1 (Kantara Chapter 1) ತನ್ನ ಬ್ಲಾಕ್‌ಬಸ್ಟರ್‌ ಓಟವನ್ನು ಮುಂದುವರಿಸಿದೆ. ರಿಲೀಸ್‌ ಆಗಿ ಕೇವಲ 2 ವಾರಗಳಲ್ಲೇ ಬಾಕ್ಸಾಫೀಸ್‌ ಕಲೆಕ್ಷನ್‌ನಲ್ಲಿ 717.50 ಕೋಟಿ ರೂ. ಗಳಿಸಿದೆ ಎಂದು ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ ಅಧಿಕೃತವಾಗಿ ಘೋಷಿಸಿದೆ.

    ಅ.2 ರಂದು ಸಿನಿಮಾ ವಿಶ್ವದಾದ್ಯಂತ ರಿಲೀಸ್‌ ಆಯಿತು. ಎಲ್ಲೆಡೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಮೊದಲ ವಾರದಲ್ಲಿ ವರ್ಲ್ಡ್‌ವೈಡ್‌ ದಾಖಲೆಯ 500 ಕೋಟಿ ಕ್ಲಬ್‌ ಸೇರಿತ್ತು. ಸಿನಿಮಾ ಬಿಡುಗಡೆಯಾಗಿ 2 ವಾರ ಕಳೆದರೂ ಜನರು ಥಿಯೇಟರ್‌ಗಳತ್ತ ಲಗ್ಗೆಯಿಟ್ಟಿದ್ದಾರೆ.

     

    View this post on Instagram

     

    A post shared by Hombale Films (@hombalefilms)

    ಬಾಕ್ಸಾಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿರುವ ಕಾಂತಾರ ಚಾಪ್ಟರ್‌ 1 ಎರಡು ವಾರಗಳಲ್ಲಿ ವಿಶ್ವಾದ್ಯಂತ 717.50 ಕೋಟಿ + ಕ್ಲಬ್‌ ಸೇರಿದೆ. ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಿ ದೀಪಾವಳಿ ಆಚರಿಸಿ ಎಂದು ಹೊಂಬಾಳೆ ಫಿಲ್ಮ್ಸ್‌ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದೆ.

    ಮತ್ತೆ ವೀಕೆಂಡ್‌ ಬಂದಿದ್ದು, ಥಿಯೇಟರ್‌ಗಳಲ್ಲಿ ಹೆಚ್ಚಿನ ಟಿಕೆಟ್‌ ಬುಕ್‌ ಆಗುವ ಸಾಧ್ಯತೆ ಇದೆ. ದೀಪಾವಳಿ ಕೂಡ ಸಮೀಪಿಸುತ್ತಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಮತ್ತಷ್ಟು ಕಲೆಕ್ಷನ್‌ ಆಗಬಹುದು ಎನ್ನಲಾಗಿದೆ.

    ಕಾಂತಾರ ಚಾಪ್ಟರ್‌ 1 ಚಿತ್ರದಲ್ಲಿ ರಿಷಬ್‌ ಶೆಟ್ಟಿ (Rishab Shetty), ಗುಲ್ಶನ್‌ ದೇವಯ್ಯ, ರುಕ್ಮಿಣಿ ವಸಂತ್‌, ಜಯರಾಮ್‌, ಪ್ರಮೋದ್‌ ಶೆಟ್ಟಿ, ಅಚ್ಚುತ್‌ ರಾವ್‌ ಸೇರಿ ಅನೇಕ ಪ್ರಮುಖರು ನಟಿಸಿದ್ದಾರೆ. ರಿಷಬ್‌ ಶೆಟ್ಟಿ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣ, ಬಿ.ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ.

  • ಟ್ರೆಂಡ್ಸ್ ಅವಂತ್ರ ರಾಯಭಾರಿಯಾದ ‘ಕಾಂತಾರದ ರಾಜಕುಮಾರಿ’ ರುಕ್ಮಿಣಿ ವಸಂತ್

    ಟ್ರೆಂಡ್ಸ್ ಅವಂತ್ರ ರಾಯಭಾರಿಯಾದ ‘ಕಾಂತಾರದ ರಾಜಕುಮಾರಿ’ ರುಕ್ಮಿಣಿ ವಸಂತ್

    ಮುಂಬೈ: ರಿಲಯನ್ಸ್ ರಿಟೇಲ್‌ನ (Reliance Retail) ಅವಂತ್ರ (Avantra) ಎಂಬುದು ಸಮಕಾಲೀನ ಸೀರೆಗಳನ್ನು ಖರೀದಿಸಲು ಅತ್ಯುತ್ತಮ ತಾಣ. ಭಾರತೀಯ ಮಹಿಳೆಯರ ಆಯ್ಕೆಗೆ ಹೇಳಿ ಮಾಡಿಸಿದ ಸ್ಥಳ ಇದು. ಇದೀಗ ಹೊಸದಾಗಿ ಹಬ್ಬದ ಅಭಿಯಾನವನ್ನು ಅವಂತ್ರ ಶುರು ಮಾಡಿದ್ದು, ದೇಶದೆಲ್ಲೆಡೆ ಮನೆ ಮಾತಾಗಿರುವ ಚೆಲುವೆ, ಕಾಂತಾರ (Kantara Chapter 1) ಸಿನಿಮಾದ ರಾಜಕುಮಾರಿ ಹಾಗೂ ನಟಿ ರುಕ್ಮಿಣಿ ವಸಂತ್ (Rukmini Vasanth) ರಾಯಭಾರಿ ಆಗಿದ್ದಾರೆ.

    ಹಬ್ಬಗಳು ಬಂತೆಂದರೆ ಸಂಭ್ರಮ. ಅದರಲ್ಲೂ ಹೆಣ್ಣುಮಕ್ಕಳಿಗೆ ವಿಶೇಷವಾದ ಸಂದರ್ಭ ಇದಾಗಿರುತ್ತದೆ. ಹೌದು, ಈಗಿನ ಮಹಿಳೆಯಲ್ಲಿ ಆತ್ಮವಿಶ್ವಾಸ ಕಾಣಬಹುದು. ತನ್ನ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ, ಗುರುತನ್ನು ತೆರೆದಿಡುವ ಹಾಗೂ ತನ್ನ ಭಾವನೆಯನ್ನು ಅಭಿವ್ಯಕ್ತಪಡಿಸುವುದಕ್ಕಾಗಿ ಹಬ್ಬದ ಋತುವಿನಲ್ಲಿ ಅವಂತ್ರಗಿಂತ ಮತ್ತೊಂದು ಉತ್ತಮ ಆಯ್ಕೆ ಬೇರಾವುದೂ ಇಲ್ಲ. ಈ ಅಭಿಯಾನವನ್ನು “ಮೈ ವೇ” (My way) ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಚಾರ ಮಾಡಲಾಗುತ್ತಿದೆ. ಇದನ್ನೂ ಓದಿ: ಬೆಳಕಿನ ಹಬ್ಬ ದೀಪಾವಳಿಗೆ ʻಅವಂತ್ರ ಬೈ ಟ್ರೆಂಡ್ಸ್‌ʼ ವಿಶಿಷ್ಟ ಸಂಗ್ರಹ – 399 ರೂ.ರಿಂದ 39,999 ರೂ. ತನಕ ಸಿಗುತ್ತೆ ಸೀರೆಗಳು

    ಈ ಅಭಿಯಾನದ ಜಾಹೀರಾತಿನಲ್ಲಿ ಪ್ರತಿ ಮಹಿಳೆಗೂ ಹೇಗೆ ಈ ಕ್ಷಣವನ್ನು ತಮ್ಮದಾಗಿಸಿಕೊಳ್ಳುವುದು? ತಮ್ಮದೇ ಸ್ಥಾನವನ್ನು ಹೇಗೆ ಗುರುತಿಕೊಳ್ಳುವುದು ಎಂಬುದನ್ನು ಮುಖ್ಯ ವಿಷಯವಾಗಿ ತೆಗೆದುಕೊಳ್ಳಲಾಗಿದೆ. ಭಾರತೀಯ ಹಬ್ಬಗಳ ಅದ್ಭುತ ಸಂಭ್ರಮದ ಹಿನ್ನೆಲೆಯಲ್ಲಿ ಕುಟುಂಬಗಳು ಒಗ್ಗೂಡುವುದು, ಸಂಪ್ರದಾಯಗಳ ಆಚರಣೆ ಮತ್ತು ನಗು ಈ ಎಲ್ಲವನ್ನು ತುಂಬ ಚೆನ್ನಾಗಿ ಚಿತ್ರಿಸಲಾಗಿದೆ. ಈ ಎಲ್ಲ ಖುಷಿಯ ವಾತಾವರಣದ ಮಧ್ಯೆ ಸೌಂದರ್ಯದ ಖನಿಯಾದ ರುಕ್ಮಿಣಿ ವಸಂತ್ ಅವರು ಶ್ರೀಮಂತಿಕೆಯ- ಅವಂತ್ರದ ರೇಷ್ಮೆ ಸೀರೆಯುಟ್ಟು ಮಿರಮಿರ ಮಿಂಚಿದ್ದಾರೆ.

    ಅವಂತ್ರ ಒಂದು ಬ್ರ್ಯಾಂಡ್ ಆಗಿ ಐವತ್ತಕ್ಕೂ ಹೆಚ್ಚಿನ ಬಗೆಯ ಸೀರೆಗಳನ್ನು ಒಂದೇ ಜಾಗದಲ್ಲಿ ಖರೀದಿ ಮಾಡಬಹುದು. ತುಂಬ ವಿಶಿಷ್ಟವಾದ ಮತ್ತು ಸಾಂಸ್ಕೃತಿಕವಾಗಿಯೂ ಮುಖ್ಯವಾದ ಸ್ಥಳ ಇದಾಗಿರಲಿದೆ. ಭಾರತೀಯ ಹೊಸ ತಲೆಮಾರಿನ ಮಹಿಳೆಯರನ್ನು ಅವಂತ್ರ ತುಂಬ ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಈಗಿನ ಮಹಿಳೆಯರಿಗೆ ತಮ್ಮ ಗುರುತನ್ನು ತಮ್ಮದೇ ಆದ ರೀತಿಯಲ್ಲಿ ವ್ಯಕ್ತಪಡಿಸಲು ಹಾಗೂ ಭಾವಾಭಿವ್ಯಕ್ತಿ ಸಂಕೇತವಾಗಿ ಈ ಸೀರೆಗಳು ಕಾಣುತ್ತವೆ. ಇದನ್ನೂ ಓದಿ: ರಿಲಯನ್ಸ್ ರೀಟೇಲ್‌ನ ಜಿಯೋಮಾರ್ಟ್‌ ಜೊತೆಗೆ ಆನ್‌ಲೈನ್‌ಗೆ ಸ್ಥಳೀಯ ಕುಶಲಕರ್ಮಿಗಳು ಪ್ರವೇಶ

    ರುಕ್ಮಿಣಿ ಅವರನ್ನು ತಮ್ಮ ಬ್ರ್ಯಾಂಡ್ ರಾಯಭಾರಿ ಆಗಿ, ಅವಂತ್ರದ ಮುಖವಾಗಿ ಪರಿಚಯಿಸುವುದಕ್ಕೆ ಸಂಸ್ಥೆಯು ಹೆಮ್ಮೆ ಪಡುತ್ತದೆ. ಈ ಅಭಿಯಾನಕ್ಕೆ ಅವರನ್ನು ಸ್ವಾಗತಿಸುತ್ತದೆ. ಅವರು ತಮ್ಮ ವಿಶ್ವಾಸದ ಮೂಲಕ, ಪರಂಪರೆ ಆಳವಾದ ಬೇರುಗಳ ಜೊತೆಗೆ ಗುರುತಿಸಿಕೊಂಡು ಹೆಮ್ಮೆಯನ್ನು ಪ್ರತಿನಿಧಿಸುತ್ತಾರೆ. ಈ ಎಲ್ಲ ಮೌಲ್ಯಗಳು ಹೇಳಿ ಮಾಡಿಸಿದಂತೆ ಅವಂತ್ರದ ಸಿದ್ಧಾಂತಗಳ ಜೊತೆಗೆ ಹೊಂದಿಕೊಳ್ಳುತ್ತವೆ. ಸಂಪ್ರದಾಯವನ್ನು ಆಧುನಿಕ ಸ್ಪರ್ಶದ ಜೊತೆಗೆ ಸಂಭ್ರಮಿಸಬೇಕು ಎಂಬುದು ಅವಂತ್ರದ ಧ್ಯೇಯವಾಗಿದೆ. ಭಾರತದಾದ್ಯಂತ ರುಕ್ಮಿಣಿ ವಸಂತ್ ಜನಪ್ರಿಯತೆ ಹೆಚ್ಚಾಗಿದೆ. ಸೌಂದರ್ಯದಲ್ಲೂ ಮನಸೂರೆಗೊಂಡಿದ್ದಾರೆ. ಇವೆಲ್ಲ ಇಂದಿನ ಮಹಿಳೆಯರಲ್ಲಿ ಹೊಸ ಶಕ್ತಿಯನ್ನು ಮತ್ತು ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತದೆ.

    ಅವಂತ್ರದ ಮಾರ್ಕೆಟಿಂಗ್ ಹೆಡ್ ಮಾತನಾಡಿ, ಈ ಹಬ್ಬದ ಋತುವಿನ ಟಿವಿ ಜಾಹೀರಾತು ಸುಂದರ, ಮೃದುವಾದ ಕ್ಷಣದ ಧ್ವನಿಯ ವಿಸ್ತರಣೆ ಆಗುತ್ತದೆ. ಈ ಎಲ್ಲದರ ಮಧ್ಯೆ ನಿಮ್ಮನ್ನು ನೀವು ಗೌರವಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ ಎಂದಿದ್ದಾರೆ. ಅವಂತ್ರದ ಜಗತ್ತಿನಲ್ಲಿ ಒಮ್ಮೆ ಸುತ್ತಾಡುವ ಮೂಲಕ ಆ ಅನುಭವವನ್ನು ನಿಮ್ಮದಾಗಿಸಿಕೊಳ್ಳಿ. ಅದಕ್ಕಾಗಿ ಒಮ್ಮೆ ಕ್ಲಿಕ್ ಮಾಡಿ: https://www.instagram.com/avantraofficial/

  • ಕಾಂತಾರ ಚಾಪ್ಟರ್‌ 1 ಸಿನಿಮಾ ನೋಡಿ ಹಾಡಿಹೊಗಳಿದ ಯಶ್‌

    ಕಾಂತಾರ ಚಾಪ್ಟರ್‌ 1 ಸಿನಿಮಾ ನೋಡಿ ಹಾಡಿಹೊಗಳಿದ ಯಶ್‌

    – ಕಾಂತಾರವು ಭಾರತ & ಕನ್ನಡ ಸಿನಿಮಾಗಳಿಗೆ ಹೊಸ ಮಾನದಂಡ ಅಂತ ಬಣ್ಣನೆ

    ಕಾಂತಾರ ಚಾಪ್ಟರ್‌ 1 (Kantara Chapter 1) ಸಿನಿಮಾ ನೋಡಿ ರಾಕಿಂಗ್‌ ಸ್ಟಾರ್‌ ಯಶ್‌ (Yash) ಹಾಡಿ ಹೊಗಳಿದ್ದಾರೆ. ನಟ, ನಿರ್ದೇಶಕ ರಿಷಬ್‌ ಶೆಟ್ಟಿ (Rishab Shetty) ಹಾಗೂ ಚಿತ್ರತಂಡದ ಪ್ರತಿಭೆಯನ್ನು ಕೊಂಡಾಡಿದ್ದಾರೆ.

    ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಯಶ್‌, ಕಾಂತಾರ ಅಧ್ಯಾಯ 1 ಕನ್ನಡ ಮತ್ತು ಭಾರತೀಯ ಸಿನಿಮಾಗಳಿಗೆ ಹೊಸ ಮಾನದಂಡ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: 2016 ರಲ್ಲಿ ಒಂದು ಪ್ರದರ್ಶನಕ್ಕಾಗಿ ಒದ್ದಾಡಿದ ದಿನದಿಂದ, ಹೌಸ್‌ಫುಲ್‌ ಶೋಗಳ ಈ ಅದ್ಭುತ ಪಯಣ: ಜನತೆಗೆ ರಿಷಬ್‌ ಕೃತಜ್ಞತೆ

    ನಿಮ್ಮ ದೃಢನಿಶ್ಚಯ, ಸ್ಥಿತಿಸ್ಥಾಪಕತ್ವ ಮತ್ತು ಭಕ್ತಿಯು ಪ್ರತಿ ಚೌಕಟ್ಟಿನಲ್ಲೂ ಸ್ಪಷ್ಟವಾಗಿ ಗೋಚರಿಸುತ್ತದೆ. ಬರಹಗಾರ, ನಿರ್ದೇಶಕ ಮತ್ತು ನಟನಾಗಿ, ನಿಮ್ಮ ದೃಷ್ಟಿಕೋನವು ಪರದೆಯ ಮೇಲೆ ನಿಜವಾಗಿಯೂ ತಲ್ಲೀನತೆಯ ಅನುಭವ ನೀಡುತ್ತದೆ ಎಂದು ರಿಷಬ್‌ ಶೆಟ್ಟಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

    ವಿಜಯ್‌ ಕಿರಗಂದೂರು ಸರ್ ಮತ್ತು ಹೊಂಬಾಳೆ ಫಿಲಂಸ್‌ಗೆ ಹೃತ್ಪೂರ್ವಕ ಅಭಿನಂದನೆಗಳು. ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ನಿಮ್ಮ ದೂರದೃಷ್ಟಿ ಮತ್ತು ಬೆಂಬಲವು ಉದ್ಯಮದ ಮಟ್ಟವನ್ನು ನಿರಂತರವಾಗಿ ಹೆಚ್ಚಿಸುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Kantara: Chapter 1ಗೆ ಭರ್ಜರಿ ರೆಸ್ಪಾನ್ಸ್ – ಮೊದಲ ದಿನವೇ 55 ಕೋಟಿ ಗಳಿಕೆ

    ರುಕ್ಮಿಣಿ ವಸಂತ್‌ ಮತ್ತು ಗುಲ್ಷನ್‌ ದೇವಯ್ಯ ನಟನೆಯಲ್ಲಿ ನೀವು ಅದ್ಭುತ, ಶಕ್ತಿಶಾಲಿ ಪ್ರದರ್ಶನಗಳನ್ನು ನೀಡಿದ್ದೀರಿ. ಅಜನೀಶ್‌ ಅವರ ಸಂಗೀತವು ಆ ಚೌಕಟ್ಟುಗಳಿಗೆ ಜೀವ ತುಂಬುತ್ತದೆ. ಅರವಿಂದ್ ಕಶ್ಯಪ್, ನಿಮ್ಮ ಅದ್ಭುತ ಕ್ಯಾಮೆರಾ ಕೆಲಸವು ಆ ಜಗತ್ತಿಗೆ ಜೀವ ತುಂಬಿತು. ಜಯರಾಮ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡ್ ಮತ್ತು ಇಡೀ ಚಿತ್ರತಂಡ ಮತ್ತು ಸಿಬ್ಬಂದಿಯ ಅತ್ಯುತ್ತಮ ಕೆಲಸ. ಈ ಚಿತ್ರಕ್ಕೆ ರಾಕೇಶ್ ಪೂಜಾರಿ ನೀಡಿದ ಬೆಳಕಿನ ಕ್ಷಣಗಳು ಈಗ ಅವರ ಪ್ರತಿಭೆಗೆ ಸೂಕ್ತವಾದ ಗೌರವವಾಗಿದೆ. ನೀವೆಲ್ಲರೂ ಒಟ್ಟಾಗಿ ಅದ್ಭುತವಾದ ಸಿನಿಮಾವನ್ನು ರಚಿಸಿದ್ದೀರಿ ಎಂದು ಚಿತ್ರತಂಡವನ್ನು ಯಶ್‌ ಕೊಂಡಾಡಿದ್ದಾರೆ.

  • 2016 ರಲ್ಲಿ ಒಂದು ಪ್ರದರ್ಶನಕ್ಕಾಗಿ ಒದ್ದಾಡಿದ ದಿನದಿಂದ, ಹೌಸ್‌ಫುಲ್‌ ಶೋಗಳ ಈ ಅದ್ಭುತ ಪಯಣ: ಜನತೆಗೆ ರಿಷಬ್‌ ಕೃತಜ್ಞತೆ

    2016 ರಲ್ಲಿ ಒಂದು ಪ್ರದರ್ಶನಕ್ಕಾಗಿ ಒದ್ದಾಡಿದ ದಿನದಿಂದ, ಹೌಸ್‌ಫುಲ್‌ ಶೋಗಳ ಈ ಅದ್ಭುತ ಪಯಣ: ಜನತೆಗೆ ರಿಷಬ್‌ ಕೃತಜ್ಞತೆ

    – ಸಿನಿ ಪಯಣ ನೆನೆಪಿಸಿಕೊಂಡು ರಿಷಬ್‌ ಶೆಟ್ಟಿ ಭಾವುಕ ಪೋಸ್ಟ್

    ಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರ ಕಾಂತಾರ ಚಾಪ್ಟರ್‌ 1 (Kantara Chapter 1) ಭಾರತೀಯ ಚಿತ್ರರಂಗದಲ್ಲಿ ಹೊಸ ಹಿಸ್ಟರಿ ಬರೆಯುತ್ತಿದೆ. ಕರ್ನಾಟಕ, ದೇಶ-ವಿದೇಶದಾದ್ಯಂತ ಹೌಸ್‌ಫುಲ್‌ ಪ್ರದರ್ಶನ ಕಂಡು ಸಿನಿಮಾ ಹವಾ ಸೃಷ್ಟಿಸಿದೆ. ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆಯುತ್ತಿದೆ. ಪ್ರೇಕ್ಷಕರ ಉತ್ತಮ ಸ್ಪಂದನೆಗೆ ರಿಷಬ್‌ ಶೆಟ್ಟಿ ಕೃತಜ್ಞತೆ ಸಲ್ಲಿಸಿದ್ದಾರೆ.

    ಕಾಂತಾರ ಚಾಪ್ಟರ್‌ 1 ಸಿನಿಮಾಗೆ ಪ್ರೇಕ್ಷಕರಿಂದ ಸಿಗುತ್ತಿರುವ ಭರ್ಜರಿ ರೆಸ್ಪಾನ್ಸ್‌ ಕುರಿತು ರಿಷಬ್‌ ಶೆಟ್ಟಿ (Rishab Shetty) ಎಕ್ಸ್‌ನಲ್ಲಿ ಭಾವುಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ‘2016 ರಲ್ಲಿ ಒಂದು ಪ್ರದರ್ಶನಕ್ಕಾಗಿ ಒದ್ದಾಡಿದ ದಿನದಿಂದ, 5000ಕ್ಕೂ ಹೆಚ್ಚು housefull ಶೋಗಳ ಈ ಅದ್ಭುತ ಪಯಣ. ಇದು ಸಾಧ್ಯವಾಗಿದ್ದು ನಿಮ್ಮ ಪ್ರೀತಿ ಮತ್ತು ಬೆಂಬಲದಿಂದ ಮಾತ್ರ. ಇದಕ್ಕಾಗಿ ನಾನು ನಿಮಗೆ ಸದಾ ಋಣಿ’ ಎಂದು ಕೃತಜ್ಞತೆಯ ಮಾತುಗಳನ್ನಾಡಿದ್ದಾರೆ. ಇದನ್ನೂ ಓದಿ: Kantara: Chapter 1ಗೆ ಭರ್ಜರಿ ರೆಸ್ಪಾನ್ಸ್ – ಮೊದಲ ದಿನವೇ 55 ಕೋಟಿ ಗಳಿಕೆ

    ಇದನ್ನು ಸಾಧ್ಯವಾಗಿಸಿದ ಪ್ರತಿಯೊಬ್ಬ ವ್ಯಕ್ತಿಗೂ ಸದಾ ಕೃತಜ್ಞರಾಗಿರುತ್ತೇನೆ ಎಂದು ರಿಷಬ್‌ ಪೋಸ್ಟ್‌ ಹಂಚಿಕೊಂಡಿದ್ದಾರೆ. 2016ರಲ್ಲಿ ಸಿನಿಮಾ ಪ್ರದರ್ಶನಕ್ಕಾಗಿ ಒದ್ದಾಡಿದ ಸಂದರ್ಭದ ಪೋಸ್ಟ್‌ ಅನ್ನು ಕೂಡ ರೀ-ಪೋಸ್ಟ್‌ ಮಾಡಿದ್ದಾರೆ.

    ನಟ ರಿಷಬ್‌ ಶೆಟ್ಟಿ ಅವರ ಟ್ವೀಟ್‌ ಎಲ್ಲೆಡೆ ವೈರಲ್‌ ಆಗುತ್ತಿದೆ. ಕಾಂತಾರ ಚಾಪ್ಟರ್‌ 1 ಸಿನಿಮಾಗೆ ಪ್ರೇಕ್ಷಕರು ಫುಲ್‌ ಮಾರ್ಕ್ಸ್‌ ಕೊಟ್ಟಿದ್ದಾರೆ. ರಿಷಬ್‌ ಶೆಟ್ಟಿ ಅಭಿನಯಕ್ಕೆ ಮಾರುಹೋಗಿದ್ದಾರೆ. ಕಾಂತಾರ ಚಿತ್ರತಂಡಕ್ಕೆ ಅಭಿನಂದನೆ ಕೂಡ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಕಾಂತಾರ ದೃಶ್ಯ ವೈಭೋಗ ಕಣ್ತುಂಬಿಕೊಂಡ ಪ್ರೇಕ್ಷಕರು ಹೇಳಿದ್ದೇನು?

  • ಕಾಂತಾರ ದೃಶ್ಯ ವೈಭೋಗ ಕಣ್ತುಂಬಿಕೊಂಡ ಪ್ರೇಕ್ಷಕರು ಹೇಳಿದ್ದೇನು?

    ಕಾಂತಾರ ದೃಶ್ಯ ವೈಭೋಗ ಕಣ್ತುಂಬಿಕೊಂಡ ಪ್ರೇಕ್ಷಕರು ಹೇಳಿದ್ದೇನು?

    ರಿಷಬ್ ಶೆಟ್ಟಿ (Rishab Shetty) ನಟಿಸಿ ನಿರ್ದೇಶನ ಮಾಡಿರುವ ಬಹುನಿರೀಕ್ಷಿತ ಕಾಂತಾರ ಚಾಪ್ಟರ್-1 (Kantara Chapter 1) ಇಂದು ವಿಶ್ವದಾದ್ಯಂತ ತೆರೆಕಂಡಿದೆ. ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಗುರುವಾರ ಬೆಳಗ್ಗೆ 6:30ರಿಂದಲೇ ಫ್ಯಾನ್ಸ್ ಶೋ ಆರಂಭವಾಗಿವೆ. ಬೆಳ್ಳಿ ತೆರೆ ಮೇಲೆ ಕಾಂತಾರ ಅಬ್ಬರವನ್ನ ಕಣ್ತುಂಬಿಕೊಂಡ ಪ್ರೇಕ್ಷಕ ಮಹಾಪ್ರಭುಗಳು ಅದ್ಭುತ ರೆಸ್ಪಾನ್ಸ್ ನೀಡಿದ್ದಾರೆ.

    ಕಾಂತಾರ.. ಕಾಂತಾರ.. ಎಲ್ಲಿ ನೋಡಿದರೂ ಬರೀ ಕಾಂತಾರ ಸಿನಿಮಾದ್ದೇ ಸದ್ದು. ಯಾಕಂದ್ರೆ ಮೂರು ವರ್ಷಗಳ ಹಿಂದೆ ತೆರೆಕಂಡು ವಿಶ್ವದಾದ್ಯಂತ ಮೋಡಿ ಮಾಡಿದ್ದ ಕಾಂತಾರ ಇದೀಗ ಪ್ರೇಕ್ಷಕರನ್ನ ದಟ್ಟ ಕಾನನದ ನಡುವೆ ಕರೆದೊಯ್ದು ಇತಿಹಾಸ ಬಿಚ್ಚಿಟ್ಟಿದೆ. ಹೌದು, ಕಾಂತಾರ ಸೂಪರ್ ಹಿಟ್ ಆದ ಬಳಿಕ ಇಂದು ಕಾಂತಾರ ಚಾಪ್ಟರ್- 1 ರಿಲೀಸ್ ಆಗಿದ್ದು, ಮತ್ತೊಮ್ಮೆ ಎಲ್ಲರೂ ಬೆರಗಾಗುವಂತೆ‌ ಮಾಡಿದೆ. ಕ್ರಿ.ಶ. 400 – 500ರ ಕಾಲಘಟ್ಟದ ಕಥೆ ಹೇಳಿರುವ ನಟ ರಿಷಬ್ ಶೆಟ್ಟಿ ತೆರೆಯ ಮೇಲೆ ರೌದ್ರಾವತಾರ ತಾಳಿದ್ದಾರೆ. ಇದನ್ನೂ ಓದಿ: ಕಾಂತಾರ ಚಾಪ್ಟರ್ 1 ವಿಶ್ವದಾದ್ಯಂತ ಇಂದು ರಿಲೀಸ್

    ಇಂದು ವಿಶ್ವದಾದ್ಯಂತ 7 ಸಾವಿರ ಸ್ಕ್ರೀನ್‌ಗಳಲ್ಲಿ ಏಳು ಭಾಷೆಗಳಲ್ಲಿ ತೆರೆ ಕಂಡಿರುವ ಕಾಂತಾರ ಪಾರ್ಟ್ 1 ಸಿನಿಮಾ‌ವನ್ನ ನೋಡಿದ ಸಿನಿರಸಿಕರು ಫಿದಾ ಆಗುವಂತೆ ಮಾಡಿದೆ. ತೆರೆಯ ಮೇಲೆ ನಟ ರಿಷಬ್ ಶೆಟ್ಟಿಯ ಆರ್ಭಟವಂತೂ ಪ್ರೇಕ್ಷಕರು ಕುಳಿತಲ್ಲಿಯೇ ಬೆವರುವಂತೆ ಮಾಡಿದೆ. ಇನ್ನು ದಸರಾ ವೇಳೆಯಲ್ಲಿಯೇ ಕಾಂತಾರ-1 ರಿಲೀಸ್ ಆಗಿದ್ದು, ಹಬ್ಬದ ಸಂಭ್ರಮವನ್ನ ಮತ್ತಷ್ಟು ಹೆಚ್ಚಿಸಿದೆ. ಈಗಾಗಲೇ ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಕದಂಬ ಸಾಮಂತರಾದ ಬಾಂಗ್ರಾ ರಾಜ ಮನೆತನ ಮತ್ತು ಈಶ್ವರನ ಹೂದೋಟದ ಜನರ ನಡುವಿನ ಯುದ್ಧವನ್ನೇ ಕಣ್ಣಿಗೆ ಕಟ್ಟುವಂತೆ ತೋರಿಸಲಾಗಿದೆ. ಅದರಲ್ಲೂ ಬೆರ್ಮೆ ಪಾತ್ರದಲ್ಲಿ ರಿಷಬ್ ಶೆಟ್ಟಿ ಪ್ರೇಕ್ಷಕರನ್ನ ಸೀಟಿನ ಅಂಚಿಗೆ ತಂದು ಕೂರಿಸಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಜೈಕಾರ ಹಾಕಿದ್ದಾರೆ. ಇದನ್ನೂ ಓದಿ: ಕಾಂತಾರ ಚಾಪ್ಟರ್‌ 1ಗೆ ಪ್ರೇಕ್ಷಕರ ಮೆಚ್ಚುಗೆ ಕಂಡು ರಿಷಬ್‌ ಶೆಟ್ಟಿ ಪತ್ನಿ ಭಾವುಕ – ಅಪ್ಪಿಕೊಂಡು ಸಮಾಧಾನಪಡಿಸಿದ ರಿಷಬ್‌

  • ಕಾಂತಾರ ಚಾಪ್ಟರ್‌ 1ಗೆ ಪ್ರೇಕ್ಷಕರ ಮೆಚ್ಚುಗೆ ಕಂಡು ರಿಷಬ್‌ ಶೆಟ್ಟಿ ಪತ್ನಿ ಭಾವುಕ – ಅಪ್ಪಿಕೊಂಡು ಸಮಾಧಾನಪಡಿಸಿದ ರಿಷಬ್‌

    ಕಾಂತಾರ ಚಾಪ್ಟರ್‌ 1ಗೆ ಪ್ರೇಕ್ಷಕರ ಮೆಚ್ಚುಗೆ ಕಂಡು ರಿಷಬ್‌ ಶೆಟ್ಟಿ ಪತ್ನಿ ಭಾವುಕ – ಅಪ್ಪಿಕೊಂಡು ಸಮಾಧಾನಪಡಿಸಿದ ರಿಷಬ್‌

    – ರಿಷಬ್‌ ನಿರ್ದೇಶನ, ಅಭಿನಯಕ್ಕೆ ಪ್ರೇಕ್ಷಕರು ಫಿದಾ; ಶಿಳ್ಳೆ, ಚಪ್ಪಾಳೆಯ ಮೆಚ್ಚುಗೆ

    ಟ-ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರ ಕಾಂತಾರ ಚಾಪ್ಟರ್ 1 (Kantara Chapter 1) ಚಿತ್ರವು ಅದ್ದೂರಿಯಾಗಿ ಥಿಯೇಟರ್‌ಗಳಿಗೆ ಲಗ್ಗೆ ಇಟ್ಟಿದೆ. ಸಿನಿಮಾ ಮೂಡಿಬಂದ ರೀತಿ ಹಾಗೂ ಅದಕ್ಕೆ ಪ್ರೇಕ್ಷಕರಿಂದ ವ್ಯಕ್ತವಾಗುತ್ತಿರುವ ಬಾರಿ ಮೆಚ್ಚುಗೆ ಕಂಡು ರಿಷಬ್‌ ಶೆಟ್ಟಿ ಪತ್ನಿ ಭಾವುಕರಾದರು.

    ಸಿನಿಮಾ ಪ್ರದರ್ಶನದ ಸಮಯದಲ್ಲಿ ರಿಷಬ್‌ ಶೆಟ್ಟಿ ಅವರ ಪತ್ನಿ, ನಟ-ವಿನ್ಯಾಸಕಿ ಪ್ರಗತಿ ಶೆಟ್ಟಿ (Pragathi Shetty), ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ನೋಡಿ ಕಣ್ಣೀರು ಹಾಕಿದರು. ಆಗ ಪತ್ನಿಯನ್ನು ಅಪ್ಪಿಕೊಂಡು ರಿಷಬ್ ಸಮಾಧಾನಪಡಿಸಿದ ದೃಶ್ಯ ಕಂಡುಬಂತು. ನಿಜಕ್ಕೂ ಇದು ಹೃದಯಸ್ಪರ್ಶಿ ಕ್ಷಣವಾಗಿದೆ. ಇದನ್ನೂ ಓದಿ: ಕಾಂತಾರ ಚಾಪ್ಟರ್ 1 ವಿಶ್ವದಾದ್ಯಂತ ಇಂದು ರಿಲೀಸ್

    ವಿಜಯದಶಮಿ ದಿನವೇ ವಿಶ್ವದಾದ್ಯಂತ ಕಾಂತಾರ ಚಾಪ್ಟರ್‌ 1 ಸಿನಿಮಾ ರಿಲೀಸ್‌ ಆಗಿದೆ. ಎಲ್ಲೆಡೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಿಷಬ್‌ ಶೆಟ್ಟಿ ನಿರ್ದೇಶನ ಮತ್ತು ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಿನಿಮಾವನ್ನು ಪ್ರೇಕ್ಷಕರು ಎಂಜಾಯ್‌ ಮಾಡಿದ್ದಾರೆ.

    ರಿಷಬ್, ತನ್ನ ಪತ್ನಿಯೊಂದಿಗೆ ಕಾಂತಾರ ಚಾಪ್ಟರ್‌ 1 ರ ಪ್ರದರ್ಶನಕ್ಕೆ ಹಾಜರಾಗಿರುವುದನ್ನು ತೋರಿಸುವ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ. ಒಂದು ವೀಡಿಯೊದಲ್ಲಿ ರಿಷಬ್ ಪ್ರೇಕ್ಷಕರಿಗೆ ಧನ್ಯವಾದ ಹೇಳುತ್ತಿರುವ ಭಾವನಾತ್ಮಕ ಕ್ಷಣಗಳೂ ವ್ಯಕ್ತವಾಗಿವೆ. ಇದನ್ನೂ ಓದಿ: ಕಾಂತಾರದ ನಂತರದ What Next? – ಪ್ರಶ್ನೆಗೆ ಉತ್ತರ ನೀಡಿದ ರಿಷಭ್‌ ಶೆಟ್ಟಿ

    ರಿಷಬ್ ತಮ್ಮ ಚಿತ್ರದಲ್ಲಿ ಕೆಲಸ ಮಾಡಿದ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಪ್ರೇಕ್ಷಕರು ಅವರೆಲ್ಲರಿಗೂ ಹರ್ಷೋದ್ಗಾರದ ಮೂಲಕ ಅಭಿನಂದನೆ ವ್ಯಕ್ತಪಡಿಸಿದ್ದಾರೆ. ರಿಷಬ್ ಜೊತೆಗೆ ಚಿತ್ರದಲ್ಲಿ ರುಕ್ಮಿಣಿ ವಸಂತ್, ಜಯರಾಮ್ ಮತ್ತು ಗುಲ್ಶನ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

  • ಕಾಂತಾರ ಚಾಪ್ಟರ್ 1 ವಿಶ್ವದಾದ್ಯಂತ ಇಂದು ರಿಲೀಸ್

    ಕಾಂತಾರ ಚಾಪ್ಟರ್ 1 ವಿಶ್ವದಾದ್ಯಂತ ಇಂದು ರಿಲೀಸ್

    – ಭಾರತದಾದ್ಯಂತ 7,000 ಕ್ಕೂ ಅಧಿಕ ಸ್ಕ್ರೀನ್‌, ಕರ್ನಾಟಕದಲ್ಲಿ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ
    – ವಿಜಯದಶಮಿ ದಿನವಾದ ಇಂದು ಬೆಳಗ್ಗೆ 6:30ಕ್ಕೆ ಮೊದಲ ಶೋ ಆರಂಭ

    ಹುನಿರೀಕ್ಷಿತ ಕಾಂತಾರ ಚಾಪ್ಟರ್‌ 1 (Kantara Chapter 1) ಸಿನಿಮಾ ವಿಜಯದಶಮಿ ದಿನವಾದ ಇಂದು (ಅ.2) ವಿಶ್ವದಾದ್ಯಂತ ಗ್ರ್ಯಾಂಡ್‌ ರಿಲೀಸ್‌ ಆಗಿದೆ.

    ನಗರದ ಹಲವು ಚಿತ್ರಮಂದಿರಗಳಲ್ಲಿ ಬೆಳಗ್ಗೆ 6:30ಕ್ಕೆ ಮೊದಲ ಶೋ ಆರಂಭವಾಗಿದೆ. ವೀರೇಶ್, ಸಂತೋಷ್ ಚಿತ್ರಮಂದಿರ ಹಾಗೂ ಹಲವು ಮಲ್ಟಿಪ್ಲೆಕ್ಸ್‌ಗಳಲ್ಲಿ 6:30ಕ್ಕೆ ಮೊದಲ ಶೋ ಶುರುವಾಗಿದೆ. ಇದನ್ನೂ ಓದಿ: ಕಾಂತಾರದ ನಂತರದ What Next? – ಪ್ರಶ್ನೆಗೆ ಉತ್ತರ ನೀಡಿದ ರಿಷಭ್‌ ಶೆಟ್ಟಿ

    ಕರ್ನಾಟಕದಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕಾಂತಾರ 1 ಸಿನಿಮಾ ಬಿಡುಗಡೆಯಾಗಿದೆ. ಮೊದಲ ದಿನ ಎರಡು ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಾಣಲಿದೆ.

    7,000ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಕನ್ನಡ ಸೇರಿದಂತೆ ಸಪ್ತ ಭಾಷೆಗಳಲ್ಲಿ ಭಾರತ ಹಾಗೂ ಭಾರತದಾಚೆಗೂ ಸಿನಿಮಾ ಬಿಡುಗಡೆಯಾಗಲಿದೆ. ರಿಷಬ್ ಶೆಟ್ಟಿ (Rishab Shetty), ರುಕ್ಮಿಣಿ ವಸಂತ್, ಗುಲ್ಶನ್​ ದೇವಯ್ಯ, ತಮಿಳು ನಟ ಜಯರಾಂ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಇದನ್ನೂ ಓದಿ: ಟಾಲಿವುಡ್‌ನಲ್ಲಿ ಕಾಂತಾರ ಬಾಯ್ಕಾಟ್ ಸಮಸ್ಯೆ ಬಗೆಹರಿಸಿದ ಪವನ್ ಕಲ್ಯಾಣ್

    ಕಾಂತಾರ 1 ಪ್ರೀಮಿಯರ್ ಶೋಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ನಟ ರಿಷಬ್‌ ಶೆಟ್ಟಿ ನಿರ್ದೇಶನ ಮತ್ತು ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ಸ್ಟೋರಿ ಮತ್ತು ಮೇಕಿಂಗ್‌ನಲ್ಲಿ ರಿಷಬ್‌ ಶೆಟ್ಟಿ ಯಶಸ್ವಿಯಾಗಿದ್ದಾರೆಂಬ ಮಾತುಗಳು ಪ್ರೀಮಿಯರ್‌ ಶೋ ವೇಳೆ ಕೇಳಿಬಂದಿವೆ.

  • 4 ಸಲ ಸತ್ತೇ ಹೋಗ್ತಿದ್ದೆ, ದೈವ ನನ್ನನ್ನ ಬದುಕಿಸಿದೆ – ರಿಷಬ್ ಶೆಟ್ಟಿ ಭಾವುಕ

    4 ಸಲ ಸತ್ತೇ ಹೋಗ್ತಿದ್ದೆ, ದೈವ ನನ್ನನ್ನ ಬದುಕಿಸಿದೆ – ರಿಷಬ್ ಶೆಟ್ಟಿ ಭಾವುಕ

    ಹೃತಿಕ್ ರೋಷನ್, ಶಿವಕಾರ್ತಿಕೇಯನ್, ಪೃಥ್ವಿರಾಜ್ ಸುಕುಮಾರನ್, ಪ್ರಭಾಸ್ ಅವರಿಂದ, ವಿಶ್ವವೇ ಎದುರು ನೋಡುತ್ತಿರುವ ಕಾಂತಾರ ಚಾಪ್ಟರ್‌-1 (Kantara Chapter 1) ಚಿತ್ರದ ಕನ್ನಡ, ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಯ ಟ್ರೇಲರ್ ಬಿಡುಗಡೆ ಆಗಿದೆ. ಇಡೀ ಟ್ರೈಲರ್‌ನುದ್ದಕ್ಕೂ ದೃಶ್ಯ ವೈಭವ ಕಾಣಬಹುದು. ರಾಜ ಮತ್ತು ಕಾಡಿನ ಜನರ ನಡುವಿನ ಕಥೆ ಹಾಗೂ ಕಾಂತಾರ ನೆಲದ ಮಣ್ಣಿಗೆ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲು ಹೊರಟಿರುವುದು ಪ್ರಮುಖ ಅಂಶ.

    ಟ್ರೈಲರ್‌ ರಿಲೀಸ್‌ ಬಳಿಕ ಪ್ರೆಸ್‌ಮೀಟ್‌ನಲ್ಲಿ ಮಾತನಾಡಿರುವ ನಟ ರಿಷಬ್ ಶೆಟ್ಟಿ (Rishab Shetty )ಸಿನಿ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ. ಕಾಂತಾರ ಸಿನಿಮಾ 5 ವರ್ಷದ ದೊಡ್ಡ ಜರ್ನಿ. ಈ ಸಿನಿಮಾ ಕಂಪ್ಲೀಟ್‌ ಮಾಡೋಕೆ ಆಗ್ತಿರಲಿಲ್ಲ, ಅಷ್ಟು ಅಡೆತಡೆಗಳು ಎದುರಿಸಿದ್ದೀನಿ. ನನ್ನ ಹೆಂಡ್ತಿ ಅದೆಷ್ಟು ಹರಕೆ ಹೊತ್ತಿದ್ದಾಳೋ.. ನಾನು ಶೂಟಿಂಗ್ ಹೋಗ್ತಿದ್ರೆ ದೇವರ ಮುಂದೆ ಪ್ರಾರ್ಥನೆ ಮಾಡ್ತಿದ್ಲು. ಇನ್ನೊಂದು ಸಲ ಹೇಗಿದ್ದೀರ ಅಂತ ಕೇಳಿದ್ರೆ ಅತ್ತೆ ಬಿಡ್ತೀನಿ, ಅಷ್ಟೊಂದು ಎಮೋಷನಲ್ ಜರ್ನಿ ಇದು ಅಂತ ಹೇಳಿಕೊಂಡ್ರು.

    ನನ್ನ ಮಕ್ಕಳು ಸ್ಕೂಲ್‌ಗೆ ಹೋಗೋದನ್ನ ನೋಡೋಕು ಟೈಮ್ ಸಿಗ್ತಿರ್ಲಿಲ್ಲ. ಫಾರೆಸ್ಟ್ ಮಿನಿಸ್ಟರ್ ಇಂದ ಎಲ್ರು ನನಗೆ ಈ ಚಿತ್ರಕ್ಕೆ ಸಹಕಾರ ನೀಡಿದ್ದಾರೆ. ಅಲ್ಲದೇ ಸರಿಯಾಗಿ ಮಲಗಿ ಮೂರು ತಿಂಗಳಾಯ್ತು. ಕೇವಲ 2 ಗಂಟೆ ಅಷ್ಟೇ ಮಲಗ್ತಿದ್ದೆ. ಲೆಕ್ಕ ಹಾಕಿದ್ರೆ 4 ಸಲ ನಾನು ಸತ್ತೇ ಹೋಗ್ತಿದ್ದೆ, ದೈವ ನನನ್ನು ಬದುಕಿಸಿದೆ ಅಂತ ಭಾವುಕರಾದ್ರು.

    ಗುಲ್ಶನ್ ದೇವಯ್ಯ ಬಾಲಿವುಡ್ ಅವ್ರು ಅಲ್ಲ ಕನ್ನಡದ ಕೂರ್ಗ್ ನವರು.. ಮೂರು ವರ್ಷದಲ್ಲಿ ನಾಲ್ಕುವರೆ ಲಕ್ಷ ಕೆಲಸಗಾರರಿಗೆ ಹೊಂಬಾಳೆ ಊಟ ಹಾಕಿದೆ. ಕಾಂತಾರ ದೊಡ್ಡ ಸ್ಕೇಲ್ ಇರ್ಬೋದು. ಇದಕ್ಕೆ ಮೂಲ ಕಾರಣ ಕನ್ನಡಿಗರು ಮತ್ತು ಮಾಧ್ಯಮದವರು. ಪ್ರಪಂಚದಲ್ಲಿ ಏನು ನಡೀತಿದೆ ಅನ್ನೋ ಜನರಲ್ ನಾಲೆಡ್ಜ್ ಇಲ್ಲ. ಮೂರು ವರ್ಷದಿಂದ ಸಿನಿಮಾದಲ್ಲೇ ಮುಳುಗಿ ಹೋಗಿದ್ವಿ. ಈಗ ಟ್ರೈಲರ್‌ ರಿಲೀಸ್‌ ಆಗಿದ್ದು, ಅದ್ಭುತ ರೆಸ್ಪಾನ್ಸ್‌ ಸಿಕ್ತಿದೆ ಎಂದು ತಿಳಿಸಿದ್ರು.

    ಕೊಚ್ಚಿಯಿಂದ ಪ್ರಚಾರ ಕಾರ್ಯ ಶುರು
    ಇನ್ನೂ ಸಿನಿಮಾ ಟಿಕೆಟ್‌ ಕಡಿಮೆಯಾಗಿದ್ದಕ್ಕೆ ಹೊಂಬಾಳೆ ಕೋರ್ಟ್ ಮೆಟ್ಟಿಲೇರಿದ ವಿಚಾರಕ್ಕೆ, ಇದರ ಬಗ್ಗೆ ನಾನು ತುಂಬಾ ಚರ್ಚೆ ಮಾಡಬೇಕು. ಈ ದಿನ ಇದರ ಬಗ್ಗೆ ಮಾತಾಡೋದು ಬೇಡ. ಮತ್ತೊಮ್ಮೆ ಮಾತಾಡ್ತೀನಿ. 27 ರಿಂದ ನಾವು ಪ್ರಚಾರ ಕಾರ್ಯ ಶುರು ಮಾಡ್ತೀವಿ. ಮೊದಲು ಕೊಚ್ಚಿ, ಚೆನ್ನೈ, ಹೈದರಾಬಾದ್ ಹಾಗೂ ನಾರ್ಥ್ ಇಂಡಿಯಾದಲ್ಲಿ ಪ್ರಚಾರ ಮಾಡಲಿದ್ದೇವೆ ಎಂದು ತಿಳಿಸಿದರು.

    ಇನ್ನೂ ʻಕಾಂತಾರʼ ಕಥೆಯ ಬಗ್ಗೆ ಹೇಳಿದ ರಿಷಭ್‌
    ಈ ಕಥೆಯ ಹಿನ್ನೆಲೆ ನನಗೆ ಬಾಲ್ಯದಿಂದಲೇ ಇದೆ. ನಾನು ಈ ಸಿನಿಮಾ ಮಾಡೋದಕ್ಕೂ ಮುನ್ನ ದೈವ ನರ್ತಕರು, ಪ್ರೊಫೆಸರ್ ಸೇರಿದಂತೆ ಹಲವರ ಬಳಿ ಮಾತಾಡಿ ಸಾಕಷ್ಟು ಅಧ್ಯಯನ ನಡೆಸಿದ್ದೇವೆ. ಕಥೆಗೆ ಬೇಕಾದಂತೆ ಮಾಹಿತಿಯನ್ನ ಕಲೆಹಾಕಿ ನಾವು ಸಿದ್ಧತೆ ನಡೆಸಿದ್ದೇವೆ. ಕಲರಿ ಪಯಟ್ಟು ಯುದ್ಧದ ಕಲೆಯನ್ನ ಮತ್ತೆ ಜನರ ಮುಂದಿಡುವ ಪ್ರಯತ್ನ ಮಾಡಿದ್ದೇವೆ ಎಂದು ವಿವರಿಸಿದರು.

  • ಹಿಂದೆಂದೂ ಕಂಡು ಕೇಳರಿಯದ ರುಕ್ಮಿಣಿ ವಸಂತ್ ಬೋಲ್ಡ್ ಫೋಟೋಶೂಟ್

    ಹಿಂದೆಂದೂ ಕಂಡು ಕೇಳರಿಯದ ರುಕ್ಮಿಣಿ ವಸಂತ್ ಬೋಲ್ಡ್ ಫೋಟೋಶೂಟ್

    ಮೊನ್ನೆಯಷ್ಟೇ `ಸಪ್ತಸಾಗರದಾಚೆ ಎಲ್ಲೋ’ ಚಿತ್ರ ತಮಗೆ ತಂದುಕೊಟ್ಟ ಯಶಸ್ಸನ್ನ ನೆನೆದು ಸಾರ್ಥಕ ಭಾವದಿಂದ ಪತ್ರ ಬರೆದಿದ್ದರು ರುಕ್ಮಿಣಿ ವಸಂತ್ (Rukmini Vasanth). ಮೈತುಂಬಾ ಸೀರೆಯುಟ್ಟು ಕಾಣಿಸ್ಕೊಳ್ಳುವುದೇ ರುಕ್ಮಿಣಿ ಶೈಲಿಯಾಗಿತ್ತು. ಇದುವರೆಗೂ ರುಕ್ಮಿಣಿ ಪಕ್ಕದ್ಮನೆ ಹುಡುಗಿ ಲುಕ್‌ನಿಂದಲೇ ಮನಸೊರೆಗೊಂಡವರು. ಆದರೆ ಇದೇ ಮೊದಲ ಬಾರಿ ಬೋಲ್ಡ್ ಫೋಟೋಶೂಟ್ ಮಾಡಿಸಿದ್ದಾರೆ ರುಕ್ಮಿಣಿ. ಕೆಂಪು ಬಣ್ಣದ ಗೌನ್ ಧರಿಸಿರುವ ರುಕ್ಮಿಣಿ ಹಿಂದೆಂದೂ ಕಂಡು ಕೇಳರಿಯದ ಬೋಲ್ಡ್ ಅವತಾರದಲ್ಲಿ ಪೋಸ್ ಕೊಟ್ಟಿದ್ದಾರೆ.

    ಸಿನಿಮಾ ಪಾತ್ರ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಅಪ್‌ಲೋಡ್ ಮಾಡುವಲ್ಲೂ ರುಕ್ಮಿಣಿ ಇದುವರೆಗೆ ಬೋಲ್ಡ್ ಲುಕ್ ಲೈನ್ ದಾಟಿರಲಿಲ್ಲ. ಆದರೆ ಪಾತ್ರಕ್ಕೆ ತಕ್ಕಂತೆ ಬದಲಾವಣೆ, ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳುವಿಕೆ ಅನಿವಾರ್ಯ ಅನ್ನೋದು ರುಕ್ಮಿಣಿ ಗಮನಕ್ಕೆ ಈಗ ಬಂದಿರಬಹುದು. ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿರುವ ಹೊಸ ಫೋಟೋಶೂಟ್‌ನಲ್ಲಿ ರುಕ್ಮಿಣಿ ಎದೆಸೀಳು ಕಾಣುವಂತೆ ಉಡುಗೆ ಧರಿಸಿದ್ದಾರೆ.

    ದಕ್ಷಿಣ ಭಾರತದಲ್ಲಿ ಇದೀಗ ರುಕ್ಮಿಣಿ ವಸಂತ್ ಹೆಚ್ಚು ಜನಪ್ರಿಯರಾಗಿದ್ದು, ಕನ್ನಡದ ಜೊತೆ ಜೊತೆಗೆ ಪರಭಾಷೆಯ ಇಂಡಸ್ಟ್ರಿಯಲ್ಲೂ ಹೆಸರು ಮಾಡುತ್ತಿದ್ದಾರೆ. ಕಾಂತಾರ-1 , ಡ್ರ್ಯಾಗನ್‌ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದ ಬಳಿಕವಂತೂ ರುಕ್ಮಿಣಿ ಖ್ಯಾತಿ ಮೇಲ್ಪಂಕ್ತಿಗೆ ಬಂದಿದೆ. ಬೇಡಿಕೆ, ಅವಕಾಶಗಳು ಹೆಚ್ಚಾದಂತೆ ಸೋಶಿಯಲ್ ಮೀಡಿಯಾದಲ್ಲೂ ಹೆಚ್ಚು ಆಕ್ವೀವ್ ಆಗತೊಡಗಿದ್ದಾರೆ ರುಕ್ಮಿಣಿ. ಒಟ್ನಲ್ಲಿ ರುಕ್ಮಿಣಿ ಫ್ಯಾಶನ್ ಶೈಲಿ ಬದಲಾಗುತ್ತಿದೆ.