Tag: Rudraprayag

  • ಉತ್ತರಾಖಂಡದ ರುದ್ರಪ್ರಯಾಗ, ಚಮೋಲಿಯಲ್ಲಿ ಮೇಘಸ್ಫೋಟ – ಹಲವರು ನಾಪತ್ತೆ ಶಂಕೆ

    ಉತ್ತರಾಖಂಡದ ರುದ್ರಪ್ರಯಾಗ, ಚಮೋಲಿಯಲ್ಲಿ ಮೇಘಸ್ಫೋಟ – ಹಲವರು ನಾಪತ್ತೆ ಶಂಕೆ

    ಡೆಹ್ರಾಡೂನ್: ಉತ್ತರಾಖಂಡದ (Uttarakhand) ರುದ್ರಪ್ರಯಾಗ, (Rudraprayag) ಚಮೋಲಿ, (Chamoli) ಜಿಲ್ಲೆಗಳಲ್ಲಿ ಭಾರೀ ಮೇಘಸ್ಫೋಟ (Cloudburst) ಸಂಭವಿಸಿದ್ದು, ಹಲವರು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.

    ಮೇಘಸ್ಫೋಟದಿಂದಾಗಿ ಹಠಾತ್ ಪ್ರವಾಹ ಉಂಟಾಗಿದ್ದು, ದೇವಲ್‌ನ ಮೊಪಾಟಾ ಪ್ರದೇಶದಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ. ಇನ್ನೂ 15ಕ್ಕೂ ಹೆಚ್ಚು ಜಾನುವಾರುಗಳು ನೀರಿನಲ್ಲಿ ಕೊಚ್ಚಿಹೋಗಿವೆ. ರುದ್ರಪ್ರಯಾಗ ಜಿಲ್ಲೆಯಲ್ಲಿ ಅಲಕನಂದಾ ಮತ್ತು ಮಂದಾಕಿನಿ ನದಿಗಳ ಸಂಗಮದಲ್ಲಿ ನೀರಿನ ಮಟ್ಟ ನಿರಂತರವಾಗಿ ಏರಿಕೆಯಾಗುತ್ತಿದ್ದು, ಹನುಮಾನ್ ದೇವಾಲಯ ಮುಳುಗಡೆಯಾಗಿದೆ.ಇದನ್ನೂ ಓದಿ: ಹಾಸನ | ರಸ್ತೆಗೆ ಮರ ಕೆಡವಿ ವಾಹನ ಸವಾರರನ್ನು ತಡೆದ ಗಜರಾಜ!

    ಶ್ರೀನಗರ ಮತ್ತು ರುದ್ರಪ್ರಯಾಗ ನಡುವಿನ ಬದರಿನಾಥ ಹೆದ್ದಾರಿ ಮುಳುಗಡೆಯಾದ ಹಿನ್ನೆಲೆ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೀಗಾಗಿ ಯಾತ್ರಿಕರನ್ನು ಪರ್ಯಾಯ ಮಾರ್ಗಗಳ ಮೂಲಕ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಭದ್ರತಾ ದೃಷ್ಟಿಯಿಂದ ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

    ಇನ್ನೂ ಕೇದಾರನಾಥ ಕಣಿವೆಯ ಲಾವಾರಾ ಗ್ರಾಮದಲ್ಲಿಯೂ ಭೀಕರ ಪ್ರವಾಹ ಉಂಟಾಗಿದೆ. ಪರಿಣಾಮ ರಸ್ತೆಯ ಸೇತುವೆಯೊಂದು ಕೊಚ್ಚಿಹೋಗಿದ್ದು, ಚೆನಾಗಡ್‌ನಲ್ಲಿಯೂ ಗಂಭೀರ ಪರಿಸ್ಥಿತಿ ಉಂಟಾಗಿದೆ. ಭಾರೀ ಮಳೆಯ ಹಿನ್ನೆಲೆ ರುದ್ರಪ್ರಯಾಗ, ಬಾಗೇಶ್ವರ, ಚಮೋಲಿ, ಹರಿದ್ವಾರ ಮತ್ತು ಪಿಥೋರಗಢ ಜಿಲ್ಲೆಗಳಾದ್ಯಂತ ಇಂದು (ಆ.29) ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಪರಿಸ್ಥಿತಿ ನಿಭಾಯಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ಪುಷ್ಕರ್ ಸಿಂಗ್ ಧಾಮಿ ಭರವಸೆ ನೀಡಿದ್ದಾರೆ.ಇದನ್ನೂ ಓದಿ: ಸಾಮೂಹಿಕ ಗಣೇಶ ವಿಸರ್ಜನೆಗೆ ಬೆಂಗ್ಳೂರಿನ ಕೆಲವು ಏರಿಯಾಗಳಲ್ಲಿ ಮದ್ಯ ನಿಷೇಧ

  • ಅಲಕಾನಂದ ನದಿಗೆ ಉರುಳಿದ 18 ಪ್ರಯಾಣಿಕರಿದ್ದ ಬಸ್‌ – ಇಬ್ಬರು ಸಾವು, 10 ಮಂದಿ ನಾಪತ್ತೆ

    ಅಲಕಾನಂದ ನದಿಗೆ ಉರುಳಿದ 18 ಪ್ರಯಾಣಿಕರಿದ್ದ ಬಸ್‌ – ಇಬ್ಬರು ಸಾವು, 10 ಮಂದಿ ನಾಪತ್ತೆ

    ಡೆಹ್ರಾಡೂನ್: ಉತ್ತರಾಖಂಡದ (Uttarakhand) ರುದ್ರಪ್ರಯಾಗ (Rudraprayag) ಜಿಲ್ಲೆಯಲ್ಲಿ ಅಲಕಾನಂದ ನದಿಗೆ (Alakananda River) 18 ಪ್ರಯಾಣಿಕರಿದ್ದ ಬಸ್‌ ಬಿದ್ದು ಇಬ್ಬರು ಸಾವನ್ನಪ್ಪಿದ್ದು, 10 ಮಂದಿ ನಾಪತ್ತೆಯಾಗಿದ್ದಾರೆ.

    ಏಳು ಜನರನ್ನು ರಕ್ಷಿಸಲಾಗಿದ್ದು ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ನಾಪತ್ತೆಯಾದವರ ಪತ್ತೆ ಕಾರ್ಯ ನಡೆಸುತ್ತಿದೆ.

    ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಸ್ಸು ಬಿದ್ದಿದೆ. ಕೆಲವು ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರಿಂದ ಸಾವು ನೋವು ಕಡಿಮೆಯಾಗಿದೆ.

    ಪೊಲೀಸ್, ಜಿಲ್ಲಾಡಳಿತ ಆಡಳಿತ ಮತ್ತು ವಿಪತ್ತು ನಿರ್ವಹಣಾ ವಿಭಾಗದ ಉನ್ನತ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ವದಂತಿಗಳನ್ನು ಹರಡದಂತೆ ಸರ್ಕಾರ ಜನರಲ್ಲಿ ಮನವಿ ಮಾಡಿದೆ.

  • ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಹೆದ್ದಾರಿಯಲ್ಲಿ ತುರ್ತು ಭೂಸ್ಪರ್ಶ

    ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಹೆದ್ದಾರಿಯಲ್ಲಿ ತುರ್ತು ಭೂಸ್ಪರ್ಶ

    – ಪೈಲೆಟ್‌ಗೆ ಗಾಯ, ಪ್ರಯಾಣಿಕರು ಸೇಫ್

    ಡೆಹ್ರಾಡೂನ್: ಟೇಕ್ ಆಫ್ ವೇಳೆ ತಾಂತ್ರಿಕ ದೋಷ ಉಂಟಾದ ಪರಿಣಾಮ ಕೇದಾರನಾಥಕ್ಕೆ (Kedarnath) ತೆರಳುತ್ತಿದ್ದ ಹೆಲಿಕಾಪ್ಟರ್ (Helicopter) ಹೆದ್ದಾರಿಯಲ್ಲೇ ತುರ್ತು ಭೂಸ್ಪರ್ಶ ಮಾಡಿದ ಘಟನೆ ಉತ್ತರಾಖಂಡದ (Uttarakhand) ರುದ್ರಪ್ರಯಾಗದಲ್ಲಿ ನಡೆದಿದೆ.

    ಘಟನೆಯಲ್ಲಿ ಪೈಲೆಟ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಲಿಕಾಪ್ಟರ್‌ನಲ್ಲಿ ಪೈಲೆಟ್ ಹಾಗೂ ಐದು ಮಂದಿ ಪ್ರಯಾಣಿಕರಿದ್ದರು. ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ. ಈ ಹೆಲಿಕಾಪ್ಟರ್ ಕ್ರೆಸ್ಟೆಲ್ ವಿಮಾನಯಾನ ಸಂಸ್ಥೆಗೆ ಸೇರಿದೆ. ಇದನ್ನೂ ಓದಿ: ಮಂಗಳೂರು| ಸೆಮಿನಾರ್ ತಪ್ಪಿಸಲು ವಿದ್ಯಾರ್ಥಿನಿಯಿಂದಲೇ ಮೆಡಿಕಲ್ ಕಾಲೇಜಿಗೆ ಬಾಂಬ್ ಬೆದರಿಕೆ

    ಈ ಹೆಲಿಕಾಪ್ಟರ್ ರುದ್ರಪ್ರಯಾಗ (Rudraprayag) ಜಿಲ್ಲೆಯ ಬಡಾಸು ಪ್ರದೇಶದ ಹೆಲಿಪ್ಯಾಡ್‌ನಿಂದ ಮಧ್ಯಾಹ್ನ 12:52ಕ್ಕೆ ಹೊರಟಿತ್ತು. ಆದರೆ ಟೇಕ್ ಆಫ್ ನಂತರ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪೈಲಟ್ ಹೆದ್ದಾರಿಯಲ್ಲಿಯೇ ತುರ್ತು ಲ್ಯಾಂಡಿಂಗ್ ಮಾಡಿದ್ದಾರೆ. ತುರ್ತು ಭೂಸ್ಪರ್ಶದ ವೇಳೆ ಹೆಲಿಕಾಪ್ಟರ್‌ನ ಹಿಂಭಾಗ ಕಾರಿಗೆ ತಾಗಿದ್ದು, ಕಾರು ಜಖಂಗೊಂಡಿದೆ. ಇದನ್ನೂ ಓದಿ: ಚೆನಾಬ್ ರೈಲ್ವೆ ಸೇತುವೆ ನಿರ್ಮಾಣ ಕಾರ್ಯದಲ್ಲಿ 17 ವರ್ಷ ಕಳೆದ IISC ಪ್ರೊಫೆಸರ್ ಮಾಧವಿ ಲತಾ

  • ಬೆಲ್‍ಬಾಟಂ ನಂತರ ಬೇಡಿಕೆಯ ಹೀರೋ ಆದರೇ ರಿಷಬ್?

    ಬೆಲ್‍ಬಾಟಂ ನಂತರ ಬೇಡಿಕೆಯ ಹೀರೋ ಆದರೇ ರಿಷಬ್?

    ಬೆಂಗಳೂರು: ಒಂದು ಕಾಲದಲ್ಲಿ ನಾಯಕ ನಟನಾಗಬೇಕೆಂಬ ಕನಸು ಹೊತ್ತು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದವರು ರಿಷಬ್ ಶೆಟ್ಟಿ. ಆದರೆ ತನ್ನೊಳಗೆ ಗಂಭೀರವಾಗಿರೋದು ನಿರ್ದೇಶಕನಾಗೋ ಕನಸು ಎಂಬುದನ್ನು ಖಚಿತಪಡಿಸಿಕೊಂಡಿದ್ದ ರಿಷಬ್ ಆ ನಂತರದಲ್ಲಿ ಆ ಕ್ಷೇತ್ರದಲ್ಲಿಯೇ ತೊಡಗಿಸಿಕೊಂಡು ಯಶ ಕಂಡಿದ್ದರು. ಆದರೆ ಹೀಗೆ ನಿರ್ದೇಶನದಲ್ಲಿ ಕಳೆದು ಹೋಗಿದ್ದ ಅವರ ಪಾಲಿಗೆ ಸರ್ ಪ್ರೈಸ್ ಎಂಬಂತೆ ಕೂಡಿ ಬಂದಿದ್ದ ಅವಕಾಶ ಬೆಲ್ ಬಾಟಂನದ್ದು!

    ಆ ಚಿತ್ರ ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿ ದಾಖಲಾಗುತ್ತಲೇ ರಿಷಬ್ ಶೆಟ್ಟರನ್ನು ನಾಯಕನನ್ನಾಗಿ ಮಾಡೋ ಉತ್ಸಾಹವೂ ಗಾಂಧಿನಗರದಲ್ಲಿ ಹೆಚ್ಚಿಕೊಂಡಿದೆ. ಅಷ್ಟಕ್ಕೂ ಬೆಲ್ ಬಾಟಂ ಚಿತ್ರ ಯಶ ಕಂಡ ನಂತರ ಅವರು ಹೀರೋ ಆಗಿಯೇ ಮುಂದುವರೆಯುತ್ತಾರೆಂದೇ ಬಹುತೇಕರು ಅಂದುಕೊಂಡಿದ್ದರು. ಆದರೆ ಒಂದಷ್ಟು ಕಾಲ ಸುಮ್ಮನಿದ್ದ ರಿಷಬ್ ಆ ನಂತರದಲ್ಲಿ ನಿರ್ದೇಶಕನಾಗಿಯೇ ಮುಂದುವರೆಯುವ ನಿರ್ಧಾರ ಪ್ರಕಟಿಸಿದ್ದರು. ಅದರನ್ವಯ ರುದ್ರಪ್ರಯಾಗ ಎಂಬ ಚಿತ್ರವನ್ನೂ ಘೋಷಣೆ ಮಾಡಿದ್ದರು. ಇದೀಗ ಅದರ ಕೆಲಸ ಕಾರ್ಯದಲ್ಲಿ ಬ್ಯುಸಿಯಾಗಿದ್ದು ರಿಷಬ್ ನಿರ್ದೇಶನದಲ್ಲಿಯೇ ಮುಂದುವರೆಯುತ್ತಾರೆ ಅಂತ ನೀವಂದುಕೊಂಡಿದ್ದರೆ ಇಲ್ಲಿ ಬೇರೆಯದ್ದೇ ಸುದ್ದಿಯೊಂದಿದೆ!

    ಇದರನ್ವಯ ಹೇಳೋದಾದರೆ ರಿಷಬ್ ಹೀರೋ ಆಗಿ ಏಕ ಕಾಲದಲ್ಲಿಯೇ ನಾಲ್ಕು ಚಿತ್ರಗಳನ್ನು ಒಪ್ಪಿಕೊಂಡಿದ್ದಾರಂತೆ. ಬೆಲ್ ಬಾಟಂ ಚಿತ್ರ ಮುಗಿದ ಕೂಡಲೆ ಅವರಿಗಾಗಿ ಕಥೆ ರೆಡಿ ಮಾಡಿಕೊಂಡವರ ಸಂಖ್ಯೆಯೂ ಹೆಚ್ಚಾಗಿತ್ತಂತೆ. ಆದರೆ ಈ ಬಗ್ಗೆ ಯಾವ ನಿರ್ಧಾರ ತಳೆಯೋದೆಂಬ ಗೊಂದಲಕ್ಕೆ ಬಿದ್ದಿದ್ದ ರಿಷಬ್ ಅದರಲ್ಲಿ ಆರು ಕಥೆಯನ್ನು ಆರಿಸಿಕೊಂಡಿದ್ದರಂತೆ. ಆದರೆ ಕಡೆಗೆ ಅದರಲ್ಲಿ 4 ಚಿತ್ರಗಳನ್ನು ಫೈನಲ್ ಮಾಡಿಕೊಂಡಿದ್ದಾರಂತೆ. ಅವರು ರುದ್ರಪ್ರಯಾಗದ ಜೊತೆಯಲ್ಲಿಯೇ ಈ ಚಿತ್ರಗಳಲ್ಲಿ ಅಭಿನಯಿಸುತ್ತಾರಾ ಅಥವಾ ಆ ನಂತರ ಅಖಾಡಕ್ಕಿಳಿಯುತ್ತಾರಾ ಅನ್ನೋದಷ್ಟೇ ಈಗಿರೋ ಪ್ರಶ್ನೆ.

  • ಉತ್ತರ ಭಾರತದಲ್ಲಿ ಪ್ರಬಲ ಭೂಕಂಪನ

    ನವದೆಹಲಿ: ದೇಶದ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದಾದ್ಯಂತ ಸೋಮವಾರ ರಾತ್ರಿ 10.35ರ ಸುಮಾರಿಗೆ ಪ್ರಬಲ ಭೂಕಂಪ ಸಂಭವಿಸಿದೆ.

    ಸುಮಾರು 30 ಸೆಕೆಂಡ್‍ಗಳ ಭೂಮಿ ಕಂಪಿಸಿದ ಅನುಭವವಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಉತ್ತರಾಖಂಡದ ಪಿಥೌರಾಗಢ ಭೂಕಂಪನದ ಕೇಂದ್ರ ಬಿಂದು ಎನ್ನಲಾಗಿದ್ದು, ರಿಕ್ಟರ್ ಮಾಪಕದಲ್ಲಿ 5.8ರಷ್ಟು ತೀವ್ರತೆ ದಾಖಲಾಗಿದೆ.

    ನವದೆಹಲಿ, ಎನ್‍ಸಿಆರ್, ಪಂಜಾಬ್, ಹರ್ಯಾಣ, ಚಂಡೀಗಢ, ಡೆಹ್ರಾಡೂನ್, ಸಹರಾನ್‍ಪುರ, ಮುಸ್ಸೋರಿ, ಗಾಜಿಯಾಬಾದ್, ಚಂಡೀಗಢದಲ್ಲೂ ಭೂಕಂಪನದ ಅನುಭವವಾಗಿದೆ. ಭೂಕಂಪ ಪ್ರಬಲವಾಗಿದ್ದರೂ ಇದುವರೆಗೆ ಯಾವುದೇ ಹಾನಿ ಅಥವಾ ಸಾವು ನೋವಿನ ವರದಿಯಾಗಿಲ್ಲ.