Tag: Rudy Giuliani

  • ಕೆನ್ನೆ ಮೇಲೆ ಇಳಿದ ಹೇರ್ ಡೈ ಮಿಶ್ರಿತ ಬೆವರು – ಟ್ರಂಪ್ ವಕೀಲನ ವೀಡಿಯೋ ಫುಲ್ ವೈರಲ್

    ಕೆನ್ನೆ ಮೇಲೆ ಇಳಿದ ಹೇರ್ ಡೈ ಮಿಶ್ರಿತ ಬೆವರು – ಟ್ರಂಪ್ ವಕೀಲನ ವೀಡಿಯೋ ಫುಲ್ ವೈರಲ್

    – ನೆಟ್ಟಿಗರಿಗೆ ಆಹಾರವಾದ ರೂಡಿ

    ವಾಷಿಂಗ್ಟನ್: ಪತ್ರಿಕಾಗೋಷ್ಠಿ ವೇಳೆ ಇಳಿದ ಬೆವರಿನಿಂದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಕೀಲ ಫುಲ್ ಟ್ರೋಲ್ ಆದ ಘಟನೆ ನಡೆದಿದೆ.

    ಹೌದು. ಟ್ರಂಪ್ ಅವರ ಖಾಸಗಿ ವಕೀಲ ರೂಡಿ ಗಿಯುಲಿಯಾನಿ(76) ಅವರು ಸುದ್ದಿಗೋಷ್ಠಿ ಕರೆದಿದ್ದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದಂತೆಯೇ ಅವರು ತೀವ್ರ ಮುಜುಗರಕ್ಕೆ ಒಳಗಾಗುವ ಸಂದರ್ಭ ಎದುರಿಸಬೇಕಾಯಿತು. ಪ್ರೆಸ್ ಕಾನ್ಫರೆನ್ಸ್ ನಿಂದ ಎದ್ದು ಹೋಗಲೂ ಸಾಧ್ಯವಾಗದೆ ಇಕ್ಕಟ್ಟಿಗೆ ಸಿಲುಕುವಂತಾಯಿತು.

    https://twitter.com/richard_littler/status/1329495878273556488

    ರೂಡಿ ಅವರು 2020ರ ಅಧ್ಯಕ್ಷೀಯ ಚುನಾವಣೆಗೆ ನಡೆದ ಮತದಾನ ಹಾಗೂ ಎಣಿಕೆಯಲ್ಲಿ ವಂಚನೆ ನಡೆದಿದೆ ಎಂದು ಗಂಭೀರ ಆರೋಪ ಮಾಡುತ್ತಿದ್ದರು. ಈ ಮಧ್ಯೆ ಗೋಷ್ಠಿಯಲ್ಲಿ ಹಾಜರಿದ್ದವರ ದೃಷ್ಠಿ ರೂಡಿ ಬೆವರಿನ ಮೇಲೆ ನೆಟ್ಟಿತ್ತು. ರೂಡಿ ಕೆನ್ನಯ ಮೇಲೆ ಹೇರ್ ಡೈ ಮಿಶ್ರಿತ ಬೆವರು ಸುರಿಯಲಾರಂಭಿಸಿತ್ತು. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆಯೇ ರೂಡಿ ಪದೇ ಪದೇ ಮುಖವನ್ನು ಒರೆಸಿಕೊಂಡಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಅಲ್ಲದೆ ಹಲವಾರು ಮೀಮ್ಸ್  ಗಳು ಹುಟ್ಟಿಕೊಂಡಿವೆ.

    ಸುದ್ದಿಗೋಷ್ಠಿಗೆ ಆಗಮಿಸುವ ಮೊದಲು ಹೇರ್ ಡೈ ಮಾಡಿಸಿಕೊಂಡಿರಬೇಕು. ಹೀಗಾಗಿ ಪತ್ರಿಕಾಗೋಷ್ಠಿ ವೇಳೆ ಬೆವರಿದಾಗ ಆ ಬೆವರು ಕಪ್ಪು ಹೇರ್ ಡೈನೊಂದಿಗೆ ಮಿಶ್ರಿತವಾಗಿ ಕನ್ನೆ ಮೂಲದ ಇಳಿದಿದೆ. ಈ ಮೂಲಕ ಅವರ ಬೆಳ್ಳಗಿನ ಮುಖವನ್ನು ಕಪ್ಪು ಮಾಡಿದೆ ಎಂದು ರೂಡಿ ಟ್ರೋಲ್ ಆಗುತ್ತಿದ್ದಾರೆ.