Tag: rude behavior

  • ಕುಡಿದ ಮತ್ತಿನಲ್ಲಿ ಕಿರಿಕಿರಿ ಮಾಡಿದ್ದಕ್ಕೆ ಭಾರತೀಯ ವ್ಯಕ್ತಿಗೆ ಜೈಲು

    ಸಾರ್ವಜನಿಕ ಸ್ಥಳದಲ್ಲಿ ಕುಡಿದು ಕಿರಿಕಿರಿ ಮಾಡಿದ್ದಕ್ಕೆ ಸಿಂಗಾಪುರದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ಸೋಮವಾರ 5 ವಾರಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

    ಮೂರ್ತಿ ನಾಗಪ್ಪನ್(65) ಎಂಬ ವ್ಯಕ್ತಿ ಮಾರ್ಚ್ 28 ರಂದು ಇಟಲ್ ಇಂಡಿಯಾ ಆವರಣದ ಟೆಕ್ಕಾ ಮಾರ್ಕೆಟ್ ಬಳಿ ಪಾನಮತ್ತರಾಗಿದ್ದು, ಮಾಸ್ಕ್ ಕೂಡಾ ಸರಿಯಾಗಿ ಧರಿಸದಿದ್ದರಿಂದ ಬಸ್ ಏರುವಾಗ ಸಾರ್ವಜನಿಕರಿಗೆ ಕಿರಿಕಿರಿ ಮಾಡಿದ್ದಾಗಿ ವರದಿಯಾಗಿತ್ತು.

    ಬಸ್ ಚಾಲಕ ಆತನಿಗೆ ಮಾಸ್ಕ್ ಸರಿಯಾಗಿ ಧರಿಸುವಂತೆ ಎಚ್ಚರಿಸಿದಾಗ ಕೋಪಗೊಂಡ ನಾಗಪ್ಪನ್ 33 ವರ್ಷದ ವ್ಯಕ್ತಿಯೊಬ್ಬನ ಮೇಲೆ ಅಸಭ್ಯವಾಗಿ ವರ್ತಿಸಿದ್ದಾನೆ. ಸುಮಾರು 15 ನಿಮಿಷಗಳ ನಂತರ ಪೊಲೀಸರಿಗೆ ವಿಷಯ ತಿಳಿಸಲಾಗಿತ್ತು. ಇದನ್ನೂ ಓದಿ: 17 ವರ್ಷ ಹಿಂದಿನ ಕೊಲೆಯ ಗುಟ್ಟು- ಕೈದಿ ಮತ್ತೆ ಅರೆಸ್ಟ್

    ALCOHOL

    ಮತ್ತೊಂದು ಘಟನೆಯಲ್ಲೂ ಆತ ಕುಡಿದ ಮತ್ತಿನಲ್ಲಿ ಪೊಲೀಸ್ ಅಧಿಕಾರಿ ಹಾಗೂ ಬಸ್ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಆರೋಪಿಗೆ ಸೋಮವಾರ 5 ತಿಂಗಳು ಜೈಲು ವಾಸ ಹಾಗೂ 1000 ಸಿಂಗಾಪುರ್ ಡಾಲರ್(ಸುಮಾರು 55 ಸಾವಿರ ರೂ.) ದಂಡವನ್ನು ವಿಧಿಸಲಾಗಿದೆ. ಇದನ್ನೂ ಓದಿ: ಮದುವೆಯಾಗಲು ನಿರಾಕರಿಸಿದ್ದಕ್ಕೆ ವ್ಯಕ್ತಿಯ ಮನೆ, ಆಟೋಗೆ ಬೆಂಕಿ ಹಚ್ಚಿದ ಮಹಿಳೆ!

  • ಕುಡಿದು ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಒದೆ ಕೊಟ್ಟ ಮಂಗಳಮುಖಿಯರು

    ಕುಡಿದು ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಒದೆ ಕೊಟ್ಟ ಮಂಗಳಮುಖಿಯರು

    ಹುಬ್ಬಳ್ಳಿ: ಕುಡಿದ ಮತ್ತಿನಲ್ಲಿ ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಹುಬ್ಬಳ್ಳಿಯಲ್ಲಿ ಮಂಗಳಮುಖಿಯರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.

    ಚೆನ್ನಮ್ಮ ಸರ್ಕಲ್ ಬಳಿಯ ಹಳೆ ಬಸ್ ನಿಲ್ದಾಣದ ಬಳಿ ಕುಡಿದು ಮಂಗಳಮುಖಿಯರು ಹಾಗೂ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಯುವಕ ಮಂಗಳಮುಖಿಯರು ಹಾಗೂ ಮಹಿಳೆಯರನ್ನು ಹಿಂಬಾಲಿಸಿಕೊಂಡು ಹೋಗಿ ಅಸಭ್ಯವಾಗಿ ವರ್ತಿಸಿದ್ದ. ಹೀಗಾಗಿ ಮಹಿಳೆಯರು ಹಾಗೂ ಮಂಗಳಮುಖಿಯರ ಜೊತೆ ವಾಗ್ವಾದ ನಡೆಸಿದ ಯುವಕನಿಗೆ ಮಂಗಳಮುಖಿಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣದ ಬಳಿಯ ಕೆಲ ಲಾಡ್ಜ್ ಗಳಲ್ಲಿ ವೇಶ್ಯಾವಾಟಿಕೆ ಎಗ್ಗಿಲ್ಲದೆ ನಡೆಯುತ್ತಿದ್ದು, ಯುವಕ ಮಹಿಳೆಯನ್ನು ಹಿಡಿಯಲು ಹೋಗಿಯೇ ಒದೆ ತಿಂದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ಘಟನೆಯ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲವಾದರೂ ಜನನಿಬಿಡ ಹಳೆ ಬಸ್ ನಿಲ್ದಾಣ ಹಾಗೂ ಚನ್ನಮ್ಮ ಸರ್ಕಲ್ ಬಳಿ ಮಹಿಳೆಯರು ಓಡಾಡಲು ಕಷ್ಟವಾಗುತ್ತಿದೆ. ಕುಡುಕರು ಹಾಗೂ ವಿಟಪುರುಷರ ಕಾಟ ಹೆಚ್ಚಳವಾಗಿದ್ದು, ಪೊಲೀಸರು ಕ್ರಮ ಕೈಗೊಳ್ಳುವ ಮೂಲಕ ಮಹಿಳೆಯರಿಗೆ ಹೆಚ್ಚಿನ ರಕ್ಷಣೆ ನೀಡುವ ಮೂಲಕ ಮರ್ಯಾದೆಯಿಂದ ಓಡಾಡುವಂತೆ ಅನುಕೂಲ ಮಾಡಿಕೊಡಬೇಕೆಂದು ಮಹಿಳೆಯರು ಆಗ್ರಹಿಸಿದ್ದಾರೆ.

  • ಯುವತಿ ಮುಂದೆ ಅಸಭ್ಯವಾಗಿ ವರ್ತಿಸಿದ ಯುವಕನ ಬಂಧನ

    ಯುವತಿ ಮುಂದೆ ಅಸಭ್ಯವಾಗಿ ವರ್ತಿಸಿದ ಯುವಕನ ಬಂಧನ

    ಬೆಂಗಳೂರು: ಯುವತಿಯ ಮುಂದೆ ಪ್ಯಾಂಟ್ ಜಿಪ್ ಬಿಚ್ಚಿ ವಿಕೃತಿ ಮೆರೆದ ಯುವಕನನ್ನು ಸಿಲಿಕಾನ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

    ವಿದ್ಯಾರಣ್ಯಪುರ ನಿವಾಸಿ ಕಾರ್ತಿಕ್ ಬಂಧಿತ ಅರೋಪಿಯಾಗಿದ್ದು, ಈ ಘಟನೆ ಜುಲೈ 27ರಂದು ಸಂಜೆ 4.30ರ ಸುಮಾರಿಗೆ ನಡೆದಿದೆ. ನಗರದ ನ್ಯೂ ಬಿಇಎಲ್ ರಸ್ತೆ ಎಜಿಎಸ್ ಲೇಔಟ್‍ನ ಪಾರ್ಕ್ ಬಳಿ ಕಾರ್ತಿಕ್ ಯುವತಿ ಮುಂದೆ ಅಸಭ್ಯವಾಗಿ ವರ್ತಿಸಿದ್ದನು.

    ಅಲ್ಲದೇ ಯುವತಿ ಮನೆಗೆ ಹೋಗಬೇಕಾದ್ರೆ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ವಿಕೃತ ಕಾಮಿ, ಆಕೆಯ ಬಳಿ ಬಂದು ಪ್ಯಾಂಟ್‍ನ ಜಿಪ್ ಬಿಚ್ಚಿ ವಿಕೃತವಾಗಿ ವರ್ತಿಸಿದ್ದನು. ಭಯಗೊಂಡ ಯುವತಿ ಮನೆಗೆ ತೆರಳಿ ಪಾಲಕರಿಗೆ ವಿಷಯ ತಿಳಿಸಿದ್ದಳು. ಯುವತಿಯ ತಂದೆ ನೆರೆಹೊರೆಯವರ ನೆರವಿನೊಂದಿಗೆ ಸ್ಥಳಕ್ಕೆ ತೆರಳಿ ಸಮೀಪದ ಕಟ್ಟಡದಲ್ಲಿನ ಸಿಸಿ ಕ್ಯಾಮೆರಾ ಪರಿಶೀಲಿಸಿದ್ರು. ಈ ವೇಳೆ ಕಾರಿನ ನೋಂದಣಿ ಸಂಖ್ಯೆ ಗೊತ್ತಾಗಿದ್ದು, ಅದರ ಆಧಾರದಲ್ಲಿ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಸದ್ಯ ಪ್ರಕರಣ ಸಂಬಂಧ ಸದಾಶಿವನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.