Tag: Rubina

  • ಹಿಜಬ್ ಮುಟ್ಟಲು ಬಂದರೆ ಅವರ ಕೈ ಕತ್ತರಿಸುವೆ: ಎಸ್‌ಪಿ ನಾಯಕಿ ರುಬೀನಾ

    ಹಿಜಬ್ ಮುಟ್ಟಲು ಬಂದರೆ ಅವರ ಕೈ ಕತ್ತರಿಸುವೆ: ಎಸ್‌ಪಿ ನಾಯಕಿ ರುಬೀನಾ

    ಲಕ್ನೋ: ಯಾರೇ ಆದರೂ ಹಿಜಬ್ ಮುಟ್ಟಲು ಬಂದರೆ ಅವರ ಕೈಯನ್ನು ಕತ್ತರಿಸುವುದಾಗಿ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕಿ ರುಬೀನಾ ಖಾನಮ್ ಎಚ್ಚರಿಸಿದರು.

    ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಬ್ ಧರಿಸಲು ನಿರಾಕರಿಸಿರುವುದನ್ನು ವಿರೋಧಿಸಿದ ಅವರು, ಹೆಣ್ಣುಮಕ್ಕಳ ಘನತೆಯೊಂದಿಗೆ ಆಟ ಆಡಲು ಬಂದರೆ ಅವರು ಝಾನ್ಸಿ ರಾಣಿ, ರಜಿಯಾ ಸುಲ್ತಾನ್‍ರಂತೆ ಹಿಜಬ್ ಮುಟ್ಟಲು ಬಂದ ಕೈಗಳನ್ನು ಕತ್ತರಿಸಲಾಗುವುದು. ಯಾವುದೇ ಸರ್ಕಾರ ಅಧಿಕಾರದಲ್ಲಿ ಇರಲಿ ಮಹಿಳೆಯರನ್ನು ದುರ್ಬಲರು ಎಂದು ಭಾವಿಸಬಾರದು ಎಂದರು.

    ಭಾರತವು ವೈವಿಧ್ಯತೆಯಿಂದ ಕೂಡಿದ ದೇಶವಾಗಿದೆ. ಇಲ್ಲಿ ಒಬ್ಬ ವ್ಯಕ್ತಿಯು ಹಣೆಯ ಮೇಲೆ ತಿಲಕವನ್ನು ಹೊಂದಿದ್ದಾನೆಯೇ ಅಥವಾ ಟೋಪಿ ಧರಿಸಿದ್ದಾರೆಯೇ ಅಥವಾ ಹಿಜಬ್ ಧರಿಸಿದ್ದಾರೆಯೆ ಎನ್ನುವುದು ಮುಖ್ಯವಲ್ಲ. ಎಲ್ಲಾ ಧರ್ಮದವರ ಸಂಪ್ರದಾಯವನ್ನು ಗೌರವಿಸಬೇಕು ಎಂದ ಅವರು, ಘುಂಘಾಟ್ ಮತ್ತು ಹಿಜಬ್ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಅವಿಭಾಜ್ಯ ಅಂಗಗಳು. ಈ ವಿಷಯಗಳಲ್ಲಿ ರಾಜಕೀಯ ಮಾಡುವ ಮೂಲಕ ವಿವಾದ ಸೃಷ್ಟಿಸುವುದು ಭಯಾನಕವಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಂವಿಧಾನದ ಆಶಯದಲ್ಲಿ ದೇಶ ಮುನ್ನಡೆಸಲಾಗ್ತಿದೆ, ಷರಿಯಾ ಕಾನೂನಿನಿಂದಲ್ಲ: ಹಿಜಬ್‌ ಕುರಿತು ಯೋಗಿ ಪ್ರತಿಕ್ರಿಯೆ

     

    ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ 7ಹಂತದಲ್ಲಿ ನಡೆಯಲಿದ್ದು, ಮಾರ್ಚ್ 7ರಂದು ಮುಕ್ತಾಯಗೊಳ್ಳಲಿದೆ. ಮಾರ್ಚ್ 10ರಂದು ಮತಗಳ ಎಣಿಕೆ ನಡೆಯಲಿದೆ. ಈಗಾಗಲೇ ಸಮಾಜವಾದಿ ಪಕ್ಷ ಹಾಗೂ ಬಿಜೆಪಿ ಪ್ರಬಲ ಪೈಪೋಟಿಯಲ್ಲಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಬ್ ವಿವಾದಕ್ಕೆ ಸಂಬಂಧಿಸಿ ಈಗಾಗಲೇ ಅನೇಕ ರಾಜಕೀಯ ನಾಯಕರು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್, ರಾಘವ್ ಚಡ್ಡಾ ಪಂಜಾಬ್ ಲೂಟಿ ಮಾಡಲು ಬಂದಿದ್ದಾರೆ: ಚರಣ್‍ಜಿತ್ ಸಿಂಗ್ ಚನ್ನಿ

  • ಸರಿಗಮಪ ಗಾಯಕಿ ರುಬಿನಾಳನ್ನು ಪ್ರಶಂಸಿಸಿದ ಶಿಕ್ಷಣ ಇಲಾಖೆ

    ಸರಿಗಮಪ ಗಾಯಕಿ ರುಬಿನಾಳನ್ನು ಪ್ರಶಂಸಿಸಿದ ಶಿಕ್ಷಣ ಇಲಾಖೆ

    ಬೆಂಗಳೂರು: ಖಾಸಗಿ ವಾಹಿನಿಯ ರಿಯಾಲಿಟಿ ಶೋ ಸರಿಗಮಪ ಗಾಯಕಿ, ಸರ್ಕಾರಿ ಶಾಲೆ ವಿದ್ಯಾರ್ಥಿನಿ ರುಬಿನಾಳನ್ನು ಶಿಕ್ಷಣ ಇಲಾಖೆ ಪ್ರಶಂಸಿಸಿದೆ.

    ಸರ್ಕಾರಿ ಶಾಲೆಯ ಮಹತ್ವ ತಿಳಿಸಿದ ರುಬಿನಾಗೆ ಶಿಕ್ಷಣ ಇಲಾಖೆ ಅಭಿನಂದನೆ ಸಲ್ಲಿಸಿದೆ. ಅಲ್ಲದೆ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕ ಜಯಕುಮಾರ್ ವಿದ್ಯಾರ್ಥಿನಿ ರುಬಿನಾಗೆ ಪ್ರಶಂಸಾ ಪತ್ರ ನೀಡಿದ್ದಾರೆ. ರುಬಿನಾ ಹಾವೇರಿ ಜಿಲ್ಲೆಯ ಮೇವುಂಡಿ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾಳೆ. ಈಕೆ ತನ್ನ ಹಾಡಿನ ಮೂಲಕವೇ ಶಾಲೆಯ ಮಹತ್ವ ತಿಳಿಸಿದ್ದಳು. ಸದ್ಯ ರುಬಿನಾ ಗಾಯನಕ್ಕೆ ಶಿಕ್ಷಣ ಇಲಾಖೆ ಫಿದಾ ಆಗಿದೆ. ಈ ಹಾಡಿನ ಸಾಲುಗಳು ಬರೆದ ಶಿಕ್ಷಕರಿಗೂ ಇಲಾಖೆ ಅಭಿನಂದನೆ ಸಲ್ಲಿಸಿದೆ.

    ರುಬೀನಾ ‘ರಾಜಕುಮಾರ’ ಚಿತ್ರದ `ಬೊಂಬೆ ಹೇಳುತೈತೆ’ ಹಾಡಿಗೆ ತನ್ನ ಸರ್ಕಾರಿ ಶಾಲೆಯ ಬಗ್ಗೆ ಬರೆದು ಸರಿಗಮಪ ವೇದಿಕೆಯಲ್ಲಿ ಹಾಡಿದ್ದಳು. ಈ ಹಾಡು ಕೇಳಿ ತೀರ್ಪುಗಾರರಾದ ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ ಹಾಗೂ ವಿಜಯ್ ಪ್ರಕಾಶ್ ಇಷ್ಟಪಟ್ಟಿದ್ದರು. ಬಳಿಕ ವಿಜಯ್ ಪ್ರಕಾಶ್ ಅವರು ಈ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸರ್‍ಗೆ ತೋರಿಸಬೇಕು ಎಂದು ಹೇಳಿದ್ದರು. ಈ ವಿಷಯ ಪುನೀತ್‍ಗೆ ತಿಳಿಯುತ್ತಿದ್ದಂತೆ ಅವರು ರುಬೀನಾಳನ್ನು ಭೇಟಿ ಮಾಡಿದ್ದಾರೆ.

    ಪುನೀತ್ ರುಬಿನಾಳನ್ನು ತಮ್ಮ ಮನೆಗೆ ಕರೆಸಿಕೊಂಡು ತನ್ನ ಮುಂದೆಯೇ ಹಾಡಲು ಹೇಳಿದ್ದರು. ಬಳಿಕ ಪುನೀತ್ ರುಬೀನಾಳ ಹಿನ್ನೆಲೆ ಕೇಳಿದ್ದಾರೆ. ರುಬೀನಾ ತಾನು ಸರ್ಕಾರಿ ಶಾಲೆಯಲ್ಲಿ ಓದುತ್ತಿರುವುದಾಗಿ ಹೇಳಿದಾಗ ಪುನೀತ್ ಬಹಳ ಹೆಮ್ಮೆಪಟ್ಟರು. ಅಲ್ಲದೆ ನಿನ್ನ ಕಣ್ಣು ಹಾಗೂ ವಾಯ್ಸ್ ತುಂಬಾ ಚೆನ್ನಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ರುಬೀನಾ ತಂದೆಗೆ ಶುಭ ಕೋರಿದ್ದರು. ರುಬಿನಾಳ ಹಾಡು ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟು ವೈರಲ್ ಆಗುತ್ತಿದ್ದು, ಜಾಲತಾಣಿಗರು ಕೂಡ ವಿದ್ಯಾರ್ಥಿನಿಯ ಹಾಡಿಗೆ ಮನಸೋತಿದ್ದಾರೆ.