Tag: Rubio

  • ಟ್ರಂಪ್‌ ಆಡಳಿತದ ಮೊದಲ ಕ್ವಾಡ್‌ ಸಭೆಯಲ್ಲಿ ಸಚಿವ ಎಸ್.‌ ಜೈಶಂಕರ್‌ ಭಾಗಿ

    ಟ್ರಂಪ್‌ ಆಡಳಿತದ ಮೊದಲ ಕ್ವಾಡ್‌ ಸಭೆಯಲ್ಲಿ ಸಚಿವ ಎಸ್.‌ ಜೈಶಂಕರ್‌ ಭಾಗಿ

    ವಾಷಿಂಗ್ಟನ್‌: ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ (Donald Trump) ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ನಂತರ ವಾಷಿಂಗ್ಟನ್‌ ಡಿಸಿಯಲ್ಲಿ ನಡೆದ ʻಕ್ವಾಡ್‌ʼ ವಿದೇಶಾಂಗ ಸಚಿವರ ಸಚಿವರ ಸಭೆಯಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ (S. Jaishankar) ಭಾಗವಹಿಸಿದ್ದರು.

    ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕದ ವಿದೇಶಾಂಗ ಸಚಿವರೊಂದಿಗೆ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ನಡೆದ ಮೊದಲ ಕ್ವಾಡ್‌ ಸಭೆ (Quad meet) ಇದಾಗಿದೆ. ಇದನ್ನೂ ಓದಿ: ಬ್ರಹ್ಮಪುತ್ರದ ನದಿಗೆ ಬೃಹತ್ ಡ್ಯಾಮ್‌ ಕಟ್ಟಲು ಮುಂದಾದ ಚೀನಾ – ಭಾರತದ ಆತಂಕವೇನು?

    ಇದೇ ವೇಳೆ ಟ್ರಂಪ್‌ ಆಡಳಿತದಲ್ಲಿ ಹೊಸದಾಗಿ ನೇಮಕಗೊಂಡ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಟ್ ಅವರೊಂದಿಗೆ ಸಭೆ ನಡೆಸಿದರು. ಜೊತೆಗೆ ಕ್ವಾಡ್‌ ಸಭೆ ಆಯೋಜಿಸಿದ್ದಕ್ಕಾಗಿ ರೂಬಿಯೊ ಅವರಿಗೆ ಧನ್ಯವಾದ ತಿಳಿಸಿದರು.

    ಕ್ವಾಡ್ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಗುರಿ ಹೊಂದಿರುವ ನಾಲ್ಕು (ಭಾರತ, ಅಮೆರಿಕ. ಜಪಾನ್, ಆಸ್ಟ್ರೇಲಿಯಾ) ದೇಶಗಳ ಗುಂಪಾಗಿದೆ. ಇದನ್ನೂ ಓದಿ: ಲಾಸ್‌ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು ನಂದಿಸಲು‌ ಪಿಂಕ್‌ ಪೌಡರ್, ಸೂಪರ್‌ ಸ್ಕೂಪರ್ಸ್‌ ವಿಮಾನಗಳ ಬಳಕೆ- ವಿಶೇಷತೆ ಏನು?

    ಸ್ಥಿರ ಮತ್ತು ಸಮೃದ್ದ ಇಂಡೊ-ಫೆಸಿಫಿಕ್ ರಾಷ್ಟ್ರಗಳ ನಿರ್ಮಾಣ, ಮಿತ್ರ ರಾಷ್ಟ್ರಗಳೊಂದಿಗೆ ಕೆಲಸ ಮಾಡುವ ಕುರಿತು ಚರ್ಚಿಸಲಾಯಿತು. ಕ್ವಾಡ್ ಜಾಗತಿಕ ಒಳಿತಿಗಾಗಿ ಒಂದು ಶಕ್ತಿಯಾಗಿ ಮುಂದುವರಿಯಲಿದೆ ಎನ್ನುವ ಸಂದೇಶವನ್ನು ಈ ಸಭೆ ನೀಡಲಿದೆ ಎಂದು ರೂಬಿಯೊ ವಾಹಿನಿಯೊಂದಕ್ಕೆ ತಿಳಿಸಿದರು.